ಮೇಕಪ್‌ ಅನ್ನೋದು ಈಗ ಟ್ರೆಂಡ್‌ ಆಗಿಬಿಟ್ಟಿದೆ. ಮೇಕಪ್‌ ನಮ್ಮ ಚರ್ಯೆಯನ್ನೇ ಬದಲು ಮಾಡಬಹುದು. ಎಷ್ಟೋ ಬಾರಿ ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಮೇಕಪ್‌ ಮಾಡಿಕೊಂಡ ಹುಡುಗಿಯನ್ನು ಒಪ್ಪಿ ನಂತರ ಅವಳ ಸಹಜ ಸೌಂದರ್ಯಕ್ಕೆ ಮೂರ್ಛೆಹೋದ ಗಂಡಿನ ಪಾಡನ್ನು! ಮಗದೊಂದು ಘಟನೆ, ಆ್ಯಸಿಡ್‌ ದಾಳಿಗೊಳಗಾದ ಯುವತಿಯರಿಗೆ ಮೇಕಪ್ ಮಾಡಿ ಕೊಂಚ ಸಮಯ ಅವರಿಗೆ ಮರಳಿ ಬಂದ ತಮ್ಮ ತಾತ್ಕಾಲಿಕ ಸೌಂದರ್ಯದಿಂದ ಸಂತಸಪಡುವ ಕ್ಷಣಗಳ ಕಂಡು ನಮ್ಮ ಕಣ್ಣಾಲಿಗಳು ತುಂಬಿ ಬರುತ್ತವೆ.

ಮೇಕಪ್‌ ಅಥವಾ ಪ್ರಸಾಧನ ಕ್ಷೇತ್ರ ಇಂದಿನ ಆಧುನಿಕ ಪ್ರಪಂಚದಲ್ಲಿ ಬಹಳವೇ ಮನ್ನಣೆ ಪಡೆಯುತ್ತಿದೆ. ಈ ದಿನಗಳಲ್ಲಿ ಇಂಥ ಮೇಕಪ್‌ ಯಾರಿಗೆ ಬೇಡ ಹೇಳಿ? ಮುಖದ ಮೇಕಪ್‌ ಎಲ್ಲ ಒಂದೇ ಅಂದುಕೊಳ್ಳುವ ಜಮಾನ ಈಗಿಲ್ಲ! ಅದರಲ್ಲೂ ಸ್ಪೆಷಲೈಸೇಷನ್‌ಇರುತ್ತದೆ ಎನ್ನುತ್ತಾರೆ ಈ ಲೇಖನದ ಪ್ರತಿಭೆ ಕೀರ್ತಿ ರಾವ್‌. ಕಣ್ಣು ಮತ್ತು ತುಟಿಯ ಸ್ಪೆಷಲಿಸ್ಟ್ ಎಂದಾಗ ಕೇಳಿ ಕೊಂಚ ದಂಗಾದೆ. ಮುಖ ಇರೋದೇ ಇಷ್ಟು, ಅದರಲ್ಲಿಯೂ ಈ ಭಾಗಗಳಿಗಾಗಿ ವಿಶೇಷ ತರಬೇತಿ ಪಡೆದು ಮೇಕಪ್‌ ಮಾಡೋಷ್ಟು ಜನ ಟ್ರೆಂಡ್ ಮಾಡಿಕೊಂಡಿದ್ದಾರೆ. ಅದಕ್ಕಾಗಿ ವಿಶೇಷ ಕೋರ್ಸ್‌ ಗಳೂ ಬಂದುಬಿಟ್ಟಿವೆ.

ಮೇಕಪ್‌ ಅಂದರೆ ಕಪ್ಪಗಿರುವವರನ್ನು ಬೆಳ್ಳಗೆ ಮಾಡುವುದು ಎಂಬೋದು ಬಹಳ ಜನರ ಅಭಿಪ್ರಾಯ. ಆದರೆ ಅದು ತಪ್ಪು. ಫೀಚರ್ಸ್ ನ ಎನ್‌ ಹಾನ್ಸ್ ಮಾಡೋದು ಮೇಕಪ್‌! ಮದುವೆ ಅನ್ನೋದು ಪ್ರತಿ ಹೆಣ್ಣಿನ ಬಾಳಿನಲ್ಲೂ ಒಂದು ಕನಸು. ಆ ಸಮಯದಲ್ಲಿ ಮತ್ತಷ್ಟು ಚಂದ ಕಾಣಬೇಕೆಂಬ ಆಸೆ ಮೈದೋರುವುದು ವಯಸ್ಸಿನ ಸಹಜ ಆಸೆಯೇ ಹೌದು.

ಬದಲಾದ ಈ ಕಾಲಮಾನದಲ್ಲಿ ಹದಿಹರೆಯದವರ ಮನದಲ್ಲಿ ಹಲವಾರು ರೀತಿಯ ಕಾನ್‌ ಸೆಪ್ಟ್ ಗಳು ಬಂದಿರುವುದು ಸ್ವಾಗತಾರ್ಹವೇ ಸರಿ. ಇದೊಂದು ಜೀವನಪರ್ಯಂತ ನೆನಪಿನಲ್ಲಿ ಉಳಿಯುವಂಥದ್ದು. ಪ್ರೀ ವೆಡ್ಡಿಂಗ್‌ ಫೋಟೋ ಶೂಟ್‌ ಗಳು ಸರ್ವೇಸಾಮಾನ್ಯವಾಗಿವೆ. ನಂತರ ನಡೆಯುವ ಮೆಹಂದಿ, ಸಂಗೀತ, ವರಪೂಜೆ, ಮದುವೆ, ಆರತಕ್ಷತೆ, ನಂತರದ ಸತ್ಯನಾರಾಯಣ ಪೂಜೆ, ಬೀಗರ ಔತಣ. ಅಬ್ಬಾ....! ಮದುವೆ ಅನ್ನೋದು ಇವತ್ತಿನ ದಿನಗಳಲ್ಲಿ ದುಡ್ಡು ಖರ್ಚು ಮಾಡಿದಷ್ಟೂ ವೈಭವೋಪೇತವಾಗಿರುತ್ತದೆ. ಅಂತಹ ಸಮಯದಲ್ಲಿ ಮುಖ್ಯ ಆಕರ್ಷಣೆ ಮದುಮಕ್ಕಳು. ಅದರಲ್ಲೂ ಹೆಣ್ಣು ಸೌಂದರ್ಯಪ್ರಿಯಳು. ಹೊತ್ತು ಹೊತ್ತಿಗೂ ಒಂದೊಂದು ಅಲಂಕಾರದ ಒಡವೆ, ಸೀರೆ, ಅದರ ಜೊತೆ ಜೊತೆಗೆ ಈ ಪ್ರಸಾಧನ ಪ್ರಾಮುಖ್ಯತೆ ಪಡೆಯುತ್ತದೆ!

ಪಾರ್ಲರ್‌ ಮೇಕಪ್‌ ಗೂ ಸ್ಟುಡಿಯೋ ಮೇಕಪ್‌ ಗೂ ಬಹಳವೇ ವ್ಯತ್ಯಾಸವಿದೆ. ಪಾರ್ಲರ್‌ ಮೇಕಪ್‌ ನವರನ್ನು ಬ್ಯೂಟಿಷಿಯನ್ಸ್ ಎಂದರೆ, ಸ್ಟುಡಿಯೋ ಮೇಕಪ್‌ ನವರನ್ನು ಆರ್ಟಿಸ್ಟ್ ಎನ್ನುತ್ತಾರೆ. ಪಾರ್ಲರ್‌ ನವರು ಫೌಂಡೇಶನ್‌ ನಿಂದ ಪ್ರಾರಂಭಿಸಿ ಕನ್ಸೀಲರ್, ಕಾಂಪ್ಯಾಕ್ಟ್. ಬ್ಲಶ್‌, ಕಾಜಲ್, ಲಿಪ್‌ ಸ್ಟಿಕ್‌ ಬಳಸುತ್ತಾ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತಾರೆ. ಇದು ಕೆಲವು ಗಂಟೆಗಳ ಕಾಲ ಮುಖದ ಮೇಲೆ ಉಳಿಯುತ್ತದೆ. ಅದೂ ಒಳ್ಳೆಯ ಪಾರ್ಲರ್‌ ಗಳಿದ್ದರೆ ಅಥವಾ ಮದುವೆಗಾಗಲೆಂದೇ ಇವರು ಸ್ಪೆಷಲೈಸ್ಡ್ ಪಾರ್ಲರ್‌ ಗಳಲ್ಲಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ