`ಹೋಮ್ ಮೇಕರ್‌'ನ ಟ್ಯಾಗ್‌ ಕಿತ್ತೆಸೆದು `ಪಾಲಿಸಿ ಮೇಕರ್‌' ಆಗಿಸುವ ಈ ಮಹಿಳೆಯರು ಪುರುಷ ಪ್ರಧಾನ ಸಮಾಜದ ಕಂದಾಚಾರದಿಂದ ಕೂಡಿದ ವಿಚಾರಧಾರೆಗೆ ಭಾರಿ ದೊಡ್ಡ ಸವಾಲು ಒಡ್ಡುತ್ತಿದ್ದಾರೆ.

ವಿಡಿಯೋಕಾನ್‌ ಸಾಲದ ಬಾಬತ್ತಿನಲ್ಲಿ ವಿವಾದಕ್ಕೆ ಸಿಲುಕಿದ್ದ ಐಸಿಐಸಿಐನ ಸಿಇಓ ಚಂದಾ ಕೋಚರ್‌ ರಾಜೀನಾಮೆ ನೀಡಬೇಕಾಗಿ ಬಂತು. ಅವರ ಮೇಲೆ ಇದ್ದ ಆರೋಪ ಏನೆಂದರೆ ವಿಡಿಯೋಕಾನ್‌ ಗ್ರೂಪ್‌ ಗೆ ಸಾಲ ನೀಡುವ ಸಂದರ್ಭ ಯಾವುದೇ ನಿಯಮಾವಳಿ ಪಾಲಿಸಲಿಲ್ಲ ಎಂಬುದಾಗಿತ್ತು. ಐಸಿಐಸಿಐ ಬ್ಯಾಂಕ್‌ ವಿಡಿಯೋಕಾನ್‌ ಗ್ರೂಪ್‌ ನ ನಿರ್ದೇಶಕ ಅರವಿಂದ್‌ ಗುಪ್ತ ಮಾಡಿರುವ ಆರೋಪ ಏನೆಂದರೆ, ಅವರು ವಿಡಿಯೋಕಾನ್‌ ಗ್ರೂಪ್‌ ಗೆ ಒಟ್ಟು 3,250 ಕೋಟಿ ರೂ. ಸಾಲ ಮಂಜೂರಾತಿ ನೀಡುವಾಗ ತಪ್ಪು ವಿಧಾನ ಅನುಸರಿಸಿ ವೈಯಕ್ತಿಕ ಲಾಭ ಮಾಡಿಕೊಂಡರು. ಇದರಲ್ಲಿ ಅವರ ಪತಿ ದೀಪಕ್‌ ಕೋಚರ್‌ ಹೆಸರು ಕೂಡ ಬೆಳಕಿಗೆ ಬಂತು.

ಚಂದಾ ಕೋಚರ್‌ ಆ ಆರೋಪ ಹಾಗೂ ತಮ್ಮ ರಾಜೀನಾಮೆಯಿಂದ ಚರ್ಚೆಯಲ್ಲಿದ್ದರು. ಆದರೆ ಮಹಿಳೆಯಾಗಿದ್ದುಕೊಂಡು ದೀರ್ಘಾವಧಿಯ ತನಕ ಐಸಿಐಸಿಐ ಬ್ಯಾಂಕಿನ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು. ಚಂದಾ ಕೋಚರ್‌ ಅವರಷ್ಟೇ ಅಲ್ಲ, ದೇಶ ವಿದೇಶದಲ್ಲಿ ಇಂತಹ ಅನೇಕ ಮಹಿಳೆಯರಿದ್ದು, ಅವರು ಅಸಾಧಾರಣ ಸಾಧನೆ ಮಾಡಿದ್ದಾರೆ. ಅಂತಹ ದಿಟ್ಟ ಮಹಿಳೆಯರ ಸಾಧನೆಯ ಮೇಲೊಂದು ಕ್ಷಕಿರಣ.

ಸೋನಿಯಾ ಗಾಂಧಿ

ಕೇಂಬ್ರಿಜ್‌ ಯೂನಿವರ್ಸಿಟಿಯಲ್ಲಿ ರಾಜೀವ್ ‌ಗಾಂಧಿಯವರೊಂದಿಗೆ ಪ್ರೀತಿ ಮೊಳಕೆಯೊಡೆದು, ಭಾರತೀಯ ರೀತಿರಿವಾಜಿನ ಪ್ರಕಾರ ಮದುವೆ ಮಾಡಿಕೊಂಡು ನೆಹರು ಕುಟುಂಬಕ್ಕೆ ಸೇರ್ಪಡೆಗೊಂಡರು. 1991ರಲ್ಲಿ ತಮ್ಮ ಪತಿ, ಮಾಜಿ ಪ್ರಧಾನಿ ರಾಜೀವ್ ‌ಗಾಂಧಿಯ ಹತ್ಯೆಯ ಬಳಿಕ, ಪಕ್ಷದ ನಂಬಿಕಸ್ಥರು ಎಷ್ಟೇ ಹೇಳಿದರೂ ಕೂಡ ರಾಜಕೀಯಕ್ಕೆ ಬರದೆ, ಸಕ್ರಿಯ ರಾಜಕಾರಣದಿಂದ ದೂರವೇ ಉಳಿದರು. ಯಾವಾಗ ಪಕ್ಷ ಅಧೋಗತಿಗೆ ಸಾಗುತ್ತಿದೆ ಎಂಬ ಅರಿವು ಅವರಿಗೆ ಆಯಿತೊ, ಆಗ ಅವರು ಪಕ್ಷದ ಅಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿದರು.

1998ರಲ್ಲಿ ಅವರು ಅಧ್ಯಕ್ಷರಾದಾಗ ಪಕ್ಷದಲ್ಲಿ ಅನಿಶ್ಚಿತತೆ ಮತ್ತು ಅಸಮಾಧಾನದ ವಾತಾವರಣವಿತ್ತು. 1 ವರ್ಷದ ಬಳಿಕ ಅಂದರೆ ಮೇ 15, 1999ರ ಲೋಕಸಭೆ ಚುನಾವಣೆಗೂ ಸ್ವಲ್ಪ ಮುಂಚೆ ಶರದ್‌ ಪವಾರ್‌, ಪಿ.ಎ. ಸಂಗ್ಮಾ, ತಾರೀಖ್‌ ಅವರುಗಳು ಸೋನಿಯಾ ಗಾಂಧಿಯವರ ವಿದೇಶಿ ಮೂಲದ ಪ್ರಶ್ನೆಯನ್ನು ಎತ್ತಿ ಅವರು ಪ್ರಧಾನಿ ಹುದ್ದೆ ಅಲಂಕರಿಸುವುದನ್ನು ವಿರೋಧಿಸಿದ್ದರು. ಆಗ ಸೋನಿಯಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಆಗ ಅವರು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಗೆ ಬರೆದ ಪತ್ರದಲ್ಲಿ, ``ನಾನು ವಿದೇಶಿ ನೆಲದಲ್ಲಿ ಹುಟ್ಟಿರಬಹುದು. ಆದರೆ ಭಾರತವನ್ನೇ ನನ್ನ ದೇಶಿಂದು ಒಪ್ಪಿಕೊಂಡಿರುವೆ. ನನ್ನ ಕೊನೆಯ ಉಸಿರಿರುವವರೆಗೂ ಭಾರತೀಯಳಾಗಿಯೇ ಇರುವೆ. ಭಾರತ ನನ್ನ ಮಾತೃಭೂಮಿ. ಅದು ನನ್ನ ಜೀವಕ್ಕಿಂತ ಹೆಚ್ಚು ಪ್ರೀತಿಪಾತ್ರ,'' ಎಂದು ಉಲ್ಲೇಖಿಸಿದ್ದರು.

ಸೋನಿಯಾರ ನಿಲುವಿನಿಂದ ಕಾಂಗ್ರೆಸ್‌ ಕಾರ್ಯಕರ್ತರು ಭಾರೀ ಪ್ರದರ್ಶನ ನಡೆಸಿದರು. ಉಪವಾಸ ಸತ್ಯಾಗ್ರ ಕೈಗೊಂಡರು. ಪವಾರ್‌, ಅನ್ವರ್‌, ಸಂಗ್ಮಾ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ಬಳಿಕ ಸೋನಿಯಾ ಗಾಂಧಿ ತಮ್ಮ ರಾಜೀನಾಮೆಯನ್ನು ವಾಪಸ್‌ ಪಡೆದರು. ಆಗ ಮೊದಲ ಬಾರಿಗೆ ಪಕ್ಷದಲ್ಲಿನ ತಮ್ಮ ಸ್ಥಿತಿಯನ್ನು ಸ್ಪಷ್ಟಪಡಿಸಿದರು. ಅಲ್ಲಿಂದ ಮುಂದೆ ಅವರು ಭಯರಹಿತ ರಾಜಕಾರಣ ಶುರು ಮಾಡಿದರು. ಕ್ರಮೇಣ ಅವರು ಪಕ್ಷಕ್ಕೆ ಪುನರ್ಜೀವ ನೀಡಿದರು ಹಾಗೂ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿಯುವ ಹಾಗೆ ಮಾಡಿದರು. ಸತತ  2 ಅವಧಿಗೆ ಯಶಸ್ವಿಯಾಗಿ ಸರ್ಕಾರ ನಡೆಸುವಂತೆ ಮಾಡಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ