ದೀಪಾವಳಿ ಹಬ್ಬಕ್ಕೂ ವಿದ್ಯುತ್‌ ತಂತಿಗೂ ಅವಿನಾಭಾವ ಸಂಬಂಧವಿದೆ. ಇದೇ ರೀತಿ ವಧೂವರರ ಜೋಡಿಗೂ ಅವರಿಬ್ಬರ ಹೊಂದಾಣಿಕೆಗೂ ಅದೇ ರೀತಿಯ ನಂಟಿದೆ.

ದೀಪಾವಳಿ ಹಬ್ಬದಲ್ಲಿ ವಿದ್ಯುತ್‌ ತಂತಿಗಳು ಸಮರ್ಪಕವಾಗಿ, ಓಲ್ಟೇಜ್‌ ಫ್ಲಕ್ಚುಯೇಷನ್ಸ್ ಇಲ್ಲದೆ, ಎಲ್ಲವೂ ಸರಿಯಾಗಿ ನಡೆದರೆ, ಹಬ್ಬಕ್ಕೆ ಸೀರಿಯಲ್ ಸೆಟ್‌ ಮತ್ತು ಲೈಟಿಂಗ್‌ ನಿಂದ ಕಳೆಯೇರುತ್ತದೆ. ಅದೇ ಹೆಚ್ಚು ಕಡಿಮೆ ಆಯ್ತೋ ಶಾರ್ಟ್‌ ಸರ್ಕ್ಯೂಟ್ ಆಗುತ್ತದೆ.

ಅದೇ ತರಹ ವಧೂ ವರರ ನಡುವೆ ಹೊಂದಾಣಿಕೆ ಪರಸ್ಪರ ಬಿಟ್ಟುಕೊಡುವಿಕೆ, ಸಾಮರಸ್ಯ ಸರಿ ಇದ್ದರೆ ದಾಂಪತ್ಯ ನಂದನ ವನವಾಗುತ್ತದೆ, ಇಲ್ಲದಿದ್ದರೆ ಅಶೋಕ ವನವಾಗುತ್ತದೆ!

ಆಫೀಸಿಗೆ ಹೊಸದಾಗಿ ವರ್ಗವಾಗಿ ಬಂದಿದ್ದ ಬಾಸ್‌ ಒಂದು ನೋಟೀಸ್‌ ಹೊರಡಿಸಿದರು `ನಾನೀಗ ಇಲ್ಲಿನ ಹೊಸ ಬಾಸ್‌! ಇದನ್ನು ಯಾರೂ ಮರೆಯಬಾರದು, ಮರೆತು ಯಾವುದೇ ತಪ್ಪು ಮಾಡಬೇಡಿ.'

ಶಿಸ್ತಿನ ಸಿಪಾಯಿಗಳಾಗಿ ಸಿಬ್ಬಂದಿ ವರ್ಗ ಗಡಗಡ ನಡುಗುತ್ತ ಕೆಲಸ ಮಾಡಿದರು.

ಸಂಜೆ ಜವಾನ ಜವರಯ್ಯ ಒಂದು ಚೀಟಿ ತಂದು ಯಾರೋ ಮೇಡಂ ಕಾರಿನಿಂದ ನಮ್ಮ ಆಫೀಸ್‌ ಮುಂದೆ ಇದನ್ನು ಎಸೆದು ಹೋದರು ಎಂದು ಹೇಳಿದ.

ಅದರಲ್ಲಿ ಹೀಗೆ ಬರೆದಿತ್ತು, `ನಿಮ್ಮ ಬಾಸ್‌ ಗೆ ಹೇಳಿ.... ಮನೆಯಲ್ಲಿ ಅಂಟಿಸಿದ್ದ ನೋಟೀಸ್‌ ಬೋರ್ಡ್‌ ನ್ನು ನನಗೆ ಕಾಣದಂತೆ ಕದ್ದು ತಂದು ಆಫೀಸಿನಲ್ಲಿ ಹಾಗೆಲ್ಲ ಅಂಟಿಸಿಕೊಳ್ಳಬಾರದಂತೆ..... ಸಂಜೆ ತೆಪ್ಪಗೆ ಅದನ್ನು ವಾಪಸು ತಂದು ಅದು ಎಲ್ಲಿತ್ತೋ ಅಲ್ಲಿಯೇ ಅಂಟಿಸಬೇಕಂತೆ ಅಂತ!'

ಆ ಚೀಟಿಯಲ್ಲಿದ್ದ ಬರವಣಿಗೆಯ ಗುರುತು ಹತ್ತಿದಂತೆ ಹೊಸ ಬಾಸ್‌ ಮುಖ ಇಂಗು ತಿಂದ ಮಂಗನಂತಾಗಿತ್ತು!

ಸ್ಮಿತಾ ತನ್ನ ಬಾಯ್‌ ಫ್ರೆಂಡ್‌ ರಾಹುಲ್ ‌ಜೊತೆ ಜಗಳ ಆಡಿಕೊಂಡು, ಮಾತು ಬಿಟ್ಟು 2 ವಾರ ಆಯಿತು.

ಇದನ್ನು ಗಮನಿಸಿದ ಅವಳ ಗೆಳತಿ ರೇಖಾ ಕಸಿವಿಸಿಗೆ ಒಳಗಾದಳು. ಗೆಳತಿಗೆ ಸಹಾಯ ಮಾಡಲು ನಿರ್ಧರಿಸಿದಳು.

ರೇಖಾ : ಏನಾಯಿತೇ ಸ್ಮಿತಾ? ಯಾಕೆ ಆ ಪಾಪದವನನ್ನು ಹಾಗೆ ಕಾಡಿಸುತ್ತಿದ್ದೀಯಾ? ರಾಜಿ ಮಾಡಿಕೊಳ್ಳಬಾರದಾ?

ಸ್ಮಿತಾ : ಯಾವನೇ ಪಾಪದವನು? ಅವನು ಏನು ಮಾಡಿದ ಗೊತ್ತೇ..... ನೆನೆಸಿಕೊಂಡ್ರೆ ಮೈಯೆಲ್ಲ ಉರಿಯುತ್ತೆ.

ರೇಖಾ : ಈಗಿನ ಕಾಲದ ಮಾಡರ್ನ್‌ ಬಾಯ್‌ ಫ್ರೆಂಡ್ಸ್ ಸ್ವಲ್ಪ ಹಾಗೆ ಹೀಗೆ ಓವರ್‌ ಆಗಿ ರೊಮಾನ್ಸ್ ಮಾಡುತ್ತಾರೆ. ಅದಕ್ಕೆ ಹೋಗಿ ನೀನು ಕೋಪಿಸಿಕೊಂಡ್ರೆ.

ಸ್ಮಿತಾ : ಹಾಗೇನೂ ಮಾಡಲಿಲ್ಲ ಅಂತಾನೇ ನನ್ನ ಕೋಪ!

ರೇಖಾ : ಅಸಲಿಗೆ ಏನಾಯಿತು ಅಂತ ಹೇಳಬಾರದೇ?

ಸ್ಮಿತಾ : ಮೊನ್ನೆ ಅವರಪ್ಪ ಅಮ್ಮ ತಿರುಪತಿಗೆ ಹೊರಟರು, ಒಬ್ಬನೇ ಇದ್ದೇನೆ, ಸಂಜೆ 7 ಗಂಟೆಗೆ ಬಾ ಅಂದ. ನಾನು ರೋಮಾಂಚಿತಳಾಗಿ ಅಲ್ಲಿಗೆ ಹೋದೆ. ನನ್ನ ಕೈಗೊಂದು ಗುಲಾಬಿ ಕೊಟ್ಟ. ರೂಮಿಗೆ ಕರೆದುಕೊಂಡು ಹೋಗಿ ಕಿಸ್‌ ಮಾಡಿದ ಮೇಲೆ, `ಇವತ್ತು ಕೆಲಸದವಳು ಬಂದಿಲ್ಲ. ಸ್ವಲ್ಪ ಪಾತ್ರೆ ತೊಳೆದು ಏನಾದರೂ ಅಡುಗೆ ಮಾಡು ಡಾರ್ಲಿಂಗ್‌......' ಅನ್ನೋದೇ?

ಸೈಕಾಲಜಿಯ ಒಬ್ಬ ಪ್ರೊಫೆಸರ್‌ ತಮ್ಮ ಡ್ರಾಯಿಂಗ್‌ ರೂಮಿನಲ್ಲಿ ಈ ರೀತಿ ಪೋಸ್ಟರ್‌ ಅಂಟಿಸಿದ್ದರು :

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ