ವಿಮಾದಾರ ಧೂಮಪಾನ ಅಥವಾ ತಂಬಾಕು ಸೇವಿಸವವರಾದರೆ, ಅವನ ಟರ್ಮ್ ಇನ್ಶೂರೆನ್ಸ್, ಪ್ರೀಮಿಯಂ 25ರ ಬದಲು 30% ಅಧಿಕ ಆಗುತ್ತದೆ. ಹೀಗಾಗಿ, ಪಾಲಿಸಿ ಕೊಳ್ಳುವಾಗ ಈ ವಿಷಯಗಳನ್ನು ಮುಚ್ಚಿಡಬೇಡಿ. ಇಲ್ಲದಿದ್ದರೆ, ಅಕಾಲ ಮೃತ್ಯುವಾದರೆ, ಕ್ಲೇಮ್ ಮಾಡುವಾಗ ತೊಂದರೆ ಎದುರಾಗುತ್ತದೆ.

ವಿಮೆ ಮಾಡುವ ಸಮಯದಲ್ಲಿ ಇನ್ಶೂರೆನ್ಸ್ ಕವರೇಜ್‌ ಎಷ್ಟಿರಬೇಕೆಂಬುದು ಮುಖ್ಯವಾಗಿ ಯೋಚಿಸಬೇಕಾದ ಅಂಶ. ಮುಂದೆ ಬರುವ ವಿದ್ಯಾಭ್ಯಾಸ, ವಿವಾಹ, ಆಸ್ಪತ್ರೆಯ ಖರ್ಚು ವೆಚ್ಚಗಳ ಒತ್ತಡವನ್ನು ಸರಿದೂಗಿಸುವಂತಹ ಕವರೇಜ್‌ ಅದಾಗಿರಬೇಕು. ಆದರೆ ಹೆಚ್ಚಿನ ಪ್ರೀಮಿಯಮ್ ಮೊತ್ತದಿಂದಾಗಿ ಜನರು ಸಾಕಷ್ಟು ಇನ್ಶೂರೆನ್ಸ್ ಕವರೇಜ್‌ ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಟರ್ಮ್ ಇನ್ಶೂರೆನ್ಸ್ ಉತ್ತಮ ಆಯ್ಕೆಯಾಗಿರುತ್ತದೆ.

ಇನ್ಶೂರೆನ್ಸ್ ಕಂಪೆನಿಯೊಂದರ ಸಿಇಓ ಆಗಿರುವ ಆದಿತ್ಯ ಶೆಟ್ಟಿ ಹೀಗೆ ಹೇಳುತ್ತಾರೆ, ``ಟರ್ಮ್ ಇನ್ಶೂರೆನ್ಸ್ ನಿಮ್ಮ ಜೀವನಕ್ಕೆ ಭದ್ರತೆ ಒದಗಿಸುತ್ತದೆ. ಇದರ ಮೂಲಕ ನೀವು ಕಡಿಮೆ ಪ್ರೀಮಿಯಮ್ ನಲ್ಲಿ ಹೆಚ್ಚು ಇನ್ಶೂರೆನ್ಸ್ ಕವರ್‌ ಪಡೆಯಬಹುದು. ನಿಮ್ಮ ವಾರ್ಷಿಕ ಆದಾಯದ 20ರಷ್ಟು ಕವರೇಜ್‌ ನ್ನು ನೀವು ಆರಿಸಿಕೊಳ್ಳಬಹುದು. ಆಕಸ್ಮಿಕ ಮೃತ್ಯುವಿನ ಸಂದರ್ಭದಲ್ಲಿ ಕುಟುಂಬದವರಿಗೆ ಸಂಪೂರ್ಣ ವಿಮಾ ಸುರಕ್ಷೆ ದೊರೆಯುತ್ತದೆ.''

ಟರ್ಮ್ ಇನ್ಶೂರೆನ್ಸ್

ಇದೂ ಒಂದು ಬಗೆಯ ವಿಮೆ ಆಗಿರುತ್ತದೆ. ಇತರೆ ವಿಮಾ ಪ್ರಕಾರಗಳಿಗಿಂತ ಇದರ ವಿಶೇಷತೆಯೆಂದರೆ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಕವರೇಜ್‌ ಇದರಲ್ಲಿದೆ. 10, 20, 30 ಅಥವಾ 50 ವರ್ಷಗಳಿಗೂ ಇದರ ಟರ್ಮ್ ಪ್ಲಾನ್‌ ಮಾಡಬಹುದು. ಈ ಅವಧಿಯಲ್ಲಿ ವಿಮಾದಾರನ ಮೃತ್ಯು ಸಂಭವಿಸಿದರೆ ಅವರ ನಾಮಿನಿ ಕವರ್‌ ನ ಮೊತ್ತವನ್ನು ಪಡೆದುಕೊಳ್ಳಬಹುದು.

ಟರ್ಮ್ ಇನ್ಶೂರೆನ್ಸ್ ನ ಆನ್‌ ಲೈನ್‌ ಕೊಳ್ಳುವಿಕೆಗೆ ಕಡಿಮೆ ವೆಚ್ಚ ತಗುಲುತ್ತದೆ. ಆನ್‌ ಲೈನ್‌ ಪಾಲಿಸಿ ಪಡೆಯುವುದರಿಂದ ವಿಮಾ ಕಂಪನಿಗೆ ಇನ್ಶೂರೆನ್ಸ್ ಏಜೆಂಟ್‌ ಮತ್ತು ಪತ್ರ ವ್ಯವಹಾರ (ಡಾಕ್ಮುಮೆಂಟೇಶನ್‌)ದ ಖರ್ಚು ಬೀಳುವುದಿಲ್ಲ. ಇದರ ಲಾಭವನ್ನು ಕಂಪನಿಯು ನೇರವಾಗಿ ಪಾಲಿಸಿದಾರರಿಗೆ ದೊರಕಿಸಿಕೊಡುತ್ತದೆ. ಪಾಲಿಸಿದಾರರು ಆನ್‌ ಲೈನ್‌ ಫಾರ್ಮ್ ಭರ್ತಿ ಮಾಡುವುದರಿಂದ ಕೆಲವಾರು ಔಪಚಾರಿಕತೆಗಳಿಂದಲೂ ಪಾರಾಗಬಹುದು.

ಇನ್ಶೂರೆನ್ಸ್ ಕವರ್‌ ಟರ್ಮ್ ಇನ್ಶೂರೆನ್ಸ್ ವ್ಯಕ್ತಿಗೆ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚು ಕವರೇಜ್‌ ದೊರಕಿಸಿಕೊಡುತ್ತದೆ. ಉದಾಹರಣೆಗೆ, ಧೂಮಪಾನಿಯಲ್ಲದ, 30 ವರ್ಷ ವಯಸ್ಸಿನ ಒಬ್ಬ ಯುವಕ 30 ವರ್ಷಗಳಿಗೆ 1 ಕೋಟಿ ರೂಪಾಯಿ ಕವರ್‌ ನ ಟರ್ಮ್ ಪ್ಲಾನ್‌ ಒಂದನ್ನು ತೆಗೆದುಕೊಂಡರೆ, ಅವರ ವಾರ್ಷಿಕ ಪ್ರೀಮಿಯಮ್ 7,497 ರೂ.ಗಳಿಂದ ಪ್ರಾರಂಭವಾಗುತ್ತದೆ. ಆ ವ್ಯಕ್ತಿಯು ಇದೇ ಅವಧಿಗೆ 50 ಲಕ್ಷ ರೂ.ಗಳ ಕವರ್‌ ಪ್ಲಾನ್‌ ತೆಗೆದುಕೊಂಡರೆ, ಅವರ ವಾರ್ಷಿಕ ಪ್ರೀಮಿಯಂ ರೂ. 4,222 ರಿಂದ ಪ್ರಾರಂಭವಾಗುತ್ತದೆ.

ಸರ್ವೈವಲ್ಬೆನಿಫಿಟ್

ರೆಗ್ಯುಲರ್‌ ಟರ್ಮ್ ಪ್ಲಾನ್‌ ನಿಬಂಧನೆಯಲ್ಲಿ ವಿಮಾ ಅವಧಿಯು ಪೂರ್ಣವಾದ ನಂತರ ಯಾವುದೇ ಕ್ಯಾಶ್‌ ವ್ಯಾಲ್ಯೂ ಇರುವುದಿಲ್ಲ. ಆದರೆ ಟರ್ಮ್ ಇನ್ಶೂರೆನ್ಸಿನಲ್ಲಿ, ಟರ್ಮ್ ರಿಟರ್ನ್‌ ಆಫ್‌ ಪ್ರೀಮಿಯಮ್ ಪ್ಲಾನ್‌ (ಟಿಆರ್‌ಓಪಿ) ಸೌಲಭ್ಯ ಇರುತ್ತದೆ. ಇದರಲ್ಲಿ ಪ್ಲಾನ್ ಮೆಚೂರಿಟಿಯಾದಾಗ ಪ್ರೀಮಿಯಮ್ ರೀಫಂಡ್‌ ನ ಅವಕಾಶವಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ