ಭಾರತವೀಗ ಅಮೆರಿಕಾವನ್ನು ಅನುಸರಿಸುತ್ತಿದೆ :
ನಮ್ಮ ಸರ್ಕಾರ ಅಮೆರಿಕಾದ ಜಾಡಿನಲ್ಲೇ ಸಾಗಲು ಯತ್ನಿಸುತ್ತಿದೆ. ಡೊನಾಲ್ಡ್ ಟ್ರಂಪ್ ದ. ಅಮೆರಿಕಾದಿಂದ ಬಂದ `ನುಸುಳುಕೋರ'ರನ್ನು ಹೊರದಬ್ಬಲು ಇಡೀ ದೇಶದಲ್ಲಿ ಎಲ್ಲೆಡೆ ಲ್ಯಾಟಿನ್ ಅಮೆರಿಕನ್ನರಿಗೆ ಆಪತ್ತು ಸೃಷ್ಟಿಸಿದರು. ಈಗ ಕಷ್ಟ ಬಂದದ್ದು ಎಂದರೆ, ಯಾರು ಪರದೇಶದಲ್ಲಿ ಹುಟ್ಟಿ ತಮ್ಮ ಸಂತಾನವನ್ನು ಅಮೆರಿಕಾದಲ್ಲಿ ಹೆತ್ತರೋ, ಆ ಪೀಳಿಗೆ ಪೂರ್ತಿ ಅಮೆರಿಕನ್ನರು ಎಂದೆನಿಸುತ್ತಾರೆ. ಟ್ರಂಪ್ ಈ ಪೀಳಿಗೆಯನ್ನು ಹಿಂದಿನ ತಲೆಮಾರಿನಿಂದ ಬೇರ್ಪಡಿಸುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲೂ ಈ ಪೀಳಿಗೆಯನ್ನು ಖುಲ್ಲಂಖುಲ್ಲ ವಿರೋಧಿಸಲಾಗುತ್ತಿದೆ. ಬಹುಶಃ ಇದೀಗ ನೊಬೆಲ್ ಪ್ರಶಸ್ತಿಯಲ್ಲೂ `ಸೆಪರೇಶನ್ ಮಹಾನ್' ಎಂಬ ಹೊಸ ಪ್ರಶಸ್ತಿ ಕೊಡಬೇಕಿದೆ. ನಿಮಗೀಗ ಗೊತ್ತಿರಬೇಕು, ಟ್ರಂಪ್ ಜೊತೆ ಯಾವ ಜೋಡಿ ಈ ಪ್ರಶಸ್ತಿಗೆ ಅರ್ಹರು ಅಂತ!
ಸಣ್ಣ ಉದ್ಯಮಿಗಳು ಎಲ್ಲಿಗೆ ಹೋಗಬೇಕು? :
ಇಂದಿನ ವರ್ತಮಾನ ಸ್ಥಿತಿಯಲ್ಲಿ ಸಣ್ಣಪುಟ್ಟ ಉದ್ಯಮಿಗಳು ನೆಲೆ ನಿಲ್ಲುವುದೇ ಕಷ್ಟವಾಗುತ್ತಿದೆ. ಏಕೆಂದರೆ ಬೃಹತ್ ಉದ್ಯಮಿಗಳ ಪಂಜಾ ಈಗ ಬಲು ವಿಶಾಲವಾಗುತ್ತಿದ್ದು, ಇಂಟರ್ ನೆಟ್ ನ ಕಬಂಧಬಾಹು ಚಾಚಿ ಇಡೀ ವ್ಯಾಪಾರ ವಲಯ ಕಬಳಿಸುತ್ತಿದ್ದಾರೆ. ಇವರ ಮುಂದೆ ಯಾವ ಟೆಕ್ ಸೇವಿ ಯಂಗ್ ಎಂಟರ್ ಪ್ರಿನೆರ್ ಗಳೂ ಉಳಿಯುತ್ತಿಲ್ಲ. ಇದಕ್ಕಾಗಿ ಸಮರ್ಪಕ ತಾಂತ್ರಿಕ ಸಾಹಿತ್ಯ ಬೇಕು, ಅದನ್ನು ಸಣ್ಣ ಉದ್ಯಮಿಗಳು ಸುಲಭವಾಗಿ ಮಾಡಬಲ್ಲರು. ಎಷ್ಟೋ ಕಂಪನಿಗಳು ಇದರ ತರಬೇತಿ ಕೊಡತೊಡಗಿವೆ. ಹೀಗಾಗಿ ಯುವ ಜನತೆ ಲಾಭ ಗಳಿಸಿ, ಮುಗುಳ್ನಗಲು ಸಾಧ್ಯವಾಗಿದೆ.
ವಿವಾಹವಾಗುವ ಆನಂದವನ್ನು ಎಲ್ಲಿ ಬೇಕಾದರೂ ಪಡೆಯಬಹುದು :
ಈ ವಿದೇಶೀ ಜೋಡಿ ಒಂದು ಪಾರ್ಕಿನಲ್ಲೇ ಪರಸ್ಪರ ಬಾಹುಗಳಲ್ಲಿ ಒರಗಿ, ವಿವಾಹ ವಿಧಿಗಳನ್ನು ಪೂರೈಸಿತು. ಯಾವ ಪಂಚತಾರಾ ಹೋಟೆಲ್ ನ ಭವ್ಯ ಬ್ಯಾಂಕ್ವೆಟ್ ಹಾಲ್ ನ್ನೂ ಬುಕ್ ಮಾಡಲಿಲ್ಲ. ಇಂದಿನ ಆಧುನಿಕ ದಿನಗಳಲ್ಲಿ ಮದುವೆಗಾಗುವ ಖರ್ಚನ್ನು ನೆನೆದೇ ಬಹುತೇಕ ಜೋಡಿ ಗಾಬರಿಗೊಳ್ಳುತ್ತವೆ. ಮದುವೆಯಾದ ಮೊದಲ ತಿಂಗಳು ಸಾಲ ಕೊಟ್ಟವರಿಗೆ ಜವಾಬು ಹೇಳುವುದೇ ಆಗುತ್ತದೆ. ನೀವು ಹೀಗೆ ಮಾಡಬೇಡಿ, ಸರಳತೆಯಲ್ಲೇ ಸಂಭ್ರಮವಿದೆ ಎಂಬುದನ್ನು ಮರೆಯದಿರಿ. ನಮ್ಮಲ್ಲಿನ `ಸಾಮೂಹಿಕ ವಿವಾಹ'ಗಳು ಇಂಥದ್ದಕ್ಕೆ ಪರ್ಯಾಯ!
ಬ್ಯಾಲೆಯ ಈ ಬಾಲೆಯರಿಗೆ ಸಮನಾರು? :
ತಮ್ಮ ಕಾಲ ಬೆರಳ ಮೇಲೆ ನಿಂತು ಹೇಗೆಂದರೆ ಹಾಗೆ ಲಯಬದ್ಧವಾಗಿ ಕುಣಿಯಬಲ್ಲ ಒಂದಿಷ್ಟೂ ತಾಳ ತಪ್ಪದ, ಮೃದು ಮಂದಹಾಸದ ಮುಖಾರವಿಂದದಿಂದ ಇಡೀ ವೇದಿಕೆಯನ್ನು ತಮ್ಮದಾಗಿಸಿಕೊಂಡು ಪ್ರೇಕ್ಷಕರನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ಯುವ ಇವರ ಪರಿ ನಿಜಕ್ಕೂ ಅನನ್ಯ, ಅನುಪಮ! ಇತ್ತೀಚೆಗೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಶುರುವಾದ ಈ ಬ್ಯಾಲೆ ಪ್ರದರ್ಶನಗಳು ವಾರಗಟ್ಟಲೆ ನಡೆದರೂ ಯಾರಿಗೂ ಸುಲಭವಾಗಿ ಟಿಕೆಟ್ ಸಿಕ್ಕದು.
ಮುಗುಳ್ನಗುವಿನ ಮಹತ್ವ :
ಗೆಳತಿಯರು ಜೊತೆಗೂಡಿದಾಗ ಹಗಲು ಇರುಳು ಸಾಗವುದೇ ಗೊತ್ತಾಗುವುದಿಲ್ಲ. ಚಳಿಗಾಲದಲ್ಲಿ ಹರಟೆಗಳೂ ಹೆಚ್ಚು. ಯಾವುದೇ ಪಾರ್ಟಿ ಇರಲಿ, ಅಲ್ಲಿ ನಗು ಇದ್ದರೆ ಜೀವಂತಿಕೆ ತುಂಬುತ್ತದೆ. ಪಾರ್ಟಿ ಎಂಥದೇ ಇರಲಿ, ನಿಮ್ಮ ಮುಖದಲ್ಲಿ ಸದಾ ಮುಗುಳ್ನಗು ಇರಲಿ. ಆಗ ಫೋಟೋಗ್ರಾಫರ್ ಸದಾ ನಿಮ್ಮ ಬೆನ್ನು ಬೀಳುತ್ತಾನೆ.