ನೀವು ಎಂದಾದರೂ ಹೆಣ್ಣು ಹಾಗೂ ಗಂಡು ಪಾರಿವಾಳಗಳು ಪರಸ್ಪರ ಜಗಳವಾಡಿದ್ದನ್ನು ನೋಡಿದ್ದೀರಾ? ಗಂಡು ಆನೆ ಹೆಣ್ಣಾನೆಗೆ ಹಿಂಸೆ ಕೊಟ್ಟಿದ್ದನ್ನು, ಗಂಡು ನವಿಲು ಹೆಣ್ಣು ನವಿಲನ್ನು ಪೀಡಿಸಿದ್ದನ್ನು ಕಂಡಿದ್ದೀರಾ? ಇಲ್ಲವೇ ಇಲ್ಲ. ಏಕೆಂದರೆ ಸೃಷ್ಟಿ ಅವುಗಳಿಗೆ ಪ್ರೀತಿಸುವುದನ್ನು, ಸಮಾಗಮ ನಡೆಸುವುದನ್ನು ಹಾಗೂ ಸಂತಾನೋತ್ಪತ್ತಿ ಮಾಡುವುದನ್ನು ಮಾತ್ರ ಕಲಿಸಿದೆ. ಲಕ್ಷಾಂತರ ವರ್ಷಗಳಿಂದ ಸೃಷ್ಟಿಯ ಪ್ರತಿಯೊಂದು ಜೀವಿಯೂ ನಿಸರ್ಗದ ಇದೇ ನಿಯಮವನ್ನೇ ಪಾಲಿಸುತ್ತಾ ತಮ್ಮ ಜೀವನ ಚಕ್ರವನ್ನು ಪೂರ್ಣಗೊಳಿಸುತ್ತಿವೆ. ಸೃಷ್ಟಿಯಲ್ಲಿ ಕೇವಲ ಮನುಷ್ಯ ಜೀವಿ ಮಾತ್ರ ನಿಸರ್ಗದ ಈ ನಿಯಮವನ್ನು ಅಮಾನಿಸುತ್ತಾ ಬಂದಿದ್ದಾನೆ. ಪುರುಷ ಹೆಣ್ಣಿನ ಮೇಲೆ ಕೈ ಮಾಡುತ್ತಾ, ಇಡೀ ಜೀವನ ಅವಳನ್ನು ಶೋಷಿಸುತ್ತಾ ಇರುತ್ತಾನೆ.

ಸರ್ಕಾರೇತರ ಸಂಸ್ಥೆ `ಸಹಜ್‌' ಮತ್ತು `ಈಕ್ವ್‌ಮೆಷರ್ಸ್‌ 2030' ಮುಖಾಂತರ ಸಮೀಕ್ಷೆ ನಡೆಸಲಾಗಿತ್ತು. ಅದರ ಫಲಿತಾಂಶ ಅಭಿವೃದ್ಧಿಯ ಮುಖಕ್ಕೆ ಅವಮಾನಕ್ಕಿಂತ ಕಡಿಮೆ ಏನಿಲ್ಲ. ಗುಜರಾತ್‌ ನ ಡೋದವರಾದ ಈ ಎರಡು ಸಂಸ್ಥೆಗಳ ಫಲಿತಾಂಶದ ಪ್ರಕಾರ, ಭಾರತದ ಪ್ರತಿ ಮೂರು ವಿವಾಹಿತ ಮಹಿಳೆಯರಲ್ಲಿ ಒಬ್ಬಳು ವಿವಾಹಿತೆ ಗಂಡನ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾಳೆ. ಆದರೆ ಇವರಲ್ಲಿ ಬಹಳಷ್ಟು ಮಹಿಳೆಯರಿಗೆ ಇದರ ಬಗ್ಗೆ ಯಾವುದೇ ತಕರಾರು ಇಲ್ಲ. ಇದು ತಮ್ಮ ಹಣೆಬರಹ ಎಂದು ಅವರು ಸುಮ್ಮನಿರುತ್ತಾರೆ.

ಭಾರತದಲ್ಲಿ 15-49ರ ವಯೋಮಾನದ ಮಹಿಳೆಯರಲ್ಲಿ ಶೇ.27ರಷ್ಟು ಮಹಿಳೆಯರು 15ನೇ ವಯಸ್ಸಿನಿಂದಲೇ ಕೌಟುಂಬಿಕ ದೌರ್ಜನ್ಯವನ್ನು ಸಹಿಸಿಕೊಂಡು ಬರುತ್ತಿದ್ದಾರೆ. ತವರಿನಲ್ಲಿ ಅಪ್ಪ ಅಣ್ಣ ತಮ್ಮಂದಿರಿಂದ, ಗಂಡನ ಮನೆಯಲ್ಲಿ ಗಂಡನಿಂದ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ.

ಕಳೆದ ವರ್ಷ ಮೀಟೂ ಅಭಿಯಾನದಲ್ಲಿ ತುಂಬಾ ಓದಿದವರು, ಉನ್ನತ ಸ್ಥಾನದಲ್ಲಿರುವವರು, ಆಧುನಿಕ ಎಂದು ಕರೆಸಿಕೊಳ್ಳುವ ಮಹಿಳೆಯರ ವಿವಶತೆ, ದುರ್ದೆಶೆ ಬಯಲಿಗೆ ಬಂತು. ಅದನ್ನು ಗಮನದಲ್ಲಿಟ್ಟು ನೋಡಿದರೆ ಈ ದೇಶದ ಕಡಿಮೆ ಓದಿದ, ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಗ್ರಾಮೀಣ, ಕುಗ್ರಾಮವಾಸಿ ಮಹಿಳೆಯರು ಪುರುಷ ಸಮಾಜದಿಂದ ಅದೆಷ್ಟು ಹಿಂಸೆ, ಅವಮಾನ ಅನುಭವಿಸುತ್ತಿರಬಹುದು ಎಂಬುದನ್ನು ನೀವೇ ಅಂದಾಜು ಮಾಡಬಹುದು.

ಮಹಿಳೆಯೇ ಹಿಂಸೆಗೆ ತುತ್ತಾಗುವುದೇಕೆ?

ಅಂದಹಾಗೆ ಮಹಿಳೆಯಷ್ಟೇ ಹಿಂಸೆಗೆ ಗುರಿಯಾಗುವುದೇಕೆ? ಅವಳನ್ನಷ್ಟೇ ಏಕೆ ದೈಹಿಕವಾಗಿ, ಮಾನಸಿಕವಾಗಿ ಶೋಷಿಸಲಾಗುತ್ತದೆ? ಮಹಿಳೆಯನ್ನು ಹಿಂಸೆಗೊಳಪಡಿಸಿ ಅವಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಪದ್ಧತಿ ಈ ಭೂಮಿಯ ಮೇಲೆ ಯಾವಾಗ ಮತ್ತು ಹೇಗೆ ಸ್ಥಾಪಿಸಲ್ಪಟ್ಟಿತು? ಮನುಷ್ಯನ ಹೊರತಾಗಿ ಬೇರೆ ಯಾವುದಾದರೂ ಪ್ರಾಣಿಗಳು ಹೆಣ್ಣು ಪ್ರಾಣಿಯ ಮೇಲೆ ಶೋಷಣೆ ನಡೆಸುತ್ತಿಯೇ?

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಾವು ಬೇರೆ ಜೀವಿಗಳ ವರ್ತನೆ ಮತ್ತು ಮಾನವ ಕುಲದ ಸಾವಿರಾರು ವರ್ಷಗಳ ಇತಿಹಾಸವನ್ನು ತೆರೆದು ನೋಡಬೇಕಾಗುತ್ತದೆ. ಜೊತೆಗೆ ಸೃಷ್ಟಿಯ ನಿಯಮಗಳನ್ನೂ ತಿಳಿದುಕೊಳ್ಳಬೇಕಾಗುತ್ತದೆ.

ಈ ಸೃಷ್ಟಿಯಲ್ಲಿ ಮುಖ್ಯವಾಗಿ ಎರಡೇ ಜಾತಿಗಳಿವೆ. ಒಂದು ಗಂಡು, ಮತ್ತೊಂದು ಹೆಣ್ಣು. ಇದರ ಹೊರತಾಗಿ ಮೂರನೇ ಜಾತಿಯೊಂದಿದೆ. ಅದೇ ಮಿಶ್ರ ಜಾತಿ ಅಥವಾ ತೃತೀಯ ಲಿಂಗಿಗಳು. ಅವರಲ್ಲಿ ಗಂಡು ಹಾಗೂ ಹೆಣ್ಣಿನ ಎರಡೂ ಅಂಶಗಳು ಗೋಚರಿಸುತ್ತವೆ. ಮೇಲಿನ ಎರಡು ಜಾತಿಗಳಿಗೆ ಹೋಲಿಸಿದರೆ ಇವರ ಸಂಖ್ಯೆ ತುಂಬಾ ಕಡಿಮೆ. ಗಂಡು ಹಾಗೂ ಹೆಣ್ಣು ಈ ಎರಡರಲ್ಲಿ ಯಾರೊಬ್ಬರ ಅನುಪಸ್ಥಿತಿ ಉಂಟಾದರೂ ಈ ಸೃಷ್ಟಿಯೇ ಕೊನೆಗೊಳ್ಳುತ್ತದೆ. ಜೀವನ ಸಮರ್ಪಕವಾಗಿ ಸಾಗುವಂತಾಗಲಿ. ಇಬ್ಬರಲ್ಲೂ ಸಮಾನತೆ ಇರಬೇಕು. ಈ ಮಾತು ಸೃಷ್ಟಿಯ ಪ್ರತಿಯೊಂದು ಪುಟ್ಟ ಜೀವಿಯಿಂದ ಹಿಡಿದು ದೊಡ್ಡ ಜೀವಿಯ ತನಕ ಎಲ್ಲರಿಗೂ ಅನ್ವಯಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ