ಕನ್ನಡ ಭಾಷೆ, ಸಾಹಿತ್ಯದಲ್ಲಿ ಅಪಾರ ಒಲವು ಹೊಂದಿರುವ ಸೀಮಾ ಬೇಂದ್ರೆಯವರ ಹಲವಾರು ಕಾವ್ಯಗಳನ್ನು ನೃತ್ಯರೂಪಕ್ಕೆ ಇಳಿಸಿದ್ದಾರೆ.

ಮೂಲತಃ ತುಮಕೂರಿನವರಾದ ಇರುವ ಫೆಬ್ರವರಿ 15, 1974 ರಂದು ಕೆ. ಸೂರ್ಯಪ್ರಕಾಶ್‌, ಸುಮತಿ ದಂಪತಿ ಪುತ್ರಿಯಾಗಿ ಜನ್ಮ ತಾಳಿದರು.

ಇವರ ತುಮಕೂರಿನ ನೃತ್ಯ ಗುರು ಕಾವ್ಯಶ್ರೀ ಕೆ.ಎಂ. ರಾಮನ್‌, ನಂತರ ಧಾರವಾಡದ ವಿದುಷಿ ಕುಮುದಿನಿ ರಾವ್ ಗುಣವಂತೆಯರ ಬಳಿ ಕಥಕ್‌ ಮತ್ತು ಭರತನಾಟ್ಯ ಎರಡೂ ಶೈಲಿಯನ್ನು ವಿವಾಹವಾದ ನಂತರ ಮುಂದುವರಿಸಿದರು.

ಮೈಸೂರಿನ ವಿದ್ವಾನ್‌ ಕೆ. ರಾಮಮೂರ್ತಿ ರಾವ್‌, ವಿದುಷಿ ಸುಜಾತಾ ರಾಜಗೋಪಾಲ್ ‌ಹಾಗೂ ಸಾಗರದ ವಿದ್ವಾನ್‌ ಎಂ. ಗೋಪಾಲ್ ರವರ ಗರಡಿಯಲ್ಲಿ ಪಳಗಿದರು. ನೃತ್ಯ ಸಂಶೋಧನೆಗೆ ಡಾ. ಕರುಣಾ ವಿಜೇಂದ್ರರ ಹತ್ತಿರ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ನಾಟ್ಯಕಲೆಗೆ ಬೇಕಾದ ಆಕರ್ಷಕ ವ್ಯಕ್ತಿತ್ವ, ಮಧುರ ಸ್ವರ ಹೊಂದಿರುವ ಸೀಮಾ ಭರತನಾಟ್ಯ ಮತ್ತು ಕಥಕ್‌ ನಲ್ಲಿ ಸಿದ್ಧಹಸ್ತರು. ಕರ್ನಾಟಕ ಪ್ರೌಡಶಿಕ್ಷಣ ಮಂಡಳಿ ಮತ್ತು ಮಹಾರಾಷ್ಟ್ರದ ಗಂಧರ್ವ ಮಹಾಮಂಡಳದ ಎಲ್ಲಾ ನೃತ್ಯ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿ, ಈಗ ಹುಬ್ಬಳ್ಳಿಯಲ್ಲಿ ಏಕೈಕ ಕಥಕ್‌ ನೃತ್ಯ ಗುರುವಾಗಿದ್ದಾರೆ. ಇಂಗ್ಲಿಷ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಬಾಹ್ಯ ವಿದ್ಯಾರ್ಥಿಯಾಗಿ ಪಡೆದಿದ್ದಾರೆ. ಭರತನಾಟ್ಯ ವಿದ್ವತ್‌ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸೀಮಾ ಮೈಸೂರು ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ.

`ಪ್ರವಾಸಿ ಕಂಡ ನರ್ತನ ಲೋಕ’ ಎಂಬ ವಿಷಯದ ಕುರಿತು ಪ್ರೌಢ ಪ್ರಬಂಧವನ್ನು ಹಂಪಿ ವಿಶ್ವವಿದ್ಯಾನಿಲಯಕ್ಕೆ ಡಾಕ್ಟರೇಟ್ ಪದವಿಗಾಗಿ ಸಲ್ಲಿಸಿದ್ದಾರೆ. 1996ರಲ್ಲಿ ಉಡುಪಿ ಜಿಲ್ಲೆಯ ಬನ್ನಂಜೆಯ ಸೀತಾರಾಮ ಉಪಾಧ್ಯಾಯರನ್ನು ವಿವಾಹವಾಗಿ ಹುಬ್ಬಳ್ಳಿಯಲ್ಲಿ ನೆಲೆಸಿದರು. ಪತ್ನಿಯ ಎಲ್ಲಾ ಚಟುವಟಿಕೆಗಳಿಗೂ ತುಂಬು ಹೃದಯದ ಸಹಕಾರ ನೀಡಿದ್ದಾರೆ.

ಸೀಮಾ 2000ದಲ್ಲಿ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ `ಅಭಿನಯ ನೃತ್ಯಶಾಲೆ’ಯನ್ನು ಪ್ರಾರಂಭಿಸಿದರು. 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭರತನಾಟ್ಯ ಕಥಕ್‌ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸುಮಾರು 500ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ನೀಡಿದ್ದಾರೆ. 18 ವರ್ಷಗಳಿಂದ ಭರತನಾಟ್ಯ ಮತ್ತು ಕಥಕ್‌ ನೃತ್ಯ ತರಬೇತಿಯನ್ನು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೀಡಿದ್ದಾರೆ.

ಇವರ ಅಭಿನಯ ನೃತ್ಯ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಮೂಡಬಿದ್ರಿಯ ಆಳ್ವಾಸ್‌, ಮದರಾಸಿನ ಕಲಾ ಕ್ಷೇತ್ರಗಳಲ್ಲಿ ತಮ್ಮ ನೃತ್ಯ ತರಬೇತಿ ಮುಂದುವರಿಸಿದ್ದಾರೆ. ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ಪುಣೆ, ಕೊಲ್ಹಾಪುರ ಇನ್ನೂ ಮುಂತಾದ ಪ್ರದೇಶಗಳಲ್ಲಿ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.

ಪ್ರಸಿದ್ಧ ನೃತ್ಯರೂಪಕಗಳು

ರಾಮಾಯಣ ದರ್ಶನ, ಕೃಷ್ಣನ ಬಾಲಲೀಲೆಗಳು, ದೇವಿದರ್ಶನ, ದಶಾವತಾರ, ಶಿಲಾನ್ಯಾಸ, ವಚನಗಳು, ಬೇಂದ್ರೆ ಕಾವ್ಯಗಳಲ್ಲಿ ನೃತ್ಯ ಯಜ್ಞ, ಸೀತಾಪತೆ ಪ್ರಮುಖವಾದ.

ಹುಬ್ಬಳ್ಳಿಯ ಉಷಾ ಬುದ್ಧಿಮಾಂಧ್ಯ ಶಾಲೆ ಮಕ್ಕಳಿಗಾಗಿ ಕಳೆದ 7 ವರ್ಷಗಳಿಂದ ನೃತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಸಾಂಪ್ರದಾಯಿಕ ಭರತನಾಟ್ಯಕ್ಕೆ ಎಲ್ಲೂ ಚ್ಯುತಿ ಬಾರದಂತೆ ನರ್ತನವನ್ನು ಪ್ರಸ್ತುತಗೊಳಿಸುವ ಈ ಪ್ರಬುದ್ಧ ಸಂಶೋಧಕಿ, ಭರತನಾಟ್ಯದ ಬಗ್ಗೆ ಕರಾರುವಾಕ್ಕಾಗಿ ಮಾತನಾಡುವ ಇವರು ಅನೇಕ ವಿಚಾರ ಸಂಕಿರಣ, ಕಮ್ಮಟಗಳಲ್ಲಿ ಉಪನ್ಯಾಸ ನೀಡಿದ್ದಾರೆ.

ಕನ್ನಡ ಭಾಷೆ, ಸಾಹಿತ್ಯದಲ್ಲಿ ಅಪಾರ ಒಲವು ಹೊಂದಿರುವ ಸೀಮಾ ಬೇಂದ್ರೆಯವರ ಹಲವಾರು ಕಾವ್ಯಗಳನ್ನು ನೃತ್ಯರೂಪಕ್ಕೆ ಇಳಿಸಿದ್ದಾರೆ.

ಇವರು ಪ್ರಸ್ತುತ ಹುಬ್ಬಳ್ಳಿಯ ಕೆ.ಎಲ್.ಇ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಂಗ್ಲ ಭಾಷೆಯ ಗೌರವ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಚ್ಚುಮೆಚ್ಚಿನ ಉಪನ್ಯಾಸಕಿಯಾಗಿರುವ ಇವರಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ, ಮಮತೆ, ವಿಶ್ವಾಸವಿದೆ.

ಬಿ. ಬಸರಾಜು

ಪ್ರಶಸ್ತಿ ಸನ್ಮಾನಗಳು

ಶ್ರೀ ಶ್ರೀನಿವಾಸ ಕಲಾಸಂಗಮ ಹಾಗೂ ಕಾವ್ಯಶ್ರೀ ಸಾಂಸ್ಕೃತಿಕ ಸಂಘ 2015ರಲ್ಲಿ `ಬಹುಮುಖ ಪ್ರತಿಭೆ’ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಂದ ಸನ್ಮಾನ.

ವಿಪ್ರ ಸ್ವಾಭಿಮಾನ ಸಮಾವೇಶ 2010ರಲ್ಲಿ `ನೃತ್ಯ ಶಾರದೆ’ ಎಂದು ಪ್ರಹಲ್ಲಾದ ಜೋಶಿಯವರಿಂದ ಸನ್ಮಾನ.

ಶಿವಶಕ್ತಿ ಕಲಾ ಕೇಂದ್ರ ಇವರಿಂದ 2014ರಲ್ಲಿ `ನಾಟ್ಯ ವಿಶಾರದೆ’ ಎಂಬ ಪ್ರಶಸ್ತಿ.

ಶ್ರೀ ರಾಜರಾಜೇಶ್ವರಿ ನೃತ್ಯ ಕೇಂದ್ರದಿಂದ 2012ರಲ್ಲಿ ಸನ್ಮಾನ.

ಪರಿಣಿತಿ ಕಲಾಕೇಂದ್ರ ಸಾಗರ ಇವರಿಂದ 2012ರಲ್ಲಿ ಸನ್ಮಾನ.

ಲಯನೆಸ್‌ ಲೇಡೀಸ್‌ ಕ್ಲಬ್‌ ಇವರಿಂದ 2013ರಲ್ಲಿ `ಶ್ರೇಷ್ಠ ನೃತ್ಯ ಶಿಕ್ಷಕಿ’ ಎಂದು ಸನ್ಮಾನ.

ಉಷಸ್‌ ಮತ್ತು ರೋಟರಿ ಕ್ಲಬ್‌ ವತಿಯಿಂದ 2012ರಲ್ಲಿ `ಶ್ರೇಷ್ಠ ಶಿಕ್ಷಕಿ’ ಪ್ರಶಸ್ತಿ.

ಶಕ್ತಿ ಮಹಿಳಾ ಸಮಾಜದವರಿಂದ 2012ರಲ್ಲಿ `ನಾಟ್ಯ ಪ್ರವೀಣೆ’ ಎಂಬ ಬಿರುದು.

ವಾಸವಿ ಮಹಿಳಾ ಸಮಾಜದವರಿಂದ 2013ರಲ್ಲಿ `ನರ್ತನ ಮಯೂರಿ’ ಎಂಬ ಪ್ರಶಸ್ತಿ.

ದಿಗಂಬರ ಜೈನ ಮಹಿಳಾ ಸಮಾಜದವರಿಂದ ಮಹಿಳಾ ದಿನಾಚರಣೆಯ ದಿನ 2012ರಲ್ಲಿ `ಮಹಿಳಾ ಸಾಧಕಿ’ ಎಂದು ಸನ್ಮಾನ.

2019ರಲ್ಲಿ ಕರ್ನಾಟಕ ನೃತ್ಯಾಲಯ ಪರಿಷತ್‌ನಿಂದ `ನೃತ್ಯ ನಿಪುಣೆ’ ಎಂಬ ಪ್ರಶಸ್ತಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ