ಇಂದಿನ ಉದ್ಯೋಗಸ್ಥ ಮಹಿಳೆಯರು ಕೆಲಸ ಮತ್ತು ಇತರ ಜವಾಬ್ದಾರಿಗಳ ಕಾರಣ ಎಷ್ಟು ವ್ಯಸ್ತರಾಗಿರುತ್ತಾರೆಂದರೆ ಸರಿಯಾಗಿ ಊಟವನ್ನೂ ಮಾಡುವುದಿಲ್ಲ. ಸರಿಯಾದ ಟೈಮಿಗೆ ಆಫೀಸಿಗೆ ಹೋಗುವ ಗಡಿಬಿಡಿಯಲ್ಲಿ ಅನೇಕ ಬಾರಿ ಬೆಳಗಿನ ತಿಂಡಿ ತಿನ್ನುವುದಿಲ್ಲ. ಇದರ ನೇರ ಪರಿಣಾಮ ಆರೋಗ್ಯದ ಮೇಲೆ ಉಂಟಾಗುತ್ತದೆ. ಅದು ದಿಢೀರನೆ ಬರದೆ ನಿಧಾನವಾಗಿ ಎದುರಾಗುತ್ತದೆ. ಅನೇಕ ಬಾರಿ ಅವರು ತಿಂಡಿ ತಿನ್ನದೆ ಆಫೀಸಿಗೆ ಹೋಗಿ ಹಸಿವಾದಾಗ ಜಂಕ್‌ ಫುಡ್‌ ತಿನ್ನುತ್ತಾರೆ ಅದು ಆರೋಗ್ಯಕ್ಕೆ ಹಾನಿಕರ.

ತಿಂಡಿ ತಿನ್ನುವುದು ಏಕೆ ಅಗತ್ಯ? ತಿನ್ನದಿದ್ದರೆ ಅದರ ಪರಿಣಾಮ ಏನಾಗುತ್ತದೆ ಎಂಬುದರ ಬಗ್ಗೆ ನಾವು ಡಯೆಟೀಶಿಯನ್‌ ಡಾ. ಸವಿತಾರೊಂದಿಗೆ ಮಾತಾಡಿದಾಗ ಹೊರಬಂದ ಪ್ರಮುಖ ಅಂಶಗಳು :

ತಿಂಡಿ ತಿನ್ನುವುದರ ಅಗತ್ಯವಿದೆಯೇ? ನಮ್ಮ ಡಯೆಟ್‌ ನಲ್ಲಿ ಅದಕ್ಕೆ ಏನು ಮಹತ್ವ ಇದೆ? ತಿಂಡಿ ದಿನದ ಅತ್ಯಂತ ಮಹತ್ವಪೂರ್ಣ ಆಹಾರವಾಗಿದೆ. ತಿಂಡಿ ತಿನ್ನದಿದ್ದರೆ ಶರೀರಕ್ಕೆ ಅಗತ್ಯ ಪ್ರಮಾಣದ ಶಕ್ತಿ ಸಿಗುವುದಿಲ್ಲ. ರಾತ್ರಿಯ ಊಟ ಮತ್ತು ಬೆಳಗ್ಗೆ ಏಳುವವರೆಗಿನ ಅವಧಿ ದೊಡ್ಡದಾಗಿರುತ್ತದೆ. ಇಡೀ ದಿನ ಕೆಲಸ ಮಾಡಲು ಎನರ್ಜಿ ಅತ್ಯಗತ್ಯ. ಅದು ತಿಂಡಿಯಿಂದಲೇ ಸಿಗುತ್ತದೆ.

ತಿಂಡಿ ತಿನ್ನದಿದ್ದರೆ ಸ್ವಲ್ಪ ಹೊತ್ತಿನ ನಂತರ ತಿನ್ನುವ ಆಸೆಯಾಗುತ್ತದೆ. ಆಗ ಕೆಲವರು ಇಡೀ ದಿನ ಏನಾದರೊಂದು ತಿನ್ನುತ್ತಲೇ ಇರುತ್ತಾರೆ. ಹಸಿವೆ ನೀಗಿಸಲು ಅನ್‌ ಹೆಲ್ದಿ ಫುಡ್‌ ತೆಗೆದುಕೊಳ್ಳುತ್ತಾರೆ. ಬೆಳಗ್ಗೆ ನೀವು ಏನನ್ನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿದ್ದರೆ ಮೆಟಬಾಲಿಸಂ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಶರೀರದ ಚಾಲನೆ ಮಾಡುವ ಇಂಧನ ಗ್ಲೂಕೋಸ್‌ ಆಗಿದೆ. ವಿಭಿನ್ನ ಕೆಲಸಗಳನ್ನು ಮಾಡಲು ನಮ್ಮ ಮೆದುಳು ಹಾಗೂ ನರಗಳಿಗೆ ಈ ಇಂಧನದ ಅಗತ್ಯವಿದೆ. ನೀವು ಅದನ್ನು ಪೂರೈಸದಿದ್ದರೆ ನಿಮ್ಮ ದೇಹ ಅಪೌಷ್ಟಿಕ ಆಹಾರ ತಿನ್ನತೊಡಗುತ್ತದೆ.

ಬೆಳಗ್ಗೆ ಏನೂ ತಿನ್ನದಿದ್ದರೆ, ಮೆಟಬಾಲಿಸಂ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಮೆಟಬಾಲಿಸಂ ಎಂತಹ ಪ್ರಕ್ರಿಯೆಯೆಂದರೆ ತಿಂದ ಆಹಾರವನ್ನು ಎನರ್ಜಿಯಾಗಿ ಬದಲಿಸುತ್ತದೆ. ಅದರಿಂದ ಶರೀರ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇಡೀ ರಾತ್ರಿ ನಿದ್ರೆಯ ನಂತರ ತಿಂಡಿ ಮೆಟಬಾಲಿಸಂನ್ನು ಕೆಲಸಕ್ಕೆ ಹಚ್ಚುತ್ತದೆ.

ತಿಂಡಿ ತಿನ್ನದಿದ್ದರೆ ಶರೀರದಲ್ಲಿ ಮೆಟಬಾಲಿಸಂನ ಪ್ರಕ್ರಿಯೆ ನಿಧಾನವಾಗಿ ನಡೆಯುವುದರಿಂದ ಕ್ಯಾಲರಿ ಬರ್ನ್‌ ಆಗುವ ಬದಲು ಶರೀರದಲ್ಲೇ ಜಮೆಯಾಗುತ್ತಿರುತ್ತದೆ. ಅಂದರೆ ಶರೀರದಲ್ಲಿ ಕೊಬ್ಬು ಹೆಚ್ಚುತ್ತಿರುತ್ತದೆ.

ತಮ್ಮನ್ನು ಫಿಟ್‌ ಆಗಿಟ್ಟುಕೊಳ್ಳಲು ಡಯೆಟಿಂಗ್‌ ಎಂದು ತಿಂಡಿ ತಿನ್ನದಿರುವ ಮಹಿಳೆಯರಿಗೆ ಅದು ಪ್ರತಿಕೂಲ ಕೆಲಸ ಮಾಡುತ್ತದೆ. ತಿಂಡಿ ತಿನ್ನದಿರುವುದರಿಂದ ನೀವು ಶಾರೀರಿಕವಾಗಿ ಸಕ್ರಿಯರಾಗಿರುವುದಿಲ್ಲ. ಈ ಸ್ಥಿತಿ ಮುಂದೆ ಹೆಚ್ಚಿನ ಸುಸ್ತು ಸಂಕಟಗಳನ್ನು ತಂದೊಡ್ಡುತ್ತದೆ.

ತಿಂಡಿಯಲ್ಲಿ ಕಡಿಮೆ ಕೊಬ್ಬಿನ ಆಹಾರದೊಂದಿಗೆ ಪ್ರೋಟೀನ್‌ ಯುಕ್ತ ಪದಾರ್ಥ ತೆಗೆದುಕೊಂಡರೆ ಊಟ ಮಾಡುವಾಗ ಹೆಚ್ಚು ತಿನ್ನುವ ಇಚ್ಛೆಯುಂಟಾಗವುದಿಲ್ಲ.

ತಿಂಡಿ ಮೆಟಬಾಲಿಸಂ ಮೇಲೆ ಪ್ರಭಾವ ಬೀರಿದರೆ ಅದರಿಂದ ತೂಕ ಕಡಿಮೆ ಮಾಡುವಲ್ಲಿ ತೊಂದರೆಯಾಗುತ್ತದೆಯೇ?

ತಿಂಡಿ ತಿನ್ನದಿದ್ದರೆ ಇಡೀ ಪ್ರಕ್ರಿಯೆ ಹಾಳಾಗುತ್ತದೆ. ಅದರಿಂದಾಗಿ ಲಂಚ್‌ ಸಮಯದಲ್ಲಿ ಹೆಚ್ಚು ತಿನ್ನಲಾಗುತ್ತದೆ. ನ್ಯೂಟ್ರಿಶಿಯಸ್‌ ಫುಡ್‌ ತೆಗೆದುಕೊಳ್ಳದಿರುವುದರಿಂದ ತೂಕ ಹೆಚ್ಚುತ್ತದೆ. ಅದನ್ನು ಕಡಿಮೆ ಮಾಡುವುದು ಸುಲಭವಲ್ಲ.

ತೂಕ ನಿಯಂತ್ರಿಸುವಲ್ಲಿ ಮತ್ತು ಹೆಚ್ಚುವರಿ ಫ್ಯಾಟ್ಬರ್ನ್ಮಾಡುವಲ್ಲಿ ತಿಂಡಿ ಹೇಗೆ ಸಹಾಯ ಮಾಡುತ್ತದೆ?

ಅಧಿಕ ಫ್ಯಾಟ್‌ ಬರ್ನ್‌ ಮಾಡಲು ತಿಂಡಿ ನಮ್ಮ ಮೆಟಬಾಲಿಸಂನ್ನು ಹೆಚ್ಚುಸುತ್ತದೆ. ತಡವಾಗಿ ತಿಂಡಿ ತಿನ್ನುವುದರಿಂದ ಅದು ನಿಧಾನವಾಗುತ್ತದೆ ಮತ್ತು ತೂಕ ಕಡಿಮೆ ಮಾಡುವುದು ಕಷ್ಟ. ಪೌಷ್ಟಿಕ ಆಹಾರ ಪದಾರ್ಥಗಳನ್ನು ತಿನ್ನುವ ಇಚ್ಛೆ ಉಂಟಾಗುವುದಿಲ್ಲ.

ಕೆಲವು ಮಹಿಳೆಯರು ಆಗಾಗ್ಗೆ ಚಿಪ್ಸ್, ಸಮೋಸಾ ಅಥವಾ ಚಾಟ್ಸ್ ತಿನ್ನುವುದು ಕಂಡುಬರತ್ತದೆ. ಅವುಗಳಿಂದ ಸ್ಥೂಲತೆ ಹೆಚ್ಚುತ್ತದೆ. ಹೊಟ್ಟೆ ತುಂಬಾ ತಿಂಡಿ ತಿನ್ನದಿರುವುದರಿಂದ ಹೀಗಾಗುತ್ತದೆ. ನಿಮ್ಮ ಬಳಿ ಸದಾ ಹಣ್ಣು ಅಥವಾ ಸಲಾಡ್‌ ಇಟ್ಟುಕೊಂಡು ಹಸಿವಾದಾಗ ಅವನ್ನು ಸೇವಿಸಿ.

ಎನರ್ಜಿ ಉಳಿಸಿಕೊಳ್ಳಲು ಯಾವ ರೀತಿಯ ತಿಂಡಿ ತೆಗೆದುಕೊಳ್ಳಬೇಕು?

ನೀವು ತಾಜಾ ಮತ್ತು ಪೌಷ್ಟಿಕಾಂಶಗಳಿರುವ ತಿಂಡಿ ತಿಂದರೆ ದಿನವಿಡೀ ನಿಮ್ಮಲ್ಲಿ ಸ್ಛೂರ್ತಿ ಇರುತ್ತದೆ. ಎನರ್ಜಿ ಉಳಿಸಿಕೊಳ್ಳಲು ನಿಮ್ಮ ಮೆದುಳಿಗೆ ಗ್ಲೂಕೋಸ್‌ ಸಿಗುವಂತೆ ಮಾಡಿ, ಅದು ಇಂಧನದಂತೆ ಕೆಲಸ ಮಾಡುತ್ತದೆ. ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಆಹಾರ ಅತ್ಯುತ್ತಮ. ಇದು ಗ್ಲೂಕೋಸ್‌ ನ್ನು ನಿಧಾನವಾಗಿ ರಕ್ತದೊಡನೆ ಹೋಗಲು ಬಿಡುತ್ತದೆ. ಇದರಿಂದ ಬಹುಕಾಲ ಆರೋಗ್ಯವಾಗಿರಬಹುದು.

ತಿಂಡಿಯಲ್ಲಿ ಓಟ್‌ ಮೀಲ್‌, ಹೋಲ್ ‌ವೀಟ್‌ ಟೋಸ್ಟ್, ಮೊಟ್ಟೆ, ಹಾಲು, ಹಣ್ಣು ಮತ್ತು ಅಖರೋಟ್‌ ತೆಗೆದುಕೊಳ್ಳಬಹುದು. ತಾಜಾ ಹಣ್ಣಿನ ರಸ, ಎಳನೀರು, ಮೊಳಕೆ ಕಾಳುಗಳು, ನುಚ್ಚನ್ನ ಇತ್ಯಾದಿ ಉತ್ತಮ. ಕರಿದ ತಿಂಡಿ, ಮೈದಾದಿಂದ ತಯಾರಿಸಿದ ತಿಂಡಿಗಳನ್ನು ತಿನ್ನಬೇಡಿ. ಮೈದಾ ಹೊಟ್ಟೆಯಲ್ಲಿ ಜಮೆಯಾಗುತ್ತದೆ. ಫೈಬರ್‌ ಯುಕ್ತ ಆಹಾರ ಪದಾರ್ಥಗಳನ್ನು ನಿಮ್ಮ ತಿಂಡಿಯಲ್ಲಿ ಸೇರಿಸಿ.

ಹೆಲ್ದಿ  ಟಿಫನ್ಅಂದರೇನು?

ಹೆಲ್ದಿ ಟಿಫನ್‌ ನಲ್ಲಿ ವಿಟಮಿನ್ಸ್ ಮಿನರಲ್ಸ್, ಪ್ರೋಟೀನ್‌, ಫೈಬರ್‌ ಮತ್ತು ಲೋಫ್ಯಾಟ್‌ ಆಹಾರ, ಹಣ್ಣುಗಳು, ಡ್ರೈಪ್ರೂಟ್ಸ್ ಮತ್ತು ಜೇನುತುಪ್ಪ ಇರಬೇಕು. ಮೊಸರಿನಲ್ಲಿ ಹೆಚ್ಚು ಪ್ರೋಟೀನ್‌ ಇರುತ್ತದೆ. ಅದನ್ನು ತಿನ್ನುವುದರಿಂದ ಬಹಳ ಹೊತ್ತು ತೃಪ್ತಿ ಇರುತ್ತದೆ. ಕಾರ್ಬೋಹೈಡ್ರೇಟ್‌ ರೂಪದಲ್ಲಿ ಡ್ರೈಫ್ರೂಟ್ಸ್ ಮತ್ತು ಜೇನುತುಪ್ಪ ತೆಗೆದುಕೊಂಡರೆ ಎನರ್ಜಿ ಸಿಗುತ್ತದೆ. ಅದರಲ್ಲಿ ಅಖರೋಟ್ ಸೇರಿಸಿದರೆ ಒಮೆಗಾ3 ಕೂಡ ಸಿಗುತ್ತದೆ.

ಹಣ್ಣುಗಳು, ಡ್ರೈಫ್ರೂಟ್ಸ್ ಜೊತೆಗೆ ಓಟ್‌ ಮೀಲ್ ಕೂಡ ತೆಗೆದುಕೊಳ್ಳಿ. ಓಟ್‌ ಮೀಲ್ ‌ನಲ್ಲಿ ಫೈಬರ್‌ ಬೆರೆತಿದ್ದು ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಓಟ್‌ ಮೀಲ್ ‌ನಲ್ಲಿ ಆಯಾ ಋತುವಿನ ಹಣ್ಣುಗಳೊಂದಿಗೆ ಡ್ರೈಫ್ರೂಟ್ಸ್ ಸೇರಿಸಿ ತಿನ್ನಬಹುದು. ಇದಲ್ಲದೆ ಮೊಳಕೆ ಕಟ್ಟಿದ ಹೆಸರುಕಾಳು, ಕಡಲೆಕಾಳು, ಕೊ.ಸೊಪ್ಪು, ಪುದೀನಾ ಬೆರೆತ ಟೊಮೇಟೊ ಚಟ್ನಿ, ನುಚ್ಚನ್ನ, ಅವಲಕ್ಕಿ, ಇಡ್ಲಿ ಇತ್ಯಾದಿ ತಿನ್ನಬಹುದು. ತಿಂಡಿಯಲ್ಲಿ ಹಣ್ಣುಗಳನ್ನು ತಿಂದರೆ ಶರೀರಕ್ಕೆ ಅಗತ್ಯವಾದ ನ್ಯಾಚುರಲ್ ಶುಗರ್‌ ಸಿಗುತ್ತದೆ. ಪ್ರೋಸೆಸ್ಡ್ ಶುಗರ್‌ ನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ಸಮಯದ ಕೊರತೆಯಿಂದ ತಿಂಡಿ ತಿನ್ನಲಾಗದಿದ್ದಾಗ ಹೇಗೆ ಅಭ್ಯಾಸವನ್ನು ವಿಕಸಿತಗೊಳಿಸಬಹುದು?

ತಿಂಡಿ ತಿನ್ನಲಾಗದ ಕಾರಣಗಳನ್ನು ಪರಿಶೀಲಿಸಿ ಅವನ್ನು ಪರಿಹರಿಸಿಕೊಳ್ಳಿ. ತಿಂಡಿ ತಿನ್ನುವುದನ್ನೂ ನಿಮ್ಮ ದಿನಚರಿಯ ಒಂದು ಭಾಗವಾಗಿ ಮಾಡಿಕೊಳ್ಳಿ. ಹೆಚ್ಚು ತಿಂಡಿ ಮಾಡಲು ಸಮಯ ಇಲ್ಲದಿದ್ದರೆ ಸುಲಭವಾಗಿ ಮಾಡಲಾಗುವ ತಿಂಡಿಯನ್ನೇ ತಯಾರಿಸಿ. ಫ್ರೂಟ್‌ ಚಾಟ್ಸ್ ಮಾಡಬಹುದು. 1 ಗ್ಲಾಸ್‌ ಮಜ್ಜಿಗೆ ಕುಡಿಯಬಹುದು. ಬ್ರೌನ್‌ ರೈಸ್‌ ಅವಲಕ್ಕಿ ತೆಗೆದುಕೊಳ್ಳಬಹುದು. ಸ್ಕಿಮ್ಡ್ ಮಿಲ್ಕ್ ನೊಂದಿಗೆ ವೀಟ್‌ ಫ್ಲೇಕ್ಸ್ ಅಥವಾ ಓಟ್ಸ್ ತೆಗೆದುಕೊಳ್ಳಬಹುದು.

ತಿಂಡಿ ತೆಗೆದುಕೊಳ್ಳಲು ಸರಿಯಾದ ಸಮಯ ಯಾವುದು?

ನಿಮ್ಮ ಎನರ್ಜಿ ಮತ್ತು ಬ್ಲಡ್‌ ಶುಗರ್‌ ಲೆವೆಲ್ ಹೆಚ್ಚಿಸಲು ಎದ್ದ 1 ಗಂಟೆಯ ನಂತರ ತಿಂಡಿ ತಿನ್ನುವುದು ಒಳ್ಳೆಯದು.

ನಿಯಮಿತವಾಗಿ ತಿಂಡಿ ತಿನ್ನದಿರುವುದರಿಂದ ಯಾವ್ಯಾವ ಸಮಸ್ಯೆಗಳುಂಟಾಗುತ್ತವೆ?

ತಿಂಡಿಯನ್ನು ನಿಮ್ಮ ದಿನಚರಿಯ ಒಂದು ಭಾಗವಾಗಿ ಮಾಡದಿದ್ದರೆ ಏಕಾಗ್ರತೆ ಕಡಿಮೆಯಾಗುತ್ತದೆ. ಬೆಳಗ್ಗೆ ಎದ್ದಾಗ ಹೊಟ್ಟೆ ಖಾಲಿ ಇರುತ್ತದೆ. ಅದಕ್ಕೆ ಎನರ್ಜಿ ಕೊಡದಿರುವುದರಿಂದ ಏಕಾಗ್ರತೆಗೆ ತೊಂದರೆಯಾಗಿ ಯಾವುದೇ ಕೆಲಸಕ್ಕೆ ಗಮನ ಕೊಡುವುದು ಕಷ್ಟವಾಗುತ್ತದೆ. ಸುಸ್ತು ಹಾಗೂ ಕಾರಣವಿಲ್ಲದೆ ಸಿಡುಕುವುದು ನಿಮ್ಮ ವ್ಯಕ್ತಿತ್ವದ ಒಂದು ಭಾಗವಾಗುತ್ತದೆ.

ಕೈಗೆ ಸಿಕ್ಕಿದ್ದನ್ನು ತಿನ್ನುತ್ತಿದ್ದರೆ ತೂಕ ಒಂದೇ ಸಮನೆ ಹೆಚ್ಚುತ್ತದೆ. ನಿಮ್ಮ ಕ್ರಿಯಾಶೀಲತೆಗೆ ಕೊರತೆ ಬರುತ್ತದೆ. ನಿಮಗೆ ಬೆಳಗ್ಗೆಯೇ ಸುಸ್ತು ಅಥವಾ ಆಲಸ್ಯ ಅನ್ನಿಸಿದರೆ ಇಡೀ ದಿನ ನಿಮ್ಮ ಕ್ಯಾಲರಿ ಬರ್ನ್‌ ಆಗುವ ಪ್ರಮಾಣ ಬಹಳ ಕಡಿಮೆಯಾಗುತ್ತದೆ.

ಇದಲ್ಲದೆ ತಿಂಡಿ ತಿನ್ನದಿರುವ ಮಹಿಳೆಯರಿಗೆ ಅವರ ಆರೋಗ್ಯಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳು ಸಿಗುವುದಿಲ್ಲ. ಅವರ ಆರೋಗ್ಯ ನಿಧಾನವಾಗಿ ಕ್ಷೀಣಿಸುತ್ತದೆ. ಆದ್ದರಿಂದ ಪೌಷ್ಟಿಕ ತಿಂಡಿಯನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿ ಮತ್ತು ಯಾವಾಗಲೂ ಆರೋಗ್ಯವಾಗಿರಿ.

ಪೌಷ್ಟಿಕ ಆಹಾರ ಸೇವಿಸಿ ಸ್ಟ್ರೆಸ್ಓಡಿಸಿ

ನೆಲ್ಲಿಕಾಯಿ

ಆಯುರ್ವೇದದಲ್ಲಿ ನೆಲ್ಲಿಕಾಯಿ ಅತ್ಯಂತ ಹಚ್ಚು ಬಳಸಲಾಗುತ್ತದೆ. ಇದರಲ್ಲಿ ವಿಟಮಿನ್‌ `ಸಿ’ ಇದ್ದು, ಅದು ಶರೀರವನ್ನು ಬಳಕುವಂತೆ ಮಾಡುತ್ತದೆ. ಒತ್ತಡದ ಒಂದು ಲಕ್ಷಣವೆಂದರೆ ಶರೀರದಲ್ಲಿ ರಕ್ತನಾಳಗಳು ಸಂಕುಚಿತವಾದಾಗ ಸಮಸ್ಯೆಗಳು ಹೆಚ್ಚಾಗುತ್ತವೆ. ಒತ್ತಡದಿಂದ ಪಾರಾಗಲು ದಿನ 2 ನೆಲ್ಲಿಕಾಯಿ ಸೇವಿಸಬೇಕು. ನೆಲ್ಲಿಕಾಯಿಯ ಗುಣಕಾರಿ ಅಂಶಗಳು ಒಣಗಿದರೂ ಹಾಳಾಗುವುದಿಲ್ಲ. ಅದರ ಲಾಭ ಪಡೆದು ಅದನ್ನು ಚೆನ್ನಾಗಿ ಒಣಗಿಸಿ ಸಂರಕ್ಷಿಸಿ. ಇದಲ್ಲದೆ ಸೀಬೆಹಣ್ಣಿನಲ್ಲೂ ವಿಟಮಿನ್‌ `ಸಿ’ ಹೇರಳವಾಗಿ ಸಿಗುತ್ತದೆ.

ಕೆಮೋಮೈಲ್ ‌ರಲ್ಲಿ ಇದನ್ನು ಹಿಸ್ಟೀರಿಯಾ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತಿತ್ತು. ಈಗ ಇದನ್ನು ಉತ್ತೇಜನವನ್ನು ನಿಯಂತ್ರಿಸಲು ಉಪಯೋಗಿಸಲಾಗುತ್ತಿದೆ. ರಿಸರ್ಚ್‌ ಪ್ರಕಾರ ಇದರಲ್ಲಿ ಪಚನಕ್ರಿಯೆ ಸುಧಾರಿಸುವ ಮತ್ತು ನರ್ಸ್‌ ಸಿಸ್ಟಂಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುವ ಗುಣಗಳೂ ಇವೆ. ಒತ್ತಡ ಉಂಟಾದಾಗ ಹಾಲಿನ ಟೀ ಬದಲು ಕೆಮೊಮೈಲ್ ‌ಟೀ ಕುಡಿಯಿರಿ.

ಓಟ್ಮೀಲ್

Oats - Copy

ಓಟ್‌ ನಲ್ಲಿ ಸಾಲ್ಯುಬಲ್ ಫೈಬರ್‌ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಅದು ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುವುದನ್ನು ಕ್ಷೀಣಗೊಳಿಸುತ್ತದೆ. ಇದರಲ್ಲಿ ಫೈಟೋ ಕೆಮಿಕಲ್ ಗಳೂ ಇರುತ್ತವೆ. ಅವು ಪಚನಕ್ರಿಯೆಯನ್ನು ಸುಲಲಿತಗೊಳಿಸಲು ಸಹಾಯ ಮಾಡುತ್ತವೆ ಹಾಗೂ ಬ್ಲಡ್‌ ಶುಗರ್‌ ಲೆವೆಲ್ ‌ನ್ನು ನಿಯಂತ್ರಣದಲ್ಲಿಡುತ್ತದೆ. ಒತ್ತಡ ಇವೆರಡರ ಮೇಲೆ ಗಾಢ ಪ್ರಭಾವ ಬೀರುತ್ತದೆ. ಇವು ನಿಯಂತ್ರಣದಲ್ಲಿದ್ದರೆ ಒತ್ತಡ ನಿಯಂತ್ರಣದಲ್ಲಿರುತ್ತದೆ. ದಿನಕ್ಕೆ 3 ದೊಡ್ಡ ಚಮಚ ಓಟ್ಸ್ ತಿನ್ನಿ. ಇದನ್ನು ಮೊಸರು, ಬೇಳೆ, ಸಲಾಡ್‌ ನಲ್ಲಿ ಸೇರಿಸಿ ತೆಗೆದುಕೊಳ್ಳಬಹುದು. ಬ್ರೇಕ್‌ ಫಾಸ್ಟ್ ಗೆ ಓಟ್‌ ಮೀಲ್ ‌ತೆಗೆದುಕೊಳ್ಳುವುದು ಒಳ್ಳೆಯದು ಅಥವಾ ಒಂದು ಹೊತ್ತಿನ ರೋಟಿಯಲ್ಲಿ ಗೋಧಿಹಿಟ್ಟು ಅಥವಾ ಮೈದಾ ಬದಲು ಓಟ್‌ ನ ಹಿಟ್ಟು ಬಳಸಬಹುದು.

ಸೇಬು

Apple1

ಸೇಬಿನಲ್ಲಿ ಫಾಸ್ಛರಸ್‌ ಮತ್ತು ಐರನ್‌ ಹೆಚ್ಚಿನ ಪ್ರಮಾಣದಲ್ಲಿದೆ. ಅದರಿಂದ ಆಕ್ಸಿಡೇಟಿವ್ ‌ಸ್ಟ್ರೆಸ್‌ ಅಂದರೆ ಒತ್ತಡ ಕಡಿಮೆಯಾಗುತ್ತದೆ. ಇದರೊಂದಿಗೆ ಶರೀರದ ಕೋಶಗಳ ನಿರ್ಮಾಣವಾಗುತ್ತವೆ. ಅವು ಸಾಮಾನ್ಯವಾಗಿ ಒತ್ತಡದ ಸಮಯದಲ್ಲಿ ಕರಗುತ್ತವೆ. ಒತ್ತಡ ನಮ್ಮ ಮುಖದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಆಗ ಸೇಬಿನ ಸಹಾಯದಿಂದ ಮುಖ ಮತ್ತು ತ್ವಚೆಯ ಕೋಶಗಳ ನಿರ್ಮಾಣವಾಗುತ್ತವೆ. ಅದರಿಂದ ಒತ್ತಡದಿಂದ ಕೂಡಿದ ಭಾವನೆ ಗಳಿಲ್ಲದ ಮುಖ ಕಂಡುಬರುವುದಿಲ್ಲ. ದಿನ ಒಂದು ಸೇಬು ಅಗತ್ಯವಾಗಿ ತಿನ್ನಿ. ಇದರಿಂದ ನಮ್ಮ ಶರೀರಕ್ಕೆ ಫೈಬರ್‌ ಕೂಡ ಸೇರುತ್ತದೆ.

ಬಾಳೆಹಣ್ಣು

ಬಾಳೆಹಣ್ಣು ಪೊಟ್ಯಾಶಿಯಂ ಮತ್ತು ಕಾರ್ಬೊಹೈಡ್ರೇಟ್‌ ನ ಉತ್ತಮ ಸ್ರೋತವಾಗಿದೆ. ಇದು ನಮ್ಮ ಶರೀರದಲ್ಲಿ ಕಾರ್ಬೋಹೈಡ್ರೇಟ್‌ ಸೆರೊಟಿನ್‌ ಹೆಸರಿನ ನ್ಯೂರೋಟ್ರ್ಯಾನ್ಸ್ ಮೀಟರ್‌ ಉತ್ಪತ್ತಿ ಮಾಡುತ್ತದೆ. ಅದು ಮೆದಳನ್ನು ಶಾಂತವಾಗಿಡುತ್ತದೆ. ಶರೀರದಲ್ಲಿ ಪೊಟ್ಯಾಶಿಯಂ ಕೊರತೆಯಿಂದ ಉಸಿರಾಟದ ತೊಂದರೆ, ಇನ್‌ ಸೋಮ್ನಿಯಾ, ಸುಸ್ತು ಮತ್ತು ಬ್ಲಡ್‌ ಶುಗರ್‌ ನ ಮಟ್ಟ ಕಡಿಮೆಯಾಗುತ್ತದೆ. ಇವೆಲ್ಲ ತೊಂದರೆಗಳು ಒತ್ತಡದಿಂದ ಉಂಟಾಗುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಅದು ಒತ್ತಡದ ಸಮಯದಲ್ಲಿ ಉಂಟಾಗುವ ತೊಂದರೆಗಳನ್ನು ಕೂಡಲೇ ಕಡಿಮೆಗೊಳಿಸುತ್ತದೆ.

ಸುಮನಾ ಭಟ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ