ಬ್ರೆಸ್ಟ್ ಇಂಪ್ಲಾಂಟ್‌ ಒಂದು ಪ್ರಭಾವಶಾಲಿ ಹಾಗೂ ಸುರಕ್ಷಿತ ಶಸ್ತ್ರಚಿಕಿತ್ಸೆಯಾಗಿದೆ. ಲಕ್ಷಾಂತರ ಮಹಿಳೆಯರು ತಮ್ಮ ಸ್ತನದ ಗಾತ್ರವನ್ನು ಹೆಚ್ಚಿಸಿಕೊಳ್ಳಲು ಈ ತಂತ್ರಜ್ಞಾನದ ನೆರವು ಪಡೆದುಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸ್ತನದ ಊತಕಗಳ ಹಿಂಭಾಗದಲ್ಲಿ ಕೊಯ್ದು ಇಂಪ್ಲಾಂಟ್‌ ಮಾಡಲಾಗುತ್ತದೆ. ಇದು ಸಾಮಾನ್ಯವಾಗಿ ಸಿಲಿಕಾನ್‌ ನಿಂದ ನಿರ್ಮಾಣವಾದುದಾಗಿರುತ್ತದೆ. ಇದರಿಂದ ಸ್ತನಗಳ ಆಕಾರ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗುತ್ತದೆ.

ಇದೊಂದು ಅತ್ಯಂತ ಸರಳ ಪ್ರಕ್ರಿಯೆಯಾಗಿದ್ದು, ಇದಕ್ಕೆ 12 ಗಂಟೆಯ ಸಮಯ ತಗುಲುತ್ತದೆ ಹಾಗೂ ಮಹಿಳೆ ಅದೇ ದಿನ ಆಸ್ಪತ್ರೆಯಿಂದ ಮನೆಗೆ ಹೋಗಬಹುದು.

ಸ್ತನ ಇಂಪ್ಲಾಂಟ್ಯಾವುದರಿಂದ ಮಾಡಲಾಗುತ್ತದೆ?

ಸ್ತನದ ಇಂಪ್ಲಾಂಟ್‌ ಸಿಲಿಕಾನ್‌ ಅಥವಾ ಸೆಲೈನ್‌ ಹೀಗೆ 2 ಪ್ರಕಾರದ್ದಾಗಿರುತ್ತದೆ. ಇದರಲ್ಲಿ ಯಾವುದಾದರೂ ಒಂದು ಪ್ರಕ್ರಿಯೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಎರಡರಲ್ಲೂ ಸಿಲಿಕಾನ್‌ ನ ಆವರಣ ಇರುತ್ತದೆ. ಆದರೆ ಅವುಗಳ ಒಳಭಾಗದಲ್ಲಿ ಬೇರೆಬೇರೆ ಪ್ರಕಾರದ ವಸ್ತುಗಳನ್ನು ಭರ್ತಿ ಮಾಡಲಾಗುತ್ತದೆ.

ಸೆಲೈನ್‌ ಇಂಪ್ಲಾಂಟ್‌ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಸೆಲೈನ್‌ ದ್ರಾವಣವನ್ನು ತುಂಬಲಾಗುತ್ತದೆ. ಆದರೆ ಸಿಲಿಕಾನ್‌ ಇಂಪ್ಲಾಂಟ್‌ ನಲ್ಲಿ ಮೊದಲೇ ಸಿಲಿಕಾನ್‌ ಜೆಲ್ ತುಂಬಿರಲಾಗಿರುತ್ತದೆ. ಅದು ಮಾನವನ ಕೊಬ್ಬನ್ನು ಹೋಲುವಂತಹ ಒಂದು ಬಗೆಯ ಗಾಢ ದ್ರವವಾಗಿರುತ್ತದೆ. ಹೆಚ್ಚಿನ ಮಹಿಳೆಯರು ಸಿಲಿಕಾನ್‌ ಇಂಪ್ಲಾಂಟ್‌ ನ್ನೇ ಇಷ್ಟಪಡುತ್ತಾರೆ. ಏಕೆಂದರೆ ಇದು ನೋಡಲು ಹಾಗೂ ಅನುಭೂತಿ ಪಡೆಯಲು ನೈಸರ್ಗಿಕ ಸ್ತನಗಳ ಊತಕಗಳಂತೆಯೇ ಇರುತ್ತದೆ.

ಪ್ರಕ್ರಿಯೆ ಏಕೆ?

ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಈ ಪ್ರಕ್ರಿಯೆಯನ್ನು ಅನುಸರಿಸಿದ್ದಾರೆ. ಅವರು ತಮ್ಮ ಮೂಲ ಸ್ತನದ ಗಾತ್ರದ ಬಗ್ಗೆ ಸಂತೃಪ್ತರಾಗಿರಲಿಲ್ಲ. ಅವುಗಳ ಗಾತ್ರ ಹೆಚ್ಚಿಸಿಕೊಳ್ಳಲು ಅವರು ಕಾತುರದಿಂದಿದ್ದರು.

ಗರ್ಭಾಸ್ಥೆಯ ಕಾರಣದಿಂದ ಸ್ತನಗಳ ಆಕಾರದಲ್ಲಿ ಉಂಟಾಗುವ ಬದಲಾವಣೆ (ಆಕಾರ ಕೆಟ್ಟು ಹೋಗಿರುವುದು, ಬಿಗುವು ಇಲ್ಲದೆ ಇರುವುದು)ಯನ್ನು ಸ್ತನ ಇಂಪ್ಲಾಂಟ್‌ ಮುಖಾಂತರ ಸರಿಪಡಿಸಬಹುದಾಗಿದೆ. ಎರಡೂ ಸ್ತನಗಳ ಆಕಾರದಲ್ಲಿ ಇದ್ದಿರಬಹುದಾದ ವ್ಯತ್ಯಾಸವನ್ನು ಈ ಪ್ರಕ್ರಿಯೆಯ ಮುಖಾಂತರ ಸರಿಪಡಿಸಬಹುದಾಗಿದೆ.

ಸ್ತನ ಕ್ಯಾನ್ಸರ್‌ ನಿಂದ ಬಳಲುತ್ತಿರುವ ಕೆಲವು ಮಹಿಳೆಯರು ಮೆಸ್ಟೆಕ್ಟೋಮಿಯ ಬಳಿಕ ಸ್ತನ ಇಂಪ್ಲಾಂಟ್ ಮಾಡಿಸಿಕೊಳ್ಳುತ್ತಾರೆ.

ಎಷ್ಟು ಸಮಯ ತಗುಲುತ್ತದೆ? ಸ್ತನ ಇಂಪ್ಲಾಂಟ್ಮಾಡಿಸಿಕೊಂಡ ಬಳಿಕ ಅದು ಸುಸ್ಥಿತಿಗೆ ಬರಲು ಎಷ್ಟು ಸಮಯ ತಗುಲುತ್ತದೆ?

ಯಾವ ಯಾವ ಸಂಗತಿಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ? ಎಂಬೆಲ್ಲ ಪ್ರಶ್ನೆಗಳು ಏಳುವುದು ಸಹಜ.

ಮಹಿಳೆಯರ ವಯಸ್ಸು, ದೇಹದ ಗಾತ್ರ, ಇಂಪ್ಲಾಂಟ್‌ ಮಾಡುವ ಸ್ಥಳ (ಸ್ನಾಯುಗಳ ಮೇಲ್ಭಾಗ ಅಥವಾ ಕೆಳಭಾಗದಲ್ಲಿ) ಇವು ಮಹಿಳೆ ಶಸ್ತ್ರಚಿಕಿತ್ಸೆಯ ಬಳಿಕ ಸಾಮಾನ್ಯ ಸ್ಥಿತಿಗೆ ಬರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ.

ಸಾಮಾನ್ಯವಾಗಿ ಆರಂಭದ ದಿನಗಳಲ್ಲಿ ಹೆಚ್ಚು ತೊಂದರೆ ಇರಬಹುದು, ಆಗ ಊತ ಹಾಗೂ ನೋವು ಅನಿಸುತ್ತಿರುತ್ತದೆ. ಅಂತಹ ಸಂದರ್ಭಗಳಲ್ಲಿ ಮಹಿಳೆಯರಿಗೆ ಕಂಪ್ರೆನ್ಸಿಲ್ ‌ಪಟ್ಟಿಗಳು ಅಥವಾ ಕೆಲವು ಮಹಿಳೆಯರಿಗೆ ಸರ್ಜಿಕಲ್ ಬ್ರಾ ಅಥವಾ ಎಸ್‌ ರಾಪ್‌ ನ ಅವಶ್ಯಕತೆ ಉಂಟಾಗಬಹುದು.

ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕೆಲವು ದಿನಗಳವರೆಗಾದರೂ ಮಹಿಳೆ ಭಾರಿ ತೂಕ ಎತ್ತುವುದಾಗಲಿ, ಹೆಚ್ಚು ವ್ಯಾಯಾಮ ಮಾಡುವುದಾಗಲಿ ಮಾಡಬಾರದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ