ಬದಲಾಗುತ್ತಿರುವ ಟ್ರೆಂಡ್ ಗೆ ಅನುಗುಣವಾಗಿ ಮನೆಯನ್ನು ಸಿಂಗರಿಸುವುದು ಇಂದು ಅನಿವಾರ್ಯವಾಗಿದೆ. ಕೊಂಚ ಕ್ರಿಯೇಟಿವಿಟಿ ನಿಮ್ಮ ಮನೆಗೆ ಸ್ಮಾರ್ಟ್ ಲುಕ್ ಕೊಡುತ್ತದೆ.
ಇಂಟೀರಿಯರ್ ಡಿಸೈನ್ ನಿಂಗ್ ಕೇವಲ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಕಾಲ ಮುಗಿಯಿತು. ಈಗ ಅವುಗಳ ಮೂಲಕ ಮನೆಗಳಿಗೂ ಮಾಡರ್ನ್ ಲುಕ್ ಕೊಡಲಾಗುತ್ತಿದೆ.
ವಿ.ಎಂ. ಗ್ರೂಪ್ ನ ಇಂಟೀರಿಯರ್ ಡಿಸೈನರ್ ಮತ್ತು ಸೀನಿಯರ್ ಆರ್ಕಿಟೆಕ್ಟ್ ಮೋಹನ್ ಹೀಗೆ ಹೇಳುತ್ತಾರೆ, ಮನೆಯ ಥೀಮ್ ವೈಯಕ್ತಿಕ ಇಚ್ಛೆಯನ್ನು ಅವಲಂಬಿಸಿದೆ. ಆದರೆ ಇಂದು ಬದಲಾಗುತ್ತಿರುವ ಜೀವನಶೈಲಿಯಲ್ಲಿ ಪ್ರತಿಯೊಂದು ಟ್ರೆಂಡಿ ಲುಕ್ ಹೆಚ್ಚು ಇಷ್ಟವಾಗುತ್ತಿದೆ. ಈಗ ನಿಮ್ಮ ಮನೆಗೆ ಹೊಸ ಲುಕ್ ಕೊಡುವಂತಹ ಅನೇಕ ಕ್ರಿಯೇಟಿವ್ ವಿಧಾನಗಳಿವೆ.
ಡಿಸೈನರ್ ಗೋಡೆಗಳು : ಪೇಂಟ್ ಮಾಡಿಸುವ ಬದಲಾದ ಟೆಕ್ನಿಕ್ ಗಳು ಮತ್ತು ಇತರ ಕಲೆಗಳಿಂದ ಗೋಡೆಗಳಿಗೆ ಉತ್ತಮ ರೂಪ ಕೊಡಬಹುದು.
ಮಾಡರ್ನ್ ಪೇಂಟಿಂಗ್ ಟ್ರೆಂಡ್ಸ್ : ಈಗ ಕಾಂಬಿನೇಷನ್ ಕಲರ್ ಮಾಡಿಸುವ ಟ್ರೆಂಡ್ ಇದೆ. ಡಾರ್ಕ್ ರೆಡ್ ನೊಂದಿಗೆ ಲೈಟ್ ಅಥವಾ ಬ್ರೌನ್ ಕಲರ್ ನೊಂದಿಗೆ ಲೈಟ್ ಪೇಂಟ್ ಬಹಳ ಆಕರ್ಷಕವಾಗಿರುತ್ತದೆ. ಕಾಂಬಿನೇಷನ್ ಕಲರ್ ನಲ್ಲಿ 2 ಗೋಡೆಗಳಿಗೆ ಗಾಢ ಪೇಂಟ್ ಮಾಡಿದ್ದರೆ, ಉಳಿದ 2 ಗೋಡೆಗಳಿಗೆ ತೆಳುವಾಗಿ ಪೇಂಟ್ ಮಾಡಿಸಬೇಕು.
ಗ್ರಾಫಿಕ್ ಪೇಂಟಿಂಗ್ಸ್ : ಗ್ರಾಫಿಕ್ ಪೇಂಟಿಂಗ್ಸ್ ಗೋಡೆಗಳಿಗೆ ಬಹಳ ಆಕರ್ಷಕ ಲುಕ್ ಕೊಡುತ್ತದೆ. ಗೋಡೆಗಳ ಮೇಲೆ ಅನೇಕ ಬಣ್ಣಗಳನ್ನು ಉಪಯೋಗಿಸುವುದರಿಂದ ಡಾಟ್ಸ್, ಸರ್ಕಲ್ಸ್, ಕ್ಯೂಬ್ಸ್ ಮತ್ತು ಸ್ಟ್ರೈಪ್ಸ್ ಗಳಿಗೆ ಡಿಸೈನ್ ಮಾಡಬಹುದು.
ಸ್ಟೈಲಿಶ್ ವಾಲ್ ಪೇಪರ್ : ಗೋಡೆಗಳಿಗೆ ಹಾಕುವ ವಾಲ್ ಪೇಪರ್ ಗೋಡೆಗಳ ಕೊರತೆಗಳನ್ನು ಮುಚ್ಚುತ್ತದೆ ಮತ್ತು ಅವಕ್ಕೆ ಟ್ರೆಂಡಿ ಲುಕ್ ಕೊಡುತ್ತದೆ. ಅನಿಮಲ್ ಪ್ರಿಂಟೆಡ್, ಡಲ್ ಲುಕಿಂಗ್, ವೆಲ್ವೆಟ್ ಪ್ಲೇಕ್ಡ್, ಬ್ರಿಕ್ಸ್ ಅಂಡ್ ಸ್ಟೋನ್ ವಾಲ್ ಪೇಪರ್ ಟ್ರೆಂಡ್ ನಲ್ಲಿದೆ. ಅವನ್ನು ಕೋಣೆಯ ಫರ್ನೀಚರ್ ಗಳ ಬಣ್ಣಕ್ಕೆ ಅನುಗುಣವಾಗಿ ಆರಿಸಬೇಕು. ವಾಲ್ ಪೇಪರ್ ಹಾಕಿಸುವುದರಿಂದ ಗೋಡೆಗಳಿಗೆ ಪೇಂಟ್ ಮಾಡಿಸುವ ಅಗತ್ಯವಿರುವುದಿಲ್ಲ. ಜೊತೆಗೆ ಅವನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
ವಿಶೇಷ ಡಿಸೈನಿಂಗ್ : ಯಾವುದಾದರೂ ಒಂದು ಗೋಡೆಗೆ ಸ್ಟೋನ್, ಟೈಲ್ಸ್, ವುಡ್ ವರ್ಕ್ ನಿಂದ ಡಿಸೈನ್ ಮಾಡಿಸಿದರೆ ಬಹಳ ಒಳ್ಳೆಯ ಲುಕ್ ಕೊಡುತ್ತದೆ.
ಸ್ಮಾರ್ಟ್ ಫ್ಲೋರಿಂಗ್ : ಫ್ಲೋರಿಂಗ್ ಇಡೀ ಮನೆಯ ಲುಕ್ ಬದಲಾಯಿಸುತ್ತದೆ. ಈಗ ಲ್ಯಾಮಿನೇಟೆಡ್ ವುಡ್ ಫ್ಲೋರಿಂಗ್ ಟ್ರೆಂಡ್ ನಲ್ಲಿದೆ. ಇದನ್ನು ಸ್ವಚ್ಛಗೊಳಿಸುವುದು ಸುಲಭ. ಇದರ ಮೇಲೆ ಗೀರುಗಳೂ ಬೀಳುವುದಿಲ್ಲ. ಇದಲ್ಲದೆ ಮಾರ್ಬಲ್ ಮತ್ತು ಟೈಲ್ಸ್ ಫ್ಲೋರಿಂಗ್ ಕೂಡ ಆಕರ್ಷಕ ಬಣ್ಣಗಳಲ್ಲಿ ಮತ್ತು ಆಕಾರಗಳಲ್ಲಿ ಲಭ್ಯವಿವೆ. ಅಕ್ರೆಲಿಕ್ ಕಾರ್ಪೆಟ್, ಎಂಬ್ರಾಯಿಡರಿ ಮತ್ತು ಸ್ಟೋನ್ ವರ್ಕ್ ಇರುವ ಕಾರ್ಪೆಟ್ ನಿಂದಲೂ ನೆಲವನ್ನು ಅಲಂಕರಿಸಬಹುದು.
ಲೈಟಿಂಗ್ : ಮನೆಗೆ ಲಕ್ಷುರಿ ಲುಕ್ ಕೊಡಲು ಹ್ಯಾಂಗಿಂಗ್ ಪೆಂಡೆಂಟ್, ಶಾಂಡಿಲಿಯರ್ (ಛಾವಣಿಯಿಂದ ತೂಗಿಸುವ ಬ್ರ್ಯಾಂಚ್ಡ್ ಲೈಟಿಂಗ್), ಲಾವ್ ಲ್ಯಾಂಟರ್ನ್ ಮತ್ತು ವಾಲ್ ಲೈಟ್ಸ್ ಹಾಕಿ. ಅವನ್ನು ಸಾಮಾನ್ಯವಾಗಿ ಡ್ರಾಯಿಂಗ್ ರೂಮ್ ನಲ್ಲಿ ಹಾಕಲಾಗುತ್ತದೆ. ಅಸೆಂಟ್ ಲೈಟ್ಸ್ ಯಾವುದಾದರೂ ವಿಶೇಷ ಜಾಗವನ್ನು ಹೈಲೈಟ್ ಮಾಡಲು ಹಾಕಲಾಗುತ್ತವೆ ಹಾಗೂ ಅವು ಲಿವಿಂಗ್ ರೂಮ್ ಗೂ ಒಳ್ಳೆಯ ಆಯ್ಕೆಯಾಗಿರುತ್ತವೆ.
ಬೆಡ್ ರೂಮ್ ನಲ್ಲಿ ಡಿವೈಲ್ಟ್ ಚೆನ್ನಾಗಿರುತ್ತದೆ. ಅಲ್ಲಿ ಫುಟ್ ಲೈಟ್ ಮತ್ತೆ ಈಗ ಟ್ರೆಂಡ್ ನಲ್ಲಿದೆ. ಸಿಎಫ್‌ಎಲ್ ನಂತಹ ಇಕೋ ಫ್ರೆಂಡ್ಲಿ ಲೈಟ್ ಉಪಯೋಗಿಸಲೂ ಮೋಹನ್ ಸಲಹೆ ನೀಡುತ್ತಾರೆ.
ಫಂಕಿ ಫರ್ನೀಚರ್ : ಫಂಕಿ ಫರ್ನೀಚರ್ ನ ವಿಶೇಷತೆಯೆಂದರೆ ಅದರ ಕಲರ್ ಕಾಂಬಿನೇಷನ್ ಮತ್ತು ಕ್ರಿಯೇಟಿವ್ ಶೇಪ್ಸ್ ಇರುತ್ತವೆ. ಇದು ವಿಧವಿಧವಾದ ಸ್ಟೈಲಿಶ್ ಶೇಪ್ ಉದಾ : ರೌಂಡ್, ಫ್ಲವರ್, ಲೀಫ್ ಶೇಪ್ ಗಳಲ್ಲಿ ತಯಾರಾಗಿರುತ್ತದೆ. ಫಂಕಿ ಸೋಫಾ, ಬೆಡ್, ಅಲಮಾರಿ, ಡ್ರೆಸಿಂಗ್ ಟೇಬಲ್ ಇತ್ಯಾದಿಗಳ ಬಹಳಷ್ಟು ವೆರೈಟಿ ನಿಮಗೆ ಸಿಗುತ್ತದೆ.
ಕಾರ್ಪೆಟ್ ತೆಳುವಾದ ಬಣ್ಣದ್ದಾಗಿದ್ದು ಫರ್ನೀಚರ್ ಗಾಢ ಬಣ್ಣದ್ದಾಗಿದ್ದರೆ ಒಳ್ಳೆಯದು.
ಡಿಸೈನರ್ ಹ್ಯಾಂಡ್ ಲೂಮ್ : ಆಕರ್ಷಕ ಬೆಡ್ ಶೀಟ್, ಪಿಲ್ಲೋ ಮತ್ತು ಸೋಫಾ ಕವರ್ ಗಳಿಂದ ಮನೆಗೆ ಸ್ಮಾರ್ಟ್ ಲುಕ್ ಕೊಡಿ. ಇಂದು ಮಾರುಕಟ್ಟೆಯಲ್ಲಿ ವಿಧವಿಧವಾದ ಕರ್ಟನ್ ಆ್ಯಕ್ಸೆಸರೀಸ್ ಲಭ್ಯವಿವೆ. ಅಂದರೆ ಟವಲ್ಸ್, ಡಿಸೈನರ್ ರಾಡ್ಸ್ ಇತ್ಯಾದಿ. 2 ಕಾಂಟ್ರಾಸ್ಟ್ ಬಣ್ಣಗಳ ಪರದೆಗಳನ್ನು ಹಾಕುವುದೂ ಟ್ರೆಂಡಿ ಲುಕ್ ಕೊಡುತ್ತದೆ. ಈಗ ಪರದೆಗಳನ್ನು ಕೋಣೆಯನ್ನು ಡಿವೈಡ್ ಮಾಡಲೂ ಉಪಯೋಗಿಸಲಾಗುತ್ತಿದೆ. ಅದರಿಂದ ಕೋಣೆಯ ಲುಕ್ ಬದಲಾಗುತ್ತದೆ. ಪರದೆಗಳನ್ನು ಹವಾಮಾನಕ್ಕೆ ತಕ್ಕಂತೆ ಹಾಕಿ ಬೇಸಿಗೆಯಲ್ಲಿ ಪರದೆಗಳ ಬಣ್ಣ ಲೈಟ್ ಆಗಿರಬೇಕು. ಚಳಿಗಾಲದಲ್ಲಿ ಗಾಢಬಣ್ಣದ ಪರದೆಗಳನ್ನು ಹಾಕಿ. ಸೋಫಾ ಕವರ್ ಗಳು ಮತ್ತು ಕುಶನ್ ಗಳು ಸೋಫಾ ಬಣ್ಣಕ್ಕೆ ಕಾಂಟ್ರಾಸ್ಟ್ ಬಣ್ಣದ್ದು ಚೆನ್ನಾಗಿರುತ್ತದೆ.
ಗ್ರೀನ್ ಲುಕ್ : ಮನೆಗೆ ಗ್ರೀನ್ ಲುಕ್ ಕೊಡುವುದು ಬಹಳ ಜನಕ್ಕೆ ಇಷ್ಟವಾಗುತ್ತದೆ. ಇದರಿಂದ ಮನೆ ಆಕರ್ಷಕವಾಗಿ ಕಾಣುವುದಲ್ಲದೆ, ಇಂಟೀರಿಯರ್ ಒತ್ತಡವನ್ನೂ ಕಡಿಮೆ ಮಾಡುತ್ತದೆ.
ಇನ್ ಸೈಡ್ ಪ್ಲಾಂಟ್ಸ್ : ಕೆಲವು ಗಿಡಗಳಿಗೆ ಸೂರ್ಯನ ನೇರ ಬೆಳಕು ಅಗತ್ಯವಿಲ್ಲ. ಅವು ಅಲಂಕಾರಕ್ಕೆ ಮತ್ತು ಮನೆಗೆ ಪ್ರಾಕೃತಿಕ ಲುಕ್ ಕೊಡಲು ಬಹಳ ಉತ್ತಮ ಆಪ್ಶನ್ ಆಗಿವೆ. ಅವನ್ನು ಬಾಲ್ಕನಿಯಲ್ಲಿ ಅಲಂಕರಿಸಿ.
ತೂಗಾಡುವ ತೋಟ : ಇವನ್ನು ಕಲರ್ ಫುಲ್ ಪ್ಲಾಸ್ಟಿಕ್ ದಾರ ಅಥವಾ ವೈರ್ ನಲ್ಲಿ ಕಟ್ಟಿ ಬಾಲ್ಕನಿ ಅಥವಾ ಅಂಗಳದಲ್ಲಿ ತೂಗುಬಿಡಲಾಗುತ್ತದೆ. ಕೆಲವು ಹ್ಯಾಂಗಿಂಗ್ ಪ್ಲಾಂಟ್ ಗಳನ್ನು ಮನೆಯ ಒಳಗೂ ತೂಗು ಹಾಕಬಹುದು. ಮಾರುಕಟ್ಟೆಯಲ್ಲಿ ಬ್ಯಾಸ್ಕೆಟ್ ಪ್ಲಾಂಟ್ಸ್, ಪ್ಲೇಟಿಂಗ್ ಕಂಟೇನರ್ ಪ್ಲಾಂಟ್ಸ್ ಸಾಕಷ್ಟು ಬಣ್ಣಗಳಲ್ಲಿ ಮತ್ತು ಆಕಾರಗಳಲ್ಲಿ ಲಭ್ಯವಿವೆ.
ಆಧುನಿಕ ಕಿಚನ್ : ಕಿಚನ್ ನ ಇಂಟೀರಿಯರ್ ಸ್ಛೂರ್ತಿಯುತವಾಗಿರಬೇಕು. ಟೆಕ್ನಿಕ್ ಯುಗದಲ್ಲಿ ಮಾಡರ್ನ್ ಕಿಚನ್ ಎಲ್ಲರಿಗೂ ಇಷ್ಟವಾಗುತ್ತದೆ.
ಮಾಡ್ಯುಲರ್ ಕಿಚನ್ : ಈಗ ಮಾಡ್ಯುಲರ್ ಕಿಚನ್ ಟ್ರೆಂಡ್ ನಲ್ಲಿದೆ. ತುಕ್ಕು ಮತ್ತು ಗೆದ್ದಲಿನಿಂದ ರಕ್ಷಿಸಲು ಮರದ ಲ್ಯಾಮಿನೇಟೆಡ್ ಮತ್ತು ಸ್ಲೈಡಿಂಗ್ ಟೆಕ್ನಿಕ್ ನ ಡ್ರಾಯರ್ ಮತ್ತು ಕ್ಯಾಬಿನೆಟ್ಸ್, ಆಧುನಿಕ ಸ್ಟವ್, ಎಲೆಕ್ಟ್ರಿಕ್ ಚಿಮಣಿ, ಡಿಸೈನರ್ ಸಿಂಕ್ ಮತ್ತು ಕಂಟೇನರ್ಸ್ ಗಳೊಂದಿಗೆ ಫ್ಲೋರಿಂಗ್ ಮತ್ತು ಗೋಡೆಗಳಿಗೂ ಸ್ಮಾರ್ಟ್ ಲುಕ್ ಕೊಡಬಹುದು. ಇವು ಗಾಳಿಯಾಡುವಂತೆ ತೆರೆದಿದ್ದು ಮ್ಯಾನೇಜಬಲ್ ಮತ್ತು ಇಕೋ ಫ್ರೆಂಡ್ಲಿಯೂ ಆಗಿರುತ್ತದೆ. ಮಾಡ್ಯುಲರ್ ಕಿಚನ್ ಅನೇಕ ರೀತಿಯ ಡಿಸೈನ್ ಗಳು ಮತ್ತು ಬಣ್ಣಗಳಲ್ಲಿ ಲಭ್ಯವಿದೆ. ಇದರ ಸ್ವಯಂಚಾಲಿತ ಕಿಚನ್ ಆ್ಯಕ್ಸೆಸರೀಸ್, ಆಟೋಮ್ಯಾಟಿಕ್ ಡಿಸ್ಪೋಸಬಲ್ ಸಿಸ್ಟಮ್, ಗ್ಯಾಸ್ ಖಾಲಿಯಾಗುವುದು ಮತ್ತು ಉಷ್ಣತೆ ಹೆಚ್ಚಾದರೆ ಅಲಾರಂನ ಸೌಲಭ್ಯಗಳು ಇದನ್ನು ವಿಶೇಷವಾಗಿಸುತ್ತವೆ.
ಕಿಚನ್ ಆ್ಯಕ್ಸೆಸರೀಸ್ : ಕಿಚನ್ ನಲ್ಲಿ ಸಾಮಾನ್ಯವಾಗಿ ಫ್ಯಾಷನೆಬಲ್ ಆಗಿರುವ ಬರುವ ಆ್ಯಕ್ಸೆಸರೀಸ್ ಗಳನ್ನು ಅಳವಡಿಸಬೇಕು.
ಚಿಮಣಿ :
ಚಿಮಣಿ ಅನೇಕ ವೆರೈಟಿಗಳಲ್ಲಿ ಬರುತ್ತದೆ. ಇದರಲ್ಲಿ ಹೊಗೆ ಬರುವುದಿಲ್ಲ. ಉಷ್ಣತೆ ನಿಯಂತ್ರಣದಲ್ಲಿರುತ್ತದೆ. ಕೆಲವು ಚಿಮಣಿಗಳು ಆಟೋಮ್ಯಾಟಿಕ್ ಕ್ಲೀನಿಂಗ್ ಮಾಡುತ್ತವೆ. ಕೆಲವನ್ನು ನಾವೇ ಸ್ವಚ್ಛಗೊಳಿಸಬೇಕು.
ಆಧುನಿಕ ಬರ್ನರ್ : ಈಗ ಮಲ್ಟಿಪಲ್ ಮತ್ತು ಆಟೋಸ್ಪಾರ್ಕ್ ಬರ್ನರ್ ನ ಟ್ರೆಂಡ್ ಇದೆ. ಇದರಲ್ಲಿ ಒಟ್ಟಿಗೆ ಹಲವು ರೀತಿಯ ಡಿಶಸ್‌ತಯಾರಿಸಬಹುದು. ಇದನ್ನು ಉರಿಸಲು ಲೈಟರ್ ನ ಅಗತ್ಯ ಇಲ್ಲ.
ಡಿಸೈನರ್ ಕ್ರಾಕರಿ : ಮಾರುಕಟ್ಟೆಯಲ್ಲಿ ಹಲವು ರೀತಿಯ ಮೆಲಮೈನ್ ಮತ್ತು ಮೈಕ್ರೋವೇವ್ ಕ್ರಾಕರಿ ಆಕರ್ಷಕ ಡಿಸೈನ್ ಗಳು ಮತ್ತು ಬಣ್ಣಗಳಲ್ಲಿ ಲಭ್ಯವಿವೆ. ಇವು ಅನ್ ಬ್ರೇಕಬಲ್ ಆದ್ದರಿಂದ ಬಹಳ ಕಾಲ ಬಾಳಿಕೆ ಬರುತ್ತವೆ. ಇದಲ್ಲದೆ ಡಿಸೈನರ್ ಪಾತ್ರೆ ಸ್ಟಾಂಡ್, ಕಂಟೇನರ್ಸ್ ಮತ್ತು ಸಿಂಕ್ ಕೂಡ ಲಭ್ಯವಿವೆ.
ನೆಲ ಮತ್ತು ಗೋಡೆಗಳು : ಅಡುಗೆಮನೆಯ ಗೋಡೆಗಳು ಸಾಮಾನ್ಯವಾಗಿ ಕ್ಯಾಬಿನೆಟ್ ನಿಂದ ಸುತ್ತುವರಿದಿರುತ್ತವೆ. ಹೀಗಾಗಿ ಕ್ಯಾಬಿನೆಟ್ ಗಳಿಗೆ ಆಯಿಲ್ ಬೇಸ್ಡ್ ಪೇಂಟ್ ಮಾಡಿಸಿದರೆ ಸುಲಭವಾಗಿ ಸ್ವಚ್ಛಗೊಳಿಸಬಹುದು. ಇತರ ಗೋಡೆಗಳನ್ನು ಕೊಳೆಯಿಂದ ರಕ್ಷಿಸಲು ಅವಕ್ಕೆ ಗಾಢ ಬಣ್ಣದ ಟೈಲ್ಸ್ ಹಾಕಿಸಿ. ಗಾಢ ಬಣ್ಣದ ಟೈಲ್ಸ್ ಗಳಿಂದ ಅಡುಗೆಮನೆಯ ನೆಲ ದೊಡ್ಡದಾಗಿ ಕಾಣುವುದು. ಮೇಲಿನ ಗೋಡೆಗಳ ಮೇಲೆ ಯಾವುದಾದರೂ ಬ್ರೈಟ್ ಕಲರ್ ಉದಾ : ಆರೆಂಜ್, ಗ್ರೀನ್, ಚಿಲಿ ರೆಡ್ ಇತ್ಯಾದಿ ಮಾಡಿಸಬಹುದು. ಸ್ಟೋನ್, ಗ್ಲಾಸ್ ಟೈಲ್ಸ್ ಮತ್ತು ವುಡ್ ಫ್ಲೋರಿಂಗ್ ಅಡುಗೆಮನೆಯಲ್ಲಿ ಬಹಳ ಚೆನ್ನಾಗಿರುತ್ತದೆ. ಗೋಡೆಗಳಿಗೆ ಇಕೋ ಫ್ರೆಂಡ್ಲಿ ವಾಶೆಬಲ್ ಪೇಂಟ್ ಮಾಡಿಸುವುದು ಒಳ್ಳೆಯದು.
ಸ್ಮಾರ್ಟ್ ಸ್ಟುಡಿಯೋ ಅಪಾರ್ಟ್ ಮೆಂಟ್
ಸಣ್ಣ ಕುಟುಂಬಗಳಿಗೆ ಸ್ಟುಡಿಯೋ ಅಪಾರ್ಟ್ ಮೆಂಟ್ ಪರ್ಫೆಕ್ಟ್ ಆಗಿರುತ್ತದೆ. ಇದರಲ್ಲಿ ಡ್ರಾಯಿಂಗ್ ರೂಮ್, ಬೆಡ್ ರೂಮ್ ಗೆ ಪ್ರತ್ಯೇಕ ಜಾಗ ಸಿಗುವುದಿಲ್ಲ. ಇದರಲ್ಲಿ ಒಂದೇ ದೊಡ್ಡ ಲಿವಿಂಗ್ ರೂಮ್ ಇದ್ದು, ಅದರೊಂದಿಗೆ ಪ್ರತ್ಯೇಕವಾಗಿ ಕಿಚನ್ ಮತ್ತು ಬಾಥ್ ರೂಮ್ ಸೇರಿರುತ್ತದೆ. ಆದ್ದರಿಂದ ಅಪಾರ್ಟ್ ಮೆಂಟ್ ನ ಇಂಟೀರಿಯರ್ ಕಡಿಮೆ ಜಾಗವನ್ನೂ ಆಕರ್ಷಕ ರೀತಿಯಲ್ಲಿ ಪ್ರಸ್ತುತಪಡಿಸುವಂತಿರಬೇಕು.
ಸ್ಲೀಕ್ ಫರ್ನೀಚರ್ : ಸ್ಲೀಕ್ ಫರ್ನೀಚರ್ ಗಳನ್ನು ಎಲ್ಲ ಮನೆಗಳಲ್ಲಿ ಇಷ್ಟಪಡಲಾಗುತ್ತದೆ. ಆದರೆ ವಿಶೇಷವಾಗಿ ಸಣ್ಣ ಮನೆಗಳಲ್ಲಿ ಇದನ್ನು ಉಪಯೋಗಿಸುವುದು ಅಗತ್ಯ. ಏಕೆಂದರೆ ಇದು ಎಲಿಗೆಂಟ್ ಲುಕ್ ಕೊಟ್ಟು, ಕಡಿಮೆ ಜಾಗವನ್ನು ಆಕ್ರಮಿಸುತ್ತದೆ.
ಕ್ರಿಯೇಟಿವ್ ಫರ್ನೀಚರ್ : ಸೋಫಾ ಕಮ್ ಬೆಡ್ ನಂತಹ ಫರ್ನೀಚರ್ ಗಳು ನಮ್ಮ ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದಾದ್ದರಿಂದ ಎಲ್ಲರಿಗೂ ಇಷ್ಟವಾಗುತ್ತದೆ. ಇದಕ್ಕಾಗಿ ಬೇರೆ ಬೆಡ್ ಕೊಳ್ಳಬೇಕಾಗಿಲ್ಲ. ಇದು ಹಗಲಿನಲ್ಲಿ ಸೋಫಾದಂತೆ ಕೆಲಸ ನಿರ್ವಹಿಸಿದರೆ ರಾತ್ರಿ ಇದನ್ನು ಬಿಚ್ಚಿ ಬೆಡ್ ಮಾಡಿಕೊಳ್ಳಬಹುದು. ಇದೇ ರೀತಿ ಕ್ರಿಯೇಟಿವ್ ಫೋಲ್ಡೆಡ್ ಟೇಬಲ್, ಚೇರ್, ಸ್ಟೂಲ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅವನ್ನು ಬೇಕಾದಾಗ ಹರಡಿ, ಬೇಡವೆಂದಾಗ ಕ್ಯಾಬಿನೆಟ್ ನಲ್ಲಿ ಇಡಿ.
ಫ್ಯಾಷನೆಬಲ್ ಡಿವೈಡರ್ : ಈಗ ದೊಡ್ಡ ಹಾಲ್ ಗಳನ್ನು ಪಾರ್ಟಿಶನ್ ಮೂಲಕ ಡಿಸೈನರ್ ಲುಕ್ ಕೊಡಲಾಗುತ್ತದೆ. ಸ್ಟುಡಿಯೋ ಅಪಾರ್ಟ್ ಮೆಂಟ್ ನಲ್ಲಿ ಫ್ಯಾಷನೆಬಲ್ ಡವೈಡರ್ ಬಹಳ ಉಪಯೋಗವಾಗುತ್ತದೆ. ಇದರಿಂದ ಪ್ರೈವೆಸಿ ಸಿಗುತ್ತದೆ. ಒಂದು ಕೋಣೆಯನ್ನು ಸುಲಭವಾಗಿ 2 ಭಾಗಗಳಾಗಿ ವಿಂಗಡಿಸಬಹುದು. ಈಗ ಸ್ಲೈಡಿಂಗ್ ಗ್ಲಾಸ್ ಅಥವಾ ಡಿಸೈನರ್ ವುಡ್ ವಾಲ್ ನಿಂದ ಪಾರ್ಟಿಶನ್ ಮಾಡಿಸುವುದು ಟ್ರೆಂಡ್ ನಲ್ಲಿದೆ.
ಮಿನಿಮಲ್ ಆರ್ಟ್ ಆ್ಯಕ್ಸೆಸರೀಸ್ : ಮಿನಿಮಲ್ ಆರ್ಟ್ 1950ರಲ್ಲಿ ಪ್ರಚಲಿತವಾಗಿತ್ತು. ಆಗ ಇದು ಬರೀ ಮೂರ್ತಿಗಳು ಮತ್ತು ಪೇಟಿಂಗ್ಸ್ ಸಂದರ್ಭದಲ್ಲಿ ಮಾರುಕಟ್ಟೆಗೆ ಬಂದಿತ್ತು. ಈ ಕಲೆ ಪಾನ್ ನ ಪಾರಂಪರಿಕ ಡಿಸೈನ್ ಮತ್ತು ಆರ್ಕಿಟೆಕ್ಚರ್ ನಿಂದ ಪ್ರಭಾವಿತವಾಗಿದೆ. ಮಾರುಕಟ್ಟೆಯಲ್ಲಿ ಮಿನಿಮಲ್ ಆರ್ಟ್ ನ ಶೋಪೀಸ್, ಪೇಂಟಿಂಗ್ಸ್, ಆ್ಯಂಟಿಕ್ಸ್ ನೊಂದಿಗೆ ಫರ್ನೀಚರ್ ಗಳ ಸಾಕಷ್ಟು ವೆರೈಟಿಗಳಿವೆ. ಇವು ಸ್ಲೀಕ್, ಸ್ಟೈಲಿಶ್ ಮತ್ತು ಉತ್ತಮ ಗುಣಮಟ್ಟದ್ದಾಗಿವೆ. ಮನೆಗೆ ಸಿಂಪ್ಲಿಸಿಟಿಯೊಂದಿಗೆ ಕ್ಲಾಸಿ ಲುಕ್ ಕೊಡುತ್ತವೆ. ಇಂತಹ ಆ್ಯಕ್ಸೆಸರೀಸ್ ಮನೆ ಓವರ್ ಲೋಡ್ ಆಗದಂತೆ ಮಾಡುತ್ತವೆ. ಕೋಣೆಯೂ ದೊಡ್ಡದಾಗಿ ಮತ್ತು ಕ್ರಿಯೇಟಿವ್ ಆಗಿ ಕಾಣುತ್ತದೆ. ಸಾಮಾನ್ಯವಾಗಿ ಸಣ್ಣ ಮನೆಗಳ ಡಿಸೈನ್ ಮಾಡಲು ಮಿನಿಮಲ್ ಆರ್ಟ್ ಆ್ಯಕ್ಸೆಸರೀಸ್ ಬಹಳ ಉಪಯೋಗವಾಗಿದೆ.
ಈ ಹೊಸ ಟೆಕ್ನಿಕ್ ಗಳಿಂದ ಒಂದು ಸ್ಮಾರ್ಟ್, ಯಂಗ್ ಲುಕಿಂಗ್ ಮತ್ತು ಯೂಥ್ ಫುಲ್ ಹೋಮ್ ನ್ನು ನೀವು ಡಿಸೈನ್ ಮಾಡಬಹುದು.
– ಮೈತ್ರಿ ದಾಮ್ಲೆ.
ಕೆಲವು ಮುಖ್ಯ ಸಂಗತಿಗಳು
ಸ್ಮರಣೀಯ ಕ್ಷಣಗಳ ಚಿತ್ರಗಳನ್ನು ಗೋಡೆಯ ಮೇಲೆ ತೂಗು ಹಾಕಿ ಅಥವಾ ಡಿಸೈನರ್ ಗ್ಲಾಸ್ ಫ್ರೇಮ್ ಗಳಲ್ಲಿ ಹಾಕಿ. ಪಿಲ್ಲೋ ಕವರ್ ಗಳು, ಹ್ಯಾಂಗಿಂಗ್ ಬಾಲ್ಸ್ ಮೇಲೂ ಫೋಟೋ ಛಾಪಿಸುವ ಪದ್ಧತಿ ಇದೆ.
ಈಗ ಶವರ್, ಬಾಥ್ ಟಬ್, ಟ್ಯಾಪ್ಸ್, ವಾಶ್ ಬೇಸಿನ್ ನಂತಹ ಡಿಸೈನರ್ ಬಾಥ್ ರೂಮ್ ಆ್ಯಕ್ಸೆಸರೀಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಡ್ರಾಯಿಂಗ್ ರೂಮ್ ನೊಂದಿಗೆ ಚಿಕ್ಕ ಅಟಾಚ್ಡ್ ವಾಶ್ ರೂಮ್ ಅಗತ್ಯವಾಗಿ ಮಾಡಿಸಿ.
ಚಿಕ್ಕ ಕೋಣೆಗೆ ಕಾರ್ಪೆಟ್ ಹಾಕಬಾರದು. ಹಾಗೆ ಹಾಕಿದರೆ ಕೋಣೆ ಚಿಕ್ಕದಾಗಿ ಕಾಣುತ್ತದೆ.
ಅಡುಗೆಮನೆಯಲ್ಲಿ ಇಟ್ಟಿರುವ ಕಸದ ಡಬ್ಬಿಯನ್ನು ಸಿಂಕ್ ನ ಕೆಳಗಿರುವ ಕ್ಯಾಬಿನೆಟ್ ನಲ್ಲಿಡಿ. ಇದರಿಂದ ಅಡುಗೆಮನೆಯಲ್ಲಿ ಕಸ ಹಾಗೂ ದುರ್ಗಂಧ ಹರಡುವುದಿಲ್ಲ.
ಲ್ಯಾಂಪ್, ವಾಲ್ ಹ್ಯಾಂಗಿಂಗ್ಸ್, ಕುಶನ್ ಕವರ್, ಪಿಲ್ಲೋ, ಮೂರ್ತಿಗಳು, ಪೇಂಟಿಂಗ್ಸ್, ಶೋಪೀಸ್, ಕ್ಯಾಂಡಲ್ ಸ್ಟ್ಯಾಂಡ್ಸ್, ವಾಲ್ ಕ್ಲಾಕ್ ನಂತಹ ಆ್ಯಕ್ಸೆಸರೀಸ್ ಗಳನ್ನು ಫರ್ನೀಚರ್ ನ ಕಲರ್ ಮತ್ತು ಡಿಸೈನ್ ನಂತೆಯೇ ಕೊಂಡರೆ ಇಡೀ ಕೋಣೆಯಲ್ಲಿ ಸಮಾನತೆ ಇರುತ್ತದೆ. ಈಗ ಗ್ಲಾಸ್ ಮತ್ತು ವುಡನ್ ಆ್ಯಕ್ಸೆಸರೀಸ್ ಟ್ರೆಂಡ್ ನಲ್ಲಿದೆ.
ಮನೆಗೆ ಮಾಡರ್ನ್ ಲುಕ್ ನೀಡಲು ಮನೆಗೆ ದೊಡ್ಡ ಕಿಟಕಿಗಳನ್ನಿಡಿ. ಕೋಣೆಯ ನೆಲದ ಶೇ.30ರಷ್ಟು ಜಾಗದಲ್ಲಿ ಕಿಟಕಿಗಳನ್ನಿಡಬೇಕು. ಇದರಿಂದ ಕೋಣೆ ದೊಡ್ಡದಾಗಿ ಹಾಗೂ ಆಕರ್ಷಕವಾಗಿ ಕಾಣುತ್ತದೆ. ಹಗಲು ಹೊತ್ತು ಲೈಟ್ ಉರಿಸುವ ಅಗತ್ಯವಿಲ್ಲ. ಡ್ರಾಯಿಂಗ್ ರೂಮ್ ನಲ್ಲಿ ವುಡನ್ ಮತ್ತು ಗ್ಲಾಸ್ ನ ಕಿಟಕಿಗಳನ್ನು ಇಡಿಸಿ. ಅಂದಹಾಗೆ ಗ್ಲಾಸ್ ಮತ್ತು ಸ್ಲೈಡಿಂಗ್ ವಿಂಡೋ ಇಂದು ಟ್ರೆಂಡ್ ನಲ್ಲಿದೆ.
ಎಲ್ಲ ವಯಸ್ಸಿನವರಿಗೂ ಇಷ್ಟವಾಗುವ ಉಯ್ಯಾಲೆ ಉದ್ಯಾನವನಗಳಲ್ಲಿರುವ ಜೋಕಾಲಿ ಇಂದು ಮನೆಯ ಒಂದು ಭಾಗವಾಗಿದೆ. ಒಂದು ಚಿಕ್ಕ ಬಾಲ್ಕನಿಯಿಂದ ಹಿಡಿದು ಲಿವಿಂಗ್ ರೂಮ್ ಅಥವಾ ಹಾಲ್ ವರೆಗೆ ಜೋಕಾಲಿ ತನ್ನ ಜಾಗ ಮಾಡಿಕೊಂಡಿದೆ. ಬೆಳಗಿನ ಟೀಯೊಂದಿಗೆ ಶುರುವಾಗುವ ಮೆಲ್ಲನೆಯ ತೂಗಾಟದ ಪಯಣ ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಎಂಜಾಯ್ ಮಾಡುತ್ತಾರೆ. ಹೀಗಾಗಿ ಈಗ ಎಲ್ಲರೂ ತಮ್ಮ ಮನೆಯಲ್ಲಿ ಜಾಗಕ್ಕೆ ತಕ್ಕಂತೆ ಜೋಕಾಲಿ ಹಾಕಿಸಲು ಇಚ್ಛಿಸುತ್ತಾರೆ. ಡ್ರಾಯಿಂಗ್ ರೂಮ್ ನಲ್ಲಿ ಸೋಫಾ ಕಮ್ ಜೋಕಾಲಿ ಡ್ರಾಯಿಂಗ್ ರೂಮ್ ಗೆ ಟ್ರೆಡಿಶನ್ ಟಚ್ ಕೊಡುತ್ತದೆ. ಅದು ಸಾಕಷ್ಟು ಆರಾಮದಾಯಕ ಆಗಿದೆ. ಇದರಲ್ಲಿ ನಿಧಾನವಾಗಿ ತೂಗಾಡಿದಾಗ ಇಡೀ ದಿನದ ಆಯಾಸ ಮರೆಸುತ್ತದೆ. ವುಡನ್ ಜೋಕಾಲಿಯಲ್ಲಿ ವುಡನ್ ವೆರೈಟಿಗೆ ತಕ್ಕಂತೆ ಅನೇಕ ಆಯ್ಕೆಗಳಿವೆ. ಸಾಧಾರಣ ವುಡ್ ನಿಂದ ಹಿಡಿದು ಟೀಕ್, ಸಾಗುವಾನಿ, ರೋಸ್ ವುಡ್, ಹೊನ್ನೆ ಇತ್ಯಾದಿ ಯಾವ ಮರದಿಂದಾದರೂ ಜೋಕಾಲಿ ಮಾಡಿಸಬಹುದು. ಜೊತೆಗೆ ಇಷ್ಟವಾದ ಡಿಸೈನ್, ಪಾಲಿಶ್, ಕೆತ್ತನೆ ಮಾಡಿಸಿ ಇಷ್ಟವಾದ ಬಣ್ಣ ಹಾಕಿಸಿ ಹೊಳಪು ನೀಡಬಹುದು. ಸೋಫಾ ಕಮ್ ಜೋಕಾಲಿಯ ಮೇಲೆ ಹೆವಿ ಲುಕ್ ನ ಕುಶನ್ ಮತ್ತು ದಿಂಬನ್ನು ಇಟ್ಟು ರಾಯಲ್ ಟಚ್ ಕೊಡಬಹುದು. ಫ್ಲೋರ್ ಪ್ರಿಂಟ್ಸ್ ನ ಹಾಸುಗೆಗಳು, ಜಾಲರದ ಬ್ಯಾಕ್ ಮತ್ತು ಹೆವಿ ಮೆಟೀರಿಯಲ್ ಮತ್ತು ಡಾರ್ಕ್ ಕಲರ್ ನೊಂದಿಗೆ ರೂಮ್ ನ ಅಲಂಕಾರಕ್ಕೆ ವಿಭಿನ್ನ ಲುಕ್ ಕೊಡಬಹುದು.
ಬಾಲ್ಕನಿ ಮತ್ತು ಸಣ್ಣ ರೂಮ್ ನಲ್ಲಿ ಬೆತ್ತದಿಂದ ತಯಾರಾದ ಸಿಂಗಲ್ ಸೀಟ್ ನ ಜೋಕಾಲಿ ಹಾಕಿಸಬಹುದು. ಇವನ್ನು ಚಿಕ್ಕ ಜಾಗದಲ್ಲಿ ಸುಲಭವಾಗಿ ಅವಳಡಿಸಬಹುದು. ಇದನ್ನು ಜೋಪಾನ ಮಾಡುವುದೂ ಸುಲಭ. ಇದರ ಮೇಲೆ ಹಾಸುಗೆ ಹಾಗೂ ದಿಂಬುಗಳನ್ನು ಇಟ್ಟು ಅಲಂಕರಿಸಬಹುದು.
ವೈದ್ಧರಿಗೆ ಸ್ವಿಂಗ್ ಖುರ್ಚಿ ಉತ್ತಮ ಆಯ್ಕೆ. ಇದನ್ನು ಅನುಕೂಲಕ್ಕೆ ತಕ್ಕಂತೆ ಎಲ್ಲಿಯಾದರೂ ಇಡಬಹುದು.
ಮಕ್ಕಳ ರೂಮುಗಳಲ್ಲಿ ಜಾಗಕ್ಕೆ ತಕ್ಕಂತೆ ಜೋಕಾಲಿಗಳನ್ನು ಆರಿಸಿಕೊಳ್ಳಬಹುದು. ಹಗ್ಗದಿಂದ ತೂಗಾಡುವ ಜೋಕಾಲಿ, ಸ್ಟ್ಯಾಂಡ್ ಇರುವ ಪ್ಲ್ಯಾಸ್ಟಿಕ್ ನ ಜೋಕಾಲಿ ಮಕ್ಕಳಿಗೆ ಸೇಫ್ ಆಗಿರುತ್ತದೆ. ಛಾವಣಿ ಮತ್ತು ಗಾರ್ಡನ್ ಗೆ ಕಬ್ಬಿಣದ ಜೋಕಾಲಿ ಉಪಯುಕ್ತ. ಏಕೆಂದರೆ ಬಿಸಿಲು ಮತ್ತು ಮಳೆ ನೀರಿನಿಂದ ವುಡನ್ ಜೋಕಾಲಿ ಹಾಳಾಗುತ್ತದೆ.
ಟೆರೇಸ್ ಮತ್ತು ಗಾರ್ಡನ್ ನಲ್ಲಿ ಕಬ್ಬಿಣದಿಂದ ತಯಾರಾದ ವಿಭಿನ್ನ ಡಿಸೈನ್ ಗಳ ಜೋಕಾಲಿಗಳಿಂದ ನೀವು ಪ್ರಕೃತಿಯ ಸಾನ್ನಿಧ್ಯ ಅನುಭವಿಸಬಹುದು. ಇದಲ್ಲದೆ ಗಾರ್ಡನ್ ನಲ್ಲಿ ನೈಲಾನ್ ನ ತೆಳುವಾದ ದಾರಗಳಿಂದ ತಯಾರಾದ ನೆಟ್ ಜೋಕಾಲಿಯನ್ನೂ ಉಪಯೋಗಿಸಬಹುದು. ನಿಮ್ಮ ಅಗತ್ಯಕ್ಕೆ ತಕ್ಕಂತೆ ಇವನ್ನು ಹಾಕಿಸಬಹುದು.
ಇಂಟೀರಿಯರ್ ನ್ನು ಗಮನದಲ್ಲಿಟ್ಟುಕೊಂಡು ಹಾಕಿಸಿದ ಜೋಕಾಲಿಗಳು ಹಬ್ಬಗಳೊಂದಿಗೆ ಮಕ್ಕಳ ಆಟಗಳಿಗೆ ಒಂದು ಹೊಸ ಕ್ರಮವನ್ನು ಕೊಡುವುದರೊಂದಿಗೆ ಹಿರಿಯರಿಗೆ ಕೊಂಚ ನೆಮ್ಮದಿಯನ್ನೂ ಕೊಡುತ್ತವೆ.