ಸಾಮಾನ್ಯವಾಗಿ ನಶೆಯ ಬಗ್ಗೆ ಮಾತಾಡಿದರೆ ಮನಸ್ಸಿನಲ್ಲಿ ಮದ್ಯ, ಚರಸ್‌, ಹೆರಾಯಿನ್‌, ಬಂಗಿ, ಗಾಂಜಾ, ಸಿಗರೇಟು ಇತ್ಯಾದಿಗಳ ಚಿತ್ರ ಮೂಡುತ್ತದೆ. ನಶೆ ಪೀಡಿತ ವ್ಯಕ್ತಿಗಳಿಗೆ ಮೇಲೆ ಹೇಳಿದ ವಸ್ತುಗಳೆಲ್ಲಾ ನಶೆ ಬರಿಸುತ್ತಿರಬಹುದು. ಆದರೆ ಕಾಲ ಬದಲಾದಂತೆ ಬಹಳಷ್ಟು ವಸ್ತುಗಳು ಬದಲಾಗಿವೆ. ನಶೆಯೂ ಬದಲಾಗಿದೆ. ಹೊಸ ಪೀಳಿಗೆಯ ನಶೆ ಯಾವ ರೀತಿ ಇದೆ ಮತ್ತು ಹೇಗಿದೆ ಎಂದು ತಿಳಿಯೋಣ ಬನ್ನಿ.

ಮೆಡಿಕಲ್ ಅಡಿಕ್ಷನ್

ವಿಶೇಷವಾಗಿ ಯುವತಿಯರು ಮತ್ತು ಮಹಿಳೆಯರನ್ನು ಆಕ್ರಮಿಸುವ ಈ ನಶೆ ಸಾಕಷ್ಟು ದುಬಾರಿ. ಇದರ ವಶದಲ್ಲಿ ಸಿಕ್ಕಿಕೊಂಡರೆ ಜೇಬಿಗೆ ಕನ್ನ ಹಾಕಿದ ಹಾಗೆ. ಆದರೆ ನಶೆ ನಶೆಯೇ. ಒಮ್ಮೆ ಅದರ ಚಟ ಅಂಟಿಕೊಂಡರೆ ಬಿಡುವುದು ಕಷ್ಟ. ಮೆಡಿಕಲ್ ಅಡಿಕ್ಷನ್ ನಲ್ಲಿ ಮುಖ್ಯವಾಗಿ ದೈಹಿಕ ಬದಲಾವಣೆಯ ಇಚ್ಛೆ ಅಡಗಿರುತ್ತದೆ. ಸದಾ ಯೌವನವಂತರಾಗಿ ಸುಂದರವಾಗಿರಬೇಕೆಂಬ ಇಚ್ಛೆಯಲ್ಲಿ ಮಹಿಳೆಯರು ಈ ಹೊಸ ರೀತಿಯ ನಶೆಗೆ ದಾಸರಾಗುತ್ತಾರೆ.

ಬೋಟಾಕ್ಸ್

30 ವರ್ಷವಾಗುತ್ತಿದ್ದಂತೆಯೇ ಮಹಿಳೆಯರಲ್ಲಿ ಕಣ್ಣುಗಳ ಕೆಳಗೆ ನೆರಿಗೆಗಳು ಉಂಟಾಗುವುದು ಸಾಮಾನ್ಯ. ಒತ್ತಡ ಮತ್ತು ಸಿಕ್ಕುಗಳಿಂದ ತುಂಬಿದ ಜೀವನಶೈಲಿಯಲ್ಲಿ ಈ ನೆರಿಗೆಗಳು ವಯಸ್ಸಿಗೆ ಮುಂಚೆಯೇ ಕಾಣಿಸಿಕೊಳ್ಳುತ್ತವೆ. ಇಂದಿನ ಮಹಿಳೆಯರು ತಮ್ಮ ವಯಸ್ಸಿಗಿಂತ ದೊಡ್ಡವರಾಗಿ ಕಾಣುವುದನ್ನು ಹೇಗೆ ತಡೆದುಕೊಳ್ಳುತ್ತಾರೆ. ಅವರು ಯಾವಾಗಲೂ ತಮ್ಮ ವಯಸ್ಸಿಗಿಂತ 10-15 ವರ್ಷ ಚಿಕ್ಕವರಂತೆ ಕಾಣಲು ಇಚ್ಛಿಸುತ್ತಾರೆ. ಅವರ ಈ ಬಯಕೆಯನ್ನು ಪೂರ್ತಿ ಮಾಡಲು ಬೋಟಾಕ್ಸ್ ಪಣ ತೊಟ್ಟಿದೆ. ಬೋಟಾಕ್ಸ್ ನ ಮುಖ್ಯ ಕೆಲಸ ಕಣ್ಣುಗಳ ತೊಂದರೆಯನ್ನು ದೂರ ಮಾಡುವುದು. ಕಣ್ಣುಗಳ ಕೆಳಗಿನ ನೆರಿಗೆಗಳನ್ನು ದೂರ ಮಾಡುವ ಇದರ ಕಲೆ ಜನಪ್ರಿಯವಾಗಿದೆ. ಬೋಟಾಕ್ಸ್ ನ ಪ್ರಭಾವ 6 ತಿಂಗಳು ಇರುತ್ತದೆ. ಒಮ್ಮೆ ಇದರ ಇಂಜೆಕ್ಷನ್ ತೆಗೆದುಕೊಂಡರೆ ನೆರಿಗೆಗಳಿಂದ ಮುಕ್ತಿ ಸಿಗುತ್ತದೆ.

ಆದರೆ ಆರೋಗ್ಯ ಸಂಸ್ಥೆಗಳ ಮೂಲಕ ಮಾಡಿದ ಸಮೀಕ್ಷೆ ಪ್ರಕಾರ ಈಗ ಬೋಟಾಕ್ಸ್ ನ್ನು 20 ರಿಂದ 30 ವರ್ಷದವರೆಗಿನ ಯುವತಿಯರೂ ಉಪಯೋಗಿಸುತ್ತಿದ್ದಾರೆ. ಬೋಟಾಕ್ಸ್ ನ್ನು ಪದೇ ಪದೇ ಉಪಯೋಗಿಸಿದರೆ ಯಾವುದಾದರೂ ಅಪಾಯಕಾರಿ ಕಾಯಿಲೆಯನ್ನು ಆಹ್ವಾನಿಸಿದಂತೆ. ನಶೆಯ ರೂಪ ತಳೆದಿರುವ ಬೋಟಾಕ್ಸ್ ಮಹಿಳೆಯರ ತಲೆಯೇರಿ ಕುಳಿತಿದೆ. ಸೌಂದರ್ಯದ ನಶೆಯೆದುರು ಮಹಿಳೆಯರು ಯಾವುದೇ ಅಪಾಯವನ್ನು ಆಹ್ವಾನಿಸಲು ಸಿದ್ಧರಾಗಿದ್ದಾರೆ.

ಲೈಪೋಸಕ್ಷನ್

`ಟಶನ್‌’ ಚಿತ್ರದಲ್ಲಿ ಕರೀನಾರ `ಝೀರೋ ಫಿಗರ್‌’ ಕಂಡು ಯುವತಿಯರಿಗೆ ತಾವು ಆ ರೀತಿ ಆಗಬೇಕೆಂಬ ನಶೆ ಉಂಟಾಯಿತು. ಸುಂದರ ಮುಖದ ನಶೆ, ಸುಂದರ ಶರೀರದ ನಶೆ ಹೆಚ್ಚಾಯಿತು. ಅದಕ್ಕಾಗಿ ಯುವತಿಯರು ಏನೇನೆಲ್ಲಾ ಮಾಡಲು ಸಿದ್ಧ. ಯಾವುದೇ ಪರಿಶ್ರಮವಿಲ್ಲದೆ ಹಣದ ಬಲದಿಂದ ಸುಂದರ ರೂಪ ಪಡೆಯುವ ಬಯಕೆ ಮಹಿಳೆಯರಲ್ಲಿ ಹೆಚ್ಚಾಯಿತು.

ಲೈಪೋಸಕ್ಷನ್‌ ಹೆಸರಿನ ಈ ಸರ್ಜರಿ ಬಹಳ ದುಬಾರಿ. ಈ ವಿಧಾನದಿಂದ ತೊಡೆಗಳು, ಕೈ ಕಾಲುಗಳು, ಸೊಂಟ, ಹೊಟ್ಟೆ ಎಲ್ಲಾ ಭಾಗಗಳಿಂದ ಕೊಬ್ಬನ್ನು ತೆಗೆಯಲಾಗುತ್ತದೆ. ಇದಲ್ಲದೆ ತೂಕ ಕಡಿಮೆ ಮಾಡಲು ಮಹಿಳೆಯರು ಗ್ಯಾಸ್ಟ್ರಿಕ್‌ ಬೈಪಾಸ್‌ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ. ಅದು ಲೈಪೋಸಕ್ಷನ್‌ ಗೆ ಹೋಲಿಸಿದರೆ ಕೊಂಚ ಅಗ್ಗ. ಈ ಎರಡೂ ವಿಧಾನಗಳಲ್ಲಿ ಯಾವುದಾದರೂ ಸೈಡ್‌ ಎಫೆಕ್ಟ್ ಖಂಡಿತಾ ಇರುತ್ತದೆ. ಆದರೆ ಯುವತಿಯರಿಗೆ ಹತ್ತಿದ ಝೀರೋ ಫಿಗರ್‌ ನ ನಶೆ ಯಾವುದೇ ಅಪಾಯ ಎದುರಿಸಲು ಸಿದ್ಧವಾಗಿರುತ್ತದೆ.

ಕಾಸ್ಮೆಟಿಕ್ಪ್ಲ್ಯಾಸ್ಟಿಕ್ಸರ್ಜರಿ

ಸೌಂದರ್ಯದ ನಶೆಯನ್ನು ಪೂರೈಸುವ ಈ ಕ್ರಿಯೆ ಅತ್ಯಂತ ದುಬಾರಿ ನಶೆಯಾಗಿದೆ. ನಮ್ಮ ದೇಶದಲ್ಲಿ ಈ ನಶೆಗೆ ಒಳಗಾಗಿರುವವರ ಸಂಖ್ಯೆ ಕಡಿಮೆ.

ಬೋಟಾಕ್ಸ್ ಮೂಲಕ ನೆರಿಗೆಗಳನ್ನು ದೂರ ಮಾಡಬಹುದು. ಲೈಪೋಸಕ್ಷನ್‌ ನಿಂದ ಝೀರೋ ಫಿಗರ್‌ ಪಡೆಯಬಹುದು. ಆದರೆ ಮುಖದ ಯಾವುದಾದರೂ ಭಾಗ ಕುರೂಪಗೊಂಡರೆ ಮಾಡುವುದೇನು? ಆಗ ಜನ ಕಾಸ್ಮೆಟಿಕ್‌ ಪ್ಲ್ಯಾಸ್ಟಿಕ್‌ ಸರ್ಜರಿಯನ್ನು ಆಶ್ರಯಿಸುತ್ತಾರೆ. ಅದರಲ್ಲಿ ಮೂಗು, ಕೆನ್ನೆ, ಗದ್ದ, ತುಟಿಗಳು, ಸ್ತನ ಇತ್ಯಾದಿಗಳ ಆಕಾರ ಬದಲಿಸಬಹುದು. ಸರ್ಜರಿ ಮಾಡಿಸಿಕೊಂಡ ನಂತರ ಯಾವುದೇ ರೀತಿಯ ದೂರುಗಳು ಇರುವುದಿಲ್ಲ. ಈ ಸರ್ಜರಿಯ ಬಗ್ಗೆ ಎಷ್ಟು ಹುಚ್ಚಿದೆಯೆಂದರೆ ಅದಕ್ಕಾಗಿ ಮಹಿಳೆಯರು ಬ್ಯಾಂಕ್‌ ನಿಂದ ಲೋನ್‌ ಪಡೆಯುತ್ತಿದ್ದಾರೆ.

ವರ್ಚುಯಲ್ ಅಡಿಕ್ಷನ್

ವರ್ಚುಯಲ್ ಅಡಿಕ್ಷನ್‌ ಎಂದರೆ ಇಲ್ಲದಿರುವುದು ಇದೆಯೆಂಬ ಭ್ರಮೆ ಉಂಟಾಗುವಿಕೆ. ನಿಜವಾಗಿಯೂ ಇಲ್ಲದ್ದು ನಿಜಕ್ಕಿಂತಲೂ ಎಷ್ಟೋ ಪಟ್ಟು ಮುಂದಿದೆಯೆಂಬ ಭ್ರಮೆ. ವರ್ಚುಯಲ್ ಟೀಚಿಂಗ್‌ ನಿಂದ ಹಿಡಿದು ವರ್ಚುಯಲ್ ಟೂರಿಸಂವರೆಗೆ ಇದೆ.

ಇದರಿಂದ ಲಾಭ ಇದೆ ಮತ್ತು ಆನಂದ ಇದೆ. ಆದರೆ ಇಂತಹ ಭ್ರಮಾಧೀನ ಚಟಗಳಿಂದ ನಮ್ಮ ಸಮಯ ಹಾಳಾಗುವುದಲ್ಲದೆ ನಮಗೆ ಇಷ್ಟವಿಲ್ಲದಿದ್ದರೂ ಆ ಚಟುವಟಿಕೆಗಳಲ್ಲಿ ಸಿಲುಕಿರುವಂತಾಗುತ್ತದೆ. ಅದೊಂದು ರೀತಿಯ ನಶೆಯಾಗುತ್ತದೆ. ಇಂತಹ ನಶೆಯುಂಟು ಮಾಡುವ ಚಟುವಟಿಕೆಗಳು ಕೆಳಗಿನಂತಿವೆ.

ಸ್ವಾಭಿಮಾನದ ನಶೆ

ಈ ನಶೆ ಎಂತಹವರನ್ನಾದರೂ ಭೂಮಿಯಿಂದ ಸ್ವರ್ಗಕ್ಕೆ ಮತ್ತು ಸ್ವರ್ಗದಿಂದ ಭೂಮಿಯವರೆಗಿನ ಪ್ರಯಾಣ ಮಾಡಿಸಿಬಿಡುತ್ತದೆ. ಉನ್ನತ ಸ್ಥಾನ ತಲುಪುದು, ಆ ಸ್ಥಾನ ಉಳಿಸಿಕೊಳ್ಳುವ ನಶೆಯೇ ಸ್ವಾಭಿಮಾನದ ನಶೆಯಾಗಿಬಿಡುತ್ತದೆ. ಈ ನಶೆ ಹಿಡಿದವರು ಯಾವುದೇ ಹಂತಕ್ಕೆ ಹೋಗಲು ಸಿದ್ಧರಾಗಿರುತ್ತಾರೆ. ಈ ನಶೆ ಸಾಮಾನ್ಯವಾಗಿ ಫಿಲ್ಮ್ ಮತ್ತು ಟಿವಿ ಸ್ಟಾರ್‌ ಗಳಲ್ಲಿ ಇರುತ್ತದೆ. ತಮ್ಮನ್ನು ಸದಾ ಸುದ್ದಿಯಲ್ಲಿ ಇಟ್ಟುಕೊಳ್ಳುವ ನಶೆ ಅವರಿಂದ ಏನೇನು ಮಾಡಿಸುವುದಿಲ್ಲ. ಪತ್ರಕರ್ತರಲ್ಲೂ ಇಂತಹುದೇ ನಶೆ ಇರುತ್ತದೆ.

ಪತ್ರಿಕೆಗಳಲ್ಲಿ ತಮ್ಮ ಹೆಸರಿನಲ್ಲಿ ಸುದ್ದಿಗಳನ್ನು ಮುದ್ರಿಸಬೇಕೆಂಬ ಇಚ್ಛೆಯಲ್ಲಿ ಎಲ್ಲೆಲ್ಲೋ ತಳ್ಳಿಸಿಕೊಳ್ಳಬೇಕಾಗುತ್ತದೆ. ಆದರೂ ಅವರು ಹಿಂದುಳಿಯುವುದಿಲ್ಲ. ಈ ನಶೆ ತೃಪ್ತಿಯಾಗದಿದ್ದಾಗ ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆಘಾತಕ್ಕೊಳಗಾಗುತ್ತಾರೆ. ಅದು ಇತರ ನಶೆಗಳಿಗೆ ಹೋಲಿಸಿದರೆ ಬಹಳಷ್ಟು ಘಾತಕವಾಗಿರುತ್ತದೆ.

ಬ್ಲಾಗಿಂಗ್ ನಶೆ

ಇದು ಬರೀ ಮೋಜು, ಮಜಾಕ್ಕಾಗಿಯೇ ಇರುವ ನಶೆಯಾಗಿದೆ. ಇಂಟರ್‌ ನೆಟ್‌ ಲೋಕದಲ್ಲಿ ಬ್ಲಾಗ್‌ ಈಗ ಬಹಳ ಸಾಮಾನ್ಯವಾಗಿದೆ. ಬ್ಲಾಗ್‌ ನಲ್ಲಿ ನಾವು ನಮ್ಮ ವಿಚಾರ, ಕೆಲವು ಗುಪ್ತ ವಿಷಯಗಳು ಅಥವಾ ನಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹಾಗೂ ವ್ಯಕ್ತಿಗತವಾಗಿ ಎರಡೂ ರೂಪಗಳಲ್ಲಿ ವ್ಯಕ್ತಪಡಿಸಬಹುದು. ಕೆಲವರಿಗೆ ಇತರರ ಬ್ಲಾಗ್‌ ಗಳಲ್ಲಿ ಇಣುಕಿ ನೋಡುವುದರಲ್ಲಿ ಬಹಳ ಮಜಾ ಸಿಗುತ್ತದೆ. ತಮಗೆ ಆನಂದ ತಂದುಕೊಳ್ಳಲು ಅವರು ಹಾಗೆ ಮಾಡುತ್ತಾರೆ. ಆದರೆ ಹೀಗೆ ಆನಂದ ಕೊಡುವ ಕಾರ್ಯ ನಶೆಯಂತಾಗಿ ಸಮಸ್ಯೆ ಉಂಟುಮಾಡುತ್ತದೆ. ಹಲವರು ಬ್ಲಾಗ್‌ ಮೂಲಕ ವದಂತಿಗಳನ್ನು ಹರಡುವ ಕೆಲಸ ಮಾಡುತ್ತಾರೆ. ಇದೂ ಒಂದು ರೀತಿಯ ನಶೆಯೇ ಆಗಿದ್ದು ಅಪಾಯಕಾರಿಯಾಗಿರುತ್ತದೆ. ಜೊತೆಗೆ ಇತರರಿಗೂ ತೊಂದರೆ ತರುತ್ತದೆ. ಈ ನಶೆಯಿಂದ ದೊಡ್ಡ ನಷ್ಟವೆಂದರೆ ಸಮಯ ಹಾಳಾಗುವುದು. ಆದರೂ ನಾವು ವಿನಾಕಾರಣ ಗಂಟೆಗಟ್ಟಲೆ ಇನ್ನೊಬ್ಬರ ಬ್ಲಾಗುಗಳಲ್ಲಿ ಇಣುಕುತ್ತಿರುತ್ತೇವೆ.

ಗೂಗಲ್ ಸ್ಟಾಕಿಂಗ್

ಈ ಗೂಗಲ್ ಸರ್ಚ್‌ ಎಂಜಿನ್‌ ಮೂಲಕ ಪ್ರಸ್ತುತಪಡಿಸುತ್ತಿರುವ ಒಂದು ರೀತಿಯ ಸೌಲಭ್ಯ. ಇದು ಯುವ ಜನತೆಯಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಈ ಸೌಲಭ್ಯದ ಮೂಲಕ ನಾವು ಯಾವುದೇ ಪರಿಚಿತ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು. ಅಗಲಿದ ಸ್ನೇಹಿತರು, ನೆರೆಹೊರೆಯವರು ಅಥವಾ ಸಹೋದ್ಯೋಗಿಗಳನ್ನು ಪತ್ತೆ ಮಾಡಲು ಯುವಜನತೆ ಇದನ್ನು ಉಪಯೋಗಿಸುತ್ತಾರೆ.

ಗೂಗಲ್ ಸ್ಟಾಕಿಂಗ್‌ ನ ಈ ಸೌಲಭ್ಯ ಯುವಜನತೆಯನ್ನು ಇದರ ದಾಸರನ್ನಾಗಿ ಮಾಡಿದೆ. ಸರ್ಚ್‌ ಎಂಜಿನ್‌ ನಲ್ಲಿ ಗಂಟೆಗಟ್ಟಲೆ ಬೇಡದ ಹಳೆಯ ಗೆಳೆಯರ ಮಾಹಿತಿ ಪಡೆಯಲು ಯತ್ನಿಸುವುದರಿಂದ ಸಮಯ ವ್ಯರ್ಥವಾಗುತ್ತದೆ.

ವಿಕಿಪೀಡಿಯಾ ಹೋಲಿಸಂ

ಇಂಟರ್‌ ನೆಟ್‌ ನಲ್ಲಿರುವ ಈ ಸೌಲಭ್ಯ ಯಾವುದೇ ವಸ್ತುವಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ. ವಿಕಿಪೀಡಿಯಾದಲ್ಲಿ ಉಚಿತ ಎನ್‌ ಸೈಕ್ಲೋಪೀಡಿಯಾ ಇದೆ. ಅದರಲ್ಲಿ ಯಾವುದಾದರೂ ವಿಷಯ ಒಪ್ಪಿಗೆಯಾಗದಿದ್ದರೆ ಅದನ್ನು ಬದಲಿಸಲೂಬಹುದು.

ಇಂಟರ್‌ ನೆಟ್‌ ನಲ್ಲಿ ಗಂಟೆಗಟ್ಟಲೆ ಸರ್ಫಿಂಗ್‌ ಮಾಡುವವರು ವಿಕಿಪೀಡಿಯಾದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ತಮ್ಮ ಜ್ಞಾನದಾಹವನ್ನು ಶಮನ ಮಾಡಿಕೊಳ್ಳಲು ಜನ ವಿಕಿಪೀಡಿಯಾಗೆ ಮೊರೆಹೋಗುತ್ತಾರೆ.

ಕ್ರ್ಯಾಕಲ್ ಬೆರಿ

ಈ ನಶೆ ಯಾವುದೇ ಉಪಕರಣವನ್ನು ಅತಿಯಾಗಿ ಉಪಯೋಗಿಸುವುದಾಗಿದೆ. ಅದರಲ್ಲಿ ಕಂಪ್ಯೂಟರ್‌, ವಾಕ್‌ ಮನ್‌, ಐಪಾಡ್‌, ವೀಡಿಯೋ ಗೇಮ್ಸ್ ನಂತಹ ಉಪಕರಣಗಳು ಬರುತ್ತವೆ. ಇವಕ್ಕೆ ಅಡಿಕ್ಟ್ ಆದವರ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ.

ಶಾಪಿಂಗ್

ಇದೂ ಒಂದು ರೀತಿಯ ನಶೆ. ಕೊಳ್ಳುವ ಶೋಕಿ ಯಾರಿಗೆ ಇರುವುದಿಲ್ಲ. ವಿಶೇಷವಾಗಿ ಇದರಲ್ಲಿ ಮಹಿಳೆಯರು ನುರಿತವರಾಗಿರುತ್ತಾರೆ. ಹಾಗೆ ನೋಡಿದರೆ ಶಾಪಿಂಗ್‌ ಕೂಡ ಒಂದು ನಶೆಯೇ. ಒಂದು ವೇಳೆ ಈ ಚಟಕ್ಕೆ ಬಿದ್ದರೆ ದೊಡ್ಡ ಆಪತ್ತಿಗೆ ಸಿಕ್ಕಿಕೊಂಡಂತೆಯೇ.

ಶಾಪಿಂಗ್‌ ನಶೆಯಲ್ಲಿ ನಮ್ಮ ಅಗತ್ಯಕ್ಕಾಗಿ ಅಲ್ಲದೆ ಮೋಜು ಹಾಗೂ ಟೈಂಪಾಸ್‌ ಗಾಗಿ ಶಾಪಿಂಗ್‌ ಮಾಡಲಾಗುತ್ತದೆ. ಹಣದ ಕೊರತೆ ಇರದ ಮನೆಗಳಲ್ಲಿ ಹೆಂಡತಿ ಮಕ್ಕಳು ಇಂತಹ ನಶೆಗೆ ದಾಸರಾಗುತ್ತಾರೆ. ಅವರ ಬಳಿ ಹಾಳು ಮಾಡಲು ಸಮಯ ಹಾಗೂ ಹಣ ದಂಡಿಯಾಗಿರುತ್ತದೆ. ಹೀಗಿರುವಾಗ ತಮ್ಮನ್ನು ವ್ಯಸ್ತರಾಗಿಟ್ಟುಕೊಳ್ಳಲು ಅವರಿಗೆ ಕೊಳ್ಳುವಿಕೆಗಿಂತ ಉತ್ತಮವಾದದ್ದು ಏನೂ ಇಲ್ಲ.

ವೀಣಾ ಚಂದ್ರನ್

ಟೆಕ್ನಿಕ್ಸ್ ಜಾದೂ ಕೆಲವು ವರ್ಷಗಳ ಹಿಂದೆ ನಂಬಲಾಗದಿದ್ದದ್ದು ಇಂದು ನಡೆಯುತ್ತಿವೆ. ಜಗತ್ತು ಜಾದೂ ಮಾಡುವ ರೀತಿಯಲ್ಲಿ ಬದಲಾಗುತ್ತಿದೆ. ಇವೆಲ್ಲಕ್ಕೂ ಮೂಲ ಟೆಕ್ನಿಕ್‌ ನ ಚಮತ್ಕಾರ. ಶೀಘ್ರದಲ್ಲೇ ಟೆಲಿಪೋರ್ಟೆಶನ್‌ ನ ಚಮತ್ಕಾರ ವಾಸ್ತವವಾಗುವ ದಿನಗಳೂ ಬರುತ್ತವೆ. ಅಂದರೆ ಟೆಲಿಫೋನ್‌ ಬರೀ ಟೆಲಿಫೋನ್‌ ಆಗಿರುವುದಿಲ್ಲ. ನಿಮ್ಮನ್ನು ಈ ಪ್ರಪಂಚದಿಂದ ಆ ಪ್ರಪಂಚದವರೆಗೆ ತಲುಪಿಸುವ ಸಾಧನವಾಗಿರುತ್ತದೆ. ಇನ್ನೂ ಬಹಳಷ್ಟು ಬದಲಾಗಲಿದೆ. ನೀವು ಟೈಪ್‌ ಮಾಡಿ ಮಾಡಿ ದಣಿದಿದ್ದರೆ ಬೆರಳುಗಳನ್ನು ಸುಮ್ಮನೆ ಬೋರ್ಡ್‌ ಮೇಲೆ ಹಾಗೇ ಜಾರಿಸಿ. ಯಾವುದಾದರೂ ಒಂದೇ ಅಕ್ಷರದ ಮೇಲೆಯೇ ನಿಮ್ಮ ಬೆರಳುಗಳು ಆಟವಾಡಲಿ ಅಥವಾ ಅನಿಯಂತ್ರಿತ ರೀತಿಯಲ್ಲಿ ಏನಾದರೂ ಟೈಪ್‌ ಮಾಡಿ. ಆದರೆ ಅದು ವಾಯ್ಸ್ ಓವರ್‌ ಐ.ಪಿ. ಮೂಲಕ ನೀವು ಏನನ್ನು ಟೈಪ್‌ ಮಾಡಲು ಇಚ್ಛಿಸಿದ್ದೀರೋ ಅದೇ ಮೂಡುತ್ತದೆ.

ಈ ಟೆಕ್ನಿಕ್‌ ನಿಂದ ಇನ್ನಷ್ಟು ಲಾಭಗಳಿವೆ. ಉದಾಹರಣೆಗೆ ಈ ಟೆಕ್ನಿಕ್‌ ನ್ನು ಒಂದು ಪ್ರತ್ಯೇಕ ಟೆಲಿಫೋನ್‌ ಲೈನ್‌ ನಂತೆ ಉಪಯೋಗಿಸಬಹುದು. ಇದರಲ್ಲಿ ಕಾಲರ್‌ ಐಡಿ ಮತ್ತು ಒಂದೇ ಸಮಯದಲ್ಲಿ 3 ಕಡೆ ಮಾತಾಡುವ ಸೌಲಭ್ಯ ಇರುತ್ತದೆ. ಇವೆಲ್ಲ ಸಂಪೂರ್ಣ ಉಚಿತ.

ಇದೇ ಕ್ರಮದಲ್ಲಿ ಒಂದು ಟೆಕ್ನಿಕಲ್ ಅಲ್ಟ್ರಾ ಮೊಬೈಲ್ ‌ಪಿ.ಸಿ ಕೂಡ ಬರಲಿದೆ. ಅದರಲ್ಲಿ ಯಾವುದಾದರೂ ಶಬ್ದ ಟೈಪ್‌ ಮಾಡಿದ ಕೂಡಲೇ ನಿಮಗೆ ಇಂಟರ್‌ ನೆಟ್‌ ನೊಂದಿಗೆ ಎಷ್ಟು ವೇಗವಾಗಿ ಸಂಪರ್ಕ ಉಂಟಾಗುತ್ತದೆಯೆಂದರೆ ಅದನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಉದಾಹರಣೆಗೆ ನೀವು ಒಂದುವೇಳೆ ಫಾಸ್ಟರ್‌ ಕಮ್ಯೂನಿಕೇಶನ್‌ ಶಬ್ದ ಟೈಪ್‌ ಮಾಡಿದರೆ 0.06 ಸೆಕೆಂಡ್‌ ನಲ್ಲಿ ನಿಮ್ಮ ಮುಂದೆ 37,40,00,000 ಪರಿಣಾಮಗಳು ಬರುತ್ತವೆ. ಜನ ಹೆಚ್ಚು ಹೆಚ್ಚು ಸೂಚನೆಗಳನ್ನು ವೇಗವಾಗಿ ಬಯಸುತ್ತಾರೆ. ಆದ್ದರಿಂದ ಭವಿಷ್ಯದಲ್ಲಿ ಈ ಟೆಕ್ನಿಕ್‌ ಜನರಿಗೆ ಬಹಳ ಇಷ್ಟವಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ