ಮಳೆಗಾಲ ಆರಂಭವಾಗಿಬಿಟ್ಟಿದೆ. ಇಂತಹ ಸ್ಥಿತಿಯಲ್ಲಿ ನೀರು ಹಾಗೂ ಕೆಸರಿನಿಂದ ಬಟ್ಟೆಗಳ ಮೇಲೆ ಕಲೆ ಬೀಳುವ ಭಯ ಇದ್ದೇ ಇರುತ್ತದೆ. ಈ ಕಲೆಗಳು ನಾವು ಮಳೆಗಾಲದ ಆನಂದ ಪಡೆದುಕೊಳ್ಳುವುದನ್ನು ಕಡಿಮೆ ಮಾಡದಿರಲಿ.
ನಿಮ್ಮ ಖುಷಿಯನ್ನು ಕಾಯ್ದುಕೊಂಡು ಹೋಗಲು ಬಟ್ಟೆಗಳನ್ನು ಕೊಳೆಯಿಂದ ರಕ್ಷಿಸಿಕೊಳ್ಳುವುದು ಹಾಗೂ ಈ ಬಟ್ಟೆಗಳನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾದ ಕೆಲಸ.
ನಾವು ನಮಗೆ ಇಷ್ಟವಾದ ಡ್ರೆಸ್ಸಿನ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ ಒಂದಿಷ್ಟು ತಪ್ಪು ಅಥವಾ ಅಜಾಗರೂಕತೆಯಿಂದಾಗಿ ಅದರ ಮೇಲೆ ಯಾವುದಾದರೊಂದು ಕಲೆ ಆಗಿಯೇಬಿಡುತ್ತದೆ. ಈ ತೆರನಾದ ಕಲೆಗಳನ್ನು ಹೇಗೆ ಹೋಗಲಾಡಿಸಬೇಕು, ಕಲೆ ಹೋಗಲಾಡಿಸುವ ಉಪಾಯಗಳೇನು? ಅದೇ ಕಲೆ ಬಟ್ಟೆಯ ಮೇಲೆ ಪಸರಿಸಬಹುದೇ ಎಂಬ ಹಲವು ಸಂದೇಹಗಳು ನಮ್ಮನ್ನು ಕಾಡುತ್ತವೆ.
ಸಾಧಾರಣ ಕಲೆಗಳನ್ನು ಸುಲಭವಾಗಿ ನಿವಾರಿಸಬಹುದು. ಆದರೆ ಕೆಲವು ಹಠಮಾರಿ ಕಲೆಗಳನ್ನು ಹೋಗಲಾಡಿಸುವುದು ಕಷ್ಟ. ಎಷ್ಟೋ ಸಲ ಈ ಕಲೆ ಹೋಗಲಾಡಿಸುವ ಸಂದರ್ಭಗಳಲ್ಲಿ ಬಟ್ಟೆಗೇನಾದರೂ ಹಾನಿ ಆಗಬಹುದು, ಇಲ್ಲವೇ ಬಣ್ಣ ಮೂಡಬಹುದು.
ಸುಲಭ ವಿಧಾನ
ಮಳೆಗಾಲದ ಸಂದರ್ಭದಲ್ಲಿ ಬಟ್ಟೆಗಳಿಗೆ ಗಾಳಿ ತಗುಲದೇ ಇರುವುದರಿಂದ ಅವುಗಳಲ್ಲಿ ತೇವಾಂಶ ಹಾಗೆಯೇ ಉಳಿದುಬಿಡುತ್ತದೆ. ಅದೇ ದುರ್ಗಂಧ ಹೊರಸೂಸಲು ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಒಳ್ಳೆಯ ಡಿಟರ್ಜೆಂಟ್ ನೊಂದಿಗೆ ಸುವಾಸನಾಯುಕ್ತ ಡಿಟರ್ಜೆಂಟ್ ನಿಂದ ಒಗೆಯುವುದರಿಂದ ನೀವು ಮಳೆಗಾಲದಲ್ಲಿ ನಿಮ್ಮ ಬಟ್ಟೆಗಳಿಂದ ಒಳ್ಳೆಯ ಸುವಾಸನೆಯ ಮಜ ಪಡೆಯಬಹುದು.
ಯಾವುದಾದರೊಂದು ವಿಶೇಷ ಸಮಾರಂಭ, ಪಾರ್ಟಿ, ಮದುವೆಯಂತಹ ಸಮಾರಂಭಗಳಲ್ಲಿ ಎಷ್ಟೊಂದು ಮಗ್ನರಾಗಿ ಬಿಡುತ್ತೇವೆಂದರೆ, ನಮ್ಮ ಬಟ್ಟೆಗಳ ಮೇಲೆ ಚಹಾ, ಕಾಫಿ, ಎಣ್ಣೆ ಮಸಾಲೆ, ಆಹಾರದ ಗುರುತುಗಳು ಯಾವಾಗ ಬಿದ್ದವು ಎಂಬುದು ತಮ್ಮ ಗಮನಕ್ಕೆ ಬರುವುದೇ ಇಲ್ಲ. ಬಿಳಿ ಬಟ್ಟೆಗಳಿಗೆ ಬ್ಲೀಚಿಂಗ್ ನ ಪರಿಹಾರವಾದರೂ ಇವತ್ತು. ಆದರೆ ಬಣ್ಣದ ಬಟ್ಟೆಗಳಿಗೆ ಯಾವುದೇ ಪರಿಹಾರವೇ ಇರಲಿಲ್ಲ. ಮೊದಲು ಈ ಕಲೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಹೋಗಲಾಡಿಸುವುದು ಅತ್ಯಂತ ಕಠಿಣ ಕೆಲಸವಾಗಿತ್ತು. ಆದರೆ ಈಗ ಮಾರುಕಟ್ಟೆಯಲ್ಲಿ ಇಂತಹ ಹಲವು ಪ್ರಕಾರದ ಉತ್ಪನ್ನಗಳು ಲಭ್ಯವಿದ್ದು, ಅವುಗಳ ಸಹಾಯದಿಂದ ಅತ್ಯಂತ ಹಠಮಾರಿ ಕಲೆಯನ್ನೂ ಕೂಡ ತೆಗೆಯಬಹುದಾಗಿದೆ.
ನಿಮ್ಮ ಅತ್ಯಂತ ಮೆಚ್ಚಿನ ಡ್ರೆಸ್ ಮೊದಲಿನಂತೆ ಹೊಸದರಂತೆ ಗೋಚರಿಸಬೇಕೆಂದರೆ, ಆ ಉತ್ಪನ್ನಗಳಲ್ಲಿ ಯಾವುದಾದರೊಂದನ್ನು ಆಯ್ದುಕೊಂಡು, ಅದನ್ನು ಡಿಟರ್ಜೆಂಟ್ ನೊಂದಿಗೆ ಬೆರೆಸಿ ಬಟ್ಟೆಯ ಮೇಲಿನ ಕಲೆಯನ್ನು ಹೋಗಲಾಡಿಸಬಹುದು. ಅದರಿಂದ ಬಟ್ಟೆಯ ಸೌಂದರ್ಯ ಹಾಗೂ ಹೊಳಪು ಹೆಚ್ಚುತ್ತದೆ.
ಇಂದು ಮಾರುಕಟ್ಟೆಯಲ್ಲಿ ಹಲವು ಹೆಸರಾಂತ ಕಂಪನಿಗಳ ಉತ್ಪನ್ನಗಳು ಲಭಿಸುತ್ತಿವೆ. ಅವು ಬಟ್ಟೆಗಳ ಮೇಲಿನ ಕೊಳೆ ನಿವಾರಿಸಿ ಅತ್ಯುತ್ತಮ ರೀತಿಯಲ್ಲಿ ಸ್ವಚ್ಛಗೊಳಿಸುತ್ತವೆ. ನೀವು ಅತ್ಯುತ್ತಮ ಪರಿಣಾಮ ಕಂಡುಕೊಳ್ಳಲು ಈ ಎಕ್ಸ್ ಪರ್ಟ್ ಉಪಾಯಗಳನ್ನು ಅನುಸರಿಸಿ. ವಿಶ್ವಾಸಾರ್ಹ ಉತ್ಪನ್ನಗಳು ಕೇವಲ ಕಾಫಿ, ಚಹಾ, ಅರಿಶಿನ, ಸಾಸ್ ಮುಂತಾದ ಕಲೆಗಳನ್ನಷ್ಟೇ ಅಲ್ಲ, ಬಟ್ಟೆಗಳು ಹಾಗೂ ಅವುಗಳ ಬಣ್ಣದ ಸುರಕ್ಷತೆಯನ್ನು ಕೂಡ ಮಾಡುತ್ತವೆ.
ಖುಷಿಯೊಂದಿಗೆ ಹೊಂದಾಣಿಕೆ ಇಲ್ಲ
ಮಳೆಗಾಲದಲ್ಲೂ ಕೂಡ ಈಗ ಬಿಳಿ ಬಟ್ಟೆಗಳನ್ನು ಧರಿಸಬಹುದು. ಈಗ ಆ ಬಟ್ಟೆಗಳ ಸ್ವಚ್ಛತೆ ಎಕ್ಸ್ ಪರ್ಟ್ ಗಳಿಂದ ಸುಲಭ ಸಾಧ್ಯವಾಗಿದೆ.