ಅಮೆರಿಕಾದ ನ್ಯೂಯಾರ್ಕ್‌ ನ ಎಡಿಥ್‌ ವಿಂಡ್ಸರ್‌ ರವರನ್ನು ಅವರ ದೇಶವಷ್ಟೇ ಅಲ್ಲ, ಇಡೀ ವಿಶ್ವದ ಅಂತಹ ವರ್ಗದ ಜನರು ಬಹಳ ವರ್ಷಗಳವರೆಗೆ ಪ್ರಶಂಸಿಸುತ್ತಾರೆ. ಅವರನ್ನು ಬಹುಸಂಖ್ಯಾತರು ಯಾವುದೋ ಬೇರೆ ಗ್ರಹದಿಂದ ಬಂದವರೆಂದು ಭಾವಿಸುತ್ತಾರೆ. ಶಿಯಾ ಕ್ಲಾರಾ ಹಾಗೂ ಇವರು ಸಲಿಂಗ ಜೋಡಿಗಳಾಗಿದ್ದು, ಮದುವೆ ಮಾಡಿಕೊಂಡು ಒಟ್ಟಿಗೆ ಬಾಳಿದ್ದರು. ಅಮೆರಿಕಾದ ಕೆಲವು ರಾಜ್ಯಗಳು ಕೊಂಚ ತಕರಾರು ಮಾಡಿದರೂ ನಂತರ ಇಂತಹ ಮದುವೆಗಳನ್ನು ಕಾನೂನುಬದ್ಧಗೊಳಿಸಿದ. ಬಿಲ್ ಕ್ಲಿಂಟನ್‌ ಕಾಲದಲ್ಲಿ ಮಾಡಿದ ಒಂದು ಕಾನೂನು ಈ ವಿವಾಹಿತ ಸಲಿಂಗಿಗಳಿಗೆ ಅಡ್ಡಿಪಡಿಸುತ್ತಿತ್ತು.

ಎಡಿಥ್‌ ವಿಂಡ್ಸರ್‌ ಮತ್ತು ಶಿಯಾ ಕ್ಲಾರಾ ಸ್ಪೈರ್‌ ಇಬ್ಬರೂ ಮಹಿಳೆಯರು. ಆದರೆ ಅವರಿಬ್ಬರೂ ಕಾನೂನುಬದ್ಧವಾಗಿದ್ದ ಕಡೆ ಅಂತಹ ಮದುವೆ ಮಾಡಿಕೊಂಡಿದ್ದರು. 2009ರಲ್ಲಿ ಶಿಯಾ ಕ್ಲಾರಾ ತೀರಿಕೊಂಡರು. ಎಡಿಥ್‌ ವಿಂಡ್ಸರ್‌ ಗೆ ಶಿಯಾರ ಆಸ್ತಿ ಸಿಕ್ಕಾಗ ಫೆಡರ್‌ ಡಿಫೆನ್ಸ್ ಮತ್ತು ಮ್ಯಾರೇಜ್‌ ಆ್ಯಕ್ಟ್ ಪ್ರಕಾರ, ಅವರಿಗೆ ಅವಿವಾಹಿತ ವ್ಯಕ್ತಿಯಿಂದ ಸಿಕ್ಕ ಆಸ್ತಿಗೆ ತೆರಿಗೆ ರೂಪದಲ್ಲಿ 3,60,000 ಡಾಲರ್‌ ನ ತೆರಿಗೆ ತುಂಬಲು ನೋಟೀಸ್‌ ಕೊಡಲಾಯಿತು. ಅಮೆರಿಕನ್‌ ಸುಪ್ರೀಂ ಕೋರ್ಟ್‌ ಈಗ ಈ ಕಾನೂನು ಸ್ತ್ರೀ ಪುರುಷರಲ್ಲಿ ಭೇದ ತೋರುತ್ತದೆಂದು ಅದನ್ನು ಮಾನ್ಯ ಮಾಡಲಿಲ್ಲ. ಒಂದು ವೇಳೆ ಪುರುಷ ಪುರುಷನನ್ನು ಅಥವಾ ಸ್ತ್ರೀ ಸ್ತ್ರೀಯನ್ನು ವಿವಾಹ ಮಾಡಿಕೊಂಡರೆ ಅಂಥವರನ್ನು ಸ್ತ್ರೀ-ಪುರುಷರ ವಿವಾಹಕ್ಕಿಂತ ಬೇರೆ ಎಂದು ತಿಳಿಯಾಗುವುದಿಲ್ಲ.

ಇದೇ ರೀತಿ ಕ್ಯಾಲಿಫೋರ್ನಿಯಾದ ಕಾನೂನಿನಲ್ಲಿ ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ಕೊಡುತ್ತಿರಲಿಲ್ಲ. ಅಲ್ಲಿನ ಕೋರ್ಟು ಅಸಂವಿಧಾನಕ ಎಂದು ತೀರ್ಮಾನಿಸಿತ್ತು. ವಿಷಯ ಸುಪ್ರೀಂ ಕೋರ್ಟ್‌ ತಲುಪಿತು. ಅಪೀಲ್ ‌ಮಾಡಿದವರು ಯಾರೋ ಕಟ್ಟಾ ತಲೆ ತಿರುಕರಾಗಿದ್ದರು. ಆದರೆ ಸುಪ್ರೀಂ ಕೋರ್ಟ್‌ ಅದರ ಬಗ್ಗೆ ವಿಚಾರಣೆ ಮಾಡಲು ಒಪ್ಪಲಿಲ್ಲ. ಹೀಗೆ ಕ್ಯಾಲಿಫೋರ್ನಿಯಾ, ಸಲಿಂಗಿಗಳ ಮದುವೆಯನ್ನು ಸ್ತ್ರೀ-ಪುರುಷರ ಮದುವೆಗಳಿಗೆ ಸಮಾನವಾಗಿ ಮಾನ್ಯತೆ ನೀಡುವ ಮತ್ತು ಅವಕ್ಕೆ ಕಾಯಿದೆ ಪ್ರಕಾರ ಸರ್ಕಾರದಿಂದ ಲೈಸೆನ್ಸ್ ನೀಡುವ 13ನೇ ರಾಜ್ಯವಾಯಿತು.

ಅಮೆರಿಕಾ ಬಿಳಿಯರಲ್ಲದವರೊಂದಿಗಿದ್ದ ಭೇದಭಾವವನ್ನು ಸಮಾಪ್ತಿಗೊಳಿಸಿದಂತೆ, ಮಹಿಳೆಯರಿಗೆ ಹಕ್ಕು ಕೊಟ್ಟಂತೆ ಕಾನೂನು ಪ್ರಕಾರ ಅಥವಾ ಕಾನೂನುಬಾಹಿರಾಗಿ ದೇಶಕ್ಕೆ ಬಂದ ವ್ಯಕ್ತಿಗಳಿಗೆ ಪೌರತ್ವ ನೀಡಿತು. ಈ ಹೆಜ್ಜೆಯೂ ಅದರಂತೆಯೇ ಇದೆ.

ಸಲಿಂಗಿಗಳ ಜೋಡಿ ಯಾವುದೇ ಅನೈತಿಕ ಕಾರ್ಯ ಮಾಡುವುದಿಲ್ಲ. ಏಕೆಂದರೆ ಮದುವೆಯಾದವರಂತೆ ಇರುವುದು, ಮನಸ್ಸಿಗೆ ಬಂದ ರೀತಿಯಲ್ಲಿ ಸೆಕ್ಸ್ ಸುಖ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಸರ್ಕಾರ ಅಥವಾ ಸಮಾಜ ಇದರಲ್ಲಿ ಹಸ್ತಕ್ಷೇಪ ಮಾಡಬಾರದು.

ಅವರುಗಳ ವಿವಾಹಕ್ಕೆ ಮಾನ್ಯತೆ ಕೊಟ್ಟು ಅಸಲಿಗೆ ಸರ್ಕಾರ ಇಬ್ಬರಿಗೂ ರಕ್ಷಣೆ ನೀಡುತ್ತದೆ. ಬೇರೆಯಾದರೆ ಆಸ್ತಿ ಹಂಚುವಿಕೆ ವೈವಾಹಿಕ ಕಾನೂನುಗಳ ಪ್ರಕಾರ ಆಗುತ್ತದೆ. ಇಬ್ಬರೂ ದಂಪತಿಗಳಂತೆ ಇನ್‌ ಕಂ ಟ್ಯಾಕ್ಸ್ ರಿಟರ್ನ್‌ ಫೈಲ್ ‌ಮಾಡುತ್ತಾರೆ. ಒಬ್ಬರು ಸತ್ತ ನಂತರ ಇನ್ನೊಬ್ಬರಿಗೆ ಆಸ್ತಿ ಸಿಗುತ್ತದೆ. ಯಾರಾದರೂ ಒಬ್ಬರಿಗೆ ಅಪಘಾತವಾದರೆ, ಇನ್ನೊಬ್ಬರು ಆಸ್ಪತ್ರೆಯಲ್ಲಿ ವಿವಾಹಿತ ಸಂಗಾತಿಯಂತೆ ಅವರೊಂದಿಗೆ ಇರಬಹುದು. ಇಬ್ಬರೂ ಸ್ತ್ರೀ-ಪುರುಷ ಜೋಡಿಗಳಂತೆ ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದು ಅಥವಾ ಒಬ್ಬರ ಅಂಶದಿಂದ ಸರೋಗೇಟ್‌ ಮಗುವನ್ನು ಪಡೆಯಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ