ಇಪ್ಪತ್ತೊಂದನೇ ಶತಮಾನ ವಿಶ್ವದ ಸ್ವರೂಪವನ್ನು ಹಲವಾರು ಘಟ್ಟಗಳಲ್ಲಿ ಬದಲಾಯಿಸಿಬಿಟ್ಟಿದೆ. ಈ ಬದಲಾವಣೆಗಳಲ್ಲಿ ಎಲ್ಲಕ್ಕಿಂತ ಮುಖ್ಯವಾದುದು ಟೆಕ್ನಾಲಜಿ, ಇದಂತೂ ನಮಗೀಗ ಉಸಿರಾಟದಷ್ಟೆ ಮುಖ್ಯವಾಗಿ ಹೋಗಿದೆ.
ಕಳೆದ ಕೆಲವು ದಶಕಗಳವರೆಗೆ ಕೇವಲ ಪುರುಷರಿಗೆ ಮಾತ್ರವೇ ಇದರ ಮೇಲೆ ಏಕಸ್ವಾಮ್ಯತೆ ಎಂದು ಬಿಂಬಿಸಲಾಗಿತ್ತು. ಹೆಂಗಸರಿಗೆ ಈ ಕುರಿತಾಗಿ ಅಷ್ಟೇನೂ ಆಸಕ್ತಿ ಇಲ್ಲ ಎಂಬಂತೆ ಸೂಚಿಸಲಾಗುತ್ತಿತ್ತು. ಆದರೆ ಇದೀಗ ಪರಿವರ್ತನೆಯ ಕಾಲ. ಕಾರ್ಪೊರೇಟ್ ಜಗತ್ತಿನಲ್ಲಿ ಮಹಿಳೆಯರು ದಾಂಗುಡಿ ಇಟ್ಟ ಮೇಲೆ, ಅವರು ತಮ್ಮ ಟೆಕ್ನಿಕ್ ಅಗತ್ಯಗಳಿಗಾಗಿ ಸ್ಮಾರ್ಟ್ ಸಲ್ಯೂಶನ್ಸ್ ಹುಡುಕತೊಡಗಿದ್ದಾರೆ. ಹೀಗಾಗಿ ಇಂದು ಬೋಲ್ಡ್ ಬ್ಯೂಟಿಫುಲ್ ಮೊಬೈಲ್ ಹ್ಯಾಂಡ್ ಸೆಟ್ಸ್, ಸ್ಲೀಕ್ ಟಚ್ ಸ್ಕ್ರೀನ್, ಐ ಪ್ಯಾಡ್ಸ್, ಟ್ಯಾಬ್ಲೆಟ್ಸ್ ಇತ್ಯಾದಿಗಳು ಇವರ ಕರಗಳಲ್ಲಿ ಲೀಲಾಜಾಲವಾಗಿ ನಲಿಯುತ್ತಿವೆ.
ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ತಮ್ಮದೇ ಒಂದು ವಿಶಿಷ್ಟ ಸ್ಥಾನ ಪಡೆದುಕೊಂಡಿರುವ ಅನನ್ಯಾ ವರ್ಮಾ, ಆಧುನಿಕ ಟೆಕ್ನಿಕ್ ಪರಿಕರಗಳ ಬಗ್ಗೆ ಜಾಗೃತರಾಗಿರುವ ಹಾಗೂ ಸದಾ ಅಪ್ ಡೇಟೆಡ್ ಆಗಿರಲು ಬಯಸುವ ಹೆಂಗಸರಲ್ಲಿ ಒಬ್ಬರೆನಿಸಿದ್ದಾರೆ. ಇವರಿಗೆ ಗ್ಯಾಜೆಟ್ಸ್ ಟ್ರೆಂಡ್ ಎಷ್ಟು ಒಗ್ಗಿಹೋಗಿದೆ ಎಂದರೆ ಲೇಟೆಸ್ಟ್ ಫ್ಯಾಷನ್ ಮೆಟೀರಿಯಲ್ಸ್ ಸೆಲೆಕ್ಟ್ ಮಾಡುವಷ್ಟೇ ಸಲೀಸು ಎಂಬಂತಾಗಿದೆ. ಮಾರ್ಕೆಟ್ ನಲ್ಲಿ ಯಾವುದೇ ಹೊಸ ಗ್ಯಾಜೆಟ್ ಬಂದಿರಲಿ, ಇವರು ಅದನ್ನು ಅಗತ್ಯವಾಗಿ ಕೊಳ್ಳುತ್ತಾರೆ. ಆದರೆ ಆಕೆಗೆ ಸ್ಲೀಕ್ ಹಾಗೂ ಬೋಲ್ಡ್ ಡಿಸೈನ್ಸ್ ಮಾತ್ರ ಹೆಚ್ಚು ಇಷ್ಟವಾಗುತ್ತವೆ, ಅದು ಮೊಬೈಲ್ ಅಥವಾ ಲ್ಯಾಪ್ ಟಾಪ್ ಆಗಿರಬಹುದು.
ಹೊಸ ಟೆಕ್ನಿಕ್ ಸಾಧನಗಳು ಈಝಿ ಯೂಸರ್ ಫ್ರೆಂಡ್ಲಿ ಆಗಿರುವುದರಿಂದ, ಉದ್ಯೋಗಸ್ಥ ವನಿತೆಯರು, ಈ ಗ್ಯಾಜೆಟ್ಸ್ ನ್ನು ತಮ್ಮ ಬ್ರೆಸ್ಟ್ ಫ್ರೆಂಡ್ ಎಂದೇ ಭಾವಿಸುತ್ತಾರೆ. ಅವರು ಮೀಟಿಂಗ್ ನಲ್ಲಿ ಬಿಝಿ ಆಗಿದ್ದರೆ ಟ್ಯಾಬ್ಲೆಟ್ ಮೇಲ್ ಚೆಕ್ ಮಾಡಲು, ವಿಡಿಯೋ ಕಾಲ್ಸ್ ಮಾಡಲು, ತಮ್ಮ ಪ್ರೆಸೆಂಟೇಷನ್ಸ್ ಡೌನ್ ಲೋಡ್ ಮಾಡಿಕೊಳ್ಳಲು ಹಾಗೂ ತಮ್ಮ ಪರಿವಾರದೊಂದಿಗೆ ಸಂಪರ್ಕದಲ್ಲಿರಲು ಅತ್ಯುತ್ತಮ ಸಾಧನವಾಗಿದೆ.
ಮಹಿಳೆಯರೇ ಟಾರ್ಗೆಟ್
ಜಾಹೀರಾತುಗಳಲ್ಲಿ ಕೊಡುತ್ತಿರುವ ಪ್ರಚಾರ ಹಾಗೂ ಮಾರುಕಟ್ಟೆಯ ಒಲವು ಗಮನಿಸಿದರೆ ಈ ದಿನಗಳಲ್ಲಿ ಗ್ಯಾಜೆಟ್ಸ್ ಮಾರುಕಟ್ಟೆಯಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. ಆದರೆ ಈ ಬಾರಿ ಇವುಗಳ ತಯಾರಕರ ಟಾರ್ಗೆಟ್ ಪುರುಷರ ಬದಲಿಗೆ ಮಹಿಳೆಯರಾಗಿದ್ದಾರೆ. ಆದ್ದರಿಂದಲೇ ಕಂಪನಿಗಳು ಮಹಿಳೆಯರಿಗೆ ಬೇರೆ ಬೇರೆ ಬಣ್ಣಗಳಲ್ಲಿ ಲ್ಯಾಪ್ ಟಾಪ್ ಮತ್ತು ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಇನ್ನೊಂದೆಡೆ ಫಿಟ್ ನೆಸ್ ಬಗ್ಗೆ ಜಾಗರೂಕರಾಗಿರುವ ಮಹಿಳೆಯರ ಆರೋಗ್ಯದ ಬಗ್ಗೆ ಗಮನಿಸುವ ಮೊಬೈಲ್ ಗಳು ಬರುತ್ತಿವೆ. ಫಿಟ್ ನೆಸ್ ಟ್ರೇನರ್ ನಂತೆ ಕೆಲಸ ಮಾಡುವುದರೊಂದಿಗೆ ಈ ಫೋನ್ ಗಳು ಸ್ಟ್ರೆಸ್ ಲೆವೆಲ್ ಮತ್ತು ಹಾರ್ಟ್ ರೇಟ್ ಕೂಡ ಮಾನೀಟರ್ ಮಾಡುತ್ತವೆ. ಕ್ಯಾಮೆರಾ, ಮ್ಯೂಸಿಕ್ ಪ್ಲೇಯರ್ ಮತ್ತು ಇಂಟರ್ ನೆಟ್ ನ ಲಾಭ ಪಡೆಯುವಲ್ಲಿ ಬಹಳಷ್ಟು ಅಡ್ವಾನ್ಸ್ ಆಗಿರುವ ಈ ಮೊಬೈಲ್ ನ ಸಹಾಯದಿಂದ ಈಗ ಮಹಿಳೆಯರು ತಮ್ಮ ಶರೀರದ ಕೊಬ್ಬು ಹಾಗೂ ಉಸಿರಿನ ದುರ್ವಾಸನೆಯವರೆಗೆ ಪರೀಕ್ಷಿಸಿಕೊಳ್ಳಬಹುದು.
ಕ್ಯಾಮೆರಾದ ಒಂದು ಕ್ಲಿಕ್ ನೊಂದಿಗೆ ಸುಂದರ ಕ್ಷಣಗಳನ್ನು ಕೈದು ಮಾಡುವುದು ಮತ್ತು ಮನೆಯ ಎಲ್ಲ ಜವಾಬ್ದಾರಿಗಳನ್ನು ಪೂರೈಸುವುದು ಇವು ಕಾರ್ಪೋರೇಟ್ ವರ್ಲ್ಡ್ ನಲ್ಲಿ ತನ್ನ ಉಪಸ್ಥಿತಿ ದಾಖಲಿಸುವುದರ ಜೊತೆ ಜೊತೆಗೆ ತನ್ನ ದಾರಿ ಹುಡುಕುವ ಹಾಗೂ ಗುರಿ ತಲುಪುವ ಪ್ರಯತ್ನದಲ್ಲಿ ಯಾವುದೇ ಅವಕಾಶ ಕಳೆದುಕೊಳ್ಳಲು ಬಯಸದ ಟೆಕ್ನೋ ಸ್ಮಾರ್ಟ್ ಮಹಿಳೆಯ ಆದ್ಯತೆಯಾಗಿದೆ.
ಈಗಲೂ ಹಿಂಜರಿತ ಇಷ್ಟವಾದರೂ ಕೆಲವು ಮಹಿಳೆಯರು ಗ್ಯಾಜೆಟ್ಸ್ ಬಳಸಲು ಇಚ್ಛಿಸಿದರೂ ಅದನ್ನು ತಮ್ಮದಾಗಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಅನೇಕ ಮಹಿಳೆಯರು ಮೊಬೈಲ್ ನ್ನು ಕೇವಲ ಫೋನ್ ಮಾಡಲು ಹಾಗೂ ರಿಸೀವ್ ಮಾಡಲು ಮಾತ್ರ ಉಪಯೋಗಿಸುತ್ತಾರೆ. ಇತರ ಅಪ್ಲಿಕೇಶನ್ ಗಳನ್ನು ಉಪಯೋಗಿಸುವುದು ಅವರಿಗೆ ಬೇಕಾಗಿಲ್ಲ ಅಥವಾ ಅದನ್ನು ಕಲಿತುಕೊಳ್ಳುವುದು ಅವರಿಗೆ ಕಷ್ಟವಾಗಿದೆ.
ಮನೆಯ ಉಪಕರಣಗಳನ್ನು ಅಗತ್ಯ ಹಾಗೂ ಸೌಕರ್ಯಕ್ಕಾಗಿ ಪಡೆಯಲು ಇಚ್ಛಿಸಿ ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಇತರ ಲೇಟೆಟ್ ಗ್ಯಾಜೆಟ್ ಗಳು ಇನ್ನೂ ಅವರನ್ನು ಆಕರ್ಷಿಸಿಲಿಲ್ಲ. ಗ್ಯಾಜೆಟ್ಸ್ ಉಪಯೋಗಿಸುವಲ್ಲಿ ಹಿಂಜರಿತ ಮತ್ತು ಗಾಬರಿ ಇಂದಿನ ಟೆಕ್ನಿಕ್ ಯುಗದಲ್ಲಿ ಮಹಿಳೆಯರಲ್ಲಿ ಕಂಡುಬರುವುದಕ್ಕೆ ಕಾರಣ ಅವರಿಗೆ ಯಾವುದೇ ಹೊಸ ವಸ್ತುವನ್ನು ಹೊಂದುವುದರಲ್ಲಿ ಆಸಕ್ತಿಯ ಕೊರತೆ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ.
ಆದರೆ ಪುರುಷರು ರಿಸ್ಕ್ ಫ್ಯಾಕ್ಟರ್ ಬಗ್ಗೆ ಹೆದರುವುದು ಕಡಿಮೆ ಹಾಗೂ ಎಕ್ಸ್ ಪೆರಿಮೆಂಟ್ ಮಾಡಬಯಸಲು ಹೊಸ ವಸ್ತುಗಳನ್ನು ಉಪಯೋಗಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಮಹಿಳೆಯರು `ಅಯ್ಯೋ, ಯಾರು ಕಲೀತಾರೆ?’ ಎಂದು ಆಲೋಚಿಸುತ್ತಾರೆ. ಯಾವುದೇ ಗ್ಯಾಜೆಟ್ ಕೊಳ್ಳುವ ಮೊದಲು ಮಹಿಳೆಯರು ಸಂಪೂರ್ಣ ರಿಸರ್ಚ್ ಮಾಡುತ್ತಾರೆ. ಅವರು ಜಾಹೀರಾತುಗಳಿಂದ ಪ್ರಭಾವಿತರಾಗುವುದು ಕಡಿಮೆ ಎಂದು ಗ್ಯಾಜೆಟ್ ಗುರುಗಳು ಹೇಳುತ್ತಾರೆ.
ಅಪ್ ಡೇಟ್ ಆಗಲು ಕಲಿತಿದ್ದಾರೆ
ಇಂದಿನ ಸಂದರ್ಭದಲ್ಲಿ ಮಹಿಳೆಯರ ಮೊದಲ ಆಯ್ಕೆ ಜ್ಯೂವೆಲರಿ ಎಂದು ಹೇಳಿದರೆ ಯಾರೂ ಒಪ್ಪಲು ಸಿದ್ಧರಿಲ್ಲ. ಏಕೆಂದರೆ ಅವರು ಪ್ಲಾಸ್ಮಾ ಟಿವಿ, ಸೆಲ್ ಫೋನ್, ಲ್ಯಾಪ್ ಟಾಪ್ ಅಥವಾ ಐ ಪಾಡ್ ಗಳಂತಹ ಟೆಕ್ನಿಕ್ ಆಟಿಕೆಗಳನ್ನು ತಮ್ಮ ಬದುಕಿನಲ್ಲಿ ಸೇರಿಸಿಕೊಂಡಿದ್ದಾರೆ. ಕೀಬೋರ್ಡ್ ಮೇಲೆ ವೇಗವಾಗಿ ಚಲಿಸುವ ಅವರ ಬೆರಳುಗಳು ಇಂಟರ್ ನೆಟ್ ಹಾಗೂ ಬ್ಲಾಗ್ ಪ್ರಪಂಚದಲ್ಲಿ ಬಹಳ ಕೌಶಲ್ಯದಿಂದ ಪಯಣ ಮಾಡುತ್ತವೆ. ಆನ್ ಲೈನ್ ಬಿಸ್ ನೆಸ್ ನಲ್ಲಿ ಯಶಸ್ಸು ಗಳಿಸುವ ಇಂದಿನ ಮಹಿಳೆ ಭಾರಿ ಸೀರೆ ಅಥವಾ ದುಬಾರಿ ಆಭರಣಗಳಿಂದ ಸುತ್ತಲ್ಪಟ್ಟ ಬೊಂಬೆಯಾಗಿಲ್ಲ. ಅವಳೀಗ ಟೆಕ್ನಾಲಜಿಯ ವಿಕಾಸದೊಂದಿಗೆ ಅಪ್ ಡೇಟ್ ಆಗಲು ಕಲಿತಿದ್ದಾಳೆ.
ವೀ.ಜೆ. ಸೋಫಿಯಾ ಚೌಧರಿ, ನನ್ನ ಪ್ರಕಾರ ಟೆಕ್ನಿಕ್ ಎಂದರೆ ಒಂದು ಹೊಸ ಪ್ರಪಂಚ. ಅಂದರೆ ನನ್ನ ಬೆರಳುಗಳಿಂದ ಅಸಂಭವವನ್ನು ಸಂಭಾವ್ಯ ಮಾಡುವುದು. ನನ್ನ ಗ್ಯಾಜೆಟ್ಸ್ ನನಗಾಗಿ ಇದನ್ನೇ ಮಾಡುತ್ತವೆ. ನಿಜವಾದ ಅರ್ಥದಲ್ಲಿ ಸೆಲ್ ಪೋನ್ ನನ್ನ ಸಂಗಾತಿಯಾಗಿದೆ. ನನ್ನ ಐ ಪಾಡ್ ಒಂದು ಅಮೂಲ್ಯ ವಸ್ತು. ಅದರಲ್ಲಿ ನಾನು ಹಾಡನ್ನಷ್ಟೇ ಕೇಳುವುದಿಲ್ಲ. ನಾನು ರೆಕಾರ್ಡಿಂಗ್ ಮಾಡುವಾಗ ನನ್ನ ಮ್ಯೂಸಿಕ್ ಡೈರೆಕ್ಟರ್ ಗೆ ಯಾವ ಯಂತ್ರ ಯಾವ ಹಾಡಿಗೆ ಚೆನ್ನಾಗಿರುತ್ತದೆಂದು ಹೇಳಲು ನನಗೆ ಸುಲಭವಾಗುತ್ತದೆ ಎನ್ನುತ್ತಾರೆ.
ಕಳೆದ ಕೆಲವು ದಶಕಗಳಲ್ಲಿ ಮಹಿಳೆಯರು ಬಹಳ ವೇಗವಾಗಿ ತಮ್ಮ ಯಶಸ್ಸಿನ ಪತಾಕೆ ಹಾರಿಸುತ್ತಾ ಸಮಾಜದಲ್ಲಿ ತಮಗೊಂದು ಸ್ಥಾನ ಮಾಡಿಕೊಂಡಿದ್ದಾರೆ. ಅದರ ಪ್ರಭಾವ ಅವರ ಆಲೋಚನೆಯಲ್ಲಿ ಕಂಡು ಬರುವ ಬದಲಾಗಿ ಅವರ ಜೀವನಶೈಲಿ ಮತ್ತು ಕಾರ್ಯಶೈಲಿಯಲ್ಲೂ ಕಂಡುಬರುತ್ತಿದೆ. ಕಳೆದ ಕೆಲವು ದಶಕಗಳಲ್ಲಿ ಮಹಿಳೆಯರ ಆಲೋಚನೆ ಯಾವ ರೀತಿ ಮಗ್ಗಲು ಬದಲಿಸಿದೆಯೋ ಅದೇ ರೀತಿ ಅವರ ದಿಕ್ಕನ್ನೂ ಬದಲಿಸಿದೆ.
ಸಹಾಯಕಾರಿ ಗ್ಯಾಜೆಟ್ಸ್
ಇಂದಿನ ಮಹಿಳೆಗೆ ತನಗೇನು ಬೇಕು ಎಂದು ಗೊತ್ತಿದೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಮನೀಶಾ ಹೀಗೆ ಹೇಳುತ್ತಾರೆ, “ಲ್ಯಾಪ್ ಟಾಪ್ ನನ್ನ ಬದುಕನ್ನು ಬಹಳ ಸುಲಭ ಮಾಡಿದೆ. ಅದರಿಂದ ನಾನು ಮನೆಯಲ್ಲಿದ್ದುಕೊಂಡೇ ಕೆಲಸ ಮಾಡುತ್ತೇನೆ. ಎಲ್ಲಿಯವರೆಗೆಂದರೆ ನನ್ನ ಕುಟುಂಬದ ಹೊಣೆಗಾರಿಕೆಯನ್ನು ನಿಭಾಯಿಸುತ್ತಾ ನನ್ನ ಕ್ಲೈಂಟ್ ಗಳಿಗೆ ಇಮೇಲ್ ಅಥವಾ ಡೇಟಾ ಕಳಿಸುತ್ತೇನೆ.
ಕಾರ್ಪೊರೇಟ್ ವರ್ಲ್ಡ್ ನಲ್ಲಿ ಮಹಿಳೆಯರು ಮುನ್ನುಗ್ಗುತ್ತಿರುವುದು ಅವರಿಗೆ ಉನ್ನತಿಯ ಹಾದಿ ತೋರುತ್ತಿರುವುದರೊಂದಿಗೆ ಒಂದಲ್ಲ ಒಂದು ಗ್ಯಾಜೆಟ್ ಆರಿಸಿಕೊಳ್ಳಲು ಸ್ವಾತಂತ್ರ್ಯವನ್ನೂ ಕೊಡುತ್ತದೆ. ಕ್ಯಾಮೆರಾದಲ್ಲಿ ಚಿತ್ರಗಳನ್ನು ತೆಗೆಯುವುದು ಅಥವಾ ಲ್ಯಾಪ್‌ಟಾಪ್ ನಲ್ಲಿ ಕೆಲಸ ಮಾಡುವುದು ಈಗ ಪುರುಷರಿಗಷ್ಟೇ ಗೊತ್ತಿದೆಯೆಂದಲ್ಲ. ಈಗ ಒಬ್ಬ ಸಾಮಾನ್ಯ ಮಹಿಳೆಯೂ ಅವುಗಳ ಬಗ್ಗೆ ತಿಳಿದುಕೊಂಡಿದ್ದಾಳೆ. ಅವಳು ಟೆಕ್ನಿಕ್ ಗೆ ಸಂಬಂಧಿಸಿದ ಪ್ರತಿ ಸಾಧನವನ್ನು ಪೂರ್ಣ ರೂಪದಲ್ಲಿ ತನ್ನದಾಗಿಸಿಕೊಳ್ಳುತ್ತಿದ್ದಾಳೆ.
ಅವಳು ತನ್ನನ್ನು ಆಧುನಿಕಳೆಂದು ಸಾಬೀತುಪಡಿಸಲು ಈ ಸಾಧನಗಳನ್ನು ಉಪಯೋಗಿಸುತ್ತಿಲ್ಲ. ಆದರೆ ಅವುಗಳ ಸಂಪೂರ್ಣ ಲಾಭ ಪಡೆಯಲು ಇಚ್ಚಿಸುತ್ತಾಳೆ. ಈ ಸಾಧನಗಳು ಅವಳ ಕೆಲಸಗಳಲ್ಲಿ ಸಹಾಯ ಮಾಡುತ್ತವೆ. ಆದ್ದರಿಂದ ತನ್ನ ಸಾಮರ್ಥ್ಯವನ್ನು ಎತ್ತಿ ಹಿಡಿಯುವ ವಸ್ತುಗಳನ್ನು ತನ್ನದಾಗಿಸಿಕೊಳ್ಳುತ್ತಿದ್ದಾಳೆ. ಅವಳು ಮಾಹಿತಿಗಳನ್ನು ಪಡೆಯುವುದರ ಜೊತೆ ಜೊತೆಗೆ ದೂರವಿರುವ ತನ್ನ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿರಲು ಇಂಟರ್ ನೆಟ್ ಉಪಯೋಗಿಸುತ್ತಾಳೆ.
ಔಟ್ ಸೋರ್ಸಿಂಗ್ ಕಂಪನಿ ಗ್ಲೋಬಲ್ ಲಾಜಿಕ್ ನ ಸೀನಿಯರ್ ಮ್ಯಾನೇಜರ್, ಎಚ್.ಆರ್. ಮಾಧವಿ ಪ್ರಕಾರ, ಇಂದು ಹೆಚ್ಚಿನ ಮಹಿಳೆಯರು ಕಾರ್ಪೊರೇಟ್ ಕಲ್ಚರ್ ನ ಭಾಗವಾಗಿದ್ದಾರೆ. ಅವರು ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಳ್ಳುತ್ತಾ ಬಹಳಷ್ಟು ಜವಾಬ್ದಾರಿಗಳಿರುವ ಉನ್ನತ ಸ್ಥಾನಗಳನ್ನು ತಲುಪಿದ್ದಾರೆ. ಕುಟುಂಬ ಮತ್ತು ಉದ್ಯೋಗದ ನಡುವೆ ಸಮತೋಲನ ಸಾಧಿಸಲು ಮತ್ತು ವಿಭಿನ್ನ ಪಾತ್ರಗಳನ್ನು ನಿರ್ವಹಿಸುವಲ್ಲಿ ಟೆಕ್ನಿಕ್ ಅವರಿಗೆ ಬಹಳ ಸಹಾಯ ಮಾಡುತ್ತಿದೆ. ಆಫೀಸಿನಿಂದ ಬೇರೊಂದು ಬ್ರ್ಯಾಂಚ್ ನಲ್ಲಿ ಇದ್ದಾಗ ಟೀಮಿನ ಸದಸ್ಯರೊಂದಿಗೆ ಸಂಪರ್ಕ ಇಟ್ಟುಕೊಳ್ಳಬಹುದು. ಇಂದಿನ ಮಹಿಳೆಯರು ಪರ್ಸನಾಲಿಟಿ ಹೆಚ್ಚಿಸುವ ಗ್ಯಾಜೆಟ್ಸ್ ಗಳನ್ನು ಇಷ್ಟಪಡುತ್ತಿದ್ದಾರೆ.
ಸ್ವಾವಲಂಬನೆಯೇ ಕಾರಣ
ಕ್ಲಿನಿಕ್ ಸೈಕಾಲಜಿಸ್ಟ್ ಡಾ. ಮೇಘಾ ಪ್ರಕಾರ, ಮಹಿಳೆ ಟೆಕ್ನೋ ಸ್ಮಾರ್ಟ್ ಆಗಲು ಮುಖ್ಯ ಕಾರಣ ಸ್ವಾವಲಂಬಿಯಾಗುವುದು. ಅವಳು ಆರ್ಥಿಕವಾಗಿ ಸ್ವಾವಲಂಬಿಯಾಗುವ ಜೊತೆಗೆ ತನ್ನ ಆಲೋಚನೆಯಲ್ಲೂ ಸ್ವಾವಲಂಬಿಯಾಗಿದ್ದಾಳೆ.
ಸಮಾಜದಲ್ಲಿ ಅವಳಿಗೆ ಸಮಾನ ಸ್ಥಾನಮಾನ ಸಿಗುತ್ತಿರುವುದನ್ನು ಪ್ರತ್ಯಕ್ಷವಾಗಿ ಕಾಣಬಹುದಾಗಿದೆ. ಅವಳು ತನ್ನ ಮಾತನ್ನು ಸ್ಪಷ್ಟವಾಗಿ ಹೇಳಲು ಹಿಂಜರಿಯುವುದಿಲ್ಲ. ಸಮಾಜ ಮತ್ತು ಕುಟುಂಬದ ಸಹಕಾರ ಮತ್ತು ಸಮರ್ಥನೆ ಅವಳಿಗೆ ಶಕ್ತಿ ಮತ್ತು ಸಾಮರ್ಥ್ಯ ಕೊಟ್ಟಿದೆ. ಟೆಕ್ನಿಕ್ ನಿಂದ ಅವಳಿಗೆ ಬದುಕಿನಲ್ಲಿ ಫ್ಲೆಕ್ಸಿಬಿಲಿಟಿ ಬಂದಿದೆ.
ಅದರ ಮೂಲಕ ಅವಳು ತನ್ನ ವಿಭಿನ್ನ ಪಾತ್ರಗಳನ್ನು ಒಟ್ಟಿಗೇ ನಿಭಾಯಿಸಬಹುದು. ಕುಟುಂಬದ ಮತ್ತು ತನ್ನ ಇಚ್ಛೆಗಳನ್ನು ಪೂರೈಸಿಕೊಳ್ಳುವ ಸಾಮರ್ಥ್ಯವನ್ನು ಟೆಕ್ನಿಕ್ ಅವಳಿಗೆ ಕೊಟ್ಟಿದೆ.
ಈ ದಿನಗಳಲ್ಲಿ ಎಲೆಕ್ಟ್ರಾನಿಕ್ ಸ್ಟೋರ್ಸ್ ಗಳಲ್ಲಿ, ಟೆಕ್ನಿಕ್ ನಲ್ಲಿ ಆಗುತ್ತಿರುವ ಅಭಿವೃದ್ಧಿ ಮತ್ತು ಲೇಟೆಸ್ಟ್ ಮಾಡೆಲ್ ಗಳ ಮಾಹಿತಿಗಳನ್ನು ಮಹಿಳೆಯರಿಗೆ ತಿಳಿಸುತ್ತಿರುತ್ತಾರೆ. ಅವು ಬಹಳಷ್ಟು ಮಾರಾಟ ಆಗುತ್ತಿವೆ. ಇಂದಿನ ಮಹಿಳೆ ತಾನು ಏನನ್ನು ಖರೀದಿಸಬೇಕೆಂದು ಸ್ವತಃ ನಿರ್ಧರಿಸುತ್ತಾಳೆ. ಇವನ್ನು ಖರೀದಿಸಲು ಈಗ ಅವಳು ಪುರುಷರ ಅಭಿಪ್ರಾಯ ತೆಗೆದುಕೊಳ್ಳುವುದಿಲ್ಲ. ಎಲ್ಲ ಹಂತಗಳಲ್ಲೂ ತನ್ನಿಷ್ಟದಂತೆ ಬದುಕಲು ಅವಳು ಸಮರ್ಥಳಾಗಿದ್ದಾಳೆ. ತನಗೆ ಬೇಕಾದುದನ್ನು ಮಾರುಕಟ್ಟೆಗೆ ಹೋಗಿ ಖರೀದಿಸುತ್ತಾಳೆ.
ಸ್ಟೈಲಿಶ್ ಲೈಫ್ ಸ್ಟೈಲ್
ಹೈದರಾಬಾದ್ ನ ಸಾಫ್ಟ್ ವೇರ್ ಟೆಸ್ಟಿಂಗ್ ಕಂಪನಿ ಆ್ಯಪ್ ಲಾಬ್ ನ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ರೀಮಾ ಸರೀನ್, “ಕಾರ್ಪೊರೇಟ್ ವರ್ಲ್ಡ್ ನಲ್ಲಿ ಕೆಲಸ ಮಾಡುವುದರಿಂದ ನನಗೆ ಯಾವಾಗಲೂ ಲ್ಯಾಪ್ ಟಾಪ್ ಅವಶ್ಯಕತೆಯಿದೆ. ಇದು ಸಮಯದ ಬೇಡಿಕೆಯಾಗಿದ್ದು, ಮಾರುಕಟ್ಟೆಯ ಪ್ರವೃತ್ತಿ ಬದಲಿಸಿ ಮಹಿಳೆಯರಿಗೆ ಒಂದು ಹೊಸ ಆಲೋಚನೆ ಮತ್ತು ದಿಕ್ಕನ್ನು ಕೊಟ್ಟಿದೆ,” ಎನ್ನುತ್ತಾರೆ.
ಟೆಕ್ನೋ ಆ್ಯಕ್ಸೆಸರೀಸ್ ನಲ್ಲಿರುವ ವಸ್ತುಗಳ ಮೇಲೆ ದೃಷ್ಟಿ ಹಾಯಿಸಿದಾಗ ಮೋಟರೋಲಾ ಮಹಿಳೆಯರಿಗೆ ಪಿಂಕ್ ಕಲರ್ ನ ಹಾಗೂ ಸೀಮನ್ಸ್ ಹೂಗಳ ಡಿಸೈನ್ ಗಳಿರುವ ಮೊಬೈಲ್ ಹೊರತಂದ ಮತ್ತು ಅದರ ಡಿಸ್ ಪ್ಲೇ ಸ್ಕ್ರೀನ್ ನ್ನು ಕನ್ನಡಿಯಂತೆ ಕೆಲಸ ಮಾಡುವ ರೀತಿ ತಯಾರಿಸಿದ.
ಸ್ಯಾಮ್ ಸಂಗ್ ನ ಒಂದು ಮೊಬೈಲ್ ನಲ್ಲಿ ಅರೋಮಾ ಥೆರಪಿ ಮತ್ತು ಸುವಾಸನೆಯ ಗೈಡ್ ಇನ್ ಬಿಲ್ಟ್ ಇದೆ. ಅದರಲ್ಲಿ ಕ್ಯಾಲೋರಿ ಕೌಂಟರ್, ಬಾಡಿ ಮಾಸ್ಕ್ ಇಂಡೆಕ್ಸ್ ಕ್ಯಾಲ್ಕುಲೇಟರ್ ಮತ್ತು ಶಾಪಿಂಗ್ ಲಿಸ್ಟ್ ಆರ್ಗನೈಸರ್ ಕೂಡ ಇದೆ. ಆದರೆ ಕೇವಲ ಇಷ್ಟು ಸೌಲಭ್ಯಗಳ ಆಧಾರದಲ್ಲಿ ಮಹಿಳೆಯರು ಅವನ್ನು ಖರೀದಿಸುವುದಿಲ್ಲ. ಅವರು ಟೆಕ್ನೋ ಆ್ಯಕ್ಸೆಸರೀಸ್ ಗೆ ಹೆಚ್ಚಿನ ಬೆಲೆ ಕೊಟ್ಟು ಕೊಂಡಾಗ ಅದರಿಂದ ಸಿಗುವ ಲಾಭಗಳನ್ನು ಕಡೆಗಣಿಸುವುದಿಲ್ಲ. ಅವರು ತೀಕ್ಷ್ಣ ದೃಷ್ಟಿಯಿಂದ ಅದರ ಎಲ್ಲ ಸೂಕ್ಷ್ಮತೆಗಳನ್ನು ಪರೀಕ್ಷಿಸುತ್ತಾರೆ.
ಒಂದು ವೇಳೆ ಮಹಿಳೆ ಕಲೆಯ ಕ್ಷೇತ್ರದಲ್ಲಿ ಡಿಜಿಟಲ್ ಆಗುತ್ತಿದ್ದರೆ ತನ್ನನ್ನು ಫಿಟ್ ಆಗಿಟ್ಟುಕೊಳ್ಳಲು ಯಂತ್ರಗಳನ್ನು ಬಹಳ ವೇಗವಾಗಿ ತನ್ನದಾಗಿಸಿಕೊಳ್ಳುತ್ತಿದ್ದಾಳೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಭಿನ್ನ ಉಪಕರಣಗಳು ಮತ್ತು ಜಿಮ್ ಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಸಂಖ್ಯೆ ಇದಕ್ಕೆ ಉದಾಹರಣೆಯಾಗಿದೆ.
ಸೌಂದರ್ಯದ ಮಾಪನಕ್ಕೆ ಮಹಿಳೆಯರು ತಮ್ಮ ಸಾಮರ್ಥ್ಯದ ಮೂಲಕ ಹೊಸ ಆಯಾಮ ಕೊಟ್ಟಿದ್ದಾರೆ. ಅದೇ ರೀತಿ ಅವರು ತಮ್ಮ ಸ್ಟೈಲ್ ನ್ನು ಟೆಕ್ನಿಕ್ ನ ಮೂಲಕ ಅಲಂಕರಿಸಿದ್ದಾರೆ.
– ಸುಮನಾ ಮನೋಜ್.
ಲೇಟೆಸ್ಟ್ ಗ್ಯಾಜೆಟ್ಸ್ ಓನ್ಲಿ ಫಾರ್ ವಿಮೆನ್ ಬ್ಲೂ ಟೂಥ್ ಪೆಂಡೆಂಟ್ : ಮಹಿಳೆಯರು ದಿನದಿನಕ್ಕೂ ಹೆಚ್ಚು ಸ್ಟೈಲಿಶ್ ಆಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಪೆಂಡೆಂಟ್ ಶೇಪ್ ನಲ್ಲಿ ಬ್ಲೂ ಟೂಥ್ ಬಂದಿದೆ. ಇದು ವೈರ್ ಲೆಸ್ ಆಗಿದ್ದು ಇದರಲ್ಲಿ ಮ್ಯೂಸಿಕ್ ಟ್ರ್ಯಾಕ್ ಬದಲಿಸುವ, ಕಾಲ್ ರಿಜೆಕ್ಟ್ ಮಾಡುವ ಹಾಗೂ ರೀ ಡಯಲ್ ಮಾಡುವ ಸೌಲಭ್ಯಗಳಿವೆ.
ಡಿಜಿಟಲ್ ಕ್ಯಾಮೆರಾ :
ಡಿಜಿಟಲ್ ಕ್ಯಾಮೆರಾ ಮಹಿಳೆಯರಿಗೆ ಫೋಟೋಗ್ರಫಿ ಮಾಡುವ ವಿಧಾನ ಕಲಿಸಿಕೊಟ್ಟಿದೆ. ಅದನ್ನು ಹ್ಯಾಂಡ್ ಮಾಡುವುದೂ ಸುಲಭ. ಆದ್ದರಿಂದಲೇ ಡಿಜಿಟಲ್ ಕ್ಯಾಮೆರಾ ಮಹಿಳೆಯರ ಬ್ಯಾಗಿನಲ್ಲಿ ಜಾಗ ಪಡೆದುಕೊಂಡಿದೆ.
ಹಾರ್ಟ್ ಶೇಪ್ ಪೆಂಡೆಂಟ್ ಯುಎಸ್‌ಬಿ ಡ್ರೈವ್ :
ಮಾರುಕಟ್ಟೆಯಲ್ಲಿ ಲಭ್ಯವಿರುವ ಹಾರ್ಟ್ ಶೇಪ್ ನ ಪೆಂಡೆಂಟ್ ವಾಸ್ತವದಲ್ಲಿ ಒಂದು ಯುಎಸ್‌ಬಿ ಫ್ಲ್ಯಾಶ್ ಡ್ರೈವ್ ಆಗಿದೆ. ಪಿಂಕ್ ಕಲರ್ ನಲ್ಲಿ ಇರುವುದರಿಂದ ಇದನ್ನು ಕತ್ತಿನಲ್ಲಿ ಧರಿಸಬಹುದು. ಇದರಲ್ಲಿ 4 ಜಿಬಿ ಸಾಮರ್ಥ್ಯ ಇರುತ್ತದೆ. ಇದರಲ್ಲಿ ನೀವು ಎಲ್ಲ ಪಿಕ್ಚರ್, ಡೇಟಾ ಮತ್ತು ಮ್ಯೂಸಿಕ್ ಸ್ಟೋರ್ ಮಾಡಬಹುದು. ಯುಎಸ್‌ಬಿ ಫ್ಲ್ಯಾಶ್ ಡ್ರೈವ್ ಉಪಯೋಗಿಸಲು ಪೆಂಡೆಂಟ್ ನ ಕೆಳಗಿನ ಭಾಗವನ್ನು ಬೇರೆ ಮಾಡಬೇಕಾಗುತ್ತದೆ.
ರಿಸ್ಟ್ ಬ್ಯಾಂಡ್ ಪೆನ್ ಡ್ರೈವ್ :
ಹೌದು. ಇದನ್ನು ನಿಮ್ಮ ಮಣಿಕಟ್ಟಿಗೆ ಕಟ್ಟಿಕೊಳ್ಳಬಹುದು. ಆಗ ಇದು ಕಳೆದುಹೋಗುದಿಲ್ಲ. ವಿಭಿನ್ನ ಬಣ್ಣಗಳಲ್ಲಿ ಲಭ್ಯವಿರುವ ಈ ಪೆನ್ ಡ್ರೈವ್ ನಲ್ಲಿ ಟೈಮ್ ಕೂಡ ಡಿಸ್ ಪ್ಲೇ ಆಗುತ್ತದೆ. ಇದೇ ರೀತಿ ಹಾರ್ಟ್ ಶೇಪ್ ಪೆನ್ ಡ್ರೈವ್ ಕೂಡ ಮಾರುಕಟ್ಟೆಯಲ್ಲಿ ಸಿಗುತ್ತದೆ.
ಪೋರ್ಟೆಬಲ್ ಸ್ಪೀಕರ್ಸ್ :
ಈ ಸ್ಪೀಕರ್ ಗಳ ಡಿಸೈನ್ ಮಹಿಳೆಯರ ಹ್ಯಾಂಡ್ ಬ್ಯಾಗ್ ನಂತೆ ಇರುತ್ತದೆ ಮತ್ತು ಇವು ಒಂದು ಬಣ್ಣದಿಂದ ಇನ್ನೊಂದು ಬಣ್ಣಕ್ಕೆ ಬದಲಾಗುತ್ತವೆ. ಇದರ ಒಳಗಿರುವ ಎಲ್ಇಡಿ ಲೈಟ್ಸ್ ಮ್ಯೂಸಿಕ್ ನೊಂದಿಗೆ ಹೊಂದಿಕೊಂಡು ಹೊಳೆಯುತ್ತವೆ. ಕೇವಲ 1.5 ಕೆ.ಜಿ. ಭಾರ ಇರುವುದರಿಂದ ಪೋರ್ಟೆಬಲ್ ಸ್ಪೀಕರ್ ನ್ನು ಎಲ್ಲಿಗೆ ಬೇಕಾದರೂ ಒಯ್ಯಬಹುದು.
ಬಾಡಿ ಟ್ರೇನರ್ ಹ್ಯಾಂಡ್ ಸೆಟ್ ಕಿಟ್ :
ಮಹಿಳೆಯರು ಒಳ್ಳೆಯ ಶೇಪ್ ನಲ್ಲಿ ಹಾಗೂ ಫಿಟ್ ಆಗಿರಬೇಕೆಂದು ಬಯಸಿದರೆ ಅವರಿಗೆ ಬಾಡಿ ಟ್ರೇನರ್ ಹ್ಯಾಂಡ್ ಸೆಟ್ ಕಿಟ್ ಇದೆ. ಈ ಹೆಡ್ ಫೋನ್ ಒಬ್ಬ ಪರ್ಸನಲ್ ಟ್ರೇನರ್ ರೀತಿ ಕೆಲಸ ಮಾಡುತ್ತದೆ. ಒಂದು ಸಮೀಕ್ಷೆಯ ಪ್ರಕಾರ ವಜ್ರದ ಒಂಟಿ ಹರಳಿನ ನೆಕ್ಲೇಸ್ ಗೆ ಹೋಲಿಸಿದರೆ ಶೇ.77ರಷ್ಟು ಮಹಿಳೆಯರು ಪ್ಲಾಸ್ಮಾ ಟಿವಿ ಖರೀದಿಸಲು ಇಚ್ಛಿಸುತ್ತಾರೆ. ಉತ್ತಮ ಫುಟ್ ವೇರ್ ಗೆ ಹೋಲಿಸಿದರೆ ಶೇ.78ರಷ್ಟು ಮಹಿಳೆಯರು ಹೊಸ ಟ್ರೆಂಡಿ ಮೊಬೈಲ್ ಫೋನ್ ತಮ್ಮ ಬಳಿ ಇಟ್ಟುಕೊಳ್ಳಲು ಬಯಸುತ್ತಾರೆ. ಹಾಗೆಯೇ ಶೇ.86ರಷ್ಟು ಮಹಿಳೆಯರು ಡಿಜಿಟಲ್ ವೀಡಿಯೋ ಕ್ಯಾಮೆರಾಗಾಗಿ ಸೌಂದರ್ಯ ಪ್ರಸಾಧನಗಳನ್ನು ಖರೀದಿಸುವ ಇಚ್ಛೆ ತೊರೆಯುತ್ತಾರೆ.