ಸೀರೆ :
ಪತ್ನಿಯನ್ನು ಖುಷಿಪಡಿಸಬೇಕಾದರೆ ಅತ್ಯಂತ ವಿಶೇಷವಾದ ಕೊಡುಗೆ ಸೀರೆ! ಅದನ್ನು ಉಟ್ಟುಕೊಂಡ ನಿಮ್ಮ ಪತ್ನಿ ಖುಷಿಯಿಂದ ಓಲಾಡದಿದ್ದರೆ ಕೇಳಿ. ಆದರೆ ನಿಮ್ಮ ಪತ್ನಿಗಿಷ್ಟವಾದ ಬಣ್ಣದ್ದನ್ನು ಕೊಡಿಸಬೇಕಷ್ಟೇ. ಸೀರೆ ಕೊಂಚ ಲೇಟೆಸ್ಟ್ ಡಿಸೈನ್ ದಾಗಿದ್ದು, ವಿಶಿಷ್ಟವಾಗಿರಬೇಕು. ಅವಳು ಅದನ್ನು ತನ್ನ ಗೆಳತಿಯರಿಗೆ ತೋರಿಸಿ ಹೆಮ್ಮೆಪಡಬೇಕು. ಸೀರೆಯ ಹೊರತಾಗಿ ಡ್ರೆಸ್ ಮೆಟೀರಿಯಲ್ಸ್, ಸೂಟ್ ಅಥವಾ ಬರೀ ದುಪಟ್ಟಾ ಕೊಟ್ಟೂ ಸಹ ನಿಮ್ಮ ಪತ್ನಿಯನ್ನು ಖುಷಿಪಡಿಸಬಹುದು.
ಒಡವೆ :
ಮಹಿಳೆಯರಿಗೆ ಒಡವೆಗಳೆಂದರೆ ಬಹಳ ಒಲವು. ಪ್ರೀತಿ ವ್ಯಕ್ತಪಡಿಸಲು ಸೊಗಸಾದ ಒಂದು ಉಂಗುರ, ಚೈನ್ ಇತ್ಯಾದಿ ಕೊಡಿಸಿ. ಅವನ್ನು ಧರಿಸಿದಾಗೆಲ್ಲಾ ಅವರ ಕಣ್ಣುಗಳು ನಿಮ್ಮನ್ನು ನೆನೆಸಿಕೊಂಡು ನಾಚಿಕೊಳ್ಳುತ್ತವೆ.
ಕಾಸ್ಮೆಟಿಕ್ಸ್ :
ಮಹಿಳೆಯರಿಗೆ ಅಲಂಕರಿಸಿಕೊಳ್ಳುವ ಹುಚ್ಚಿರುತ್ತದೆ. ನಿಮ್ಮ ಪತ್ನಿ ಅತ್ಯಂತ ಸುಂದರವಾಗಿರಬೇಕೆಂದು ಬಯಸಿದರೆ ಕಾಸ್ಮೆಟಿಕ್ಸ್ ಒಂದು ಉತ್ತಮ ಆಯ್ಕೆ. ಇಡೀ ಮೇಕಪ್ ಬಾಕ್ಸ್ ನ್ನು ಗಿಫ್ಟ್ ಕೊಟ್ಟಾಗ ಪತ್ನಿಯ ಮುಖ ಹೇಗೆ ಹೊಳೆಯುತ್ತದೆಂದು ನೋಡಿ.
ಹೂಗಳು :
ಮಹಿಳೆಯರ ಮನಸ್ಸು ಕೋಮಲವಾಗಿರುತ್ತದೆ. ಹೀಗಾಗಿ ಅವರಿಗೆ ಹೂಗಳು ಅತ್ಯಂತ ಪ್ರಿಯವಾಗುತ್ತವೆ. ಹೂಗಳ ಗಿಫ್ಟ್ ಕೊಟ್ಟು ಪತ್ನಿಯ ಹೂವಿನಂತಹ ಮುಖದಲ್ಲಿ ಸಂತಸದ ಅಲೆಗಳನ್ನು ಕಾಣಬಹುದು.
ಫ್ರ್ಯಾಗ್ರೆನ್ಸ್ :
ಮಹಿಳೆಯರಿಗೆ ಫ್ರ್ಯಾಗ್ರೆನ್ಸ್ ಬಗ್ಗೆಯೂ ವಿಶೇಷ ಒಲವಿದೆ. ಪತ್ನಿಗೆ ಇಷ್ಟವಾದ ಡಿಯೋ/ಅತ್ತರು ಕಾಣಿಕೆ ನೀಡಿ. ನಿಮ್ಮ ಬದುಕಿನಲ್ಲಿ ಪ್ರೀತಿಯ ಸುಗಂಧ ಅರಳುವುದನ್ನು ನೋಡಿ.
ಕಾರ್ಡ್ :
ಕಾರ್ಡ್ ನಲ್ಲಿ ನಿಮ್ಮ ಭಾವನೆಗಳಿಗೆ ಶಬ್ದದ ರೂಪ ಕೊಟ್ಟು ಪತ್ನಿಗೆ ಕೊಡಿ. ಕಾರ್ಡ್ ಜೊತೆಗೆ ಯಾವುದಾದರೂ ಸುಂದರವಾದ ಪೇಂಟಿಂಗ್ ಕೂಡ ಗಿಫ್ಟ್ ಕೊಡಬಹುದು.
ಲೇಡೀಸ್ ಪರ್ಸ್ :
ಮಾರ್ಕೆಟ್ ನಿಂದ ಒಂದು ಸುಂದರ ಪರ್ಸ್ ಖರೀದಿಸಿ ಪತ್ನಿಗೆ ಕೊಡಿ.
ಕಿಚನ್ ಆ್ಯಕ್ಸೆಸರೀಸ್ :
ಪತ್ನಿ ಕೆಲಸ ಮಾಡುವುದನ್ನು ಕಂಡು ಒಮ್ಮೊಮ್ಮೆ ನಿಮಗೆ ಅವರ ಕೆಲಸವನ್ನು ಹಗುರ ಮಾಡಿಕೊಡಬೇಕೆಂದು ಅನ್ನಿಸುತ್ತದೆ. ಈಗ ಮಾರುಕಟ್ಟೆಯಲ್ಲಿ ಇಂತಹ ಬಹಳಷ್ಟು ಹೊಸ ಹೊಸ ಉಪಕರಣಗಳು ಬಂದಿದ್ದು ಅವುಗಳಿಂದ ಕೆಲವೇ ನಿಮಿಷಗಳಲ್ಲಿ ಅಡುಗೆಮನೆಯ ಕೆಲಸವಾಗುತ್ತದೆ. ನೀವು ಇಂತಹ ಯಾವುದಾದರೂ ಹೊಸ ವಸ್ತು ಖರೀದಿಸಿ ಪತ್ನಿಗೆ ಕೊಡಿ. ಈ ಗಿಫ್ಟ್ ಪಡೆದು ಅವರು ನಲಿದಾಡುವರು.
ಚಾಕಲೇಟ್ಸ್ :
ಪತ್ನಿಗೆ ನೀ ಚಾಕಲೇಟ್ ಬಾಕ್ಸ್ ಗಿಫ್ಟ್ ಆಗಿ ಕೊಡಬಹುದು.