ಹಬ್ಬದ ವಾತಾವರಣದಲ್ಲಿ ಮನೆಯ ಅಂದಚೆಂದಕ್ಕೆ ಹೆಚ್ಚು ಮಹತ್ವ ಕೊಡಲಾಗುತ್ತದೆ. ಕೆಲವರು ಪಾರಂಪರಿಕ ರೀತಿಯಲ್ಲಿ ಮನೆಯನ್ನು ಅಲಂಕರಿಸಲು ಇಷ್ಟಪಟ್ಟರೆ, ಮತ್ತೆ ಕೆಲವರು ಅದನ್ನು ಆಧುನಿಕ ರೀತಿಯಲ್ಲಿ ಸಿಂಗರಿಸಲು ಉತ್ಸಾಹ ತೋರಿಸುತ್ತಾರೆ. ಇಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ತಮ್ಮ ಮನೆಯನ್ನು ಸುಂದರವಾಗಿ ಕಂಗೊಳಿಸುವಂತೆ ಮಾಡಲು ಇಂಟೀರಿಯರ್‌ ಡಿಸೈನರ್ ಗಳ ಸಲಹೆ ಕೂಡ ಪಡೆಯುತ್ತಿದ್ದಾರೆ.

ಬೆಂಗಳೂರಿನ ಇಂಟೀರಿಯರ್‌ ಡಿಸೈನರ್‌ ಅರುಣ್‌ ಕುಮಾರ್‌ ಹೀಗೆ ಹೇಳುತ್ತಾರೆ, ಬಂಗ್ಲೆಯೇ ಆಗಿರಬಹುದು ಅಥವಾ ಅಪಾರ್ಟ್ ಮೆಂಟ್‌, ಅದು ನಮ್ಮ ಕನಸು ಹಾಗೂ ಭಾವನೆಗಳ ಲೋಕದಿಂದಲೇ ನಿರ್ಮಾಣಗೊಂಡಿರಬೇಕು. ಅದೆಷ್ಟೊ ಜನರು ತಮ್ಮದೇ ಆದ ಬಂಗ್ಲೆಯಲ್ಲಿಯೇ ಇರಲು ಇಷ್ಟಪಡುತ್ತಾರೆ. ಆದರೆ ಈಗ ಹೆಚ್ಚಿನ ಜನರು ಅಪಾರ್ಟ್‌ ಮೆಂಟ್‌ ನಲ್ಲಿ ಅದರಲ್ಲೂ ಓಪನ್‌ ಹೌಸ್‌ಕಾನ್ಸೆಪ್ಟ್ ಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಅದರಲ್ಲಿ ಅಡುಗೆಮನೆ, ಡೈನಿಂಗ್‌ ರೂಮ್, ಲಿವಿಂಗ್‌ ರೂಮ್, ಸ್ಟಡಿ ರೂಮ್ ಹಾಗೂ ಮಕ್ಕಳ ಕೋಣೆಗೆ ವಿಶೇಷ ಬಗೆಯ ಫರ್ನೀಚರ್‌ ಹಾಗೂ ಹೊಂದಾಣಿಕೆಯಾಗುವ ಬಣ್ಣಗಳೊಂದಿಗೆ ಡಿಸೈನ್‌ ಮಾಡಲಾಗುತ್ತದೆ.

ಮಕ್ಕಳ ಕೋಣೆ

wall-colour

ಯಾವುದೇ ಹಬ್ಬವೇ ಇರಲಿ ಅಥವಾ ಸಾಮಾನ್ಯ ದಿನ, ಮಕ್ಕಳ ಬೆಡ್‌ ರೂಮ್ ಅಥವಾ ಸ್ಟಡಿರೂಮ್ ನ್ನು ಈಚೆಗೆ ಆಕರ್ಷಕಗೊಳಿಸುವ ಟ್ರೆಂಡ್‌ಇದೆ. ಬೆಡ್‌ ರೂಮ್ ನಲ್ಲಿ ಕಾರ್ಟೂನ್‌ ಪ್ರಿಂಟ್‌ ಜೊತೆಗೆ ಕ್ಯಾನ್ವಾಸ್‌ ಮೇಲೆ ಪ್ರಿಂಟಿಂಗ್‌ ನ ಟ್ರೆಂಡ್ ಕೂಡ ಇದೆ. ಮಕ್ಕಳ ಕೋಣೆಯ ಬಣ್ಣದ ವಿನ್ಯಾಸ ಕೂಡ ಅವರ ಆಸಕ್ತಿಗನುಗುಣವಾಗಿಯೇ ಇರಬೇಕು. ಉದಾ: ಪರ್ಪಲ್, ಯೆಲ್ಲೋ, ಗ್ರೀನ್‌, ಆರೆಂಜ್‌, ಬ್ಲ್ಯೂ, ಸ್ಕೈ ಬ್ಲ್ಯೂ, ಪೀಚ್‌, ರೆಡ್‌ ಅಂಡ್‌ ವೈಟ್‌ ಮತ್ತು ಮಲ್ಟಿ ಕಲರ್ಸ್ ನ ಕಾರ್ಟೂನ್‌ ಅಥವಾ ಪ್ರಾಣಿಗಳು, ಇಲ್ಲಿ ಹಕ್ಕಿಗಳ ವಾಲ್ ‌ಪೇಪರ್‌ ಕೂಡ ಹಾಕಬಹುದು. ಫರ್ನೀಚರ್‌ ಹಾಗೂ ಫ್ಲೋರಿಂಗ್‌ ನಲ್ಲಿ ಹೆಚ್ಚಾಗಿ ವುಡನ್‌ ನ್ನೇ ಬಳಸಲಾಗುತ್ತದೆ.

ಆಧುನಿಕ ಆ್ಯಕ್ಸೆಸರೀಸ್ ಟ್ರೆಂಡ್

ಅಡುಗೆಮನೆಯಲ್ಲಿ ಈಗ ವಿದೇಶಿ ಆ್ಯಕ್ಸೆಸರೀಸ್‌ ಗಳು ಕೂಡ ಗೋಚರಿಸುತ್ತಿವೆ. ಕೇವಲ ಸ್ಪರ್ಶ ಮಾತ್ರದಿಂದಲೇ ಬಾಗಿಲು ತೆಗೆಯಬೇಕು ಹಾಗೂ ಮುಚ್ಚಬೇಕು ಎಂಬಂತಹ ತಂತ್ರಜ್ಞಾನ ಬಂದಿದೆ. ಅದರಲ್ಲಿ ಔಟ್‌ ಡೋರ್‌ ಸಿಸ್ಟಮ್, ಮಾಡ್ಯೂಲರ್‌ ಕಿಚನ್‌, ಕ್ಯಾಬಿನೆಟ್ಸ್ ವಿತ್‌ ಡೋರ್‌, ಸ್ಲೈಡರ್‌ ಡೋರ್‌, ಮಾಡರ್ನ್‌ ಯೂನಿಕ್‌ ಕಿಚನ್‌, ಅದರಲ್ಲಿ ಗ್ಲಾಸ್‌ ಹಾಗೂ ಸ್ಟೀಲ್ ನ ಫರ್ನೀಚರ್ ಇರುತ್ತದೆ. ಕ್ಯಾಬಿನೆಟ್ಸ್ ಮತ್ತು ಗ್ಲಾಸ್‌ ಡೋರ್‌ ನಂತಹ ಸೌಲಭ್ಯಗಳು ಕೂಡ ಇರುತ್ತವೆ. ಅದರ ಫರ್ನೀಚರ್‌ ವುಡನ್‌, ಬ್ಯಾಂಬೂ, ಸ್ಟೀಲ್, ಪಿವಿಸಿ ಹಾಗೂ ಗ್ಲಾಸ್‌ ನದ್ದಾಗಿರುತ್ತದೆ. ದೊಡ್ಡ ಸೈಜಿನ ಅಡುಗೆಮನೆಯಲ್ಲಿ ಅಗ್ನಿನಿರೋಧಕ ಡೋರ್‌ ಪ್ಯಾನೆಲ್ ‌ಕೂಡ ಇರುತ್ತದೆ.

ಅಡುಗೆಮನೆಯಲ್ಲಿ ಬಣ್ಣದ ವ್ಯಾಖ್ಯೆ ಈಗ ಬದಲಾಗಿದೆ. ಈಗ ವುಡನ್‌ ಅಂಡ್‌ ಬ್ರೌನ್‌ ಕ್ರೀಂ, ಆರೆಂಜ್‌ ಅಂಡ್‌ ಕ್ರೀಂ, ರೆಡ್‌ ಅಂಡ್ ವೈಟ್‌. ಯೆಲ್ಲೋ ಅಂಡ್‌ ಬ್ರೌನ್‌, ಗ್ರೇ ಅಂಡ್‌ ಕ್ರೀಂ, ಪಿಸ್ತಾ ಅಂಡ್‌ ಕ್ರೀಮಿನಂತಹ ಬಣ್ಣಗಳನ್ನು ಬಹಳ ಇಷ್ಟಪಡಲಾಗುತ್ತದೆ.

ಹೊಸ ಟ್ರೆಂಡ್

modern-kids-room-4

ಈಗ ಡ್ರಾಯಿಂಗ್‌ ರೂಮ್ ನಲ್ಲಿ ಟಿ.ವಿ.ಯ ಟ್ರೆಂಡ್‌ ಅಷ್ಟಾಗಿ ಇಲ್ಲ. ಬೆಡ್‌ ರೂಮಿನಲ್ಲಿ ಬೆಡ್‌ ಗೆ ಎದುರು ವಾರ್ಡ್‌ ರೋಬ್‌ ಇರುವ ಕಾರಣದಿಂದಾಗಿ ಈಗ ಬೆಡ್‌ ಜೊತೆಗೇ ಟಿ.ವಿ. ಅಟ್ಯಾಚ್‌ ಆಗಿರಬೇಕು. ಈಗ ಅದೇ ಟ್ರೆಂಡ್‌ ಆಗಿದೆ. ಇದರ ಹೊರತಾಗಿ 3 ಬೆಡ್ ರೂಮ್ ಗಳ ಫ್ಲ್ಯಾಟ್‌ ಆಗಿದ್ದರೆ, ಒಂದು ಕೋಣೆಯನ್ನು ಹೋಮ್ ಥಿಯೇಟರ್‌ ಮಾಡಲಾಗುತ್ತದೆ. ಬೆಡ್‌ ರೂಮಿನಲ್ಲಿ ನೆಮ್ಮದಿಯಿಂದ ನಿದ್ರೆ ಮಾಡಬೇಕೆಂಬ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಗ್ರೇ, ಸ್ಕೈ, ಲೈಟ್‌ ಪಿಂಕ್‌, ಪೀಚ್‌ ನಂತಹ ಕಲರ್ಸ್‌ ಅಥವಾ ಯಾವುದಾದರೊಂದು ಗೋಡೆಯ ಮೇಲೆ ಹಸಿರು ಅಥವಾ ನಿಸರ್ಗದ ಚಿತ್ರಗಳ ವಾಲ್ ‌ಪೇಪರ್‌ ಲಗತ್ತಿಸಲಾಗುತ್ತದೆ. ಹೋಮ್ ಥಿಯೇಟರ್‌ ನಲ್ಲಿ ಗಾಢವರ್ಣಗಳು ಹೆಚ್ಚು ಚಾಲ್ತಿಯಲ್ಲಿವೆ.

ಪ್ರತಿಯೊಂದು ಮನೆಗೆ ಕೋಣೆಯ ಜೊತೆಗೆ ಬಾಲ್ಕನಿ ಕೂಡ ಇರುತ್ತದೆ. ಆದರೆ ಹೊಸ ಕಾನ್ಸೆಪ್ಟ್ ನಲ್ಲಿ ಟೆರೇಸ್‌ ಗಾರ್ಡನ್‌ ಇದರ ಸ್ಥಾನವನ್ನು ಪಡೆದುಕೊಂಡಿದೆ. ಅಲ್ಲಿ ಗಾರ್ಡನಿಂಗ್‌ ನ ಹವ್ಯಾಸವನ್ನು ಪೂರೈಸಿಕೊಳ್ಳಬಹುದಾಗಿದೆ.

ಮಿಕ್ಸ್ ಅಂಡ್ಮ್ಯಾಚ್

ಮನೆಯ ಪ್ರತಿಯೊಂದು ಕೋಣೆ ಹಾಗೂ ಮೂಲೆ ಮಹತ್ವದ್ದಾಗಿದೆ. ಬಾಥ್‌ ರೂಮ್ ಕೂಡ ಇಂಟೀರಿಯರ್‌ ನಿಂದ ಹೊರಗುಳಿದಿಲ್ಲ. ಬಾಥ್‌ ರೂಮಿಗಾಗಿ ಬಾಥ್‌ ಟಬ್‌ ಮತ್ತು ಆಕರ್ಷಕ ಆ್ಯಕ್ಸೆಸರೀಸ್‌ ಹಲವು ಡಿಸೈನ್‌ ಗಳಲ್ಲಿ ಲಭ್ಯವಿವೆ. ಪ್ರತಿಯೊಂದೂ ಮನೆಯಲ್ಲಿ ಬಾಥ್‌ ರೂವ್‌ ಮನೆಗೆ ತಕ್ಕಂತೆ ಇರಬೇಕು. ಇಂದು ಮಾರುಕಟ್ಟೆಯಲ್ಲಿ ಲೇಟೆಸ್ಟ್ ಡಿಸೈನಿನ ಬಾಥ್‌ ರೂಮ್ ಫಿಟಿಂಗ್ಸ್, ಬಾಥ್ ರೂಮ್ ಕಾರ್ನರ್‌, ಫರ್ನೀಚರ್‌, ಅಕ್ರೆಲಿಕ್‌ ಶವರ್‌ ಬೇಸಿನ್‌, ಬಾಥ್‌ ಟಬ್‌ ಹಾಗೂ ಶವರ್‌ ಮುಂತಾದವು ದೊರೆಯುತ್ತವೆ. ಹ್ಯಾಂಡ್‌ ಶವರ್‌ ನಲ್ಲೂ ಹಲವು ಪ್ರಕಾರದವು ದೊರೆಯುತ್ತವೆ. ಬಾಥ್‌ ರೂಮಿನ ಗೋಡೆಗಳು ಹಾಗೂ ನೆಲದ ಮೇಲೆ ಮ್ಯಾಟ್‌ ಫಿನಿಶ್‌ ಟೈಲ್ಸ್, ಸೋಪ್‌ ಸ್ಟೋನ್‌, ಕಲರ್ಸ್ ಮತ್ತು ಟೆಕ್ಸ್ ಚರ್‌ ನ್ನು ಕೂಡ ಮಿಕ್ಸ್ ಅಂಡ್‌ ಮ್ಯಾಚ್‌ ಮಾಡಬಹುದು.

ಇಂಟೀರಿಯರ್ಡಿಸೈನರ್

ಅರುಣ್‌ ಕುಮಾರ್‌ ಹೇಳುವುದೇನೆಂದರೆ, ಮನೆಯಲ್ಲಿ ವಾಸಿಸುವವರ ಭಾವನೆಗಳಿಗೂ ಕೂಡ ಇಂಟೀರಿಯರ್‌ ನಲ್ಲಿ ಸ್ಥಾನ ಕೊಡಬೇಕು. ಒಬ್ಬ ಆರ್ಕಿಟೆಕ್ಟ್ ಅಥವಾ ಇಂಟೀರಿಯರ್‌ ಡಿಸೈನರ್‌ ತನ್ನ ಮನಸ್ಸಿಗಿಂತ ಮನೆಯಲ್ಲಿ ವಾಸಿಸುವವರ ಭಾವನೆಗಳನ್ನೂ ಬೆರೆಸುವುದು ಸೂಕ್ತ. ಏಕೆಂದರೆ ಅವರಿಗೆ ಆ ಮನೆಯಲ್ಲಿ ಯಾವಾಗಲೂ ಹಬ್ಬದ ವಾತಾವರಣದ ಅನುಭೂತಿಯುಂಟಾಗಬೇಕು.

ಮೇಘಾ ಭಟ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ