ನನ್ನ ವಯಸ್ಸು 20 ವರ್ಷ. ನನ್ನ ಕೂದಲು ಬಹಳ ಉದುರಿ ಹೋಗಿದೆ ಮತ್ತು ಎಷ್ಟೋ ಕೂದಲು ಬೆಳ್ಳಗಾಗಿವೆ. ದಯವಿಟ್ಟು, ಯಾವುದಾದರೂ ಮನೆಯ ಮತ್ತು ಮಿತವ್ಯಯದ ಚಕಿತ್ಸೆ ಸೂಚಿಸಿ.

ಕೂದಲುದರುವುದರಿಂದ ಬೇಸರಿಸಬೇಡಿ. ಅನೇಕ ಸಲ ಚಿಕಿತ್ಸೆ ದುರ್ಬಲತೆ ಮತ್ತು ತೀಕ್ಷ್ಣ ಔಷಧಿಗಳ ನಿತ್ಯ ಸೇವನೆಯಿಂದಲೂ ಕೂದಲು ಉದುರುತ್ತವೆ. ಕೂದಲು ಚಿಕ್ಕದಾಗಿದ್ದರೆ ಯಾರಾದರೂ ಕೇಶ ಶೃಂಗಾರ ತಜ್ಞರನ್ನು ಕಂಡು ನಿಮ್ಮ ಮುಖಕ್ಕೊಪ್ಪುವ ಶೈಲಿಯಲ್ಲಿ ಕೂದಲು ಕತ್ತರಿಸಿಕೊಳ್ಳಿ. ಆಮೇಲೆ ಗೋರಂಟಿಯಿಂದ ಹೊಸ ಬಣ್ಣ ಕೊಡಿ, ಬಿಳಿ ಕೂದಲು ಮರೆಯಾಗುತ್ತದೆ ಮತ್ತು ಬಹು ಕಡಿಮೆ ಖರ್ಚಿನಲ್ಲಿ ಆಧುನಿಕ ಸೌಂದರ್ಯವನ್ನೂ ಪಡೆಯುವಿರಿ.

ನನ್ನ ಕಣ್ಣು ರೆಪ್ಪೆಗಳ ಕೂದಲಿನಲ್ಲಿ ಒಣಗಿದ ಹಿಪ್ಪೆ ಸೇರಿಕೊಳ್ಳುತ್ತದೆ. ಎಷ್ಟೋ ಸಲ ಕಣ್ಣುಗಳ ಒಳಗೆ ಬೀಳುತ್ತದೆ. ಹುಬ್ಬುಗಳ ಕೂದಲಿನಲ್ಲಿ ಹಿಪ್ಪೆ ದೂರ ಮಾಡಲು ಏನಾದರೂ ಉಪಾಯವಿದೆಯೇ?

ಕಣ್ಣುಗಳು ಅಮೂಲ್ಯವಾದ ಆಸ್ತಿ. ಇವುಗಳ ಬಗ್ಗೆ ಯಾವ ರೀತಿಯ ನಿರ್ಲಕ್ಷ್ಯ ಸಲ್ಲದು. ಅದೇ ರೀತಿ ಕಣ್ಣುಗಳ ಮತ್ತು ಕಣ್ಣುಗಳ ಸುತ್ತಮುತ್ತ, ಯೋಚನೆ ಮಾಡದೆ ಯಾವುದೇ ಪ್ರಯೋಗ ಮಾಡಬಾರದು. ನಿಮ್ಮ ಸಮಸ್ಯೆಯಿಂದ ನಿಮಗೆ ಹುಬ್ಬುಗಳ ಒಂದು ವಿಶೇಷ ಕಾಯಿಲೆ ಆಗಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಇದನ್ನು ಸಾಧಾರಣಾಗಿ ಸ್ಟೈ ಎಂದು ಕರೆಯುತ್ತಾರೆ. ಇದರಲ್ಲಿ ಹುಬ್ಬುಗಳ ತುದಿಯಲ್ಲಿ ಚರ್ಮ ಒಣಗಿದಂತಾಗುತ್ತದೆ. ಇದರ ಚಿಕಿತ್ಸೆಗೆ ಸೂಕ್ತ ನೇತ್ರ ವಿಶೇಷ ತಜ್ಞರನ್ನು ಕಾಣಬೇಕು. ಅಲಕ್ಷ್ಯ ಮಾಡಿದರೆ ರೆಪ್ಪೆಗಳ ತುದಿಯಲ್ಲಿ ಕೂದಲು ಉದುರುವುದು ಆರಂಭವಾಗುತ್ತದೆ.

ನನ್ನ ಮುಖದ ಮೇಲಿನ ಸಣ್ಣ ಸಣ್ಣ ಕೂದಲುಗಳಿಂದ ಬಹಳ ಯೋಚನೆ ಆಗಿದೆ. ಮುಖವನ್ನು ಎಷ್ಟು ಶುಭ್ರವಾಗಿಟ್ಟುಕೊಂಡರೂ ಕಪ್ಪು ಕೂದಲು ಇರುವುದರಿಂದ ಸ್ವಚ್ಛವಾಗಿ ಕಾಣುವುದೇ ಇಲ್ಲ. ಕೂದಲುಗಳನ್ನು ತೆಗೆಸಬಹುದೆ?

ಮುಖದ ಮೇಲಿನ ಕೂದಲುಗಳು ಬಹಳ ಚಿಕ್ಕವಾಗಿದ್ದರೆ ಅವುಗಳನ್ನು ಥ್ರೆಡಿಂಗ್‌ ಮಾಡಿಸಿ. ಕೂದಲು ಕಪ್ಪಗೆ ದಪ್ಪಗೆ ಉದ್ದವಾಗಿದ್ದರೆ ವ್ಯಾಕ್ಸಿಂಗ್‌ ಅಥವಾ ಎಲೆಕ್ಟ್ರೋಲಿಸಿಸ್‌ ಚಿಕಿತ್ಸೆಯಿಂದ ಕೀಳಬಹುದು. ಕೂದಲು ಮಧ್ಯಮ ಆಕಾರವಾಗಿದ್ದರೆ ಇದನ್ನು ಬ್ಲೀಚ್ ಮಾಡಿಸಬಹುದಷ್ಟೇ. ಬ್ಲೀಚ್‌ ಮಾಡಿಸಿದರೆ ಕೂದಲು ಮುಖದ ಜೊತೆ ಹೊಂದಿಕೊಳ್ಳಬೇಕು. ನೋಡಲು ಕೆಟ್ಟದಾಗಿ ಕಾಣಬಾರದು.

ನನ್ನ ಕೂದಲು ರೇಶಿಮೆಯಂತಿದೆ. ನನಗೆ ರೇಶಿಮೆಯಂಥ ಕೂದಲು ಇಷ್ಟವಿಲ್ಲ. ಕೂದಲು ಗುಂಗುರಾಗಿ ಮಾಡಿಸಲು ಇಷ್ಟ. ಗುಂಗುರು ಮಾಡಿಸಿದ ಮೇಲೆ ಎಷ್ಟು ಸಮಯದವರೆಗೆ ಹಾಗೇ ಉಳಿಯುತ್ತದೆ?

ಕೂದಲು ಉದ್ದವಾಗಿದ್ದವರಿಗೆ ಗುಂಗುರು ಕೂದಲು ಚೆನ್ನಾಗಿ ಕಾಣಿಸುವುದಿಲ್ಲ. ಆದ್ದರಿಂದ ನಿಮ್ಮ ಕೂದಲು ಉದ್ದವಾಗಿದ್ದರೆ ಕತ್ತರಿಸಿ ಮತ್ತು `ಫರ್ಮ್’ ಮಾಡಿಸಿರಿ. ಫರ್ಮ್ ಶಾಶ್ವತವಾಗಿ ಇರಬೇಕೋ, ತತ್ಕಾಲಕ್ಕೆ ಮಾತ್ರ ಇರಬೇಕೋ ಅಥವಾ ಕೆಲವಾರು ದಿನಗಳವರೆಗೆ ಇರಬೇಕೋ ಎಂಬುದು ನಿಮ್ಮ ಇಷ್ಟ ಮತ್ತು ಕೇಶ ಶೃಂಗಾರವನ್ನು ಅವಲಂಬಿಸಿದೆ. ಆದರೆ ಮೊದಲು ನೀವು ಡ್ರೈರ್‌ಸೆಟಿಂಗ್‌ ಅಥವಾ ಟೆಂಪರರಿ ಫರ್ವ್‌ ಮಾಡಿಸಿಕೊಳ್ಳಲೇಬೇಕು.

ನಾನು 21 ವರ್ಷದವಳು. ಕನ್ನಡಕ ಹಾಕುತ್ತೇನೆ. ಕಣ್ಣಿನ ದೃಷ್ಟಿ ಸಾಕಷ್ಟು ದುರ್ಬಲವಾಗಿದ್ದರಿಂದ ಕನ್ನಡಕದ ಗಾಜು ದಪ್ಪವಾಗಿ, ನೋಡಲು ಕೆಟ್ಟದಾಗಿ, ಕಾಣಿಸುತ್ತದೆ. ನಂಬರ್ಕಳೆಯಲು ಏನಾದರೂ ಉಪಾಯ ಇದೆಯೇ?

ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತ ಇದೆ. ಆದರೆ ನೀವು ಕೆಲವು ವ್ಯಾಯಾಮ ಮಾಡಬೇಕು. ಕಣ್ಣುಗಳ ಆರೋಗ್ಯದ ಬಗ್ಗೆ ಸದಾ ಗಮನವಿಡಬೇಕು. ದಿನ ಕಣ್ಣುಗಳ ವ್ಯಾಯಾಮ ಮಾಡಿ. ಊಟದಲ್ಲಿ ವಿಟಮಿನ್‌ `ಎ’ ಹೆಚ್ಚಾಗಿ ತೆಗೆದುಕೊಳ್ಳಿ. ದಪ್ಪ ಲೆನ್ಸಿನ ಕನ್ನಡಕ ಹಾಕಬಾರದೆಂದರೆ ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಳ್ಳಿ.

ಟಿಪ್ಸ್

ತಾಜಾ ಹಾಗೂ ನಳನಳಿಸುವ ಚರ್ಮಕ್ಕಾಗಿ ಜೇನುತುಪ್ಪಕ್ಕೆ ಗುಲಾಬಿ ಜಲ ಬೆರೆಸಿಕೊಂಡು ಮುಖಕ್ಕೆ 15 ನಿಮಿಷ ಹಚ್ಚಿಕೊಳ್ಳಿ, ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ಉನ್ನತ ಗೌರವರ್ಣಕ್ಕಾಗಿ ಸೌತೇರಸ, ಅರಶಿನ, ಡಾಬರ್‌ ಗುಲಾಬರಿ ಜಲ ಬೆರೆಸಿಕೊಂಡು ಮುಖಕ್ಕೆ ಸವರಿಕೊಳ್ಳಿ. 15, 20 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ, ಉತ್ತಮ ಹೊಳಪು ಕೂಡುತ್ತದೆ.

ನಾವು ಪ್ರತಿನಿತ್ಯ ಹೊರಗೆ ಓಡಾಡುವಾಗ ಕೊಳೆ, ಧೂಳು, ಮಾಲಿನ್ಯದ ಹೊಡೆತಕ್ಕೆ ಸಿಲುಕುತ್ತೇವೆ. ಇದರಿಂದ ಚರ್ಮಕ್ಕೆ ಆಗುವ ಹಾನಿ ತಪ್ಪಿಸಲು ಡಾಬರ್‌ ಗುಲಾಬರಿ ಗುಲಾಬಿ ಜಲದಿಂದ ಮೊದಲು ಮುಖ, ಮೈಕೈಗೆ ಚೆನ್ನಾಗಿ ಸವರಿಕೊಳ್ಳಿ. ಇದರಿಂದ ಚರ್ಮಕ್ಕೆ ಹೆಚ್ಚನ ಕಾಂತಿ ಬರುತ್ತದೆ.

1 ಚಮಚ ಹಾಲಿನ ಪುಡಿಗೆ, 1 ಚಮಚ ಕಡಲೆಹಿಟ್ಟು ಬೆರೆಸಿಕೊಂಡು 2 ಚಮಚ ಡಾಬರ್‌ ಗುಲಾಬರಿ ಗುಲಾಬಿಜಲ ಪೇಸ್ಟ್ ತಯಾರಿಸಿ, ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ನಂತರ ಚೆನ್ನಾಗಿ ತೊಳೆಯಿರಿ. ಇದರಿಂದ ನಿಮಗೆ ವ್ಯತ್ಯಾಸ ಚೆನ್ನಾಗಿ ತಿಳಿಯುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ