ನನಗೆ 19 ವರ್ಷ. ನನಗೆ ಹಸ್ತಮೈಥುನದ ಅಭ್ಯಾಸವಿದೆ. ಇದನ್ನು ಬಿಡಲು ಆಗುತ್ತಿಲ್ಲ. ಇದರಿಂದ ಯಾವುದೇ ಹಾನಿ ಇಲ್ಲ ತಾನೆ? ನನಗೆ ಸೂಕ್ತ ಸಲಹೆ ನೀಡಿ.

ಹಸ್ತಮೈಥುನ ಲೈಂಗಿಕ ಟೆನ್ಶನ್‌ ನಿವಾರಿಸುವ ಒಂದು ಸುಲಭ ಉಪಾಯ. ವಿವಾಹಕ್ಕೂ ಮುಂಚೆ ಇದೊಂದು ಸೇಫ್ಟಿ ್ವಾ್‌ಆಗಿದೆ. ಇದರಿಂದ ಪುರುಷತ್ವ ಕಡಿಮೆಯಾಗುವುದು, ಸ್ಮರಣಶಕ್ತಿ ಕಡಿಮೆಯಾಗುವುದು, ಯೋಚಿಸುವ ಶಕ್ತಿಯ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬುದು ತಪ್ಪು.

ನನಗೆ ಒಂದು ವರ್ಷದ ಗಂಡು ಮಗುವಿದೆ. ಅವನು ಹುಟ್ಟಿದ ಬಳಿಕ ನನ್ನಲ್ಲಿ ಚೈತನ್ಯವೇ ಹೊರಟು ಹೋದಂತಾಗಿದೆ. ಒಮ್ಮೊಮ್ಮೆ  ತಲೆ ಸುತ್ತಿ ಬಂದಂತಾಗುತ್ತದೆ. ಏನು ಯೋಚಿಸಲೂ ಮನಸ್ಸಾಗುತ್ತಿಲ್ಲ. ಸಾಮಾನ್ಯ ಕೆಲಸ ಕಾರ್ಯಗಳನ್ನು ಮಾಡುವುದೂ ಕಷ್ಟ ಎನಿಸುತ್ತದೆ. ಸ್ಥಿತಿಯಿಂದ ಪಾರಾಗಲು ನಾನೇನು ಮಾಡಬೇಕು ತಿಳಿಸಿ. ಆಹಾರಕ್ಕೆ ಸಂಬಂಧಪಟ್ಟ ಸಲಹೆಗಳನ್ನು ನೀಡಿ.

ನಿಮ್ಮ ವಿವರಣೆಯಿಂದ ತಿಳಿದುಬರುವ ಸಂಗತಿಯೆಂದರೆ ನೀವು ಬಹುಶಃ ರಕ್ತಹೀನತೆಯಿಂದ ಬಳಲುತ್ತಿರುವಿರಿ. ಗರ್ಭಾವಸ್ಥೆ, ಹೆರಿಗೆ ಹಾಗೂ ಆ ಬಳಿಕ ಮಗುವಿನ ಪಾಲನೆ ಪೋಷಣೆಯಲ್ಲಿ ನೀವು ಆಹಾರದ ಬಗ್ಗೆ ಅಷ್ಟೊಂದು ಗಮನ ನೀಡಿಲ್ಲ ಅನಿಸುತ್ತದೆ.

ಅಂದಹಾಗೆ ಮಹಿಳೆಯ ಜೀವನದಲ್ಲಿ ಈ ಎಲ್ಲ ಹೊಣೆಗಾರಿಕೆಗಳನ್ನು ನಿಭಾಯಿಸಲು ಹೆಚ್ಚಿನ ಕಬ್ಬಿಣಾಂಶ ಮತ್ತು ವಿಟಮಿನ್‌ ಗಳ ಅವಶ್ಯಕತೆ ಉಂಟಾಗುತ್ತದೆ. ಸಕಾಲದಲ್ಲಿ ಇದರ ಪೂರೈಕೆಯಾಗದಿದ್ದರೆ ದೇಹದಲ್ಲಿ ಹಿಮೋಗ್ಲೋಬಿನ್‌ ಕೊರತೆ ಉಂಟಾಗುತ್ತದೆ.

ರಕ್ತಹೀನತೆಯಿಂದಾಗಿ ದೇಹ ಚೈತನ್ಯಹೀನವಾಗುತ್ತದೆ. ಏನು ಕೆಲಸ ಮಾಡಲೂ ಮನಸ್ಸಾಗುವುದಿಲ್ಲ. ತಲೆ ಸುತ್ತು ಬಂದಂತಾಗುತ್ತದೆ. ತಲೆನೋವು ಬರಬಹುದು. ಈ ಕಾರಣದಿಂದ ಯಾವಾಗಲೂ ಸುಸ್ತು, ದಣಿ ಭಾಸವಾಗುತ್ತದೆ.

ನೀವು ರಕ್ತಹೀನತೆಯಿಂದ ಬಳಲುತ್ತಿದ್ದೀರೋ ಅಥವಾ ಬೇರಾವುದಾದರೂ ಸಮಸ್ಯೆಗೆ ತುತ್ತಾಗಿದ್ದಾರೋ ಎನ್ನುವುದನ್ನು ವೈದ್ಯರಿಂದ ರಕ್ತ ಪರೀಕ್ಷೆಯ ಮೂಲಕ ಕಂಡುಕೊಳ್ಳಬಹುದು.

ಗರ್ಭಾವಸ್ಥೆ, ಹೆರಿಗೆ, ಶಿಶುಪಾಲನೆ ಇವೆಲ್ಲದರಿಂದಾದ ನಿಶ್ಶಕ್ತಿಯನ್ನು ಹೋಗಲಾಡಿಸಲು ನಿಮ್ಮ ಊಟ ತಿಂಡಿಯ ಬಗ್ಗೆಯೂ ಗಮನ ಕೊಡಿ. ನೀವು ಸಸ್ಯಾಹಾರಿಯಾಗಿದ್ದರೆ ಹಾಲು, ಹಣ್ಣು, ತರಕಾರಿ, ಪನೀರ್‌, ಬೇಳೆಗಳು, ಅನ್ನ, ರೊಟ್ಟಿ ನಿಮ್ಮ ಅವಶ್ಯಕತೆಯನ್ನು ಪೂರೈಸುತ್ತವೆ. ಮಾಂಸಾಹಾರಿಯಾಗಿದ್ದರೆ ಗ್ರಿಲ್ ಮಾಡಿದ ಮಾಂಸ, ಮೀನು ಹಾಗೂ ಮೊಟ್ಟೆ ಸೇವಿಸಬಹುದು.

ನೀವು ಗಮನಿಸಬೇಕಾದ ಸಂಗತಿಯೆಂದರೆ ಕ್ಯಾಲರಿ ಪೂರ್ಣಗೊಳಿಸುವುದರ ಜೊತೆಗೆ ಪೌಷ್ಟಿಕ ಅಂಶಗಳಾದ ಕಾರ್ಬೋಹೈಡ್ರೇಟ್, ಪ್ರೋಟೀನ್‌, ಕೊಬ್ಬು, ವಿಟಮಿನ್‌ ಗಳು ಕೂಡಾ ಪೂರೈಕೆಯಾಗುವಂತೆ ನೋಡಿಕೊಳ್ಳಿ. ಆಗಲೇ ದೇಹ ಮತ್ತು ಮನಸ್ಸು ಆರೋಗ್ಯದಿಂದಿರುತ್ತದೆ.

ರಕ್ತಹೀನತೆ ಉಂಟಾದಾಗ ಕೆಲವು ತಿಂಗಳು ಕಬ್ಬಿಣಾಂಶ, ಪೇಲಿಕ್‌ ಆ್ಯಸಿಡ್‌ ಮತ್ತು ಕೆಲವು ಅಗತ್ಯ ವಿಟಮಿನ್‌ ಗಳ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ.

ನಾನು ರಕ್ತ ಪರೀಕ್ಷೆಗಾಗಿ ಒಂದು ಕ್ಲಿನಿಕ್ಲ್ಯಾಬ್ಗೆ ಹೋಗಿದ್ದೆ. ಅಲ್ಲಿನ ಲ್ಯಾಬ್ತಜ್ಞ 15 ನಿಮಿಷಗಳ ಹಿಂದೆ ಬೇರೊಬ್ಬರಿಂದ ರಕ್ತ ಪಡೆದ ಸಿರಿಂಜ್ನಿಂದಲೇ ರಕ್ತ ಪಡೆದುಕೊಂಡ. ಆಗಿನಿಂದ ನನಗೆ ಬಹಳ ಚಿಂತೆಯಾಗಿದೆ. ಇದು ನನಗೆ ಎಚ್ಐವಿ ಸೋಂಕನ್ನು ಉಂಟುಮಾಡಬಹುದೆ?

ಆ ಲ್ಯಾಬ್‌ ಟೆಕ್ನೀಶಿಯನ್‌ ಬೇರೊಬ್ಬರಿಂದ ಪಡೆದ ರಕ್ತದ ಸಿರಿಂಜ್‌ ನಿಂದಲೇ ನಿಮ್ಮ ರಕ್ತ ಪಡೆದಿದ್ದು ದೊಡ್ಡ ತಪ್ಪು. ನೀವು ಅವನನ್ನು ತಡೆದು ಹೊಸ ಡಿಸ್ಪೋಸಬಲ್ ಸಿರಿಂಜ್‌ ಬಳಸಲು ಸೂಚಿಸಬೇಕಿತ್ತು.

ಆದದ್ದು ಆಗಿಹೋಯಿತು. ಈಗ ಯಾವುದಾದರೂ ದೊಡ್ಡ ಆಸ್ಪತ್ರೆಗೆ ಹೋಗಿ ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳಿ. ಈ ನಿರ್ಲಕ್ಷ್ಯತನದ ಹೊರತಾಗಿಯೂ ನಿಮಗೆ ಏನೂ ಆಗಿಲ್ಲ, ಅನ್ನಿಸುತ್ತದೆ. ಒಂದು ವೇಳೆ ರಕ್ತ ಕೊಟ್ಟ ವ್ಯಕ್ತಿ ಎಚ್‌ಐವಿ ಪಾಸಿಟಿವ್ ‌ಆಗಿದ್ದರೆ ಮಾತ್ರ ಆ ಸಿರಿಂಜ್‌ ನಿಂದ ನಿಮಗೆ ಸೋಂಕಿನ ತೊಂದರೆ ಉಂಟಾಗಬಹುದು.

ನಾನು 28 ವರ್ಷದ ಮಹಿಳೆ. ಕೆಲವೇ ತಿಂಗಳಲ್ಲಿ ನನಗೆ ಮದುವೆಯಾಗಲಿದೆ. ನಾನು ಉದ್ಯೋಗಸ್ಥೆಯಾಗಿದ್ದು, ಬೇಗನೆ ಮಗು ಬೇಡ ಎಂದುಕೊಂಡಿದ್ದೇನೆ. ಹೀಗಾಗಿ ಯಾವ ದಿನಗಳಲ್ಲಿ ಸಮಾಗಮ ನಡೆಸಿದರೆ ಸುರಕ್ಷಿತ ಎಂಬುದನ್ನು ತಿಳಿಸಿ.

ಮಹಿಳೆಯ ಪ್ರತಿ ಋತುಚಕ್ರದ ಕೆಲವು ದಿನಗಳು ಮಾತ್ರ ಪುರುಷ ಸಂಪರ್ಕದಿಂದ ಮಹಿಳೆಯ ಗರ್ಭದಲ್ಲಿ ಸಂತಾನ ಬೀಜ ಮೊಳೆಯುತ್ತದೆ. ವೀರ್ಯಾಣುಗಳು ಸ್ತ್ರೀಯೊಳಗೆ 3-4 ದಿನಗಳ ಕಾಲ ಮಾತ್ರ ಅಂಡ ಭೇದಿಸುವ ಸಾಮರ್ಥ್ಯ ಹೊಂದಿರುತ್ತವೆ. ಬಳಿಕ ಅವು ನಷ್ಟವಾಗುತ್ತವೆ. ಸ್ತ್ರೀಯ ಅಂಡಾಶಯದಿಂದ ಬಿಡುಗಡೆಯಾದ ಅಂಡಾಣುಗಳು ಕೇವಲ 24 ಗಂಟೆ ಮಾತ್ರ ಜೀವಿತವಾಗಿರುತ್ತವೆ. ಆ ಅವಧಿಯಲ್ಲಿ ಅದು ವೀರ್ಯಾಣುವಿನೊಂದಿಗೆ ಮಿಲನಗೊಂಡಲ್ಲಿ ಮಾತ್ರ ಸಂತಾನೋತ್ಪತ್ತಿ ಸಾಧ್ಯ. ತಿಂಗಳಲ್ಲಿ ಕೇವಲ 4-5 ದಿನ ಮಾತ್ರ ಸ್ತ್ರೀ ಪುರುಷರ ಸಂಗಮದಿಂದ ಗರ್ಭ ನಿಲ್ಲುವ ಸಾಧ್ಯತೆ ಇದೆ.

ಆದರೆ ಅಂಡಾಣುಗಳು ಬಿಡುಗಡೆಯಾಗುವ ದಿನ ನಿಶ್ಚಿತವಾಗಿರುವುದಿಲ್ಲ. 28 ದಿನಗಳಿಗೆ ಸರಿಯಾಗಿ ಋತುಚಕ್ರ ಬರುವ ಮಹಿಳೆಯರಲ್ಲೂ 2-3 ದಿನ ಹಿಂದೆ ಮುಂದೆ ಆಗುತ್ತದೆ. ಒಮ್ಮೆ ಋತುಚಕ್ರ 24 ದಿನಕ್ಕೆ ಬಂದು ಇನ್ನೊಮ್ಮೆ 30 ದಿನಕ್ಕೆ ಬಂದರೆ ಅಂಡಾಣು ಬಿಡುಗಡೆಯಾಗುವ ದಿನ ಕಂಡುಹಿಡಿಯುವುದು ಕಷ್ಟ. ಹೀಗಾಗಿ ಸುರಕ್ಷಿತ ದಿನಗಳನ್ನು ಗುರುತಿಸುವುದೂ ಕಷ್ಟ.

ಒಂದು ವೇಳೆ ನಿಮ್ಮ ಋತುಚಕ್ರ ಸರಿಯಾದ ಲೆಕ್ಕಾಚಾರದಲ್ಲಿ 28 ದಿನಕ್ಕೆ ಬಂದರೆ ಆ ಋತುಚಕ್ರದ ಮೊದಲ 7 ದಿನಗಳು ಹಾಗೂ 21ನೇ ದಿನದಿಂದ ಹಿಡಿದು 28ನೇ ದಿನದರೆಗೆ ಸಂಪೂರ್ಣ ಸುರಕ್ಷಿತ ದಿನಗಳು. ಋತುಚಕ್ರ ಶುರುವಾಗುವ ದಿನವನ್ನೇ ಮೊದಲ ದಿನವೆಂದು ಎಣಿಕೆ ಮಾಡಬೇಕು.

ಆದರೆ ನವ ಜೋಡಿಗಳಿಗೆ ಅಷ್ಟೊಂದು ಸಂಯಮದಿಂದಿರಲು ಸಾಧ್ಯವಿಲ್ಲ. ಆದ್ದರಿಂದ ಈ ನೈಸರ್ಗಿಕ ಗರ್ಭನಿರೋಧಕ ವಿಧಾನ ಜನಪ್ರಿಯವಾಗಿಲ್ಲ. ನಿಮಗೆ ಅಷ್ಟು ಬೇಗ ಮಗು ಬೇಡವೆದರೆ ಯಾವುದಾದರೂ ಪ್ರಭಾವಿ ಗರ್ಭನಿರೋಧಕ ವಿಧಾನ ಅನುಸರಿಸಿ. ಈ ನಿಟ್ಟಿನಲ್ಲಿ ಮಾಲಾಡಿ, ನಿಮ್ಮವರಿಗೆ ಕಾಂಡೋಮ್ ವಿಶ್ವಾಸಾರ್ಹವಾಗಿವೆ.

 

ದೈಹಿಕ ಸಮಾಗಮದ ಸಮಯದಲ್ಲಿ ಕಳೆದ ಅನೇಕ ವಾರಗಳಿಂದ ನಮಗಿಬ್ಬರಿಗೆ ತೊಂದರೆಯಾಗುತ್ತಿದೆ. ಪತಿಯ ಗುಪ್ತಾಂಗದ ತ್ವಚೆ ಸುಲಿದಂತಾಗುತ್ತದೆ. ಜೊತೆಗೆ ಅದರಿಂದ ರಕ್ತದ ಹನಿಗಳು ಜಿನುಗುತ್ತವೆ. ನನಗೆ ಹೊಟ್ಟೆಯ ಹಿಂಭಾಗದಲ್ಲಿ ನೋವಾಗುತ್ತಿದೆ. ಸಮಸ್ಯೆ ಏಕೆ ಮತ್ತು ಇದರಿಂದ ಪರಿಹಾರ ಪಡೆಯುವುದು ಹೇಗೆಂದು ತಿಳಿಸಿ.

ನಿಮ್ಮ ಪತಿಯ ಗುಪ್ತಾಂಗದ ಮೇಲೆ ಯಾವುದೋ ಸಂದರ್ಭದಲ್ಲಿ ಗಾಯಾಗಿರಬಹುದು. ಗಾಯ ವಾಸಿಯಾದ ಬಳಿಕ ಅದು ಕಠೋರವಾಗಿರಬಹುದು. ಅದರಿಂದ ಸಮಾಗಮ ನಡೆಸುವಾಗ ಅಡಚಣೆಯುಂಟಾಗಿ ಅದರ ಚರ್ಮ ಸುಲಿಯುತ್ತಿರಬಹುದು. ಇದರಿಂದಲೇ ರಕ್ತದ ಹನಿಗಳು ಜಿನುಗುತ್ತಿರಬಹುದು.

ಇನ್ನೊಂದು ಸಾಧ್ಯತೆಯೆಂದರೆ ಅವರು ಅಥವಾ ನೀವು ಹರ್ಪಿಸ್‌ ಅಥವಾ ಬೇರೆ ಯಾವುದೋ ಲೈಂಗಿಕ ಸೋಂಕು ರೋಗಕ್ಕೆ ತುತ್ತಾಗಿರಬಹುದು. ನಿಮ್ಮ ಪತಿಯ ಸಮಸ್ಯೆ ಬಗ್ಗೆ ಒಬ್ಬ ಯೂರಾಲಜಿಸ್ಟ್ ಅಥವಾ ಸರ್ಜನ್‌ ರನ್ನು ಭೇಟಿಯಾಗಲು ತಿಳಿಸಿ. ಅವರ ದೈಹಿಕ ಪರೀಕ್ಷೆಯ ಬಳಿಕವೇ ಸಮಸ್ಯೆಯ ಮೂಲ ಕಂಡುಹಿಡಿಯಲು ಸಾಧ್ಯ.

ನಿಮ್ಮ ಹೊಟ್ಟೆಯ ಕೆಳಭಾಗದಲ್ಲಿ ನೋವುಂಟಾಗುವ ಸಮಸ್ಯೆಗೆ ಹಲವಾರು ಕಾರಣಗಳಿರಬಹುದು. ಅದರಲ್ಲಿ ಪೆಲ್ವಿಕ್‌ ಇನ್ ಫ್ಲಮೇಟರಿ ಡಿಸೀಸ್‌ ಸ್ತ್ರೀಯರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಕಿಬ್ಬೊಟ್ಟೆಯ ಬಳಿ ಇರುವ ಸಂತಾನೋತ್ಪತ್ತಿಯ ಅಂಗಗಳಲ್ಲಿ ಊತ ಕಾಣಿಸಿಕೊಳ್ಳುವುದರಿಂದ ಹೊಟ್ಟೆಯ ಕೆಳಭಾಗದಲ್ಲಿ ನೋವಾಗುತ್ತದೆ. ಹೀಗಾಗಿ ಸಮಾಗಮ ಕಷ್ಟವಾಗುತ್ತದೆ. ಈ ಸಮಸ್ಯೆಯ ಮೂಲ ಕಾರಣ ತಿಳಿಯಲು ನೀವು ಸ್ತ್ರೀರೋಗ ತಜ್ಞರ ಬಳಿ ಹೋಗಿ ಪರೀಕ್ಷಿಸಿಕೊಳ್ಳಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ