ರಾಗಿಣಿ ತನ್ನ ಪತಿಗೆ SMS ಕಳುಹಿಸಿದಳು, “ಎಷ್ಟು ಹೊತ್ತಿಗೆ ಬರ್ತೀರ?”
ಅವಳ ಗಂಡ ರಾಜೇಶ್ ತಕ್ಷಣ SMS ಮೂಲಕ ಹೀಗೆ ಉತ್ತರಿಸಿದ, “20-25 ನಿಮಿಷಗಳಲ್ಲಿ ಬಂದುಬಿಡ್ತೀನಿ, ಹ್ಞಾಂ, ಒಂದು ಪಕ್ಷ ಇನ್ನೂ ತಡವಾದರೆ ಇದೇ SMS ಸಂದೇಶವನ್ನು ಮತ್ತೊಮ್ಮೆ ಓದಿಕೊ.”
ಪತಿ ಪತ್ನಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು.
ಪತ್ನಿ : ಡಿಯರ್, ಈಗ ನೀವೇನು ಮಾಡ್ತಿದ್ದೀರಿ?
ಪತಿ : ಡಾರ್ಲಿಂಗ್, ಇವತ್ತು ಆಫೀಸ್ ನಲ್ಲಿ ಸಿಕ್ಕಾಪಟ್ಟೆ ಕೆಲಸ ಜಾಸ್ತಿ…. ಸಾಕಾಗಿಹೋಗಿದೆ. ಅಂದಹಾಗೆ ನೀನೇನು ಮಾಡ್ತಿದ್ದಿ ಸ್ವೀಟ್ ಹಾರ್ಟ್?
ಪತ್ನಿ : ನಾನು ಕ್ಲಬ್ ನಲ್ಲಿದ್ದೀನಿ ಡಿಯರ್, ಜಸ್ಟ್ ನಿಮ್ಮ ಹಿಂದುಗಡೆ!
ಕಿರಣ್ : ಇದಕ್ಕೆ ಉದಾಹರಣೆ ಕೊಡು ನೋಡೋಣ…. ದುಃಖ ಎಂಬುದು ನಮ್ಮ ಶಾಶ್ವತ ಸಂಗಾತಿ, ಸುಖ ಎಂಬುದು ಯಾವಾಗಲೋ ಒಮ್ಮೊಮ್ಮೆ ಬಂದುಹೋಗುತ್ತದೆ.
ಅರುಣ್ : ಮದುವೆ ಆದಾಗಿನಿಂದ ನನ್ನ ಹೆಂಡತಿ ಸದಾ ನನ್ನ ಜೊತೆಗಿರುತ್ತಾಳೆ, ಆದರೆ ಅವಳ ತಂಗಿ ಯಾವಾಗಲೋ ಒಮ್ಮೊಮ್ಮೆ ಬಂದು ಹೋಗುತ್ತಾಳೆ.
ಒಂದು ಕಂಪನಿ ಹೀಗೆ ಜಾಹೀರಾತು ಕೊಟ್ಟಿತು. ಮದುವೆಯಾದ ಗಂಡಸರು ಮಾತ್ರ ಅರ್ಜಿ ಸಲ್ಲಿಸಿ. ಈ ಜಾಹೀರಾತು ಓದಿ ಒಬ್ಬ ಮಹಿಳೆ ಕೋಪದಿಂದ ಕಂಪನಿಯ ಮಾಲೀಕರ ಬಳಿ ಬಂದು ಕೇಳಿದಳು. ನೀವು ಮದುವೆಯಾದ ಪುರುಷರೇ ಅರ್ಜಿ ಸಲ್ಲಿಸಿ ಅಂತ ಏಕೆ ಹಾಕಿದ್ರಿ? ಮಹಿಳೆಯರು ಕೆಲಸ ಮಾಡೋಕೆ ಆಗಲ್ವಾ?
ಮಾಲೀಕರು : ಹಾಗಲ್ಲಮ್ಮ , ನಮ್ಮ ನೌಕರರು ನಮ್ಮ ಎಲ್ಲಾ ಆದೇಶಗಳನ್ನೂ ಪಾಲಿಸಬೇಕೂಂತ ಬಯಸ್ತೀವಿ. ಮದುವೆಯಾದ ಗಂಡಸರಿಗೆ ಅದು ಚೆನ್ನಾಗಿ ಅಭ್ಯಾಸ ಆಗಿರುತ್ತದೆ. ಅದಲ್ಲದೆ, ಎದುರಿಗೆ ಇರೋರು ಎಷ್ಟು ಕಿರುಚಾಡುತ್ತಿದ್ದರೂ ತಾವು ಹೇಗೆ ತೆಪ್ಪಗೆ ಇರಬೇಕೂಂತ ಕೂಡ ಅವರಿಗೆ ಗೊತ್ತಿರುತ್ತದೆ.
ಉಮಾಶಂಕರ್ : ಅದೆಲ್ಲ ಸರಿ, ಉತ್ತರ ಭಾರತದಲ್ಲಿ ಮದುವೆಗೆ ಮುಂಚೆ ವರನನ್ನು ಕುದುರೆಯ ಮೇಲೆ ಕೂರಿಸಿ ಕರೆತರುತ್ತಾರಂತಲ್ಲ…. ಯಾಕೆ?
ಶಿವಶಂಕರ್ : ………………..
ಪ್ರಭುಶಂಕರ್ : ……………….
ಗಿರಿಜಾ ಶಂಕರ್ : ………………..
ಮಣಿ ಶಂಕರ್ : …………………..
ಹರಿ ಶಂಕರ್ : ಅವನಿಗೆ ತಪ್ಪಿಸಿಕೊಳ್ಳಲು ಕಟ್ಟ ಕಡೆಯ ಅವಕಾಶ ಕೊಟ್ಟು ನೋಡ್ತಾರೆ ಅನ್ಸುತ್ತೆ……….
ಕಾಲೋನಿಯ ಮಹಿಳಾ ಅಧ್ಯಕ್ಷರಾಗಿ ಮಿಸೆಸ್ ವರ್ಮಾ ಆಯ್ಕೆಗೊಂಡರು. ಅವರ ಸಂದರ್ಶನ ಪಡೆಯಲೆಂದು ಅಲ್ಲಿನ ಸ್ಥಳೀಯ ಪತ್ರಿಕಾ ವರದಿಗಾರರು ಆಕೆಯನ್ನು ಸುತ್ತುವರಿದರು.
“ನಿಮ್ಮ ದೃಷ್ಟಿಯಲ್ಲಿ ಪತಿ ಅಂದ್ರೆ…..?”
“ಪತಿ! ಬಿಡಿ, ಪತಿ ಅಂದ್ರೆ ಒಂದು ತರಹ ಗೂಬೆ ಅಂದ್ಕೊಳ್ಳಿ,” ಮಿಸೆಸ್ ವರ್ಮಾ ನಿರ್ವಭಾವುಕರಾಗಿ ಉತ್ತರಿಸಿದರು.
“ವಾಟ್?!” ಒಮ್ಮೆಲೇ 2-3 ಧ್ವನಿಗಳು ಮೊಳಗಿದವು.
“ಏ ಅಷ್ಟೂ ತಿಳಿಯಲ್ವೇ….? ಪತಿರಾಯನಿಗೆ ಪತ್ನಿಯ ಸುಗುಣಗಳು ರಾತ್ರಿ ಮಾತ್ರ ತಾನೇ ಕಂಡುಬರುವುದು?” ಮಿಸೆಸ್ ವರ್ಮಾ ಹೀಗೆ ಬೋಲ್ಡಾಗಿ ಉತ್ತರಿಸುವುದೇ…..?
ಉಮೇಶ್ : ಯಾವ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳುತ್ತಾನೋ ಅವನನ್ನು ಏನಂತಾರೇ?
ಸುರೇಶ್ : ಪ್ರಾಮಾಣಿಕ.
ಉಮೇಶ್ : ತನ್ನ ತಪ್ಪು ಇರಬಹುದು ಅಥವಾ ಬೇರೆಯವರದೇ ಆಗಿರಬಹುದು, ಆದರೂ ಕ್ಷಮೆ ಕೇಳುವಂಥ ವ್ಯಕ್ತಿಯನ್ನು ಏನಂತಾರೆ?
ಸುರೇಶ್ : ಬುದ್ಧಿವಂತ.
ಉಮೇಶ್ : ಭೇಷ್…ಭೇಷ್! ಹಾಗಾದರೆ ಇದನ್ನು ಹೇಳು… ಯಾವ ವ್ಯಕ್ತಿ ಒಂದಿಷ್ಟೂ ತಪ್ಪು ಮಾಡದೆಯೇ ಮತ್ತೆ ಮತ್ತೆ ಕ್ಷಮೆ ಕೋರುತ್ತಾನೋ ಅವನನ್ನು ಏನಂತಾರೆ?
ಸುರೇಶ್ : ನವವಿವಾಹಿತ ಪತಿ!
ರಮಣ : ಸಾರ್, ನಾನು ನಿಮ್ಮ ಮಗಳನ್ನು 20 ವರ್ಷದಿಂದ ಪ್ರೇಮಿಸುತ್ತಿದ್ದೇನೆ.
ಪರಂಧಾಮಯ್ಯ : ಅದಕ್ಕೆ….. ಈಗೇನು ಮಾಡಬೇಕು ಅಂತಿಯಾ?
ರಮಣ : ಮದುವೆ ಮಾಡಿಸಿ ಅಂತ ಕೇಳಕ್ಕೆ ಬಂದೆ….
ಪರಂಧಾಮಯ್ಯ : ಹೋಗಯ್ಯ, ಪೆನ್ಶನ್ ಮಂಜೂರು ಮಾಡುವ ಆಫೀಸು ಮುಂದಿನ ರಸ್ತೆಯಲ್ಲಿದೆ. ಬದುಕುವ ದಾರಿ ನೋಡೋದು ಬಿಟ್ಟು ಈಗ್ಯಾಕೆ ನಿನಗೆ ಜೀವಾವಧಿ ಬಂಧನ……?
ನ್ಯಾಯಾಧೀಶರು : ಅಲ್ಲಯ್ಯ, ನಿನ್ನಿಂದಲೇ ಆ್ಯಕ್ಸಿಡೆಂಟ್ ಆದದ್ದು ಅಂತ ಆಪಾದನೆ ಇದೆ, ನೀನು ನೋಡಿದ್ರೆ ವೇಗವಾಗಿ ಕಾರು ಓಡಿಸುತ್ತಲೇ ಇರಲಿಲ್ಲ ಅಂತೀಯ. ಅದನ್ನು ಹೇಗೆ ಪ್ರೂವ್ ಮಾಡ್ತೀಯ?
ಆಪಾದಿತ : ಸಾರ್, ಸತ್ಯವಾಗ್ಲೂ ಹೇಳ್ತಿದ್ದೀನಿ… ನಾನು ನನ್ನ ಹೆಂಡತಿಯನ್ನು ಅವಳ ತವರುಮನೆಯಿಂದ ನಮ್ಮ ಮನೆಗೆ ವಾಪಸ್ಸು ಕರೆತರ್ತಿದ್ದೆ ಸಾರ್…. ಅಷ್ಟರಲ್ಲಿ….
ನ್ಯಾಯಾಧೀಶರ : ದಟ್ಸ್ ಆಲ್…… ಕೇಸ್ ಡಿಸ್ ಮಿಸ್!
ಪರಮೇಶನ ಹೆಂಡತಿ ಪ್ರತೀಕ್ಷಾ ಮಹಾ ಸಂಶಯ ಸ್ವಭಾವದವಳು, ಯಾರು ಏನೇ ಹೇಳಿದರೂ ಅವಳ ತಲೆಹೊಕ್ಕು ಅನುಮಾನದ ಭೂತ ಇಳಿಯುತ್ತಲೇ ಇರಲಿಲ್ಲ. ಒಂದು ದಿನ ಸಂಜೆ ಅವಳು ಆಫೀಸಿನಿಂದ ಮನೆಗೆ ಮರಳಿದ ಗಂಡನ ಕೋಟ್ ನಲ್ಲಿ ಏನಾದರೂ ಉದ್ದದ ಕೂದಲು ಸಿಕ್ಕೀತೇ ಎಂದು ಹುಡುಕಾಡತೊಡಗಿದಳು.
ಎಷ್ಟು ಹುಡುಕಿದರೂ ಉದ್ದದ ಕೂದಲು ಸಿಕ್ಕದಾಗ ಗೊಣಗತೊಡಗಿದಳು, “ಓಹೋ…ಹೀಗೋ ವಿಷಯ! ಇತ್ತೀಚೆಗೆ ನೀವು ಬಾಲ್ಡ್ ಆಗಿರುವ ಹೆಣ್ಣಿನ ಜೊತೆ ಅಫೇರ್ ನಡೆಸ್ತಿದ್ದೀರಿ ಅಂತಾಯ್ತು…..”
ಮತ್ತೆರಡು ದಿನಗಳ ನಂತರ ಆಕೆ ಮತ್ತೆ ಆತನ ಕೋಟಿನಲ್ಲಿ ಲೇಡೀಸ್ ಪರ್ಫ್ಯೂಮ್ ಪರಿಮಳ ಸಿಗಬಹುದೇ ಎಂದು ಹಲವು ಸಲ ಮೂಸಿ ಮೂಸಿ ನೋಡಿದಳು. ಆದರೆ ಏನೂ ಸಿಗಲಿಲ್ಲ. ಅಷ್ಟಕ್ಕಾದರೂ ಸುಮ್ಮನೆ ಬಿಡಬಾರದೆ? ಅಕೆ ಮತ್ತೆ ಗೊಣಗಿದಳು, “ಓ…. ಗೊತ್ತಾಯ್ತು ಬಿಡಿ, ಆ ನಿಮ್ಮ ಬಾಲ್ಡ್ ಗರ್ಲ್ ಫ್ರೆಂಡ್ ಪರ್ಫ್ಯೂಮ್ ಸಹ ಬಳಸದ ಮಹಾ ಜಿಪುಣಿ ಇರಬೇಕಲ್ವೇ…..?”
ಒಬ್ಬ ಜಿಪುಣಿ ಹುಡುಗಿಗೆ ಅದೇ ಓಣಿಯ ಜಿಪುಣ ಹುಡುಗನೊಂದಿಗೆ ಗಾಢ ಪ್ರೇಮವಾಯಿತು.
ಜಿಪುಣಿ : ನಮ್ಮದು ಕೊನೆ ಬಿಲ್ಡಿಂಗ್ ನ ಸೆಕೆಂಡ್ ಫ್ಲೋರ್ ಮನೆ. ನಮ್ಮ ಅಪ್ಪಾಜಿ ಮನೆಯಲ್ಲಿ ಇಲ್ಲದಿರುವಾಗ ನಾನು ಮೇಲಿನಿಂದ ಒಂದು ನಾಣ್ಯ ಬೀಳಿಸುತ್ತೇನೆ, ಆ ಸದ್ದು ಕೇಳಿಸಿಕೊಂಡ ತಕ್ಷಣ ನೀನು ಮೇಲೆ ಬಂದುಬಿಡು.
ಜಿಪುಣ : ಆಯ್ತು, ಹಾಗೇ ಮಾಡ್ತೀನಿ.
ಅದೇ ಸಂಜೆ ಜಿಪುಣಿ ಮಹಡಿಯಿಂದ ನಾಣ್ಯ ಬೀಳಿಸಿದ್ದು ಗೊತ್ತಾಗಿ ಜಿಪುಣ ಓಡೋಡಿ ಬಂದ. ಆದರೆ ಎಷ್ಟು ಹೊತ್ತಾದರೂ ಅವನು ಮೆಟ್ಟಿಲು ಹತ್ತಿ ಮಹಡಿ ಮನೆಗೆ ಬರಲೇ ಇಲ್ಲ. ಅಂತೂ 1-5 ನಿಮಿಷಗಳ ನಂತರ ಬಂದ.
ಜಿಪುಣಿ : ಅರೆ, ನೀನೇಕೆ ಮೇಲೆ ಬರಲು ಇಷ್ಟು ತಡ ಮಾಡಿದೆ? ನಮ್ಮಪ್ಪ ಬಂದುಬಿಟ್ರೆ…..?
ಜಿಪುಣ : ನೀನು ಮೇಲಿನಿಂದ ಬೀಳಿಸಿದೆಯಲ್ಲ….. ಆ ನಾಣ್ಯಕ್ಕಾಗಿ ನಾನು ಕೆಳಗೆ ಕಾಂಪೌಂಡ್ ಬಳಿ ಹುಡುಕಾಡುತ್ತಿದ್ದೆ, ಹಾಳಾದ್ದು ಸಿಗಲೇ ಇಲ್ಲ.
ಜಿಪುಣಿ : ಅದಾ? ಅದಕ್ಕೆ ದಾರ ಕಟ್ಟಿ ಜೋಪಾನವಾಗಿ ಕೆಳಗೆ ಇಳಿಬಿಟ್ಟಿದ್ದೆ, ಆಗಲೇ ಅದನ್ನು ತೆಗೆದುಕೊಂಡುಬಿಟ್ಟೆ!
ಸುಧೀರ್ : ಜಿಲೇಬಿ, ಜಹಾಂಗೀರ್ ನ್ನು `ಲೇಡೀಸ್ ಡಿಶ್’ ಅಂತಾರಲ್ಲ…. ಯಾಕೆ?
ವಿಜಯ್ : ಅವು ನೋಡಲು ಸರಳವಾಗಿರದೆ ಸೊಟ್ಟಂಪಟ್ಟ ಸುತ್ತಿಕೊಂಡಿರುತ್ತವೆ, ಆದರೂ ಬಲು ಸ್ವೀಟು!