ಅಂತೂ ಮೌನೀಗೆ ಮದುವೆ ಅಂತೆ

ಇತ್ತೀಚೆಗೆ ಬಾಲಿವುಡ್‌ ನಲ್ಲಿ ಎಲ್ಲೆಲ್ಲೂ ಹೊಸ ಅಲೆ ಉಕ್ಕುತ್ತಿದೆ, ಅದುವೇ ಮದುವೆಗಳ ಮ್ಯಾಜಿಕ್‌! ಅಯ್ಯೋ….. ಕೊರೋನಾ ಇದೆ ಅಂತೀರಾ? ಅದರ ಪಾಡಿಗೆ ಅದಿರುತ್ತೆ ಬಿಡಿ. ಇದೀಗ ಎಲ್ಲೆಲ್ಲೂ ಮೌನೀಯ ಮದುವೆಯದ್ದೇ ಮಾತು. ಸುದ್ದಿಗಾರರ ಪ್ರಕಾರ, ಮೌನೀ ಇಷ್ಟರಲ್ಲ ತನ್ನ ಬಾಯ್‌ ಫ್ರೆಂಡ್‌ ಸೂರಜ್‌ ನಂಬಿಯಾರ್‌ ಜೊತೆ ಸಪ್ತಪದಿ ತುಳಿಯಲಿದ್ದಾಳೆ. ಅತ್ತ ಮೌವೀ ತನ್ನ ಅಭಿಮಾನಿಗಳ ಸಸ್ಪೆನ್ಸ್ ಹೆಚ್ಚಿಸಲು, ತನ್ನ ಮದುವೆ ಸುದ್ದಿ ಹಬ್ಬುತ್ತಿದ್ದಂತೆ, ಅವಳು ಹಳದಿ ಬಣ್ಣದ ಬಿಕಿನಿಯಲ್ಲಿ ತನ್ನ ಫೋಟೋವನ್ನು FBಗೆ ಹಂಚಿಕೊಂಡಳು. ಇವಳ ಈ ಹಳದಿ ಡ್ರೆಸ್‌ ಏನು ಹೇಳುತ್ತಿದೆ ಎಂಬುದನ್ನು ಕಾಲವೇ ಹೇಳಬೇಕಷ್ಟೆ.

ಪ್ರೇಮಿಸಿದ ಮೇಲೆ ಅಡಗಿಸ ಬೇಕೇಕೆ?

rakul1

ಅಂತೂ ಕೊನೆಗೂ ರಕುಲ್ ‌ಪ್ರೀತ್‌ ತಾನು ಪ್ರೇಮಿಸುತ್ತಿದ್ದ ಜಾಕಿ ಭಗ್ನಾನಿಯ ಜೊತೆಗಿನ ಸಂಬಂಧವನ್ನು ಖುಲ್ಲಂಖುಲ್ಲ ಒಪ್ಪಿಕೊಳ್ಳುವ ಧೈರ್ಯ ತೋರಿದ್ದಾಳೆ. ರಕುಲ್‌, ಇಷ್ಟು ಬೇಗ ಗುಟ್ಟೇಕೆ ಬಿಟ್ಟುಕೊಟ್ಟೆ? ಸುದ್ದಿಗಾರರು ಅದನ್ನು ಬಣ್ಣ ಬಣ್ಣವಾಗಿ ಹರಡಲು ಇನ್ನಷ್ಟು ಅವಕಾಶ ಕೊಡಬೇಕಿತ್ತು. ಇರಲಿ, ಸರಿಯಾದ ಸಮಯದಲ್ಲಿ ಸಂಗಾತಿಗೆ ಸಾಥ್‌ ನೀಡಿರುವೆ, ಈ ಕೊರೋನಾ ಹಾಗೂ ಆರ್ಥಿಕ ಅಭಾವದ ನಡುವೆ ನಾಳೆ ಏನಾಗಲಿದೆಯೋ ಗೊತ್ತಿಲ್ಲ. ಜಾಕಿ ಸ್ವತಃ ನಿರ್ಮಾಪಕನೂ ಆಗಿರುವುದರಿಂದ, ನಾಳೆ ಇವಳ ಚಿತ್ರಗಳಿಗೆ ತಾನೇ ಹಣ ಹೂಡಿದರೂ ಆಶ್ಚರ್ಯವೇ ಇಲ್ಲ!

ಸಲ್ಲೂಗೆ ಉರುಳಾದ ದಕ್ಷಿಣದ ಅಲ್ಲು

Allu-1

ಸಲ್ಮಾನ್‌ ಖಾನ್‌ ನ ಭಾರಿ ಸ್ಟಾರ್ಡಂನ `ಅಂತಿಂ’ ಚಿತ್ರ ದಯನೀಯವಾಗಿ ನೆಲ ಕಚ್ಚಿದರೆ, ಅತ್ತ ದಕ್ಷಿಣದ ಮೆಗಾಸ್ಟಾರ್‌ ಅಲ್ಲು ಅರ್ಜುನ್‌ ನ `ಪುಷ್ಪಾ’ ಚಿತ್ರ ಕೇವಲ ದಕ್ಷಿಣದವರನ್ನಷ್ಟೇ ಅಲ್ಲ, ಅದರ ಡಬಲ್ ಚಿತ್ರ ಉತ್ತರದವರನ್ನೂ ದಂಬುಬಡಿಸಿದೆ! ಪರಿಣಾಮ…. ಉತ್ತರದ ಘಟಾನುಘಟಿ ಸ್ಟಾರ್‌ ಗಳೆಲ್ಲ ಈಗ ದಕ್ಷಿಣದ ಹಿಟ್‌ ಚಿತ್ರಗಳ ರೀಮೇಕ್‌ ನಲ್ಲಿ ನಟಿಸಲು ತುದಿಗಾಲಲ್ಲಿ ಕಾಯುತ್ತಿದ್ದಾರೆ! ಅತ್ತ ಅರ್ಜುನನ ಧಿಮಾಕು ನೋಡಿ, ಅವನನ್ನು ಯಶಸ್ವೀ ರೀಮೇಕ್‌ ಚಿತ್ರಗಳ ಬಗ್ಗೆ ಕೇಳಿದಾಗ, ತಾನು ಅಂಥದ್ದರಲ್ಲಿ ನಟಿಸೋದೇ ಇಲ್ಲ ಅಂದುಬಿಟ್ಟ! ಸಲ್ಲೂನ `ಅಂತಿಂ’ ಚಿತ್ರಕ್ಕೆ ಅಲ್ಲುನ `ಪುಷ್ಪಾ’ ಪೈಪೋಟಿ ನೀಡದಂತೆ ಏನೇನೋ ಸರ್ಕಸ್‌ ಮಾಡಲಾಯಿತು…. ಆದರೆ ಜನ ಮಾತ್ರ ಸಲ್ಲೂನನ್ನು ಬದಿಗೊತ್ತಿ ಅಲ್ಲುಗೆ ಜೈಕಾರ ಹಾಕಿದರು!

ಎಲ್ಲಿ ಹೋಯ್ತು ಈಶಾಳ ಇನ್ನರ್ವೇರ್‌?

ಇತ್ತೀಚೆಗೆ ಈಶಾ ಗುಪ್ತ ಕೋವಿಡ್‌ ಪಾಸಿಟಿವ್ ‌ಆಗಿದ್ದಳು. ತನ್ನನ್ನು ತಾನು ಮನೆಯಲ್ಲೇ ಬಂಧಿ ಆಗಿಸಿಕೊಂಡಳು. ಅವಳು ಇತರರಂತೆ ಒಂಟಿತನವನ್ನು ತನ್ನ ಮೇಲೆ ಹೇರಿಕೊಳ್ಳಲಿಲ್ಲ. ಇದಕ್ಕಾಗಿ ಅವಳು FB ‌ಆಸರೆ ಪಡೆದಳು. ತನ್ನ ಫೋಟೋಗಳನ್ನು ಅಲ್ಲಿ ಸತತ ಪೋಸ್ಟ್ ಮಾಡತೊಡಗಿದಳು. ಈ ಚಿತ್ರ ಗಮನಿಸಿ, ಬೇಕೆಂದೇ ಇನ್ನರ್‌ ವೇರ್‌ ಇಲ್ಲದ ಶರ್ಟ್‌ ಧರಿಸಿ ಇಲ್ಲಿ ಪೋಸ್ಟ್ ಹಂಚಿದ್ದಾಳೆ. ತಾನು ಈ ಕ್ಷಣಗಳನ್ನೂ ಎಂಜಾಯ್‌ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾಳೆ. ಕೆಲವು ಮಡಿವಂತ ಅಭಿಮಾನಿಗಳಿಗೆ ಇವಳ ಈ ಅವತಾರದ ಫೋಟೋ ಇಷ್ಟವಾಗಲಿಲ್ಲ. ಒಬ್ಬ ಹೆಣ್ಣು 4 ಗೋಡೆಗಳ ಮಧ್ಯೆ ತನಗೆ ಬೇಕಾದಂತೆ ಫೋಟೋ ಕ್ಲಿಕ್ಕಿಸುವ ದರ್ಪ ತೋರಿರುವುದು, ಮಡಿವಂತರಿಗೆ ಸರಿ ಕಾಣುತ್ತಿಲ್ಲ!

ಅಸಲಿ ಹೀರೋ ಬೊಬ್ಬೆ ಹಾಕುವುದಿಲ್ಲ!

aaushman1

ಬಾಲಿವುಡ್‌ ನ ಹಲವಾರು ಕಲಾವಿದರು, ಒಂದಿಷ್ಟು ಏನೋ ಸಾಧನೆ ಮಾಡಿ, ಅದನ್ನೇ ದೊಡ್ಡದಾಗಿ ತೋರಿಸಿಕೊಳ್ಳಲು ಹಾತೊರೆಯುತ್ತಾರೆ. ಅದೇ ಕೆಲವು ಅಪರೂಪದ ಕಲಾವಿದರು ಏನೇ ಉತ್ತಮ ಸಾಧನೆ ಮಾಡಿದರೂ ಎಲೆ ಮರೆಯ ಕಾಯಿ ಹಾಗಿರುತ್ತಾರೆ. ನಮ್ಮ ಆಯುಷ್ಮಾನ್‌ ಖುರಾನಾ ಇಂಥದೇ ಒಬ್ಬ ನಟ. ಈತ FB‌ನಲ್ಲಿ ತಾನು ನಿಂತದ್ದು ಕೂತದ್ದನ್ನೆಲ್ಲ ಫೋಟೋ ಹಾಕಿ ಬೊಬ್ಬೆ ಹೊಡೆಯುವುದಿಲ್ಲ. ಯಾರು ಇಲ್ಲಿ ನೆಲೆಯೂರಲು ಬಯಸುತ್ತಾರೋ ಅಂಥವರಿಗೆ ನೆರವಾಗಲು ಈತ ಯತ್ನಿಸುತ್ತಾನೆ. ಅನೇಕ ವರ್ಷಗಳಿಂದ ಹೀಗೆಯೇ ಮಾಡಿಕೊಂಡು ಬರುತ್ತಿದ್ದಾನೆ. ಅದರ ಬಗ್ಗೆ ಯಾರಿಗೂ ಸಣ್ಣ ಸುಳಿವು ನೀಡಲಿಲ್ಲ! ಇದಪ್ಪ ಘನ ಗಾಂಭಿರ್ಯ ಅಂದ್ರೆ…. ಬೇರೆಯವರಾಗಿದ್ದರೆ ತಾವು ಕಡ್ಡಿಯಷ್ಟು ಮಾಡಿದ್ದರೆ, ಅದಕ್ಕೆ ಗುಡ್ಡದಷ್ಟು ಪ್ರಚಾರ ಗಿಟ್ಟಿಸುತ್ತಿದ್ದರು.

ಏನಾದರೊಂದನ್ನು ನೆಟ್ಟಗೆ ಮಾಡು!

govinda1

ವಿಶ್ವದಲ್ಲಿ 2 ಬಗೆಯ ಜನರಿರುತ್ತಾರೆ ಮೊದಲನೆಯವರು ಯಶಸ್ವಿ ಆಗುವವರೆಗೂ ಏನಾದರೂ ಕಷ್ಟ ಪಡುತ್ತಿರುತ್ತಾರೆ, ಎರಡನೆಯವರು ತಾವು ಯಶಸ್ವಿ ಆಗದೆ ಇರುವುದಕ್ಕೆ ಬೇರೆಯವರ ಮೇಲೆ ಗೂಬೆ ಕೂರಿಸುತ್ತಾರೆ. ನಮ್ಮ ಹೀರೋ ನಂ.1 ಅಂದ್ರೆ ಗೋವಿಂದ, ಎರಡನೆ ಗುಂಪಿಗೆ ಸೇರುತ್ತಾನೆ. ಈತ ಇಡೀ ಬಾಲಿವುಡ್‌ ಉದ್ಯಮದ ಜನ್ಮ ಜಾಲಾಡಿ, ಇವರೆಲ್ಲ ನನ್ನ ಕೆರಿಯರ್ ಹಾಳು ಮಾಡಿದರೆಂದು ಗೊಣಗುತ್ತಾನೆ. ಈಗಾಗಲೇ ಈತ ಯಶಸ್ಸಿನ ಶಿಖರ ಮುಟ್ಟಿದ್ದಾಗಿದೆ, ಆದರೂ ಮತ್ತೇನು ಬೇಕೋ ಗೊತ್ತಾಗುತ್ತಿಲ್ಲ. ಇತ್ತೀಚೆಗೆ ಈತ ತನ್ನ ಗಬ್ಬು ಗಬ್ಬಾದ ವಿಡಿಯೋ ಆಲ್ಬಂ ರಿಲೀಸ್‌ ಮಾಡಿ, ಟ್ರೋಲಿಗರ ಕೈಲಿ ಛೀ ಥೂ ಅನ್ನಿಸಿಕೊಂಡಿದ್ದಾಯಿತು. ಕೊರೋನಾ ಕಾರಣ ಯಾರಿಗೂ ಕೆಲಸ ಇಲ್ಲ, ಸರಿ, ನೀನೇ ಏನಾದರೂ ಮಾಡಬೇಕೆಂದಿದ್ದರೆ ವಯಸ್ಸಿಗೆ ತಕ್ಕಂತೆ ಗಂಭೀರವಾಗಿ ಮಾಡಬೇಕೆಲ್ಲವೇ? ಅದರಿಂದ ಪ್ರತಿಭೆ ಹೊರಹೊಮ್ಮ ಬೇಕಲ್ಲವೇ? ಈಗಲೂ ಹಳೆ ಕಾಲದ ಹೀರೋ ನಂ.1 ತರಹವೇ ಮೆರೆಯುತ್ತೇನೆ ಎಂದರೆ, ಈಗಿನ ಯುವಜನತೆ ಮೂಸುತ್ತಾರೆಯೇ? ನಿನ್ನ ಕರ್ಮಕ್ಕೆ ಉದ್ಯಮದ ಮಂದಿಯನ್ನು ದೂಷಿಸುವುದೇಕೆ? ಅಂದ ಕಾಲತ್ತಿಲೆ, ಕೆಲಸದಲ್ಲಿ ಬಿಝಿ ಇದ್ದಾಗ, ಎಲ್ಲಾ ಬಿಟ್ಟು ಕಾವಿ ತೊಡುವೆ ಎಂದು ಘೋಷಿಸಿದ್ದು ನೀನೇ ತಾನೇ? ಎಂದು ಎಲ್ಲರೂ ಆಡಿಕೊಳ್ಳುತ್ತಿದ್ದಾರೆ.

ಹೆಣ್ಣಾಗಿ ಇರುವುದು ಸುಲಭವೇನಲ್ಲ!

jacklin1

ಹಾಗೆ ನೋಡಿದರೆ, ವಿಶ್ವದಲ್ಲಿ ಎಲ್ಲೆಡೆ ಹೆಣ್ಣಿಗೆ ಪ್ರತಿ ಹೆಜ್ಜೆ ಇಡುವುದೂ ಕಷ್ಟಕರವೇ! ಇದಕ್ಕೊಂದು ಪಟ್ಟಿ ಮಾಡಿದರೆ, ನಮ್ಮ ದೇಶ ಟಾಪ್‌-10 ನಲ್ಲಿ ಖಂಡಿತಾ ಮೇಲಿರುತ್ತದೆ. ಈ ಬಗ್ಗೆ ಈಗ ಚರ್ಚಿಸುತ್ತಿರುವುದು ಜ್ಯಾಕ್ಲೀನ್‌. ಅವಳಷ್ಟೇ ಬೇಡಿಕೊಂಡರೂ, ವಿರೋಧಿಸಿದರೂ ಇವಳ ಹಾಗೂ ಬಾಯ್‌ ಫ್ರೆಂಡ್‌ ಸುಕೇಶನ್‌ ನ ಖಾಸಗಿ ಕ್ಷಣಗಳ ಫೋಟೋಗಳನ್ನು ಪಬ್ಲಿಕ್‌ FB ‌ನಲ್ಲಿ ಡಂಗೂರ ಸಾರುವುದನ್ನು ಬಿಡುವುದಿಲ್ಲ. ಜ್ಯಾಕ್ಲೀನ್‌ ಮಾಡಿದ್ದು ಸರಿಯೋ ತಪ್ಪೋ….. ಅದನ್ನು ಜಜ್ ಮಾಡುವ ಯೋಗ್ಯತೆ ಪಬ್ಲಿಕ್‌ ಗಿಲ್ಲ. ಯಾರು ಯಾವುದೇ ಪರಿಸ್ಥಿತಿಯಲ್ಲಿರಲಿ, ಅವರ ಪ್ರೈವೆಸಿಗೆ ನಾವು ಭಂಗ ತರಬಾರದು. ಹೀಗೆ ಕಂಡವರ ಫೋಟೋ FB‌ಗೆ ಹಾಕಿ ಮಜಾ ಪಡೆಯುವ ತಲೆ ಕೆಟ್ಟವರಿಗೆ, ಅವರ ಹೆತ್ತವರೇ ಬುದ್ಧಿ ಹೇಳಬೇಕೆಷ್ಟೆ. ಹೀಗಾಗಿ ಆಧುನಿಕ ತಾಯಿ ತಂದೆಯರು ತಮ್ಮ ವಯಸ್ಕ ಮಕ್ಕಳು ಇಂಥ ಅಶ್ಲೀಲ ಗ್ಲಾಮರ್‌ ಬೆನ್ನು ಹತ್ತುವ ಬದಲು ಉತ್ತಮ ಸಾಹಿತ್ಯ ಓದುವಂತೆ ಪ್ರೋತ್ಸಾಹಿಸಬೇಕು. ಇಲ್ಲದಿದ್ದರೆ ಸೋಶಿಯಲ್ ಮೀಡಿಯಾ ಮುಂದಿನ ಪೀಳಿಗೆಯನ್ನು ಮುಳುಗಿಸದೇ ಬಿಡದು.

ಪ್ರೇಮಕ್ಕೆ ಪರಿಪಕ್ವತೆ ಸಿಗುತ್ತಿಲ್ಲ!

arjun-or-malaika1

ಶ್ರೀದೇವಿಯ  ಮಲಮಗ ಅರ್ಜುನ್‌ ಕಪೂರ್‌ ಹಾಗೂ ಸಲ್ಮಾನ್‌ ನ ಮಾಜಿ ಅತ್ತಿಗೆ ಮಲೈಕಾರ ಪ್ರೇಮ ಸಂಬಂಧ ತುಸು ವಿಚಿತ್ರವಾದುದು, ಏಕೆಂದರೆ ಇವರು ಪ್ರೇಮದ ಪರಾಕಾಷ್ಠೆ ಮುಟ್ಟಿ ಇನ್ನೇನು ಮದುವೆ ಆಗಲಿದ್ದಾರೆ ಎನಿಸಿದರೆ, ಮತ್ತೊಮ್ಮೆ ಇವರ ಸಂಬಂಧ ಮುಗಿದೇ ಹೋಯಿತು ಎಂಬಂತೆ ವರ್ತಿಸುತ್ತಾರೆ. ಇವರಿಬ್ಬರ ಇತ್ತೀಚಿನ ರಿಲೇಶನ್‌ ಶಿಪ್‌ ಸ್ಟೇಟಸ್‌ ನೋಡಿ ಸುದ್ದಿಗಾರರು ಅಂದಾಜಿಸುವುದೆಂದರೆ, ಇನ್ನಿವರ ಪ್ರೇಮ ಪವರ್ ಮುಗಿದಂತೆಯೇ! ಇವರುಗಳ ಪ್ರಕಾರ, ಇಂಥ ಸಂದಿಗ್ಧಕ್ಕೆ ಕಾರಣ ಇವರಿಬ್ಬರ ಕೆರಿಯರ್‌ ಅಂತೆ. ಇಬ್ಬರೂ ಲವ್ ಲ್ಲಿ ಮುಳುಗಿದಾಗಿನಿಂದ, ಯಾರೂ ಇವರಿಗೆ ಸಿನಿಮಾದಲ್ಲಿ ಅವಕಾಶ ಕೊಡುತ್ತಿಲ್ಲ. ಅರ್ಜುನ್‌ ಪಾಲಿಗಂತೂ ಯಾವ ಚಿತ್ರ ಸಕ್ಸೆಸ್‌ ಆಗುತ್ತಿಲ್ಲ. ಮಲೈಕಾಳನ್ನು ಚಿತ್ರ ಬಿಡಿ, ರಿಯಾಲಿಟಿ ಶೋಗಳಿಗೇ ಯಾರೂ ಆಹ್ವಾನಿಸುತ್ತಿಲ್ಲ! ಇಬ್ಬರೂ ಏನಾದರೂ ಮಾಡ್ರಪ್ಪ, ಇಲ್ಲದಿದ್ದರೆ ಸಂಗಾತಿಯೂ ಇಲ್ಲ, ಕೆರಿಯರ್‌ ಸಹ ಇಲ್ಲ ಎಂದಾದೀತು!

ಸಿದ್ಧಾರ್ಥನ ಬುದ್ಧಿ ನೆಟ್ಟಗಿದೆ ತಾನೇ?

sidharth1 (1)

ಒಬ್ಬರನ್ನು ಟೀಕಿಸುವುದಕ್ಕೂ ಒಂದು ಇತಿಮಿತಿ, ಭಾಷೆ ಅಂತಿರುತ್ತದೆ. ಆದರೆ ತಮಿಳು ತೆಲುಗಿನ ನಾಯಕ ಸಿದ್ಧಾರ್ಥನಿಗೆ ಇದು ತಿಳಿದಂತಿಲ್ಲ. ಇತ್ತೀಚೆಗೆ ಈತ ಬ್ಯಾಂಡ್‌ ಮಿಂಟನ್‌ ತಾರೆ ಸೈನಾ ನೇಹ್ವಾಲ್ ಳ ವಿರುದ್ಧ ಅತಿ ಕೆಟ್ಟ ಕಮೆಂಟ್‌ ಬರೆದಿದ್ದ. ಟ್ರೋಲಿಗರು ಉಗಿದಾಗ ಸೈನಾಳ ಕ್ಷಮಾಪಣೆ ಕೋರಿದ. ಆದರೆ ಒಂದಂತೂ ಸ್ಪಷ್ಟವಾಗಿದೆ, ಮಾಮೂಲಿ ಟ್ರೋಲಿಗರಿರಲಿ ಅಥವಾ ಕಲಾವಿದರು, ಹೆಂಗಸರ ಕುರಿತಾಗಿ ಗಂಡಸರ ಧೋರಣೆ ಬದಲಾಗುವಂತಿಲ್ಲ. ತನ್ನ ಈ ಕೀಳು ಬುದ್ಧಿಯಿಂದ ಸಿದ್ಧಾರ್ಥ್‌ ತಾನೆಷ್ಟು ಚೀಪ್‌ ಎಂದು ಮಾತ್ರವಲ್ಲದೆ, ತನ್ನ ಮಾನಸಿಕತೆ ಕುರಿತು ಎಲ್ಲರಿಗೂ ಸಾರಿದಂತಾಗಿದೆ.

ಅಕ್ಷಯ್ಮತ್ತು ಇಮ್ರಾನ್ ಸೆಲ್ಛಿ

akashye-or-imraan-1

 

ಕಿಲಾಡ್‌ ಕುಮಾರ್‌ಕಿಸ್ಸಿಂಗ್‌ ಕಿಂಗ್‌ ಜೋಡಿ `ಸೆಲ್ಛಿ’ ಚಿತ್ರ ಸಿದ್ಧವಾಗುತ್ತಿದೆ. ಈ ಚಿತ್ರದ ಹೆಸರನ್ನು ಮಾತ್ರ ಬದಲಾಯಿಸಲಾಗಿದೆ. ಅಷ್ಟೇ, ಬಾಕಿ ಮೂಲ ತೆಲಗಿನ `ಡ್ರೈವಿಂಗ್‌ ಲೈಸೆನ್ಸ್’ ಚಿತ್ರದ ರೀಮೇಕ್‌ ಇದು. ಏನು ಮಾಡುವುದು? ಬಾಲಿವುಡ್‌ ನವರ ಬಳಿ ಉತ್ತಮ ಕಥೆಯೂ ಇಲ್ಲ, ಉತ್ತಮ ಚಿತ್ರ ಮಾಡುವ ತಾಕತ್ತೂ ಇಲ್ಲ. ಹೀಗಾಗಿ ಬಾಲಿವುಡ್‌ ಇದೀಗ ಅಕ್ಷರಶಃ ಕಾಪಿಡ್‌ ಆಗಿ ದಂಧೆ ನಡೆಸುತ್ತಿದೆ. ಇವರಿಬ್ಬರಿಗೂ ಈ ಚಿತ್ರ ಹಿಟ್‌ ಆಗಬೇಕಿರುವುದು ಅನಿವಾರ್ಯವಾಗಿದೆ. ಏಕೆಂದರೆ ಈ ಹಿಂದಿನ ಇವರಿಬ್ಬರ ಚಿತ್ರಗಳೆಲ್ಲ ಮಖಾಡೆ ಮಲಗಿವೆ. ಇಮ್ರಾನ್‌ ನ `ಚೆಹರೆ’ ಅಥವಾ ಅಕ್ಷಯ್‌ ನ `ಸೂರ್ಯವಂಶಿ’ ಅಪ್ಪಟ ಫ್ಲಾಪ್‌ ಎನಿಸಿದ.

ಅಜಯ್‌ ನ ಮೂಢನಂಬಿಕೆ ಅಂದಹಾಗೆ ಅತ್ಯಾಧುನಿಕ ಟೆಕ್ನಾಲಜಿ ಹೊಂದಿರುವ ಬಾಲಿವುಡ್‌, ಆಚರಣೆಯಲ್ಲಿ ಮಾತ್ರ ಇನ್ನೂ ಢೋಂಗಿ ಡವ್ ಆಗಿಯೇ ಇದೆ. ಆದರೆ ಅಜಯ್‌ ನಂಥ ಲಕ್ಷಾಂತರ ಮಂದಿ ಅಭಿಮಾನಿಗಳಿರುವ ತಾರೆಯರೂ ಮೂಢನಂಬಿಕೆಗೆ ಜೈ ಅಂದಾಗ ಕಷ್ಟಕರ ಎನಿಸುತ್ತದೆ. ಈ ತಾರೆಯರು ಮಾಡಿದ್ದನ್ನು ತಾನೇ ಆ ಅಭಿಮಾನಿಗಳು ಫಾಲೋ ಮಾಡೋದು? ಇತ್ತೀಚೆಗಷ್ಟೆ ಅಜಯ್‌ ಶಬರಿ ಮೈ ತಲುಪಿ, 11 ದಿನಗಳ ಕಟ್ಟುನಿಟ್ಟಾದ ನೇಮದಲ್ಲಿದ್ದ. ಇಷ್ಟು ಸಾಲದೆಂಬಂತೆ ಈತ ತನ್ನೊಂದಿಗೆ ಒಬ್ಬ ಜ್ಯೋತಿಷಿಯನ್ನೂ ಕರೆದೊಯ್ದಿದ್ದ. ಇದನ್ನು ಗಮನಿಸಿ ಈತನ ಅಭಿಮಾನಿಗಳೂ ಶಬರಿಮೈ ಗುಣಗಾನಕ್ಕೆ ತೊಡಗಿದರು. ಕೋವಿಡ್ ಕಾರಣ ಕಡಿಮೆಯಾಗಿದ್ದ ಯಾತ್ರಾರ್ಥಿಗಳು ಹಾಗೂ ದೇವಾಲಯಕ್ಕೆ ಹೋಗುವ ಭಕ್ತರ ಸಂಖ್ಯೆ ಇಂಥ ತಾರೆಯರಿಂದ ಮತ್ತೆ ರಶ್‌ಆಗತೊಡಗಿದೆ. ಈ ಮಂದಿರದ ಬಗೆಗಿನ ವಿವಾದಗಳ ಕುರಿತಾಗಿ ಈತ ಏನೂ ಹೇಳದಿರುವುದು, ಅಡ್ಡಗೋಡೆ ಮೇಲೆ ದೀಪ ಇಟ್ಟಂತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ