ಕನ್ನಡತಿ ರಶ್ಮಿಕಾ ಮಂದಣ್ಣ “ಕಿರಿಕ್ ಪಾರ್ಟಿ” ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. “ಚಿತ್ರರಂಗದಲ್ಲಿ 8 ವರ್ಷ ಪೂರೈಸಿದ್ದೇನೆ. ನಾನು ಇಂದು ಏನಾಗಿದ್ದೇನೋ ಅದಕ್ಕೆಲ್ಲ ನಿಮ್ಮ ಪೀತಿ ಮತ್ತು ಬೆಂಬಲವೇ ಕಾರಣ” ಎಂದು ಬರೆದುಕೊಂಡಿದ್ದಾರೆ.
ಸ್ಯಾಂಡಲ್ವುಡ್ನಿಂದ ಬಾಲಿವುಡ್ವರೆಗೆ ತಮ್ಮ ಛಾಪು ಮೂಡಿಸಿರುವ ನಟಿ ರಶ್ಮಿಕಾ ಮಂದಣ್ಣ ಸಾಧನೆ ಕಡಿಮೆ ಏನಿಲ್ಲ. ವರ್ಷಕ್ಕೆರಡು ಸಿನಿಮಾ ಸೂಪರ್ ಹಿಟ್. ಕೋಟಿ ಕೋಟಿ ಸಂಪಾದನೆ ಜೊತೆ ಕೋಟ್ಯಾಂತರ ಅಭಿಮಾನಿಗಳ ಬಳಗವನ್ನು ಅವರು ಹೊಂದಿದ್ದಾರೆ.
ಕಿರಿಕ್ ಪಾರ್ಟಿಯಲ್ಲಿ ಸಂಯುಕ್ತಾ ಹೆಗಡೆ ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಚಿತ್ರದ ಹಾಡುಗಳೂ ಸೂಪರ್ ಹಿಟ್ ಆಗಿದ್ದವು. ಅಷ್ಟೇ ವೈರಲ್ ಕೂಡ ಆಗಿದ್ದವು. ಅಜನೀಶ್ ಲೋಕನಾಥ್ ಸಂಗೀತದಲ್ಲಿಯೇ ಹಾಡುಗಳು ಮೂಡಿ ಬಂದಿದ್ದವು. ಅಂತಹ ಈ ಚಿತ್ರದಿಂದ ರಕ್ಷಿತ್ ಸಿನಿ ಲೈಫ್ ಚೇಂಜ್ ಆಗಿತ್ತು.
ಕಿರಿಕ್ ಪಾರ್ಟಿ ಚಿತ್ರ ಹೊರದೇಶದಲ್ಲೂ ರಿಲೀಸ್ ಆಗಿತ್ತು. ಇಲ್ಲೂ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು. ರಂಗಿತರಂಗ ಚಿತ್ರದ ಆಲ್ ಟೈಮ್ ದಾಖಲೆಯನ್ನು ಈ ಚಿತ್ರ ಬ್ರೇಕ್ ಮಾಡಿತ್ತು.
ಕಿರಿಕ್ ಪಾರ್ಟಿ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆದ ರಶ್ಮಿಕಾ, ಹಿಂತಿರುಗಿ ನೋಡಲಿಲ್ಲ. ತಮಿಳು, ತೆಲುಗಿನಲ್ಲಿ ಹಿಟ್ ಮೇಲೆ ಹಿಟ್ ನೀಡಿ ಪ್ರಸಿದ್ಧಿ ಪಡೆದವರು. ಶ್ರೀವಲ್ಲಿ ಎಂದೇ ಪ್ರಸಿದ್ಧಿ ಪಡೆದಿರುವ ರಶ್ಮಿಕಾ, ಸಿನಿಮಾ ರಂಗದಲ್ಲಿ 8 ವರ್ಷ ಪೂರೈಸಿದ ಖುಷಿಯನ್ನು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಯಶಸ್ವಿಯಾಗಿ 8 ವರ್ಷ ಪೂರೈಸಿದ ಸಂತೋಷದಲ್ಲಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
8 ವರ್ಷಗಳಲ್ಲಿ 16 ಸೂಪರ್‌ಹಿಟ್ :
ರಶ್ಮಿಕಾ ಮಂದಣ್ಣ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು 8 ವರ್ಷಗಳ ಹಿಂದೆ. ಕೇವಲ 8 ವರ್ಷಗಳಲ್ಲಿ 16 ಹಿಟ್ ಚಿತ್ರಗಳನ್ನು ನೀಡಿ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. 2016ರಲ್ಲಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಟ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಅವರಿಗೆ ಕಿರಿಕ್ ಪಾರ್ಟಿಯಲ್ಲಿ ಚಾನ್ಸ್ ನೀಡಿದ್ದರು. ಈ ಚಿತ್ರ ಕೇವಲ 4 ಕೋಟಿ ರೂಪಾಯಿಗೆ ತಯಾರಾಗಿತ್ತು. ಆದರೆ ಇದು ವಿಶ್ವದಾದ್ಯಂತ 50 ಕೋಟಿ ರೂಪಾಯಿ ಗಳಿಸಿತ್ತು. ಕಿರಿಕ್ ಪಾರ್ಟಿ ಚಿತ್ರಕ್ಕೂ 8 ವರ್ಷ ತುಂಬಿದೆ. ನಟ ರಕ್ಷಿತ್ ಶೆಟ್ಟಿ ಈ ಖುಷಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಿರಿಕ್ ಪಾರ್ಟಿಗೆ 8 ವರ್ಷ ತುಂಬಿದೆ. ಕಿರಿಕ್ ಪಾರ್ಟಿ ನನ್ನ ಮತ್ತು ನನ್ನ ತಂಡದ ಪ್ರಯಾಣದಲ್ಲಿ ಒಂದು ಮಹತ್ವದ ತಿರುವು. ಈ ಚಿತ್ರ ನಮ್ಮ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನ ಹೊಂದಿರುತ್ತದೆ ಎಂದು ಬರೆದಿದ್ದಾರೆ.
ಇನ್ನು 2017 ರಲ್ಲಿ ರಶ್ಮಿಕಾ ಲಕ್ ಬದಲಾಯ್ತು. ಒಂದೇ ವರ್ಷ ಮತ್ತೆರಡು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು. ಅಂಜನಿಪುತ್ರ ಮತ್ತು ಚಮಕ್ ನಲ್ಲಿ ನಟಿಸಿದ ನಂತರ, 2018 ರಲ್ಲಿ ರಶ್ಮಿಕಾ ಮಂದಣ್ಣ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡರು. 2019 ರಲ್ಲಿ ಎರಡು ಚಿತ್ರಗಳಲ್ಲಿ ನಟಿಸಿದ್ದರು. 2020ರಲ್ಲಿ ಸರಿಲೇರು ನೀಕೆವ್ವರು ಮತ್ತು ಭೀಷ್ಮ ಸೂಪರ್‌ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. 2021 ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ ಪೊಗರು, ತಮಿಳಿನ ಸುಲ್ತಾನ್ ಮತ್ತು ತೆಲುಗು ಪುಷ್ಪ: ದಿ ರೈಸ್ನಲ್ಲಿ ಕಾಣಿಸಿಕೊಂಡಿದ್ದರು. 2023 ರಲ್ಲಿ ಅವರ ಅನಿಮಲ್ ಸೂಪರ್ ಹಿಟ್ ಆದರೆ, ಈ ವರ್ಷ ಪುಷ್ಪಾ 2ನಲ್ಲಿ ರಶ್ಮಿಕಾ ಅಬ್ಬರಿಸಿದ್ದಾರೆ. ಇದಲ್ಲದೆ, ಕುಬೇರ್, ಛಾವಾ ಮತ್ತು ಸಿಕಂದರ್ನಲ್ಲೂ ನಟಿಸುತ್ತಿದ್ದಾರೆ. ಸಿನಿಮಾ ಜೊತೆ ವೈಯಕ್ತಿಕ ವಿಷಯಕ್ಕೆ ಸಾಕಷ್ಟು ಬಾರಿ ಟ್ರೋಲ್ ಆಗಿರುವ ರಶ್ಮಿಕಾ ಈಗ ಮದುವೆ ವಿಷಯದಲ್ಲೂ ಚರ್ಚೆಯಲ್ಲಿದ್ದಾರೆ.