ಅಂತೂ ಮೌನೀಗೆ ಮದುವೆ ಅಂತೆ

ಇತ್ತೀಚೆಗೆ ಬಾಲಿವುಡ್‌ ನಲ್ಲಿ ಎಲ್ಲೆಲ್ಲೂ ಹೊಸ ಅಲೆ ಉಕ್ಕುತ್ತಿದೆ, ಅದುವೇ ಮದುವೆಗಳ ಮ್ಯಾಜಿಕ್‌! ಅಯ್ಯೋ..... ಕೊರೋನಾ ಇದೆ ಅಂತೀರಾ? ಅದರ ಪಾಡಿಗೆ ಅದಿರುತ್ತೆ ಬಿಡಿ. ಇದೀಗ ಎಲ್ಲೆಲ್ಲೂ ಮೌನೀಯ ಮದುವೆಯದ್ದೇ ಮಾತು. ಸುದ್ದಿಗಾರರ ಪ್ರಕಾರ, ಮೌನೀ ಇಷ್ಟರಲ್ಲ ತನ್ನ ಬಾಯ್‌ ಫ್ರೆಂಡ್‌ ಸೂರಜ್‌ ನಂಬಿಯಾರ್‌ ಜೊತೆ ಸಪ್ತಪದಿ ತುಳಿಯಲಿದ್ದಾಳೆ. ಅತ್ತ ಮೌವೀ ತನ್ನ ಅಭಿಮಾನಿಗಳ ಸಸ್ಪೆನ್ಸ್ ಹೆಚ್ಚಿಸಲು, ತನ್ನ ಮದುವೆ ಸುದ್ದಿ ಹಬ್ಬುತ್ತಿದ್ದಂತೆ, ಅವಳು ಹಳದಿ ಬಣ್ಣದ ಬಿಕಿನಿಯಲ್ಲಿ ತನ್ನ ಫೋಟೋವನ್ನು FBಗೆ ಹಂಚಿಕೊಂಡಳು. ಇವಳ ಈ ಹಳದಿ ಡ್ರೆಸ್‌ ಏನು ಹೇಳುತ್ತಿದೆ ಎಂಬುದನ್ನು ಕಾಲವೇ ಹೇಳಬೇಕಷ್ಟೆ.

ಪ್ರೇಮಿಸಿದ ಮೇಲೆ ಅಡಗಿಸ ಬೇಕೇಕೆ?

rakul1

ಅಂತೂ ಕೊನೆಗೂ ರಕುಲ್ ‌ಪ್ರೀತ್‌ ತಾನು ಪ್ರೇಮಿಸುತ್ತಿದ್ದ ಜಾಕಿ ಭಗ್ನಾನಿಯ ಜೊತೆಗಿನ ಸಂಬಂಧವನ್ನು ಖುಲ್ಲಂಖುಲ್ಲ ಒಪ್ಪಿಕೊಳ್ಳುವ ಧೈರ್ಯ ತೋರಿದ್ದಾಳೆ. ರಕುಲ್‌, ಇಷ್ಟು ಬೇಗ ಗುಟ್ಟೇಕೆ ಬಿಟ್ಟುಕೊಟ್ಟೆ? ಸುದ್ದಿಗಾರರು ಅದನ್ನು ಬಣ್ಣ ಬಣ್ಣವಾಗಿ ಹರಡಲು ಇನ್ನಷ್ಟು ಅವಕಾಶ ಕೊಡಬೇಕಿತ್ತು. ಇರಲಿ, ಸರಿಯಾದ ಸಮಯದಲ್ಲಿ ಸಂಗಾತಿಗೆ ಸಾಥ್‌ ನೀಡಿರುವೆ, ಈ ಕೊರೋನಾ ಹಾಗೂ ಆರ್ಥಿಕ ಅಭಾವದ ನಡುವೆ ನಾಳೆ ಏನಾಗಲಿದೆಯೋ ಗೊತ್ತಿಲ್ಲ. ಜಾಕಿ ಸ್ವತಃ ನಿರ್ಮಾಪಕನೂ ಆಗಿರುವುದರಿಂದ, ನಾಳೆ ಇವಳ ಚಿತ್ರಗಳಿಗೆ ತಾನೇ ಹಣ ಹೂಡಿದರೂ ಆಶ್ಚರ್ಯವೇ ಇಲ್ಲ!

ಸಲ್ಲೂಗೆ ಉರುಳಾದ ದಕ್ಷಿಣದ ಅಲ್ಲು

Allu-1

ಸಲ್ಮಾನ್‌ ಖಾನ್‌ ನ ಭಾರಿ ಸ್ಟಾರ್ಡಂನ `ಅಂತಿಂ' ಚಿತ್ರ ದಯನೀಯವಾಗಿ ನೆಲ ಕಚ್ಚಿದರೆ, ಅತ್ತ ದಕ್ಷಿಣದ ಮೆಗಾಸ್ಟಾರ್‌ ಅಲ್ಲು ಅರ್ಜುನ್‌ ನ `ಪುಷ್ಪಾ' ಚಿತ್ರ ಕೇವಲ ದಕ್ಷಿಣದವರನ್ನಷ್ಟೇ ಅಲ್ಲ, ಅದರ ಡಬಲ್ ಚಿತ್ರ ಉತ್ತರದವರನ್ನೂ ದಂಬುಬಡಿಸಿದೆ! ಪರಿಣಾಮ.... ಉತ್ತರದ ಘಟಾನುಘಟಿ ಸ್ಟಾರ್‌ ಗಳೆಲ್ಲ ಈಗ ದಕ್ಷಿಣದ ಹಿಟ್‌ ಚಿತ್ರಗಳ ರೀಮೇಕ್‌ ನಲ್ಲಿ ನಟಿಸಲು ತುದಿಗಾಲಲ್ಲಿ ಕಾಯುತ್ತಿದ್ದಾರೆ! ಅತ್ತ ಅರ್ಜುನನ ಧಿಮಾಕು ನೋಡಿ, ಅವನನ್ನು ಯಶಸ್ವೀ ರೀಮೇಕ್‌ ಚಿತ್ರಗಳ ಬಗ್ಗೆ ಕೇಳಿದಾಗ, ತಾನು ಅಂಥದ್ದರಲ್ಲಿ ನಟಿಸೋದೇ ಇಲ್ಲ ಅಂದುಬಿಟ್ಟ! ಸಲ್ಲೂನ `ಅಂತಿಂ' ಚಿತ್ರಕ್ಕೆ ಅಲ್ಲುನ `ಪುಷ್ಪಾ' ಪೈಪೋಟಿ ನೀಡದಂತೆ ಏನೇನೋ ಸರ್ಕಸ್‌ ಮಾಡಲಾಯಿತು.... ಆದರೆ ಜನ ಮಾತ್ರ ಸಲ್ಲೂನನ್ನು ಬದಿಗೊತ್ತಿ ಅಲ್ಲುಗೆ ಜೈಕಾರ ಹಾಕಿದರು!

ಎಲ್ಲಿ ಹೋಯ್ತು ಈಶಾಳ ಇನ್ನರ್ವೇರ್‌?

ಇತ್ತೀಚೆಗೆ ಈಶಾ ಗುಪ್ತ ಕೋವಿಡ್‌ ಪಾಸಿಟಿವ್ ‌ಆಗಿದ್ದಳು. ತನ್ನನ್ನು ತಾನು ಮನೆಯಲ್ಲೇ ಬಂಧಿ ಆಗಿಸಿಕೊಂಡಳು. ಅವಳು ಇತರರಂತೆ ಒಂಟಿತನವನ್ನು ತನ್ನ ಮೇಲೆ ಹೇರಿಕೊಳ್ಳಲಿಲ್ಲ. ಇದಕ್ಕಾಗಿ ಅವಳು FB ‌ಆಸರೆ ಪಡೆದಳು. ತನ್ನ ಫೋಟೋಗಳನ್ನು ಅಲ್ಲಿ ಸತತ ಪೋಸ್ಟ್ ಮಾಡತೊಡಗಿದಳು. ಈ ಚಿತ್ರ ಗಮನಿಸಿ, ಬೇಕೆಂದೇ ಇನ್ನರ್‌ ವೇರ್‌ ಇಲ್ಲದ ಶರ್ಟ್‌ ಧರಿಸಿ ಇಲ್ಲಿ ಪೋಸ್ಟ್ ಹಂಚಿದ್ದಾಳೆ. ತಾನು ಈ ಕ್ಷಣಗಳನ್ನೂ ಎಂಜಾಯ್‌ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾಳೆ. ಕೆಲವು ಮಡಿವಂತ ಅಭಿಮಾನಿಗಳಿಗೆ ಇವಳ ಈ ಅವತಾರದ ಫೋಟೋ ಇಷ್ಟವಾಗಲಿಲ್ಲ. ಒಬ್ಬ ಹೆಣ್ಣು 4 ಗೋಡೆಗಳ ಮಧ್ಯೆ ತನಗೆ ಬೇಕಾದಂತೆ ಫೋಟೋ ಕ್ಲಿಕ್ಕಿಸುವ ದರ್ಪ ತೋರಿರುವುದು, ಮಡಿವಂತರಿಗೆ ಸರಿ ಕಾಣುತ್ತಿಲ್ಲ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ