ಯಾರ ಜೊತೆಗಾದರೂ ಪ್ರೀತಿಯಾದರೆ, ಜೀವನವೇ ಬದಲಾಗಿಬಿಡುತ್ತದೆ ಎಂದು ಹೇಳಲಾಗುತ್ತದೆ. ಕಲ್ಪನೆಗಳ ಜಗತ್ತು ಸೃಷ್ಟಿಯಾಗುತ್ತದೆ. ಹೃದಯದ ಸಾಮ್ರಾಜ್ಯದ ಮೇಲೆ ಯಾರೂ ಅಧಿಪತ್ಯ ಸ್ಥಾಪಿಸುತ್ತಾರೆ, ಪ್ರೀತಿಯ ಎಳೆಗಳಲ್ಲಿ ಬಂಧಿಯಾದ ವ್ಯಕ್ತಿ ಏನನ್ನಾದರೂ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ತಮ್ಮದೇ ಆದ ಪ್ರಪಂಚದಲ್ಲಿ ಲೀನರಾಗಿ ಬಿಡುತ್ತಾರೆ.

ಹೆಚ್ಚು ಕಡಿಮೆ ಹೀಗಿಯೇ ಆಗುತ್ತಿತ್ತು. ಅಂದಹಾಗೆ ನಾನು ನನ್ನ ಅನುಭವಗಳ ಬಗ್ಗೆ ಮಾತ್ರ ಅರಿಯುತ್ತಿದ್ದೆ. ಇತ್ಸಿಂಗ್‌ ಈ ಕುರಿತಂತೆ ಏನನ್ನು ಯೋಚಿಸುತ್ತಾನೆ,  ನನಗೇನೂ ಮಾಹಿತಿ ಇರಲಿಲ್ಲ. ಇತ್ಸಿಂಗ್‌ ಜೊತೆಗೆ ಪರಿಚಯವಾಗಿ ಹೆಚ್ಚು ದಿನಗಳೇನೂ ಆಗಿರಲಿಲ್ಲ. 9 ತಿಂಗಳು ಬಹಳ ದೀರ್ಘ ಸಮಯವೇನಲ್ಲ. 2009ರ ಡಿಸೆಂಬರ್‌ ತಿಂಗಳ ಚಳಿಯ ದಿನಗಳಲ್ಲಿ ಬ್ಲಾಂಕೆಟ್‌ ನಲ್ಲಿ ಹುದುಗಿಕೊಂಡಿರಲು ನನಗೆ ಅನಿವಾರ್ಯತೆ ಇತ್ತು. ಹಾಸಿಗೆಯ ಮೇಲೆ ಬ್ಲಾಂಕೆಟ್‌ ಒಳಗೆ ಹಾಗೂ ಹೊರಗೆ ಲ್ಯಾಪ್‌ ಟಾಪ್‌ ನಲ್ಲಿ ಚಾಟಿಂಗ್‌ ಮತ್ತು ಬ್ರೌಸಿಂಗ್‌ ಮಾಡುವುದು ನನಗೆ ಇಷ್ಟವಾದ ಕೆಲಸವಾಗಿತ್ತು.

ಇತ್ತೀಚೆಗೆ ನಾನು ದೆಹಲಿ ಯೂನಿವರ್ಸಿಟಿಯಲ್ಲಿ ಚೈನೀಸ್‌ ಲ್ಯಾಂಗ್ವೇಜ್‌ ನಲ್ಲಿ ಗ್ರ್ಯಾಜುಯೇಶನ್‌ ಪರಿಪೂರ್ಣಗೊಳಿಸಿದ್ದೆ. ನಾನು ಚೀನಿ ಭಾಷೆಯನ್ನೇ ಏಕೆ ಆಯ್ಕೆ ಮಾಡಿದೆ ಎಂದು ನೀವು ಕೇಳಬಹುದು. ಅಂದಹಾಗೆ ಅದು ಜಗತ್ತಿನ ಮಹಾ ಕ್ಲಿಷ್ಟಕರ ಭಾಷೆ ಎಂದು ಕರೆಯಿಸಿಕೊಳ್ಳುತ್ತದೆ. ಅದೇ ಕಾರಣದಿಂದ ಈ ಪಿಕ್ಟೊಗ್ರಾಫಿಕ್‌ ಭಾಷೆ ಬಹಳ ರೋಚಕ ಎನಿಸಿತು. ಹೀಗಾಗಿ ನಾನು ಆ ಭಾಷೆ ಆಯ್ಕೆ ಮಾಡಿಕೊಂಡೆ. ನಾನು ಹಲವು ಚೀನಿ ವ್ಯಕ್ತಿಗಳೊಂದಿಗೆ ಚರ್ಚಿಸಿ ಆ ಭಾಷೆಯಲ್ಲಿ ಪ್ರಾವೀಣ್ಯತೆ ಸಾಧಿಸ ಬಯಸಿದ್ದೆ. ಅದರ ಆಧಾರದ ಮೇಲೆ ಒಂದು ಒಳ್ಳೆಯ ನೌಕರಿ ಪಡೆಯಬೇಕೆನ್ನುವುದು ನನ್ನ ಅಪೇಕ್ಷೆಯಾಗಿತ್ತು.

ನಾನು ಇಂಟರ್‌ ನೆಟ್‌ ನಲ್ಲಿ ಸಂಪರ್ಕ ಸಾಧಿಸಲು ಪ್ರಯತ್ನಿಸಿದಾಗ ನನ್ಮುಂದೆ ಇತ್ಸಿಂಗ್‌ ನ ಪ್ರೊಫೈಲ್ ‌ತೆರೆದುಕೊಂಡಿತು. ಅವನು ಬೀಜಿಂಗ್‌ ನ ಒಂದು ಮೈನಿಂಗ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅವನ ಬಗ್ಗೆ ತಿಳಿದುಕೊಳ್ಳಲಾರಂಭಿಸಿದಾಗ ಅವನು ಸಂಕೋಚ ಸ್ವಭಾವದ ವ್ಯಕ್ತಿ ಹಾಗೂ ಅವನಿಗೆ ಲಾಂಗ್‌ ಡ್ರೈವ್ ‌ಹೋಗಲು ಇಷ್ಟವಾಗುತ್ತದೆ. ಗಿಡ ಬಳ್ಳಿಗಳೊಂದಿಗೆ ಮಾತುಕತೆ ನಡೆಸುವುದು ಇಷ್ಟವಂತೆ. ಅವನ ಹವ್ಯಾಸ ಪೇಂಟಿಂಗ್‌ ಹಾಗೂ ಸರ್ಫಿಂಗ್‌. ಅವನಿಗೆ ಎಂತಹದೊಂದು ಕೆಲಸ ಮಾಡಬೇಕಿತ್ತೆಂದರೆ, ಅದು ಎಂದೆಂದಿಗೂ ಉಳಿಯುವಂತಹದ್ದಾಗಿರಬೇಕು. ಅದೆಲ್ಲವನ್ನು ಓದಿ ನನಗೆ ಆ ವ್ಯಕ್ತಿಯ ಜೊತೆ ಮಾತನಾಡಬೇಕೆಂಬ ಉತ್ಸಾಹ ಗರಿಗೆದರಿತು. ಅಂದಹಾಗೆ ಚೀನಿ ಭಾಷೆ ಕಲಿಯಲು ನನಗೆ ಅವನ ಅವಶ್ಯಕತೆಯೂ ಇತ್ತು.

ಬಹಳಷ್ಟು ಯೋಚಿಸಿ ನಾನು ಅವನೊಂದಿಗೆ ಮಾತುಕತೆ ನಡೆಸುತ್ತಾ ಬರೆದೆ, “ಹಲೋ ಇತ್ಸಿಂಗ್‌….”

`ಹಲೋ’ದ ಉತ್ತರವನ್ನು `ಹಲೋ’ ಎಂದು ಕೊಡುವತ್ತ ಅವನು ನಾಪತ್ತೆಯಾದ. ನನಗಂತೂ ವಿಚಿತ್ರ ಎನಿಸಿತು. ಆದರೆ ನಾನು ಅವನನ್ನು ಹಿಂಬಾಲಿಸುವುದನ್ನು ಬಿಡಲಿಲ್ಲ. ಮತ್ತೊಮ್ಮೆ  ಬರೆದೆ, “ಕ್ಯಾನ್‌ ಐ ಟಾಕ್‌ ಟು ಯೂ?”

ಅವನ ಒಂದು ಮಾತಿನ ಉತ್ತರ ಬಂತು “ಎಸ್‌.”

“ಐ ಲೈಕ್ಡ್ ಯುವರ್‌ ಪ್ರೊಫೈಲ್,” ಎಂದು ಹೇಳಿ ನಾನು ಮಾತು ಮುಂದುವರಿಸಿದೆ.

“ಥ್ಯಾಂಕ್ಸ್,” ಎಂದು ಹೇಳಿ ಅವನು ಮತ್ತೆ ಮೌನವಾದ. ಅವನು ನನ್ನ ಪರಿಚಯ ಕೂಡ ಕೇಳಲಿಲ್ಲ. ಆದಾಗ್ಯೂ ನಾನು ಅವನಿಗೆ ನನ್ನ ಹೆಸರು ತಿಳಿಸುತ್ತಾ ಬರೆದೆ, “ಮೈ ಸೆಲ್ಫ್ ಸರಳಾ, ಫ್ರಂ ಡೆಲ್ಲಿ. ಐ ಹ್ಯಾವ್ ‌ಡನ್‌ ಮೈ ಗ್ರಾಜ್ಯುಯೇಷನ್‌ ಇನ್‌ ಚೈನೀಸ್‌ಲ್ಯಾಂಗ್ವೇಜ್‌. ಐ ನೀಡ್‌ ಯುವರ್‌ ಹೆಲ್ಪ್ ಟು ಇಂಪ್ರೂವ್ ‌ಇಟ್‌. ವಿಲ್ ‌ಯೂ ಪ್ಲೀಸ್‌ ಟೀಚ್‌ ಮಿ ಚೈನೀಸ್‌ ಲ್ಯಾಂಗ್ವೇಜ್‌?”

ಅದಕ್ಕೆ ಉತ್ತರನ್ನು ಇತ್ಸಿಂಗ್‌ ಅತ್ಯಂತ ಸಂಕ್ಷಿಪ್ತವಾಗಿ ಕೊಟ್ಟ, “ಓಕೆ, ಬಟ್‌ ವೈ ಮೀ? ಯೂ ಕ್ಯಾನ್‌ ಟಾಕ್‌ ಟು ಎನಿ ಅದರ್‌ ಪೀಪಲ್ ಆಲ್ಸೋ.”

“ಬಿಕಾಸ್‌ ಐ ಲೈಕ್‌ ಯುವರ್‌ ಥಿಂಕಿಂಗ್‌. ಯೂ ಆರ್‌ ವೆರಿ ಡಿಫರೆಂಟ್‌. ಪ್ಲೀಸ್‌ ಹೆಲ್ಪ್ ಮೀ…..”

“ಓಕೆ,” ಎಂದು ಹೇಳಿ ಅವನು ಮೌನವಾದ.

ಆದರೆ ನಾನು ಧೈರ್ಯ ಕಳೆದುಕೊಳ್ಳಲಿಲ್ಲ. ಅವನೊಂದಿಗೆ ಮಾತನಾಡುವುದನ್ನು ಮುಂದುವರಿಸಿದೆ. ಕ್ರಮೇಣ ಅವನು ನನ್ನೊಂದಿಗೆ ಮಾತನಾಡಲು ಆರಂಭಿಸಿದ. ಆರಂಭದಲ್ಲಿ ನಾವು ಚೀನಿ ಭಾಷೆಯಲ್ಲಲ್ಲ , ಇಂಗ್ಲಿಷ್‌ ನಲ್ಲಿಯೇ ಚಾಟಿಂಗ್‌ ಮಾಡುತ್ತಿದ್ದೆ. ಆ ಬಳಿಕ ಅವನು ಚೀನಿ ಭಾಷೆ ಕಲಿಸಲು ಆರಂಭಿಸಿದ. ಮೊದಲು ಇಮೇಲ್ ‌ಮುಖಾಂತರ ನಮ್ಮ ಸಂವಾದ ನಡೆಯುತ್ತಿತ್ತು. ಆ ಬಳಿಕ ವಾಟ್ಸ್ ಆ್ಯಪ್‌ ನಲ್ಲಿ ಸಂವಾದ ಮುಂದುವರಿಸಿದೆ.

ವಾಟ್ಸ್ ಆ್ಯಪ್‌ ನಲ್ಲಿ ಸಂವಾದ ನಡೆಸುವ ಸಂದರ್ಭದಲ್ಲಿ ಪರಸ್ಪರರ ಬಗ್ಗೆ ಸಾಕಷ್ಟು ತಿಳಿದುಕೊಳ್ಳತೊಡಗಿದ. ನನಗೆ ಇತ್ಸಿಂಗ್‌ ನ ಸರಳ ಸ್ವಭಾವ ಹಾಗೂ ಪ್ರಾಮಾಣಿಕ ಧೋರಣೆ ಬಹಳ ಇಷ್ಟವಾಗುತ್ತಿತ್ತು. ಅವನ ಸ್ವಭಾವ ಹೆಚ್ಚು ಕಡಿಮೆ ನನ್ನ ಹಾಗೆಯೇ ಇತ್ತು. ಅವನು ಕೂಡ ಅನ್ಯಾಯವನ್ನು ಸಹಿಸುವವನಾಗಿರಲಿಲ್ಲ. ಅನಾವಶ್ಯಕ ಹರಟೆಯಿಂದ ದೂರ ಇರುತ್ತಿದ್ದ ಹಾಗೂ ಮಹಿಳೆಯರನ್ನು ಗೌರವಿಸುತ್ತಿದ್ದ. ಅವನಿಗೂ ಕೂಡ ನನ್ನ ಹಾಗೆಯೇ ಫ್ಲರ್ಟಿಂಗ್‌ ಹಾಗೂ ಬಟರಿಂಗ್‌ ಇಷ್ಟವಾಗುತ್ತಿರಲಿಲ್ಲ.

ಈಗ ನಾವು ಪರಸ್ಪರ ಸಂಪರ್ಕಕ್ಕೆ ಬಂದು 3-4 ತಿಂಗಳು ಆಗುತ್ತಾ ಬಂದಿತ್ತು. ಇಷ್ಟು ಕಡಿಮೆ ಸಮಯದಲ್ಲಿಯೇ ನನಗೂ ಕೂಡ ಅವನ ಹಾಗೆಯೇ ಅಭ್ಯಾಸ ಆಗಿಬಿಟ್ಟಿತ್ತು. ಅವನು ನನ್ನ ಭಾಷೆ ಅರಿತಿರಲಿಲ್ಲ ನಿಜ. ಆದರೆ ನನ್ನನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ. ಅವನ ಮಾತುಗಳಿಂದ ಅವನು ನನ್ನನ್ನು ಬಹಳ ಇಷ್ಟಪಡುತ್ತಿದ್ದಾನೆಂದು ಗೊತ್ತಾಗುತ್ತಿತ್ತು. ನಾನು ಈ ಬಗ್ಗೆ ಪರಿಪೂರ್ಣ ವಿಶ್ವಾಸ ಹೊಂದಿರಲಿಲ್ಲ.

ಆದರೆ ನನ್ನ ಹೃದಯ ಅವನನ್ನು ನನ್ನವನನ್ನಾಗಿ ಮಾಡಿಕೊಳ್ಳಲು ವಕಾಲತ್ತು ನಡೆಸುತ್ತಿತ್ತು. ನಾನು ಅವನದೇ ವಿಚಾರಗಳಲ್ಲಿ ಕಳೆದುಹೋಗುತ್ತಿದ್ದೆ. ನಾನು ಅವನೊಂದಿಗೆ ನನ್ನ ಭಾನೆಗಳನ್ನು ಶೇರ್‌ ಮಾಡಬೇಕೊ, ಬೇಡವೋ ಎಂಬ ಗೊಂದಲದಲ್ಲಿದ್ದೆ. ಅದೊಂದು ದಿನ ನನ್ನ ಗೆಳತಿಯೊಬ್ಬಳು ನನ್ನನ್ನು ಭೇಟಿ ಆಗಲೆಂದು ಬಂದಳು. ಆ ಸಮಯದಲ್ಲಿ ನಾನು ಇತ್ಸಿಂಗ್‌ ಬಗ್ಗೆಯೇ ಯೋಚಿಸುತ್ತಿದ್ದೆ. ಗೆಳತಿ ಕೇಳಿದ ಪ್ರಶ್ನೆಗೆ ನಾನು ಎಲ್ಲ ವಿಷಯವನ್ನು ಬಚ್ಚಿಟ್ಟುಕೊಳ್ಳದೇ ಹೇಳಿದೆ.

ಅವಳು ಚಕಿತಗೊಂಡಳು, “ನಿನಗೆ ಚೀನಿ ಹುಡುಗನ ಜೊತೆ ಪ್ರೀತಿ ಆಗಿದೆಯಾ? ಆ ಬಳಿಕ ಎಷ್ಟೊಂದು ಕಷ್ಟಗಳು ಬರುತ್ತವೆ ಎನ್ನುವುದು ನಿನಗೆ ಗೊತ್ತಾ? ಭಾರತೀಯ ಹುಡುಗಿ ಹಾಗೂ ಚೀನಿ ಹುಡುಗ…..! ಅವರ ಸಂಸ್ಕೃತಿ ಎಷ್ಟೊಂದು ಭಿನ್ನವಾಗಿರುತ್ತದೆ ಎಂದು ನಿನಗೆ ಗೊತ್ತಾ? ಜೀವನಶೈಲಿ, ಊಟತಿಂಡಿ, ವೇಷ ಭೂಷಣ ಎಲ್ಲವೂ ವಿಭಿನ್ನ.”

“ಹಾಗಿದ್ದರೆ ಏನಾಯ್ತು? ನಾನು ಅವರ ಸಂಸ್ಕೃತಿ ಸ್ವೀಕರಿಸುತ್ತೇನೆ.”

“ಮತ್ತೆ…… ನಿನಗೆ ಹುಟ್ಟುವ ಮಕ್ಕಳು? ಅವರು ಭಾರತೀಯರೊ ಅಥವಾ ಚೈನೀಸ್‌?”

“ಅವರು ಮನುಷ್ಯರೆಂದು ಕರೆಯಲ್ಪಡುತ್ತಾರೆ. ನಾವು ಅವರಿಗೆ ಭಾರತೀಯ ಸಂಸ್ಕೃತಿ ಮತ್ತು ಚೈನೀಸ್‌ ಸಂಸ್ಕೃತಿ ಎರಡನ್ನೂ ಕಲಿಸುತ್ತೇವೆ.”

ನನ್ನ ಆತ್ಮವಿಶ್ವಾಸ ಕಂಡು ನನ್ನ ಗೆಳತಿ ಕೂಡ ಮುಗುಳ್ನಕ್ಕು, “ನಿನ್ನ ವಿಷಯ ಹೀಗಿದ್ದರೆ, ಅವನೊಂದಿಗೆ ನಿನ್ನ ಹೃದಯದ ಮಾತನ್ನು ಹೇಳಿ ನೋಡು,” ಎಂದಳು.

ನನಗೆ ಗೆಳತಿಯ ಮಾತು ಸರಿ ಎನಿಸಿತು. ಮರುದಿನವೇ ನಾನು ಇತ್ಸಿಂಗ್‌ ಗೆ ಒಂದು ಸಂದೇಶ ಕಳಿಸಿದೆ. ಅದರ ಸಾರಾಂಶ, “ಇತ್ಸಿಂಗ್‌, ನಾನು ಎಂತಹ ಮನೆಯನ್ನು ಮಾಡಬಹುದೆಂದರೆ ಅದರಲ್ಲಿ ಆಟ ಆಡುವ ಕೆಲವು ಮಕ್ಕಳು ಇಂಡಿಯನ್‌ ಆಗಿರಬೇಕು, ಇನ್ನೊಂದಿಷ್ಟು ಮಕ್ಕಳು ಚೈನೀಸ್‌.”

“ಇದೇನು ಹೇಳ್ತಿರುವೆ ಸರಳಾ…? ಆ ಮನೆ ಇಂಡಿಯಾದಲ್ಲಿರುತ್ತಾ ಅಥವಾ ಚೀನಾದಲ್ಲಾ?” ಇತ್ಸಿಂಗ್‌ ಮುಗ್ಧನಾಗಿ ಪ್ರಶ್ನಿಸಿದಾಗ ನಾನು ನಕ್ಕು, “ಆ ಮನೆ ಎಲ್ಲಿಯೇ ಇದ್ದರೂ ಅದು ನಮ್ಮ ಮನೆಯೇ ಆಗಿರುತ್ತದೆ. ನಾವು ಅವರಿಗೆ ಎರಡೂ ಸಂಸ್ಕೃತಿಗಳನ್ನು ಕಲಿಸೋಣ. ಎಷ್ಟು ಚೆನ್ನಾಗಿ ಅನಿಸುತ್ತೆ ಅಲ್ವಾ ಇತ್ಸಿಂಗ್‌?”

ನನ್ನ ಮಾತುಗಳನ್ನು ಕೇಳಿ ಅವನಿಗೆ ಸ್ವಲ್ಪ ಕಸಿವಿಸಿಯಾಗಿತ್ತು ಎನಿಸುತ್ತೆ. ಅವನಿಗೆ ವಿಷಯ ಅರ್ಥವಾಗಿತ್ತು. ಆದರೂ ಅವನು ಅದನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಲು ಇಚ್ಛಿಸುತ್ತಿದ್ದ, “ಇದರರ್ಥ ಏನು ನಿನ್ನದು? ಅಂದರೆ ನಿಜವಾಗ್ಲೂ…..?”

“ಹ್ಞಾಂ ಇತ್ಸಿಂಗ್‌, ನಿಜವಾಗ್ಲೂ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ಐ ಲವ್ ಯೂ!”

“ಆದರೆ ಇದೆಲ್ಲ ಹೇಗಾಗುತ್ತದೆ?” ಅವನಿಗೆ ನಂಬಿಕೆಯೇ ಬರುತ್ತಿರಲಿಲ್ಲ.

“ಯಾಕೆ ಆಗಲು ಸಾಧ್ಯವಿಲ್ಲ?”

“ನನ್ನನ್ನು ಬಹಳ ಜನ ಇಷ್ಟಪಡುತ್ತಾರೆ. ನನಗೆ ಹಲವು ಜನ ಸ್ನೇಹಿತರಿದ್ದಾರೆ. ಹುಡುಗಿಯರು ಕೂಡ ಸಾಕಷ್ಟು ಜನ. ಹೀಗೆ ಅವರು ನನ್ನೊಂದಿಗೆ ಮಾತನಾಡುತ್ತಾರೆ. ಆದರೆ ಈವರೆಗೆ ನನಗೆ ಯಾರೊಬ್ಬರೂ ಐ ಲವ್ ಯೂ ಅಂತಾ ಹೇಳಿರಲಿಲ್ಲ. ನೀನು ನಿಜವಾಗ್ಲೂ…. ಆರ್‌ ಯೂ ಶ್ಯೂರ್‌?”

“ಎಸ್‌ ಇತ್ಸಿಂಗ್‌. 100% ಶ್ಯೂರ್‌… ಐ ಲವ್ ಯೂ.”

“ಓಕೆ… ಸರಿ ಸ್ವಲ್ಪ ಸಮಯ ಕೊಡು.”

“ಸರಿ. ನಾಳೆ ತನಕ ಸಮಯ ತೆಗೆದುಕೊ. ನಾವು ನಾಡಿದ್ದು ಮಾತನಾಡೋಣ,” ಎಂದು ಹೇಳಿ ನಾನು ಆಫ್‌ ಲೈನ್‌ ಆಗಿಬಿಟ್ಟೆ.

ನನ್ನ ಪ್ರಸ್ತಾಪವನ್ನು ಅವನು ಸಹಜವಾಗಿ ತೆಗೆದುಕೊಳ್ಳುವುದು ನನಗೆ ಗೊತ್ತಿತ್ತು. ಆದರೆ ಅವನು ಮಾತನಾಡಿದ ರೀತಿ ನೋಡಿ ನನಗೆ ಒಂದಿಷ್ಟು ಗಾಬರಿಯೂ ಆಗಿತ್ತು. ಅವನಿಗೆ ಹಲವು ಜನ ಹುಡುಗಿಯರ ಜೊತೆ ಸ್ನೇಹವಿತ್ತು. ಅದು ಸ್ವಾಭಾವಿಕ ಕೂಡ ಆಗಿತ್ತು. ಎಲ್ಲಿ ಅವನು ನನ್ನ ಪ್ರಸ್ತಾಪವನ್ನು ತಿರಸ್ಕರಿಸುತ್ತಾನೋ ಎಂದು ಭಯ ಕೂಡ ಆಗುತ್ತಿತ್ತು. ಇಡೀ ರಾತ್ರಿ ನಾನು ನಿದ್ರೆ ಮಾಡಲು ಆಗಲಿಲ್ಲ. ಚಿತ್ರ ವಿಚಿತ್ರ ಯೋಚನೆಗಳು ಬರುತ್ತಿದ್ದವು. ಕಣ್ಮುಚ್ಚುತ್ತಿದ್ದಂತೆಯೇ ಇತ್ಸಿಂಗ್‌ ನ ಮುಖ ಕಣ್ಮುಂದೆ ಬರುತ್ತಿತ್ತು. ಹೇಗೋ ರಾತ್ರಿ ಕಳೆದೆ. ಈಗ ಇಡೀ ದಿನನ್ನು ಕಳೆಯಬೇಕಿತ್ತು. ಏಕೆಂದರೆ ನಾನು ನಾಡಿದ್ದು ಮಾತನಾಡುತ್ತೇನೆ ಎಂದು ಹೇಳಿದ್ದೆ. ಹೀಗಾಗಿ ನಾನು ಉದ್ದೇಶಪೂರ್ವಕವಾಗಿ ಎದ್ದೆ ಮತ್ತು ಸ್ನಾನ ಮಾಡಿ ಓದಲು ಕುಳಿತಿದ್ದೆ.

ಅಷ್ಟರಲ್ಲಿ ವಾಟ್ಸ್ ಆ್ಯಪ್‌ ನಲ್ಲಿ ಇತ್ಸಿಂಗ್‌ ನ ಸಂದೇಶ ನೋಡಿ ಚಕಿತಳಾದೆ. ಜೋರಾಗಿ ಮಿಡಿಯುತ್ತಿದ್ದ ಹೃದಯ ಬಡಿತದೊಂದಿಗೆ ಅವನ ಸಂದೇಶ ಓದಿದೆ. ಅವನೇ ಅದರಲ್ಲಿ ಹೇಳಿಕೊಂಡಿದ್ದ, “ಡಿಯರ್‌ ಸರಳಾ, ನಾನು ರಾತ್ರಿಯಿಡೀ ನಿನ್ನ ಬಗ್ಗೆಯೇ ಯೋಚಿಸುತ್ತಿದ್ದೆ. ಬಹಳಷ್ಟು ಯೋಚನೆಯ ಬಳಿಕ ನಾನು ಒಂದು ನಿರ್ಧಾರಕ್ಕೆ ಬಂದೆ. ನಾವು ಚೀನಾದಲ್ಲಿಯೂ ಒಂದು ಮನೆ ಮಾಡಬೇಕು ಹಾಗೂ ಇಂಡಿಯಾದಲ್ಲಿಯೂ ಒಂದು ಮನೆ ಇರುತ್ತದೆ. ಅಲ್ಲಿ ಬೇಸಿಗೆಯ ರಜೆಯ ದಿನಗಳಲ್ಲಿ ನಮ್ಮ ಮಕ್ಕಳು ತಮ್ಮ ಅಜ್ಜಿ ತಾತನ ಜೊತೆ ಸಮಯ ಕಳೆಯಲು ಅನುಕೂಲ ಆಗಬೇಕು.”

“ಅಂದರೆ ಈ ಮಾತುಗಳ ನೇರ ಅರ್ಥವನ್ನು ತಿಳಿಸಿ ಹೇಳು,” ನಾನು ಸ್ವಲ್ಪ ತುಂಟತನದಿಂದ ಕೇಳಿದಾಗ, ಮರುಕ್ಷಣವೇ ಅವನು ಬೋಲ್ಡ್ ಅಕ್ಷರಗಳಲ್ಲಿ, `ಐ ಲವ್ ಯೂ ಟೂ ಡಿಯರ್‌,’ ಎಂದು ಬರೆದು ಕಳಿಸಿದ.

ಅದರ ಜೊತೆಗೆ ಒಂದು ದೊಡ್ಡ ಹೃದಯ ಕೂಡ ಇತ್ತು. ನನಗೆ ಖುಷಿಯಿಂದ ಕುಣಿಯುಂತಾಯಿತು. ಅದು ಜೀವನದ ಅತ್ಯಂತ ಸುಂದರ ಕ್ಷಣವಾಗಿತ್ತು. ಈಗಂತೂ ನನ್ನ ಜೀವನದ ತೋಟ ಪ್ರೀತಿಯ ಸುವಾಸನೆಯಿಂದ ನಳನಳಿಸುತ್ತಿತ್ತು. ಅವನು ವಾಟ್ಸ್ ಆ್ಯಪ್ ನಲ್ಲಿ ಚಾಟಿಂಗ್‌, ಜೊತೆಗೆ ಇತ್ತೀಚೆಗೆ ಫೋನ್‌ ನಲ್ಲಿ ಮಾತುಕತೆ ಸಹ ನಡೆಸುತ್ತಿದ್ದ.

3-4 ತಿಂಗಳ ಬಳಿಕ ನಾನು ಮತ್ತೊಮ್ಮೆ ಇತ್ಸಿಂಗ್‌ ಜೊತೆಗೆ ನನ್ನ ಹೃದಯದ ಮಾತುಗಳನ್ನು ಆಡಿದೆ, “ಇತ್ಸಿಂಗ್‌, ನಾವು ಪ್ರೀತಿ ಮಾಡುತ್ತಿರುವಾಗ ಮದುವೆಯನ್ನೇಕೆ ಮಾಡಿಕೊಳ್ಳಬಾರದು?”

“ಮದುಿ?”

“ಹೌದು ಮದುವೆ.”

“ನಿನಗೆ ವಿಚಿತ್ರ ಅನಿಸುತ್ತಿಲ್ಲವೇ?”

“ಆದರೆ ಏಕೆ? ಮದುವೆ ಆಗಲೇಬೇಕಿದೆ ಅಲ್ವೆ ಇತ್ಸಿಂಗ್‌ ಅಥವಾ ನೀನು ಕೇವಲ ಟೈಂಪಾಸ್‌ ಮಾಡುತ್ತಿಲ್ಲ ತಾನೇ?” ನಾನು ಅವನನ್ನು ಹೆದರಿಸಿದೆ. ಅವನು ನಿಜವಾಗಿಯೂ ಹೆದರಿದ.

ಅವನು ಸ್ವಲ್ಪ ತೊದಲುತ್ತಾ, “ಹಾಗಲ್ಲ ಸರಳಾ, ಮದುವೆ ಆಗಲೇಬೇಕಿದೆ. ಆದರೆ ಈ ನಿರ್ಧಾರ ಬಹಳ ಬೇಗ ಆಯ್ತು ಅಂತ ನಿನಗೆ ಅನಿಸೋದಿಲ್ವ? ನಾವು ಮದುವೆಗೆ ಮುಂಚೆ ಒಂದು ಸಲ ಮುಖಾಮುಖಿಯಾಗಿ ಭೇಟಿಯಾಗಬೇಕು,”ಎಂದು ಹೇಳಿ ಅವನು ನಕ್ಕುಬಿಟ್ಟ.

ಇತ್ಸಿಂಗ್‌ ನ ಉತ್ತರ ಕೇಳಿ ನಾನು ನನ್ನ ನಗುವನ್ನು ತಡೆದುಕೊಳ್ಳಲು ಆಗಲಿಲ್ಲ.

ಈಗ ನಾವು ಭೇಟಿಯಾಗು ದಿನ ಹಾಗೂ ಜಾಗ ನಿರ್ಧರಿಸಬೇಕಿತ್ತು. ಅದು 2010ರ ಸಮಯ. ಶಾಂಘೈ ವರ್ಲ್ಡ್ ಎಕ್ಸ್ ಪೋ ನಡೆಯಲಿತ್ತು. ಆ ಯೋಜನೆಗೂ ಮುನ್ನ ದೆಹಲಿ ಯೂನಿವರ್ಸಿಟಿಯಲ್ಲಿ ಇಂಡಿಯನ್‌ ಪೆವೆಲಿಯನ್‌ ವತಿಯಿಂದ ವಾಲಂಟಿಯರ್ಸ್ ಗಳ ಆಯ್ಕೆಗಾಗಿ ಇಂಟರ್‌ ವ್ಯೂ ನಡೆಸುತ್ತಿದ್ದರು. ನಾನು ಸ್ವಲ್ಪ ವಿಳಂಬ ಮಾಡಲಿಲ್ಲ. ಇಂಟರ್‌ ವ್ಯೂ ಕೊಟ್ಟೆ ಹಾಗೂ ನನ್ನನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಈ ರೀತಿಯಾಗಿ ನಾವು ಶಾಂಘೈನ ವರ್ಲ್ಡ್ ಎಕ್ಸ್ ಪೋನಲ್ಲಿ ಪರಸ್ಪರರನ್ನು ಭೇಟಿ ಆದೆವು. ಹಾಗೆ ನೋಡಿದರೆ, ನಾವು ಪರಸ್ಪರರ ಹಲವು ಚಿತ್ರಗಳನ್ನು ನೋಡಿದ್ದೆವು. ಪರಸ್ಪರ ಮುಖಾಮುಖಿಯಾಗಿ ನೋಡುವುದು ಬೇರೆಯೇ ಆಗಿರುತ್ತದೆ. ಪರಸ್ಪರರನ್ನು ಭೇಟಿ ಆದ ಬಳಿಕ ನಮ್ಮ ಹೃದಯದಲ್ಲಿ ಯಾವ ಅನುಭವ ಆಗುತ್ತದೊ ಅದನ್ನು ವ್ಯಕ್ತಪಡಿಸುವುದು ಕಠಿಣವಾಗಿತ್ತು. ಆದರೆ ಒಂದು ಮಾತಂತೂ ಖಚಿತವಾಗಿತ್ತು, ನಾವೀಗ ಮೊದಲಿಗಿಂತ ಹೆಚ್ಚು ಖಚಿತವಾಗಿ ಮದುವೆಯಾಗಲು ನಿರ್ಧರಿಸಿದ್ದೆವು.

ಎಕ್ಸ್ ಪೋ ಮುಗಿದಾಗ ನಾನು ಇತ್ಸಿಂಗ್‌ ಗೆ, “ಒಂದು ಸಲ ನನ್ನ ಮನೆಗೆ ಬಾ. ಅಮ್ಮ ಅಪ್ಪನನ್ನು ಭೇಟಿಯಾಗಿ ಅವರನ್ನು ಮದುವೆಗೆ ಸಿದ್ಧ ಮಾಡು. ಅವರೆದುರು ನೀನು ನನಗಾಗಿ ಪರ್ಫೆಕ್ಟ್ ಅನ್ನುವುದನ್ನು ತೋರಿಸಿಕೊಡು,” ಎಂದು ಹೇಳಿದೆ.

ek-jahan-pyar-bhara-story2

ಇತ್ಸಿಂಗ್‌ ನನ್ನ ಕೈಯಲ್ಲಿ ತನ್ನ ಕೈಗಳನ್ನಿಟ್ಟ. ನಾವು ಪರಸ್ಪರರಲ್ಲಿ ಕಳೆದುಹೋದೆವು. 2 ದಿನಗಳ ಬಳಿಕ ಇತ್ಸಿಂಗ್‌ ನನ್ನೊಂದಿಗೆ ದೆಹಲಿ ಏರ್‌ ಪೋರ್ಟ್‌ ನಲ್ಲಿದ್ದ. ನಾನು ಅವನಿಗೆ ನನ್ನ ತಾಯಿ ತಂದೆಯರೊಂದಿಗೆ ಏನು ಮಾತನಾಡಬೇಕು? ಹೇಗೆ ಮಾತನಾಡಬೇಕು? ಎಂಬುದನ್ನು ತಿಳಿಸಿ ಹೇಳುತ್ತಾ ಬಂದೆ. ಅವರನ್ನು ಹೇಗೆ ಇಂಪ್ರೆಸ್‌ ಮಾಡಬೇಕು ಎಂಬುದರ ಬಗ್ಗೆಯೂ ತಿಳಿಸಿದ್ದೆ. ನಮ್ಮಲ್ಲಿ ದೊಡ್ಡವರನ್ನು ತಬ್ಬಿಕೊಳ್ಳಲಾಗುವುದಿಲ್ಲ. ಅವರ ಕಾಲ್ಮುಟ್ಟಿ ನಮಸ್ಕರಿಸಲಾಗುತ್ತದೆ. ಅವರ ಆಶೀರ್ವಾದ ಪಡೆಯಲಾಗುತ್ತದೆ. ಕೈ ಜೋಡಿಸಲಾಗುತ್ತದೆ. ನಾನು ಅವನಿಗೆ ಎಲ್ಲವನ್ನು ಮಾಡಿ ತೋರಿಸಿದೆ. ಆದರೆ ವಿಮಾನ ನಿಲ್ದಾಣದಲ್ಲಿ ಅಮ್ಮ ಅಪ್ಪನನ್ನು ನೋಡುತ್ತಿದ್ದಂತೆಯೇ, ಇತ್ಸಿಂಗ್‌ ಎಲ್ಲವನ್ನೂ ಮರೆತು, ನಗುನಗುತ್ತಲೇ ಅವರನ್ನು ತಬ್ಬಿಕೊಂಡ. ನನ್ನ ಕುಟುಂಬದವರು ಇತ್ಸಿಂಗ್‌ ನನ್ನು ಒಪ್ಪಿಕೊಳ್ಳಲು ತಡ ಮಾಡಲಿಲ್ಲ. ಆದರೆ ಇತ್ಸಿಂಗ್‌ ನ ತಾಯಿ ತಂದೆಗೆ ಈ ವಿಷಯ ತಿಳಿದಾಗ, ಅವರಿಗೆ ನನ್ನನ್ನು ಭೇಟಿ ಮಾಡಿಸಿದಾಗ ಅವರ ಪ್ರತಿಕ್ರಿಯೆ ಸ್ವಲ್ಪ ಭಿನ್ನವಾಗಿತ್ತು. ಅವನ ತಂದೆ ಸ್ವಲ್ಪ ಅಸಮಾಧಾನಗೊಂಡು, “ಹುಡುಗಿಯ ಭಾಷೆ, ರೀತಿ ನೀತಿ, ಆಹಾರ, ವೇಷಭೂಷಣ ಎಲ್ಲವೂ ಬೇರೆಯಾಗಿರುತ್ತದೆ. ಅವಳು ನಮ್ಮ ಮನೆಯಲ್ಲಿ ಹೇಗೆ ನಿಭಾಯಿಸುತ್ತಾಳೆ? ಸಂಬಂಧಿಕರ ಎದುರು ನಮ್ಮ ಅವಮಾನ ಆಗುತ್ತದೆ ಅಲ್ವಾ?”

ಇತ್ಸಿಂಗ್‌ ಅವರಿಗೆ ಭರವಸೆ ಕೊಡುತ್ತಾ, “ಡೋಂಟ್‌ ವರಿ ಪಪ್ಪಾ, ಸರಳಾ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುತ್ತಾಳೆ. ಅವಳು ಸ್ವಯಂ ತನ್ನನ್ನು ತಾನು ಬದಲಿಸಿಕೊಳ್ಳಲು ತಯಾರಿದ್ದಾಳೆ,” ಎಂದ.

“ಆದರೆ ಭಾಷೆ? ಅವಳು ಇಷ್ಟು ಬೇಗ ಚೈನೀಸ್‌ ಹೇಗೆ ಕಲಿತುಕೊಳ್ಳುತ್ತಾಳೆ?”

“ಪಪ್ಪಾ, ಅವಳಿಗೆ ಚೀನಿ ಭಾಷೆ ಬಗ್ಗೆ ಗೊತ್ತು. ಅವಳು ಚೈನೀಸ್‌ ಭಾಷೆಯಲ್ಲಿಯೇ ಗ್ರ್ಯಾಜುಯೇಶನ್‌ ಮಾಡಿದ್ದಾಳೆ. ಅವಳು ಚೀನಿ ಭಾಷೆ ಚೆನ್ನಾಗಿ ಮಾತನಾಡುತ್ತಾಳೆ,’

‘ಇತ್ಸಿಂಗ್‌ ತನ್ನ ಮಾತನ್ನು ಅವರ ಮುಂದಿಟ್ಟ. ಮಗ ಹೇಳಿದ್ದನ್ನು ಕೇಳಿ, ಅವರ ಮುಖದಲ್ಲಿ ಮುಗುಳ್ನಗೆ ಕಂಡುಬಂತು. ಸ್ವಲ್ಪ ನಿರಾಕರಣೆಯ ನಡುವೆಯೂ ಅವನ ಅಮ್ಮ ಅಪ್ಪ ನನ್ನನ್ನು ಒಪ್ಪಿಕೊಂಡರು. ಮದುವೆ ಮಾಡಿಕೊಳ್ಳಲು ಸಹ ಸಿದ್ಧರಾದರು. ಆದರೆ ಅವರು ಅದಕ್ಕಾಗಿ ಒಂದು ಕರಾರು ಹಾಕಿದರು. ನಿಮ್ಮಿಬ್ಬರ ಮದುವೆ ಚೀನಿ ಪದ್ಧತಿಯಂತೆಯೇ ನಡೆಯಬೇಕು. ಇದರಲ್ಲಿ ನಾವು ಯಾರ ಮಾತನ್ನೂ ಕೇಳಿಸಿಕೊಳ್ಳುವುದಿಲ್ಲ.

“ಆಯ್ತು. ನೀವು ಹೇಳಿದಂತೆಯೇ ಆಗಲಿ,” ನಾವಿಬ್ಬರೂ ಏಕಕಾಲಕ್ಕೆ ಒಪ್ಪಿಗೆ ಸೂಚಿಸಿದೆವು.

ಆ ಬಳಿಕ ನಾನು ಈ ವಿಷಯವನ್ನು ನನ್ನ ಅಮ್ಮ ಅಪ್ಪನ ಮುಂದೆ ಹೇಳಿದಾಗ, ಅವರು ಅದಕ್ಕೆ ಅಡ್ಡಿಯುಂಟು ಮಾಡಿದರು. ನನ್ನನ್ವು ನಮ್ಮ ಮನೆಯಿಂದ ಕಳಿಸಿಕೊಡುವಾಗ ಭಾರತೀಯ ರೀತಿರಿವಾಜಿನ ಪ್ರಕಾರವೇ ಕಳಿಸಿಕೊಡುವುದಾಗಿ ಹೇಳಿದರು. ನಾನು ಈ ವಿಷಯನ್ನು ಇತ್ಸಿಂಗ್‌ ಮುಂದೆ ಹೇಳಿದಾಗ ಅವನು ಕೂಡ ಯೋಚನೆಯಲ್ಲಿ ಮುಳುಗಿದ. ಎರಡೂ ಕಡೆಯವರ ಇಚ್ಛೆಯನ್ನು ಹೇಗೆ ಪೂರ್ತಿಗೊಳಿಸಬೇಕೆಂದು ನಮಗೆ ಹೊಳೆಯಲೇ ಇಲ್ಲ.

ಕಡೆಗೆ ನನಗೆ ಒಂದು ಯೋಚನೆ ಹೊಳೆಯಿತು, “ಇತ್ಸಿಂಗ್‌, ನಾವೇಕೆ ನಡುವಿನ ದಾರಿಯನ್ನು ಕಂಡುಕೊಳ್ಳಬಾರದು?”

“ಅಂದರೆ ಏನರ್ಥ?”

“ಅಂದರೆ ನಾವು ಚೈನೀಸ್‌ ಪ್ರಕಾರ ಮದುವೆ ಆಗುವುದು ಹಾಗೂ ಇಂಡಿಯನ್‌ ಪ್ರಕಾರದಲ್ಲೂ.”

“ಅದು ಹೇಗೆ ಆಗುತ್ತದೆ ಸರಳಾ….?”

“ಆರಾಮವಾಗಿ ಆಗುತ್ತದೆ. ನಮ್ಮಲ್ಲಿ ಯಾವ ಪದ್ಧತಿ ಇದೆಯೆಂದರೆ, ವರ ದಿಬ್ಬಣದೊಂದಿಗೆ ವಧುವಿನ ಮನೆಗೆ ಬರುತ್ತಾನೆ. ಹಾಗಾಗಿ ನೀನು ನಿನ್ನ ವಿಶೇಷ ಸಂಬಂಧಿಕರ ಜೊತೆ ಭಾರತಕ್ಕೆ ಬರಬೇಕು. ಆ ಬಳಿಕ ನಾವು ಮೊದಲು ಭಾರತೀಯ ರೀತಿ ರಿವಾಜಿನ ಪ್ರಕಾರ ಮದುವೆ ಆಗೋಣ. ಆ ಬಳಿಕ ಮರುದಿನ ಚೈನೀಸ್‌ ರೀತಿ ರಿವಾಜುಗಳನ್ನು ಅನುಸರಿಸೋಣ. ಚೈನೀಸ್‌ ರೀತಿ ರಿವಾಜು ಏನೇನು ಅಂತ ನನಗೆ ಸ್ವಲ್ಪ ವಿವರಿಸಬೇಕು.”

“ಎಲ್ಲಕ್ಕೂ ಮೊದಲಿನ ಪದ್ಥತಿಯ ಬಗ್ಗೆ ಹೇಳ್ತೀನಿ. ಕೆಲವು ವಿಶೇಷ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಕೋರ್ಟ್‌ ಹೌಸ್‌ ಇಲ್ಲಿ ಸರ್ಕಾರಿ ಆಫೀಸಿನಲ್ಲಿ ಹುಡುಗ ಹುಡುಗಿಗೆ ಕಾನೂನು ರೀತ್ಯ ಗಂಡ ಹೆಂಡತಿಯ ಸ್ಥಾನಮಾನ ದೊರಕುತ್ತದೆ.”

“ಸರಿ ನಾವು ಈ ಪದ್ಧತಿಯನ್ನಂತೂ ಅನುಸರಿಸೋಣ. ಇದರ ಹೊರತಾಗಿ ಮತ್ತೇನು ರೀತಿ ರಿವಾಜುಗಳು ಇರುತ್ತವೆಂದು ಹೇಳಬೇಕು.”

“ಇದರ ಹೊರತಾಗಿ ಟೀ ಸೆರಮನಿ. ಚೈನೀಸ್‌ ಮದುವೆಗಳ ಒಂದು ವಿಶೇಷ ಪದ್ಧತಿಯಾಗಿದೆ. ಇದನ್ನು ಚೈನೀಸ್‌ ನಲ್ಲಿ `ಜಿಂಗ್ ಚಾ’ ಎಂದು ಕರೆಯಲಾಗುತ್ತದೆ. ಅದರ ಅರ್ಥ ಆದರದೊಂದಿಗೆ ಚಹಾದ ಆಹ್ವಾನ ಕೊಡುವುದು. ಇದರನ್ವಯ ವಧುವರರು ಪರಸ್ಪರರ ಕುಟುಂಬದವರಿಗೆ ಆದರ ಗೌರವ ಭಾವನೆ ವ್ಯಕ್ತಪಡಿಸಲು ಮೊದಲು ಪೇರೆಂಟ್ಸ್ ಗೆ, ನಂತರ ಗ್ರ್ಯಾಂಡ್‌ ಪೇರೆಂಟ್ಸ್ ಗೆ ಬಳಿಕ ಸಂಬಂಧಿಕರಿಗೆ ಚಹಾ ಸರ್ವ್ ‌ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಸಂಬಂಧಿಕರು ಅವರಿಗೆ ಆಶೀರ್ವಾದ ಹಾಗೂ ಉಡುಗೊರೆ ನೀಡುತ್ತಾರೆ.”

“ಅದೆಲ್ಲ ಸರಿ ಇತ್ಸಿಂಗ್‌. ಆದರೆ ಈ ಸಂದರ್ಭದಲ್ಲಿ ಚಹಾವೇ ಏಕೆ?”

“ಇದರ ಹಿಂದೆಯೂ ಒಂದು ತರ್ಕವಿದೆ.”

“ಅದೇನು?” ನಾನು ಉತ್ಸುಕತೆಯಿಂದ ಕೇಳಿದೆ.

“ನೋಡು, ಚಹಾದ ಗಿಡವನ್ನು ಬೇರೆಲ್ಲೂ ಟ್ರಾನ್ಸ್ ಪ್ಲಾಂಟ್‌ ಮಾಡಲು ಆಗುವುದಿಲ್ಲ ಎನ್ನುವುದು ನಿನಗೂ ಗೊತ್ತು. ಚಹಾದ ಗಿಡವನ್ನು ಕೇವಲ ಬೀಜದ ಮುಖಾಂತರ ಮಾತ್ರ ಬೆಳೆಯುತ್ತಾರೆ. ಹೀಗಾಗಿ ಅದನ್ನು ನಂಬಿಕೆ, ಪ್ರೀತಿ ಮತ್ತು ಸುಖಿ ಕುಟುಂಬದ ಪ್ರತೀಕ ಎಂದು ಹೇಳಲಾಗುತ್ತದೆ.”

“ಗುಡ್‌,” ಎಂದು ಹೇಳಿ ನಾನು ಮುಗುಳ್ನಕ್ಕೆ. ನನಗೆ ಇತ್ಸಿಂಗ್‌ ನಿಂದ ಚೀನಿ ವಿವಾಹ ವಿಧಿಗಳ ಬಗ್ಗೆ ಕೇಳಿ ಬಹಳ ಖುಷಿಯಾಗಿತ್ತು.

ನಾನು ಅವನನ್ನು ಪುನಃ ಕೇಳಿದೆ, “ಇದರ ಹೊರತಾಗಿ ಬೇರೆ ಕೆಲವು ರೊಚಕ ರೀತಿ ರಿವಾಜುಗಳು ಇವೆಯಾ?”

“ಹೌದು ಮತ್ತೊಂದು ರೋಚಕ ವಿಧಿ ವಿಧಾನವೆಂದರೆ, `ನೆಟ್‌ ಕ್ರಶಿಂಗ್‌ ಸೆಶನ್‌.’ ಅದನ್ನು `ಡೋರ್‌ ಗೇಮ್’ ಎಂದೂ ಕೂಡ ಹೇಳಲಾಗುತ್ತದೆ. ಇದರಲ್ಲಿ ವಧುವಿನ ಗೆಳತಿಯರು ಬಗೆಬಗೆಯ ಮನರಂಜನೆಯ ಆಟದ ಮೂಲಕ ವರನ ಪರೀಕ್ಷೆ ಮಾಡುತ್ತಾರೆ. ಎಲ್ಲಿಯವರೆಗೆ ವರ ಅದರಲ್ಲಿ ಯಶಸ್ವಿಯಾಗುವುದಿಲ್ಲವೋ, ಅಲ್ಲಿಯವರೆಗೆ ಅವನು ವಧುವಿನ ಹತ್ತಿರ ಹೋಗಲಾಗುದಿಲ್ಲ.”

ಈ ರೀತಿ ರಿವಾಜಿನ ಬಗ್ಗೆ ಕೇಳಿ ನನಗೆ ನಗು ಬಂತು. ನಾನು ನಗುತ್ತಲೇ ಹೇಳಿದೆ, “ಈ ಪದ್ಧತಿ ನಮ್ಮಲ್ಲಿನ ಚಪ್ಪಲಿ ಬಚ್ಚಿಡುವ ಪದ್ಧತಿಯನ್ನು ಹೋಲುತ್ತದೆ.”

“ಅಂದರೆ ವರನ ಚಪ್ಪಲಿಯನ್ನು ವಧುವಿನ ಕಡೆಯವರು ಬಚ್ಚಿಡುತ್ತಾರೆ ಹಾಗೂ ಅದಕ್ಕೆ ಬದಲಾಗಿ ಲಂಚ ಕೇಳುವುದು ಅಲ್ವ ಆ ಪದ್ಧತಿ?”

ನಾನು ಲಂಚ ಪದ ಕೇಳಿ ನಗುತ್ತಲೇ, “ಹೌದು. ಅದನ್ನು ಹಾಗೆಂದೇ ತಿಳಿದುಕೋ. ಅಂದಹಾಗೆ ನಿನಗೂ ನಮ್ಮ ಮದುವೆಗಳ ವಿಧಿವಿಧಾನದ ಬಗ್ಗೆ ಸಾಕಷ್ಟು ಗೊತ್ತಿದೆಯಲ್ವಾ?”

“ಹೌದು ಮೇಡಂ, ಈ ಗುಲಾಮ ನಿಮ್ಮವನೇ ಆಗಲಿದ್ದಾನೆ ಅಲ್ವಾ?”

ಅವನ ಆ ಮಾತಿನಿಂದ ನನಗೆ ಬಹಳ ನಗು ಬಂತು. ನನ್ನ ಜೊತೆಗೆ ಅವನೂ ನಕ್ಕ.

“ಈಗ ನಾವು ನಮ್ಮ ಪೋಷಕರನ್ನಾಗಲಿ ನಿಮ್ಮ ಪೋಷಕರನ್ನಾಗಲಿ ನಿರಾಶೆ ಮಾಡುವ ಪ್ರಸಂಗ ಬರುವುದಿಲ್ಲ,” ಎಂದು ನಾನು ಖಚಿತವಾಗಿ ಹೇಳುತ್ತೇನೆ.”

“ಸರಿ…..”

ಅದೊಂದು ದಿನ ಬಂದೇಬಿಟ್ಟಿತು. ದೆಹಲಿಯ ಕರೋಲ್ ಬಾಗ್‌ ನಲ್ಲಿರುವ ನನ್ನ ಮನೆಯಲ್ಲಿ ಶಹನಾಯಿಯ ವಾದ್ಯ ಮೊಳಗುತ್ತಿತ್ತು. ನಾವು ಮೊದಲು ಸಂಕ್ಷಿಪ್ತವಾಗಿ ಭಾರತೀಯ ವಿಧಿ ವಿಧಾನದಲ್ಲಿ ಮದುವೆಯಾದೆವು. ಅದರಲ್ಲಿ ನಾನು ಮೆರೂನ್‌ ಕಲರ್‌ ಲೆಹಂಗಾ ಚೋಲಿ ಧರಿಸಿದ್ದೆ. ಇತ್ಸಿಂಗ್‌ ಬಂಗಾರ ವರ್ಣದ ಶೇರ್ವಾನಿ ಮತ್ತು ಬಹಳ ಒತ್ತಾಯದ ಮೇರೆಗೆ ಪೇಟಾ ಕೂಡ ಧರಿಸಿದ್ದ.

ಮರುದಿನ ನಾವು ಚೀನಿ ಪದ್ಧತಿಯ ಪ್ರಕಾರ ಮದುವೆ ವಿಧಾನಗಳನ್ನು ನೆರವೇರಿಸಿದೆವು. ನಾನು ಚೀನಿ ವಧುವಿನ ಹಾಗೆ ವಿಶೇಷ ಕೆಂಪು ವರ್ಣದ ಡ್ರೆಸ್‌ ಧರಿಸಿದ್ದೆ. ಅದಕ್ಕೆ ಅಲ್ಲಿ ಕಿಪಾಓ ಎಂದು ಹೇಳಲಾಗುತ್ತದೆ. ಕೆಂಪು ಬಣ್ಣವನ್ನು ಅಲ್ಲಿ ಸಮೃದ್ಧಿ ಹಾಗೂ ಉತ್ತಮ ಜೀವನದ ಪ್ರತೀಕ ಎಂದು ಹೇಳಲಾಗುತ್ತದೆ.

ಬೆಳಗ್ಗೆ ಗೇಟ್‌ ಕ್ರ್ಯಾಶಿಂಗ್‌ ಸೆಷನ್‌ ಹಾಗೂ ಟೀ ಸೆರಮನಿ ಮತ್ತು ಮಧ್ಯಾಹ್ನ ಡಿನ್ನರ್‌ ರಿಸೆಪ್ಶನ್‌ ಆಯೋಜಿಸಲಾಗಿತ್ತು. ಎರಡೂ ಕುಟುಂಬದವರು ಈ ಮದುವೆಯಲ್ಲಿ ಬಹಳ ಖುಷಿಯಿಂದ ಪಾಲ್ಗೊಂಡರು.

ಇದರೊಂದಿಗೆ ನಾನು ಹಾಗೂ ಇತ್ಸಿಂಗ್‌ ಹೊಸ ಜೀವನಕ್ಕೆ ಕಾಲಿಟ್ಟೆವು. ನಮ್ಮಿಬ್ಬರ ಸಂಸಾರದ ಪುಟ್ಟ ತೋಟದಲ್ಲಿ 2 ಹೂಗಳು ಅರಳಿದವು. ಮಗ ಮೂವಾಂಗ್‌ ಮತ್ತು ಮಗಳು ರವೀನಾ ನಾವು ನಮ್ಮ ಮಕ್ಕಳಿಗೆ ಚೈನೀಸ್‌ ಮತ್ತು ಭಾರತೀಯ ಎರಡೂ ಸಂಸ್ಕೃತಿ ಕಲಿಸಿದೆವು.

ಇವತ್ತು ದೀಪಾವಳಿ ಹಬ್ಬ. ನಾವು ಬೀಜಿಂಗ್‌ ನಲ್ಲಿದ್ದೆವು. ಆದರೆ ಇತ್ಸಿಂಗ್‌ ಮತ್ತು ಮೂವಾಂಗ್‌ ಕುರ್ತಾ ಪೈಜಾಮ ಧರಿಸಿದ್ದರು. ಮಗಳು ರವೀನಾ ಲೆಹಂಗಾ ಚೋಲಿ ಧರಿಸಿದ್ದಳು.

ವಾಟ್ಸ್ ಆ್ಯಪ್‌ ವಿಡಿಯೋ ಕಾಲ್ ‌ನಲ್ಲಿ ನನ್ನ ಅಮ್ಮ ಅಪ್ಪ ಇದ್ದರು. ಮಕ್ಕಳೊಂದಿಗೆ ಸಂಭಾಷಣೆ ನಡೆಸುತ್ತಾ ಅವರ ಕಣ್ಣುಗಳು ಮೇಲಿಂದ ಮೇಲೆ ತುಂಬಿ ಬರುತ್ತಿದ್ದವು.

ನಿಜ ಹೇಳಬೇಕೆಂದರೆ ನಮ್ಮ ಕುಟುಂಬ ಅಪ್ಪಟ ಚೈನೀಸ್‌ ಕೂಡ ಅಲ್ಲ, ಇತ್ತ ಇಂಡಿಯನ್‌ ಕೂಡ ಆಗಿರಲಿಲ್ಲ. ನನ್ನ ಮಕ್ಕಳು ಒಂದೆಡೆ ಪಿಂಗ್‌ ಪಾಂಗ್‌ ಆಡುತ್ತಿದ್ದರು. ಇನ್ನೊಂದೆಡೆ ಕ್ರಿಕೆಟ್‌ ನ ಅಭಿಮಾನಿಗಳು ಕೂಡ. ಅವರು ನೂಡಲ್ಸ್ ಕೂಡ ತಿನ್ನುತ್ತಾರೆ ಮತ್ತು ಆಲೂ ಪರೋಟಾ ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಅವರು ಹೋಳಿ, ದೀಪಾವಳಿ ಕೂಡ ಆಚರಿಸುತ್ತಾರೆ.

ತ್ವಾನ್‌ ಯಾ ಮಿಡ್‌ ಆಟಮ್ ಫೆಸ್ಟಿವಲ್ ‌ನ ಮಜ ಕೂಡ ಪಡೆಯುತ್ತಾರೆ. ಇದು ಪ್ರತಿಯೊಂದು ಬಂಧನಗಳಿಂದ ಮುಕ್ತವಾದ ಪ್ರೀತಿ ತುಂಬಿದ ಸುಖೀ ಕುಟುಂಬ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ