ರಚಿತಾಗೆ ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯ ಉದ್ಯೋಗ ದೊರಕಿತು. ಅವಳ ಆನಂದಕ್ಕೆ ಮೇರೆಯೇ ಇರಲಿಲ್ಲ. ಏಕೆಂದರೆ ಅದು ಆ ನಗರದ ಅತ್ಯಂತ ಹೆಸರಾಂತ ಶಾಲೆಯಾಗಿತ್ತು. ಒಳ್ಳೆಯ ಸಂಬಳ, ಹೋಗಿ ಬರಲು ಬಸ್ ವ್ಯವಸ್ಥೆ ಮತ್ತು ಸುಸಂಸ್ಕೃತ ಮನೆತನದ ವಿದ್ಯಾರ್ಥಿಗಳು. ಅವಳು ಆ ಶಾಲೆಯಲ್ಲಿ ಧರಿಸಲು ತಕ್ಕುದಾದ ಬಟ್ಟೆಗಳನ್ನು ಹೊಲಿಸಿದಳು. ಮೊದಲ ದಿನ ಶಾಲೆಗೆ ಹೋದಾಗ ಆಕೆಗೆ ತಲೆ ಸುತ್ತಿ ಬಂದಂತಾಯಿತು. ಶಾಲೆಗೆ ಹೋಗುತ್ತಿದ್ದಂತೆಯೇ ಆಕೆಯ ಕೈಗೆ ಒಂದು ಸುತ್ತೋಲೆಯನ್ನು ನೀಡಲಾಯಿತು. ಅಷ್ಟೇ ಅಲ್ಲ, ಮರುದಿನವೇ ಆಕೆಗೆ 12,000 ರೂ. ಜಮೆ ಮಾಡಲು ತಿಳಿಸಲಾಯಿತು. ಏಕೆಂದರೆ ಅಲ್ಲಿನ ಶಿಕ್ಷಕಿಯರು ಯೂನಿಫಾರ್ಮ್ ಧರಿಸಬೇಕಿತ್ತು. ಅದನ್ನು ಆ ಹೆಸರಾಂತ ಶಾಲೆಯ ಪ್ರಿನ್ಸಿಪಾಲರೇ ನಿರ್ಧರಿಸುತ್ತಿದ್ದರು. ಒಂದು ವಿಪರ್ಯಾಸದ ಸಂಗತಿಯೆಂದರೆ, ಪ್ರಿನ್ಸಿಪಾಲರು ತಮಗೆ ಮಾತ್ರ ಯಾವುದೇ ಡ್ರೆಸ್ ಕೋಡ್ ಅನ್ವಯಿಸುವುದಿಲ್ಲ ಎಂಬಂತೆ ಪ್ಲಾಜೊ ಸ್ಕರ್ಟ್, ಸೀರೆ, ಬಿಗಿಯಾದ ಚೂಡಿದಾರ್ ಹೀಗೆ ಯಾವುದನ್ನಾದರೂ ಧರಿಸಬಹುದಿತ್ತು. ಆದರೆ ಟೀಚರ್ ಗಳು ಮಾತ್ರ ಯೂನಿಫಾರ್ಮ್ ಇಲ್ಲದೆ ಶಾಲೆಗೆ ಬರುವಂತಿರಲಿಲ್ಲ.
ಅದೇ ಸ್ಥಿತಿ ಪೂಜಾಳದ್ದು ಕೂಡ. ಒಂದು ಖಾಸಗಿ ಕಂಪನಿಯಲ್ಲಿ ಅವಳಿಗೆ ಅಕೌಂಟೆಂಟ್ ಹುದ್ದೆ ದೊರಕಿತ್ತು. ಜೊತೆಗೆ ಡ್ರೆಸ್ ಕೋಡ್ ಕುರಿತಾದ ಉದ್ದನೆಯ ಆದೇಶ. ಅದರ ಪ್ರಕಾರ :
ಯಾವುದೇ ಮಹಿಳಾ ಉದ್ಯೋಗಿ ಕುತ್ತಿಗೆ ಮುಚ್ಚುವಂಥ ಡ್ರೆಸ್ ನ್ನೇ ಧರಿಸಬೇಕು.
ಸೀರೆ ಕಾಟನ್ ಅಥವಾ ರೇಷ್ಮೆಯದ್ದೇ ಆಗಿರಬೇಕು.
ಹೈನೆಕ್ ಬ್ಲೌಸ್ ನ್ನೇ ಧರಿಸಬೇಕು.
ಸ್ವಾತಂತ್ರ್ಯದ ಇಷ್ಟೊಂದು ವರ್ಷಗಳ ಬಳಿಕ ಮಹಿಳೆಯರು ತಮಗಿಷ್ಟವಾದ ಡ್ರೆಸ್ ಗಳನ್ನು ಧರಿಸುವಂತಿಲ್ಲ.
ಅನಿವಾರ್ಯತೆಯೋ, ಅಗತ್ಯವೋ?
ಶಿಕ್ಷಣ ಸಂಸ್ಥೆ, ಖಾಸಗಿ ಸಂಸ್ಥೆಗಳ ಮಾತು ಬಿಡಿ, ಮಹಿಳೆಯರಿಗೆ ತಮ್ಮ ಖಾಸಗಿ ಜೀವನದಲ್ಲಿ ತಮ್ಮದೇ ಆಯ್ಕೆಯ ಬಟ್ಟೆ ತೆಗೆದುಕೊಳ್ಳುವ ಸ್ವಾತಂತ್ರ್ಯವಿಲ್ಲ. ಈ ಕುರಿತಂತೆ ನೀವು ಯಾವುದೇ ಶಾಲೆಯ ಮಹಿಳಾ ಪ್ರಿನ್ಸಿಪಾಲ್ ರನ್ನು ವಿಚಾರಿಸಿದರೆ, ನಮ್ಮ ಟೀಚರ್ ಗಳು ಮಕ್ಕಳಿಗೆ ರೋಲ್ ಮಾಡೆಲ್ ಆಗಬೇಕು. ಹಾಗಾಗಿ ಈ ನಿಯಮ ಎನ್ನುತ್ತಾರೆ, ಯಂಗ್ ಟೀಚರ್ ಗಳು ಮಾತ್ರ ಮರು ಮಾತಿಲ್ಲದೆ ಈ ನಿಯಮವನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.
ಗಮನಿಸಬೇಕಾದ ಒಂದು ಸಂಗತಿಯೆಂದರೆ, ಯಾವ ಬಟ್ಟೆ ಸರಿ, ಯಾವುದು ತಪ್ಪು ಎನ್ನುವುದರ ಬಗ್ಗೆ ಯಾವುದೇ ಒಂದು ಸಂಸ್ಥೆ ಅಥವಾ ವ್ಯಕ್ತಿ ಹೇಗೆ ನಿರ್ಧರಿಸಲು ಸಾಧ್ಯ?
ಅಂದಹಾಗೆ, ಇಂತಹ ತಾಲಿಬಾನಿ ಯೋಚನೆ ಕೆಲಸದ ಬಗೆಗಿನ ಮೋಟಿವೇಶನ್ ನ್ನು ಕೊನೆಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಯಾವುದೇ ವ್ಯಕ್ತಿ ಅಥವಾ ಮಹಿಳೆ ಯಾವ ಉಡುಗೆ ಧರಿಸಬೇಕೆನ್ನುವುದು ಆಕೆಯ ವೈಯಕ್ತಿಕ ನಿರ್ಧಾರ. ಆಕೆಯ ಮೇಲೆ ತಮ್ಮ ಇಷ್ಟದ ಉಡುಗೆ ಧರಿಸಬೇಕೆಂದು ಹೇಳುವುದು ಆಕೆಯ ಮೂಲಭೂತ ಸ್ವಾತಂತ್ರ್ಯದ ಕಗ್ಗೊಲೆಯೇ ಹೌದು.
ಖಾಸಗಿ ಕಂಪನಿಗಳು ಡ್ರೆಸ್ ಕೋಡ್ ನ್ನು ಜಾರಿಗೊಳಿಸುತ್ತವೆ ಹಾಗೂ ಅದಕ್ಕಾಗಿ ಅವರಿಂದಲೇ ಹಣವನ್ನು ವಸೂಲಿ ಮಾಡುತ್ತವೆ.
ನೀವು ಅತ್ತಿತ್ತ ಗಮನಹರಿಸಿದರೆ, ಹೆಚ್ಚಿನ ಡ್ರೆಸ್ ಕೋಡ್ ಮಹಿಳೆಯರಿಗೆ ಅನ್ವಯಿಸಲ್ಪಡುತ್ತದೆ. ಏಕೆಂದರೆ ಮಹಿಳೆಯರಿಗೆ ಯಾವ ಬಗೆಯ ಉಡುಗೆ ತೊಡಬೇಕು ಎನ್ನುವುದರ ಬಗ್ಗೆ ಶಿಸ್ತು ಇರುವುದಿಲ್ಲ ಎನ್ನುವುದು. ಅವರ ಅಭಿಪ್ರಾಯವಾಗಿರುತ್ತದೆ. ಪುರುಷರು ಮಾತ್ರ ತಾವು ಪ್ಯಾಂಟ್ ಶರ್ಟ್, ಟೀ ಶರ್ಟ್ ಹೊರತು ಮತ್ತೊಂದು ಧರಿಸಲು ಸಾಧ್ಯ ಎನ್ನುವುದೇ ಅವರ ದೈನಂದಿನ ರಾಗವಾಗಿರುತ್ತದೆ. ಭಾರತೀಯ ಸಂಸ್ಕೃತಿ ಹಾಗೂ ನಾಗರಿಕತೆಯ ಹೆಸರಿನಲ್ಲಿ ಸೀರೆ ಎಂಬ ಡ್ರೆಸ್ ಕೋಡ್ ನಲ್ಲಿ ಕಟ್ಟಿ ಹಾಕಲಾಗಿರುತ್ತದೆ. ಪುರುಷರನ್ನು ಪಂಚೆ ಜುಬ್ಬಾದಲ್ಲಿ ಏಕೆ ಬಂಧಿಸಿರಲಾಗುವುದಿಲ್ಲ? ಏನು ಹಾನಿ?
ಮಹಿಳೆ ಮನೆಯಲ್ಲಿಯೇ ಇರಲಿ ಅಥವಾ ಹೊರಗೇ ಹೋಗಲಿ. ಡ್ರೆಸ್ ಕೋಡ್ ನಲ್ಲಿ ಬಂಧಿಸಿಡುವಂಥದ್ದು ಅವಳು ದೇಹದಲ್ಲಿ ಏನಿದೆ? ಮಹಿಳೆಯ ಡ್ರೆಸ್ ಕೋಡ್ ಅವಳ ವಯಸ್ಸಿಗನುಗುಣವಾಗಿ ನಿರ್ಧರಿಸಲ್ಪಡುತ್ತದೆಯೇ?
40 ವರ್ಷದ ಒಬ್ಬ ಮಹಿಳೆ ಸ್ಕರ್ಟ್ ಧರಿಸುವುದು ಸರಿ ಎನಿಸುವುದಿಲ್ಲ. ಆಕೆ ಸೀರೆ ಅಥವಾ ಸಲ್ವಾರ್ ಕಮೀಝನ್ನಷ್ಟೇ ಧರಿಸಬೇಕು. ನನ್ನ ಪ್ರಕಾರ, ಯಾವುದೇ ಒಬ್ಬ ಮಹಿಳೆಗೆ ತಾನು ಏನನ್ನು ಧರಿಸಬೇಕು, ಏನನ್ನು ಧರಿಸಬಾರದು ಎನ್ನುವುದನ್ನು ಸ್ವತಃ ಆಕೆಯೇ ನಿರ್ಧರಿಸಬೇಕು. ತನ್ನ ದೇಹದ ರಚನೆಗನುಸಾರ ಯಾರೇ ಆಗಲಿ ಯಾವುದೇ ಬಗೆಯ ಡ್ರೆಸ್ ನ್ನು ಧರಿಸಬಹುದು. ಅದೇ ಆಕೆಯ ಸೌಂದರ್ಯಕ್ಕೆ ಮೆರುಗು ನೀಡುತ್ತದೆ.
ನಾವು ಮಹಿಳೆಯರನ್ನಷ್ಟೇ ಏಕೆ ಡ್ರೆಸ್ ಕೋಡ್ ನಲ್ಲಿ ಬಂಧಿಸಿಡುತ್ತೇವೆ? ಅವಳನ್ನು ಡ್ರೆಸ್ ಕೋಡ್ ನಲ್ಲಿ ಬಂಧಿಸಿಡುವ ಹಕ್ಕು ಯಾರೊಬ್ಬ ವ್ಯಕ್ತಿಗಾಗಲಿ, ಸಂಸ್ಥೆಗಾಗಲಿ ಇಲ್ಲ.
ಡ್ರೆಸ್ ಕೋಡ್ ಜಾರಿಗೊಳಿಸುವುದರ ಏಕೈಕ ಲಾಭವೆಂದರೆ, ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲ ಆದಾಯ ವರ್ಗದವರನ್ನು ಸಮಾನ ರೇಖೆಯಲ್ಲಿ ನಿಲ್ಲಿಸುತ್ತದೆ. ಏಕೆಂದರೆ ಯಾರೊಬ್ಬರಲ್ಲೂ ಕೀಳರಿಮೆ ಉಂಟಾಗಬಾರದು ಎನ್ನುವುದು ಇದರ ಹಿಂದಿನ ಧೋರಣೆಯಾಗಿರುತ್ತದೆ.
ಡ್ರೆಸ್ ಕೋಡ್ ನಿಂದಾಗುವ ಹಾನಿಗಳ ಬಗೆಗೊಮ್ಮೆ ಗಮನಿಸಿ :
ಸುಂದರವಾಗಿ ಕಂಡು ಬರಬೇಕೆನ್ನುವುದು ಪ್ರತಿಯೊಬ್ಬ ಮಹಿಳೆಯ ಮೂಲಭೂತ ಹಕ್ಕಾಗಿದೆ. ಆದರೆ ಯೂನಿಫಾರ್ಮ್ ಅಥವಾ ಡ್ರೆಸ್ ಕೋಡ್ ಹೆಸರಿನ ಮೇಲೆ ಆಕೆಗೆ ಸಡಿಲ ಬಟ್ಟೆಗಳನ್ನು ಧರಿಸಲು ಹೇಳಲಾಗುತ್ತದೆ. ಅದು ಡ್ರೆಸ್ ಕೋಡ್ ಅಲ್ಲ, ಸುಂದರ ದೇಹವನ್ನು ಬಚ್ಚಿಡುವ ಒಂದು ತಂತ್ರವಾಗಿದೆ.
ಖಾಸಗಿ ಸಂಸ್ಥೆಗಳಲ್ಲಿ ಡ್ರೆಸ್ ಕೋಡ್ ಹೆಸರಿನಲ್ಲಿ ಒಂದು ದೊಡ್ಡ ಮೊತ್ತವನ್ನು ಅವರ ಸಂಬಳದಿಂದ ಕಡಿತಗೊಳಿಸಲಾಗುತ್ತದೆ.
ಡ್ರೆಸ್ ಕೋಡ್ ನಲ್ಲಿ ಬಂಧಿಯಾಗಿಬಿಟ್ಟರೆ, ಸರಿಯಾಗಿ ಸನ್ನದ್ಧರಾಗಬೇಕೆಂಬ ಉತ್ಸಾಹ ಮೊದಲೇ ಹೊರಟು ಹೋಗಿಬಿಡುತ್ತದೆ.
ದಿನ ಅದೇ ಅದೇ ಬಟ್ಟೆ ಧರಿಸಿದರೆ ಮನಸ್ಸಿಗೆ ದಣಿವಾಗುತ್ತದೆ. ಅದು ನಮ್ಮ ಕೆಲಸದ ಗುಣಮಟ್ಟವನ್ನು ಕಡಿಮೆಗೊಳಿಸುತ್ತದೆ.
ಯಾವುದೇ ಒಂದು ಸಂಸ್ಥೆಯಲ್ಲಿ ಡ್ರೆಸ್ ಕೋಡ್ ನಿಗದಿಪಡಿಸುವಾಗ ಉದ್ಯೋಗಿಗಳ ಅಭಿಪ್ರಾಯ ಕೇಳಲಾಗುವುದಿಲ್ಲ. ಒಂದು ವೇಳೆ ಅದನ್ನು ಜಾರಿಗೊಳಿಸಬೇಕೆಂದಾಗ ಅದಕ್ಕಾಗಿ ಉದ್ಯೋಗಿಗಳ ಅಭಿಪ್ರಾಯವನ್ನೇಕೆ ಕೇಳಬಾರದು?
ಹೆಚ್ಚಿನ ಪ್ರಕರಣಗಳಲ್ಲಿ ಬಾಸ್ ಸ್ವಯಂ ಯೂನಿಫಾರ್ಮ್ ಅಥವಾ ಡ್ರೆಸ್ ಕೋಡ್ ನ್ನು ಅನುಸರಿಸುವುದಿಲ್ಲ. ಆದರೆ ಅದನ್ನು ಬೇರೆಯವರಿಂದ ಅಪೇಕ್ಷಿಸಲಾಗುತ್ತದೆ. ಬಹಳಷ್ಟು ಕಂಪನಿಗಳಿಗೆ ಬ್ಲೇಝರ್ ನ್ನೇ ಧರಿಸಲು ಅನಿವಾರ್ಯಗೊಳಿಸಲಾಗುತ್ತದೆ. ದಿನ ದಿನ ಬ್ಲೇಝರ್ ಧರಿಸುವುದರಿಂದ ಅವರು ಸರ್ವೈಕಲ್ ನೋವಿನಿಂದ ಪೀಡಿತರಾಗುತ್ತಾರೆ. ಅದೇ ಬಾಸ್ ತಮಗಿಷ್ಟವಾದ ಡ್ರೆಸ್ ಧರಿಸುತ್ತಾರೆ.
ನಾವು ಎಷ್ಟೇ ಪ್ರಗತಿಯ ದಾರಿಯಲ್ಲಿ ನಡೆದರೂ ಆಫೀಸುಗಳಲ್ಲಿ ಮಾತ್ರ ಈಗಲೂ ಅದೇ ಗುಲಾಮಗಿರಿಯ ಮಾನಸಿಕತೆ ಇದೆ. ತಮ್ಮ ಅವರ ನಡುವೆ ಒಂದು ಅಂತರ ಕಾಯ್ದುಕೊಳ್ಳಬೇಕೆನ್ನುವುದು ಅವರ ನೀತಿಯಾಗಿರುತ್ತದೆ. ತಮ್ಮನ್ನು ತಾವು ಶ್ರೇಷ್ಠ ಹಾಗೂ ಇತರರನ್ನು ಕನಿಷ್ಠ ಶ್ರೇಣಿಯಲ್ಲಿರಿಸುವ ಮಾನಸಿಕತೆ ಈ ಡ್ರೆಸ್ ಕೋಡ್ ನ ಹಿಂದಿರುವ ಮುಖ್ಯ ಕಾರಣವಾಗಿದೆ.
ಈ ಡ್ರೆಸ್ ಕೋಡ್ ನೀತಿ ಯಾವುದೇ ಒಬ್ಬ ಮಹಿಳೆಯ ಖಾಸಗಿತನದ ಮೇಲಿನ ನೇರ ಪ್ರಹಾರವಾಗಿದೆ. ಸೀರೆ ಧರಿಸುವುದರಿಂದಷ್ಟೇ ನಮ್ಮನ್ನು ನಾವು ಭಾರತೀಯರೆಂದು ಭಾವಿಸಬೇಕಾದ ಅಗತ್ಯವಿಲ್ಲ. ನಿಯಮಿತ ತೆರಿಗೆ ಭರಿಸುವುದು ಹಾಗೂ ದೇಶದ ಸೇವೆ ಮಾಡುವುದು ಕೂಡ ಭಾರತೀಯತೆಯ ಹೆಗ್ಗುರುತಾಗಿದೆ.
ನಮ್ಮ ಕತ್ತು ಉರುಳಾಗಿಸುವಂತೆ ಬಂಧಿಸಿಡಬೇಡಿ. ಅದೇ ತರಹ ರೀತಿರಿವಾಜುಗಳಲ್ಲಿ ಕಟ್ಟಿ ಹಾಕಬೇಡಿ. ನಮ್ಮ ಸೃಜನಶೀಲತೆಯ ಮೇಲೂ ಒಮ್ಮೆ ಗಮನಹರಿಸಿ.
– ಸುಮಿತ್ರಾ