ರಚಿತಾಗೆ ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯ ಉದ್ಯೋಗ ದೊರಕಿತು. ಅವಳ ಆನಂದಕ್ಕೆ ಮೇರೆಯೇ ಇರಲಿಲ್ಲ. ಏಕೆಂದರೆ ಅದು ಆ ನಗರದ ಅತ್ಯಂತ ಹೆಸರಾಂತ ಶಾಲೆಯಾಗಿತ್ತು. ಒಳ್ಳೆಯ ಸಂಬಳ, ಹೋಗಿ ಬರಲು ಬಸ್ ವ್ಯವಸ್ಥೆ ಮತ್ತು ಸುಸಂಸ್ಕೃತ ಮನೆತನದ ವಿದ್ಯಾರ್ಥಿಗಳು. ಅವಳು ಆ ಶಾಲೆಯಲ್ಲಿ ಧರಿಸಲು ತಕ್ಕುದಾದ ಬಟ್ಟೆಗಳನ್ನು ಹೊಲಿಸಿದಳು. ಮೊದಲ ದಿನ ಶಾಲೆಗೆ ಹೋದಾಗ ಆಕೆಗೆ ತಲೆ ಸುತ್ತಿ ಬಂದಂತಾಯಿತು. ಶಾಲೆಗೆ ಹೋಗುತ್ತಿದ್ದಂತೆಯೇ ಆಕೆಯ ಕೈಗೆ ಒಂದು ಸುತ್ತೋಲೆಯನ್ನು ನೀಡಲಾಯಿತು. ಅಷ್ಟೇ ಅಲ್ಲ, ಮರುದಿನವೇ ಆಕೆಗೆ 12,000 ರೂ. ಜಮೆ ಮಾಡಲು ತಿಳಿಸಲಾಯಿತು. ಏಕೆಂದರೆ ಅಲ್ಲಿನ ಶಿಕ್ಷಕಿಯರು ಯೂನಿಫಾರ್ಮ್ ಧರಿಸಬೇಕಿತ್ತು. ಅದನ್ನು ಆ ಹೆಸರಾಂತ ಶಾಲೆಯ ಪ್ರಿನ್ಸಿಪಾಲರೇ ನಿರ್ಧರಿಸುತ್ತಿದ್ದರು. ಒಂದು ವಿಪರ್ಯಾಸದ ಸಂಗತಿಯೆಂದರೆ, ಪ್ರಿನ್ಸಿಪಾಲರು ತಮಗೆ ಮಾತ್ರ ಯಾವುದೇ ಡ್ರೆಸ್ ಕೋಡ್ ಅನ್ವಯಿಸುವುದಿಲ್ಲ ಎಂಬಂತೆ ಪ್ಲಾಜೊ ಸ್ಕರ್ಟ್, ಸೀರೆ, ಬಿಗಿಯಾದ ಚೂಡಿದಾರ್ ಹೀಗೆ ಯಾವುದನ್ನಾದರೂ ಧರಿಸಬಹುದಿತ್ತು. ಆದರೆ ಟೀಚರ್ ಗಳು ಮಾತ್ರ ಯೂನಿಫಾರ್ಮ್ ಇಲ್ಲದೆ ಶಾಲೆಗೆ ಬರುವಂತಿರಲಿಲ್ಲ.
ಅದೇ ಸ್ಥಿತಿ ಪೂಜಾಳದ್ದು ಕೂಡ. ಒಂದು ಖಾಸಗಿ ಕಂಪನಿಯಲ್ಲಿ ಅವಳಿಗೆ ಅಕೌಂಟೆಂಟ್ ಹುದ್ದೆ ದೊರಕಿತ್ತು. ಜೊತೆಗೆ ಡ್ರೆಸ್ ಕೋಡ್ ಕುರಿತಾದ ಉದ್ದನೆಯ ಆದೇಶ. ಅದರ ಪ್ರಕಾರ :
ಯಾವುದೇ ಮಹಿಳಾ ಉದ್ಯೋಗಿ ಕುತ್ತಿಗೆ ಮುಚ್ಚುವಂಥ ಡ್ರೆಸ್ ನ್ನೇ ಧರಿಸಬೇಕು.
ಸೀರೆ ಕಾಟನ್ ಅಥವಾ ರೇಷ್ಮೆಯದ್ದೇ ಆಗಿರಬೇಕು.
ಹೈನೆಕ್ ಬ್ಲೌಸ್ ನ್ನೇ ಧರಿಸಬೇಕು.
ಸ್ವಾತಂತ್ರ್ಯದ ಇಷ್ಟೊಂದು ವರ್ಷಗಳ ಬಳಿಕ ಮಹಿಳೆಯರು ತಮಗಿಷ್ಟವಾದ ಡ್ರೆಸ್ ಗಳನ್ನು ಧರಿಸುವಂತಿಲ್ಲ.
ಅನಿವಾರ್ಯತೆಯೋ, ಅಗತ್ಯವೋ?
ಶಿಕ್ಷಣ ಸಂಸ್ಥೆ, ಖಾಸಗಿ ಸಂಸ್ಥೆಗಳ ಮಾತು ಬಿಡಿ, ಮಹಿಳೆಯರಿಗೆ ತಮ್ಮ ಖಾಸಗಿ ಜೀವನದಲ್ಲಿ ತಮ್ಮದೇ ಆಯ್ಕೆಯ ಬಟ್ಟೆ ತೆಗೆದುಕೊಳ್ಳುವ ಸ್ವಾತಂತ್ರ್ಯವಿಲ್ಲ. ಈ ಕುರಿತಂತೆ ನೀವು ಯಾವುದೇ ಶಾಲೆಯ ಮಹಿಳಾ ಪ್ರಿನ್ಸಿಪಾಲ್ ರನ್ನು ವಿಚಾರಿಸಿದರೆ, ನಮ್ಮ ಟೀಚರ್ ಗಳು ಮಕ್ಕಳಿಗೆ ರೋಲ್ ಮಾಡೆಲ್ ಆಗಬೇಕು. ಹಾಗಾಗಿ ಈ ನಿಯಮ ಎನ್ನುತ್ತಾರೆ, ಯಂಗ್ ಟೀಚರ್ ಗಳು ಮಾತ್ರ ಮರು ಮಾತಿಲ್ಲದೆ ಈ ನಿಯಮವನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.
ಗಮನಿಸಬೇಕಾದ ಒಂದು ಸಂಗತಿಯೆಂದರೆ, ಯಾವ ಬಟ್ಟೆ ಸರಿ, ಯಾವುದು ತಪ್ಪು ಎನ್ನುವುದರ ಬಗ್ಗೆ ಯಾವುದೇ ಒಂದು ಸಂಸ್ಥೆ ಅಥವಾ ವ್ಯಕ್ತಿ ಹೇಗೆ ನಿರ್ಧರಿಸಲು ಸಾಧ್ಯ?
ಅಂದಹಾಗೆ, ಇಂತಹ ತಾಲಿಬಾನಿ ಯೋಚನೆ ಕೆಲಸದ ಬಗೆಗಿನ ಮೋಟಿವೇಶನ್ ನ್ನು ಕೊನೆಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಯಾವುದೇ ವ್ಯಕ್ತಿ ಅಥವಾ ಮಹಿಳೆ ಯಾವ ಉಡುಗೆ ಧರಿಸಬೇಕೆನ್ನುವುದು ಆಕೆಯ ವೈಯಕ್ತಿಕ ನಿರ್ಧಾರ. ಆಕೆಯ ಮೇಲೆ ತಮ್ಮ ಇಷ್ಟದ ಉಡುಗೆ ಧರಿಸಬೇಕೆಂದು ಹೇಳುವುದು ಆಕೆಯ ಮೂಲಭೂತ ಸ್ವಾತಂತ್ರ್ಯದ ಕಗ್ಗೊಲೆಯೇ ಹೌದು.
ಖಾಸಗಿ ಕಂಪನಿಗಳು ಡ್ರೆಸ್ ಕೋಡ್ ನ್ನು ಜಾರಿಗೊಳಿಸುತ್ತವೆ ಹಾಗೂ ಅದಕ್ಕಾಗಿ ಅವರಿಂದಲೇ ಹಣವನ್ನು ವಸೂಲಿ ಮಾಡುತ್ತವೆ.
ನೀವು ಅತ್ತಿತ್ತ ಗಮನಹರಿಸಿದರೆ, ಹೆಚ್ಚಿನ ಡ್ರೆಸ್ ಕೋಡ್ ಮಹಿಳೆಯರಿಗೆ ಅನ್ವಯಿಸಲ್ಪಡುತ್ತದೆ. ಏಕೆಂದರೆ ಮಹಿಳೆಯರಿಗೆ ಯಾವ ಬಗೆಯ ಉಡುಗೆ ತೊಡಬೇಕು ಎನ್ನುವುದರ ಬಗ್ಗೆ ಶಿಸ್ತು ಇರುವುದಿಲ್ಲ ಎನ್ನುವುದು. ಅವರ ಅಭಿಪ್ರಾಯವಾಗಿರುತ್ತದೆ. ಪುರುಷರು ಮಾತ್ರ ತಾವು ಪ್ಯಾಂಟ್ ಶರ್ಟ್, ಟೀ ಶರ್ಟ್ ಹೊರತು ಮತ್ತೊಂದು ಧರಿಸಲು ಸಾಧ್ಯ ಎನ್ನುವುದೇ ಅವರ ದೈನಂದಿನ ರಾಗವಾಗಿರುತ್ತದೆ. ಭಾರತೀಯ ಸಂಸ್ಕೃತಿ ಹಾಗೂ ನಾಗರಿಕತೆಯ ಹೆಸರಿನಲ್ಲಿ ಸೀರೆ ಎಂಬ ಡ್ರೆಸ್ ಕೋಡ್ ನಲ್ಲಿ ಕಟ್ಟಿ ಹಾಕಲಾಗಿರುತ್ತದೆ. ಪುರುಷರನ್ನು ಪಂಚೆ ಜುಬ್ಬಾದಲ್ಲಿ ಏಕೆ ಬಂಧಿಸಿರಲಾಗುವುದಿಲ್ಲ? ಏನು ಹಾನಿ?