ಫ್ಯಾಷನ್ನಿನ ಮೋಡಿ : ಪ್ಯಾರಿಸ್ ನಲ್ಲಿ ಕೋವಿಡ್ ನಂತರ ಫ್ಯಾಷನ್ ಸೀಸನ್ ಜನರಿಗಾಗಿ ಒಂದು ಫ್ಯಾಷನ್ ಮ್ಯೂಸಿಯಂ ಶುರು ಮಾಡಿದೆ. ಇಲ್ಲಿ ವಿಶ್ವದೆಲ್ಲೆಡೆಯ ಫ್ಯಾಷನ್ ಕಂಪನಿಗಳು ಪ್ರಖ್ಯಾತ ಡಿಸೈನರ್ ಡ್ರೆಸ್ಸುಗಳನ್ನು ಪ್ರದರ್ಶಿಸುತ್ತದೆ. ಜನ ಬಹಳ ದಿನ ಲಾಕ್ ಡೌನ್ ನಿಂದ ಮನೆಯಲ್ಲೇ ಇದ್ದು ಬೋರಾಗುವ ಬದಲು, ಹೊಸ ಹೊಸ ಫ್ಯಾಷನ್ನಿನ ಡ್ರೆಸ್ ನೋಡಲಿ ಎಂದು. ಶೆನಾಯ್ ಕಂಪನಿಯ ಈ ಕ್ರಿಯೇಶನ್ ಸಾಕಷ್ಟು ಆಕರ್ಷಕ ಎನಿಸಿದೆ. ಇವರು ಭಾರತದ ಲೆಹಂಗಾ ಸಹ ಬಿಡದೆ ಆಧುನಿಕ ರೀತಿಯಲ್ಲಿ ವಿನ್ಯಾಸಗೊಳಿಸಿದ್ಜಾರೆ.
ಟೆಕ್ನಿಕಲ್ ಅಂದ್ರೆ ಹೀಗಿರಬೇಕು :
ಕೋವಿಡ್ ಕಾಟದಿಂದಾಗಿ ಮೂರು ಹೊತ್ತೂ ಸದಾ ವ್ಯಾಕ್ಸಿನೇಶನ್ ಒಂದರ ಚಿಂತೆ ಮಾಡುತ್ತಾ ಕುಳಿತರಾಯಿತೇ? ಇದೀಗ ಥಿಯೇಟರ್ ಗಳಲ್ಲಿ ಒಂದು ಕಂಪನಿ ವೈರ್ ಲೆಸ್ ಲೈಟಿಂಗ್ ಸಿಸ್ಟಂ ಅಳವಡಿಸಲು ಆರಂಭಿಸಿದೆ. ಇದರಿಂದಾಗಿ ಎಲ್ಲಾ ಪಾತ್ರಧಾರಿಗಳೂ ವೈರ್ ಹಂಗಿಲ್ಲದೆ ಹಾಯಾಗಿ ಭಾವಾಭಿನಯ ವ್ಯಕ್ತಪಡಿಸುತ್ತಾ ವೇದಿಕೆ ಮೇಲೆ ಕಾಣಿಸಬಹುದಾಗಿದೆ. ಕಡಿಮೆ ವಿದ್ಯುತ್ ಬಳಸುವ ಈ ವೈರ್ ಲೆಸ್ ಸಿಸ್ಟಂ ಎಲ್ಲರ ಮನೆ ತಲುಪಿದರೆ, ಇಂಟೀರಿಯರ್ ಡೆಕೋರೇಶನ್ನಿನಲ್ಲಿ ದೊಡ್ಡ ಕ್ರಾಂತಿಯೇ ಆದೀತು. ಎಲೆಕ್ಟ್ರಿಶನ್ ಹಂಗಿಲ್ಲದೆ ಇದನ್ನು ಸುಲಭವಾಗಿ ಅಳವಡಿಸಬಹುದಂತೆ. ಇನ್ನಾದರೂ ಜನ ಮನೆಗಳಲ್ಲಿ ವೈರ್ ತಗುಲಿಸಿಕೊಂಡು ಕೆಳಗೆ ಬೀಳದೆ ನೆಮ್ಮದಿ ಕಾಣಬಹುದು.
ಮಾನವರ ದೋಷಕ್ಕೆ ಅಪರಾಧಿ ಯಾರು? :
ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಧಿಕಾರ ಪಡೆದ ನಂತರ, ಹೆಂಗಸರ ಮೇಲೆ ಅತ್ಯಾಚಾರ ನಡೆಸಿದ ಪಾಪಿಗಳನ್ನು ಬಿಡುಗಡೆಗೊಳಿಸಿದರು. ಹಿಂದಿನ ಸರ್ಕಾರ ಯಾರಿಗೆ ಶಿಕ್ಷೆ ವಿಧಿಸಿತ್ತೋ ಅವರನ್ನೆಲ್ಲ ಬಿಡುಗಡೆ ಮಾಡಿತು. ಹೀಗಾಗಿ ಈ ಕಿಡಿಗೇಡಿಗಳು ತಮಗೆ ಶಿಕ್ಷೆ ಆಗುವಂತೆ ದೂರು ನೀಡಿದ ಹೆಂಗಸರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ, ನ್ಯಾಯಾಧೀಶರುಗಳನ್ನು ಸಾಯಹೊಡೆದು, ಸಾಕ್ಷಿಗಳನ್ನು ಶಿಕ್ಷಿಸುತ್ತಿದ್ದಾರೆ. ಅಂಥ ಮುಗ್ಧ ಹೆಂಗಸರನ್ನು ಇವರು ಎಳೆದೊಯ್ಯುತ್ತಿದ್ದರೆ ತಾಲಿಬಾನಿ ಸರ್ಕಾರ ಖುಷಿ ಆಚರಿಸುತ್ತಿದೆ, ಜನ ಬಯಸುತ್ತಿದ್ದ ಧರ್ಮ ಬೆಂಬಲಿಗ ಸರ್ಕಾರ ರೂಪುಗೊಂಡಿದ್ದು, ಎಲ್ಲೆಲ್ಲೂ ಸ್ವರ್ಗವೇ ಕಂಡುಬರುತ್ತಿದೆ! ಇಂಥ ಅತ್ಯಾಚಾರಿಗಳು ಸದಾ ಧರ್ಮದ ಆಶ್ರಯ ಪಡೆಯುತ್ತಾರೆ, ಏಕೆಂದರೆ ಧರ್ಮ ಸನಾತನ ಕಾಲದಿಂದಲೂ ಪೂಜೆ ಅರ್ಚನೆಗಳ ಹೆಸರಲ್ಲಿ ಎಲ್ಲಾ ಪಾಪಗಳನ್ನೂ ಅವಿತಿರಿಸುತ್ತಿದೆ. ಹೀಗಾಗಿ ಧರ್ಮವೇ ಎಲ್ಲಾ ದೋಷಗಳ ಹಿಂದಿನ ನೈಜ ಅಪರಾಧಿ!
ನಾಣ್ಯದ ಇನ್ನೊಂದು ಮುಖ :
ಈಗ ಎಲ್ಲಿ ನೋಡಿದರೂ ಆನ್ ಲೈನ್ ಬಿಸ್ ನೆಸ್ ಲಕಲಕ ಹೊಳೆಯುತ್ತಿದೆ, ಆದರೆ ಇದರ ಹಿಂದಿನ ಸತ್ಯ ಅಂದ್ರೆ, ಇದರ ಸ್ಕೇಲ್ ಅಂದರೆ ಆಳ ಎಷ್ಟು ಡೀಪ್ ಎಂದರೆ, ಎಲ್ಲೆಡೆಯಿಂದ ಬಂಡವಾಳ ಧಾರಾಳ ಹರಿದುಬರುತ್ತಿದೆ. ಯಾರು ಬಿಸ್ ನೆಸ್ ಡೆವಲಪ್ ಮಾಡಿದರೋ, ಅದನ್ನು ಮುಂದುವರಿಸಲು, ಇತರ ಶ್ರೀಮಂತರ ಸಹಾಯ ಪಡೆಯಲೇ ಬೇಕಾಗುತ್ತದೆ. ಆಗ ಮಾತ್ರ ಅದು ಮುನ್ನೇರಲು, ಹಣ ಸಿಗಲು ಸಾಧ್ಯ. ಬೂಹೂ ಫ್ಯಾಷನ್ ಚೇನ್, ಫೈಬರ್ ಹೆಸರಲ್ಲಿ ಫ್ಯಾಷನ್ ನಡೆಸಿದ ಇಂಥದೇ ಸಂಸ್ಥೆ ಆಗಿದ್ದು, ಇದೀಗ ಸ್ವೀಡಿಶ್ ಬ್ಯಾಂಕ್ ಗೇ ತನ್ನ ಒಂದು ಭಾಗ ಮಾರಿಕೊಳ್ಳುತ್ತಿದೆ. ಈ ಬ್ಯಾಂಕ್ ತನ್ನ ಹೂಡಿಕೆದಾರರ ಬಲದಿಂದ ಇಂಥ ಎಷ್ಟೋ ಕಂಪನಿಗಳನ್ನು ಸೆಳೆದುಕೊಂಡಿದೆ. ಹೀಗಾಗಿ ಇಂಥ ಫ್ಯಾಷನ್ ಕಂಪನಿಗಳು ಲಂಡನ್ನಿನ ರಸ್ತೆ ಬದಿ ನಿಂತು ಇಂಥ ಕ್ರೂರ ಕಾನೂನನ್ನು ಬದಲಾಯಿಸಲಾಗದು ಅಥವಾ ಹಣ ಕೊಟ್ಟು ಒಂದು ಸುವ್ಯವಸ್ಥಿತ ಕಂಪನಿಯನ್ನು ಮಾರಿಬಿಡುವಂತೆ ಒತ್ತಾಯ ಮಾಡಬಲ್ಲದಷ್ಟೆ.
ದುರಾಸೆ ಯಾರಿಗೂ ಸಲ್ಲದು :
ಕೋವಿಡ್ ವಿರುದ್ಧ ಹೋರಾಡಲು ಯಾವ ವೇಗದಲ್ಲಿ ಫಾರ್ಮಾ ಕಂಪನಿಗಳು ವ್ಯಾಕ್ಸಿನ್ ತಯಾರಿಸುತ್ತಿವೆ ಎಂದರೆ, ಇಡೀ ವಿಶ್ವ ಇದಕ್ಕಾಗಿ ಇವರನ್ನು ಹೊಗಳುತ್ತಿರುವುದಲ್ಲದೆ, ಪೇಟೆಂಟ್ ಹೆಸರಲ್ಲಿ ಅದರ ಅಗ್ಗದ ಸಂಸ್ಕರಣವನ್ನು ನಿಲ್ಲಿಸಿ, ಕೋಟ್ಯಂತರ ಡಾಲರ್ ಗಳ ಲಾಭ ಗಳಿಸುತ್ತ ಕೆಂಗಣ್ಣು ಬೀರುತ್ತಿದೆ. ಈಗ ಶ್ರೀಮಂತ ಸರ್ಕಾರಗಳ ಮೇಲೆ ಒತ್ತಡ ಹೆಚ್ಚುತ್ತಿದ್ದು, ಅದು ಪೇಟೆಂಟ್ ಕಾನೂನನ್ನು ಸಡಿಲ ಮಾಡಬೇಕೆಂದು ಒತ್ತಾಯ ಹೇರುತ್ತಿದೆ. ಆಗ ಮಾತ್ರ ಎಷ್ಟೋ ದೇಶಗಳ ಫಾರ್ಮಾ ಕಂಪನಿಗಳು ಈ ಮೂಲಕ ಲೂಟಿ ಹೊಡೆಯುವಲ್ಲಿ ಮುಂದಿದ್ದು, ಡೂಪ್ಲಿಕೇಟ್ ತಯಾರಿಸಿ, ಅಗ್ಗದಲ್ಲಿ ಮಾರಿಕೊಂಡು ತಮ್ಮ ಜೇಬು ಭದ್ರಪಡಿಸಿಕೊಳ್ಳುತ್ತಿವೆ. ಕೋವಿಡ್ ನಂಥ ಮಹಾಮಾರಿಗೆ ಬಲಿಯಾದವರು ವಿಶ್ವದಲ್ಲಿ ಎಲ್ಲೇ ಇರಲಿ, ಅದರಿಂದ ಇತರರು ಸುರಕ್ಷಿತರಾಗಿರಲು ಸಾಧ್ಯವೇ ಇಲ್ಲ. ಮಾನವರ ದುರಾಸೆ ಎಂಬುದು ಕೋವಿಡ್ ಗಿಂತಲೂ ಕ್ರೂರ ರೋಗ!
ಕಲೆಯ ಆರಾಧನೆ :
ರಷ್ಯಾದಂಥ ಅಧಿಕಾರ ದಾಹದ ದೇಶಗಳಲ್ಲೂ ಸಹ ಆಗಾಗ ಡ್ಯಾನ್ಸ್ ಸ್ಪರ್ಧೆ ಏರ್ಪಡಿಸುತ್ತದೆ. ಅಂಥವನ್ನು ಬಿಡಬೇಡಿ. ಏಕೆಂದರೆ ಇಲ್ಲಿನ ಕಲೆ ಚೀನಾ ಮತ್ತು ಅಮೆರಿಕಾದಿಂದಲೂ ಒದಗಿಸಲಾಗದಂಥದ್ದು. ಹಾಗಾಗಿಯೇ ದುಬೈ ಸಹ ಪ್ರತಿ ಕಮರ್ಷಿಯಲ್ ಈವೆಂಟ್ ಗಾಗಿ, ರಷ್ಯನ್ ಆರ್ಟಿಸ್ಟೇ ಬೇಕೆಂದು ರೆಡ್ ಕಾರ್ಪೆಟ್ ಹಾಸಿ ಕಾಯುತ್ತದೆ.
ಅಪಾಯದಲ್ಲಿ ಪ್ರಜಾಪ್ರಭುತ್ವ :
ಯಾವ ರೀತಿ ಮುಂಬೈನ ನಾರ್ಕೋಟಿಕ್ಸ್ ಬ್ಯೂರೋ ಆರ್ಯನ್ ಖಾನ್ ನನ್ನು ಗೋಳಾಡಿಸಿತೋ ಅದೇ ತರಹ ಲೆಬನಾನ್ ನಲ್ಲಿ ನವದಾ ಹೋಮಿ, ಎಂಬ ಹೆಣ್ಣಿನೊಂದಿಗೆ ನಡೆಯಿತು. ಇವಳು ಅಲ್ಲಿ ಅಮೆರಿಕನ್ ಪತ್ರಕರ್ತೆ. ವಾರೆಂಟ್ ರಹಿತವಾಗಿಯೇ 14ನೇ ನವೆಂಬರ್ ನಂದು ಜನರಲ್ ಸೆಕ್ಯೂರಿಟಿಯವರು ಅವಳ ಮನೆಗೆ ನುಗ್ಗಿ, ಒಂದಿಷ್ಟು ಕ್ಯಾನೆಬೀಸ್ (ಡ್ರಗ್ಸ್) ಸಿಕ್ಕಿತೆಂದು ಆರೋಪಿಸಿದರು. ಅವಳ ಸಂಗಡಿಗರನ್ನೂ ಜೇಲಿಗೆ ತಳ್ಳಿದರು. ಆಕೆಯ ಕಂಪ್ಯೂಟರ್, ಕಾಗದಗಳು, ರಿಪೋರ್ಟ್ಸ್, ಮೊಬೈಲ್ ಇತ್ಯಾದಿ ವಶಪಡಿಸಿಕೊಂಡರು. ವಿಶ್ವವಿಡೀ ಇದನ್ನು ಖಂಡಿಸಿದಾಗ, ಡಿಸೆಂಬರ್ 8ರಂದು ರಿಲೀಸ್‌ಮಾಡಿದರು. ಡ್ರಗ್ಸ್ ದೇಶ ದ್ರೋಹದ ಆರೋಪ ಹೊರಿಸಿ, ವಿಶ್ವ ಮತ್ತೆ ತಾಲಿಬಾನಿ ಆಗುತ್ತಿದೆ, ಹೆಸರಿಗೆ ಮಾತ್ರ ಪ್ರಜಾಪ್ರಭುತ್ವದ ವೇಷ ಧರಿಸಿದೆ.