ಇಂದೆಲ್ಲಾ ಒಂದು ಸಣ್ಣ ಶಸ್ತ್ರಚಿಕಿತ್ಸೆ ಆದ್ರೇ ಅದಕ್ಕೆ ಬಾರೀ ತಲೆ ಕೆಡಿಸಿಕೊಂಡು ಹತ್ತಾರು ವೈದ್ಯರ ಬಳಿ ಸುತ್ತಾಡಿ  ಅಯ್ಯೋ  ಜೀವನವೇ ಹಾಳಾಗಿ ಹೋಯ್ತು ಎಂದು ಕೊರಗುವವರೇ ಹಚ್ಚಾಗಿರುವಾಗ, ಬಾಲ್ಯದಿಂದಲೇ ಪೋಲಿಯೋಗೆ ಒಳಗಾಗಿ, 32 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರೂ  ಅವೆಲ್ಲವನ್ನು ಮೆಟ್ಟಿ ವೀಲ್ ಛೇರಿನಲ್ಲೇ ಕುಳಿತುಕೊಂಡು ಹತ್ತು ಹಲವಾರು ಕ್ರೀಡೆಗಳಲ್ಲಿ ಭಾರತದ ತ್ರಿವರ್ಣಧ್ವಜವನ್ನು ಬಾನೆತ್ತರಕ್ಕೆ ಹಾರಿಸಿದ, ಚಲನಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಲ್ಲದೇ, ಸಿಂಡಿಕೇಟ್ ಬ್ಯಾಂಕಿನಲ್ಲಿ ದಿಟ್ಟತನದ ಮ್ಯಾನೇಜರ್ ಆಗಿರುವ ಛಲಗಾರ್ತಿ ಮಾಲತಿ ಕೃಷ್ಣಮೂರ್ತಿ ಹೊಳ್ಳ  ಅವರ ಯಶೋಗಾಥೆ  ಇದೋ ನಿಮಗಾಗಿ.

ಉಡುಪಿ ಜಿಲ್ಲೆಯ ಕೋಟಾ ಗ್ರಾಮದ ಮೂಲದ ಬೆಂಗಳೂರಿನ ಉಡುಪಿ ಹೊಟೇಲ್ ಒಂದರಲ್ಲಿ ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದ ಕೃಷ್ಣಮೂರ್ತಿ ಹೊಳ್ಳ ಮತ್ತು ಪದ್ಮಾವತಿ ಹೊಳ್ಳ ದಂಪತಿಗಳಿಗೆ 6 ಜುಲೈ 1958ರಲ್ಲಿ ಕೋಟಾ ಗ್ರಾಮದಲ್ಲಿ ಮಾಲತಿ ಹೊಳ್ಕ ಅವರು ನಾಲ್ಕು ಮಕ್ಕಳ ಪೈಕಿ ಕಡೆಯವರಾಗಿ ಜನಿಸುತ್ತಾರೆ, ಆರಂಭದ ಕೆಲವು ತಿಂಗಳುಗಳ ಕಾಲ ಮಾಲತಿ ಹೊಳ್ಳ  ಅವರೂ ಸಹಾ ಇತರೇ ಮಕ್ಕಳಂತೆ ಸಹಜವಾಗಿಯೇ ಇದ್ದು ಬಹಳ ಚೂಟಿಯಾಗಿ ಮುದ್ದು ಮುದ್ದಾಗಿ ಇರುತ್ತಾರೆ. ಅವರಿಗೆ 14 ತಿಂಗಳ ವಯಸ್ಸಾಗಿದ್ದಾಗ ಇದ್ದಕ್ಕಿಂದ್ದಂತೆಯೇ  ವಾರಗಟ್ಟಲೇ ಜ್ವರಕ್ಕೆ ತುತ್ತಾಗಿ ಎಲ್ಲಾ ಔಷಧೋಪಚಾರಗಳು ಮುಗಿದಿ ಜ್ವರ ಬಿಡುವ ಹೊತ್ತಿಗೆ ಮಾಲತಿ ಹೊಳ್ಳ ಅವರಿಗೆ  ಪೋಲಿಯೋ ವಕ್ಕರಿಸಿಕೊಂಡು ಇಡೀ ದೇಹ  ಅವರ ನಿಯಂತ್ರಣಕ್ಕೆ ಬಾರದಂತೆ ಆಗಿಬಿಡುತ್ತದೆ.

4

ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಕಡೆಯ ಮಕ್ಕಳಿಗೆ ಸ್ವಲ್ಪ ಹೆಚ್ಚಿನ ಪ್ರೀತಿಯನ್ನೇ ತೋರಿಸುವುದು ಸಹಜವಾಡಿಕೆ. ಅದೇ ರೀತಿಯಾಗಿ ಅವರ ಪೋಷಕರು ಮಾಲತಿಯವರಿಗೆ ಚಿಕಿತ್ಸೆ ಕೊಡಿಸಬೇಕು ಎಂದು  ಅಲೆಯದ ಆಸ್ಪತ್ರೆಗಳಲ್ಲಿಲ್ಲ. ಆ  ಕಡು ಬಡತನದ ನಡುವೆಯೂ ಛಲ ಮತ್ತು ಆಸೆಯನ್ನು ಬಿಡದೇ, ದೇವರ ಮೇಲೆ ಭಾರ ಹಾಕಿ ಮಾಲತಿಯವರಿಗೆ  ಹತ್ತಾರು ಕಡೆ ಚಿಕಿತ್ಸೆ ಕೊಡಿಸಿದರೂ ಫಲ ನೀಡದಿದ್ದಾಗ ಪ್ರತೀ ದಿನವೂ ಕಣ್ಣಿರಿನಲ್ಲಿಯೇ ಕೈ ತೊಳೆಯುತ್ತಿರುತ್ತಾರೆ. ಅದೊಮ್ಮೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪೋಲಿಯೋಗೆ ಚಿಕಿತ್ಸೆ ಕೊಡುತ್ತಾರೆ ಎಂಬ ವಿಷಯವನ್ನು ತಿಳಿದ ಅವರ ತಾಯಿ ತಮ್ಮ ಮನೆಯಿಂದ ಬಹಳ ದೂರವಿದ್ದ ಆಸ್ಪತ್ರೆಗೆ  ತಾವೇೆೆ ಎತ್ತಿಕೊಂಡು ಬಿಟಿಎಸ್ ಬಸ್ಸಿನಲ್ಲಿ ಪ್ರಯಾಣಿಸಿ ಆಸ್ಪತ್ರೆಗೆ ಕರೆತರುತ್ತಾರೆ  ಬರೋಬ್ಬರಿ 2 ವರ್ಷಗಳ ಕಾಲ ಎಲೆಕ್ಟ್ರಿಕ್ ಶಾಕ್ ಟ್ರೀಟ್ಮೆಂಟನ್ನು ಆ ಸಣ್ಣ ವಯಸ್ಸಿನ ಮಾಲತಿ ಅವರಿಗೆ ತಡೆದು ಕೊಳ್ಳಲು ಆಗದೇ ಬಹಳ ನೋವಿನಿಂದ ಅಳುತ್ತಿದ್ದರೆ, ತಾಯಿಯೂ ಸಹಾ  ಮಗಳ ಸಂಕಟವನ್ನು ತಡೆಯಲಾಗದೇ ಕಣ್ಣೀರು ಹಾಕುತ್ತಿದ್ದರಂತೆ. ಚಿಕಿತ್ಸೆ ಮುಂದುವರೆಸುತ್ತಿದ್ದಂತೆಯೇ ಅದೊಂದು ದಿನ ಮಾಲತಿಯವರ ದೇಹ ಸ್ಪಂದಿಸಿ, ಸೊಂಟದಿಂದ ಕೆಳಗಿನ ಶರೀರ ನಿಶ್ಚಲವಾಗೇ ಇತ್ತಾದರು ನಿಧಾನವಾಗಿ ಕೈಗಳನ್ನು ಆಡಿಸುವಷ್ಟು ಅತ್ತಿತ್ತ ತಿರುಗುವಂತಾದಾಗ ಅವರಿಗಾದ ಆನಂದ ಅಷ್ಟಿಷ್ಟಲ್ಲದೇಹದಲ್ಲಿ ಕೊಂಚವೇ ಶಕ್ತಿ  ಇದ್ದರೂ ಮನಸ್ಸಿನಲ್ಲಿ ಅಗಾಧವಾದ ಛಲವಿದ್ದು ತನ್ನ ಬದುಕಿಗೆ ಸವಾಲಾಗಿರುವ ಪೊಲಿಯೋವನ್ನು ಮೆಟ್ಟಿ ನಿಲ್ಲುವ ಧೃಢ ಸಂಕಲ್ಪವನ್ನು ಮಾಡಿಕೊಂಡರು. ತಾನೊಬ್ಬ ವಿಕಲಾಂಗ ಹುಡುಗಿ ಎನ್ನುವುದನ್ನು ಮರೆಯಲು ಪ್ರಯತ್ನಿಸಿದ್ದಲ್ಲದೇಯಾರು ಏನೇ  ಹೇಳಿದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಒಂದು ದಿನ ಪ್ರಪಂಚವೇ ತನ್ನೆಡೆಗೆ ತಿರುಗಿ ನೋಡುವಂತಹ ಸಾಹಸ ಮಾಡುತ್ತೇನೆ ಎನ್ನುವ ಸಂಕಲ್ಪವನ್ನು ತೊಟ್ಟರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ