ನಮ್ಮ ದೇಹ ಸಣ್ಣ ಸಣ್ಣ ಜೀವಕೋಶಗಳಿಂದ ಸೇರಿಕೊಂಡು ನಿರ್ಮಾಣವಾಗಿರುತ್ತದೆ. ಈ ಚಿಕ್ಕ ಪುಟ್ಟ ಜೀವಕೋಶಗಳು ಪ್ರೋಟೀನ್ ನಿಂದ ನಿರ್ಮಾಣವಾಗಿರುತ್ತವೆ. ಹೀಗಾಗಿ ದೇಹವನ್ನು ಅತ್ಯಂತ ಗಟ್ಟಿಗೊಳಿಸಲು ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ. ಇದು ಅತ್ಯಂತ ಅವಶ್ಯಕ ಪೋಷಕಾಂಶಗಳಲ್ಲಿ ಒಂದಾಗಿದೆ.
ಆದರೆ ಕೇವಲ ಪ್ರೋಟೀನ್ ತೆಗೆದುಕೊಂಡರಷ್ಟೇ ಸಾಲದು, ಯಾವ ವ್ಯಕ್ತಿ ಎಷ್ಟು ಪ್ರಮಾಣದಲ್ಲಿ ಪ್ರೋಟೀನ್ ಸೇವಿಸಬೇಕು ಎನ್ನುವುದನ್ನು ಕೂಡ ತಿಳಿದುಕೊಳ್ಳುವುದು ಅತ್ಯವಶ್ಯ. ಏಕೆಂದರೆ ಆ ವ್ಯಕ್ತಿಯ ಅಗತ್ಯಗಳು ಪೂರ್ತಿ ಆಗುವುದರ ಜೊತೆ ಜೊತೆಗೆ ಆದರೆ ಲಾಭ ಕೂಡ ಸಿಗುವಂತಾಗಬೇಕು.
ಈ ಕುರಿತಂತೆ ಏಷಿಯನ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸೆಸ್ ನ ಡಯೇಟಿಶಿಯನ್ ಡಾ. ವಿಭಾ ಏನು ಹೇಳುತ್ತಾರೆ ಕೇಳಿ :
ಪ್ರೋಟೀನ್ ಏಕೆ ಅತ್ಯವಶ್ಯಕ?
ನಮ್ಮ ದೇಹದ ಶೇ.18-19 ರಷ್ಟು ಭಾರ ಪ್ರೋಟೀನ್ ನ ಕಾರಣದಿಂದ ಆಗಿರುತ್ತದೆ. ಪ್ರೋಟೀನ್ ನಮ್ಮ ಸ್ನಾಯುಗಳು, ರಕ್ತ, ಹೃದಯ, ಶ್ವಾಸಕೋಶಗಳು ಮತ್ತು ಜೀವಕೋಶಗಳನ್ನು ಆರೋಗ್ಯದಿಂದಿಡಲು ಕೆಲಸ ಮಾಡುತ್ತವೆ. ಅಷ್ಟೇ ಅಲ್ಲ, ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಬೂಸ್ಟ್ ಮಾಡುವ ಕೆಲಸ ಮಾಡುತ್ತದೆ. ಅದರಿಂದಾಗಿ ನಮಗೆ ರೋಗಗಳೊಂದಿಗೆ ಹೋರಾಡಲು ಸಾಧ್ಯವಾಗುತ್ತದೆ. ಇದು ಎಂತಹ ಮೈಕ್ರೋನ್ಯೂಟ್ರಿಯೆಂಟ್ ಆಗಿರುತ್ತದೆಂದರೆ, ಅದು ನಮ್ಮ ದೇಹಕ್ಕೆ ಶಕ್ತಿ ದೊರಕಿಸಿ ಕೊಡಲು ಅವಶ್ಯಕವಾಗಿರುತ್ತದೆ.
ಹೀಗಾಗಿ ನಮ್ಮ ಡಯೆಟ್ ನಲ್ಲಿ ಪ್ರೋಟೀನ್ ನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವ, ಅಗತ್ಯ ಉಂಟಾಗುತ್ತದೆ. ಆದರೆ ಇಂಡಿಯನ್ ಮಾರ್ಕೇಟ್ ರಿಸರ್ಚ್ ಬ್ಯೂರೋದ ಪ್ರಕಾರ, ಇತ್ತೀಚೆಗೆ ಜನರು ತಮ್ಮ ಡಯೆಟ್ ನಲ್ಲಿ ಅನ್ ಹೆಲ್ದೀ ಆಹಾರದ ಪ್ರಮಾಣ ಹೆಚ್ಚಾಗಿ ಸೇನೆವೆ ಮಾಡುತ್ತಿರುವುದು ಕಂಡುಬಂದಿದೆ. ಅದರಲ್ಲಿ ಪ್ರೋಟೀನ್ ನ ಪ್ರಮಾಣ ಅತ್ಯಂತ ಕಡಿಮೆ ಇರುತ್ತದೆ. ಈ ಕಾರಣದಿಂದ ಅವರು ದೈನಂದಿನ ಕೆಲಸ ಕಾರ್ಯಗಳನ್ನು ಚಾಕಚಕ್ಯತೆಯಿಂದ ಮಾಡಲು ಸಾಧ್ಯವಾಗುವುದಿಲ್ಲ. ಇದು ಅವರ ಉತ್ಪಾದಕತೆಯ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ನೀವು ನಿಮ್ಮ ಆಹಾರದಲ್ಲಿ ಪ್ರೋಟೀನ್ ನ್ನು ನಿರ್ಲಕ್ಷಿಸುವ ತಪ್ಪು ಮಾಡಬೇಡಿ.
ರೋಗ ನಿರೋಧಕ ಶಕ್ತಿಯ ಹೆಚ್ಚಳ
ರೋಗ ನಿರೋಧಕ ಶಕ್ತಿ ಬಲವಾಗಿದ್ದರೆ, ರೋಗಗಳೊಂದಿಗೆ ಹೋರಾಡಬಹುದು ಎಂಬುದನ್ನು ನೀವು ಚೆನ್ನಾಗಿ ತಿಳಿದುಕೊಳ್ಳುತ್ತೀರಿ. ಪ್ರೋಟೀನ್ ಆ್ಯಂಟಿಬಾಡೀಸ್ ನಿರ್ಮಾಣ ಮಾಡುವಲ್ಲಿ ಸಹಾಯ ಮಾಡುತ್ತದೆ. ಅದರಿಂದ ದೇಹ ಯಾವುದೇ ಬಗೆಯ ಸೋಂಕಿನ ವಿರುದ್ಧ ಹೋರಾಡಲು ಸಮರ್ಥವಾಗುತ್ತದೆ. ನಮ್ಮ ರಕ್ತದಲ್ಲಿ ಆ್ಯಂಟಿಬಾಡೀಸ್ ಒಂದು ಬಗೆಯ ಪ್ರೋಟೀನ್ ಆಗಿರುತ್ತದೆ. ಅದು ದೇಹದ ಮೇಲೆ ಅಪಾಯಕಾರಿಯಾಗಿ ಹಲ್ಲೇ ಮಾಡುವ ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ. ಈ ಬಾಹ್ಯ ಸಂಗತಿಗಳು ಜೀವಕೋಶಗಳಲ್ಲಿ ಪ್ರವೇಶಿಸುತ್ತವೆ. ಇಂತಹದರಲ್ಲಿ ಪ್ರೋಟೀನ್ ಆ್ಯಂಟಿಬಾಡಿಸ್ ಸಿದ್ಧಪಡಿಸಿಕೊಂಡು ಅವನ್ನು ಹೊರಹಾಕುವ ಕೆಲಸ ಮಾಡುತ್ತದೆ. ಅದರಿಂದಾಗಿ ನಿಮ್ಮ ದೇಹ ರೋಗಗಳಿಂದ ರಕ್ಷಿಸಲ್ಪಡುತ್ತದೆ.
ದ್ರವ ಪದಾರ್ಥದ ಸಮತೋಲನ
ದೇಹ ಸಮರ್ಪಕವಾಗಿ ಕೆಲಸ ಮಾಡಲು ಪ್ರೋಟೀನ್ ದೇಹದಲ್ಲಿನ `ಫ್ಲೂಯೆಡ್ ಬ್ಯಾಲೆನ್ಸ್’ ಅಂದರೆ ದ್ರವದ ಸಮತೋಲನದ ಕೆಲಸ ಮಾಡುತ್ತದೆ. ಮಾನವ ದೇಹದ ರಕ್ತದಲ್ಲಿ ಅಲ್ಬುಮಿನ್ ಹಾಗೂ ಗ್ಲೂಬ್ಯುಲಿನ್ ಎಂಬ ಪ್ರೋಟೀನ್ ಗಳು ಇರುತ್ತವೆ. ಅದು ದೇಹದಲ್ಲಿ ಫ್ಲೂಯೆಡ್ ನ್ನು ಬ್ಯಾಲೆನ್ಸ್ ಮಾಡುವ ಕೆಲಸ ಮಾಡುತ್ತವೆ. ಒಂದು ವೇಳೆ ನೀವು ಪ್ರೋಟೀನ್ ನ್ನು ಬೇಕಾದಷ್ಟು ಪ್ರಮಾಣದಲ್ಲಿ ಸೇವನೆ ಮಾಡದೇ ಇದ್ದರೆ, ಆ ಎರಡು ಅಂಗಗಳ ಪ್ರಮಾಣ ದೇಹದಲ್ಲಿ ಕಡಿಮೆ ಆಗುತ್ತದೆ. ಆಗ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ.
ಮೆಸೆಂಜರ್ ನ ಕೆಲಸ
ಪ್ರೋಟೀನ್ ನಮ್ಮ ದೇಹದಲ್ಲಿ ಮಾಹಿತಿ ರವಾನೆಯ ಕೆಲಸ ಮಾಡುತ್ತದೆ. ಅದು ಆರೋಗ್ಯಕರ ಜೀವಕೋಶದ ನಿರ್ಮಾಣ ಅಂದರೆ ವೈರಸ್ ಹಾಗೂ ಬ್ಯಾಕ್ಟೀರಿಯಾವನ್ನು ಗುರುತಿಸುವ ಜೀವಕೋಶದ ನಿರ್ಮಾಣ ಮಾಡುವ ಕೆಲಸ ಮಾಡುತ್ತದೆ. ಅದರಿಂದಾಗಿ ದೇಹಕ್ಕೆ ಸಕಾಲಕ್ಕೆ ಸಂಕೇತ ದೊರಕುವುದರಿಂದ ಬಾಹ್ಯ ಸಂಗತಿಗಳು ದೇಹಕ್ಕೆ ಹಾನಿಯುಂಟು ಮಾಡದು.
ಕೆಲವು ಪ್ರೋಟೀನ್ ಜೀವಕೋಶಗಳು ಅಂಗಾಂಶ ಹಾಗೂ ಅಂಗಾಂಗಗಳ ತನಕ ರಕ್ತದ ಮುಖಾಂತರ ಸಂದೇಶ ತಲುಪಿಸುತ್ತವೆ. ಅದರಿಂದ ಅವು ಪ್ರೋಟೀನ್ ವಾಹಕಕ್ಕೆ ಅದೇ ಜೀವಕೋಶಗಳ ಪದರದ ಹೊರಗೆ ಆವರಣ ಕಟ್ಟಿ ಸುರಕ್ಷತೆ ನೀಡುತ್ತದೆ.
ಮೂಳೆಗಳಿಗೆ ಬಲ
ಪ್ರೋಟೀನ್ ಎಂತಹ ಒಂದು ಪೋಷಕಾಂಶವೆಂದರೆ, ಅವು ಮೂಳೆಗಳಿಗೆ ಬಲ ನೀಡುವ ಕೆಲಸ ಮಾಡುತ್ತವೆ. ಆಹಾರದಲ್ಲಿ ಇದರ ಅಭಾವ ಉಂಟಾದರೆ, ನಿಮಗೆ ಅಸ್ಟಿಯೋಪೊರೆಸಿಸ್ ಗೆ ತುತ್ತಾಗಬೇಕಾಗುತ್ತದೆ. ಪ್ರೋಟೀನ್ ಮೂಳೆಗಳ ಲಿಗಮೆಂಟ್ಸ್ ಹಾಗೂ ಸಂಯೋಜಕ ಊತಕವನ್ನು ಆರೋಗ್ಯದಿಂದಿಡುವ ಕೆಲಸ ಮಾಡುತ್ತದೆ. ಹೆಚ್ಚುತ್ತಿರುವ ವಯಸ್ಸಿನಲ್ಲಿ ಪ್ರೋಟೀನ್ ನ ಕೊರತೆಯಿಂದ ಹಿಪ್ ನ ಫ್ರ್ಯಾಕ್ಚರ್‌ಹಾಗೂ ಮೂಳೆಗಳು ದುರ್ಬಲವಾಗುವ ಕಾರಣದಿಂದ ಅವು ಸುಲಭವಾಗಿ ತುಂಡರಿಸುತ್ತವೆ. ಹೀಗಾಗಿ ಪ್ರೋಟೀನ್ ನ ಸೇವನೆ ಅತ್ಯವಶ್ಯ.
ನಿರ್ದಿಷ್ಟ ಬೆಳವಣಿಗೆಗೆ ಪೂರಕ
ದೇಹದ ಬೆಳವಣಿಗೆಗೆ ಹಾಗೂ ಅಂಗಾಂಶಗಳ ದುರಸ್ತಿಗೆ ಪ್ರೋಟೀನ್ ಅತ್ಯವಶ್ಯ. ಸಾಮಾನ್ಯ ಸ್ಥಿತಿಯಲ್ಲಿ ಪ್ರೋಟೀನ್ ನನ್ನು ಟಿಶ್ಯೂ ಆಗಿಸಲು ಮತ್ತು ದುರಸ್ತಿಗೊಳಿಸಲು ಬಳಸುತ್ತದೆ. ಕೆಲವು ವಿಶೇಷ ಸ್ಥಿತಿಗಳಲ್ಲಿ ಅಂದರೆ ಗರ್ಭಾವಸ್ಥೆ, ಸ್ತನ್ಯಪಾನದ ಸಂದರ್ಭದಲ್ಲಿ ಯಾವುದಾದರೂ ರೋಗ ಉಂಟಾದಾಗ ಅದು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ನ್ನು ಬಳಸತೊಡಗುತ್ತದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಪ್ರೋಟೀನ್ ನ ಪ್ರಮಾಣ ಹೆಚ್ಚಿಸಿಕೊಳ್ಳುವ ಅಗತ್ಯವಿದೆ.
ಪೋಷಕಾಂಶಗಳ ವಾಹಕ
ಟ್ರಾನ್ಸ್ ಪೋರ್ಟ್ ಪ್ರೋಟೀನ್ ರಕ್ತನಾಳಗಳ ಮಾಧ್ಯಮದಿಂದ ಜೀವಕೋಶಗಳ ಒಳಗೆ ಹೊರಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತದೆ. ಈ ಪ್ರೋಟೀನ್ ಗಳ ಮುಖಾಂತರ ಯಾವ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತದೋ, ಅವುಗಳಲ್ಲಿ ವಿಟಮಿನ್ಸ್, ಮಿನರಲ್ಸ್, ಬ್ಲಡ್ ಶುಗರ್, ಆ್ಯಕ್ಸಿಜನ್, ಕೊಲೆಸ್ಟ್ರಾಲ್ ಮುಂತಾದವುಗಳು ಸೇರಿರುತ್ತವೆ. ಅವು ದೇಹದ ಪೋಷಕಾಂಶಕ್ಕೆ ಸಂಬಂಧಪಟ್ಟ ಅಗತ್ಯಗಳನ್ನು ಪೂರೈಸುವ ಕೆಲಸ ಮಾಡುತ್ತದೆ.
ಉದಾಹರಣೆಗೆ ಹಿಮೊಗ್ಲೋಬಿನ್ ಒಂದು ರೀತಿಯ ಪ್ರೋಟೀನ್ ಆಗಿದೆ. ಅದು ಶ್ವಾಸಕೋಶಗಳಿಗೆ ತೆಗೆದುಕೊಂಡು ಹೋಗಿ, ಟಿಶ್ಯೂಗಳ ತನಕ ತಲುಪಿಸುವ ಕೆಲಸ ಮಾಡುತ್ತದೆ. ಅದೇ ರೀತಿ ಲಿಪೊಪ್ರೋಟೀನ್ ಇತರೆ ಕೊಬ್ಬುಗಳನ್ನು ರಕ್ತದ ತನಕ ತಲುಪಿಸುತ್ತದೆ.
ತೂಕ ಕಡಿಮೆ ಮಾಡಲು ಪ್ರೋಟೀನ್
ನಿಮ್ಮ ಮೆಟಬಾಲಿಸಂನ್ನು ಬೂಸ್ಟ್ ಮಾಡಿ, ಕೆಲವು ಬಗೆಯ ತೂಕ ನಿಯಂತ್ರಿಸುವ ಹಾರ್ಮೋನುಗಳಲ್ಲಿ ಬದಲಾವಣೆ ಮಾಡುವ ಕೆಲಸ ಮಾಡುತ್ತದೆ. ವಾಸ್ತವದಲ್ಲಿ ನಮ್ಮ ಮೆದುಳು ನಮಗೆ ಯಾವಾಗ ಎಷ್ಟು ತಿನ್ನಬೇಕು ಎನ್ನುವುದರ ಬಗ್ಗೆ ಸೂಚನೆ ನೀಡುತ್ತದೆ. ಆದರೆ ಈ ಹಾರ್ಮೋನುಗಳ ಸಮತೋಲನ ಹದ ತಪ್ಪಿದರೆ ನಾವು ಎಷ್ಟರಮಟ್ಟಿಗೆ ತಿನ್ನಬೇಕು ಎನ್ನುವುದು ನಮಗೆ ಗೊತ್ತಾಗುವುದಿಲ್ಲ.
ಇಂತಹದರಲ್ಲಿ ಪ್ರೋಟೀನ್ ನ ಹೆಚ್ಚಿನ ಪ್ರಮಾಣದಲ್ಲಿ ಸೇವನೆ, ದೇಹದಲ್ಲಿ ಹೆಚ್ಚು ಹಸಿವನ್ನುಂಟು ಮಾಡುವ ಹಾರ್ಮೋನನ್ನು ನಿಯಂತ್ರಣದಲ್ಲಿಟ್ಟು, ನಿಮ್ಮ ಹೊಟ್ಟೆಯನ್ನು ಹೆಚ್ಚು ಹೊತ್ತಿನತನಕ ತುಂಬಿದಂತೆ ಇಡುವ ಕೆಲಸ ಮಾಡುತ್ತದೆ. ಅದರಿಂದ ನಿಮ್ಮ ದೇಹಕ್ಕೆ ಅತ್ಯಗತ್ಯ ಪೋಷಕಾಂಶಗಳು ದೊರಕುತ್ತವೆ ಮತ್ತು ನೀವು ಅತಿಯಾಗಿ ಆಹಾರ ಸೇವಿಸುವ ಚಟದಿಂದಲೂ ಮುಕ್ತರಾಗುವಿರಿ.
ಪ್ರತಿ ನಿತ್ಯ ಎಷ್ಟು ಪ್ರೋಟೀನ್ ಅವಶ್ಯ?
ವಯಸ್ಕ ಪುರುಷರು, ಮಹಿಳೆಯರು ಹಾಗೂ ವೃದ್ಧರಿಗೆ : ನಿಮ್ಮ ದೇಹ ತೂಕಕ್ಕೆ ತಕ್ಕಂತೆ ಪ್ರತಿ ಕಿಲೋಗೆ 1 ಗ್ರಾಂನಂತೆ ಪ್ರೋಟೀನ ಸೇವಿಸಬೇಕು. ಅಂದರೆ ನಿಮ್ಮ ದೇಹ ತೂಕ 60 ಕಿಲೋ ಆಗಿದ್ದರೆ ನೀವು ಪ್ರತಿನಿತ್ಯ 60 ಗ್ರಾಂನಷ್ಟು ಪ್ರೋಟೀನ್ ಸೇವಿಸಬೇಕಾಗುತ್ತದೆ.
ಗರ್ಭಿಣಿ ವಯಸ್ಕರಿಗೆ : ದೇಹ ತೂಕಕ್ಕೆ ತಕ್ಕಂತೆ ಪ್ರತಿ ಕಿಲೋಗೆ 1 ಗ್ರಾಂನಂತೆ ಸೇವಿಸಬೇಕು. ಇದರ ಹೊರತಾಗಿ 23 ಗ್ರಾಂ ದೇಹದ ಬೆಳವಣಿಗಾಗಿ. ಹಾಲೂಡಿಸುವ ತಾಯಂದಿರು 55 ಗ್ರಾಂಗಳ ಜೊತೆಗೆ 19 ಗ್ರಾಂ ಹೆಚ್ಚುವರಿಯಾಗಿ ಸೇವಿಸಬೇಕು.
06 ತಿಂಗಳಿನ ಮಗುವಿಗೆ : 11 ಗ್ರಾಂ ಪ್ರತಿ ಕಿಲೋ ದೇಹ ತೂಕದ ಲೆಕ್ಕಾಚಾರದಲ್ಲಿ.
6-12 ತಿಂಗಳ ಮಗುವಿಗೆ : 16 ಪ್ರತಿ ಕಿಲೋ ಗ್ರಾಂ ದೇಹ ತೂಕಕ್ಕೆ ತಕ್ಕಂತೆ.
1-3 ವರ್ಷದ ಮಗುವಿಗೆ : 17 ಗ್ರಾಂ ಪ್ರೋಟೀನ್ ಬೇಕು.
4-6 ವರ್ಷದ ಮಗುವಿಗೆ : 20 ಗ್ರಾಂ ಪ್ರೋಟೀನ್ ಬೇಕು.
7-9 ವರ್ಷದ ಮಗುವಿಗೆ : 29.5 ಗ್ರಾಂ ಪ್ರೋಟೀನ್ ಬೇಕು.
10-12 ವರ್ಷದ ಹುಡುಗರಿಗೆ : 40 ಗ್ರಾಂ ಪ್ರೋಟೀನ್ ಬೇಕು.
10-12 ವರ್ಷದ ಹುಡುಗಿಯರಿಗೆ : 41 ಗ್ರಾಂ ಪ್ರೋಟೀನ್ ಬೇಕು.
13-15 ವರ್ಷದ ಹುಡುಗರಿಗೆ : 54 ಗ್ರಾಂ ಪ್ರೋಟೀನ್ ಅವಶ್ಯಕತೆ ಇರುತ್ತದೆ.
13-15 ವರ್ಷದ ಹುಡುಗಿಯರಿಗೆ : 52 ಗ್ರಾಂ ಪ್ರೋಟೀನ್ ಬೇಕಾಗುತ್ತದೆ.
16-17 ವರ್ಷದ ಹುಡುಗರಿಗೆ : 61 ಗ್ರಾಂ ಪ್ರೋಟೀನ್ ಅವಶ್ಯವಾಗಿರುತ್ತದೆ.
16-17 ವರ್ಷದ ಹುಡುಗಿಯರಿಗೆ : 55.5 ಗ್ರಾಂ ಪ್ರೋಟೀನ್ ಬೇಕಾಗುತ್ತದೆ.
ಯಾವುದರಲ್ಲಿ ಎಷ್ಟು ಪ್ರೋಟೀನ್?
ಬೇಳೆಗಳು : ಇದರಲ್ಲಿ ಕೊಬ್ಬಿನಾಂಶ ಕಡಿಮೆ ಇದ್ದು, ಪ್ರೋಟೀನ್ ಅಂಶ ಹೇರಳವಾಗಿರುತ್ತದೆ. ಹೀಗಾಗಿ ನೀವು ನಿಮ್ಮ ಆಹಾರದಲ್ಲಿ ಪ್ರತಿನಿತ್ಯ ಬೇಳೆಗಳ ಸೇರ್ಪಡೆ ಮಾಡಬೇಕು. ಒಂದು ಬೌಲ್ ಬೇಳೆಯಲ್ಲಿ ನಿಮಗೆ 7 ಗ್ರಾಂ ಪ್ರೋಟೀನ್ ಸಿಗುತ್ತದೆ.
ಮೊಟ್ಟೆಗಳು : ನೀವು ಬೇಯಿಸಿದ ಮೊಟ್ಟೆ ಸೇವಿಸಿ ಇಲ್ಲವೇ ಆಮ್ಲೆಟ್ ತಯಾರಿಸಿಕೊಂಡು ತಿನ್ನಿ. ಅವುಗಳಲ್ಲಿ ವಿಟಮಿನ್ಸ್, ಮಿನರಲ್ಸ್, ಪ್ರೋಟೀನ್ ರಿಚ್ ಆಗಿರುತ್ತದೆ. 2 ಬೇಯಿಸಿದ ಮೊಟ್ಟೆಗಳಿಂದ ನಿಮಗೆ 10 ಗ್ರಾ ಪ್ರೋಟೀನ್ ಲಭಿಸುತ್ತದೆ.
ಚಿಕನ್ : ನೀವು ಮಸಲ್ಸ್ ನ ವೃದ್ಧಿ ಹಾಗೂ ತೂಕ ಕಡಿಮೆಗೊಳಿಸಲು ಯೋಚಿಸುತ್ತಿದ್ದರೆ, ನಿಮಗೆ ಚಿಕನ್ ಉತ್ತಮ ಪರ್ಯಾಯ. ಅದು ಪ್ರೋಟೀನ್ ರಿಚ್ ಆಗಿದ್ದು, ನೀವು 2 ತುಂಡು ಚಿಕನ್ ಸೇವಿಸುತ್ತಿದ್ದರೆ, ನಿಮಗೆ ಅದರಿಂದ 22-25 ಗ್ರಾಂ ಪ್ರೋಟೀನ್ ದೊರಕುತ್ತದೆ.
ಮೀನು : ಸಮುದ್ರ ಆಹಾರಗಳು ಪ್ರೋಟೀನ್ ನ ಮೂಲಗಳಾಗಿವೆ. ಏಕೆಂದರೆ ಇದು ಕೊಬ್ಬು ಕಡಿಮೆಯಾಗಿರುವುದರ ಜೊತೆಗೆ ಒಮೇಗಾ 3 ಫ್ಯಾಟಿ ಆ್ಯಸಿಡ್ ನ ಉತ್ತಮ ಮೂಲ ಎಂದು ಹೇಳಲಾಗುತ್ತದೆ. ನೀವು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮೀನು ಸೇವನೆ ಮಾಡಿದರೂ ನಿಮಗೆ 15-18 ಗ್ರಾಂ ಪ್ರೋಟೀನ್ ದೊರಕುತ್ತದೆ.
ಪನೀರ್ : ಪನೀರ್ ಮತ್ತು ಸೋಯಾದಿಂದ ತಯಾರಿಸಿದ ಮೊಸರಿನಂಥ ಪದಾರ್ಥದಲ್ಲಿ ಪ್ರೋಟೀನ್ ಹೇರಳವಾಗಿರುತ್ತದೆ. ಅದರ ಜೊತೆಗೆ ಇದರಲ್ಲಿ ಕ್ಯಾಲ್ಶಿಯಂ, ವಿಟಮಿನ್ ಬಿ 12 ಹಾಗೂ ಕಬ್ಬಿಣಾಂಶದ ಮೂಲ ಕೂಡ ಇರುತ್ತದೆ. ನೀವು ನಿಮ್ಮ ಆಹಾರದಲ್ಲಿ 100 ಗ್ರಾಂ ಪನೀರ್ ಸೇವಿಸಿದರೆ ಅದರಿಂದ ನಿಮಗೆ 8-9 ಗ್ರಾಂ ಪ್ರೋಟೀನ್ ಲಭಿಸುತ್ತದೆ.
ಹಾಲು : ಹಾಲಿನಲ್ಲಿ ಉಚ್ಚ ಮಟ್ಟದ ಪ್ರೋಟೀನ್ ಇರುತ್ತದೆ. ಅದರಲ್ಲಿ ಎಲ್ಲ ಬಗೆಯ ಅಮೈನೊ ಆ್ಯಸಿಡ್ಸ್ ಇರುತ್ತವೆ. ನೀವು ಒಂದು ಗ್ಲಾಸ್ ಹಾಲು ಸೇವಿಸಿದರೆ, ನಿಮಗೆ 8-9 ಗ್ರಾಂ ಪ್ರೋಟೀನ್ ದೊರಕುತ್ತದೆ. ಜೊತೆಗೆ ದೇಹದ ಅಮೈನೊ ಆ್ಯಸಿಡ್ ನ ಅಗತ್ಯ ಪೂರೈಕೆಯಾಗುತ್ತದೆ.
ಮೊಸರು : ಇದು ಪ್ರೊಬಯೋಟಿಕ್ ಮತ್ತು ಪ್ರೋಟೀನ್ ನ ಒಳ್ಳೆಯ ಮೂಲವಾಗಿದೆ. ಇದು ಹಾಲಿಗೆ ಹೋಲಿಸಿದರೆ ಬಹುಬೇಗ ಪಚನವಾಗುತ್ತದೆ. ನೀವು ದಿನಕ್ಕೆ 1 ಬೌ್ಲ ಮೊಸರು ಸೇವಿಸಿದರೆ, ನಿಮಗೆ ಅದರಿಂದ 5-6 ಗ್ರಾಂ ಪ್ರೋಟೀನ್ ದೊರಕುತ್ತದೆ.
ಮೊಳಕೆ ಕಾಳುಗಳು : ಅನೇಕ ಅಧ್ಯಯನಗಳಿಂದ ತಿಳಿದುಬಂದ ಸಂಗತಿಯೆಂದರೆ, ಮೊಳಕೆ ಕಾಳುಗಳು ಪ್ರೋಟೀನ್ ಕಂಟೆಂಟ್ ಹೆಚ್ಚಿಸುವ ಕೆಲಸ ಮಾಡುತ್ತವೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಮೈನೊ ಆ್ಯಸಿಡ್ ಇರುತ್ತದೆ. ಜೊತೆಗೆ ಇವು ಪಚನ ಕ್ರಿಯೆಗೂ ಸುಲಭವಾಗಿರುತ್ತವೆ. ಮೊಳಕೆ ಕಾಳಿನ ಒಂದು ಬೌಲ್ ಸೇವನೆಯಿಂದ ನಿಮಗೆ 9 ಗ್ರಾಂನಷ್ಟು ಪ್ರೋಟೀನ್ ಲಭಿಸುತ್ತದೆ.
ಕಡಲೆಹಿಟ್ಟು : ಇದು ಪ್ರೋಟೀನ್ ನ ಸಮೃದ್ಧ ಮೂಲವಾಗಿರುವುದರ ಜೊತೆಗೆ, ಇದು ಹಸಿವನ್ನು ಶಾಂತಗೊಳಿಸುತ್ತದೆ. ಅದರಿಂದ ಫಿಟ್ ಆಗಿರಲು ಸಹಾಯವಾಗುತ್ತದೆ. ಕಡಲೆಹಿಟ್ಟಿನಿಂದ ತಯಾರಿಸಿದ ಯಾವುದೇ ಎರಡು ಪದಾರ್ಥಗಳ ಸೇವನೆಯಿಂದ 9-10 ಗ್ರಾಂ ಪ್ರೋಟೀನ್‌ಸಿಗುತ್ತದೆ.
ಮಖಾನಾ : ತಾವರೆ ಬೀಜಗಳು ಪ್ರೋಟೀನ್ ರಿಚ್ ಆಗಿದ್ದು, ಕೊಬ್ಬಿನಾಂಶ ಕಡಿಮೆ ಪ್ರಮಾಣದಲ್ಲಿರುತ್ತದೆ. ಇವು ಹೊಟ್ಟೆಯನ್ನು ಹೆಚ್ಚು ಹೊತ್ತಿನ ತನಕ ತುಂಬಿದಂತೆ ಇರಿಸುತ್ತದೆ. ಹೀಗಾಗಿ ತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ. ಒಂದು ಮುಷ್ಟಿಯಷ್ಟು ಮಖಾನಾದಿಂದ ನಿಮಗೆ 5-6 ಗ್ರಾಂ ಪ್ರೋಟೀನ್ ದೊರಕುತ್ತದೆ.
ಹುರಿದ ಕಡಲೆ : ಇದರಲ್ಲಿ ಪ್ರೋಟೀನ್ ಹೇರಳವಾಗಿ ತುಂಬಿರುವುದರ ಜೊತಗೆ ನಾರಿನಂಶವನ್ನು ಹೊಂದಿರುತ್ತದೆ. ಹೀಗಾಗಿ ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಒಂದು ಬೌಲ್ ಹುರಿಗಡಲೆಯಿಂದ ನಿಮಗೆ 10 ಗ್ರಾಂ ಪ್ರೋಟೀನ್ ಲಭಿಸುತ್ತದೆ.
ಕಾಬೂಲ್ ಕಡಲೆ ಮತ್ತು ಬಟಾಣಿ : ಇವು ಪ್ರೋಟೀನ್ ನ ಹೇರಳ ಮೂಲವಾಗಿದ್ದು, ಕಬ್ಬಿಣಾಂಶವನ್ನು ಚೆನ್ನಾಗಿ ನೀಡುತ್ತವೆ. ಬ್ಲಡ್ ಶುಗರ್ ನ್ನು ಸರಿಪಡಿಸುವುದರ ಜೊತೆ ಜೊತೆಗೆ ನಿಮ್ಮ ಇಮ್ಯುನಿಟಿಯನ್ನು ಬೂಸ್ಟ್ ಮಾಡುವ ಕೆಲಸ ಮಾಡುತ್ತದೆ. ಒಂದು ಬೌಲ್ ಕಾಬೂಲ್ ಕಡಲೆಯಿಂದ ನಿಮಗೆ 7 ಗ್ರಾಂ ನಷ್ಟು ಪ್ರೋಟೀನ್ ದೊರಕುತ್ತದೆ.
ಗೋಧಿಹಿಟ್ಟು : ಇದರಲ್ಲಿ ಕೇವಲ ಕಾರ್ಬೋಹೈಡ್ರೇಟ್ ಮಾತ್ರ ಇರುವುದಿಲ್ಲ. ಇದರಲ್ಲಿ ಪ್ರೋಟೀನ್ ಮತ್ತು ನಾರಿನಂಶ ಕೂಡ ಇರುತ್ತದೆ. ಒಂದು ವೇಳೆ ನೀವು 2-3 ರೊಟ್ಟಿ ತಿಂದರೂ ಕೂಡ ನಿಮಗೆ 8 ಗ್ರಾಂ ನಷ್ಟು ಪ್ರೋಟೀನ್ ದೊರಕುತ್ತದೆ.
ನೀವು ಒಂದು ದಿನದಲ್ಲಿ ಊಟ, ವೈವಿಧ್ಯತೆ ಹಾಗೂ ಕ್ವಾಂಟಿಟಿಯ ಲೆಕ್ಕಾಚಾರದಲ್ಲಿ ನೀವು ಎಷ್ಟು ಎನರ್ಜಿ ಹಾಗೂ ಪ್ರೋಟೀನ್ ಸೇವನೆ ಮಾಡುತ್ತಿದ್ದೀರಿ ಎಂಬುದು ಗೊತ್ತಾಗುತ್ತದೆ.
ಬಿಸ್ಕತ್ತು : 2 ಬಿಸ್ಕತ್ತುಗಳಿಂದ ನಿಮಗೆ 0.8 ಗ್ರಾಂ ಪ್ರೋಟೀನ್ ದೊರಕುವುದರ ಜೊತೆ ಜೊತೆಗೆ 4-4 ಕೆಸಿಎಎಲ್ ಲಭಿಸುತ್ತದೆ.
ಉಪಾಹಾರ : 200 ಮಿಲಿ ಲೀಟರ್ ಹಾಲಿನಿಂದ 7 ಗ್ರಾಂ ಪ್ರೋಟೀನ್ ದೊರಕುವುದರ ಜೊತೆ ಜೊತೆಗೆ 122 ಕೆಸಿಎಎಲ್ ಸಿಗುತ್ತದೆ.
ಪ್ರೋಟೀನ್ : 30 ಗ್ರಾಂ ಪ್ರೋಟೀನ್ ನಿಂದ 5.49 ಪ್ರೋಟೀನ್ ಹಾಗೂ 80 ಕೆಸಿಎಎಲ್ ದೊರಕುತ್ತದೆ.
ಹಣ್ಣುಗಳು : 100 ಗ್ರಾಂ ಹಣ್ಣುಗಳಿಂದ 5.49 ಪ್ರೋಟೀನ್ ಮತ್ತು 50 ಕೆಸಿಎಎಲ್ ಲಭಿಸುತ್ತದೆ.
ಸೆರ್ಲಾಕ್ : 30 ಗ್ರಾಂ ಸೆರ್ಲಾಕ್ ನಿಂದ 2.2 ಗ್ರಾಂ ಪ್ರೋಟೀನ್ ಹಾಗೂ 100 ಕೆಸಿಎಎಲ್ ಲಭಿಸುತ್ತದೆ.
ಮಧ್ಯಾಹ್ನದ ಊಟ : 200 ಮಿಲಿಲೀಟರ್ ಲಿಕ್ವಿಡ್ ನಿಂದ ನಿಮಗೆ 0.9 ಪ್ರೋಟೀನ್ ನ ಜೊತೆಗೆ 50 ಕೆಸಿಎಎಲ್ ಸಿಗುತ್ತದೆ.
ರಾತ್ರಿ ಊಟ : 80 ಗ್ರಾಂ ರೊಟ್ಟಿಯಿಂದ 9.6 ಗ್ರಾಂ ಪ್ರೋಟೀನ್ ದೊರಕುವುದರ ಜೊತೆಗೆ 302 ಕೆಸಿಎಎಲ್ ದೊರಕುತ್ತದೆ.
ಅಕ್ಕಿ : 40 ಗ್ರಾಂ ಅಕ್ಕಿಯಿಂದ 2.7 ಗ್ರಾಂ ಪ್ರೋಟೀನ್ ದೊರಕುವುದರ ಜೊತೆ ಜೊತೆಗೆ 138 ಕೆಸಿಎಎಲ್ ಲಭಿಸುತ್ತದೆ.
ಬೇಳೆ : 30 ಗ್ರಾಂ ಬೇಳೆಯಿಂದ 7.8 ಗ್ರಾಂ ಪ್ರೋಟೀನ್ ಲಭಿಸುವುದರ ಜೊತೆಗೆ 100 ಕೆಸಿಎಎಲ್ ಸಿಗುತ್ತದೆ.
ತರಕಾರಿಗಳು : 200 ಗ್ರಾಂ ತರಕಾರಿಗಳಿಂದ 0.4 ಗ್ರಾಂ ಪ್ರೋಟೀನ್ ದೊರಕುವುದರ ಜೊತೆಗೆ 40 ಕೆಸಿಎಎಲ್ ದೊರಕುತ್ತದೆ.
ಪನೀರ್ : 100 ಗ್ರಾಂ ಪನೀರ್ ನಿಂದ 8-9 ಗ್ರಾಂ ಪ್ರೋಟೀನ್ ಲಭಿಸುವುದರ ಜೊತೆಗೆ 80 ಕೆಸಿಎಎಲ್ ದೊರಕುತ್ತದೆ.
ಸಲಾಡ್ : 100 ಗ್ರಾಂ ಸಲಾಡ್ ನಿಂದ 0.4 ಗ್ರಾಂ ಪ್ರೋಟೀನ್ ಹಾಗೂ 40 ಕೆಸಿಎಎಲ್ ಲಭಿಸುತ್ತದೆ.
ಮೊಸರು : 80 ಗ್ರಾಂ ಮೊಸರಿನಿಂದ 5.1 ಗ್ರಾಂ ಪ್ರೋಟೀನ್ ದೊರಕುತ್ತದೆ ಜೊತೆಗ 57 ಕೆಸಿಎಎಲ್ ದೊರಕುತ್ತದೆ.
ಸಂಜೆ ಚಹಾ : ಒಂದು ಕಪ್ ಚಹಾದಿಂದ 0.7 ಗ್ರಾಂ ಪ್ರೋಟೀನ್ ನ ಜೊತೆಗೆ 5.3 ಕೆಸಿಎಎಲ್ ಸಿಗುತ್ತದೆ.
ಬಿಸ್ಕತ್ತು/ಸ್ನ್ಯಾಕ್ಸ್ : ಎರಡು ಬಿಸ್ಕತ್ತುಗಳಿಂದ 0.8 ಗ್ರಾಂ ಪ್ರೋಟೀನ್ ದೊರಕುವುದರ ಜೊತೆಗೆ 44 ಕೆಸಿಎಎಲ್ ಸಿಗುತ್ತದೆ. ಸ್ನ್ಯಾಕ್ಸ್ ನಿಂದ ಈ ಕ್ಯಾಲೋರಿಸ್ 150 ಆಗುತ್ತದೆ.
ಸಂಜೆ ಸೂಪ್ : 200 ಮಿಲಿ ವೆಜಿಟೇರಿಯನ್ ಸೂಪ್ ನಿಂದ 0.9 ಗ್ರಾಂ ಪ್ರೋಟೀನ್ ನ ಜೊತೆಗೆ 40 ಕೆಸಿಎಎಲ್ ದೊರಕುತ್ತದೆ.
ಡಿನ್ನರ್ : 80 ಗ್ರಾಂ ರೊಟ್ಟಿಯಿಂದ 9.6 ಗ್ರಾಂ ಪ್ರೋಟೀನ್ ಸಿಗುತ್ತದೆ ಹಾಗೂ 302 ಕೆಸಿಎಎಲ್ ಲಭಿಸುತ್ತದೆ.
ಅಕ್ಕಿ : 40 ಗ್ರಾಂ ಅಕ್ಕಿಯಿಂದ 2.7 ಗ್ರಾಂ ಪ್ರೋಟೀನ್ ಸಿಗುತ್ತದೆ ಹಾಗೂ 138 ಕೆಸಿಎಎಲ್ ದೊರಕುತ್ತದೆ.
ಬೇಳೆ : 30 ಗ್ರಾಂ ಬೇಳೆಯಿಂದ 7.8 ಗ್ರಾಂ ಪ್ರೋಟೀನ್ ಸಿಗುತ್ತದೆ ಹಾಗೂ 100 ಕೆಸಿಎಎಲ್ ಸಿಗುತ್ತದೆ.
ತರಕಾರಿಗಳು : 200 ಗ್ರಾಂ ತರಕಾರಿಗಳಿಂದ 0.4 ಗ್ರಾಂ ಪ್ರೋಟೀನ್ ದೊರಕುವುದರ ಜೊತೆಗೆ 40 ಕೆಸಿಎಎಲ್ ಕೂಡ ಸಿಗುತ್ತದೆ.
ಸಲಾಡ್ : 100 ಗ್ರಾಂ ಸಲಾಡ್ ನಿಂದ 0.4 ಗ್ರಾಂ ಪ್ರೋಟೀನ್ ಹಾಗೂ 40 ಕೆಸಿಎಎಲ್ ಲಭಿಸುತ್ತದೆ.
ಡಿನ್ನರ್ ಬಳಿಕ 200 ಮಿಲಿ ಲೀಟರ್ ಹಾಲಿನಿಂದ 7 ಗ್ರಾಂ ಪ್ರೋಟೀನ್ ದೊರಕುವುದರ ಜೊತೆಗೆ 122 ಕೆಸಿಎಎಲ್ ಸಿಗುತ್ತದೆ.
– ಡಾ. ಆಶಾ ಭಟ್
ತ್ವಚೆ ಯೌವನದಿಂದ ಕಂಗೊಳಿಸಲಿ
ನಿಮ್ಮ ತ್ವಚೆ ಯಾವಾಗಲೂ ನಳನಳಿಸುತ್ತ ಇರಬೇಕೆಂದು ನೀವು ಬಯಸುತ್ತಿರಬಹುದು. ಆದರೆ ಹೆಚ್ಚುತ್ತಿರುವ ವಯಸ್ಸಿನಲ್ಲಿ ಜೀವಕೋಶಗಳು ದುರ್ಬಲವಾಗುತ್ತವೆ. ಆಗ ನೀವು ಏಜಿಂಗ್ ನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದರೆ ಟೋಕಿಯದ ಮೆಡಿಕಲ್ ಅಂಡ್ ಡೆಂಟಲ್ ಯೂನಿವರ್ಸಿಟಿಯಲ್ಲಿ ನಡೆದ ಕೋರ್ಸ್ ಪ್ರೋಟೀನ್ ನ್ನು ಪತ್ತೆ ಹಚ್ಚಲಾಗಿದೆ. ಅದು ತೆಳ್ಳನೆಯ ಹಾಗೂ ದುರ್ಬಲ ಸೆಲ್ಸ್ ದುರಸ್ತಿಗೊಳಿಸುವ ಕೆಲಸ ಮಾಡುತ್ತದೆ. ಅದರಿಂದ ನೀವು ಯಾವಾಗಲೂ ಯೌವನದಿಂದಿರುವಂತೆ ಕಂಡುಬರುವಿರಿ. ಅಂದರೆ ಈ ಪ್ರೋಟೀನ್ ನಿಮ್ಮ ಸೌಂದರ್ಯ ಹೆಚ್ಚಿಸುವ ಕೆಲಸ ಮಾಡುತ್ತದೆ.
ಒತ್ತಡ ಕಡಿಮೆಗೊಳಿಸಲು
2018ರಲ್ಲಿ ಜನರಲ್ ನ್ಯೂಟ್ರಿಷನ್ ನ್ಯೂರೋ ಸೈನ್ಸಸ್ ನಲ್ಲಿ ಪ್ರಕಟಿಸಿದ ಒಂದು ವರದಿಯ ಪ್ರಕಾರ, ಹೈ ಫೈಬರ್ ರಿಚ್ ಡಯೆಟ್ ನಿಂದ ಯಾವುದೇ ದಣಿವು ಉಂಟಾಗುವುದಿಲ್ಲ. ಇಂದಿನ ಜೀವನ ಶೈಲಿಯಲ್ಲಿ ಸ್ಪರ್ಧಾತ್ಮಕತೆಯ ಕಾರಣದಿಂದ ಜನರು ಹೆಚ್ಚೆಚ್ಚು ಸ್ಟ್ರೆಸ್ ಗೆ ತುತ್ತಾಗುತ್ತಿದ್ದಾರೆ. ಅದರಿಂದಾಗಿ ಕೆಲಸದ ಗುಣಮಟ್ಟದ ಮೇಲೆ ವ್ಯತ್ಯಾಸ ಉಂಟಾಗುತ್ತದೆ. ಇಂತಹದಲ್ಲಿ ಪ್ರೋಟೀನ್ ರಿಚ್ ಡಯೆಟ್‌ಸೇವನೆಯಿಂದ ಒತ್ತಡ ಕಡಿಮೆಗೊಳಿಸಲು ನೆರವಾಗುತ್ತದೆ.
ಇದನ್ನು ತಿಳಿಯಿರಿ
ಪ್ರೋಟೀನ್ ಅಮೈನೊ ಆ್ಯಸಿಡ್ ನಿಂದ ರಚಿಸಲ್ಪಡುತ್ತವೆ. ಅವು ಸೆಲ್ಸ್ ನ ಬಿಲ್ಡಿಂಗ್ ಬ್ಲಾಕ್ಸ್ ನ ರೂಪದಲ್ಲಿ ಕೆಲಸ ಮಾಡುತ್ತವೆ.
ಕೆಲವು ಪ್ರೋಟೀನ್ ಗಳು ಇಡೀ ದೇಹದಲ್ಲಿ ಪೋಷಕಾಂಶಗಳನ್ನು ಸಂಚಲಿಸುತ್ತವೆ. ಮತ್ತೆ ಕೆಲವು ಅವನ್ನು ಸಂಗ್ರಹಿಸುತ್ತವೆ.
ಮಾನವ ದೇಹದಲ್ಲಿ 1,00,000 ಬಗೆಯ ಪ್ರೋಟೀನ್ ಗಳು ಇರುತ್ತವೆ. ಅವು 20 ಬಗೆಯ ಅಮೈನೊ ಆ್ಯಸಿಡ್ ಗಳಿಂದ ಸೇರಿಕೊಂಡು ತಯಾರಾಗುತ್ತವೆ. ದೇಹದ 18-19% ಭಾರ ಪ್ರೋಟೀನ್ ನ ಕಾರಣದಿಂದ ಆಗುತ್ತದೆ.
ಕೂದಲು ಹಾಗೂ ಉಗುರು ಕೆರಾಟಿನ್ಸ್ ಪ್ರೋಟೀನ್ ನಿಂದ ರೂಪುಗೊಂಡಿರುತ್ತವೆ