ನಿಮ್ಮ ಚರ್ಮಕ್ಕೆ ತಕ್ಕಂಥ ಫೇಸ್ ಕ್ರೀಂ ಬಳಕೆ ಆಗುತ್ತಿಲ್ಲವಾದರೆ, ನೀವು ಬಯಸಿದಂಥ ಗ್ಲೋ ಮುಖಕ್ಕೆ ಸಿಗುವುದಿಲ್ಲ. ಹೀಗಾಗಿ ಚರ್ಮದ ಉತ್ತಮ ಆರೈಕೆಗಾಗಿ, ಚರ್ಮದ ಅಗತ್ಯಕ್ಕೆ ತಕ್ಕಂಥ ಫೇಸ್ ಕ್ರೀಂ ಬಳಸುವುದೇ ಸೂಕ್ತ.
ಈ ಕುರಿತಾಗಿ ನುರಿತ ಸೌಂದರ್ಯ ತಜ್ಞೆಯರ ಅಭಿಪ್ರಾಯವೆಂದರೆ, ಪ್ರತಿಯೊಂದು ಫೇಸ್ ಕ್ರೀಂ ಪ್ರಾಡಕ್ಟ್ ಹೇಳುವುದೆಂದರೆ, 1-2 ವಾರಗಳಲ್ಲಿ ಇದರ ಬಳಕೆಯಿಂದ ನಿಮಗೆ ಉತ್ತಮ ಗ್ಲೋ ಸಿಗುತ್ತದೆ ಅಂತ. ಆದರೆ ಸಮರ್ಪಕ ಫೇಸ್ ಕ್ರೀಂ ಬಳಸುತ್ತಿಲ್ಲವೆಂದರೆ, ಮುಖದಲ್ಲಿ ಕಾಂತಿ ಬದಲು ಹಾನಿ ಮೈಗೂಡುತ್ತದೆ. ಚರ್ಮದಲ್ಲಿ ಹಲವು ಬಗೆ ಇವೆ. ಸೆನ್ಸಿಟಿವ್ ಸ್ಕಿನ್, ಡ್ರೈ ಸ್ಕಿನ್, ಆಯ್ಲಿ ಸ್ಕಿನ್, ಕಾಂಬಿನೇಶನ್ ಸ್ಕಿನ್ ಇತ್ಯಾದಿ. ಮುಖದಲ್ಲಿ ಕಾಂತಿ ಪಡೆಯಲು ಚರ್ಮಕ್ಕೆ ತಕ್ಕಂತೆಯೇ ಫೇಸ್ ಕ್ರೀಂ ಬಳಸಬೇಕು.
ಚರ್ಮಕ್ಕೆ ತಕ್ಕಂತೆ ಕ್ರೀಂ
ಫೇಸ್ ಕ್ರೀಂ ಸಹ ಸ್ಕಿನ್ ತರಹ ಹಲವು ರೀತಿಗಳಲ್ಲಿ ಸಿದ್ಧಗೊಂಡಿರುತ್ತದೆ. ಇದರಲ್ಲಿ ಮಾಯಿಶ್ಚರೈಸರ್ ಯುಕ್ತ ಫೇಸ್ ಕ್ರೀಂ, ಗ್ಲಿಸರಿನ್ ಯುಕ್ತ ಫೇಸ್ ಕ್ರೀಂ, ವಿಟಮಿನ್ ಇ ಯುಕ್ತ ಫೇಸ್ ಕ್ರೀಂ, ಆ್ಯಂಟಿ ಆಕ್ಸಿಡೆಂಟ್ ಮಾತ್ರವಲ್ಲದೆ ಇದೀಗ ಓಟ್ ಮೀಲ್, ಪೆಲೆಪ್ಟೈಡ್ಸ್ ಯುಕ್ತ ಕ್ರೀಮುಗಳೂ ಲಭ್ಯ.
ಸೆನ್ಸಿಟಿವ್ ಸ್ಕಿನ್ ಗಾಗಿ ಮಾಯಿಶ್ಚರೈಸರ್ ಯುಕ್ತ ಕ್ರೀಂ ಬಳಕೆಯಿಂದ ಅದು ಚರ್ಮವನ್ನು ಬಳಕುವಂತೆ ಮಾಡಿ ಅದನ್ನು ಹೆಲ್ದಿ ಫ್ರೆಶ್ ಆಗಿ ತೋರ್ಪಡಿಸುತ್ತದೆ. ಇದರಿಂದ ಮುಖದ ಮೇಲೆ ಮೂಡುವ ಸುಕ್ಕುಗಳು ಸಹ ದೂರಾಗುತ್ತವೆ.
ಡ್ರೈ ಸ್ಕಿನ್ ಗಾಗಿ ಗ್ಲಿಸರಿನ್ ಯುಕ್ತ ಫೇಸ್ ಕ್ರೀಂ ಸೂಕ್ತ. ಇದು ಚರ್ಮವನ್ನು ಆಂತರಿಕ ಹಾಗೂ ಬಾಹ್ಯ ಎರಡೂ ಕಡೆಯಿಂದ ಹೈಡ್ರೇಟ್ ಗೊಳಿಸಿ ಸಶಕ್ತ ಮಾಡುತ್ತದೆ.
ಇದರ ಬಳಕೆಯಿಂದ ಚರ್ಮದ ಡ್ರೈನೆಸ್ ತೊಲಗುತ್ತದೆ. ಈ ಕ್ರೀಂ ಚರ್ಮದ ಆರ್ದ್ರತೆಯನ್ನು ಕಾಪಾಡುತ್ತದೆ. ಇದು ಸೆನ್ಸಿಟಿವ್ ಸ್ಕಿನ್ ಗೂ ಹೊಂದುತ್ತದೆ. ವಿಟಮಿನ್ಸ್ ಆ್ಯಂಟಿ ಆಕ್ಸಿಡೆಂಟ್ಸ್ ಕ್ರೀಂ ಸಹ ಚರ್ಮವನ್ನು ಹೆಲ್ದಿ ಮಾಡುವಲ್ಲಿ ಸಕ್ಷಮ.
ಮಾಯಿಶ್ಚರೈಸರ್ಫೌಂಡೇಶನ್
ಮುಖದ ಚರ್ಮ ಡ್ರೈ ಜೊತೆಗೆ ಸಣ್ಣ ಗುಳ್ಳೆಗಳನ್ನು ಹೊಂದಿದ್ದರೆ, ಮಾಯಿಶ್ಚರೈಸರ್‌ಫೌಂಡೇಶನ್ ಯುಕ್ತ ಕ್ರೀಂ ಬಳಸಬೇಕು. ಇದು ಮುಖದಲ್ಲಿನ ಕಲೆಗುರುತುಗಳನ್ನು ಅಡಗಿಸುವಲ್ಲಿ ಪೂರಕ. ಈ ಕ್ರೀಂ ಚರ್ಮಕ್ಕೆ ಹೆಚ್ಚು ಲಾಭಕಾರಿ. ಈ ಕ್ರೀಂ ಚರ್ಮವನ್ನು ಕೇವಲ ಸಾಫ್ಟ್ ಮಾಡುವುದಲ್ಲದೆ, ಚರ್ಮದ ಮಾಯಿಶ್ಚರ್‌ಶೈನಿಂಗ್ ನ್ನು ಸದಾ ಉಳಿಸಿಕೊಳ್ಳುತ್ತಾ ಬಿಸಿಲಿನಿಂದಲೂ ಸೂಕ್ತ ರಕ್ಷಿಸುತ್ತದೆ. ಇದರಲ್ಲಿ ಮಾಯಿಶ್ಚರೈಸರ್‌ಫೌಂಡೇಶನ್ ಎರಡರ ಲಾಭವಾಗುತ್ತದೆ. ಇದನ್ನು ಬಳಸಿ ಮೇಕಪ್ ಮಾಡಿದರೆ, ಮುಖಕ್ಕೆ ಕಾಂತಿ ಕೊಡುವುದಲ್ಲದೆ, ಇದು ಮೇಕಪ್ ಬಹಳ ಹೊತ್ತು ಬಾಳಿಕೆ ಬರುವಂತೆಯೂ ಮಾಡಬಲ್ಲದು.
ಈ ಕ್ರೀಂ ಪ್ರೈಮರ್, ಮಾಯಿಶ್ಚರೈಸರ್, ಫೌಂಡೇಶನ್, ಟ್ರೀಟ್ ಮೆಂಟ್, ಕನ್ಸೀಲರ್ ಮತ್ತು ಸನ್ ಸ್ಕ್ರೀನಿನ ಕೆಲಸಗಳನ್ನು ಒಟ್ಟೊಟ್ಟಿಗೆ ನಿಭಾಯಿಸುತ್ತದೆ.
BB ಕ್ರೀಂನಿಂದ ಚರ್ಮ ಸಾಫ್ಟ್ ಆಗುತ್ತದೆ ಹಾಗೂ ಕಲೆಗುರುತು ಉಳಿಯುವುದಿಲ್ಲ. ಆದರೆ ಮುಖದಲ್ಲಿ ಹೆಚ್ಚು ಆ್ಯಕ್ನೆ ಮೊಡವೆಗಳಿದ್ದರೆ ಅಥವಾ ಆಯ್ಲಿ ಆಗಿದ್ದರೆ, ಆಗ BB ಕ್ರೀಂ ಬಳಸಬಾರದು.