ಈ ಹೊಸ ವರ್ಷದಲ್ಲಿ ಸುಂದರವಾಗಿ ಕಾಣಿಸಿಕೊಳ್ಳುವುದು ಹೇಗೆ? ಲುಕ್ ಬದಲಿಸಲು ಮೇಕಪ್ ಜೊತೆ ಹೇರ್ ಸ್ಟೈಲ್ ಸಹ ಪ್ರಧಾನ ಪಾತ್ರ ವಹಿಸುತ್ತದೆ. ಇದಕ್ಕಾಗಿ ಮುಖಕ್ಕೆ ತಕ್ಕಂತೆ ಹೇರ್ ಸ್ಟೈಲ್ ಆರಿಸಬೇಕು. ಇದು ಸ್ಯಾಂಡಲ್ ವುಡ್, ಬಾಲಿವುಡ್ ನಟಿಯರಿಂದ ಪ್ರೇರಿತ ಆಗಿರಬಹುದು. ಈ ನಾಯಕಿಯರ ಲುಕ್ಸ್ ನ್ನು ಸಾಧಾರಣ ತರುಣಿಯರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಕೇಶ ತಜ್ಞೆಯರು ಸಹ ಪ್ರತಿ ವರ್ಷ ಇವರುಗಳಿಂದ ಹೊಸ ಹೊಸ ಹೇರ್ ಸ್ಟೈಲ್ಸ್ ರೂಪಿಸುತ್ತಿರುತ್ತಾರೆ. ಇದರಲ್ಲಿ ಹೇರ್ ಕಲರಿಂಗ್ ಪ್ರಧಾನ ಪಾತ್ರ ವಹಿಸುತ್ತದೆ.
ಕಳೆದ ವರ್ಷದಿಂದ ಕೊರೋನಾ ಮಹಾಮಾರಿಯ ಕಾಟದಿಂದಾಗಿ ಬಹುತೇಕ ಹೆಂಗಸರು WFH ನೆಪದಲ್ಲಿ ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಇದು ಮುಗಿದ ತಕ್ಷಣ ಎಂದಿನಂತೆ ಹೊರಗಿನ ಸುತ್ತಾಟಕ್ಕೆ ಎಂಥ ಹೊಸ ಹೇರ್ ಸ್ಟೈಲ್ ಅನುಸರಿಸುವುದೆಂದು ನೋಡುತ್ತಿರುತ್ತಾರೆ. ಈ ಕುರಿತಾಗಿ ಬೆಂಗಳೂರಿನ ಪ್ರಸಿದ್ಧ ಕೇಶತಜ್ಞೆಯರ ಅಭಿಪ್ರಾಯ, ಹಿಂದಿನ ಇತಿಹಾಸ ಗಮನಿಸಿದರೆ ಇಂಥ ಮಹಾಮಾರಿಗಳ ಕಾಟ ಅಪರೂಪವೇನಲ್ಲ. ಇದೀಗ ಬ್ಯೂಟಿ ಇಂಡಸ್ಟ್ರಿ ಸಹ ಬಾಧಿತ, ಹೀಗಾಗಿ ಡೂ ಇಟ್ ಯುವರ್ ಸೆಲ್ಫ್ ಹೆಚ್ಚು ಪ್ರಚಲಿತ. ಹೀಗಾಗಿ ಮನೆಯಲ್ಲೇ ಬಗೆಬಗೆಯ ಹೇರ್ ಸ್ಟೈಲ್ ಟ್ರೈ ಮಾಡಿ.
ಕೇವಲ ಶುಭ ಸಮಾರಂಭಕ್ಕೆ ಮಾತ್ರ ಮೇಕಪ್ ಮಾಡಿಕೊಂಡು ಹೋಗಬೇಕೆಂದೇನಿಲ್ಲ, ಸದಾ ಪ್ರೆಸೆಂಟೆಬಲ್ ರೆಡಿ ಆಗಿರಲು ನಿಮ್ಮನ್ನು ನೀವು ಗ್ರೂಮಿಂಗ್ ಮಾಡಿ. ಈ ಹೊಸ ವರ್ಷದ ಹೇರ್ ಸ್ಟೈಲ್ ನ್ನು ಹೀಗೆ ಅನುಸರಿಸಿ :
ಮೊದಲಿಗೆ ಹೇರ್ ಕಲರಿಂಗ್ ನೋಡೋಣ. ಇದಕ್ಕೆ ಜನ ಪಾರ್ಟಿಶನ್ ಮಾಡಿ ಅಥವಾ ಫುಲ್ ಹೇರ್ ಕಲರಿಂಗ್ ಮಾಡುತ್ತಿದ್ದರು. ಆದರೆ ಈಗಿನ ಫ್ಯಾಷನ್ ಕಲರಿಂಗ್ ಟ್ರೆಂಡ್ ಪ್ರಕಾರ, ಪ್ಯಾಂಡೆಮಿಕ್ ನಲ್ಲಿ ಅದು ಹೆಚ್ಚಾಗಿ 6-8 ಇಂಚು ಬೇರೆ ಬೇರೆ ಬಣ್ಣ ಆರಿಸುತ್ತಾರೆ. ಹೀಗಾಗಿ ಒಂದು ಹೊಸ ಟೆಕ್ನಿಕ್ `ಮನಿ ಪೀಸ್' ಬಂದಿದ್ದು, ಅದರಲ್ಲಿ ಕಲರ್ ಎಷ್ಟು ಕೆಳಭಾಗಕ್ಕೆ ಬಂದಿರುತ್ತದೋ ಅದನ್ನು ಸರಿಪಡಿಸಲು 6-8 ಫಾಯಿಲ್ಸ್ ಸಾಕಷ್ಟು ಪ್ರಭಾವಶಾಲಿ ಎನಿಸುತ್ತದೆ.
ಇದಲ್ಲದೆ, ಯುವತಿಯರ ಮುಖಕ್ಕೆ ತಕ್ಕಂತೆ, ಕೂದಲನ್ನು ರಂಗಾಗಿಸಲು 2 ಪಟ್ಟಿ ಬಳಸಿ, ಇನ್ನಷ್ಟು ಹೊಸ ಟಚ್ ನೀಡುತ್ತಾರೆ, ಇದುವೇ ಫೇಸ್ ಕಂಟೂರಿಂಗ್ ಟೆಕ್ನಿಕ್. ಇದರಿಂದ ಮುಖಕ್ಕೆ ಹೊಸ ತಾಜಾ ಲುಕ್ಸ್ ಬರುತ್ತದೆ. ಇದರಲ್ಲಿ ರೆಡ್, ಗ್ರೇ, ಮೆರೂನ್, ಬ್ಲೂ ಇತ್ಯಾದಿ ಬಣ್ಣ ಬಳಸಲಾಗುತ್ತದೆ. ನಂತರ ಕೂದಲನ್ನು ಓಪನ್ ಬಿಡುವುದೋ, ಹೆಣೆಯುವುದೋ, ಹೇಗಾದರೂ ಮಾಡಿ, ಅದು ಸುಂದರವಾಗಿರುತ್ತದೆ. ಈ ರೀತಿ ಕಲರಿಂಗ್ ಮಾಡುವುದರಿಂದ, ಲೇಟೆಸ್ಟ್ ಫ್ಯಾಷನೆಬಲ್ ಎನಿಸುವಿರಿ.
ಇಂದಿನ ಬ್ರೈಡಲ್ ಹೇರ್ ಸ್ಟೈಲ್ ಸಿಂಪಲ್ ಬಟ್ ನವ ವಧುವಿನ ಶೋಭೆ ಇರುವಂಥದ್ದನ್ನೇ ಬಯಸುತ್ತಾರೆ. ಈ ಹೊಸ ವರ್ಷದ ಸಂದರ್ಭದಲ್ಲಿ ಹಿಂದಿನಂತೆ ದೊಡ್ಡ ದೊಡ್ಡ ಜಡೆ ಗ್ರೇಟ್ ಎನಿಸುವುದಿಲ್ಲ. ಈಗೆಲ್ಲ ನ್ಯಾಚುರಲ್ ಮೇಕಪ್ ನ್ನೇ ಹೆಚ್ಚು ಬಯಸುತ್ತಾರೆ.