ಬುಲಿಬಾಯಿ ಆ್ಯಪ್ ಮಾಡುವುದರ ಮೂಲಕ 18-20 ವಯಸ್ಸಿನ ಹುಡುಗ ಹುಡುಗಿಯರು ಸೋಶಿಯಲ್ ಮೀಡಿಯಾ ಕಾರಣದಿಂದ ದೇಶದ ಮಹಿಳೆಯರು ಎಷ್ಟು ಅಸುರಕ್ಷಿತ ಎಂಬುದನ್ನು ಸಾಬೀತು ಮಾಡಿದರೆ, ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಫೋಟೋಗಳನ್ನು ಎಷ್ಟರಮಟ್ಟಿಗೆ ದುರುಪಯೋಗ ಮಾಡಿಕೊಳ್ಳಬಹುದು ಹಾಗೂ ಆಕೆಯನ್ನು ಹರಾಜಿಗೆ ಇಡಲು ಪ್ರಸ್ತಾಪಿಸಿ, ಅವಳ ಮಾನ ಹೇಗೆ ಮಣ್ಣುಪಾಲು ಮಾಡಬಹುದು ಎಂಬುದು ಈಗ ಸುಲಭವಾಗಿದೆ.
ಮಧ್ಯಮ ವರ್ಗದ ಓದು ಬರಹ ಬಲ್ಲ ಯುವಕ/ಯುವತಿಯರಿಗೆ ಈ ರೀತಿಯ ಕುಕೃತ್ಯ ಎಸಗಲು ಕಲಿಸಿದವರಾರು? ಸೋಶಿಯಲ್ ಮೀಡಿಯಾ ಒಂದು ಯೂನಿವರ್ಸಿಟಿಯಂತಾಗಿದ್ದು, ಅಲ್ಲಿ ಜ್ಞಾನ ಹಾಗೂ ತರ್ಕ ಹಂಚಲ್ಪಡುವುದಿಲ್ಲ. ಅಲ್ಲಿ ಕೆಟ್ಟ ಶಬ್ದಗಳ ಬಳಕೆ ಆಗುತ್ತಿರುತ್ತದೆ. ಇಡೀ ಜಗತ್ತನ್ನು ಒಗ್ಗೂಡಿಸಬಹುದು, ಭ್ರಾತೃತ್ವ ಭಾವನೆ ಹೆಚ್ಚುತ್ತದೆ. ದೇಶದ ಗಡಿಗಳು ನಿರರ್ಥಕ ಆಗುತ್ತದೆ. ಡಬ್ಲ್ಯು ಡಬ್ಲ್ಯು ಡಬ್ಲ್ಯು, ವರ್ಲ್ಡ್ ವೈಡ್ ವೆಬ್ ನಿಂದ ದೇಶದ ಸೈನ್ಯಗಳ ವಿರುದ್ಧ ಜನರ ಆಕ್ರೋಶ ಹೊರಹೊಮ್ಮಲು ಸಹಾಯಕ ಆಗುತ್ತದೆ ಎಂದು ಭಾವಿಸಲಾಗಿತ್ತು. ಖೇದದ ಸಂಗತಿಯೆಂದರೆ, ಇಂಟರ್ ನೆಟ್ ಇಂದು ಕಂದಕ ನಿರ್ಮಿಸುತ್ತಿದೆ. ತಮ್ಮದೇ ದೇಶದಲ್ಲಿ, ತಮ್ಮದೇ ನಗರದಲ್ಲಿ, ತಮ್ಮದೇ ಧರ್ಮಗಳ ನಡುವೆ ಅಷ್ಟೇ ಏಕೆ, ತಮ್ಮವರ ನಡುವೆ ಕೂಡ ಅಮೆರಿಕಾದ ಬಿಳಿಯರು ಕಪ್ಪು ಜನಾಂಗದವರನ್ನು ಇಂಟರ್ ನೆಟ್ ಮಾಧ್ಯಮದ ಮುಖಾಂತರ ಹಿಗ್ಗಾಮುಗ್ಗಾ ತೆಗಳುತ್ತಾರೆ. ಹಿಂದಿನ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಅದಕ್ಕೆ ನೀರೆರೆದರು. ಫೇಸ್ ಬುಕ್ ಟ್ವಿಟರ್ ಗೆ ಒಬ್ಬ ಮಾಜಿ ರಾಷ್ಟ್ರಾಧ್ಯಕ್ಷರನ್ನೇ ಬ್ಯಾನ್ ಮಾಡಬೇಕಾಗಿ ಬಂತು.
ಬುಲಿಬಾಯಿಯಲ್ಲಿ ಇಲಿ ಕದ್ದ ಮಹಿಳೆಯರ ಚಿತ್ರಗಳು ಮುಸ್ಲಿಂ ವೇಷ ಭೂಷಣದಲ್ಲಿವೆ. ಅವನ್ನು ಹರಾಜು ಕೂಡ ಹಾಕಲಾಯಿತು. ಅದನ್ನು ಯಾರು ನಡೆಸುತ್ತಿದ್ದರು? 18 ವರ್ಷದ ಹುಡುಗಿ ಮತ್ತು 21 ವರ್ಷದ ಹುಡುಗಿ ಮತ್ತು ಇನ್ನೊಬ್ಬನ ವಯಸ್ಸು 24. ಇಷ್ಟೊಂದು ಚಿಕ್ಕ ವಯಸ್ಸಿನ ಬೆಂಗಳೂರು ಉತ್ತರಾಖಂಡ ಮತ್ತು ಅಸ್ಸಾಂನ ಈ ಮಕ್ಕಳು ಮುಸ್ಲಿಂ ಸಮಾಜವನ್ನು ನಿಂದಿಸುವಲ್ಲಿ ನಿರತರಾಗಿದ್ದರು.
ತಮ್ಮ ನಿಜನಾಮ ಬಚ್ಚಿಟ್ಟು ಅಥವಾ ಸರಿಯಾದ ಹೆಸರು ತೋರಿಸದೆ ಮಾಡಿದ ಈ ಕೆಲಸ ಆ ಮಕ್ಕಳ ಭವಿಷ್ಯವನ್ನು ಹಾಳುಗೆಡಹುತ್ತದೆ. ಅವರು ಬಂಧಿಸಲ್ಪಡುವುದರ ಮೂಲಕ ಸಮಾಜದ ಕಂದಕ ಇನ್ನಷ್ಟು ವಿಸ್ತಾರವಾಯಿತು.
ಅವರನ್ನು ಅನುಕರಿಸುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಬಹುದು. ರಾಹುಲ್ ಗಾಂಧಿಯವರಿಗೆ ಕೆಟ್ಟ ಹೆಸರು ತರಲು ಅವರ ಭಾಷಣದ ಹಿಂದಿನ ಮುಂದಿನ ಭಾಗ ಕತ್ತರಿಸಿ ಪ್ರಸಾರ ಮಾಡುವವರೇ ಈ ಬುಲಿಬಾಯಿಗೆ ಹೊಣೆಗಾರರು. ದೇಶದಲ್ಲಿ ಒಂದೇ ಧರ್ಮದ ವರ್ಚಸ್ಸು ಇರಬೇಕು ಎನ್ನುವುದು ಅವರ ಧೋರಣೆ ಆಗಿರುತ್ತದೆ.
ಯಾವುದೇ ದೇಶದಲ್ಲಿ ಒಬ್ಬ ಕ್ರೂರ ರಾಜ ಕೂಡ ಪರಿಪೂರ್ಣವಾಗಿ ತನ್ನ ವಿರೋಧಿಗಳನ್ನು ಸದೆಬಡಿಯಲಾಗಲಿಲ್ಲ. ಇತರೆ ಧರ್ಮದವರನ್ನು ಇತರೆ ಭಾಷೆಯವರನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಲಿಲ್ಲ. ಅದೇ ಬುದ್ಧಿವಂತ ರಾಜ ಎಲ್ಲರಿಗೂ ಗೌರವ ಕೊಟ್ಟ. ಏಕೆಂದರೆ ಜಗತ್ತಿನಾದ್ಯಂತದ ಸಮರ್ಥರು ತಮ್ಮಲ್ಲಿರಲಿ ಎಂದು.
ಒಬ್ಬ ಯುವಕ ಎಂತಹ ಯುವತಿಯನ್ನು ಇಷ್ಟಪಡುತ್ತಾನೆ? ಅವರು ಹಿಂದೂ ಮುಸ್ಲಿಂ ಘೋಷಣೆ ಕೂಗುವುದರಲ್ಲೋ ಅಥವಾ ಪ್ರೀತಿ ಮಾಡುವುದರಲ್ಲೋ? ಯಾರು ತಿಳಿವಳಿಕೆಯುಳ್ಳವರಾಗಿರುತ್ತಾರೋ ಅವರಿಗೆ ಇದು ತಿಳಿಯಬಹುದು. ಅವರನ್ನು ನಾವು ಚೆನ್ನಾಗಿ ನೋಡಿಕೊಳ್ಳಬೇಕಾ ಅಥವಾ ತಲೆ ಒಡೆಯಲು ಸಿದ್ಧರಾಗಿರಬೇಕಾ ಎಂಬುದು ಹಿಂದು ಮುಸ್ಲಿಮರು 1000 ವರ್ಷಗಳಿಂದ ಜೊತೆ ಜೊತೆಗೆ ವಾಸಿಸುತ್ತಿದ್ದಾರೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ರಚನೆಯ ಬಳಿಕ ಅಲ್ಲಿ ಹಿಂದೂಗಳಿದ್ದಾರೆ. ಅವರು ಅಲ್ಲಿ ಕಡಿಮೆ ಸಂಖ್ಯೆಯಲ್ಲಿರಬಹುದು. ಆದರೆ ಅವರು ತಮ್ಮ ಸ್ವಬಲದ ಮೇಲೆ ಜೀವನ ನಡೆಸುತ್ತಾರೆ. ಈ ಹುಡುಗ/ಹುಡುಗಿಯರು ಇಂಟರ್ ನೆಟ್ ನ್ನು ತಮ್ಮ ಅಸ್ತ್ರ ಎಂದು ಭಾವಿಸಿ, ಕೆಡುಕಿನ ಮಾತು ಕೇಳಿಸಿಕೊಂಡು ಹುಚ್ಚರಂತಾಗಿದ್ದಾರೆ. ಒಬ್ಬರು ಮಾಡಿದ್ದನ್ನು ಸಾವಿರಾರು ಜನರು ಅನುಕರಿಸುತ್ತಿದ್ದಾರೆ.
ಇದರ ಪರಿಣಾಮವನ್ನು ಪ್ರಧಾನಿ ನರೇಂದ್ರ ಮೋದಿ ಕಂಡುಕೊಂಡಿದ್ದಾರೆ. ಅದೇ ರೈತ ಮಸೂದೆಗಳ ವಾಪಸಾತಿಯದ್ದು. ಪಂಜಾಬ್ ನಲ್ಲಿ ಜನವರಿ ಮೊದಲ ವಾರ ಪ್ರಧಾನಿಯವರು ರಾಲಿ ರದ್ದುಪಡಿಸಿ ದೆಹಲಿಗೆ ವಾಪಸ್ಸಾಗಬೇಕಾಯ್ತು. ನೆಪ ಏನೇ ಆಗಿರಬಹುದು, ರಾಲಿಯ ಸ್ಥಳದಲ್ಲಿ 70,000 ಜನರ ಕುರ್ಚಿಗಳು ಭರ್ತಿ ಆಗಿಲ್ಲದಿದ್ದಾಗ, ಫ್ಲೈ ಓವರ್ ಮೇಲಿದ್ದ ಮೋದಿ ಏನು ಮಾಡಬೇಕೆಂದು ಯೋಚನೆ ಮಾಡುತ್ತಿದ್ದರು. ಇಂಟರ್ ನೆಟ್ ಪಂಜಾಬ್ ನಲ್ಲಿ ರೈತರ ಬಗ್ಗೆ ಬಹಳಷ್ಟು ಕಹಿ ಭಾವನೆ ತುಂಬಿದೆ. ಏಕೆಂದರೆ ರೈತಾಂದೋಲನ ಅಲ್ಲಿಯೇ ಶುರುವಾಗಿತ್ತು. ಹಾಗಾಗಿ ಕಹಿ ಬೆರೆತ ಸಂದೇಶಗಳು ಅತ್ತಿತ್ತ ಹರಿದಾಡಿದ್ದವು. ಆ ಕಾರಣದಿಂದ ದೆಹಲಿ ಘೇರಾವೇ ಆಯಿತು. ಈಗ ಪ್ರಧಾನಿಗೆ ಅದರ ಕಹಿ ಉಣ್ಣಬೇಕಾಯಿತು.
ಇಂಟರ್ ನೆಟ್ ದುರುಪಯೋಗ ಜನರನ್ನು ದೂರಗೊಳಿಸಲು ಕಾರಣವಾಗುತ್ತಿದೆ. ಜನ ತಮ್ಮ ಹಳೆಯ ಸ್ನೇಹ ತೊರೆಯುತ್ತಿದ್ದಾರೆ. ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತಿದೆ. ಗಂಡ ಹೆಂಡತಿಯರ ಅಂತರಂಗದ ಫೋಟೋಗಳು ಅವರ ಬಣ್ಣಗೆಡಹುತ್ತಿವೆ. ಈಗ ಇಂಟರ್ ನೆಟ್ ನಲ್ಲಿ `ಐ ಲವ್ ಯೂ’ಗಿಂತ ಐ ಹೇಟ್ ಯೂ, ಐ ಹೇಟ್ ಯುವರ್ ಫ್ಯಾಮಿಲಿ, ರಿಲಿಜನ್ ಆಗುತ್ತಿವೆ. ವಾಟ್ಸ್ ಆ್ಯಪ್ ಶಟಪ್ ಆಗಿ ಬದಲಾಗುತ್ತಿದೆ. ಫೇಸ್ ಬುಕ್ ನಿಂದಾಗಿ ಇಂಟರ್ ನೆಟ್ ಇಂಟರ್ ಫೈರಿಂಗ್ ಆಗುತ್ತಿದೆ.
ಮಹಿಳೆಯರ ಭಾವನೆ ಅರಿತವರನ್ನು ಆಯ್ಕೆ ಮಾಡಿ
ಐದು ರಾಜ್ಯಗಳ ಚುನಾವಣೆ ಫೆಬ್ರವರಿ ಮಾರ್ಚ್ ನಲ್ಲಿ ನಡೆಯಲಿದ್ದು, ತಮಗೆ ಸರ್ಕಾರದಿಂದ ಏನು ಆಶಯಗಳಿವೆ ಎಂಬುದನ್ನು ನಿರ್ಧರಿಸಬೇಕಾಗಿದೆ. ಧರ್ಮದ ರಕ್ಷಣೆ, ಮಂದಿರ, ಚಾರ್ ಧಾಮ್, ಪ್ರವಾಸ, ಆರತಿ, ಹಿಂದೂ ಮುಸ್ಲಿಂ ವಿವಾದ, ಹೆಚ್ಚುತ್ತಿರುವ ಪೆಟ್ರೋಲ್ ಟ್ಯಾಕ್ಸ್, ದುಬಾರಿಯಾಗುತ್ತಿರುವ ಗ್ಯಾಸ್ ದಂಧೆಗಳು, ಆಂದೋಲನ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಬೇಕು? ಯಾರನ್ನು ಆಯ್ಕೆ ಮಾಡಿದರೂ, ಒಂದೇ ರಾತ್ರಿಯಲ್ಲಿ ಹಿಂದೂ ರಾಷ್ಟ್ರವೇನೂ ಆಗದು, ಬೆಲೆಗಳನ್ನೇನೂ ಇಳಿಸರು. ಚುನಾವಣೆಗಳು ಶಾಸಕರನ್ನು ಯಾವಾಗಲೂ ಡೋಲಾಯಮಾನ ಸ್ಥಿತಿಯಲ್ಲಿಟ್ಟಿರುತ್ತವೆ. ಆದರೆ ಖೇದದ ಸಂಗತಿಯೆಂದರೆ, ಚುನಾವಣೆಗಳಿಂದ ಸರಿಯಾದ ಸರ್ಕಾರಗಳ ಆಯ್ಕೆ ಆಗುತ್ತಿಲ್ಲ. ಪ್ರತಿಯೊಂದು ಹೊಸ ಚುನಾವಣೆ ವಿಕ್ಷಿಪ್ತ ಮಗುವಿಗೆ ಜನ್ಮ ನೀಡುತ್ತಿದೆ. ಜನ ಯೋಚಿಸುವುದೇನೆಂದರೆ, ಮುಂದಿನ ಚುನಾವಣೆಯಲ್ಲಾದರೂ ಒಳ್ಳೆಯ ಮಗು ಜನಿಸಿ, ತಮ್ಮ ಒಳ್ಳೆಯ ಭವಿಷ್ಯ ರೂಪಿಸಬಹುದು ಎಂದು ಭಾವಿಸುತ್ತಾರೆ. ಆದರೆ ಹಾಗಾಗುತ್ತಿಲ್ಲ.
ಈ ತಪ್ಪು ಯಾರದ್ದೆಂದು ಹೇಳುವುದು ಕಷ್ಟ. ಆದರೆ ಈ ದೇಶದಲ್ಲಿ ಪ್ರಜಾಪ್ರಭುತ್ವದ ಪ್ರಾಥಮಿಕ ತಿಳಿವಳಿಕೆ ಕಾಣೆಯಾಗುತ್ತಿದೆ. ಅದು ಹೇಗೆಂದರೆ, ಮದುವೆಗಳನ್ನು ಜಾತಕ, ಪೂಜೆಗಳಿಂದ ನಿರ್ಧರಿಸಲಾಗುತ್ತಿದೆ. ಯಶಸ್ವಿ ವಿವಾಹ ಸಂಬಂಧಗಳು, ಪ್ರಾರ್ಥನೆ, ಆರತಿಗಳ ಮೇಲೆ ಅವಲಂಬಿಸಲಾಗುತ್ತಿದೆ. ಅದೇ ರೀತಿ ರಾಜಕಾರಣದಲ್ಲಿ ಮಂತ್ರತಂತ್ರ ಜಪತಪಗಳ ಆಧಾರದ ಮೇಲೆ ಚುನಾವಣೆಗಳನ್ನು ಎದುರಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಇದು ಯಾವುದೇ ದೇಶದ ಜನತೆಯನ್ನು ಕತ್ತಲೆಯ ಕೋಣೆಗೆ ನೂಕಿದಂತೆ.
ಇವತ್ತಿನ ಮತದಾರರು 18ನೇ ಶತಮಾನದ ಮುಗ್ಧ ಹುಡುಗಿಯಂತಿದ್ದಾರೆ. ಯಾರೋ ಹೇಳಿದ ಮಾತನ್ನು ನಂಬಿ, ಜಾತಕದ ಆಧಾರದ ಮೇಲೆ, ಯಾರ ಕೊರಳಿಗೊ ಕಟ್ಟುತ್ತಿದ್ದರು. ತನ್ನ ಅದೃಷ್ಟ ಚೆನ್ನಾಗಿದ್ದರೆ ತನ್ನ ಗಂಡ ರಾಜಕುಮಾರನಂತಿರುತ್ತಾನೆ. ಅದೃಷ್ಟ ಚೆನ್ನಾಗಿರದಿದ್ದರೆ ಅವನು ಕೆಟ್ಟವನಾಗಿರುತ್ತಾನೆ. ಮತದಾರ ಯಾರನ್ನು ಆಯ್ಕೆ ಮಾಡುತ್ತಾನೊ, ಆ ವ್ಯಕ್ತಿ ಹೇಗಿರುತ್ತಾನೆ ಎಂದು ಹೇಳಲು ಆಗದು.
ಕಳೆದ ಚುನಾವಣೆಗಳನ್ನು ಗಮನಿಸಿದರೆ ಇದಕ್ಕೆ ಹೆಚ್ಚು ಬಲಿಯಾದವರೆಂದರೆ, ಮಹಿಳೆಯರೇ! 18ನೇ ಹಾಗೂ 19ನೇ ಶತಮಾನದ ಮಹಿಳೆಯರ ಹಾಗೆ, ಅವರು ವಧುವಾಗಿ ಮಕ್ಕಳನ್ನು ಹುಟ್ಟಿಸಿ ರಾಕ್ಷಸಿಯಂತಹ ಅತ್ತೆ, ಕರುಣೆಯಿಲ್ಲದ ಪತಿಯ ಶಿಕ್ಷೆಗೆ ತುತ್ತಾಗಿದ್ದಾರೆ. ಇಂದಿನ ಮಹಿಳೆಯರು ಬೆಲೆಯೇರಿಕೆ ಎದುರಿಸಬೇಕಾಗಿ ಬರುತ್ತಿದೆ. ಮನಿ ಹಾಗೂ ಕಾರ್ಯಸ್ಥಳದಲ್ಲಿ ಭೇದಭಾವ ಎದುರಿಸಬೇಕಾಗಿ ಬರುತ್ತಿದೆ. ಅಸುರಕ್ಷತೆ ಅವರನ್ನು ಸುತ್ತುವರಿದಿದೆ. ಯಾವಾಗ ಅವರ ಮೇಲೆ ರಾಜಕೀಯ ಆಪತ್ತು ಎದುರಾಗುತ್ತೊ ಗೊತ್ತಿಲ್ಲ. ದುಬಾರಿ ತೆರಿಗೆ ನೀಡಿಯೂ ಒಳ್ಳೆಯ ರಸ್ತೆ ಲಭಿಸುತ್ತಿಲ್ಲ. ಶುದ್ಧ ನೀರು, ಗಾಳಿ, ಶಿಕ್ಷಣ, ಚಿಕಿತ್ಸೆ ದೊರೆಯುತ್ತಿಲ್ಲ. ಭವಿಷ್ಯದ ಬಗ್ಗೆ ಯಾವುದೇ ಖಚಿತತೆ ಇಲ್ಲ. ಆದರೂ ಅವರು ಚುನಾವಣೆಯ ಪಂಡಿತರು, ಮೌಲ್ವಿಗಳು ಹಾಗೂ ಪಾದ್ರಿಗಳಿಗೆ ಶರಣಾಗಬೇಕಾಗುತ್ತದೆ ಮತ್ತು ಏನು ಲಭಿಸುತ್ತದೋ ಅದರಲ್ಲಿಯೇ ಸಂತೋಷ ಪಡಬೇಕಾಗುತ್ತದೆ.
ಇದಕ್ಕೆ ಬಹುದೊಡ್ಡ ಕಾರಣವೇನೆಂದರೆ, ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ, ಅವಶ್ಯಕತೆಗಳ ಬಗ್ಗೆ ಮೌನದಿಂದಿರುವುದು. ಅವರು ಚುನಾವಣೆಯಲ್ಲಿ ಸರ್ಕಾರದ ಆಯ್ಕೆಯಲ್ಲಿ ಉತ್ಸಾಹದಿಂದ ಮುಂದೆ ಬರುತ್ತಿಲ್ಲ, ತಮ್ಮ ಬೇಡಿಕೆಗಳನ್ನು ಅವರ ಮುಂದೆ ಇಡುತ್ತಿಲ್ಲ. ತಮ್ಮ ಆ ನಿರ್ಧಾರವನ್ನು ತಂದೆಯ ಮೇಲೆ ಇಲ್ಲವೇ ಗಂಡನ ಮೇಲೆ ಬಿಡುತ್ತಾರೆ. ಹೀಗಾಗಿ ಕೋವಿಡ್ ನಂತಹ ಸಂಕಟ ಬಂದಾಗ ತೊಂದರೆಯ ಮುಂಚೂಣಿಯಲ್ಲಿ ಅವರೇ ಇರುತ್ತಾರೆ. ಸರ್ಕಾರ ಆಗ ಮುರುಟಿಕೊಂಡಿರುತ್ತದೆ. ಅವರು ಕಂಡುಬರುವುದು ಟಿ.ವಿ. ಸ್ಕ್ರೀನ್ ಮೇಲೆ ಹೊರತು, ನಿಮ್ಮ ಪಕ್ಕದಲ್ಲವಲ್ಲ.
ಈಗ ಮತ್ತೊಂದು ಅವಕಾಶ ಸಿಕ್ಕಿದೆ. ನಿಮ್ಮ ವಿರೋಧ ವ್ಯಕ್ತಪಡಿಸಿ. ಮನೆಗಾಗಿ ವೇಟ್ ಕೊಡಿ. ಧರ್ಮ ವ್ಯವಹಾರ ಹಣ ಅಥವಾ ಅಬ್ಬರದ ಧ್ವನಿಗಲ್ಲ. ಮಹಿಳೆಯರ ಭಾವನೆಗಳನ್ನು ಅರಿಯುವವರನ್ನು ಆಯ್ಕೆ ಮಾಡಿ. ಸಮಾಜ ನಡೆಯುವುದೇ ಮಹಿಳೆಯರಿಂದ ಹೊರತು ಪುರುಷರಿಂದಲ್ಲ ಎನ್ನುವುದನ್ನು ಸಾಬೀತು ಮಾಡಿ. ಯಾರಿಗೆ ಮತದ ಹಕ್ಕು ದೊರಕಿದೆಯೋ ಅವರು ತಮ್ಮ ಮನಸ್ಸಿನಿಂದ ಮತ ನೀಡಬೇಕೇ ಹೊರತು ತಂದೆ, ಅಣ್ಣ ಅಥವಾ ಗಂಡ ಹೇಳಿದಂತೆ ಅಲ್ಲ.
ಯಾರು ಹೊಣೆಗಾರರು?
ಇಂದು ಯುವ ಜನಾಂಗಕ್ಕೆ ಯಾವ ತೆರನಾದ ನಿರರ್ಥಕ ಸುದ್ದಿ ಕೊಡಲಾಗುತ್ತಿದೆಯೆಂದರೆ, ಅದು ಒಂದು ಪತ್ರಿಕೆಯಲ್ಲಿ ಕೊಟ್ಟ ದಪ್ಪಕ್ಷರದ ಶೀರ್ಷಿಕೆಯಿಂದ ಸಾಬೀತಾಗುತ್ತದೆ. `ಆಲಿಷಾ ಪನಾರ್ಸ್ ಪರ್ಸಲ್ ಸ್ಟೋಲನ್ ಫ್ರಮ್ ದಿ ಕಾರ್, ದಿ ಆ್ಯಕೆಟ್ರಸ್ ಲಕ್ಕಿ ಲಿ ಫೌಂಡ್ ಇಟ್’ ಶೀರ್ಷಿಕೆಯ ಸುದ್ದಿಯಲ್ಲಿ `ಇಷ್ಕ್ ಮೇ ಮರಜಾಲಾ’ ಸಿನಿಮಾದ ನಾಯಕಿಯ ಪ್ರಕರಣ. ಒಂದು ಸರ್ವೀಸ್ ಸೆಂಟರಿನಲ್ಲಿ ಅವಳ ಪರ್ಸ್ ನ ಕಳ್ಳತನ ಆಗುತ್ತದೆ. ಆಕೆಗೆ ಸಿಸಿ ಟಿವಿ ಹಾಗೂ ವಿಚಾರಣೆಯಿಂದ ಗೊತ್ತಾದದ್ದೇನೆಂದರೆ, ಸರ್ವೀಸ್ ಸೆಂಟರಿನ ಮುಂಭಾಗದಿಂದ ಯಾರೊ ಒಬ್ಬರು ತಂದುಕೊಟ್ಟು ತನಗಿದು ರಸ್ತೆಯ ಮೇಲೆ ಸಿಕ್ಕಿತು ಎಂದು ತಿಳಿಸಿದರು.
ಈ ಸುದ್ದಿ ಇಂದಿನ ಯುವ ಜನಾಂಗದ ಜ್ಞಾನ ಹಾಗೂ ತರ್ಕ ಹೆಚ್ಚಿಸುತ್ತಿದೆಯೇ? ಸೆಲೆಬ್ರಿಟಿಗಳ ಜೊತೆ ನಡೆಯುವ ಯಾವುದೇ ಘಟನೆಯ ಬಗ್ಗೆ ಸುದ್ದಿಯನ್ನು ವಿಸ್ಮಯಕಾರಿ ಎಂಬಂತೆ ತೋರಿಸುವುದು ಇಂದಿನ ಯುವಕರಿಗೆ ಇಷ್ಟ ಆಗುತ್ತದೆಯೇ? 25 ವರ್ಷದ ಆಲಿಶಾ ಪನಾರ್ ಳ ಕಳೆದು ಹೋದ ಪರ್ಸ್ ಸಿಕ್ಕಿದ್ದರಿಂದ ಯುವ ಜನಾಂಗಕ್ಕೆ ನೆಮ್ಮದಿ ಸಿಕ್ಕಿತಾ?
ಸ್ಟಾರ್ ಗಳಿಗೆ ತಮ್ಮದೇ ಆದ ಚಾರ್ಮ್ ಇರುತ್ತದೆ. ಅವರ ಒಂದು ಝಲಕ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಆದರೆ ಇದು ಬೌದ್ಧಿಕ ದಿವಾಳಿತನ. ಸಿನಿಮಾ ನೋಡಿ, ಧಾರಾವಾಹಿ ನೋಡಿ, ಅವರ ಕೆಲಸ ಗಮನಿಸಿ, ಅವರ ಬಗ್ಗೆ ಚರ್ಚಿಸಿ. ಆದರೆ ಅವರ ಪ್ರೇಮಿಗಳ ಪ್ರಕರಣಗಳು, ಅವರ ಡ್ರೆಸ್ಸಿನ ಬಣ್ಣ ಸಮಾಜದಲ್ಲಿ ಜನಪ್ರಿಯವಾಗುತ್ತಿದೆಯೆಂದರೆ ಅದು ಸಮಾಜದ ವಿನಾಶದ ಸಂಕೇತವೇ ಹೌದು.
ಖೇದದ ಸಂಗತಿಯೆಂದರೆ, ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ಓದಿ ಬರುವ ಯುವಜನಾಂಗಕ್ಕೆ ಬೇರೇನೂ ತಿಳಿದಿರುವುದಿಲ್ಲ, ಅವರು ಮದ್ಯ, ರೆಸ್ಟೋರೆಂಟ್, ಸ್ಟಾರ್ಸ್, ಹಾಲಿಡೇ ಪ್ಯಾಕೇಜ್ ಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ದೇಶದ ಸಮಸ್ಯೆಗಳ ಬಗ್ಗೆ ಅರಿವೇ ಇರುವುದಿಲ್ಲ. ತಿಳಿಯುವ ಪ್ರಯತ್ನವನ್ನು ಮಾಡುವುದಿಲ್ಲ. ಇದು ಪ್ರತಿಯೊಂದು ದೇಶದಲ್ಲೂ ಇದೆ. ಭಾರತದಲ್ಲಿ ಸ್ವಲ್ಪ ಹೆಚ್ಚೇ ಇದೆ. ಇಲ್ಲಿ ವಾಸ್ತವ ಮಾಹಿತಿ ಕೊಡುವುದು ಅಸಾಧ್ಯ ಎಂಬಂತಾಗಿದೆ. ಏಕೆಂದರೆ ಆಂಗ್ಲ ಮಾಧ್ಯಮದಲ್ಲಿ ಓದಿರುವವರಿಗೆ ಅತ್ತ ಇಂಗ್ಲಿಷೂ ಬರುವುದಿಲ್ಲ, ಇತ್ತ ಮಾತೃಭಾಷೆಯ ಜ್ಞಾನವೂ ಇರುವುದಿಲ್ಲ. ಗಂಭೀರ ಚರ್ಚೆ ದೀರ್ಘ ಲೇಖನಗಳಲ್ಲಿರುತ್ತದೆಯೇ ಹೊರತು ಕಳ್ಳತನದ ಘಟನೆಗಳಲ್ಲಿ ಅಲ್ಲ.
ಫರ್ಹಾನ್ ಅಖ್ತರ್ ಮತ್ತು ಶಿವಾನಿ ದಾಂಡೇಕರ್ ಯಾವಾಗ ಮದುವೆ ಆಗಲಿದ್ದಾರೆ ಎನ್ನುವುದನ್ನು ತಿಳಿಯುವುದಕ್ಕಿಂತ ಅವರು ಯಾವ ಸಿನಿಮಾದಲ್ಲಿ ನಟಿಸಿದರು, ಯಾವ ವಿಷಯದಲ್ಲಿ ಸಿನಿಮಾ ಮಾಡಿದರು, ಅದು ತಪ್ಪೋ ಸರಿಯೋ ಎನ್ನುವುದರ ಬಗ್ಗೆ ತಿಳಿಯುವುದು ಸೂಕ್ತ. ಇಂದು ಸುದ್ದಿ ಕೊಡುವವರು ಎಷ್ಟು ಕ್ಷುಲ್ಲಕ ಮಟ್ಟಕ್ಕೆ ಇಳಿದಿದ್ದಾರೆಂದರೆ, ಧರ್ಮ ಮತ್ತು ರಾಜಕಾರಣದಿಂದ ಮಾರಾಟಗಾರರಿಗೆ ಸುಗ್ಗಿಯಾಗಿಬಿಟ್ಟಿದೆ. ಅವರು ಏನೇ ತಪ್ಪು ಮಾಡಲಿ, ಅದರ ಬಗ್ಗೆ ಯಾವುದೇ ಕೂಗು ಕೇಳಿಸುವುದಿಲ್ಲ. ಏಕೆಂದರೆ ಬಡವರು ಸಹಿಸಿಕೊಳ್ಳುತ್ತಾರೆ. ಆದರೆ ಶ್ರೀಮಂತರು ಸಮಸ್ಯೆಯನ್ನು ಅರಿಯುವುದಿಲ್ಲ. ಅವರಿಗೆ ಲಿಕ್ಕರ್ ಬ್ರಾಂಡ್ ಬೆಲೆ ಕೇಳಿ, ಹೇಳುತ್ತಾರೆ. ಆದರೆ ಬೇಳೆಯ ಬೆಲೆ ಗೊತ್ತಿರುವುದಿಲ್ಲ. ಅವರಿಗೆ ಪರ್ಸ್ ಕಳ್ಳತನದ ಬಗ್ಗೆ ಮದುವೆ ದಿನಾಂಕದ ಬಗ್ಗೆ ಕೇಳಿ, ಬಡ ನಿರುದ್ಯೋಗಿಗಳ ಬಗ್ಗೆ ಅಲ್ಲ, ಆಡಳಿತ ಇರುವುದು ಕೂಡ ಏನೂ ಗೊತ್ತಿಲ್ಲದರ ಕೈಯಲ್ಲಿ.