‘ಬೆಳೆಯೋ ಹುಡುಗರನ್ನ ಕಂಡ್ರೆ ಉರ್ಕೊಳ್ಳೋರೆಷ್ಟು.. ಆದ್ರೂ ನಾವ್ ಬೆಳೀತಾನೇ ಇರ್ಬೇಕಪ್ಪಾ..’ ಎಂದು ಸ್ಯಾಂಡಲ್​ವುಡ್​​​ನ ರಾಕಿಂಗ್ ಸ್ಟಾರ್​ ನಟ ಯಶ್​​​ ಸಿನಿಮಾವೊಂದರಲ್ಲಿ ಡೈಲಾಗ್​ ಹೊಡೆದಿದ್ರು. ಆದ್ರೀಗ ಅದು ನಿಜ ಎಂದೆನಿಸುತ್ತಿದೆ. ಯಾಕಂದ್ರೆ, ಕೆಜಿಎಫ್​​​​​ ಚಿತ್ರಗಳ ಭಾರೀ ಯಶಸ್ಸಿನ ನಂತರ ಬಹುಕೋಟಿ ವೆಚ್ಚದ ಅದ್ಧೂರಿ ಸಿನಿಮಾ ಟಾಕ್ಸಿಕ್​​​ ಶೂಟಿಂಗ್ ಜೋರಾಗಿದೆ.

TOXIC

ಈ ಟಾಕ್ಸಿಕ್​​ನಲ್ಲಿ ನಟ ಯಶ್​​​ ಅವರ ಜಬರ್​ದಸ್ತ್ ಎಂಟ್ರಿ ಹಾಲಿವುಡ್​ನ್ನೂ ಮೀರಿಸುವಂತಿದೆ. ಜನವರಿ 8ರಂದು ನಡೆದ ತಮ್ಮ ಜನ್ಮದಿನದಂದು ತಮ್ಮ ಫ್ಯಾನ್ಸ್​ಗೆ ಟಾಕ್ಸಿಕ್ ಸಿನಿಮಾದ ಗ್ಲಿಂಪ್ಸ್​ ರಿಲೀಸ್​ ಮಾಡಿ ಬಿಗ್​ ಗಿಫ್ಟ್​ ಕೊಟ್ಟ ಯಶ್​​, ಟಾಕ್ಸಿಕ್ ಸಿನಿಮಾ ಕುರಿತ ನಿರೀಕ್ಷೆಗಳನ್ನು ಮತ್ತಷ್ಟು ಜಾಸ್ತಿ ಮಾಡಿದ್ದಾರೆ.

TOXIC12

ಅಚ್ಚರಿ ಅಂದ್ರೆ, ಟಾಕ್ಸಿಕ್ ಗ್ಲಿಂಪ್ಸ್​ ರಿಲೀಸ್ ಆಗಿ ಕೇವಲ ಒಂದೇ ದಿನದಲ್ಲಿ 50 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಅಷ್ಟರಮಟ್ಟಿಗೆ ಆ ಗ್ಲಿಂಪ್ಸ್​​ನ ಬಿಜಿ ಮ್ಯೂಸಿಕ್​​, ರಾಕಿಭಾಯ್ ಎಂಟ್ರಿ, ಸಿಗಾರ್ ಹಿಡಿಯೋ ಸ್ಟೈಲ್​​​ ಎಲ್ಲವೂ ಸಖತ್ತಾಗೇ ಕಿಕ್ ಕೊಡ್ತಿದೆ. ವಿಶೇಷ ಅಂದ್ರೆ, ಟಾಕ್ಸಿಕ್ ಸಿನಿಮಾನ ನಿರ್ದೇಶನ ಮಾಡ್ತಿರೋದು, ದುಡ್ಡು ಹಾಕ್ತಿರೋದು ಮಲಯಾಳಂ ಮೂಲದವರೇ. ಆದ್ರೆ, ಈ ಗ್ಲಿಂಪ್ಸ್​ ಬಗ್ಗೆ ಮಲಯಾಳಂ ಚಿತ್ರರಂಗದ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

TOXIC1

ಅನೇಕರು ನಿರ್ದೇಶಕಿ ಗೀತು ಮೋಹನ್​ದಾಸ್ ಅವರನ್ನು ಪ್ರಶ್ನೆ ಮಾಡಿದ್ದು, ಮಹಿಳೆಯರನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಮಲಯಾಳಂ ನಿರ್ದೇಶಕ ನಿತಿನ್ ಕೂಡ ಗೀತು ಮೋಹನ್​ದಾಸ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ‘ಟಾಕ್ಸಿಕ್’ ಟೀಸರ್ ನೋಡಿದ ಬಳಿಕ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರನ್ನು ಅನೇಕರು ಬೆಂಬಲಿಸಿದ್ದಾರೆ. ನಿತಿನ್ ಅವರು ಗೀತು ವಿರುದ್ಧ ಧ್ವನಿ ಎತ್ತಲು ಒಂದು ಕಾರಣ ಇದೆ ಎನ್ನಲಾಗಿದೆ.

TOXIC123

ಗ್ಲಿಂಪ್ಸ್ನಲ್ಲಿ ಏನಿದೆ ಗೊತ್ತಾ..? : ಅಸಲಿಗೆ  ಟಾಕ್ಸಿಕ್ ಗ್ಲಿಂಪ್ಸ್​​ನಲ್ಲಿ ಜಗಮಗಿಸೋ ಲೈಟ್ಸ್​, ನಶೆಯಲ್ಲಿ ತೇಲಾಡ್ತಿರೋ ಫಾರಿನ್​ ಬೆಡಗಿಯರ ನಡುವೆ ಬಾಯಲ್ಲಿ ಸಿಗಾರ್, ತಲೆ ಮೇಲೆ ಹ್ಯಾಟ್​ ಹಾಕಿಕೊಂಡ ಯಶ್​​, ಕ್ಲಬ್​ಗೆ ಮಾಸ್​ ಆಗಿ ಎಂಟ್ರಿ ಕೊಡ್ತಾರೆ. ಬಳಿಕ ಕ್ಲಬ್​ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಮಹಿಳೆಯ ಕಾಲನ್ನು ಎಳೆಯುತ್ತಾರೆ. ನಂತರ ಆಕೆ ಮೇಲೆ ಎಣ್ಣೆ ಸುರಿಯುತ್ತಾರೆ. ಆಕೆ ಅದನ್ನು ಎಂಜಾಯ್ ಮಾಡುತ್ತಾಳೆ. ಈ ರೀತಿಯಲ್ಲಿರುವ ದೃಶ್ಯವನ್ನು ಕಾಂಡೋಮ್​ ಜಾಹೀರಾತು ರೀತಿಯಲ್ಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಟೀಕಿಸುತ್ತಿದ್ದಾರೆ.

TOXIC144

ಟೀಕೆಗೆ ಹಳೇ ಸಿಟ್ಟು ಕಾರಣ : ಅಚ್ಚರಿ ಅಂದ್ರೆ, ಇಲ್ಲಿ ಗೀತು ಮೋಹನ್​ದಾಸ್ ಅವರ ಈ ಟಾಕ್ಸಿಕ್​​ ಸಿನಿಮಾದ ಗ್ಲಿಂಪ್ಸ್​ನ್ನು ನಿತಿನ್ ಪ್ರಶ್ನಿಸುತ್ತಿರುವುದಕ್ಕೆ ಇದರ ಹಿಂದೆ ಮತ್ತೊಂದು ಕಾರಣವೂ ಇದೆ. 2016ರಲ್ಲಿ ‘ಕಸಾಬ’ ಹೆಸರಿನ ಸಿನಿಮಾ ಬಂದಿತ್ತು. ಇದನ್ನು ನಿರ್ದೇಶನ ಮಾಡಿದ್ದು ನಿತಿನ್ ಅವರೇ. ಈ ಚಿತ್ರದಲ್ಲಿ ಬರುವ ಒಂದು ದೃಶ್ಯ ಸಾಕಷ್ಟು ವಿರೋಧ ಎದುರಿಸಿತ್ತು. ಪೊಲೀಸ್ ಅಧಿಕಾರಿ (ಮಮ್ಮೂಟಿ) ಮಹಿಳಾ ಪೊಲೀಸ್ ಅಧಿಕಾರಿ ಬಳಿ ಹೋಗಿ ಅವರ ಬೆಲ್ಟ್ ತೆಗೆದು, ‘ನಾನು ನಿಮ್ಮ ಋತುಚಕ್ರವನ್ನು ನಿಲ್ಲಿಸಬಹುದು’ ಎಂದು ಹೇಳುವ ದೃಶ್ಯವಿತ್ತು. ಈ ದೃಶ್ಯವನ್ನು ಗೀತು ಮೋಹನ್​ದಾಸ್ ಕೂಡ ವಿರೋಧಿಸಿದ್ದರು. ಈಗ ಅವರೇ ಮಹಿಳೆಯರನ್ನು ಕೆಟ್ಟದಾಗಿ ತೋರಿಸಿದ್ದು ಎಷ್ಟು ಸರಿ ಎಂಬುದು ನಿತಿನ್ ಅಭಿಪ್ರಾಯ.

TOXIC1245

ಒಟ್ಟಿನಲ್ಲಿ ಏನೇ ಆಗ್ಲಿ, ಸೋಶಿಯಲ್ ಮೀಡಿಯಾದಲ್ಲಿ ಟಾಕ್ಸಿಕ್ ಟೀಸರ್​ ಫುಲ್ ವೈರಲ್ ಆಗ್ತಿದ್ದು,​ ಟಾಪ್​ ಟ್ರೆಂಡಿಂಗ್​​ನಲ್ಲಿದೆ. ನಟ ಯಶ್​ ಅಭಿಮಾನಿಗಳಂತೂ ಕೆಜಿಎಫ್​ಗಿಂತಲೂ ಇದು ಸಖತ್ತಾಗಿಯೇ ಇರುತ್ತೆ ಅಂತಾ ಮಾತನಾಡಿಕೊಳ್ತಿದ್ದು, ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ.

*****************************

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ