ಸುವರ್ಣಾಳ ಮನೆಗೆ ಅವಳ ಗೆಳತಿಯರು ಬಂದಾಗ, ಅವಳು ಎಲ್ಲರಿಗೂ ನಮ್ರತೆಯಿಂದಲೇ, “ಚಹಾ ತಗೊಳ್ತೀರಾ ಅಥವಾ ಕೋಲ್ಡ್?” ಎಂದು ಕೇಳಿದಳು.

“ಚಹಾ ಕುಡಿಯುವ ಅಭ್ಯಾಸ ಎಷ್ಟು ಬಲವಾಗಿ ಅಂಟಿಕೊಂಡಿತ್ತೆಂದರೆ, ಚಹಾ ಕುಡಿಯದೇ ಇರಲು ಆಗುವುದಿಲ್ಲ. ಬೇಸಿಗೆಯ ಪ್ರಖರ ಉಷ್ಣತೆಯ ಸಂದರ್ಭದಲ್ಲಿ ಚಹಾ ಕುಡಿಯುವ ಮನಸ್ಸು ಆಗುವುದಿಲ್ಲ.”

ಅವರ ಈ ಉತ್ತರಕ್ಕೆ ಪರಿಹಾರ ಸುವರ್ಣಾಳ ಬಳಿ ಇತ್ತು. ಅವಳು ಎಲ್ಲರಿಗೂ ಸ್ವಾದಿಷ್ಟ ಫ್ರೂಟಿ ಫ್ಲೇವರ್‌ ನ ಕೂಲ್ ‌ಕೂಲ್ ‌ಐಸ್ಡ್ ಟೀ ತೆಗೆದುಕೊಂಡು ಬಂದಳು. ಆಗ ನೋಡಿ ಎಲ್ಲರಿಗೂ ವಿಶಿಷ್ಟ ಖುಷಿಯ ಅನುಭವಾಯಿತು.

ಐಸ್ಡ್ ಟೀ ಪರಂಪರೆ ಆರಂಭವಾದದ್ದು 1904ರಲ್ಲಿ ಮಿಸ್ಸೋರಿಯ (ಅಮೆರಿಕಾ) ಸೇಂಟ್‌ ಲೂಯಿಸ್‌ ವರ್ಲ್ಡ್ ಫೇರ್‌ ನಲ್ಲಿ. ಆಗ ಪ್ರಖರ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಚಹಾ ತೋಟವೊಂದರ ಮಾಲೀಕ ತನ್ನ ಚಹಾವನ್ನು ಹಿಮಚ್ಛಾದಿತ ಪೈನ್‌ ನಿಂದ ಹೊರತೆಗೆದು ತಂಪುಗೊಳಿಸಿದ್ದ.

ಐಸ್ಡ್ ಟೀಯ ಗ್ರೀನ್‌ ಆ್ಯಪಲ್ ಹಾಗೂ ಪೀಚ್‌ ಫ್ಲೇವರ್‌ ನ್ನು ಎಲ್ಲರೂ ಸವಿದಿದ್ದಾರೆ. ಆದರೆ ಈಗ ಮಾರುಕಟ್ಟೆಯಲ್ಲಿ ಅದೆಷ್ಟೋ ಬಗೆಯ ಫ್ಲೇವರ್‌ ಗಳು ಲಭ್ಯವಿವೆ. ಫ್ರೂಟಿ ಮ್ಯಾಂಗೊ, ಮಿಂಟ್‌, ಬೆಸಿಲ್‌, ಬೆರ್ರಿ, ಬ್ಲ್ಯಾಕ್‌, ವೈಟ್‌, ಆರೆಂಜ್‌, ಕೆಮೊಮೈಲ್ ಇತ್ಯಾದಿ.

ಚಹಾವೇ ಏಕೆ?

ಚಹಾ ಒಂದು ಆರೋಗ್ಯವರ್ಧಕ ಪೇಯ. ಅದರಲ್ಲಿ ಹೇರಳ ಪ್ರಮಾಣದಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಇರುತ್ತವೆ. ಇದು ನಮ್ಮ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ. ಜೊತೆಗೆ ದೇಹದ ಮೆಟಬಾಲಿಸಂ ಅಂದರೆ ಚಯಾಪಚಾಯ ಕ್ರಿಯೆಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ಚಹಾ ಕುಡಿಯುವುದರಿಂದ ನಮ್ಮೊಳಗೆ ಶಕ್ತಿಯ ಸಂಚಲನ ಉಂಟಾಗುತ್ತದೆ.

ಅವರವರ ಇಷ್ಟ

ಭಾರತದ ಕಮ್ಯುನಿಕೇಶನ್‌ ನ ಜಯರಾಜ್‌ ಗೆ ಐಸ್ಡ್ ಟೀಯಲ್ಲಿ ಹರ್ಬಲ್ ಮಿಶ್ರಣ ಮಾಡುವುದು ಇಷ್ಟವಾಗುತ್ತದಾದರೆ, ಸ್ವರ್ಣ ಜ್ಯೂವೆಲರ್ಸ್‌ ನ ಅಮಿತ್‌ ಗೆ ಆರೆಂಜ್‌ ಹಾಗೂ ಗ್ರೀನ್‌ ಟೀ ಇಷ್ಟವಾಗುತ್ತದೆ. ಆರೆಂಜ್‌ ನಲ್ಲಿರುವ ವಿಟಮಿನ್‌ `ಸಿ’ಯ ಹೇರಳ ಪ್ರಮಾಣ ಹಾಗೂ ಮಿಂಟ್‌ ನ ತಂಪು ಹಾಗೂ ತಾಜಾತನ ಬಿಸಿಯನ್ನು ಹೊಡೆದೋಡಿಸುತ್ತದೆ.

ಸುಹಾಸ್‌ ಗೆ ಲೈಮ್ ಮತ್ತು ಲ್ಯಾವೆಂಡರ್‌, ಲೆಮನ್‌ ಗ್ರಾಸ್‌ ಮತ್ತು ಹನಿ ಬ್ಲ್ಯಾಕ್‌ ಬೆರಿ, ಬೆಸಿಲ್ ‌ಮತ್ತು ಅಕ್ನಿಟೋಸಿಕ್‌ ರುಚಿ ಇಷ್ಟವಾಗುತ್ತದೆ. ನಿಮಗೆ ಇಷ್ಟವಾದರೆ ನೀವು ಅದರಲ್ಲಿ ಸೋಡಾ, ನಿಂಬೆ ರಸದ ಕೆಲವು ಹನಿ ಹಾಗೂ 1 ಚಮಚ ಜೇನುತುಪ್ಪ ಮಿಶ್ರಣಗೊಳಿಸಿ ರುಚಿಯನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯಬಹುದು.

ಬೆಸ್ಟ್ ಐಸ್ಡ್ ಟೀ ರೆಸಿಪಿ

ಎಲ್ಲಕ್ಕೂ ಮೊದಲು ಒಂದು ಪಾತ್ರೆಯಲ್ಲಿ 9-10 ಕಪ್‌ ನೀರು ಕುದಿಸಿಕೊಳ್ಳಿ. ಒಲೆಯಿಂದ ಇಳಿಸಿದ ಮೇಲೆ ಅದರಲ್ಲಿ  7-8 ಟೀ ಬ್ಯಾಗ್ಸ್ ಹಾಕಿ. ನಿಮಗೆ ಐಸ್ಡ್ ಟೀ ಲೈಟ್‌ ಇಷ್ಟವೋ ಅಥವಾ ಸ್ಟ್ರಾಂಗ್‌, ಇದರ ಲೆಕ್ಕಾಚಾರದಲ್ಲಿ ಟೀ ಬ್ಯಾಗ್ಸ್ ನ ಪ್ರಮಾಣ ನಿರ್ಧರಿಸಿ. ಟೀ ಬ್ಯಾಗ್ಸ್ 8-10 ನಿಮಿಷ ನೀರಿನಲ್ಲಿ ಹಾಗೆಯೇ ಇರಲಿ. ಅದು ತಣ್ಣಗಾದ ಬಳಿಕ ಐಸ್‌ ತುಂಬಿದ ಗ್ಲಾಸ್‌ ನಲ್ಲಿ ಹಾಕಿ ಕೊಡಿ.

ಸೂಕ್ತ ಉಪಾಯ

Iced-Tea-Main

ನೀವು ಅತ್ಯುತ್ತಮ ಐಸ್ಡ್ ಟೀ ತಯಾರಿಸಲು ಬಯಸುವಿರಾದರೆ, ನಿಮಗೆ ಒಳ್ಳೆಯ ಗುಣಮಟ್ಟದ ಟೀ ಪುಡಿ ಬೇಕು. ಟೀ ಪುಡಿಯ ಜೊತೆಗೆ ನೀವು ನಿಮ್ಮ ಐಸ್ಡ್ ಟೀಯನ್ನು ಗಾರ್ನಿಶ್‌ ಮಾಡಲು ಬಯಸುವಿರಾದರೆ ಆ ಸಾಮಗ್ರಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಚಹಾವನ್ನು ಕುದಿಸುವುದು ಮತ್ತು ಮನಸ್ಸಿಗೆ ಇಷ್ಟವಾಗುವ ರೀತಿಯಲ್ಲಿ ಸಿಹಿಗೊಳಿಸುವ ವ್ಯವಸ್ಥೆ ಮಾಡಬೇಕಾಗುತ್ತದೆ. ನೀವು ಇದರಿಂದ ಮಾಕ್‌ ಟೇಲ್ ‌ಅಥವಾ ಕಾಕ್‌ ಟೇಲ್ ‌ಕೂಡ ಮಾಡಬಹುದು.

ನಾವು ನಿಮಗೆ ಇನ್ನಷ್ಟು ಒಳ್ಳೆಯ ರೆಸಿಪಿಗಳನ್ನೂ ತಿಳಿಸುತ್ತೇವೆ.

ವೆನಿಲಾ ಐಸ್ಡ್ ಟೀ

ಬೆವರು ಸುರಿಯುವ ಹವಾಮಾನದಲ್ಲಿ ರಿಫ್ರೆಶ್‌ ಮಾಡುವಂತಹ ಪೇಯವಾಗಿದೆ. ನೀವು ಯಾವಾಗಲಾದರೊಮ್ಮೆ ಒಂದೆರಡು ಹನಿ ನಿಂಬೆರಸ ಹಾಕಿ ಕುಡಿಯಬಹುದು. ಇದನ್ನು ತಯಾರಿಸುವುದು ಅತ್ಯಂತ ಸುಲಭ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಟೀ ಪೌಡರ್ ತೆಗೆದುಕೊಳ್ಳಿ ಹಾಗೂ ಅದನ್ನು ನೀರಿನಲ್ಲಿ ಕುದಿಸಿಕೊಳ್ಳಿ. ನಿಮಗೆ ಎಷ್ಟು ಬೇಕೋ ಅಷ್ಟು ಸಕ್ಕರೆ ಬೆರೆಸಿಕೊಳ್ಳಿ. ಅದು ಸಾಕಷ್ಟು ತಣ್ಣಗಾದ ಬಳಿಕ ಅದರಲ್ಲಿ ವೆನಿಲಾ ಎಸೆನ್ಸ್ ನ 2 ಹನಿ  ಹನಿ. ಬಳಿಕ  ಐಸ್‌ ತುಂಬಿದ ಗಾಜಿನ ಗ್ಲಾಸಿಗೆ ತುಂಬಿ ಫ್ರೂಟ್‌ ಟೀ ತಯಾರಿಸಿಕೊಳ್ಳಲು ನಿಮಗೆ ಆಗ ಯಾವ ಹಣ್ಣು ಸಿಗುತ್ತದೋ ಅದನ್ನು ತೆಗೆದುಕೊಳ್ಳಿ. ಉದಾಹರಣೆಗೆ ಮಾವು, ಸೇಬು, ದ್ರಾಕ್ಷಿ, ಕಲ್ಲಂಗಡಿ ಹೀಗೆ ಯಾವುದನ್ನಾದರೂ ಸಣ್ಣ ಸಣ್ಣ ತುಂಡುಗಳಾಗಿಸಿಕೊಳ್ಳಿ. ನೀರನ್ನು ಕುದಿಸಿಕೊಳ್ಳಿ, ಒಲೆಯ ಮೇಲಿಂದ ಇಳಿಸಿ. ಅದರಲ್ಲಿ ಟೀ ಬ್ಯಾಗ್ಸ್ ಹಾಕಿ ತಣ್ಣಗಾಗುವ ತನಕ ಬಿಡಿ. ಸುಮಾರು ಅರ್ಧ ಗಂಟೆ ಬಳಿಕ ಈ ಮಿಶ್ರಣವನ್ನು ಯಾವುದಾದರೂ ದೊಡ್ಡ ಬಾಟಲ್ ನಲ್ಲಿ ಹಾಕಿ. ಅದರಲ್ಲಿ ಕತ್ತರಿಸಿದ ಹಣ್ಣುಗಳನ್ನು ಬೆರೆಸಿ ಹಾಗೂ ರುಚಿಗೆ ತಕ್ಕಂತೆ ಸಕ್ಕರೆ ಮತ್ತು ಜೇನುತುಪ್ಪ  ಬೆರೆಸಿ ಫ್ರಿಜ್‌ ನಲ್ಲಿ ಇಡಿ. ಬಳಿಕ ಅದನ್ನು ಐಸ್‌ ಜೊತೆಗೆ ಸರ್ವ್ ಮಾಡಿ.

ಫ್ರೂಟ್‌ ಟೀಗೆ ನೀವು ಯಾವುದಾದರೂ ಬೆರ್ರಿ ಅಂದರೆ ಸ್ಟ್ರಾಬೆರಿ, ನೇರಳೆ ಕೂಡ ಮಿಶ್ರಣ ಮಾಡಬಹುದು.

ಜಿಂಜರ್ಹಾಗೂ ಹನಿ ಟೀ

ಹಸಿ ಶುಂಠಿಯ ತುಂಡುಗಳನ್ನು ನೀರಿನಲ್ಲಿ ಹಾಕಿ ಕುದಿಸಿಕೊಳ್ಳಿ. ಈಗ ಅದರಲ್ಲಿ ಟೀ ಬ್ಯಾಗ್‌ ಹಾಕಿ ತಣ್ಣಗಾಗಿಸಿಕೊಳ್ಳಿ. ಇದರಿಂದ ನಿಮಗೆ ಕೇವಲ ತಾಜಾತನವಷ್ಟೇ ದೊರಕುವುದಿಲ್ಲ. ನಿಮಗೆ ಇದು ಆ್ಯಂಟಿ ಆಕ್ಸಿಡೆಂಟ್ಸ್ ನ ಕೆಲಸವನ್ನು ಮಾಡುತ್ತದೆ. ಈ ಐಸ್ಡ್ ಟೀ ದೇಹದ ಜೊತೆಗೆ ಹೃದಯ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ.

ಆರೆಂಜ್ಐಸ್ಡ್ ಟೀ

ಐಸ್ಡ್ ಟೀ ಸಿದ್ಧಪಡಿಸಿಕೊಂಡು ಅದರಲ್ಲಿ ಸ್ವಲ್ಪ ಆರೆಂಜ್‌ ಜೂಸ್‌ ಬೆರೆಸಿ. ರುಚಿಯಲ್ಲಿ ಇದು ಅದ್ಭುತವಂತೂ ಆಗುತ್ತದೆ. ಜೊತೆಗೆ ಬೇಸಿಗೆಯ ಸುಸ್ತನ್ನು ನಿವಾರಿಸುವ ಕೆಲಸವನ್ನು ಮಾಡುತ್ತದೆ. ಸಕ್ಕರೆ ಹಾಗೂ ಪುದೀನಾ ಎಲೆಗಳನ್ನು ರುಚಿಗೆ ಅನುಸಾರ ಬೆರಸಬೇಕು.

ಗ್ರೀನ್ಐಸ್ಡ್ ಟೀ
ನಿಮಗೆ ಗ್ರೀನ್‌ ಟೀ ಬ್ಯಾಗ್ಸ್ ಬೇಕು. ಗ್ರೀನ್‌ ಟೀಯನ್ನು ತಂಪಾಗಿಸಿ ಅಥವಾ ಬಿಸಿಯಾಗಿ ಕುಡಿದರೂ ಸರಿ, ಅದು ಆರೋಗ್ಯಕರವಾಗಿರುತ್ತದೆ. ಫಿಟ್ನೆಸ್‌ ಆಸಕ್ತರು ಗ್ರೀನ್‌ ಟೀ ಬ್ಯಾಗ್ಸ್ ನ್ನು ಐಸ್ಡ್ ಟೀಯಲ್ಲಿ ಜೇನುತುಪ್ಪದ ಜೊತೆ ಮಿಶ್ರಣ ಮಾಡಿ ನಿಂಬೆರಸ ಕೂಡ ಹಾಕುತ್ತಾರೆ. ಜೊತೆಗೆ ತುಳಸಿ ಅಥವಾ ಪುದೀನಾ ಎಲೆಗಳಿಂದ ಗಾರ್ನಿಶಿಂಗ್‌ ಮಾಡಬಹುದು.

ಥಾಯ್ಐಸ್ಡ್ ಟೀ

Vanilla-Iced-Tea

2 ಚಮಚ ತೆಂಗಿನ ಹಾಲು ಹಾಗೂ 1 ಚಮಚ ಕಂಡೆನ್ಸ್ಡ್ ಮಿಲ್ಕ್ ಐಸ್ಡ್ ಟೀಯಲ್ಲಿ ಮಿಶ್ರಣ ಮಾಡಿ.

ಹೋಮ್ ಶೆಫ್‌ ಮಾಲಿನಿ ಕೊಡುವ ಸಲಹೆಯೇನೆಂದರೆ, ಅದನ್ನು ಕಾಕ್‌ ಟೇಲ್ ‌ಮಾಡಲು ಅದರಲ್ಲಿ ಕೊಕೋನಟ್‌ ರಮ್ ಅಥವಾ ಸ್ಪೈಸ್ಟ್ ರಮ್ ಕೂಡ ಬೆರೆಸಬಹುದು. ಅಮಿತ್‌ ಸೂಚಿಸುವುದೇನೆಂದರೆ, ನೀವು 2 ಚಮಚ ಬರ್ಬನ್‌ ವಿಸ್ಕಿಯ ಜೊತೆಗೆ 1 ಚಮಚ ಮೇಪಲ್ ಸಿರಪ್‌ ಕೂಡ ಬೆರೆಸಬಹುದು. ಇದನ್ನು ಕಿತ್ತಳೆಯ ತುಂಡಿನಿಂದ ಅಲಂಕರಿಸಿ ಸರ್ವ್ ಮಾಡಿ.

ಎಚ್ಚರಿಕೆ ವಹಿಸಿ

ಟೀ ಬ್ಯಾಗ್‌ ನ್ನು ಕುದಿಸಿದ ನೀರಿನಲ್ಲಿ ಕೇವಲ 10 ನಿಮಿಷ ಮಾತ್ರ ಬಿಡಿ. ಇಲ್ಲದಿದ್ದರೆ ರುಚಿ ಕಹಿಯಾಗುತ್ತದೆ.

ನಿಮಗೆಷ್ಟು ಬೇಕೋ, ಅದಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಐಸ್ಡ್ ಟೀ ತಯಾರಿಸಿಕೊಳ್ಳಿ. ಏಕೆಂದರೆ ಮತ್ತೊಮ್ಮೆ ಕುಡಿಯಬೇಕೆಂಬ ಇಚ್ಛೆಯಾದರೆ ನೀವು ತಕ್ಷಣವೇ ಗ್ಲಾಸಿಗೆ ಸುರಿದುಕೊಂಡು ಕುಡಿಯಬಹುದು. ಆದರೆ ಇದನ್ನು 24 ಗಂಟೆಗೂ ಹೆಚ್ಚು ಅವಧಿ ಇಡಬೇಡಿ. ಇಲ್ಲದಿದ್ದರೆ ಅದು ಟಾಕ್ಸಿಕ್‌ ಆಗಬಹುದು.

ಫ್ರಿಜ್‌ ನಲ್ಲಿ ಇಡುವ ಮೊದಲು ಮಿಶ್ರಣ ಆರಿ ತಂಪಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳಿ.

ಸಾಧಾರಣ ಬೆಚ್ಚಗಿನ ಚಹಾದಲ್ಲಿ ಸಿಹಿ ಬೆರೆಸಿ. ಏಕೆಂದರೆ ಅದು ಒಂದೇ ರೀತಿಯ ರುಚಿ ಕೊಡಬೇಕು.

ಕೆಲವು ವಿಶಿಷ್ಟ ಕಾಂಬಿನೇಶನ್ಗಳು 

ಐಸ್ಡ್ ಟೀ ತಯಾರಿಸಲು ಕೆಲವು ವಿಶಿಷ್ಟ ರುಚಿಗಳ ಬಗ್ಗೆ ಗೊತ್ತಿರಬೇಕು.

ಮಾವಿನಹಣ್ಣಿನ ಹೋಳಿನ ಜೊತೆಗೆ ಪುದೀನಾ ಎಲೆಗಳನ್ನು ನಿಮ್ಮ ಐಸ್ಡ್ ಟೀಯಲ್ಲಿ ಹಾಕಿದರೆ ವಿಶಿಷ್ಟ ರುಚಿ ಬರುತ್ತದೆ.

ವೆನಿಲಾ ಎಸೆನ್ಸ್ ಜೊತೆಗೆ ಕೆಲವು ಹನಿ ನಿಂಬೆ ರಸ ಬೆರೆಸಿ.

ಗ್ರೀನ್‌ ಆ್ಯಪಲ್ ಜೊತೆಗೆ ಪೀಚ್‌ ಹಣ್ಣಿನ ಹೋಳನ್ನು ಕತ್ತರಿಸಿ ಹಾಕಿ.

ಕೆಮೊಮೈಲ್‌ ಟೀ ಬ್ಯಾಗ್ಸ್ ಜೊತೆಗೆ ಮಲ್ಲಿಗೆ ಹೂನ್ನು ಬೆರೆಸಿದರೆ, ಸುವಾಸನೆ ಬೆರೆತ ಐಸ್ಡ್ ಟೀ ಸಿದ್ಧಪಡಿಸಬಹುದು.

ಫ್ರೂಟ್‌ ಟೀ ತಯಾರಿಸುವಾಗ, ಪುದೀನಾ ಎಲೆಗಳನ್ನು ಬೆರೆಸಿದರೆ, ತಂಪು ಮತ್ತಷ್ಟು ಹೆಚ್ಚುತ್ತದೆ.

ಕಲ್ಲಂಗಡಿ ಜೊತೆಗೆ ತುಳಸಿ ಎಲೆ ಬೆರೆತ ಐಸ್ಡ್ ಟೀ ಸುಡು ಬಿಸಿಲಿಗೆ ಎಲ್ಲಕ್ಕೂ ಉತ್ತಮ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ