ಜೀವನವೆಂಬ ಗಣಿತದಲ್ಲಿ ನಾವು ಎಷ್ಟೋ ಯಶಸ್ವಿ ತಂತ್ರಜ್ಞಾನ ಉಪಯೋಗಿಸಿದರೂ, ಒಂದು ಹಂತದಲ್ಲಿ ಅನಿಶ್ಚಿತತೆಯನ್ನು ಎದುರಿಸಬೇಕಾಗಿ ಬರುತ್ತದೆ. ಅದು ಮಲ್ಲಿಕಾಳೇ ಆಗಿರಬಹುದು, ಅಚ್ಯುತ್‌ ಅಥವಾ ದರ್ಶನ್‌ ಇರಬಹುದು. ಮಾರ್ಜಿನ್‌ ಆಫ್‌ ಎರರ್‌ ನ ಸಾಧ್ಯತೆ ಎಲ್ಲರ ಜೀವನದಲ್ಲೂ ಇರುತ್ತದೆ. ಯಾರು ಈ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡರು ಎನ್ನುವುದೇ ವಿಶೇಷ ಸಂಗತಿ. ಮಲ್ಲಿಕಾ ಈ ವಿಷಯ ತಿಳಿದುಕೊಂಡಳೋ ಅಥವಾ ದರ್ಶನ್‌ ಈ ಸತ್ಯ ಅರ್ಥ ಮಾಡಿಕೊಂಡನೊ ಅಥವಾ ಅಚ್ಯುತ್‌ ಆ ಇತಿಮಿತಿಯನ್ನು ಅರ್ಥ ಮಾಡಿಕೊಂಡು ಅದನ್ನು ಬದಿಗೆ ಸರಿಸಿ ಹೊಸದಾರಿ ಕಂಡುಕೊಂಡನೊ ಏನೋ?

ಚಿಕ್ಕದಾದ ಫ್ಲ್ಯಾಟ್‌ ನ ಸುಸಜ್ಜಿತ ಕೋಣೆಯಲ್ಲಿ ಮಧ್ಯರಾತ್ರಿ 12 ಗಂಟೆಯ ಹೊತ್ತಿಗೆ ಮಲ್ಲಿಕಾ ಹಾಗೂ ದರ್ಶನ್‌ ಇಬ್ಬರೂ ಅಕ್ಕಪಕ್ಕದಲ್ಲಿಯೇ ಮಲಗಿದ್ದರು.

25 ವರ್ಷದ ಮಲ್ಲಿಕಾ ಪಾರದರ್ಶಿ ಗುಲಾಬಿ ವರ್ಣದ ನೈಟ್‌ ಗೌನ್‌ ನಲ್ಲಿ ಅಪ್ರತಿಮ ಸುಂದರಿಯಂತೆ ಕಾಣಿಸುತ್ತಿದ್ದಳು. 32 ವರ್ಷದ ದರ್ಶನ್‌ ನಿದ್ರೆಯಲ್ಲಿಯೂ ಕೂಡ ಅವಳ ಉಪಸ್ಥಿತಿಯನ್ನು ಅನುಭವಿಸುತ್ತಾ ಗೊತ್ತಿಲ್ಲದೆಯೇ ಅವಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದಾನೆ. ತೃಪ್ತಿ ಹಾಗೂ ಖುಷಿಯ ಸ್ಪಂದನದಿಂದ ಅವನ ನಿದ್ದೆಗೆ ಅಷ್ಟಿಷ್ಟು ಅಡಚಣೆ ಉಂಟಾಗುತ್ತಿದ್ದರೂ, ಮಲ್ಲಿಕಾ ತನ್ನ ಬಳಿ ಗಾಢ ನಿದ್ರೆಯಲ್ಲಿ ಮಲಗಿರುವುದನ್ನು ನೋಡಿ ಖಚಿತತೆಯ ಖುಷಿಯಲ್ಲಿ ಪುನಃ ನಿದ್ರೆಗೆ ಜಾರುತ್ತಿದ್ದ.

ನೆಮ್ಮದಿಯ ನಿದ್ರೆ ಕಳೆದುಕೊಂಡಿದ್ದ ಕಾರಣದಿಂದಲೇ, ಅವನು ಆ ನೆಮ್ಮದಿ ಹುಡುಕಿಕೊಂಡು ಮಂಗಳೂರಿನಿಂದ ಇಡೀ ರಾತ್ರಿ ಎಚ್ಚರದಿಂದಿರುತ್ತಿದ್ದ ಮುಂಬೈಗೆ ಓಡಿ ಬಂದಿದ್ದ. ಇಲ್ಲದಿದ್ದರೆ ಮಂಗಳೂರಿನಲ್ಲಿ ಚೆನ್ನಾಗಿ ನಡೆಯುತ್ತಿದ್ದ ಪುಟ್ಟ ಹೋಟೆಲ್ ಬಿಟ್ಟು ಅವನೇಕೆ ಬರುತ್ತಿದ್ದ?

ಓಹ್‌ ಆ ಹುಡುಗಿಯನ್ನು ನೆನಪಿಸಿಕೊಂಡು ಅವನ ಹೃದಯ ಮುರುಟಿ ಹೋಗುತ್ತದೆ. ನಂಬಿಕೆ, ಪ್ರೀತಿ, ಸಂವೇದನೆ ಅರ್ಥವಿಲ್ಲದ ಪದಗಳು ಎನ್ನುವುದು ಅವನ ಗಮನಕ್ಕೆ ಬಂದು ಹೋಗುತ್ತದೆ.

ದರ್ಶನ್‌ ನ ನಿದ್ರೆ ಏಕೆ ನೆಮ್ಮದಿಯನ್ನು ಕಳೆದುಕೊಂಡಿದೆ? ಕಳೆದುಕೊಂಡ ನೆಮ್ಮದಿ ಮತ್ತೆ ಸಿಗುವುದೇ ಇಲ್ಲವೇನೊ ಎಂಬಂತೆ ಭಾಸವಾಗುತ್ತಿತ್ತು. ಆದರೂ ಅವನು ಹಾಗೆಯೇ ಮಲಗಿದ್ದ.

ಅವನು ಕೆಲವೇ ಕೆಲವು ಗಂಟೆ ಮಾತ್ರ ನಿದ್ರಿಸಿದ್ದನೇನೋ, ಈ ಸಲ ಮತ್ತೆ ಅವನ ಕೈಗಳು ಮಲ್ಲಿಕಾಳತ್ತ ಚಾಚಿದಾಗ, ಅವನು ಬೆಚ್ಚಿ ಒಮ್ಮೆಲೇ ಎದ್ದು ಕುಳಿತ. ತನ್ನ ಪಕ್ಕದಲ್ಲಿ ಮಲ್ಲಿಕಾ ಇರಲಿಲ್ಲ. ಮತ್ತೆ ಎದ್ದು ಹೋಗಿದ್ದಳು ಅವನ ಪ್ರೇಯಸಿ, ಅವನ ಲಿವ್ ‌ಇನ್ ಪಾರ್ಟ್‌ನರ್‌ ಮಲ್ಲಿಕಾ. ಸಾಮಾನ್ಯವಾಗಿ ಮಧ್ಯರಾತ್ರಿಯ ಹೊತ್ತಿಗೆ, ದರ್ಶನ್‌ ಗೆ ಹೇಳದೆಯೇ ಅವಳು ಹಾಸಿಗೆಯಿಂದ ಎದ್ದು ಹೊರಟು ಹೋಗುತ್ತಿದ್ದಳು.

ದರ್ಶನ್‌ ಗೆ ಬಹಳ ಗಾಬರಿಯಾಗುತ್ತಿತ್ತು. ಅವನು ನಿದ್ರೆಯಿಂದ ಎಚ್ಚರಗೊಳ್ಳುತ್ತಿದ್ದಂತೆ ಮಲ್ಲಿಕಾಳನ್ನು ನೋಡಲು ಹೋಗುತ್ತಿದ್ದ.

ಇಂಥದೇ ಒಂದು ಮುಂಜಾನೆ ದರ್ಶನ್‌ ಗೆ ನಿಹಾರಿಕಾ ಕೂಡ ಕಂಡು ಬಂದಿರಲಿಲ್ಲ. ಅವಳು ಎಂದೂ ಬರದ ದಾರಿಯಲ್ಲಿ ಹೋಗಿದ್ದಳು.

ದರ್ಶನ್‌ ಗಾಬರಿಗೊಂಡು ಮನೆಯ ಮೂಲೆ ಮೂಲೆಯಲ್ಲಿ ಹುಡುಕುತ್ತಾನೆ. ಅವಳು ಡ್ರಾಯಿಂಗ್‌ ರೂಮ್ ಅಥವಾ ಬಾಲ್ಕನಿಯಲ್ಲಿ ಕುಳಿತು ಫೋನ್‌ ನಲ್ಲಿ  ಮಾತಾಡುತ್ತಿರುತ್ತಿದ್ದಳು. ದರ್ಶನ್‌ ನನ್ನು ನೋಡಿ ಸಿಡಿಮಿಡಿಗೊಳ್ಳುತ್ತಿದ್ದಳು.

ದರ್ಶನ್‌ ಗೆ ಹೆದರಿಕೆಯಾಗುತ್ತಿತ್ತು. ತಾನು ಮರೆತು ಬಂದದ್ದು ಮತ್ತೆ ಪುನರಾವರ್ತನೆ ಆಗದಿರಲೆಂದು ಅವನು ಬಯಸುತ್ತಿದ್ದ.

“ಏನ್‌ ಮಾಡ್ತಿರುವೆ ಮಲ್ಲಿಕಾ? ಪ್ರತಿ ದಿನ ಮಧ್ಯ ರಾತ್ರಿ ಹೀಗೆ ಹಾಸಿಗೆಯಿಂದ ಏಕೆ ಎದ್ದು ಬರುತ್ತೀಯಾ?”

“ನಾನು ಆಫೀಸ್‌ ಕೆಲಸ ಮಾಡುತ್ತೇನೆ. ನೀನೇಕೆ ನನ್ನನ್ನು ಹಿಂಬಾಲಿಸಿಕೊಂಡು ಬರ್ತೀಯಾ?”

“ಮಧ್ಯರಾತ್ರಿ ನಿನಗೆ ಅಂಥದ್ದೇನು ಅರ್ಜೆಂಟ್‌ ಕೆಲಸ ಬಂದುಬಿಡುತ್ತೆ?” ಎಂದು ದರ್ಶನ್‌ ಕೇಳಿದಾಗ, ಅವಳು ಅವನನ್ನು ತಡೆಯಲು ಪ್ರಯತ್ನಿಸುತ್ತಿದ್ದಳು.

“ನೋಡು ದರ್ಶನ್‌, ನೀನು ನನ್ನ ಮೇಲೆ ಅಷ್ಟೊಂದು ನಿರ್ಬಂಧ ಹೇರಬೇಡ. ನನಗೆ ಬರಬೇಕು ಅನಿಸಿದರೆ ಬರ್ತೀನಿ. ನಾನು ನಿನ್ನ ನಿದ್ದೆಗೇನೂ ಭಂಗ ಮಾಡುವುದಿಲ್ಲ.”

ದರ್ಶನ್‌ ಮೌನವಾದ. ಆದರೆ ಅವನ ಮನಸ್ಸಿನಲ್ಲಿ ನಡೆಯುತ್ತಿದ್ದ ಗೌಜು ಗದ್ದಲವನ್ನು ಅವನಷ್ಟೇ ಕೇಳಿಸಿಕೊಳ್ಳುತ್ತಿದ್ದ.

ಅವನು ವಿಷಯವನ್ನು ಇನ್ನಷ್ಟು ಹೆಚ್ಚಿಸಲು ಇಚ್ಛಿಸುತ್ತಿರಲಿಲ್ಲ. ಅವನು ಮೂಲತಃ ಶಾಂತಪ್ರಿಯ ವ್ಯಕ್ತಿ. ಅವನ ಆಘ್ರಾಣ ಶಕ್ತಿಯೂ ತೀವ್ರವಾಗಿತ್ತು. ಅವನು ಮುಂಬರುವ ಅಪಾಯವನ್ನು ಅರಿತುಕೊಳ್ಳುತ್ತಿದ್ದ. ಇದೇ ಕಾರಣದಿಂದ ಅವನು ತಳಮಳದಿಂದಿದ್ದ. ಹಳೆಯ ಅನುಭವಗಳು ಅವನನ್ನು ಕಂಗೆಡಿಸುತ್ತಿದ್ದ.

ಮಲ್ಲಿಕಾಳ ಹಾಗೂ ದರ್ಶನ್‌ ರ ರಾತ್ರಿಯ ಊಟ ನೇರವಾಗಿ ದರ್ಶನ್‌ ನ ಹೋಟೆಲ್ ‌ನಿಂದ ಬರುತ್ತಿತ್ತು. ಮಧ್ಯಾಹ್ನ ಹೊತ್ತು ಇಬ್ಬರೂ ತಾವು ಕೆಲಸ ಮಾಡುತ್ತಿದ್ದ ಕಡೆಯೇ ಊಟ ಮಾಡುತ್ತಿದ್ದರು. ಬೆಳಗ್ಗೆ ಹೊತ್ತು ಇಬ್ಬರೂ ಸೇರಿಕೊಂಡು ಏನಾದರೂ ತಿಂಡಿ ತಯಾರಿಸಿಕೊಳ್ಳುತ್ತಿದ್ದರು. ಇವತ್ತು ಮತ್ತೆ ಮಲ್ಲಿಕಾ ದರ್ಶನ್‌ ಗೆ ಯಾವುದೇ ಕೆಲಸ ವಹಿಸದೇ ತಾನೇ ಅಡುಗೆ ಮನೆಗೆ ಹೋದಳು.

ಯಾರ ಮನಸ್ಸಿನಲ್ಲಿ ಏನಾದರೂ ಬಚ್ಚಿಡುವ ಅನಿವಾರ್ಯತೆ ಇರುತ್ತೊ ಅವರು, ಪ್ರಶ್ನೆ ಮಾಡುವವರ ಕಣ್ಣುಗಳ ಮುಂದೆ ಇರಲು ಇಷ್ಟಪಡುವುದಿಲ್ಲ. ದರ್ಶನ್‌ ಇದನ್ನು ಚೆನ್ನಾಗಿ ತಿಳಿದುಕೊಂಡಿದ್ದ. ಹೀಗಾಗಿ ಅವನು ಮಲ್ಲಿಕಾಳ ವರ್ತನೆಯ ಬಗ್ಗೆ ಮತ್ತಷ್ಟು ಚಿಂತಿತನಾಗಿದ್ದ.

ದರ್ಶನ್‌ ಗೆ ಮುಂಬೈ ಎಕ್ಸ್ ಪ್ರೆಸ್‌ ಹೈವೇಸ್‌ ಸಮೀಪವೇ ಒಂದು ರೆಸ್ಟೋರೆಂಟ್‌ ಇದೆ. ಅವನ ಹೋಟೆಲ್ ‌ನಲ್ಲಿ ಕೆಲವು ಕಾರ್ಮಿಕರು ಕೆಲಸ ಮಾಡುತ್ತಾರೆ. ಆದರೆ ಅವನಿಗೆ ಸ್ವತಃ ಕೆಲಸ ಮಾಡುವುದರಲ್ಲಿಯೇ ನಂಬಿಕೆ ಇದೆ.

ತನ್ನ ಸುಖ ಶಾಂತಿಯನ್ನು ಪಣಕ್ಕೊಡ್ಡುವಷ್ಟು ಮಹತ್ವಾಕಾಂಕ್ಷಿಯೂ ಅವನಾಗಿರಲಿಲ್ಲ. ಇದೇ ಕಾರಣದಿಂದ ಅವನು ಮತ್ತು ಮಲ್ಲಿಕಾಳ ನಡುವೆ ವಾದ ವಿವಾದದ ಸಂದರ್ಭ ಬರುತ್ತಿತ್ತು. ಆದರೆ ಅವನು ಹೇಗೋ ಮಾಡಿ ಆ ವಾದ ವಿವಾದದಿಂದ ಹೊರಗೆ ಬರುತ್ತಿದ್ದ.

ಮಲ್ಲಿಕಾ ತನ್ನ ಆಫೀಸಿಗೆ ಹೊರಟುಹೋದ ಬಳಿಕವೇ ಅವನು ತನ್ನ ಹೋಟೆಲ್ ಕೆಲಸಕ್ಕೆ ಹೋಗುತ್ತಿದ್ದ. ಇವತ್ತು ಕೂಡ ಅವನು ಟೇಬಲ್ ಮೇಲಿಂದ ಬೀಗದ ಕೈ ಎತ್ತಿಕೊಳ್ಳುತ್ತಿದ್ದಾಗ, ಅವನ ಗಮನ ಒಂದು ಬಿಲ್ ಮೇಲೆ ಹೋಯಿತು. ಒಂದು ಚಿನ್ನದ ಉಂಗುರದ ಬಿಲ್‌, ಏನಿದು….?

ಮಲ್ಲಿಕಾ ತನಗೆ ಗಿಫ್ಟ್ ಕೊಡಲು ಇಚ್ಛಿಸುತ್ತಿದ್ದಾಳೆಯೇ? ತಿಂಗಳ ಹಿಂದಷ್ಟೇ ಅವಳು ಅವನ ಹುಟ್ಟುಹಬ್ಬದಂದು ಒಂದೊಳ್ಳೆ ಶರ್ಟ್ ಕೊಟ್ಟಿದ್ದಳು.

ಅವನು ಬಹಳ ಖುಷಿಗೊಂಡಿದ್ದ. ಬೆಲೆ ಎಷ್ಟೇ ಇರಲಿ, ಅದು ಮಹತ್ವದ್ದಲ್ಲ. ಭಾವನೆಗಳು ಶುದ್ಧವಾಗಿದ್ದರೆ ಸಾಕು ಎಂದುಕೊಳ್ಳುತ್ತಿದ್ದ. ದರ್ಶನ್‌ ಹಾಗೆಯೇ ಇದ್ದ ಅಲ್ವ, ಆದರೆ ಇವತ್ತು ಈ ಉಂಗುರ? 5 ದಿನ ಆಯ್ತು ಅವಳು ಉಂಗುರ ಖರೀದಿಸಿ. ತನಗೆ ಅದರ ಬಗ್ಗೆ ಹೇಳಿಯೇ ಇಲ್ಲ. ದರ್ಶನ್‌ ಬೇಕೆಂದು ತನ್ನ ಮನಸ್ಸನ್ನು ಮುಚ್ಚಿ ಹೋಟೆಲ್ ‌ಕಡೆ ಹೊರಟ.

ದಕ್ಷಿಣ ಮುಂಬೈನ ಮಲಬಾರ್‌ ಹಿಲ್ಸ್ ನ ವಿಶಾಲ್ ‌ಕಾಂಪ್ಲೆಕ್ಸ್ ನ ಲಿಫ್ಟ್ ನಲ್ಲಿ ಪ್ರವೇಶಿಸಿ ಮಲ್ಲಿಕಾ ತನ್ನ ಫೋನ್‌ ನ ಸೆಲ್ಛೀ ಕ್ಯಾಮೆರಾ ಆನ್‌ ಮಾಡಿ ತನ್ನ ಮುಖ ನೋಡಿಕೊಂಡಳು. ಅವಳು ಗ್ಲಾಮರಸ್‌ ಆಗಿದ್ದಳು. ಈಗ ಹಾಗೇ ಕಾಣುತ್ತಿದ್ದಳು ಕೂಡ. ತನ್ನ ಪೆನ್ಸಿಲ್ ಸ್ಕರ್ಟ್‌ ನ್ನು ಸರಪಡಿಸಿಕೊಂಡು ಲಿಫ್ಟ್ ನಿಂದ ಹೊರಬಂದಳು. ತನ್ನ ಫೋನ್‌ ನ್ನು ಮ್ಯಾಚಿಂಗ್‌ ವ್ಯಾನಿಟಿಯಲ್ಲಿ ಹಾಕಿಕೊಂಡಳು.

5ಉ 6ಅ ಎತ್ತರವಿದ್ದ ಅವಳು ಸ್ಟೈಲ್ ‌ಹಾಗೂ ಆ್ಯಟಿಟ್ಯೂಡ್‌ ಗಾಗಿ 2 ಅಂಗುಲದ ಪೆನ್ಸಿಲ್ ‌ಹೀಲ್ ‌ನ್ನು ಧರಿಸುತ್ತಿದ್ದಳು. ಅದರಲ್ಲೂ ವಿಶೇಷವಾಗಿ ಅಚ್ಯುತ್‌ ಸರ್‌ ಆಫೀಸಿಗೆ ಹೋಗುವಾಗಲಂತೂ ಅದನ್ನು ಮರೆಯುತ್ತಿರಲಿಲ್ಲ.

ಅಚ್ಯುತ್‌ ಅವಳ ಕನಸಿನ ಅರಮನೆಯ ಅಡಿಪಾಯವಾಗಿದ್ದ. ತನ್ನ ಕುಟುಂಬದಿಂದ ಬಳುವಳಿಯಾಗಿ ಬಂದಿದ್ದ ಕಂಪನಿಯನ್ನು ಅವನು ತನ್ನ ಬಲದ ಮೇಲೆ ಆಮದು ರಫ್ತು ಕಂಪನಿಯಾಗಿ ಪರಿವರ್ತಿಸಿಕೊಂಡಿದ್ದ. ಇಂದು ವಿಶ್ವದಲ್ಲಿ ಆ ಕಂಪನಿಯ ಹಲವು ಶಾಖೆಗಳು ತೆರೆದಿವೆ. ಮತ್ತೊಂದು ವಿಶೇಷ ಸಂಗತಿಯೆಂದರೆ, ಅವನು ಇಷ್ಟೆಲ್ಲ ಆಸ್ತಿಗೂ ಏಕೈಕ ವಾರಸುದಾರನಾಗಿದ್ದ. ವ್ಯವಹಾರದಲ್ಲೂ ಚತುರ ಮತ್ತು ಸ್ಮಾರ್ಟ್‌ ಆಗಿದ್ದ.

ಕಲ್ಯಾಣ್‌ ವೆಸ್ಟ್ ನಲ್ಲಿ 15,000 ರೂ. ಬಾಡಿಗೆಯ ಮನೆಯಲ್ಲಿ ಉಳಿದುಕೊಂಡು, ಮಲಬಾರ್‌ ಹಿಲ್ಸ್ ನ ಅಚ್ಯುತ್‌ ಸರ್‌ ಕಂಪನಿತನಕ ತಲುಪುವ ದಾರಿ ಅವಳಿಗೆ ಕಠಿಣ ಆಗಿದ್ದಿರಬಹುದು, ಜೀವನ ಸಾಕಷ್ಟು ಸಂಘರ್ಷ ನಡೆಸಲು ಅವಳಿಗೆ ಕಲಿಸಿರಬಹುದು. ಆದರೆ ತನ್ನ ಕನಸು ನನಸು ಆಗುತ್ತದೆಂಬ ಮಹತ್ವಾಕಾಂಕ್ಷೆ ಅವಳಲಿತ್ತು.

ಒಂದು ವೇಳೆ ಹಾಗಾಗದೇ ಹೋಗಿದ್ದರೆ, ಅಚ್ಯುತ್‌ ಸರ್‌ ಅವಳನ್ನು ಕಂಪನಿಯ ರಿಸೆಪ್ಶನಿಸ್ಟ್ ಹುದ್ದೆಯಿಂದ ತನ್ನ ಪರ್ಸನಲ್ ಅಸಿಸ್ಟೆಂಟ್‌ ಮಾಡಿಕೊಳ್ಳುತ್ತಿರಲಿಲ್ಲ. ಮಲ್ಲಿಕಾಳ ಸೌಂದರ್ಯ ಅವಳ ದಷ್ಟಪುಷ್ಟ ಹಾಗೂ ಸ್ಮಾರ್ಟ್‌ ದೇಹದೊಂದಿಗೆ ಚಾಣಾಕ್ಷ ಮೆದುಳು ಬಹುಶಃ ಮಲ್ಲಿಕಾಳಿಗೆ ಅವಳ ಕನಸುಗಳನ್ನು ನನಸು ಮಾಡುವ ಅಸ್ತ್ರವೇ ಆಗಿತ್ತು.

ಈಗ ಹೊಸದೊಂದು ಅವಕಾಶ ಕೂಡ ಸೇರಿಕೊಂಡಿತ್ತು. ಮಲ್ಲಿಕಾಳಿಗೆ ಇದ್ದ ನಂಬಿಕೆ ಏನೆಂದರೆ, ಅವಳ ಕನಸು ಸೌಭಾಗ್ಯವೆಂಬ ರಶ್ಮಿ ರಥದ ಮೇಲೆ ಸವಾರಿ ಹೊತ್ತು ಬರುತ್ತಿದೆ, ರವಾನಿಸುತ್ತಿತ್ತು.

ತಮ್ಮ ವಿಶಾಲವಾದ ಕ್ಯಾಬಿನ್‌ ನಲ್ಲಿ ಕುರ್ಚಿಯ ಪಕ್ಕದಲ್ಲಿ ನಿಂತುಕೊಂಡು 30 ವರ್ಷದ ನೀಳಕಾಯದ ಅಚ್ಯುತ್‌ ಯಾವುದೊ ಫೈಲ್ ಓದುವುದರಲ್ಲಿ ಮಗ್ನನಾಗಿದ್ದ. ಮಲ್ಲಿಕಾ ಬಾಗಿಲಲ್ಲಿಯೇ ನಿಂತುಕೊಂಡೇ ಅಚ್ಯುತ್‌ ಗೆ ಹೇಳಿದಳು, “ಸರ್‌, ತಮಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು!”

“ಬಾ ಬಾ ಮಲ್ಲಿಕಾ. ನಾನು ನಿನ್ನದೇ ನಿರೀಕ್ಷೆಯಲ್ಲಿದ್ದೆ. ನಾನು ಕೆಲವು ದಿನಗಳ ಮಟ್ಟಿಗೆ ಇಲ್ಲಿರುವುದಿಲ್ಲ. ಸಿನಿಮಾವೊಂದರ ಶೂಟಿಂಗ್‌ ಪ್ರಯುಕ್ತ ದುಬೈಗೆ ಹೋಗುತ್ತಿರುವೆ. ಅಲ್ಲಿಂದ ಯೂರೋಪ್‌ ಗೆ ಬಿಸ್‌ ನೆಸ್‌ ಟೂರ್‌ ಗೆ ಹೋಗಬೇಕು. ಒಂದು ವಿಶೇಷ ಡ್ಯೂಟಿಯನ್ನು ನಿನಗೆ ಒಪ್ಪಿಸಿ ಹೋಗಬೇಕಿದೆ.”

ಮಲ್ಲಿಕಾಳ ಸಪ್ತ ಸ್ವರ ಒಮ್ಮೆಲೇ ಅಪಸ್ವರದಲ್ಲಿ ಬದಲಾದಂತೆ ಭಾಸವಾಯಿತು. ಅವಳು ತನ್ನ ಮುಖಭಾವನೆಯನ್ನು ಅಭಿನಯ ಕೌಶಲದಿಂದ ಬಚ್ಚಿಟ್ಟುಕೊಳ್ಳುತ್ತಾ, “ಸರ್‌, ನಾನು ನಿಮ್ಮ ಪರ್ಸನಲ್ ಅಸಿಸ್ಟೆಂಟ್‌. ನಾನು ಸದಾ ನಿಮ್ಮ ಜೊತೆಗೆ ಇರಬೇಕಾದುದು ಅವಶ್ಯ. ನಿಮ್ಮ ಶೂಟಿಂಗ್‌ ಇರಲಿ, ಬಿಸ್‌ ನೆಸ್‌ ಟೂರ್‌ ಇರಲಿ, ಯಾವುದರಲ್ಲೂ ನಿಮಗೆ ಡಿಸ್ಟರ್ಬ್‌ ಆಗದಂತೆ ನಿಮ್ಮ ಕೆಲಸವನ್ನು ಪೂರ್ತಿಗೊಳಿಸಬೇಕು. ಯಾರಾದರೊಬ್ಬರು ನಿಮ್ಮ ಜೊತೆಗೆ ಇರಲೇಬೇಕು, ಅವರು ವ್ಯವಸ್ತತೆಯ ಕ್ಷಣಗಳಲ್ಲಿ ನಿಮ್ಮನ್ನು ಇತರೆ ತಾಪತ್ರಯಗಳಿಂದ ದೂರ ಇಡಬೇಕು. ನಿಮಗೆ ಇದು ಶೂಟಿಂಗ್‌ ನ ಮೊದಲ ಅನುಭವ ಇರಬೇಕು. ನಿಮ್ಮ ಜೊತೆ ನನ್ನಂಥ ಯಾರಾದರೂ ಇರಬೇಕು,” ಮಲ್ಲಿಕಾ ತನ್ನ ಸ್ಮಾರ್ಟ್‌ ನೆಸ್‌ ತೋರಿಸುತ್ತಾ ಸ್ವಲ್ಪ ಧೈರ್ಯದಿಂದಲೇ ಹೇಳಿದಳು.

ಅಚ್ಯುತ್‌ ಅವಳ ಸುವಾಸಿತ ದೇಹದ ಮಾಧುರ್ಯತೆಯನ್ನು ಅನುಭವಿಸುತ್ತಿದ್ದ.

ತಕ್ಷಣವೇ ಮಲ್ಲಿಕಾ ತನ್ನ ಮಾತು ಬದಲಿಸುತ್ತಾ, ಮಾನಸಿಕ ಒತ್ತಡ ಹೇರಲು ಪ್ರಯತ್ನಿಸಿದಳು, “ಸರ್‌, ನಾನು ಈ ಚಿನ್ನದ ಉಂಗುರವನ್ನು ನೀವೇ ಕೊಟ್ಟ ಸಂಬಳದಿಂದ ಖರೀದಿಸಿದ್ದು. ಇದನ್ನು ನೀವು ಬೇಡ ಎಂದು ನಿರಾಕರಿಸಬಾರದು. ನೀವು ಬೇಡ ಎಂದು ಹೇಳಿದರೆ ನನಗೆ ಬಹಳ ದುಃಖ ಆಗುತ್ತದೆ,” ಎಂದು ಹೇಳುತ್ತಾ ಅವಳು ಉಂಗುರವನ್ನು ಅವನ ಬಲಗೈನ ಬೆರಳಿಗೆ ತೊಡಿಸಿದಳು.

ಅಚ್ಯುತ್‌ ಅವಳಿಗೆ ಧನ್ಯವಾದ ಹೇಳುತ್ತಾ, ಉಂಗುರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಬಳಿಕ, ತನ್ನ ಬಳಿಯಿದ್ದ ದುಬಾರಿ ಪೆನ್‌ ನ್ನು ಅವಳಿಗೆ ಉಡುಗೊರೆಯಾಗಿ ಕೊಟ್ಟ.

ಮಲ್ಲಿಕಾ ಪುನಃ ಅದೇ ಪ್ರಶ್ನೆಗೆ ಬಂದಳು. ಮಲ್ಲಿಕಾಳಿಗೆ ಎದುರಿನ ಕುರ್ಚಿಯನ್ನು ತೋರಿಸಿ ಕುಳಿತುಕೊಳ್ಳಲು ಹೇಳಿ, ತಾನೂ ಕುಳಿತ.

“ಆದರೆ ಇಲ್ಲಿ ಕೆಲಸ ಹಲವು ಸೆಕ್ಟರ್‌ ಗಳಲ್ಲಿ ಹೆಚ್ಚಾಗಿದೆ. ಅಕೌಂಟ್ಸ್ ನಲ್ಲಿ ಹೊಸ ಹುಡುಗರು ಬಂದಿದ್ದಾರೆ. ನಂಬಿಕೆಗಾಗಿ ಯಾರಾದರೂ ಬೇಕೇ ಬೇಕು ಅಲ್ವಾ? ಈ ಸಲ ಸಿನಿಮಾದವರ ಗಮನ ನನ್ನ ಮೇಲೆ ಬಿದ್ದಿದೆ. ನಾನು ಅವರಿಗೆ ನಿರಾಕರಿಸಲು ಸಾಧ್ಯವಿರಲಿಲ್ಲ.”

“ಸರ್‌, ನಾನು ನಿಮಗೊಂದು ಸಲಹೆ ಕೊಡಲಾ? ನನಗೊಬ್ಬ ಒಳ್ಳೆಯ ಸ್ನೇಹಿತನಿದ್ದಾನೆ. ಬಹಳ ನಂಬಿಕಸ್ಥ ವ್ಯಕ್ತಿ. ಅಕೌಂಟ್ಸ್ ನೋಡಿಕೊಳ್ಳುತ್ತಾನೆ. ಅವನಿಂದ ನಮಗೆ ಎಲ್ಲ ವಿಷಯ ಕಾಲಕಾಲಕ್ಕೆ ತಿಳಿಯುತ್ತಿರುತ್ತದೆ ಮತ್ತು ಆ ವಿಷಯ ನಮ್ಮ ಮೂವರ ನಡುವೆಯೇ ಇರುತ್ತದೆ.”

“ಸರಿ, ನಿನಗೆ ಈ ಅಪೇಕ್ಷೆ ಇದ್ದರೆ ಹಾಗೆಯೇ ಮಾಡೋಣ.”

“ಸರ್‌, ನಿಮ್ಮದು ತುಂಬಾ ಒಳ್ಳೆಯ ಮನಸ್ಸು. ನಾನು ಆ ಹುಡುಗನನ್ನು ನಾಳೆಯೇ ಕರೆದುಕೊಂಡು ಬರ್ತೀನಿ.”

ಮೊದಲ ಸಲ ಅಚ್ಯುತ್‌ ಮತ್ತು ದರ್ಶನ್‌ ಭೇಟಿಯಾಗುತ್ತಿದ್ದರು. ಮಲ್ಲಿಕಾ ಒಂದು ದೊಡ್ಡ ಫರ್ಮ್ ನ ಭಾಗ ಎನ್ನುವುದನ್ನು ದರ್ಶನ್ ಅರಿತಿದ್ದ. ಆದರೆ ಅಂತಹ ದೊಡ್ಡ ವ್ಯಕ್ತಿಯ ಮುಂದೆ ತಾನು ನಿಲ್ಲಬಹುದು ಎನ್ನುವ ಕಲ್ಪನೆ ದರ್ಶನ್‌ ಗೆ ಇರಲಿಲ್ಲ.

ವರ್ಷಕ್ಕೆ 10 ಲಕ್ಷಕ್ಕಿಂತಲೂ ಹೆಚ್ಚು ಹಣ ಗಳಿಸುವ ಮಲ್ಲಿಕಾಳನ್ನು ಅವನೆಂದೂ ಹಣದ ದೃಷ್ಟಿಯಿಂದ ನೋಡಿರಲಿಲ್ಲ. ಆದರೆ ಅಚ್ಯುತ್ ನ ಎದುರಿಗೆ ಇದ್ದ ಮಲ್ಲಿಕಾಳನ್ನು ನೋಡಿ ಅವನಿಗೆ ಅಚ್ಚರಿ ಆಗುತ್ತಿತ್ತು.

4 ವರ್ಷಗಳ ಹಿಂದೆ ಇಬ್ಬರೂ ಪ್ರತ್ಯೇಕವಾಗಿ ಬಾಡಿಗೆ ಮನೆ ಹುಡುಕುತ್ತಿದ್ದಾಗ, ಮಲ್ಲಿಕಾಳಿಗೆ ದರ್ಶನ್‌ ಭೇಟಿ ಆಗಿದ್ದ. ಆಗಲೇ ಇಬ್ಬರೂ ಸೇರಿ ಒಂದೇ ಮನೆ ಮಾಡುವುದು ಸೂಕ್ತ ಎಂದು ಮನಗಂಡು ಜೊತೆ ಜೊತೆ ಇರಲಾರಂಭಿಸಿದ್ದರು. ಆಗ ಮಲ್ಲಿಕಾ ಚಿಕ್ಕದೊಂದು ವರ್ಕ್‌ ಶಾಪ್‌ ನಲ್ಲಿ ರಿಸೆಪ್ಶನಿಸ್ಟ್ ಆಗಿದ್ದಳು. ಅದರ ಜೊತೆ ಜೊತೆಗೆ ಚಿಕ್ಕಪುಟ್ಟ ಮಾಡೆಲಿಂಗ್‌ ಆಗಿ ಕೆಲಸ ಮಾಡುತ್ತಿದ್ದಳು. ಆಗ ಅವಳು 15,000 ರೂ. ಬಾಡಿಗೆ ಕೊಡಲು ಶಕ್ತಳಾಗಿರಲಿಲ್ಲ. ನಿನಗೆಷ್ಟು ಕೊಡಲು ಸಾಧ್ಯವೋ ಅಷ್ಟು ಕೊಡು ಎಂದು ಅವಳ ನಿರ್ಧಾರಕ್ಕೆ ಬಿಟ್ಟಿದ್ದ. ಅವಳಿಂದ ಅವನು ನಿರೀಕ್ಷಿಸುತ್ತಿದ್ದುದು ಪ್ರೀತಿ ಹಾಗೂ ಭರವಸೆ ಮಾತ್ರ. ಏಕೆಂದರೆ ಅವನಿಗೆ ಅವಳ ಬಗ್ಗೆ ಪ್ರೀತಿ ಹೆಚ್ಚಾಗುತ್ತಿತ್ತು.

ಸರ್ವರಲ್ಲೂ ಬೆರೆಯುವ ಸ್ವಭಾವದ ಹ್ಯಾಂಡ್ಸಮ್ ಅಚ್ಯುತ್‌ ನನ್ನು ನೋಡಿ ದರ್ಶನ್‌ ಗೆ ಹಿಂಜರಿಕೆ ಆಗುತ್ತಿತ್ತು. ಅವನ ದೃಷ್ಟಿ ಅಚ್ಯುತ್‌ ನ ಬೆರಳಿನ ಮೇಲೆ ಹೋದಾಗ ಅಲ್ಲಿದ್ದ ಉಂಗುರದ ಮೇಲೆ ಅವನ ಕಣ್ಣು ಹೋಯಿತು. ಆ ಉಂಗುರ 5 ದಿನಗಳ ಹಿಂದಷ್ಟೇ ಮಲ್ಲಿಕಾ ತಂದಿಟ್ಟಿದ್ದ ಉಂಗುರವಾಗಿತ್ತು. ಅದರ ಜೊತೆಗೆ ಬೇರೆ ಬೆರಳುಗಳಲ್ಲಿ ವಜ್ರದುಂಗುರಗಳು ಸಹ ಕಂಡವು. ತಾನಿನ್ನು ಆ ಉಂಗುರದ ಬಗ್ಗೆ ಯೋಚಿಸದೆ ಮೌನವಾಗಿರುವುದೇ ಉತ್ತಮ ಎನಿಸಿತು.

ಅಚ್ಯುತ್‌ ಜೊತೆಗೆ ನಡೆದ ಮಾತುಕಥೆಯಿಂದ ನಿರ್ಧಾರವಾದ ಸಂಗತಿಯೇನೆಂದರೆ, ತನ್ನ ಅನುಪಸ್ಥಿತಿಯಲ್ಲಿ ಅಕೌಂಟ್ಸ್ ನೋಡಿಕೊಳ್ಳುವುದು ಹಾಗೂ ಕಂಪನಿಯ ಹಣವನ್ನು ಬ್ಯಾಂಕಿಗೆ ತಾನೇ ಜಮೆ ಮಾಡುವ ಜವಾಬ್ದಾರಿಯನ್ನು ದರ್ಶನ್‌ ಗೆ ಕೊಡಲಾಯಿತು.

ರಾತ್ರಿ ಮಲಗುವಾಗ ದರ್ಶನ್‌ ಮಲ್ಲಿಕಾಳಿಗೆ ಹೇಳಿದ, “ನಾವಿಬ್ಬರೂ 4 ವರ್ಷಗಳಿಂದ ಲಿವ್ ಇನ್‌ ನಲ್ಲಿದ್ದೇವೆ. ಈಗ ನನಗೆ ಹೆದರಿಕೆ ಆಗುತ್ತಿದೆ. ನೀನು ದುಬೈಗೆ ಹೋಗುವ ಮುನ್ನ ನನ್ನನ್ನು ಮದುವೆ ಆಗ್ತೀಯಾ?”

“ಏಕೆ? ಅಂತಹ ಹೆದರಿಕೆ?” ಮಲ್ಲಿಕಾ ನಿರ್ಲಕ್ಷ್ಯ ಧೋರಣೆಯಿಂದ ಕೇಳಿದಳು.

“ನೀನು ವಾಪಸ್‌ ಬರ್ತಿಯಾ ತಾನೇ? ಈಗಿರುವ ಹಾಗೆ?”

“ನೀನೇಕೆ ಅಷ್ಟು ಗಂಭೀರವಾಗಿ ಯೋಚಿಸುತ್ತಿರುವೆ? ಅಂಥದ್ದೇನೂ ಇಲ್ಲ. ನೀನು ಮಲಗು. ನನಗೂ ಮಲಗಲು ಬಿಡು. ಬೆಳಗ್ಗೆ ಸಾಕಷ್ಟು ಕೆಲಸ ಮಾಡುವುದಿದೆ. ನೀನೂ ಕೂಡ ನಿನ್ನ ಕೆಲಸ ತಿಳಿದುಕೊ.”

ದರ್ಶನ್‌ ಗೆ ತನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಸಮರ್ಪಿತ ಪ್ರೇಮಿಯಿಂದ ಸಿಗಬೇಕಾದ ಸುಖ, ನೆಮ್ಮದಿ ಮಾತ್ರ ಅವನಿಗೆ ಸಿಕ್ಕಿಲ್ಲ ಎನಿಸುತ್ತಿತ್ತು. ಮಲ್ಲಿಕಾ ಮಗ್ಗಲು ಬದಲಿಸಿ ಮಲಗಿದಳು.

ಅವಳನ್ನು ನೋಡುತ್ತಾ ದರ್ಶನ್‌ಯೋಚಿಸತೊಡಗಿದ. ಅವಳು ಬಹಳಷ್ಟು ಮುಂದೆ ಹೋಗಿದ್ದಾಳೆ ಎಂದು ಅವನಿಗೆ ಅನಿಸತೊಡಗಿತು.

ಮಲ್ಲಿಕಾ ಒಂದು ಸಲ ಅವನಿಗೆ ಹೇಳಿದ್ದ ವಿಷಯ ನೆನಪಿಗೆ ಬಂತು. ತಾನು ಚಿಕ್ಕವಳಿದ್ದಾಗ ಅಣ್ಣ ಹಾಗೂ ಅಪ್ಪನ ಕಠಿಣ ಶಿಸ್ತಿನಡಿ ಬೆಳೆದೆ. 10ನೇ ತರಗತಿಯಲ್ಲಿರುವಾಗಲೇ ಅಮ್ಮ ಕಿಡ್ನಿ ಸಮಸ್ಯೆಯಿಂದ ಸತ್ತುಹೋದರು. ಅಪ್ಪ ಅಣ್ಣನ ಕಠಿಣ ನಿಯಮಗಳು ಮನೆಯಲ್ಲಿ ಇರದಂತೆ ಮಾಡಿದ್ದ ಎಂದು ಹೇಳಿದ್ದಳು.

ಅಂದು ಕಠೋರ ಶಿಸ್ತಿನಡಿ ಬೆಂದು ಬಳಲಿದ್ದ ಮಲ್ಲಿಕಾ ಇವತ್ತು ಈ ಮಟ್ಟಿಗೆ ಬೆಳೆಯಲು ಎಷ್ಟರ ಮಟ್ಟಿಗೆ ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡಿದ್ದಳೋ ಗೊತ್ತಿಲ್ಲ. ಅವಳಿಗೆ ಪುರುಷರ ಬಗ್ಗೆ ಎಷ್ಟು ಸಹನೆ ಇರಬಹುದೊ ಅವನಿಗೆ ಗೊತ್ತಿಲ್ಲ. ಅಮ್ಮನ ಆಶ್ರಯ ತಪ್ಪಿ ಹೋದ ಬಳಿಕ ಅಪ್ಪನ ವ್ಯಂಗ್ಯ ಬಾಣ ಹೊಡೆತ, ಉಸಿರುಗಟ್ಟುವ ವಾತಾವರಣವನ್ನು ಅವಳು ಏಕಾಂಗಿಯಾಗಿಯೇ ಎದುರಿಸಿದ್ದಳು.

ಅವಳು ಡಿಗ್ರಿ ಮುಗಿಸಿದ ಬಳಿಕ ಅಮ್ಮನ ಆಭರಣಗಳ ಗಂಟು ಹೊತ್ತು ಹೇಳದೇ ಕೇಳದೇ ಮುಂಬೈನ ರೈಲು ಹತ್ತಿದ್ದಳು. ತನ್ನ ನೋವು ಪರಿಚಯ ಬಚ್ಚಿಟ್ಟು ಹೇಗೇಗೊ ಜೀವನವನ್ನು ನಡೆಸಿ ಇಂದು ದೊಡ್ಡ ಬಿಸ್‌ ನೆಸ್‌ ಫರ್ಮ್ ವೊಂದರ ಪರ್ಸನಲ್ ಅಸಿಸ್ಟೆಂಟ್‌ ಆಗಿದ್ದಾಳೆ. ಮುಂದಿನ ಸುವರ್ಣಾವಕಾಶಕ್ಕಾಗಿ ಅವಳು ಕಾಯ್ದು ಕುಳಿತಿದ್ದಳು.

ದುಬೈನ ಅದ್ಧೂರಿ ಹೊಟೇಲೊಂದರ ಸೂಟ್‌ ನಲ್ಲಿ ಅಚ್ಯುತ್‌ ಶೂಟಿಂಗ್‌ ಬಳಿಕ ಸ್ಪಾಗಾಗಿ ತಯಾರಾಗಿದ್ದ. ಆಗ ಮಲ್ಲಿಕಾ ಒಳಗೆ ಬಂದು ಹೇಳಿದಳು, “ಗುಡ್‌ ಈವ್ನಿಂಗ್‌ ಸರ್‌.”

ಅಚ್ಯುತ್‌ ಚಹಾ ಮಾಡಿಕೊಳ್ಳುವ ಸಿದ್ಧತೆಯಲ್ಲಿದ್ದು “ಚಹಾ ಕುಡಿಬೇಕು?” ಎಂದ.

“ನಾನೇ ಮಾಡ್ತೀನಿ ಸರ್‌.”

ಅಚ್ಯುತ್‌ ಬಳಿ ಸೋಫಾದ ಮೇಲೆ ಕುಳಿತುಕೊಳ್ಳುತ್ತಾ ಮಲ್ಲಿಕಾಳ ಕೈ ಅಚ್ಯುತ್‌ ಗೆ ತಗುಲಿತು. ಆ ಸ್ಪರ್ಶದ ಬಗ್ಗೆ ಅಚ್ಯುತ್ ಚಕಿತನಾಗಲಿಲ್ಲ. ಏಕೆಂದರೆ ಅವನು ಅವಳ ಮನಸ್ಸನ್ನು ಹಲವು ತಿಂಗಳಿಂದ ಓದುತ್ತಿದ್ದ. ಬಾಥಿಂಗ್‌ ಗೌನ್‌ ನಲ್ಲಿ ಅವನ ಅರೆತೆರೆದ ದೇಹ ಅವಳಿಗೆ ಬಹಳ ನಿಕಟವಾಗಿತ್ತು. ಅವಳಿಗೆ ಅವನ ಜೊತೆ ಫ್ಲರ್ಟ್‌ ಮಾಡುವ ಮನಸ್ಸಾಯಿತು.

ಚಹಾ ಕುಡಿದ ಬಳಿಕ ಅಚ್ಯುತ್‌ ಎದ್ದು ದೊಡ್ಡ ಕಿಟಕಿಯೊಂದರ ಹತ್ತಿರ ನಿಂತು ದುಬೈನ ಅಂದ ಕಣ್ತುಂಬಿಸಿಕೊಳ್ಳುತ್ತಾ, “ದರ್ಶನ್‌ನಿಂದ ಏನಾದರೂ ಸುದ್ದಿ….” ಕೇಳಿದ.

ಮಲ್ಲಿಕಾ ಅಚ್ಯುತ್‌ ಗೆ ಅತ್ಯಂತ ನಿಕಟವಾಗಿದ್ದು, “ಅಲ್ಲಿನ ಎಲ್ಲ ವಿವರ ನಾನು ನಿಮಗೆ ಮೇಲ್ ಮಾಡಿದ್ದೇನೆ ಸರ್‌. ಇನ್ನೊಂದು ವಿಷಯ ನಾನು ನಿಮಗೆ ಧನ್ಯವಾದ ಹೇಳಬಯಸ್ತೀನಿ. ದುಬೈ ನೋಡಲು ಅವಕಾಶ ಕಲ್ಪಿಸಿದ್ದಕ್ಕೆ ಈ ಧನ್ಯವಾದ ಹೇಳುತ್ತಿರುವೆ,” ಎಂದಳು.

ಅಚ್ಯುತ್‌ ಆ ಬಗ್ಗೆ ಹೆಚ್ಚು ಖುಷಿಗೊಳ್ಳದೆ ಶಾಂತ ಸ್ಥಿತಿಯಲ್ಲಿಯೇ, “ಎಂಜಾಯ್‌ ದಿ ಮೂಡ್‌ಆಪರ್ಚುನಿಟಿ. ನಾನು ಸ್ಪಾಗೆ ಹೋಗಿ ಬರ್ತೀನಿ. ನೀನೀಗ ನಿನ್ನ ರೂಮಿಗೆ ಹೋಗಬಹುದು,” ಎಂದು ಹೇಳಿದ.

3-4 ದಿನಗಳ ಕಾಲ ಸಿನಿಮಾ ಶೂಟಿಂಗ್‌ ವ್ಯವಸ್ತತೆ ಇತ್ತು. ಈ ಅವಧಿಯಲ್ಲಿ ಮಲ್ಲಿಕಾಳಿಗೆ ಅಚ್ಯುತ್‌ ನ ಬಳಿ ಸುಳಿಯಲು ಹೆಚ್ಚು ಅವಕಾಶ ಸಿಗಲಿಲ್ಲ.

4 ದಿನಗಳ ಬಳಿಕ ರಾತ್ರಿ 9 ಗಂಟೆಗೆ ತಮ್ಮ ರೂಮಿನಲ್ಲಿ ಡಿನ್ನರ್‌ ಮಾಡುತ್ತಿದ್ದರು. ಆಗ ಮಲ್ಲಿಕಾ ಕೈಯಲ್ಲಿ 2 ಗ್ಲಾಸ್‌ ಬಾದಾಮಿ ಲಸ್ಸಿ ಹಿಡಿದುಕೊಂಡು ಬಂದು, “ಸರ್‌, ನಾನು ಎಷ್ಟೋ ದಿನಗಳ ಬಳಿಕ ನಿಮ್ಮನ್ನು ಭೇಟಿ ಆಗುತ್ತಿರುವೆ. ನಿಮಗೆ ಬಾದಾಮಿ ಲಸ್ಸಿ ಬಹಳ ಇಷ್ಟ ಅಂತ ಗೊತ್ತು. ನನಗಾಗಿ ಆದರೂ ನೀವು ಇದನ್ನು ಕುಡಿಯಲೇಬೇಕು,” ಹೇಳಿದಳು.

ಅಚ್ಯುತ್‌ ಗೆ ಅದನ್ನು ಕುಡಿಯುವ ಇಟ್ಠೆಯಂತೂ ಇರಲಿಲ್ಲ. ಆದರೆ ಮಲ್ಲಿಕಾಳಿಗೆ ನಿರಾಶೆ ಮಾಡಬಾರದೆಂದು ಅವನು ಕುಡಿದ.

ಊಟ ಮುಗಿಸುವ ತನಕ ಅಚ್ಯುತ್‌ ಗೆ ಸುಸ್ತು ಎನಿಸತೊಡಗಿತ್ತು. ಅವನು ಮಲ್ಲಿಕಾಳಿಗೆ ಹೇಳಿದ, “34 ದಿನಗಳ ನಿರಂತರ ಶೂಟಿಂಗ್‌ ನಿಂದ ದಣಿವಾಗುತ್ತಿದೆ. ನಾನೀಗ ರೆಸ್ಟ್ ಮಾಡ್ತೀನಿ ನೀನು ಹೋಗು ಮಲ್ಲಿಕಾ.”

ಮಲ್ಲಿಕಾ ತನ್ನ ರೂಮಿಗೆ ಮರಳುವ ಬದಲು ಅವನ ಹಾಸಿಗೆಯ ಬಳಿಯೇ ಇದ್ದುಕೊಂಡು ಅವನಿಗೆ ಮಲಗಲು ನೆರವಾಗತೊಡಗಿದಳು. ಮಲ್ಲಿಕಾ ತನ್ನ ಬೆಡ್‌ ಬಳಿ ಎಷ್ಟೊತ್ತು ಇದ್ದಳು ಎಂದು ನೋಡಲು ಅವನಿಗೆ ಪ್ರಜ್ಞೆ ಕೂಡ ಇರಲಿಲ್ಲ.

ಬೆಳಗ್ಗೆ ಅಚ್ಯುತ್‌ ಗೆ ತಲೆ ಬಹಳ ಭಾರವಾದಂತೆ ಎನಿಸತೊಡಗಿತ್ತು. ಅವನಿಗೆ ಆಗಲೂ ಕಣ್ತೆರೆಯಲು ಕೂಡ ಆಗುತ್ತಿರಲಿಲ್ಲ. ದೇಹ ನಿಶ್ಶಕ್ತಿಯಿಂದ ದುರ್ಬಲವಾದಂತೆ ಭಾಸವಾಗುತ್ತಿತ್ತು.

ಅಚ್ಯುತ್‌ ಶೂಟಿಂಗ್‌ ಯೂನಿಟ್‌ ಗೆ ಫೋನ್‌ ಮಾಡಿ ಡಾಕ್ಟರ್‌ ನ್ನು ಕರೆಸಿಕೊಂಡು ಎಲ್ಲ ಟೆಸ್ಟ್ ಗಳನ್ನು ಮಾಡಿಸಿಕೊಂಡ.

ಮಲ್ಲಿಕಾ ಅವನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಬಿಸ್‌ ನೆಸ್‌ ನಿಂದ ಹಿಡಿದು ಶೂಟಿಂಗ್‌ ತನಕ, ಅವನ ಪರ್ಸನಲ್ ನಿಂದ ಹಿಡಿದು ಅವನು ಖುಷಿಯಿಂದಿರು ತನಕ. ಅವಳ ಏಕೈಕ ಹಠವನ್ನು ಮಾತ್ರ ಅಚ್ಯುತ್‌ ಪೂರೈಸಲಿಲ್ಲ. ಚಹಾ ಅಥವಾ ಕಾಫಿಯನ್ನು ತಾನಾಗಿಯೇ ಕುಡಿಸಬೇಕೆಂಬ ಅಪೇಕ್ಷೆಗೆ ತಣ್ಣೀರೆರಚಿದ.

ಮುಂಬೈಗೆ ಮರಳಿದ ಅಚ್ಯುತ್‌ ತನ್ನ ಕೆಲಸ ಕಾರ್ಯಗಳಲ್ಲಿ ವ್ಯಸ್ತನಾದ. ಅಕೌಂಟ್‌ ನ ವ್ಯವಹಾರಗಳನ್ನು ನೋಡಿ ಅವನ ಕಾಲ್ಗೆಳಗಿನ ನೆಲವೇ ಅದುರಿದಂತಾಯಿತು. ಲಕ್ಷಾಂತರ ರೂಪಾಯಿಗಳನ್ನು ಮಲ್ಲಿಕಾ ಹಾಗೂ ಅಚ್ಯುತ್‌ ಇವರಿಬ್ಬರ ಬಿಸ್‌ ನೆಸ್‌ಫರ್ಮ್ ನ ಜಾಯಿಂಟ್‌ ಅಕೌಂಟ್‌ ಗೆ ವರ್ಗಾಯಿಸಲಾಗಿತ್ತು.

ಮಲ್ಲಿಕಾಳೇ ಆ ಹೊಸ ಅಕೌಂಟ್‌ ತೆರೆಸಿದ್ದಳು ಹಾಗೂ ದರ್ಶನ್‌ ಗೆ ಅದರ ಅಥಾರಿಟಿ ಕೊಟ್ಟಿದ್ದಳು. ಅಚ್ಯುತ್‌ ಗೆ ಈವರೆಗೆ ಅವಳು ತನ್ನನ್ನು ಪಡೆದುಕೊಳ್ಳಲು ಪ್ರಯತ್ನ ನಡೆಸಿದ್ದಾಳೆ ಎನಿಸುತ್ತಿತ್ತು. ಆದರೆ ಇದೀಗ ಹಣ ಪಡೆದುಕೊಳ್ಳುವ ಆಟ.

ಅಚ್ಯುತ್‌ ಈ ಬಗ್ಗೆ ಮಲ್ಲಿಕಾಳನ್ನು ನೇರವಾಗಿ ಪ್ರಶ್ನಿಸಿದ. ಆದರೆ ಮಲ್ಲಿಕಾ ಆ ವಿಷಯ ಕೇಳಿ ಆಶ್ಚರ್ಯಚಕಿತಳಾದಳು. ಆಗ ಅಚ್ಯುತ್ ದರ್ಶನ್‌ ನನ್ನು ಕರೆಸಲು ಹೇಳಿದ. ಆದರೆ ವಾರ ಕಳೆದರೂ ಅವನು ಅಚ್ಯುತ್‌ ಭೇಟಿಗೆ ಬರಲಿಲ್ಲ. ಆಗ ಅಚ್ಯುತ್‌ ಗೆ ದಿಗಿಲಾಯಿತು. ಈ ಮಧ್ಯೆ ಆಕಸ್ಮಿಕವಾಗಿ ಬ್ಯಾಂಕ್‌ ಖಾತೆಯಿಂದ ಮಲ್ಲಿಕಾಳ ಹೆಸರು ತೆಗೆಯಲ್ಪಟ್ಟು ದರ್ಶನ್‌ ನ ಹೆಸರಷ್ಟೇ ಉಳಿಯಿತು. ಆ ಅಕೌಂಟ್‌ ನಲ್ಲಿ 12 ಲಕ್ಷ ರೂ. ಜಮೆ ಮಾಡಲಾಗಿತ್ತು. ಅದು ಅಚ್ಯುತ್‌ ನ ಬೆವರಿನ ಹಣ. 3-4 ದಿನಗಳಲ್ಲಿಯೇ ಆ ಹಣವನ್ನು ಡ್ರಾ ಮಾಡಿದ್ದು ಸಹ ಗೊತ್ತಾಯ್ತು.

ಅಚ್ಯುತ್‌ ನಿಗೆ ಮಾನಸಿಕವಾಗಿ ಬಹಳ ಹಿಂಸೆ ಎನಿಸತೊಡಗಿತು. ಹಣ ಹೋಗಿದ್ದರ ಬಗ್ಗೆ ಅವನಿಗೆ ಅಷ್ಟು ಕಾಳಜಿ ಇರಲಿಲ್ಲ. ಆದರೂ ಅವನಿಗೆ ಮಾನಸಿಕವಾಗಿ ದಿಗಿಲಾಗುತ್ತಿತ್ತು. ಅವನು ಚಿಂತೆಗೊಳಗಾಗಿರುವ ವಿಷಯದ ಬಗ್ಗೆ ಅವಳಿಗೆ ಚಿಂತೆಯಾಗುತ್ತಿತ್ತು. ಅಚ್ಯುತ್‌ ದಿನಕ್ಕೆ ಅದೆಷ್ಟೋ ಸಲ ಟೇಬಲ್ ಮುಂದೆ ತಲೆ ತಗ್ಗಿಸಿ ಕುಳಿತುಬಿಡುತ್ತಿದ್ದ. ಅದಕ್ಕೆ ಕಾರಣ ಏನು ಎಂದು ವಿಚಾರಿಸಿದರೆ, ರಾತ್ರಿಯಿಡೀ ನಿದ್ರೆಯಿಲ್ಲ ಎಂದು ಹೇಳುತ್ತಿದ್ದ.

ಅದೊಂದು ದಿನ ಅಚ್ಯುತ್‌ ಮಲ್ಲಿಕಾಳ ಜೊತೆಗೆ ಮನೋರೋಗ ತಜ್ಞರ ಬಳಿ ಹೋದ. ಮಲ್ಲಿಕಾ ಪರಿಪೂರ್ಣ ಜವಾಬ್ದಾರಿ ನಿಭಾಯಿಸುತ್ತಾ ಅಚ್ಯುತ್‌ ನ ಪರಿಸ್ಥಿತಿ ಬಗ್ಗೆ ತನ್ನ ಸಂವೇದನಾಶೀಲತೆ ಪ್ರದರ್ಶಿಸಿದಳು. ಅಚ್ಯುತ್‌ ಹೇಳಿದ, “ಡಾಕ್ಟರ್‌, ಮಲ್ಲಿಕಾಳೇ ನನ್ನ ಬಗ್ಗೆ ಎಲ್ಲ ಮಾತುಕತೆ ನಡೆಸುತ್ತಾಳೆ. ನನ್ನ ಔಷಧಿ ಮತ್ತಿತರ ವಿಷಯ ಇವಳಿಗೆ ತಿಳಿಸಬೇಕು.”

ಮಲ್ಲಿಕಾಳೇ ಈಗ ಅಚ್ಯುತ್‌ ಗೆ ಔಷಧಿ ಮಾತ್ರೆ ಕೊಡುತ್ತಿದ್ದಳು.

ಅಚ್ಯುತ್‌ ಒಂದಿಷ್ಟು ಸುಸ್ತು, ನಿದ್ರೆ ಮಂಪರಿನಲ್ಲಿದ್ದಂತೆ ಕಾಣುತ್ತಿದ್ದ. ಅವಳು ಅವನ ಹಣೆ ನೇರಿಸಿ, ಅವನನ್ನು ತನ್ನ ನಿಕಟ ತಂದುಕೊಳ್ಳಲು ಪ್ರಯತ್ನಿಸುತ್ತಿದ್ದಳು. ಅವನು ಯಾವುದಾದರೂ ಕೆಲಸದ ನಿಮಿತ್ತ ಹೊರಗೆ ಹೋಗುತ್ತಾನಾದರೂ ಹೇಗೆ ಎಂದು ಯೋಚಿಸಿ ಇವನನ್ನು ಹೇಗೆ ದುರ್ಬಲಗೊಳಿಸಬಹುದೆಂದು ಚಿಂತಿಸಿದಳು.

ದರ್ಶನ್‌ ನ ಪ್ರಕರಣ ಅಚ್ಯುತ್‌ ಗೆ ಬಹಳಷ್ಟು ಕ್ಲಿಷ್ಟಕರ ಎನಿಸತೊಡಗಿತ್ತು. ನೋಡಲು ಅಷ್ಟೊಂದು ಸರಳ ಎನಿಸುವ ವ್ಯಕ್ತಿ ಮಲ್ಲಿಕಾಳನ್ನು ಬಿಟ್ಟು ಹಣದೊಂದಿಗೆ ಪಲಾಯನ ಮಾಡಲು ಹೇಗೆ ಸಾಧ್ಯ? ಮಲ್ಲಿಕಾ ಅವನನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದಳೆ?

ಅದೊಂದು ದಿನ ಯಾರಿಗೂ ಹೇಳದೆಯೇ ಅಚ್ಯುತ್‌ ದರ್ಶನ್‌ ನ ಹೋಟೆಲ್ ‌ಗೆ ಹೋದ. ದರ್ಶನ್‌ ಅಲ್ಲಿ ಸಿಗಬಹುದೆಂದು ಅಚ್ಯುತ್ ಗೆ ನಂಬಿಕೆಯೇ ಇರಲಿಲ್ಲ.

ದರ್ಶನ್‌ ಅಚ್ಯುತ್‌ ನನ್ನು ನೋಡಿ ಆಶ್ಚರ್ಯಚಕಿತನಾದ. ಅವನು ಅನಿವಾರ್ಯವಾಗಿ ಅಚ್ಯುತ್‌ ನನ್ನು ಪುಟ್ಟದಾದ ತನ್ನ ಕೋಣೆಗೆ ಕರೆದುಕೊಂಡು ಹೋದ.

“ದರ್ಶನ್‌, ನನಗೆ ಗೊತ್ತು ನೀನು ನಿರಪರಾಧಿ. ನನಗೆ 12 ಲಕ್ಷ ರೂ.ಗಳಿಗಿಂತ ನಿನ್ನ ಬಗ್ಗೆಯೇ ಹೆಚ್ಚು ಚಿಂತೆಯಿದೆ. ನಿಜವಾದ ಅಪರಾಧಿ ಯಾರೆಂದು ನನಗೆ ಗೊತ್ತು. ನೀನೇಕೆ ಹೆದರುತ್ತಿರುವೆ ಎನ್ನುವುದನ್ನು ನೀನು ನನಗೆ ತಿಳಿಸು. ಅದೇ ರೀತಿ ನೀನೇಕೆ ಆ ವ್ಯಕ್ತಿಯ ಮಾತನ್ನು ಒಪ್ಪಲೇ ಬೇಕಾದ ಪರಿಸ್ಥಿತಿ ಬಂತು? ನೀನು ಹೇಳಿದ್ರೆ ಸರಿ, ಇಲ್ಲದಿದ್ದರೆ ನಾನು ಪೊಲೀಸರನ್ನು ಕರೆಸಬೇಕಾಗುತ್ತೆ.”

ಆ ಮಾತು ಕೇಳುತ್ತಿದ್ದಂತೆ ದರ್ಶನ್‌ ನ ಮುಖ ಬಿಳಚಿಕೊಂಡಿತು. “ಮಲ್ಲಿಕಾಳ ಷರತ್ತಿನ ಮೇರೆಗೆ ನಾನು ಹಾಗೆ ಮಾಡಬೇಕಾಯ್ತು. ನಾನು ಅವಳನ್ನು ಕಳೆದುಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಹಿಂದೊಮ್ಮೆ ಆದ ತಪ್ಪನ್ನು ನಾನು ಪುನರಾವರ್ತಿಸಲು ಸಿದ್ಧನಿರಲಿಲ್ಲ,” ಎಂದು ಅವನು ಹೇಳಿದ.

“ದರ್ಶನ್‌, ನಾನು ನಿನ್ನನ್ನು ಮೊದಲ ಬಾರಿ ಭೇಟಿ ಆದಾಗ ನಿನ್ನ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದೆ. ನಾನೊಬ್ಬ ಬಿಸ್‌ ನೆಸ್‌ ವುಮೆನ್‌. ನನಗೆ ವ್ಯಕ್ತಿ ವ್ಯಕ್ತಿಗಳ ನಡುವಿನ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟವಾಗುವುದಿಲ್ಲ. ನಿನ್ನಲ್ಲೇನೊ ಸಮಸ್ಯೆಯಿದೆ. ನೀನು ಮಲ್ಲಿಕಾಳ ಜೊತೆ ಸೀರಿಯಸ್‌ ರಿಲೇಶನ್‌ ನಲ್ಲಿ ಇರುವೆಯಾ? ಮಲ್ಲಿಕಾಳನ್ನು ನೋಡಿ ನನಗೆ ಹಾಗೇನೂ ಅನಿಸುವುದಿಲ್ಲ. ನೀನು ನನ್ನನ್ನು ಒಬ್ಬ ಗೆಳೆಯನಂತೆ ಭಾವಿಸು ಹಾಗೂ ನಿನ್ನ ಅಂತರಂಗದ ಮಾತನ್ನು ನನ್ನ ಮುಂದೆ ತೆರೆದಿಡು,” ಅಚ್ಯುತ್‌ ಸ್ವಲ್ಪ ಕರುಣೆಯಿಂದಲೇ ದರ್ಶನ್‌ ನ ಕಣ್ಣಲ್ಲಿ ಇಣುಕುತ್ತಾ ಹೇಳುತ್ತಿದ್ದ. ನಂಬಿಕೆಯ ಒಂದು ಸ್ಪಷ್ಟ ಬೆಳಕು ದರ್ಶನ್‌ ನ ಕಣ್ಣುಗಳೊಳಗೆ ಇಣುಕುತ್ತಿತ್ತು.

“ಅಚ್ಯುತ್‌ ಸರ್‌.”

“ಕೇವಲ ಅಚ್ಯುತ್‌ ಎಂದು ಹೇಳು ಸಾಕು.”

“ಅಚ್ಯುತ್‌, ನನ್ನ ಜೀವನದ ಮೊದಲ ಪುಟಗಳು ಸಾಕಷ್ಟು ನಜ್ಜುಗಜ್ಜಾಗಿವೆ. ಹೀಗಾಗಿ ಈಗಿನ ಪುಟಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ನನಗೆ ಬಹಳ ಕಾಳಜಿ ಇದೆ.”

“ನಿನ್ನ ಹಿಂದಿನ ಜೀವನದಲ್ಲಿ ಅಂತಹ ನೋವೇನಿದೆ?” ಅಚ್ಯುತ್‌ ಆತ್ಮೀಯತೆಯಿಂದ ಕೇಳಿದ.

“ನೀವು ಕೇಳಿಸಿಕೊಳ್ತೀರಾ?”

“ಅವಶ್ಯವಾಗಿ ಕೇಳಿಸಿಕೊಳ್ತೀನಿ ಗೆಳೆಯ. ನಿನ್ನ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೆ ನಾನ್ಹೇಗೆ ನಿನ್ನ ಸಮಸ್ಯೆ ಬಗೆಹರಿಸಲು ಆಗುತ್ತೆ?”

ದರ್ಶನ್‌ ಗೆ ತನ್ನೂರಿನ ಹೋಟೆಲ್ ‌ನ ಚಿತ್ರ ಕಣ್ಮುಂದೆ ಬಂತು. ತಂದೆ ನಡೆಸುತ್ತಿದ್ದ ಆ ಹೋಟೆಲ್ ‌ಚೆನ್ನಾಗಿಯೇ ನಡೆಯುತ್ತಿತ್ತು. ಪ್ರವಾಸಕ್ಕೆಂದು ಬರುವ ಜನರು ಅವರ ಹೋಟೆಲ್ ‌ಗೆ ಭೇಟಿ ಕೊಡುತ್ತಿದ್ದರು. ದರ್ಶನ್‌ ಹಾಗೂ ಮನೆಯವರು ಗ್ರಾಹಕರ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದರು.

ದರ್ಶನ್‌ ಸಹಿತ 5 ಜನರು ಆ ಹೋಟೆಲ್ ‌ಗಾಗಿ ಕೆಲಸ ಮಾಡುತ್ತಿದ್ದರು. ದರ್ಶನ್‌ ನೇ ಹೆಚ್ಚು ಓಡಾಡುತ್ತಿದ್ದ.

ಹೀಗೆಯೇ ಒಂದು ದಿನ ಅವನು ಗ್ರಾಹಕರ ಸೇವೆಯಲ್ಲಿ ಮಗ್ನನಾಗಿದ್ದ. 18-20ನೇ ವಯಸ್ಸಿನ ಒಬ್ಬ ಹುಡುಗಿ ಅವನ ಮುಂದೆ ನಿಂತಿದ್ದಳು. ಅವಳ ಹೆಗಲಿಗೆ ಸ್ಕೂಲ್ ‌ಬ್ಯಾಗ್‌ ನಂತಹ ಒಂದು ಬ್ಯಾಗ್‌ ಇತ್ತು. ಬೆಳ್ಳಗಿನ ದುಂಡಗಿನ ಮುಖ ಧೂಳಿನಿಂದ ಕಪ್ಪಗಾಗಿತ್ತು.

ಅವಳು ಏನನ್ನೂ ಹೇಳದೆಯೇ ದರ್ಶನ್‌ ನ ಮುಖ ನೋಡುತ್ತಾ ನಿಂತುಬಿಟ್ಟಿದ್ದಳು. ಅವಳಿಗೆ ದರ್ಶನ್‌ ಮೊದಲಿನಿಂದಲೇ ಪರಿಚಿತ ಎಂಬಂತೆ ಅವಳು ಅವನತ್ತ ನೋಡುತ್ತಿದ್ದಳು. ಉಳಿದ ಗ್ರಾಹಕರನ್ನು ನೋಡಿಕೊಳ್ಳಲು ತನ್ನ ಹುಡುಗರಿಗೆ ಹೇಳಿ, ಅವನು ಆ ಹುಡುಗಿಯ ಕಡೆ ಹೋದ.

ಅವಳು ತನ್ನ ಹೆಸರನ್ನು ನಿಹಾರಿಕಾ ಎಂದು ಹೇಳಿಕೊಂಡಳು. ಅವಳು ಬಡ ಕುಟುಂಬದ ಹುಡುಗಿ. ತಂದೆಯಿಲ್ಲದವಳು. ಅಮ್ಮ  ಹೇಗೊ ಮನೆಗೆಲಸ ಮಾಡಿಕೊಂಡು ನಿಹಾರಿಕಾ ಸಹಿತ 3 ಮಕ್ಕಳನ್ನು ಸಂಭಾಳಿಸುತ್ತಿದ್ದಳು.

ಅದೊಂದು ದಿನ ತನ್ನೊಂದಿಗೆ ಕಾರ್ಮಿಕರನ್ನು ಹುಡುಕಲೆಂದು ವಾಹನವೊಂದರಲ್ಲಿ ಕೆಲವರು ಬಂದರು. ಅವಳು ಅವರೊಂದಿಗೆ ಮಂಗಳೂರಿಗೆ ಬಂದಿದ್ದಳು. ಆದರೆ ಆ ಗ್ಯಾಂಗ್‌ ಅಶ್ಲೀಲ ವಿಡಿಯೋ ತಯಾರಿಸಿ ಮಾರಾಟ ಮಾಡುವ ತಂಡವಾಗಿತ್ತು.

ನಿಹಾರಿಕಾ ಆ ಗ್ಯಾಂಗ್‌ ನವರಿಂದ ತಪ್ಪಿಸಿಕೊಂಡು ಬಂದಿದ್ದಳು. ಅವಳಿಗೀಗ ಕೆಲಸವೊಂದು ಅವಶ್ಯಕವಾಗಿತ್ತು. ತಾನು ಕೆಲಸವೊಂದನ್ನು ಹುಡುಕದೆ ಊರಿಗೆ ಹೋಗಬಾರದು ಎನ್ನುವ ಹಠವಾಗಿತ್ತು. ನನಗೆ 4-5 ದಿನ ಇಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯಾದರೆ ನಾನು ಅದರ ಬದಲಿ ಪಾತಿಸ್ತೀನಿ ಎಂದು ಅವಳು ಹೇಳಿದಳು.

ಅವಳ ಎಲ್ಲ ಪರಿಸ್ಥಿತಿಯನ್ನು ಅರಿತು, ದರ್ಶನ್‌ ಕರುಣೆಯಿಂದ ಅವಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ. ಅವಳನ್ನು ತನ್ನ ಅಸಿಸ್ಟೆಂಟ್‌ ಎಂಬಂತೆ ನೇಮಿಸಿಕೊಂಡು ಅವಳಿಗೆ ತೃಪ್ತಿಕರ ಸಂಬಳವನ್ನು ನಿಗದಿಪಡಿಸಿದ.

ವರ್ಷವಿಡೀ ಕೆಲಸ ಮಾಡುತ್ತಾ ದರ್ಶನ್‌ ಹಾಗೂ ನಿಹಾರಿಕಾ ಎಷ್ಟೊಂದು ನಿಕಟರಾದರೆಂದರೆ, ಅವರಿಬ್ಬರ ನಡುವೆ ಪ್ರೀತಿ ಉಂಟಾಗಿ ಮದುವೆ ಹಂತಕ್ಕೂ ಬಂದು ತಲುಪಿತು. ಕೆಲವೇ ತಿಂಗಳಲ್ಲಿ ಅವರಿಬ್ಬರ ಮದುವೆ ಕೂಡ ಆಯಿತು. ಅವಳು ಆಗಾಗ ತನ್ನೊಂದಿಗೆ ಹಣ ಕಳಿಸುವ ವ್ಯವಸ್ಥೆ ಮಾಡಿಕೊಂಡಿದ್ದಳು.

ಅವರು ಉಜ್ವಲ ಭವಿಷ್ಯದ ಕನಸು ಕಾಣುತ್ತಿದ್ದರು. ಅದು ಇನ್ನೂ ಸಾಕಾರಗೊಳ್ಳುವ ಮೊದಲೇ ದರ್ಶನ್‌ ಒಂದು ಬೆಳಗ್ಗೆ ಹಾಸಿಗೆಯಿಂದ ಏಳುವಾಗ ಪಕ್ಕದಲ್ಲಿ ನಿಹಾರಿಕಾ ಇರಲಿಲ್ಲ. ಆಸುಪಾಸು ನೋಡಿದ. ಕಾಣಲಿಲ್ಲ. ಅವನು ತಕ್ಷಣವೇ ಬೆಡ್‌ ರೂಮಿನ ಕಪಾಟು ನೋಡಲು ಹೋದ. ಅಲ್ಲಿ ಎಲ್ಲ ಖಾಲಿ ಖಾಲಿ ಆಗಿತ್ತು.

ಅಲ್ಲಿಟ್ಟಿದ್ದ ದರ್ಶನ್‌ ನ ಅಮ್ಮನ ಆಭರಣ ಹಾಗೂ ಹೋಟೆಲ್ ಗೆ ಸಂಬಂಧಪಟ್ಟ 5 ಲಕ್ಷ ನಗದು ನಾಪತ್ತೆಯಾಗಿತ್ತು. ನಿಹಾರಿಕಾಳ ಫೋನ್‌ ಖಾಯಂ ಆಗಿ ಸ್ವಿಚ್‌ ಆಫ್‌ ಆಗಿತ್ತು.

ಜನರ ಆಗ್ರಹದ ಮೇರೆಗೆ ಅವನು ಪೊಲೀಸ್‌ ಠಾಣೆಗೆ ದೂರು ನೀಡಿದ. 3-4 ತಿಂಗಳ ಬಳಿಕ ಗೊತ್ತಾದ ಸಂಗತಿಯೆಂದರೆ ಅವಳು ದುಬೈಗೆ ಹೋಗಿದ್ದಾಳೆಂದು ತಿಳಿದುಬಂತು. ಅವಳು ದರ್ಶನ್‌ ಗೆ ಕೊಟ್ಟಿದ್ದ ವಿಳಾಸ ಖೊಟ್ಟಿ ಎನ್ನುವುದು ಸಾಬೀತಾಯಿತು.

ಆತ್ಮೀಯತೆ, ಪ್ರೀತಿ, ವಿಶ್ವಾಸದೊಂದಿಗೆ ಬಂದಿದ್ದ ಹುಡುಗಿ ಹೀಗೆ ರಾತ್ರೋರಾತ್ರಿ ಓಡಿ ಹೋಗಿದ್ದು ಅವನಲ್ಲಿ ಖಿನ್ನತೆ ಉಂಟು ಮಾಡಿತು.

ಒಂದು ವರ್ಷ ಹೇಗೊ ಜೀವನ ಸಾಗಿಸಿ ಅವನು ಮಂಗಳೂರಿನಲ್ಲಿದ್ದ ತನ್ನ ಹೋಟೆಲ್ ‌ಹಾಗೂ ಮನೆ ಮಾರಿ ಮುಂಬೈಗೆ ಬಂದು ಇಲ್ಲಿ ಒಂದು ಸಾಧಾರಣ ಹೋಟೆಲ್ ಖರೀದಿಸಿದ.

ಇಲ್ಲಿಯವರೆಗೆ ಎಲ್ಲವೂ ಸರಿಯಿತ್ತು. ಅವನು ಮಲ್ಲಿಕಾಳ ಪ್ರೀತಿ ಮತ್ತು ಆಕರ್ಷಣೆಯಲ್ಲಿ ಮುಳುಗಿಹೋಗಿದ್ದ. ಅದು ಎಷ್ಟರಮಟ್ಟಿಗೆ ಎಂದರೆ ಪುನಃ ಅವಳನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.

“ಮಲ್ಲಿಕಾಳ ಪ್ರೀತಿಯಲ್ಲಿ ನೀನು ಎಷ್ಟೊಂದು ಅಂಧನಾಗಿರುವೆ ಎಂದರೆ, ಅವಳು ನಿನ್ನನ್ನು ಮೋಸದ ಜಾಲದಲ್ಲಿ ಸಿಲುಕಿಸಿ, ತನ್ನ ಸ್ವಾರ್ಥ ಸಾಧಿಸಲು ಹೊರಟಿದ್ದಾಳೆ. ಅದಕ್ಕೆ ನೀನು ಇಲ್ಲ ಎಂದು ಹೇಳುತ್ತಿರುವೆ ಏಕೆ ದರ್ಶನ್‌? ನನ್ನಿಂದ ಏನೂ ಬಚ್ಚಿಡಬೇಡ. ನೀನು ಸತ್ಯವನ್ನೇ ಹೇಳಿದರೆ ನಾನು ನಿನ್ನ ಸ್ನೇಹಿತನಾಗಿ ನಿನ್ನನ್ನು ಈ ಕಷ್ಟದಿಂದ ಕಾಪಾಡಬಹುದು.”

“ಮಲ್ಲಿಕಾ ಸಂಬಂಧ ಕಡಿದುಕೊಂಡಾಳೆಂದು ನನಗೆ ಹೆದರಿಕೆ ಆಗುತ್ತೆ.”

“ಸಂಬಂಧ ಎನ್ನುವುದು ಇಬ್ಬರು ವ್ಯಕ್ತಿಗಳ ನಡುವೆ ಆಗುತ್ತೆ. ಆದರೆ ಮಲ್ಲಿಕಾ ನಿನ್ನೊಂದಿಗಿನ ಸಂಬಂಧವನ್ನು ಅರ್ಥ ಮಾಡಿಕೊಂಡೇ ಇಲ್ಲ. ಆ ಸತ್ಯ ನಿನಗೆ ತಿಳಿದುಕೊಳ್ಳಬೇಕಾ?”

“ಹೌದು ಕೇಳಿಸಿಕೊಳ್ಳುತ್ತೇನೆ.”

“ಅವಳು ನನ್ನೊಂದಿಗೆ ವಿದೇಶಕ್ಕೆ ಏಕೆ ಬಂದಿದ್ದಳು ಗೊತ್ತಾ?”

ದರ್ಶನ್‌ ನ ಮುಖ ಬಿಳಚಿಕೊಂಡಿತು. ಅವನು ಹೇಳಿದ, “ಸತ್ಯ ಕೇಳಿಸಿಕೊಳ್ಳಲು ಹೆದರಿಕೆಯಾಗುತ್ತೆ.”

“ಹೆದರಿಕೆ ನಿನ್ನನ್ನು ಇನ್ನಷ್ಟು ಹೆದರಿಸುತ್ತೆ. ಅವಳು ನಿನ್ನನ್ನು ಮೋಸಗೊಳಿಸುವ ಯಾವ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ. ನೀನು ನಿಜವನ್ನು ಒಪ್ಪಿಕೊಂಡರೆ ಮತ್ತಷ್ಟು ಹಾನಿಯಾಗುವುದರಿಂದ ಬಚಾವಾಗುವೆ. ಅವಳು ನನ್ನ ಜೊತೆಗೆ ಸಂಬಂಧ ಹೊಂದಲು ಬಹಳಷ್ಟು ಪ್ರಯತ್ನ ಮಾಡಿದಳು. ಅದು ಎಷ್ಟರಮಟ್ಟಿಗೆ ಎಂದರೆ, ಅಂದಹಾಗೆ ಆ ವಿಷಯ ಬಿಟ್ಟುಬಿಡು. ನನಗೆ ಹಣದ ಲೆಕ್ಕ ಕೊಡು. ಇದೆಲ್ಲ ಏನು?”

ದರ್ಶನ್‌ ಅಲ್ಲಿಯವರೆಗೆ ಸಾಕಷ್ಟು ಮೆತ್ತಗಾಗಿದ್ದ. ಅವನು ಹೇಳಿದ, “ಅವಳೇ ಎಲ್ಲವನ್ನು ಮಾಡಿದಳು. ಮೊದಲು ನಿಮ್ಮ ಫರ್ಮ್ ಜೊತೆಗೆ ತನ್ನ ಹೆಸರಿನಲ್ಲಿ ಅಕೌಂಟ್‌ ತೆರೆದು, ನನ್ನಿಂದ ಅದಕ್ಕೆ ಹಣ ಹಾಕಿಸಿದಳು. ಬಳಿಕ ನನ್ನ ಹೆಸರನ್ನು ಅದಕ್ಕೆ ಸೇರ್ಪಡೆಗೊಳಿಸಿದಳು. ನೀವು ಆ ಬಗ್ಗೆ ಪ್ರಸ್ತಾಪಿಸಲು ಶುರು ಮಾಡಿದಾಗ ನನ್ನಿಂದ ಹಣ ಡ್ರಾ ಮಾಡಿಸಿದಳು ಮತ್ತು ಅಕೌಂಟ್ ನಿಂದ ತನ್ನ ಹೆಸರನ್ನು ತೆಗೆಸಿ ಹಾಕಿದಳು. ಹಣ ತೆಗೆದು ತನಗೆ ಕೊಡಲು ಹೇಳಿದಳಲ್ಲದೆ, ನಾನೇ ಹಣ ತೆಗೆದೆ ಎಂಬಂತೆ ಗೊತ್ತಾಗಬೇಕೆಂಬುದು ಅವಳ ಯೋಚನೆಯಾಗಿತ್ತು. ನೀವೇನಾದರೂ ನನ್ನನ್ನು ಕರೆಯಲು ಹೇಳಿದರೆ ಬರಬಾರದು ಎಂದೂ ಕೂಡ ನನಗೆ ನಿರ್ದೇಶನ ನೀಡಿದ್ದಳು. ಒಟ್ಟಾರೆ ಸಂದೇಹ ನನ್ನ ಮೇಲೆಯೇ ಬರಬೇಕೆಂಬುದು ಅವಳ ಯೋಜನೆಯಾಗಿತ್ತು.”

“ನೀನು ಅವಳಿಗೆ ಜೊತೆ ಕೊಟ್ಟೆ ದರ್ಶನ್‌. ಮಲ್ಲಿಕಾಳಿಲ್ಲದೆ ನೀನು ಅಪೂರ್ಣನಾಗ್ತಾನೋ, ತನಗೇ ಎಲ್ಲವನ್ನೂ ತಂದುಕೊಡಬೇಕು ಎನ್ನುವುದು ಅವಳ ಷರತ್ತಾಗಿತ್ತು. ದರ್ಶನ್‌ ತಕ್ಷಣವೇ ಎಚ್ಚರಗೊಳ್ಳು, ಕನ್ನಡಿಯನ್ನಲ್ಲ, ನಿನ್ನ ಕಣ್ಣುಗಳನ್ನು ಸ್ವಚ್ಛಗೊಳಿಸು. ನೀನು ಹೆದರುವ ಅಗತ್ಯವಿಲ್ಲ. ಮಲ್ಲಿಕಾಳಿಗೆ ಈಗಲೇ ಏನನ್ನೂ ಹೇಳುವುದಿಲ್ಲ.”

ಅಚ್ಯುತ್‌ ಹಾಗೂ ಮಲ್ಲಿಕಾ ಸೈಕೋ ಥೆರಪಿಸ್ಟ್ ಕೇಶವ್ ರ ಕ್ಲಿನಿಕ್‌ ನಲ್ಲಿದ್ದರು. ಅಚ್ಯುತ್‌ ಮಲ್ಲಿಕಾಳಿಗೆ ತನ್ನ ಜೊತೆ ಬರಲು ಹೇಳಿದ್ದ. ತನಗಿನ್ನು ಔಷಧಿಯ ಹೆಚ್ಚಿನ ಡೋಸ್‌ ಅಗತ್ಯವಿದೆ ಎನಿಸತೊಡಗಿತ್ತು. ಅಚ್ಯುತ್‌ ಗೆ ಮಲ್ಲಿಕಾಳೇ ಈ ಜವಾಬ್ದಾರಿ ನಿಭಾಯಿಸುತ್ತಿದ್ದಳು.

ಡಾ. ಕೇಶವ್ ರ ಕ್ಲಿನಿಕ್‌ ನಲ್ಲಿ ಅವಳು ದರ್ಶನ್‌ ನನ್ನು ನೋಡಿ ಚಕಿತಳಾದಳು. ತನ್ನ ಜೊತೆಗೇ ಇದ್ದೂ ಕೂಡ ಅವನು ಇಲ್ಲಿಗೆ ಬರುವುದಾಗಿ ಹೇಳಿರಲಿಲ್ಲ. ಕಳೆದ 4-5 ದಿನಗಳಿಂದ ಅವನಿಂದ ದೂರ ದೂರವೇ ಉಳಿದಿದ್ದ ಅವಳಿಗೆ ಈಗ ಅದರ ಅನುಭವ ಆಗುತ್ತಿತ್ತು.

ಅಲ್ಲಿನ ವಾತಾವರಣವೇ ಅವಳಿಗೆ ವಿಚಿತ್ರ ಎನಿಸಿತು. ಡಾಕ್ಟರ್‌ ಕೇಶವ್ ರ ಅಸಿಸ್ಟೆಂಟ್‌ ಅಪ್ರೇಜಾ ದರ್ಶನ್‌ ಜೊತೆಗೆ ಮೆಲ್ಲನೆಯ ಧ್ವನಿಯಲ್ಲಿ ಏನೋ ಮಾತನಾಡುತ್ತಿದ್ದರು. ಡಾ. ಕೇಶವ್ ವಿಚಿತ್ರ ದೃಷ್ಟಿ ಹೊತ್ತು ಅಚ್ಯುತ್‌ ನ ಸ್ವಾಗತ ಮಾಡುತ್ತಾ ಮುಗುಳ್ನಗುತ್ತಿದ್ದರು.

ಮಲ್ಲಿಕಾಳ ಹೃದಯ ಬಡಿತ ಹೆಚ್ಚಾಯಿತು. ಅವಳ ದೃಷ್ಟಿ ಅಪ್ರೇಜಾಳತ್ತ ಹೋಯಿತು. 5 ಅಡಿ 3 ಅಂಗುಲ ಎತ್ತರದ ಬೆಳ್ಳನೆಯ ಕಾಯದ ತೀಕ್ಷ್ಣ ದೃಷ್ಟಿಯ ಆ ಹುಡುಗಿ ಬಹಳ ವಿಶಿಷ್ಟ ಎನಿಸುತ್ತಿದ್ದಳು. ಅಚ್ಯುತ್‌ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಬಳಿಕ ತನ್ನ ದೃಷ್ಟಿ ಬೇರೆ ಕಡೆ ಹರಿಸಿದ.

ಅವಳು ದರ್ಶನ್‌ ಜೊತೆಗೆ ಮೆಲು ಧ್ವನಿಯಲ್ಲಿ ಏನು ಮಾತನಾಡುತ್ತಿರಬಹುದು? ಏನೇ ಆಗಲಿ ಅಚ್ಯುತ್‌ ಮಲ್ಲಿಕಾಳಿಗೆ ಸೇರಿದನು. ಅವನನ್ನು ಪಡೆದೇ ತೀರಬೇಕೆಂದು ಅವಳು ಸಂಕಲ್ಪ ಮಾಡಿದ್ದಳು. ಅವಳಿಗೆ ಅವನ ಕೋಟ್ಯಂತರ ಆಸ್ತಿಯ ವಾರಸುದಾರಳಾಗಬೇಕಿತ್ತು. ಅಚ್ಯುತ್‌ ಆ ಹುಡುಗಿಯ ಮೋಹಪಾಶದಲ್ಲಿ ಸಿಲುಕಬಾರದು. ಹಾಗೇನಾದರೂ ಆಗಿಬಿಟ್ಟರೆ ಔಷಧಿ ಆ ರೀತಿ ಪರಿಣಾಮವನ್ನೇನೂ ಮಾಡದು.

ದರ್ಶನ್‌ ವ್ಯಂಗ್ಯಭರಿತ, ಖೇದಕರ ಮುಗುಳ್ನಗುತ್ತಾ ಮಲ್ಲಿಕಾಳನ್ನು ನೋಡಿದ. ಅಚ್ಯುತ್‌ ಡಾ. ಕೇಶವ್ ಗೆ ಹೇಳಿದ, “ಎಷ್ಟು ಹಣ ಕೊಟ್ಟಿದ್ದಾರೆ ಡಾಕ್ಟರ್‌ಸಾಹೇಬ್ರೆ?”

“50,000 ರೂ. ಕೊಡುವ ಮಾತಾಗಿದೆ. ಈವರೆಗೆ 25 ಮಾತ್ರ ಕೊಟ್ಟಿದ್ದಾರೆ.”

“ಯಾವುದಕ್ಕಾಗಿ ಡಾಕ್ಟರ್‌ ಸರ್‌?” ಮಲ್ಲಿಕಾ ಚಕಿತಳಾದಳು. ಒಂದು ರೀತಿಯಲ್ಲಿ ಹೇಳಬೇಕೆಂದರೆ, ಹೆದರಿಕೆ ಹಾಗೂ ಅಲರ್ಟ್ ನೆಸ್‌ ಅವಳ ಮುಖದಲ್ಲಿ ಭಯವನ್ನು ಪಸರಿಸಿಬಿಟ್ಟಿತ್ತು. ಬಿಳಿ ಪ್ರೇಮಪತ್ರದ ಮೇಲೆ ಆಕಸ್ಮಿಕಾಗಿ ಕೆಂಪು ಶಾಹಿ ಚಿಮ್ಮಿದಂತೆ ಆಗಿತ್ತು ಅವಳ ಸ್ಥಿತಿ.

“ಅಚ್ಯುತ್‌ ನಿಮಗೆ ಎಂತಹ ಒಂದು ಔಷಧಿ ಅಥವಾ ಡ್ರಗ್‌ ಕೊಡಲು ತಿಳಿಸಲಾಗಿತ್ತೆಂದರೆ, ಅದರಿಂದ ನೀವು ಹೆಚ್ಚು ಯೋಚಿಸಲು ಸಾಧ್ಯವಾಗಬಾರದು ಮತ್ತು ಯಾರೊಬ್ಬರ ನಿರ್ದೇಶನದಂತೆ ಕೆಲಸ ಮಾಡುವುದರಲ್ಲಿಯೇ ನಿಮ್ಮ ಹಿತ ಅಡಗಿದೆ ಎಂಬಂತೆ.”

“ಇದೆಲ್ಲವನ್ನು ಯಾರು ಮಾಡಿದರು ಡಾಕ್ಟರ್‌?” ಅಚ್ಯುತ್‌ ಮೆಲು ಧ್ವನಿಯಲ್ಲಿ ಕೇಳಿದ.

ಮಲ್ಲಿಕಾ ನೆಲ ನೋಡುತ್ತಾ ನಿಂತುಬಿಟ್ಟಿದ್ದಳು. ಅವಳು ಡಾಕ್ಟರ್‌ ಕೇಶವ್ ಕಡೆ ಒಂದು ಬಾರಿ ಹೇಗೆ ನೋಡಿದಳೆಂದರೆ, ಯಾವುದಕ್ಕೊ ಮನವಿ ಮಾಡುವಂತೆ.

ಡಾ. ಕೇಶವ್ ಅವಳ ಮನವಿ ತಿರಸ್ಕರಿಸುತ್ತಾ, “ಮಲ್ಲಿಕಾ ನನ್ನ ಮನೆಗೆ ಬಂದಿದ್ದಳು. ಅವಳಿಗೇ ಈ ಇಚ್ಛೆ ಇತ್ತು.”

ಎಲ್ಲರ ಕಣ್ಣುಗಳು ಮಲ್ಲಿಕಾಳತ್ತಲೇ ನೆಟ್ಟಿದ್ದ. ಮಲ್ಲಿಕಾ ಅಚ್ಯುತ್‌ ನ ಕಡೆ ನೋಡುತ್ತಾ, “ನೀವು ನನ್ನೊಂದಿಗೆ ಜೀವನ ನಡೆಸುವ ಇರಾದೆ ಹೊಂದಿರದಿದ್ದರೆ, ನೀವು ನನ್ನನ್ನು ನಿಮ್ಮೊಂದಿಗೆ ದುಬೈಗೆ ಕರೆದುಕೊಂಡು ಹೋದದ್ದಾದರೂ ಏಕೆ?”

“ಅಂಕಲ್, ನೀವು ಆ ಹಣವನ್ನು ನನಗೆ ವಾಪಸ್‌ ಮಾಡಿದಿರಿ ಹಾಗೂ ಎಲ್ಲ ವಿಷಯವನ್ನು ತಿಳಿಸಿದಿರಿ. ಆದರೆ ಮಲ್ಲಿಕಾಳಿಗೆ ನೀವು ನನ್ನ ಅಪ್ಪನ ಸ್ನೇಹಿತರೆಂಬ ವಿಷಯ ತಿಳಿಸಿದಿರಾ? ಅದರ ಜೊತೆ ಜೊತೆಗೆ ನೀವು ನನಗೆ ಕೊಟ್ಟಿದ್ದು ಮಾನಸಿಕ ಅಸ್ವಸ್ಥತೆಯ ಔಷಧಿಯನ್ನಲ್ಲ, ವಿಟಮಿನ್‌ ನ ಮಾತ್ರೆಗಳೆಂದು ಅವಳಿಗೆ ಹೇಳಿದಿರಾ?”

“ಅಚ್ಯುತ್‌, ಈ ಎಲ್ಲ ವಿಷಯ ಅವಳಿಗೆ ತಿಳಿಯುವುದು ಅನಿವಾರ್ಯ ಎಂದು ನಾನು ಭಾವಿಸಲಿಲ್ಲ. ದುರಾಸೆಯ ಪ್ರವೃತ್ತಿಯವರಿಗೆ ಏನು ತಾನೇ ಹೇಳಲು ಸಾಧ್ಯ?”

“ಅಚ್ಯುತ್‌, ನೀವು ನನ್ನನ್ನು ದುಬೈಗೆ ಕರೆದುಕೊಂಡು ಹೋಗಿ ನೀವೇ ಸ್ವತಃ ದುರಾಸೆಗೆ ಸಿಲುಕಿದಿರಿ. ನೀವು ನನ್ನೊಂದಿಗೆ ನಡೆಸಿದ ಸರಸದ ವಿಡಿಯೋ ಹಾಗೂ ಚಿತ್ರಗಳು ಅದನ್ನು ಒತ್ತಿ ಹೇಳುತ್ತವೆ. ಆ ದೃಶ್ಯಗಳನ್ನೊಮ್ಮೆ ನೋಡಿ ನನ್ನದೇ ತಪ್ಪು ಎಂದು ಆರೋಪ ಹೊರಿಸುತ್ತಿರುವ ನೀವು, ಎಷ್ಟು ತಪ್ಪು ಮಾಡಿದ್ದೀರಿ ಎನ್ನುವುದು ಗೊತ್ತಾಗುತ್ತದೆ.

“ನನ್ನ ಬಳಿ ಅದಕ್ಕೆಲ್ಲ ಸಾಕ್ಷಿ ಇದ್ದು, ನಾನು ಈ ದಿನಕ್ಕಾಗಿಯೇ ಅದನ್ನು ಕಾಯ್ದಿಟ್ಟಿದ್ದೆ. ನೀವು ಅಷ್ಟೊಂದು ನಿಕಟರಾಗಿ ಈಗ ನನಗೆ ಮೋಸ ಮಾಡಲಾಗದು. ದರ್ಶನ್‌ ಗೆ ಆಮಂತ್ರಣ ಕೊಟ್ಟು ಕರೆಸಿಕೊಂಡಿದ್ದ ಉದ್ದೇಶವಾದರೂ ಏನು?

“ನೀವು ಕೊಟ್ಟ ಹಣವನ್ನು ತೆಗೆದುಕೊಂಡಿದ್ದು ನಾನಲ್ಲ ಇವರು. ಅಂದಹಾಗೆ ಡಾಕ್ಟರ್‌ ಸಾಹೇಬ್ರೆ, ನಾನು ಮೆಡಿಸಿನ್‌ ಗಾಗಿ ನಿಮಗೆ ಹಣ ಕೊಟ್ಟೆ ಎನ್ನಲು ನಿಮ್ಮ ಬಳಿ ಏನಾದರೂ ದಾಖಲೆಗಳಿವೆಯೇ?”

ಅಚ್ಯುತ್‌ ಏನೋ ಹೇಳಬೇಕೆಂದುಕೊಂಡ. ಅಷ್ಟರಲ್ಲಿ ಅಪ್ರೇಜಾ, “ಮಲ್ಲಿಕಾ, ನಿಮ್ಮದು ಅತಿಯಾಯ್ತು. ಡಾ. ಕೇಶವ್ ಮನೆಗೆ ನೀವು ಬಂದದ್ದು, ಡೀಲ್ ‌ಮಾಡಿಕೊಂಡ ಎಲ್ಲ ದೃಶ್ಯಗಳನ್ನು ಪಕ್ಕದ ಕೋಣೆಯಲ್ಲಿದ್ದುಕೊಂಡು ನಾನು ರೆಕಾರ್ಡ್‌ ಮಾಡಿಕೊಳ್ಳುತ್ತಿದ್ದೆ. ನೀವು ಅದನ್ನು ಕೇಳಿಸಿಕೊಳ್ಳಿ. ಈ ಉದ್ದೇಶಕ್ಕಾಗಿಯೇ ಸರ್‌ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದರು. ನೀವು ಸರ್‌ ಜೊತೆಗೆ ಫೋನ್‌ ನಲ್ಲಿ ಮಾತನಾಡಿರುವುದು ಅಚ್ಯುತ್‌ ಕುರಿತಂತೆ ನೀವು ತಯಾರಿಸಿರುವ ವಿಡಿಯೋ ಪ್ರಜ್ಞೆ ತಪ್ಪಿದ ಸಂದರ್ಭದಲ್ಲಿ ತೆಗೆದುಕೊಂಡದ್ದು ಎನ್ನುವುದು ಸ್ಪಷ್ಟವಾಗುತ್ತದೆ. ನಿಮ್ಮನ್ನು ಅಚ್ಯುತ್‌ ಸರ್‌ ದುಬೈಗೆ ಕರೆದುಕೊಂಡು ಹೋಗಿದ್ದು ತಮ್ಮ ಬಲೆಗೆ ಬೀಳಿಸಿಕೊಳ್ಳಲು ಅಲ್ಲ. ನಿಮಗೆ ವಿದೇಶಿ ಟೂರ್‌ ನ ಎಂಜಾಯ್‌ ಮಾಡಿಸಲೆಂದು. ನೀವು ಮುಂಬೈಗೆ ಬಂದು ಎಷ್ಟು ಸಂಘರ್ಷ ನಡೆಸಿದ್ದೀರೆಂದು ಅಚ್ಯುತ್‌ ಗೆ ಚೆನ್ನಾಗಿ ಗೊತ್ತು. ಹೀಗಾಗಿ ಅವರು ನಿಮ್ಮನ್ನು ತಮ್ಮೊಂದಿಗೆ ಕರೆದುಕೊಂಡು ಹೋದರು. ಅಚ್ಯುತ್ ಈ ಬಗ್ಗೆ ನನ್ನ ಸಲಹೆ ಕೇಳಿದ್ದರು. ನಾನು ಅವರಿಗೆ ಕರೆದುಕೊಂಡು ಹೋಗಿ ಅಂದದ್ದರಿಂದಲೇ ನಿಮ್ಮ ಟಿಕೆಟ್‌ ಮಾಡಿಸಿದ್ದರು. ನನಗೆ ಅಚ್ಯುತ್‌ ಬಗ್ಗೆ ಸಂಪೂರ್ಣ ಭರವಸೆ ಇದೆ. ನನ್ನ ಮತ್ತು ಅವರ ನಡುವಿನ ಸಂಬಂಧ ಅನೇಕ ವರ್ಷಗಳದ್ದು.”

“ನಾನು ಅವರಿಗೆ ಏನೊ ತಿನ್ನಿಸಿ ಫೋಟೋ ತೆಗೆದೆನೆಂದು ಹೇಗೆ ಹೇಳುತ್ತೀರಿ?”

“ಆಗಿನ ನನ್ನ ರಿಪೋರ್ಟ್‌ ಗಳು ಇವೆ. ನೀನು ಯಾವ ಯಾವ ಅಂಗಡಿಗಳಿಂದ ಯಾವ್ಯಾವ ಔಷಧಿ ಖರೀದಿಸಿದ್ದೇ ಎನ್ನುವ ಪುರಾವೆಗಳು ನನ್ನ ಬಳಿ ಇವೆ. ಅವನ್ನು ನೀನು ನೋಡಲು ಇಚ್ಛಿಸ್ತೀಯಾ? ಅಥವಾ ಪೊಲೀಸರಿಂದ ತರಿಸಿ ತೋರಿಸಬೇಕಾ? ಹೇಳು, ಏನ್‌ ಮಾಡಬೇಕು?” ಎಂದು ಗಟ್ಟಿ ಧ್ವನಿಯಲ್ಲಿ ಅಚ್ಯುತ್‌ ಹೇಳಿದಾಗ ಮಲ್ಲಿಕಾ ಮೆತ್ತಗಾದಳು.

“ಏನೂ ಬೇಕಿಲ್ಲ. ನಾನು ಹೋಗಲು ಬಯಸ್ತೀನಿ.”

“ದರ್ಶನ್‌, ನಿನಗೆ ಇಷ್ಟವಿದ್ದರೆ ಮಲ್ಲಿಕಾಳ ಜೊತೆ ಮದುವೆ ಮಾಡಿಕೊಳ್ಳಬಹುದು. ನನಗಂತೂ ಮಲ್ಲಿಕಾಳ ಜೊತೆ ಮದುವೆ ಇಷ್ಟವಿಲ್ಲ. ಮಲ್ಲಿಕಾಳ ಆಯ್ಕೆಯ ಸ್ವಾತಂತ್ರ್ಯದ ಬಗ್ಗೆ ನಾನೇನೂ ಹೇಳಬೇಕಾಗಿಲ್ಲ. ಏಕೆಂದರೆ ಸಂಬಂಧದಲ್ಲಿ ಸಿಲುಕುವುದು ಕೇವಲ ಒಬ್ಬರ ವಶದಲ್ಲಿಲ್ಲ. ಏಕೆಂದರೆ ಈಕೆ ನನ್ನ ಆಯ್ಕೆಯ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಂಡಿದ್ದಾಳೆ. ತನ್ನ ಸ್ವಾರ್ಥಕ್ಕಾಗಿ ನನ್ನನ್ನು ದಾಳವಾಗಿ ಉಪಯೋಗಿಸಿಕೊಂಡಳು. ಅಪ್ರೇಜಾಳನ್ನು ಕಳೆದ 10 ವರ್ಷಗಳಿಂದ ನಾನು ಪ್ರೀತಿಸುತ್ತೇನೆ ಎನ್ನುವುದು ಬಹುಶಃ ಅವಳಿಗೆ ಗೊತ್ತಿಲ್ಲ ಅನಿಸುತ್ತೆ. ಅಪ್ರೇಜಾಳ ಮನೆಯಲ್ಲಿ ತೀರಾ ಸಂಕಷ್ಟದ ಸ್ಥಿತಿಯಿತ್ತು. ಅವಳೇ 10 ವರ್ಷಗಳಿಂದ ನೌಕರಿ ಮಾಡಿ ಮನೆ ನಡೆಸುತ್ತಿದ್ದಾಳೆ. ಆದರೆ ನನ್ನಿಂದ ಯಾವುದೇ ಸಹಾಯ ಪಡೆಯಲಿಲ್ಲ. ಅವಳು ಅಷ್ಟು ಸ್ವಾಭಿಮಾನಿ.

“ಅಪ್ರೇಜ್‌, ಇನ್ಮುಂದೆ ನೀನು ನನ್ನ ಜೊತೆ ಖಾಯಂ ಆಗಿ ಇರೋಕೆ ಬರ್ತಿಯಾ?” ಅಚ್ಯುತ್‌ ಕೇಳಿದ.

ಮಲ್ಲಿಕಾ ಅಪ್ರೇಜ್‌ ಳತ್ತ ನೋಡಿದಾಗ, ಅವಳ ಕೆನ್ನೆಗಳು ಕೆಂಪಾಗಿ ಗುಲಾಬಿಯಂತಾದವು. ಕಣ್ಣುಗಳಲ್ಲಿ ತುಂಟಾಟದ ಮಿಂಚು ಕಾಣುತ್ತಿತ್ತು.

ದರ್ಶನ್‌ ತಕ್ಷಣವೇ ಹೇಳಿದ, “ಗೆಳೆಯಾ, ಒಪ್ಪಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ಪರಿಸ್ಥಿತಿಯನ್ನು ಗಮನಕ್ಕೆ ತೆಗೆದುಕೊಂಡ ಬಳಿಕ ತೊಂದರೆಗಳು ಅಷ್ಟಿಷ್ಟು ಸಲೀಸಾಗಿ ನಿವಾರಣೆಯಾಗುತ್ತವೆ. ಮಲ್ಲಿಕಾಳ ಜೊತೆಗೆ ನಾನು ಜೀವನ ನಡೆಸುವ ಬಗ್ಗೆ ಈಗ ಯೋಚನೆ ಕೂಡ ಮಾಡಲು ಆಗುವುದಿಲ್ಲ. ಈ ಆಘಾತವನ್ನು ನಾನು ಮನಸಾರೆ ಒಪ್ಪಿಕೊಂಡಿದ್ದೇನೆ. ಮತ್ತೊಂದು ವಿಷಯ, ಈಗ ನಾವಿಬ್ಬರೂ ಇರುವ ಮನೆಯಲ್ಲೇ ಮಲ್ಲಿಕಾಳಿಗೆ ಹೊರಗೆ ವ್ಯವಸ್ಥೆಯಾಗುವ ತನಕ ಅವಕಾಶ ಕೊಡ್ತೀನಿ. ಅಲ್ಲಿಯವರೆಗೆ ನಾನು ಡ್ರಾಯಿಂಗ್‌ ರೂಮ್ ನಲ್ಲಿ ಇರ್ತೀನಿ. ಊಟದ ವ್ಯವಸ್ಥೆಯನ್ನು ನಾವಿಬ್ಬರೂ ಪ್ರತ್ಯೇಕವಾಗಿ ಮಾಡಿಕೊಳ್ಳಬೇಕು. ಅವಳು ಎಷ್ಟು ಸಾಧ್ಯವೋ ಅಷ್ಟು ಬೇಗ ಬೇರೆ ಮನೆ ಮಾಡಿಕೊಳ್ಳಬೇಕೆಂದು ನಾನು ಕೇಳಿಕೊಳ್ತೀನಿ. ಅಚ್ಯುತ್ ಅಕೌಂಟ್‌ ನಿಂದ ಹಣ ತೆಗೆದು ನಾನು ಮಲ್ಲಿಕಾಳಿಗೆ ತೆಗೆದುಕೊಟ್ಟ ದಾಖಲೆಗಳನ್ನು ನಾನು ಇಟ್ಟಿದ್ದೇನೆ,” ಎಂದು ದರ್ಶನ್‌ ಹೇಳಿದ.

“ಮಲ್ಲಿಕಾ, ನೀನು ಹಣವನ್ನು ಯಾವಾಗ ವಾಪಸ್‌ ಮಾಡ್ತೀಯಾ? ನನ್ನ ಫರ್ಮ್ ನಲ್ಲಿ ಇನ್ನು ಮುಂದೆ ನಿನಗೆ ಸ್ಥಾನವಂತೂ ಖಂಡಿತಾ ಇಲ್ಲ. ನೀನು ಮಾಡಬೇಕಾದ ಕೆಲಸವೆಂದರೆ, ನಿನ್ನ ವಿರುದ್ಧ ಪೊಲೀಸ್‌ ಕೇಸ್‌ ಆಗಬಾರದು ಎಂದರೆ, ನೀನು ಇಂತಿಷ್ಟು ಅವಧಿಯಲ್ಲಿ ಹಣ ಕೊಡ್ತೀನಿ ಎಂದು ಬಾಂಡ್‌ ಪೇಪರ್‌ ಮೇಲೆ ಬರೆದುಕೊಡಬೇಕು. ಒಪ್ಪಿಗೆಯಾ?” ಅಚ್ಯುತ್‌ ಅವಳತ್ತ ನೋಡಿ ಕೇಳಿದ.

“ನನಗೆ ನಿಮ್ಮ ಹಣ ವಾಪಸ್‌ ಮಾಡಲು 2 ವರ್ಷಗಳಾದರೂ ಬೇಕು. ನಾನು ಒಂದು ನೌಕರಿ ಹುಡುಕಿಕೊಳ್ಳಬೇಕು,” ಮಲ್ಲಿಕಾ ಮುಖ ಕೆಳಗೆ ಮಾಡಿಕೊಂಡು ಹೇಳಿದಳು.

“ನಾವು ಕಾನೂನು ರೀತ್ಯಾ ಒಪ್ಪಿ ಡೀಲ್ ‌ಮಾಡಿಕೊಳ್ಳೋಣ. ನೀನು 2 ವರ್ಷ ಬೇಕಾದರೂ ತೆಗೆದುಕೊ. ಆದರೆ ನೀನು ನಿರ್ದಿಷ್ಟ ದಿನಾಂಕದೊಳಗೆ ಹಣ ವಾಪಸ್‌ ಮಾಡಲೇಬೇಕು. ಇಲ್ಲದಿದ್ದರೆ, ನಾನು ಕಾನೂನು ಕ್ರಮ ಜರುಗಿಸಬೇಕಾಗುತ್ತದೆ.”

“ಧನ್ಯವಾದ. ಪುರುಷರ ಬಗೆಗಿನ ನನ್ನ ಅನುಭವ ಬಹಳ ದುಃಖಕರವಾಗಿತ್ತು. ಇವತ್ತು ದರ್ಶನ್‌ ಹಾಗೂ ಅಚ್ಯುತ್‌ ಜೊತೆಗಿನ ಕೆಲವು ವರ್ಷಗಳ ಅನುಭವ ನನ್ನ ಧೋರಣೆಯನ್ನು ಹೊಸ ಧಾರೆಯಲ್ಲಿ ಬದಲಿಸಿಕೊಳ್ಳಲು ಅವಕಾಶ ಕೊಟ್ಟಿದೆ. ಅಪ್ರೇಜ್‌, ನೀನು ಯಾವಾಗಲೂ ಸುಖಿಯಾಗಿರು, ಖುಷಿಯಿಂದಿರು. ದರ್ಶನ್‌, ನಾನು ನಿನಗೆ ಸೂಕ್ತಳಲ್ಲ. ಜೀವನದ ಮುಂದಿನ ದಿನಗಳಲ್ಲಿ ನಿಮಗೆ ಇನ್ನಷ್ಟು ಖುಷಿ ಸಿಗಲಿ ಎಂದು ಹಾರೈಸುವೆ. ನಾನು ಇವತ್ತೆಲ್ಲ ಬಂದು ನನ್ನ ಲಗೇಜ್‌ ತೆಗೆದುಕೊಂಡು ಹೋಗ್ತೀನಿ. ನಾನು ಒಂದು ಗರ್ಲ್ಸ್ ಹಾಸ್ಟೆಲ್ ‌ನಲ್ಲಿ ವಿಚಾರಿಸಿದ್ದೆ. ಈಗ ಅಲ್ಲಿಗೆ ಹೋಗಿ ಶಿಫ್ಟ್ ಆಗ್ತೀನಿ. ಅಚ್ಯುತ್‌, ತಪ್ಪುಗಳಿಗಾಗಿ ನಾನು ಯಾವುದೇ ಮಾರ್ಜಿನ್‌ಬಿಟ್ಟಿರಲಿಲ್ಲ. ಆದರೆ ನೀವು ಸುಧಾರಣೆಯಾಗಿ ಸಾಕಷ್ಟು ಮಾರ್ಜಿನ್‌ ಕೊಟ್ಟಿರುವಿರಿ. ನಾನು ನಿಮ್ಮನ್ನು ಪಡೆಯಲು ಕೇವಲ ಹಣವೊಂದೇ ಕಾರಣ ಆಗಿರಲಿಲ್ಲ ಎನ್ನುವುದನ್ನು ನಿಮಗೆ ಸ್ಪಷ್ಟಪಡಿಸಲು ಇಷ್ಟಪಡುತ್ತೇನೆ,” ಎಂದು ಹೇಳುತ್ತಾ ಮಲ್ಲಿಕಾ ಎದ್ದು ನಿಂತಳು.

ಒಬ್ಬ ಹುಡುಗಿಗಾಗಿ ಯಾರ ಮನಸ್ಸಿನಲ್ಲೂ ಅಪೇಕ್ಷೆಗಳಿರಲಿಲ್ಲ. ಆದರೆ ಅವಳು ಹೊರಟು ಹೋಗುತ್ತಿದ್ದಂತೆ ಎಲ್ಲರೂ ಸ್ತಬ್ಧರಾದರು. ದರ್ಶನ್‌ ನ ಕಣ್ಣುಗಳಲ್ಲಿ ಎರಡು ಹನಿ ಕಣ್ಣೀರು ಬಂದು ಅಲ್ಲಿಯೇ ನಿಂತುಬಿಟ್ಟ. ಒಂದು ನಿರ್ದಿಷ್ಟ ಮಾರ್ಜಿನ್‌ ನಲ್ಲಿ ಖಾಯಂ ಆಗಿ ಇರಲು……..

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ