ಮದನ್ ಹಾಗೂ ಮಂಜುಳಾರ ಮದುವೆಯಾಗಿ 2 ವರ್ಷಗಳೇ ಕಳೆದಿವೆ. ಮದನ್ ಬೆಳಗ್ಗೆ 9 ಗಂಟೆಗೆ ಮನೆಯಿಂದ ಹೊರಟು, ಆಫೀಸಿನಿಂದ ಬರುವ ಹೊತ್ತಿಗೆ ಸಂಜೆ 7 ಗಂಟೆ ಆಗುತ್ತಿತ್ತು. ಅವನ ಮೈಮನವೆಲ್ಲ ದಣಿದು ಹೋಗಿರುತ್ತಿತ್ತು.
ಬೆಳಗ್ಗೆಯಿಂದ ಕಾಯುತ್ತಿದ್ದ ಅವನ ಹೆಂಡತಿ ಮಂಜುಳಾ ಮದನ್ ಜೊತೆ ಏನಾದರೂ ಮಾತನಾಡಲು ಪ್ರಯತ್ನ ಮಾಡಿದರೆ ಸಾಕು, ಅವನು ಮೂಡ್ ಕೆಟ್ಟು ಹೋದಂತೆ ವರ್ತಿಸುತ್ತಿದ್ದ.
ಗಂಡನ ಈ ರೀತಿಯ ವರ್ತನೆಯಲ್ಲಿ ಮಂಜುಳಾ ಅವನ ಜೊತೆಗೆ ಅವಶ್ಯವಿದ್ದಷ್ಟು ಮಾತ್ರ ಮಾತನಾಡುತ್ತಾಳೆ. ಇದರ ಪರಿಣಾಮ ರಾತ್ರಿ ಬೆಡ್ ಮೇಲೂ ಗೋಚರಿಸುತ್ತದೆ. ದಣಿವಿನ ಕಾರಣದಿಂದ ಮದನ್ ಅರಿವಿಲ್ಲದವನಂತೆ ಮಲಗಿಬಿಡುತ್ತಾನೆ. ಮಂಜುಳಾ ಮಗ್ಗಲು ಬದಲಿಸುತ್ತಾ ವೇದನೆ ಅನುಭವಿಸುತ್ತಾಳೆ.
ಮದುವೆಯ ಬಳಿಕ ವ್ಯಕ್ತಿಯೊಬ್ಬನ ಸೆಕ್ಸ್ ಲೈಫ್ ನಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತದೆ. ಹಾಗೆ ನೋಡಿದರೆ, ಅವು ಸಾಮಾನ್ಯವಾಗಿರುತ್ತವೆ. ಮಹಿಳೆಯರು ಸಾಮಾನ್ಯವಾಗಿ ಮನೆಯಲ್ಲಿದ್ದುಕೊಂಡು ಕೆಲಸ ಕಾರ್ಯಗಳನ್ನು ಮುಗಿಸಿ ಗಂಡನಿಗಾಗಿ ಕಾಯುತ್ತಾ ಕುಳಿತಿರುತ್ತಾರೆ. ಆದರೆ ಗಂಡ ಮನೆಗೆ ಬಂದಾಗ ಅವನ ಮೂಡ್ ಕೆಟ್ಟು ಹೋಗಿರುತ್ತದೆ ಅಥವಾ ಅವನು ಸಿಕ್ಕಾಪಟ್ಟೆ ದಣಿದು ಹೋಗಿರುತ್ತಾನೆ. ಇಂಹತದರಲ್ಲಿ ನಿಮಗೆ ನಿಮ್ಮ ಬಗ್ಗೆ ಗಂಡನ ಆಕರ್ಷಣೆ ಕಡಿಮೆಯಾಗಿದೆ ಎನಿಸುತ್ತದೆ.
ದಣಿವು ಹಾಗೂ ಆಫೀಸಿನ ಕೆಲಸದ ಒತ್ತಡದಲ್ಲಿ ಅವರು ಸೆಕ್ಸ್ ಬಗ್ಗೆ ಅಷ್ಟೊಂದು ಉತ್ಸಾಹ ತೋರಿಸುವುದಿಲ್ಲ. ಆಗ ಅವನು ಯಾರೊಂದಿಗೊ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬುದರತ್ತ ಬೆರಳು ತೋರಿಸುತ್ತದೆ. ಇಂತಹ ಸ್ಥಿತಿಯಲ್ಲಿ ಗಂಡ ಹೆಂಡತಿಯ ಮಧ್ಯೆ ಪ್ರೀತಿಯ ಬದಲು ಒತ್ತಡ ಮನೆ ಮಾಡುತ್ತದೆ.
ಗಂಡನ ಕೆಟ್ಟು ಹೋದ ಮೂಡ್ ಸರಿಪಡಿಸಲು ಹಾಗೂ ಸೆಕ್ಸ್ ಲೈಫ್ ನ್ನು ಖುಷಿದಾಯಕಗೊಳಿಸಲು ಕೆಲವು ಉಪಾಯಗಳನ್ನು ಗಮನಿಸುವುದಾದರೆ, ನಿಮ್ಮ ಸಂಗಾತಿಗೆ ನೀವು ಮೂಡ್ ನಲ್ಲಿದ್ದೀರಿ ಎಂಬುದನ್ನು ತಿಳಿಸಬಹುದು. ಇನ್ನೊಂದು ವಿಷಯ ಸೆಕ್ಸ್ ನ ಆರಂಭ ಪುರುಷರಿಂದಲೇ ಆಗಬೇಕು ಎನ್ನುವುದು ಸರಿಯಲ್ಲ.
ಸೆಕ್ಸ್ ನಲ್ಲಿ ನೀವು ಹೆಜ್ಜೆ ಇಡಿ
ಸಾಮಾನ್ಯವಾಗಿ ಸೆಕ್ಸ್ ನಲ್ಲಿ ಮುಂದಡಿ ಇಡಲು ಹೆಂಡತಿಯರು ಹಿಂದೆ ಇರುತ್ತಾರೆ. ಗಂಡಂದಿರೇ ಸೆಕ್ಸ್ ನ ಆರಂಭ ಮಾಡಬೇಕು ಎಂದುಕೊಳ್ಳುತ್ತಾರೆ. ಒಂದು ಸಂಗತಿ ನಿಮ್ಮ ಗಮನದಲ್ಲಿರಲಿ, ನೀವು ಗಂಡನ ಜೊತೆ ಹಾಸಿಗೆಯಲ್ಲಿದ್ದಾಗ, ಅವನನ್ನು ನಿಮ್ಮತ್ತ ಆಕರ್ಷಿತಗೊಳಿಸಲು, ನೀವು ಸೆಕ್ಸ್ ನ ಆರಂಭಕ್ಕೆ ಸಂಕೋಚ ಮಾಡದಿರಿ. ಅದಕ್ಕಾಗಿ ಅವನೇ ಮುಂದಾಗಲಿ ಎಂದು ಕಾಯಬೇಡಿ.
ನಿಮ್ಮ ಪತಿಯ ಜೊತೆಗೆ ವಿಶಿಷ್ಟ ರೀತಿಯಲ್ಲಿ ಅಂತರಂಗದ ಕ್ಷಣಗಳನ್ನು ಕಳೆಯಲು ಪ್ರಯತ್ನಿಸಿ. ಸೆಕ್ಸ್ ನ್ನು ಯಾರು ಆರಂಭಿಸಬೇಕೆಂಬ ಬಗ್ಗೆ ಪ್ರಸ್ತಾಪವಾದಾಗ, ನಿಮ್ಮ ದೇಹ ಎಲ್ಲಕ್ಕೂ ದೊಡ್ಡ ಅಸ್ತ್ರವಾಗಬೇಕು.
ನೀವು ನಿಮ್ಮ ಪತಿಯನ್ನು ಹಿಂಭಾಗದಿಂದ ತಬ್ಬಿಕೊಳ್ಳಿ. ಅವನ ಕಿವಿಯನ್ನು ಪ್ರೀತಿಯಿಂದ ಕಚ್ಚುವುದರ ಮೂಲಕ ಆರಂಭಿಸಬೇಕು. ಸಂವೇದನಾಶೀಲ ಭಾಗದ ಮೇಲೆ ಕಿಸ್ ಮಾಡಿ ಹಾಗೂ ನಿಮ್ಮ ದೇಹವನ್ನು ಅವನ ಮೇಲೆ ಹೇಗೆ ಬಾಗಿಸಬೇಕೆಂದರೆ, ಅವನಿಗೆ ಏನೂ ಮಾತನಾಡದೆಯೇ ಸಮಾಗಮದ ವಾತಾವರಣ ಸೃಷ್ಟಿಯಾಗಿರುವುದು ಅನುಭವಕ್ಕೆ ಬರಬೇಕು. ನಿಮ್ಮ ಮುಖಾಂತರ ಆರಂಭವಾದ ಸೆಕ್ಸ್ ನ ಹೆಜ್ಜೆ ನಿಮ್ಮ ಪತಿಯ ಮೂಡ್ ನ್ನು ಕ್ಷಣಾರ್ಧದಲ್ಲಿಯೇ ಬದಲಿಸಿಬಿಡುತ್ತದೆ.
ಕಿಸ್ ಮಾಡಲು ಸಂಕೋಚವೇಕೆ?
ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಎಲ್ಲಕ್ಕೂ ಉತ್ತಮ ಉಪಾಯವೆಂದರೆ, ಸಂಗಾತಿಗೆ ಕಿಸ್ ಮಾಡುವುದಾಗಿದೆ. ಈ ಕುರಿತಾಗಿ ಹೆಚ್ಚು ಯೋಚಿಸುವ ಅಗತ್ಯವೇನಿದೆ? ಮಾರ್ನಿಂಗ್ ಕಿಸ್ ನಿಂದ ಹಿಡಿದು, ಸ್ವೀಟ್ ಡ್ರೀಮ್ ಕಿಸ್ ತನಕ ಕಾರಣವಿಲ್ಲದೆಯೇ ಕಿಸ್ ಮಾಡಿ.
ನಿಮ್ಮ ಈ ಉಪಾಯ ಪತಿಗೆ ಬಹಳ ಇಷ್ಟವಾಗುತ್ತದೆ. ಇದಕ್ಕೆ ಪ್ರತಿಯಾಗಿ ನಿಮಗೂ ರಿಪ್ಲೈ ಕಿಸ್ ಸಿಗಲು ಆರಂಭವಾಗುತ್ತದೆ. ಗಂಡ ಮನೆಗೆ ಕಾಲಿಡುತ್ತಿದ್ದಂತೆಯೇ, ನೀವು ಅವನಿಗೆ ಕಿಸ್ ಮಾಡುವ ಉಪಾಯ, ಅವನ ದಣಿವೆನ್ನೆವಲ್ಲ ನಿವಾರಿಸಿಬಿಡುತ್ತದೆ.
ಒಂದು ಸಮೀಕ್ಷೆಯ ಪ್ರಕಾರ, ಯಾರು ಕಿಸ್ ಮಾಡಲು ಹಿಂದೇಟು ಹಾಕುವುದಿಲ್ಲವೋ, ಅವರು ತಮ್ಮ ಜೀವನವನ್ನು ಅಂದುಕೊಂಡಿದ್ದಕ್ಕಿಂತ ಒಳ್ಳೆಯ ರೀತಿಯಲ್ಲಿ ಜೀವಿಸುತ್ತಾರಂತೆ ಅದೇ ಕಿಸ್ ಮಾಡಲು ಹಿಂದೇಟು ಹಾಕುವರು, ಸದಾ ದಣಿದವರಂತೆ ಸುಸ್ತಾದವರಂತೆ ಅನುಭವ ಮಾಡಿಕೊಳ್ಳುತ್ತಾರೆ.
ಅಂದರೆ ಕಿಸ್ ನಿಮಗೆ ಜೀವನದ ಬಗ್ಗೆ ಸಕಾರಾತ್ಮಕ ಧೋರಣೆ ಹೊಂದಲು ನೆರವಾಗುತ್ತದೆ. ಯಾವ ಇಬ್ಬರು ವ್ಯಕ್ತಿಗಳು ಲಿಪ್ ಲಾಕ್ ಆಗುತ್ತಾರೊ, ಅವರ ನಡುವಿನ ನಿಕಟತೆ ಹೆಚ್ಚುತ್ತದೆ. ಸಂಬಂಧದಲ್ಲಿ ಗಾಢತೆ ಹೆಚ್ಚಿಸಿಕೊಳ್ಳಲು ಕಿಸ್ ಅತ್ಯಂತ ಅವಶ್ಯ.
ಸಂಗಾತಿಯ ಜೊತೆಗೆ ಶವರ್ ಬಾಥ್
ದಿನವಿಡೀ ಆಫೀಸಿನಲ್ಲಿ ಕೆಲಸ ಮಾಡುವ ಕಾರಣದಿಂದ ದಣಿದು ಗಂಡ ಮನೆಗೆ ಬಂದಾಗ ಅವನ ಜೊತೆಗೆ ಶವರ್ ನ ಆನಂದ ಪಡೆದು, ಅವನ ಮೂಡ್ ಬದಲಿಸಬಹುದು. ನಿಮ್ಮ ಈ ಹೆಜ್ಜೆ ನಿಮ್ಮ ಪತಿಯನ್ನು ಸಾಕಷ್ಟು ಉತ್ಸಾಹಿತನನ್ನಾಗಿ ಉತ್ತೇಜಿತನನ್ನಾಗಿಸುತ್ತದೆ.
ಜೊತೆ ಜೊತೆಗೆ ಶವರ್ ಬಾಥ್ ನ ಆನಂದ ಪಡೆಯುವುದರಿಂದ, ಸೆಕ್ಸ್ ನ ಇಚ್ಛೆ ಇನ್ನಷ್ಟು ಪ್ರಬಲವಾಗುತ್ತದೆ. ಇದೇ ಸಂದರ್ಭದಲ್ಲಿ ಕಿಸ್ ಕೂಡ ಮಾಡಿ. ನಿಮ್ಮ ಈ ದಿಟ್ಟ ಹೆಜ್ಜೆ ಪತಿಯ ಮೂಡ್ ನ್ನು ಬದಲಿಸುತ್ತದೆ. ಸಂಗಾತಿಯ ಜೊತೆಗೆ ನೀರು ಹಾಗೂ ನೊರೆಯಿಂದ ಚೆಲ್ಲಾಟವಾಡಿ. ಪರಸ್ಪರರನ್ನು ತಬ್ಬಿಕೊಳ್ಳಿ. ನೀರು ಹಾಗೂ ನೊರೆಯ ನಡುವೆ ನಿಮ್ಮ ಸ್ನಿಗ್ಧ ದೇಹ ಸೆಕ್ಸ್ ನಲ್ಲಿ ಆಕರ್ಷಿತಗೊಳ್ಳುತ್ತದೆ. ಶವರ್ ಮಜ ಪಡೆಯುತ್ತಲೇ ಸಮಾಗಮ ಹೊಂದುವುದು ಒಂದು ವಿನೂತನ ಉಪಾಯ ಎನಿಸಿಕೊಳ್ಳುತ್ತದೆ. ಇದು ನಿಮ್ಮನ್ನು ಸಂಗಾತಿಯ ಕಡೆ ಇನ್ನಷ್ಟು ನಿಕಟಗೊಳಿಸುತ್ತದೆ ಮತ್ತು ನಿಮ್ಮ ಸಂಬಂಧದಲ್ಲಿ ಮತ್ತಷ್ಟು ಮಾಧುರ್ಯ ಬೆರೆಸುತ್ತದೆ.
ಸೆಕ್ಸ್ ಮಸಾಜ್ ನಿಂದ ಟರ್ನ್ ಆನ್
ತನ್ನ ಹೆಂಡತಿಯಿಂದ ಒಂದೊಳ್ಳೆ ಮಸಾಜ್ ಮಾಡಿಸಿಕೊಳ್ಳಬೇಕೆನ್ನುವುದು ಪ್ರತಿಯೊಬ್ಬ ಗಂಡನ ಕಲ್ಪನೆಯಾಗಿರುತ್ತದೆ. ಗಂಡನಿಗೆ ಹಿತಕರ ಎನಿಸುವಂತಹ, ತೃಪ್ತಿದಾಯಕ ಮಸಾಜ್ ನೀವೇಕೆ ಮಾಡಬಾರದು? ನೀವು ಮಸಾಜ್ ಮಾಡುವುದನ್ನು ಮುಂದುವರಿಸಿದಾಗ, ನಿಶ್ಚಿತವಾಗಿಯೂ ಅದು ಅವನನ್ನು ಟರ್ನ್ ಆನ್ ಮಾಡುತ್ತದೆ ಹಾಗೂ ನಿಮ್ಮಿಬ್ಬರ ನಡುವೆ ಅಂತರಂಗದ ಕ್ಷಣಗಳಿಗಾಗಿ ಕಾತರಿಸುವಂತೆ ಮಾಡುತ್ತದೆ. ಸಂಗಾತಿಯನ್ನು ಖುಷಿಗೊಳಿಸುವ ಹಾಗೂ ಪರಸ್ಪರರಲ್ಲಿ ಕಳೆದುಹೋಗುವ ಒಂದೊಳ್ಳೆ ವಿಧಾನವೆಂದರೆ ಅದು ಮಸಾಜ್.
ಪತಿಯ ಮೂಡ್ ದಣಿದು ಹೋದಂತೆ ಭಾಸವಾಗುತ್ತಿದ್ದಲ್ಲಿ ಅಥವಾ ಆತ ಸಮಾಗಮ ಹೊಂದಲು ಆಗದಿದ್ದಲ್ಲಿ ನಿಮ್ಮ ಬಳಿ ಮತ್ತೊಂದು ಒಳ್ಳೆಯ ಉಪಾಯವಿದೆ. ನೀವು ಆತನಿಗೆ ಸೆಕ್ಸಿ ಮಸಾಜ್ ಮಾಡಿ. ಇದಕ್ಕಾಗಿ ನೀವು ಎಲ್ಲಕ್ಕೂ ಮೊದಲು ಮಂದ ಧ್ವನಿಯ ಮ್ಯೂಸಿಕ್ ಹಾಕಿ, ಕುತ್ತಿಗೆ ಹಾಗೂ ಬೆನ್ನಿನ ಮಸಾಜ್ ಮಾಡುತ್ತಾ, ನಿಮ್ಮ ಬೆರಳುಗಳನ್ನು ಸೆಕ್ಸಿ ಅಂಗಗಳಿಗೆ ಸ್ಪರ್ಶಿಸಿ. ಯಾವಾಗ ನಿಮ್ಮ ಪತಿಯ ಮೂಡ್ ಬದಲಾಗುತ್ತದೋ ಹೇಳಲಾಗದು. ನೀವು ಮಸಾಜ್ ಮಾಡುವಾಗ ನೀವು ಧರಿಸಿದ ಡ್ರೆಸ್ ಸೆಕ್ಸಿ ಆಗಿರಲಿ, ಅವರ ಕಿವಿಗಳಲ್ಲಿ ಆಗಾಗ ಮೆಲ್ಲಗೆ ಏನಾದರೂ ಹೇಳುತ್ತಾ ಇರಿ. ಇದರಿಂದ ಆತನಿಗೆ ಸೆಕ್ಸ್ ನ ಅನುಭವ ಆಗುತ್ತದೆ.
ಬಟ್ಟೆ ಬದಲಿಸುವ ವಿಧಾನ
ಪುರುಷರಿಗೆ ಎಲ್ಲಕ್ಕೂ ಮೊದಲು ಮಹಿಳೆಯರ ಬಟ್ಟೆ ಆಕರ್ಷಿತಗೊಳಿಸುತ್ತದೆ. ನಿಮ್ಮ ಪತಿ ಕೂಡ ನಿಮ್ಮ ಪೋಷಾಕು ನೋಡಿ ಸೆಕ್ಸ್ ನ ಮೂಡ್ ಗೆ ಬರಬಹುದು. ನೀವು ಆತನಿಗಾಗಿ ವಿಶಿಷ್ಟವಾದುದನ್ನು ಧರಿಸಿ. ಓಪನ್ ಬಟ್ಟೆ ಧರಿಸಲು ಪ್ರಯತ್ನ ಮಾಡಿ. ಸಾಧಾರಣ ಮೇಕಪ್ ನ ಜೊತೆಗೆ ಟ್ರಾನ್ಸ್ ಪರೆಂಟ್ ಬಟ್ಟೆಗಳನ್ನು ಆಯ್ಕೆ ಮಾಡಿ.
ಸ್ಪಲ್ಪ ಮೇಕಪ್ ಮಾಡಿ ಹಾಗೂ ನಿಮ್ಮ ಪತಿಯ ಎದುರು ಹೇಗೆ ನಿಮ್ಮನ್ನು ಪ್ರಸ್ತುತಪಡಿಸಿಕೊಳ್ಳಬೇಕೆಂದರೆ, ಗಂಡ ನಿಮ್ಮಿಂದ ತನ್ನ ದೃಷ್ಟಿಯನ್ನು ಬೇರೆಡೆ ಕದಲಿಸಬಾರದು. ಡಿಮಾಂಡಿಂಗ್ ಆಗಿ ಹಾಗೂ ಒಂದು ಆವೇಶಭರಿತ ಕಿಸ್ ಕೊಡಿ. ಇದು ಅವನಿಗೆ ಹೇಗೆ ಅನ್ನಿಸಬೇಕೆಂದರೆ, ನೀವು ಆತನನ್ನು ಟರ್ನ್ ಆನ್ ಮಾಡಲು ಹೀಗೆ ತಯಾರಾಗಿದ್ದೀರಿ ಎಂದು ಅನಿಸಬೇಕು. ನಿಮ್ಮ ಈ ರೀತಿಯ ನಡೆ ನೂರಕ್ಕೆ ನೂರರಷ್ಟು ಗಂಡನ ಮೂಡ್ ನ್ನು ಸೆಕ್ಸ್ ನತ್ತ ವಾಲಿಸುತ್ತದೆ.
ಮನಸ್ಸಿನ ಮಾತನ್ನು ಹೇಳಿ
ಎಷ್ಟೋ ಸಲ ನಾವು ಬಹಳ ನರ್ವಸ್ ಆಗಿರುತ್ತೇವೆ. ಆಗ ನಗು ತಮಾಷೆಯಿಂದ ಕೂಡಿದ ಮಾತುಗಳು ನಮ್ಮ ಬೇಸರವನ್ನು ನೀಗಿಸುತ್ತದೆ. ಅದೇ ರೀತಿ ಎಷ್ಟೋ ದಂಪತಿಗಳು, ಸೆಕ್ಸ್ ನ ಪ್ರಸ್ತಾಪ ಬಂದಾಗ, ಟೀನೇಜರ್ ಗಳ ಹಾಗೆ ತುಂಟಾಟ ತಮಾಷೆ ಮಾಡುತ್ತಾರೆ. ನೀವು ಪತಿಯ ಜೊತೆ ತಮಾಷೆಯ ಫ್ಲರ್ಟ್ ಮಾಡಬಹುದು. ಒಂದು ವೇಳೆ ಶಬ್ದಗಳು ನಿಮ್ಮ ಅಸ್ತ್ರವಾಗದಿದ್ದಾಗ, ನಿಮ್ಮ ಬಾಡಿ ಲ್ಯಾಂಗ್ವೇಜ್ ನಿಂದ ಇದನ್ನು ಬಹಿರಂಗಪಡಿಸಿ.
ಸಂಗಾತಿಯ ಸೊಂಟವನ್ನು ನಿಮ್ಮೆರಡು ಕೈಗಳಿಂದ ಬಳಸಿ, ಅವನನ್ನು ಬಾಚಿ ತಬ್ಬಿಕೊಳ್ಳಿ. ಅವನ ಕಿವಿಗಳಲ್ಲಿ ಮೆಲ್ಲನೆಯ ಧ್ವನಿಯಲ್ಲಿ ಏನನ್ನಾದರೂ ಹೇಳಿ ಅಥವಾ ಕಿವಿಯನ್ನು ಮೃದುವಾಗಿ ಕಚ್ಚಲೂಬಹುದು. ಹೀಗೆ ಮಾಡುತ್ತಲೇ ಸಂಗಾತಿಯನ್ನು ಬೆಡ್ ರೂಮಿನ ತನಕ ಕರೆದುಕೊಂಡು ಹೋಗಿ. ಈ ಸಮಯದಲ್ಲಿ ನೀವು ಎಷ್ಟು ಕಡಿಮೆ ಪೋಷಾಕು ಧರಿಸಿರುತ್ತೀರೊ, ಅಷ್ಟು ಒಳ್ಳೆಯದು.
ಉತ್ಸಾಹ ಕಾಯ್ದುಕೊಳ್ಳಿ
ಒಂದು ಸಂಗತಿ ನೆನಪಲ್ಲಿರಲಿ. ಬರೀ ಮಾತುಗಳಿಂದಲೇ ನನಗೆ ಸೆಕ್ಸ್ ನ ಮೂಡ್ ಇದೆ ಎಂದು ಹೇಳಿದರೆ ಸಾಲದು. ಅದಕ್ಕಾಗಿ ನೀವು ಕ್ರಿಯಾಶೀಲರಾಗಬೇಕಾಗುತ್ತದೆ. ಸಮಾಗಮದ ಸಂದರ್ಭದಲ್ಲಿ ಸಂಗಾತಿಯ ಪ್ರತಿಯೊಂದು ಆಗುಹೋಗುಗಳಿಗೆ ನೀವು ಜೊತೆ ಕೊಡಬೇಕಾಗುತ್ತದೆ. ನೀವು ನಿಮ್ಮ ಕೈಗಳನ್ನು ಬಳಸಿಕೊಂಡು, ನೀವು ಏನನ್ನು ಬಯಸುತ್ತೀರಿ ಎಂಬುದನ್ನು ಸಂಗಾತಿಗೆ ತಿಳಿಸಿ. ಒಂದು ವೇಳೆ ನೀವೇ ಸೆಕ್ಸ್ ನ ಆರಂಭಕ್ಕೆ ಉತ್ಸಾಹ ತೋರಿಸುವ ಮನಸ್ಸು ಮಾಡಿದ್ದರೆ, ನೀವು ಅಷ್ಟೇ ತತ್ಪರತೆಯ ಪ್ರದರ್ಶನ ಮಾಡಬೇಕಾಗುತ್ತದೆ.
ಉತ್ಸಾಹವನ್ನು ಕಾಯ್ದುಕೊಳ್ಳಿ ಹಾಗೂ ಅದನ್ನು ಮುಕ್ತವಾಗಿ ತೋರ್ಪಡಿಸಿ. ನೀವು ಸಮಾಗಮಕ್ಕಾಗಿ ಉತ್ಸಾಹ ಕಾತುರ ತೋರಿಸುತ್ತಿದ್ದರೆ, ಅದಕ್ಕಾಗಿ ಅವನು ಕೂಡ ಬೆಂಬಲ ಕೊಡುತ್ತಾನೆ. ನಿಮ್ಮ ಫ್ಯಾಂಟಸಿಗಳ ಬಗ್ಗೆ ಅವನಿಗೆ ಹೇಳಿ ಹಾಗೂ ಅವನು ನಿಮ್ಮ ಆಜ್ಞೆ ಪಾಲಿಸುವಲ್ಲಿ ಒಂದಿಷ್ಟೂ ಹಿಂದೇಟು ಹಾಕಲಾರ.
ಸೆಕ್ಸ್ ಕೇವಲ ಒಂದು ಅತ್ಯುತ್ತಮ ವ್ಯಾಯಾಮವಷ್ಟೇ ಅಲ್ಲ, ಅದು ನಿಮ್ಮನ್ನು ಹಲವು ಗಂಭೀರ ರೋಗಗಳಿಂದಲೂ ರಕ್ಷಿಸುತ್ತದೆ. ಸೆಕ್ಸ್ ಹಾಗೂ ಕಾಮುಕತೆ ಜೀವನದ ಮಹತ್ವದ ಭಾಗಗಳಾಗಿವೆ.
– ಅನಿತಾ