ಧರ್ಮದ ರಕ್ಷಣೆಯಲ್ಲಿ ತಮ್ಮವರ ಬಲಿ
ತಂದೆ ತನ್ನ ಮಗನಿಗಾಗಿ ಪ್ರಾಣ ಕೊಡುತ್ತಾನೆ. ಇಲ್ಲಿ ಮಗನ ಪ್ರಾಣ ತೆಗೆಯುತ್ತಾನೆ. ಏಕೆಂದರೆ ತಂದೆಯ ಪ್ರಾಣ ಉಳಿಯಲೆಂದು. ಇತ್ತೀಚೆಗಷ್ಟೇ ಪೊಲೀಸರು ಒಬ್ಬನನ್ನು ಬಂಧಿಸಿದರು. ಆತ ಮಾಡಿದ್ದೇನು ಗೊತ್ತಾ? ನಿಧಿಯ ಆಸೆಗೆ ಮಾಂತ್ರಿಕನ ಹೇಳಿಕೆಯ ಮೇರೆಗೆ ತನ್ನ 16 ವರ್ಷದ ಮಗನನ್ನು ಬಲಿಕೊಟ್ಟಿದ್ದ. ಇದು ತಮಿಳುನಾಡಿನ ಉರೈಯರ್ ಎಂಬಲ್ಲಿ 2014ರಲ್ಲಿ ನಡೆದ ಘಟನೆ. ಈ ಪ್ರಕರಣದಲ್ಲಿ ಅಮ್ಮ ಮಲತಾಯಿಯಾಗಿದ್ದರು.
ಪೌರಾಣಿಕ ಕಥೆಗಳಲ್ಲೂ ಕೂಡ ಪುತ್ರರನ್ನು ಕೊಲ್ಲುವ, ಬಲಿ ಕೊಡುವ ಪ್ರಸಂಗಗಳು ಬರುತ್ತವೆ. ಭೀಮನಿಗೆ ಹಿಡಿಂಬೆಯಿಂದ ಜನಿಸಿದ ಪುತ್ರ ಘಟೋತ್ಕಚನನ್ನು ಕರ್ಣನ ಮುಖಾಂತರ ಒಂದು ಸ್ಯಾಟರ್ಜಿಗೆ ಅನುಗುಣವಾಗಿ ವಿಶೇಷ ಅಸ್ತ್ರದ ಮುಖಾಂತರ ಕೊಲ್ಲಿಸಲಾಯಿತು. ಇಲ್ಲದಿದ್ದರೆ ಅದೇ ಅಸ್ತ್ರ ಅರ್ಜುನನ ವಿರುದ್ಧ ಬಳಕೆಯಾಗುತ್ತಿತ್ತು.
ಅನುಜಾ ರಾಮಚಂದ್ರನ್ ಅವರು ಆಂಗ್ಲ ಭಾಷೆಯಲ್ಲಿ ಬರೆದ `ಅರ್ಜುನ’ದಲ್ಲಿ ಈ ಕಥೆಯ ಸಂಪೂರ್ಣ ವರ್ಣನೆ ಸಿಗುತ್ತದೆ. ಇಂದ್ರ ಕರ್ಣನಿಗೆ ಆ ಅಸ್ತ್ರವನ್ನು ಅಜೇಯ `ಶಕ್ತಿ’ ಕೊಟ್ಟಿದ್ದ ಹಾಗೂ ಕರ್ಣ ಆ ಅಸ್ತ್ರವನ್ನು ಅರ್ಜುನನ ವಿರುದ್ಧ ಪ್ರಯೋಗ ಮಾಡಲು ನಿರ್ಧರಿಸಿದ್ದ. ಆದರೆ ಆ ಅಸ್ತ್ರವನ್ನು ಘಟೋತ್ಕಚನ ಮೇಲೆ ಉದ್ದೇಶ ಪೂರ್ಕವಾಗಿ ಅಂದರೆ ಯುದ್ಧ ಕೌಶಲದ ನೆಪದಲ್ಲಿ ಪ್ರಯೋಗ ಮಾಡಲಾಯಿತು.
ಭೀಮನ ಮಗನ ಸಾವು ಎಷ್ಟೇ ಅವಶ್ಯಕವಾಗಿದ್ದರೂ, ಅದು ಕೊಡು ಸಂದೇಶ ಮಾತ್ರ ಗಾಬರಿ ಮೂಡಿಸುವಂಥದ್ದು. ಯುದ್ಧ ಗೆಲ್ಲಲು ಈ ನೀತಿ ಯಾವುದೇ ರೀತಿಯಲ್ಲೂ ಸೂಕ್ತಲ್ಲ. ಯುದ್ಧದಲ್ಲಿ ಸಾವುಗಳಾಗುತ್ತವೆ, ಆದರೆ ದೊಡ್ಡವರು ಚಿಕ್ಕವರನ್ನು ರಕ್ಷಿಸುತ್ತಾರೆ.
ಮಹಾಭಾರತದ ಈ ಕಥೆಗಳು ಪುರಾಣ ಕಥೆಗಳಲ್ಲ. ಅನ್ನು ಕಾಮಿಕ್ಸ್, ಪ್ರವಚನ, ಟಿ.ವಿ. ಧಾರಾವಾಹಿಗಳ ಮುಖಾಂತರ ಜನರ ತನಕ ತಲುಪಿಸಲಾಗುತ್ತದೆ. ತಮ್ಮ ಸ್ವಾರ್ಥಕ್ಕಾಗಿ ಸಂಬಂಧಿಕರನ್ನು ಬಲಿಕೊಡುವುದು ತಪ್ಪಲ್ಲ ಎಂದು ಬಿಂಬಿಸಲಾಗುತ್ತದೆ. ತಮಿಳುನಾಡಿನ ಆ ತಂದೆಯ ಮನಸ್ಸಿನಲ್ಲೂ ಹಾಗೆಯೇ ಆಗಿರಬಹುದು.
ಹಿಂದೂ ಧರ್ಮದಲ್ಲಷ್ಟೇ ಅಲ್ಲ, ಪ್ರತಿಯೊಂದು ಧರ್ಮಗ್ರಂಥದ ಕಥೆಗಳಲ್ಲಿ ಅನೈತಿಕ ಪ್ರಸಂಗಗಳು ತುಂಬಿಹೋಗಿವೆ. ಜನರು ಅನ್ನುವ ತಮ್ಮ ತಪ್ಪು ಕೆಲಸಗಳಿಗಾಗಿ ಧರ್ಮ ಸಮೇತ ಎಂದು ಸಿದ್ಧ ಮಾಡಲು ಬಳಸಿಕೊಳ್ಳುತ್ತಾರೆ. ಯಾವುದಾದರೂ ಪ್ರಭಾವಿ ವ್ಯಕ್ತಿ, ರಾಜ, ಶ್ರೀಮಂತ ವ್ಯಕ್ತಿ ಯಾವುದಾದರೂ ತಪ್ಪು ಕಾರ್ಯಕ್ಕೆ ಧರ್ಮದ ಗುತ್ತಿಗೆದಾರನಿಗೆ ಪ್ರಶ್ನೆ ಮಾಡಿದಾಗ, ಈ ರೀತಿಯ ಯಾವುದಾದರೂ ಕಥೆ ಹೇಳಿ ಅದನ್ನು ಧರ್ಮ ಸಮ್ಮತ ಎಂದು ಬಣ್ಣಿಸಲಾಗುತ್ತದೆ.
ಅನೈತಿಕ ಕೆಲಸಗಳಿಗೆ ಕುಮ್ಮಕ್ಕು ಕೊಡುವಲ್ಲಿ ಧರ್ಮದ ಪಾತ್ರ ಕಡಿಮೆ ಏನಿಲ್ಲ ಮತ್ತು ಮನುಷ್ಯನ ಹಸಿವನ್ನು ಧರ್ಮವೇ ತಮ್ಮ ರೀತಿಯಲ್ಲಿ ಉದ್ದೇಶಿಸಿದೆ. ಆ ಕಾರಣದಿಂದ ಮಂಗೋಲ ರಾಜ ಚಂಗೇಜ್ ಖಾನ್ ತೈಮೂರ್ ಲಂಗ್ ಮತ್ತು ಅಡಾಲ್ಫ್ ಹಿಟ್ಲರ್ ನಂಥ ಆಕ್ರಮಣಕಾರರು ಹುಟ್ಟಿಕೊಂಡರು. ಈಗ ವ್ಲಾದಿಮಿರ್ ಪುಟಿನ್ ಯಾ ರೀತಿಯಲ್ಲಿ ಉಕ್ರೇನ್ ನಲ್ಲಿ ತನ್ನ ಆರ್ಥೋಡಾಕ್ಸ್ ಚರ್ಚ್ ನ ಸಲಹೆಯ ಮೇರೆಗೆ ಅನ್ಯಾಯ ಅತ್ಯಾಚಾರ ಆಗಲು ಅವಕಾಶ ಕೊಡುತ್ತಿದ್ದಾರೊ, ಅದೇ ರೀತಿಯಲ್ಲಿ ಭಾರತದಲ್ಲಿ ಎಲ್ಲೆಲ್ಲಿ ಏನೇನೂ ನಡೆಯುತ್ತದೊ, ಮಹಿಳೆಯರು ಹಾಗೂ ಕೆಳ ವರ್ಗದವರನ್ನು ಪಾಪದಲ್ಲಿ ಭಾಗಿ ಎಂದು ಭಾವಿಸಿ ಅವರೊಂದಿಗೆ ಭೇದಭಾವ ಮಾಡಲಾಗುತ್ತದೆ. ಘಟೋತ್ಕಚನಂತಹ ಕಥೆಗಳನ್ನು ಕೇಳಿಸಿ ಆಕ್ಷೇಪ ಎತ್ತುವವರ ಬಾಯಿ ಬಂದ್ ಮಾಡಿಸಲಾಗುತ್ತದೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿಕೆ, `ದೇಶ ಕೇ ಗದ್ದಾರೋಂತೊ ಗೋಲಿ ಮಾರೋ ಸಾಲೋ ಕೋ,’ ದೆಹಲಿ ಹೈಕೋರ್ಟ್ ತಮಾಷೆಯಲ್ಲಿ ಹೇಳಿದ ಮಾತು ಎಂದು ಹೇಳಿ, ಅದನ್ನು ಸಾಧಾರಣ ವಿಷಯ ಎಂದಿತು. ಅದೇ ರೀತಿ ಇಡೀ ಪ್ರಕರಣದಲ್ಲಿ ಪಾಂಡವರ ಸಲಹೆಗಾರ ಕೃಷ್ಣನ ವ್ಯವಹಾರವಿದೆ. ಅದನ್ನು ಅನುಜಾ ರಾಮಚಂದ್ರನ್ ರ ಪುಸ್ತಕದಲ್ಲಿ ಓದಬಹುದಾಗಿದೆ.
ತಮ್ಮ ರಕ್ಷಣೆಗಾಗಿ ಅಥವಾ ತಮಗಾಗಿ, ಹಣಕ್ಕಾಗಿ ತಮ್ಮವರನ್ನು ಬಲಿ ಕೊಡುವುದಾದರೆ ಅದು ತಮಾಷೆಯ ವಿಷಯವಲ್ಲ. ದೇಶದಲ್ಲಿ ಪ್ರತಿ ಸರ್ಕಾರಿ ವಿರೋಧಿಗಳು ದ್ರೋಹಿಗಳಲ್ಲಿ ಪ್ರತಿಯೊಬ್ಬ ನಾಗರಿಕರು ತಮ್ಮವರು. ತಮ್ಮವರಿಗಾಗಿ ಗುಂಡು ಹಾರಿಸುವ ಮಾತು ಆಡುವುದು ಹಾಗೂ ಹೈಕೋರ್ಟ್ ಅದನ್ನು ಹಗುರವಾಗಿ ಪರಿಗಣಿಸುವುದು ಅರ್ಥವಾಗದ ವಿಷಯ.
ಷೇರು ಮಾರುಕಟ್ಟೆ ಎಂಬ ಸುಳಿ
ಸಾಮಾನ್ಯ ಮನೆಗಳ ಉಳಿತಾಯವನ್ನು ಒಗ್ಗೂಡಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಮಾರ್ಚ್ ರಲ್ಲಿ ಇದ್ದ 4.08 ಕೋಟಿ ಡಿಮ್ಯಾಟ್ ಖಾತೆಗಳ ಸಂಖ್ಯೆ 2021ರಲ್ಲಿ 8.05 ಕೋಟಿಗೆ ತಲುಪಿದೆ. ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಲು ಡಿಮ್ಯಾಟ್ ಖಾತೆ ತೆರೆಯುವುದು ಅತ್ಯವಶ್ಯ. ಇದನ್ನು ಯಾವ ಕಂಪನಿಗಳು ತೆರೆಯುತ್ತವೋ ಅವು ಮೊದಲ ದಿನವೇ ಯಾವುದೇ ವ್ಯವಹಾರ ನಡೆಸದೆ ಸಾವಿರಾರು ರೂ. ಗಳನ್ನು ತಮ್ಮ ಜೇಬಿಗಿಳಿಸುತ್ತವೆ. ಆದಾಗ್ಯೂ ಈ ಖಾತೆಗಳ ಹೆಚ್ಚಳ ಜನರ ಹಸಿ ಹಾಗೂ ದುರಾಸೆಯನ್ನು ತೋರಿಸುತ್ತದೆ.
ಈಗ ಪ್ರತಿ ನಗರ, ಪಟ್ಟಣಗಳಲ್ಲಿ ಷೇರು ದಲ್ಲಾಳಿಗಳ ಆಫೀಸುಗಳು ತೆರೆಯುತ್ತವೆ. ಬ್ಯಾಂಕುಗಳ ಕಡಿಮೆ ಬಡ್ಡಿದರಕ್ಕೆ ಬೇಸತ್ತು ಮಹಿಳೆಯರು ಕೂಡ ಈಗ ಷೇರುಗಳಲ್ಲಿ ಹಣ ಹೂಡಿಕೆ ಮಾಡಲಾರಂಭಿಸಿದ್ದಾರೆ. ದೇಶದ ಆರ್ಥಿಕ ಬೆಳವಣಿಗೆ ಹೆಚ್ಚು ಕಡಿಮೆ ನಿಂತಿದೆ. ತೆರಿಗೆ ಹೆಚ್ಚಿರಬಹುದು ಮನೆ ಬಾಡಿಗೆಯ ಆದಾಯ ಕುಗ್ಗಿರಬಹುದು. ಆದರೆ ಷೇರು ಮಾರುಕಟ್ಟೆ ಉತ್ತುಂಗದಲ್ಲಿರುವುದು ಆಶ್ಚರ್ಯದ ಸಂಗತಿ.
ವಾಸ್ತವದಲ್ಲಿ ಷೇರು ಮಾರುಕಟ್ಟೆ ವ್ಯವಸ್ಥಿತಿ ಲಾಟರಿ ಆಗಿಬಿಟ್ಟಿದೆ. ಕಂಪನಿಗಳು ಜನತೆಯ ಹಣ ಲೂಟಿ ಮಾಡಲು ಏನೇನೊ ಯೋಜನೆ ಮಾಡುತ್ತವೆ. ಪ್ರತಿಯೊಂದು ಕಂಪನಿಗಳು ಷೇರುಗಳ ಬೆಲೆ ಒಮ್ಮೆ ಹೆಚ್ಚಿಸುತ್ತಾದರೆ, ಮತ್ತೊಮ್ಮೆ ಬೆಲೆ ಕಡಿಮೆ ಮಾಡುತ್ತವೆ. ಬೆಲೆ ಕಡಿಮೆಯಾದಾಗ ಜನ ಗಾಬರಿಗೊಂಡು ಷೇರು ಮಾಡುತ್ತಾರೆ. ಬೆಲೆ ಹೆಚ್ಚಿದಾಗ, ಖರೀದಿಗೆ ಮುಗಿಬೀಳುತ್ತಾರೆ. ಇದರ ಪರಿಣಾಮ ಏನಾಗುತ್ತದೆಂದರೆ, ಚಿಕ್ಕ ಹೂಡಿಕೆದಾರ ಹಣ ಕಳೆದುಕೊಳ್ಳುತ್ತಾನೆ. ಇಲ್ಲಿ ಒಂದಿಷ್ಟು ಗಳಿಸುತ್ತಾನೆ. ಆದರೆ ಕಂಪನಿಗಳ ಮಾಲೀಕರು, ಬ್ರೋಕರ್, ಏಜೆಂಟರು, ಬ್ಯಾಂಕ್ ಡಿಮ್ಯಾಟ್ ಖಾತೆ ನಡೆಸುವವರು, ಕ್ವಾಲಿಟಿ ರೇಟಿಂಗ್ ಕೊಡುವ ಕಂಪನಿಗಳು ಹಣ ಗಳಿಸುತ್ತವೆ.
ಷೇರು ಮಾರುಕಟ್ಟೆ ಒಂದು ರೀತಿಯ ಸುಳಿಯಂತೆ. ಯಾವುದೇ ಕಂಪನಿ ನಡೆಸಲು ಸಾಮಾನ್ಯ ಜನರ ಮುಖಾಂತರ ಚಿಕ್ಕಪುಟ್ಟ ಹೂಡಿಕೆಯ ಮೂಲವಾಗಿದೆ. ಸರ್ಕಾರಗಳು ಈ ಆದಾಯದ ಮೂಲವನ್ನು ಒಳ್ಳೆಯ ಮೂಲವೆಂದು ಭಾವಿಸಿದೆ. ಏಕೆಂದರೆ ಸರ್ಕಾರಗಳಿಗೆ ದಲ್ಲಾಳಿಗಳಿಂದ ಆದಾಯ ತೆರಿಗೆ ಮೂಲಕ ಸಾಕಷ್ಟು ಹಣ ದೊರಕುತ್ತದೆ.
ಷೇರು ಮಾರುಕಟ್ಟೆ ದಶಕಗಳಿಂದ ಹಣ ಉಳ್ಳವರು ಹಾಗೂ ಸಾಮಾನ್ಯ ಜನರನ್ನು ಲೂಟಿ ಮಾಡುವ ಸುಲಭ ವಿಧಾನವಾಗಿದೆ. ಈಗ ಈ ಆಟ ಅಂತಾರಾಷ್ಟ್ರೀಯ ಆಗಿಬಿಟ್ಟಿದೆ. ಷೇರು ಮಾರುಕಟ್ಟೆಯ ತಜ್ಞರು ಟಿವಿ ಕಾರ್ಯಕ್ರಮಗಳ ಮೂಲಕ ಕಂಪನಿಗಳ ಭವಿಷ್ಯ ಹೇಗೆ ನುಡಿಯುತ್ತಾರೆಂದರೆ, ಜ್ಯೋತಿಷಿಗಳು ಕೈ ಹಿಡಿದು ಭವಿಷ್ಯ ಹೇಳುವಂತೆ, ಯಾರು ಧರ್ಮ ಭಕ್ತಿಯಲ್ಲಿ ನಂಬಿಕೆ ಇಟ್ಟಿರುತ್ತಾರೊ, ಅವರು ಷೇರು ಮಾರುಕಟ್ಟೆಯ ಮೇಲೆ ಹೆಚ್ಚು ನಂಬಿಕೆ ಇಡುತ್ತಾರೆ. ಯಾರು ಷೇರು ಮಾರುಕಟ್ಟೆಯಲ್ಲಿ ನಂಬಿಕೆ ಇಟ್ಟಿರುತ್ತಾರೋ, ಅವರು ವರ್ಷಕ್ಕೆ 10-12 ಸಲ ತೀರ್ಥ ಯಾತ್ರೆಗೆ ಹೊರಡುತ್ತಾರೆ.
ಇದೊಂದು ಮಾಯೆ, ಇದಕ್ಕೆ ಎಲ್ಲರೂ ಮೋಹಿತರಾಗುತ್ತಾರೆ. ಷೇರು ಮಾರುಕಟ್ಟೆ ಕೋಹಿನೂರ್ ವಜ್ರದಂತೆ ಕೆಲಸಕ್ಕೆ ಬಾರದಿದ್ದರೂ ಅದು ಹೊಳೆಯುವುದಂತೂ ಖಚಿತ.
ಮಹಿಳೆಯರು ಮಕ್ಕಳನ್ನಾದರೂ ನೋಡಿ….
ಭಾಜಪಾ ಸರ್ಕಾರ ನ್ಯಾಷನಲ್ ಲ್ಯಾಂಡ್ ಮಾನಿಟೈಜೇಶನ್ ಕಾರ್ಪೊರೇಶನ್ ರೂಪಿಸಿದ್ದು, ಅದರ ಕೆಲಸ ದೇಶಾದ್ಯಂತ ಪಸರಿಸಿರುವ ಕೇಂದ್ರ ಸರ್ಕಾರದ ಅಧೀನದ ಜಮೀನಿನ ಲೆಕ್ಕಾಚಾರ ಇಡುವುದು ಹಾಗೂ ಮಾರಾಟ ಮಾಡುವುದಾಗಿದೆ. ಸರ್ಕಾರ ಇತ್ತೀಚೆಗೆ ಜನತೆಯಿಂದ ಹಣ ಸಂಗ್ರಹಿಸುವಲ್ಲಿ ನಿರತವಾಗಿದೆ. ಹಿಂದಿನ ಸರ್ಕಾರಗಳು ಕಡಿಮೆ ದರದಲ್ಲಿ ಖರೀದಿಸಿದ ಜಮೀನನ್ನು ದುಬಾರಿ ದರಕ್ಕೆ ಮಾರಲು ಯತ್ನಿಸುತ್ತಿದೆ. ಈಗ ಮಾರಾಟ ಆಗು ಜಮೀನಿನಲ್ಲಿ ಕಾಂಕ್ರೀಟ್ ಕಾಡು ಜನ್ಮ ತಳೆಯುತ್ತದೆ. ಅವುಗಳಲ್ಲಿ ಹೆಚ್ಚಿನ ಪಟ್ಟಣ, ನಗರಗಳಲ್ಲಿ ಇರುತ್ತವೆ.
ಸರ್ಕಾರಿ ಭೂಮಿ ಪಾಳು ಬಿದ್ದಿರಬಾರದು ಎಂದು ಯೋಚಿಸುವುದು ಸೂಕ್ತ. ಆದರೆ ಅಂಥ ಸ್ಥಳದಲ್ಲಿ ಕಾಂಕ್ರೀಟ್ ಕಾಡುಗಳು, ಆಫೀಸು, ಫ್ಯಾಕ್ಟರಿಗಳು ಬರುವುದು ತಪ್ಪು. ಈಗಲೇ ನಗರ ಪ್ರದೇಶಗಳು ಮಾಲಿನ್ಯದಿಂದ ತತ್ತರಿಸಿ ಹೋಗಿವೆ. ಸರ್ಕಾರ ಇಲ್ಲಿ ಹೊಗೆ ಉತ್ಪನ್ನ ಮಾಡುವ ಯಂತ್ರಗಳನ್ನು ಅಳವಡಿಸಲು ಯೋಜನೆ ಮಾಡುತ್ತಿದೆ. ನಗರಗಳಲ್ಲಿ ವಾಸಿಸುವ ಜನರಿಗೆ ನಿರಾಳತೆ ನೀಡುವ ಬದಲು ಸರ್ಕಾರದ ಈ ನಿರ್ಧಾರ ಆಘಾತಕಾರಿಯಾಗಿದೆ.
ಇಂತಹ ಭೂಮಿಯಲ್ಲಿ ಮರ ಬೆಳೆಸಿ ಅವನ್ನು ಸಣ್ಣ ಸಣ್ಣ ಅರಣ್ಯಗಳಾಗಿ ಬದಲಿಸಬೇಕು. ಸರ್ಕಾರ ಅರಣ್ಯಗಳನ್ನಂತೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಕೃಷಿ ಭೂಮಿಯಲ್ಲಿ ಇಂದಿನ ಬೆಲೆಯಲ್ಲಿ ಪರಿಹಾರ ಕೊಟ್ಟು ಅಲ್ಲಿ ಕಾಡು ಬೆಳೆಯುತ್ತಿಲ್ಲ. ಹೀಗಾಗಿ ಯಾರ ಬಳಿ 100-200 ಮೀಟರ್ ಭೂಮಿ ಇರಬಹುದು ಅಥವಾ 2 ಲಕ್ಷ ಮೀಟರ್ ಜಾಗ ಇರುತ್ತದೊ ಅಲ್ಲಿ ನಿರ್ಮಿಸಿದ ತೋಟ ಹಾಗೂ ಕಾಡು ಮನಸ್ಸಿಗೆ ಹಿತನ್ನುಂಟು ಮಾಡುವಂಥದ್ದಾಗಿರುತ್ತದೆ.
ನಗರೀಕರಣಂತೂ ಅನಿವಾರ್ಯ ಪ್ರಕ್ರಿಯೆಯಾಗಿದೆ. ಭೂಮಿಯ ಬೆಲೆ ಏರುತ್ತಿರುವುದು ಹಲವರಿಗೆ ಜನದಟ್ಟಣೆಯ ಪ್ರದೇಶದಲ್ಲಿ ಇರುವುದು ಕೂಡ ಅನಿವಾರ್ಯವಾಗಿದೆ. ಅವರಿಗೆ ಉದ್ಯಾನವನದಲ್ಲಿ ಉಸಿರಾಡಲು ಅವಕಾಶ ಸಿಕ್ಕರೆ ನೆಮ್ಮದಿ ತರುವ ವಿಷಯವಾಗುತ್ತದೆ.
ಈಗ ಇದು ದೇಶದ ಮಹಿಳೆಯರನ್ನು ಅವಲಂಬಿಸಿದ್ದು, ಈ ವಿಷಯದ ಬಗ್ಗೆ ಅರಿಯಬೇಕು. ಮಾನಿಟೈಜೇಶನ್ ನ ಅರ್ಥ ತಿಳಿಯಬೇಕಿದೆ. ಸರ್ಕಾರಿ ಕಛೇರಿಗಳ ಹಿಂದೆ ಮುಂದೆ ಇರುವ ಖಾಲಿ ಜಮೀನಿನಿಂದ ಅವರಿಗೆ ಅಷ್ಟಿಷ್ಟು ಉಸಿರಾಡಿಸಲು ಅವಕಾಶ ಕೊಡುತ್ತದೆ. ಆ ಜಮೀನು ಮಾರಾಟವಾಗಿಬಿಟ್ಟರೆ, ಅಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣವಾದರೆ ಅದು ಉಸಿರುಗಟ್ಟಿಸುತ್ತದೆ. ಪುರುಷರಿಗೆ ಇದು ಅಷ್ಟೇನೂ ವ್ಯತ್ಯಾಸ ಮೂಡಿಸದು. ಅವರಿಗೆ ಮಕ್ಕಳನ್ನು ಪಾಲಿಸಬೇಕಾದ, ಆಟ ಆಡಿಸುವ ಜಾಗ ಹುಡುಕಬೇಕಾದ ಅವಶ್ಯಕತೆ ಉಂಟಾಗುವುದಿಲ್ಲ. ಸರ್ಕಾರ ಲ್ಯಾಂಡ್ ಮಾನಿಟೈಜೇಶನ್ ಮಾಡುತ್ತಿಲ್ಲ, ಲ್ಯಾಂಡ್ ಪಾಯಿಸ್ ನೇಶನ್ ಮಾಡುತ್ತಿದೆ. ಅದಕ್ಕೆ ತುತ್ತಾಗುತ್ತಿರುವವರು ಮಕ್ಕಳು ಹಾಗೂ ಮಹಿಳೆಯರು.