‘ಹುಣಸೆಮರಕ್ಕೆ ಮುಪ್ಪಾದರೇನು ಹುಳಿಗೆ ಮುಪ್ಪೇ’ ಅನ್ನೋ ಗಾದೆಮಾತನ್ನ ನೀವು ಕೇಳಿರ್ತೀರಿ. ಇದೀಗ ಅದಕ್ಕೆ ತಕ್ಕಂತೆ ಮತ್ತೊಂದು ನಾಣ್ಣುಡಿ ಹುಟ್ಟಿಕೊಂಡಿದೆ. ‘ವಯಸ್ಸಿಗೆ ಮುಪ್ಪಾದರೇನು ಸೌಂದರ್ಯಕ್ಕೆ ಮುಪ್ಪೇ’ ಅನ್ನೋದು ಹೊಸ ಮಾತಾಗಿದೆ. ಈ ಸಾಲು ಬಾಲಿವುಡ್​​ನ ಖ್ಯಾತ ನಟಿ.. ಎವರ್​​ಗ್ರೀನಿ ತಾರೆ ಊರ್ಮಿಳಾ ಮಾತೊಂಡ್ಕರ್​​ಗೆ ಸಲ್ಲಲೇಬೇಕು. ಯಾಕಂದ್ರೆ ಅಂಥಾ ಚಲುವಿನ ಸೊಬಗನ್ನ ಮೈತುಂಬಾ ಹೊತ್ತುಕೊಂಡಿರೋ ಸುಂದರಿ ಅಂದ್ರೆ ತಪ್ಪಾಗ್ಲಿಕ್ಕಿಲ್ಲ.

URMILA (3)

90ರ ದಶಕದಲ್ಲಿ ಬಾಲಿವುಡ್​​​​​​ನ್ನ ಆಳಿದ ಈ ಬ್ಯೂಟಿಗೆ ಇನ್ನೂ ವಯಸ್ಸೇ ಆಗಿಲ್ಲ. ನಟಿ ಊರ್ಮಿಳಾಗೆ ಇವತ್ತು 51ನೇ ಹುಟ್ಟುಹಬ್ಬ. ಈಗಲೂ ಕೂಡ ಊರ್ಮಿಳಾ ನೋಡ್ತಿದ್ರೆ ಅದೇ ರಂಗೀಲಾ ನೆನಪಾಗುತ್ತೆ. ನಟ ಜಾಕಿಶ್ರಾಪ್​ ಜೊತೆ ರೊಮ್ಯಾನ್ಸ್​ ಸೀನ್​ನಲ್ಲಿ ಕಾಣಿಸಿಕೊಂಡ ಊರ್ಮಿಳಾ ಮತ್ತೆ ಮತ್ತೇರಿಸುವಂತೆ ಕಾಣಿಸುತ್ತಾರೆ. ಈ ಕ್ಷಣದವರೆಗೂ ಅದೇ ಬ್ಯೂಟಿ.. ಅದೇ ಮೈಮಾಟ.. ಅದೇ ನೋಟವನ್ನ ಮೇಂಟೇನ್​ ಮಾಡಿರೋ ಊರ್ಮಿಳಾ ಅದೆಷ್ಟೋ ಹುಡುಗರ.. ಅಂಕಲ್​ಗಳ ರೂಂಗಳಲ್ಲಿ ಈಗಲೂ ಪೋಸ್ಟರ್​ಗಳಲ್ಲಿ ರಾರಾಜಿಸುತ್ತಿದ್ದಾರೆ.

URMILA (10)

ಅಂದು ಇದೇ ಊರ್ಮಿಳಾ ಫೋಟೋವನ್ನ ಪರ್ಸ್​​ನಲ್ಲಿ ಇಟ್ಟುಕೊಳ್ತಿದ್ದ ಹುಡುಗರಿಗೆ ವಯಸ್ಸಾಗಿ ಹೋಗಿಬಿಟ್ಟಿದೆ. ಆದ್ರೆ, ಈ ಚೆಲುವೆ ಮಾತ್ರ ಹಾಗೇ ಯಂಗ್​​ ಆಗೇ ಇದಾರೆ. ತನ್ನ 3ನೇ ವಯಸ್ಸಿಗೆ ಬಾಲನಟಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಊರ್ಮಿಳಾ ಜೀವನದಲ್ಲಿ ಅದೆಷ್ಟೋ ಪ್ರೀತಿಯ ಪುಟಗಳು ತೆರೆದು ಮುಚ್ಚಿಹೋಗಿವೆ.

URMILA (1)

ನಿರ್ದೇಶಕರ ಜೊತೆಗಿನ ಅಫೇರ್​​ ಸುದ್ದಿ ಬಳಿಕ ರಾಮ್​​ಗೋಪಾಲ್ ವರ್ಮಾ ಜೊತೆಗೂ ಸಾಕಷ್ಟು ಸುದ್ದಿಯಾಗಿದ್ದರು. ಬಳಿಕ ತನಗಿಂತ 10 ವರ್ಷದ ಚಿಕ್ಕ ವಯಸ್ಸಿನ ಹುಡುಗನ ಜೊತೆ ಮದ್ವೆ ಆಗಿದ್ದರು. ಆದ್ರೀಗ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ತಮ್ಮ 8 ವರ್ಷದ ದಾಂಪತ್ಯ ಜೀವನ ಅಂತ್ಯ ಮಾಡುವ ಸೂಚನೆ ನೀಡಿದ್ದರು.

URMILA (4)

2016ರ ಫೆಬ್ರವರಿ 4ರಂದು ಕಾಶ್ಮೀರ ಮೂಲದ ಉದ್ಯಮಿ ಹಾಗೂ ಮಾಡೆಲ್​​ ಮೊಹ್ಸಿನ್ ಅಖ್ತರ್​ ಮಿರ್​ ಜೊತೆ ಅಂತರ್​ಧರ್ಮೀಯ ಮದುವೆಯಾದ ಊರ್ಮಿಳಾ ಸಾಕಷ್ಟು ಸುದ್ದಿಯಾಗಿದ್ದರು. 10 ವರ್ಷದ ಅಂತರದ ಜೊತೆ ಕೆಲವೇ ಕೆಲವರನ್ನು ವಿವಾಹಕ್ಕೆ ಆಮಂತ್ರಿಸಿದ್ದು ಕೂಡ ಗಲ್ಲಿ ಗುಸುಗುಸುಗೆ ಕಾರಣವಾಗಿತ್ತು.

URMILA (6)

ಇದೀಗ ಆ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು ಊರ್ಮಿಳಾ, ತಮ್ಮ ಪತಿ ಮೊಹ್ಸಿನ್ ಅಖ್ತರ್ ಮಿರ್‌ನಿಂದ ವಿಚ್ಛೇದನ ಬೇಕು ಅಂತ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

URMILA (8)

ಸದ್ಯ 51 ವರ್ಷದ ನಟಿ ಸೋಷಿಯಲ್ ಮಿಡಿಯಾದಲ್ಲಿ ರಂಗುರಂಗಿನ ಡ್ರೆಸ್​​​ಗಳ ಜೊತೆ ವಿವಿಧ ಭಂಗಿಗಳ ಫೋಟೋ ಹಾಕ್ತಿದ್ದು ಎಲ್ಲರಲ್ಲೂ ಮತ್ತೆ ಕಿಚ್ಚು ಹೊತ್ತಿಸುತ್ತಿದ್ದಾರೆ. ಸೀರೆಯಲ್ಲಾಗಲಿ.. ಶಾರ್ಟ್​​ ಡ್ರೆಸ್​ಗಳಲ್ಲಾಗಲಿ.. ಸಲ್ವಾರ್​ಲ್ಲಾಗಲಿ.. ಅದೆಂಥದ್ದೇ ಡ್ರೆಸ್​ ಹಾಕಿದ್ರೂ ಬಳುಕುವ ಬಳ್ಳಿಯಂತೆ.. ನವಿಲಿನ ನಡೆಯಂತೆ ಆಕರ್ಷಕವಾಗಿ ಕಾಣುತ್ತಿದ್ದಾರೆ.

URMILA (5)

ಅಚ್ಚರಿ ಅಂದ್ರೆ ಕಾರ್ಯಕ್ರಮಗಳಲ್ಲಿ ಊರ್ಮಿಳಾ ಭಾಗಿಯಾಗಿದ್ರೆ, ಆಕೆಗಿಂತ ಚಿಕ್ಕ ವಯಸ್ಸಿನ ಸೆಲಬ್ರೆಟಿಗಳು ಬಂದಿದ್ರೂ ಕೂಡ ಇಡೀ ಕಾರ್ಯಕ್ರಮದ ಸಭಿಕರ ಕೇಂದ್ರಬಿಂದು ಊರ್ಮಿಳಾನೇ ಅನ್ನೋದು ಹಲವರ ಮಾತು. ಆದ್ರೆ, ನಟಿ ಊರ್ಮಿಳಾ ಮಾತೊಂಡ್ಕರ್​​, ತಮ್ಮ 51ನೇ ವಯಸ್ಸಿನಲ್ಲಿ ಪತಿಗೆ ವಿಚ್ಛೇದನ ಕೊಟ್ಟು ಮುಂದೇನು ಮಾಡ್ತಾರೆ ಅನ್ನೋದು ಸದ್ಯ ಎಲ್ಲರ ಕುತೂಹಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ