ಕೆಲವರ ಬ್ಯೂಟಿನೇ ಹಾಗೆ. ವಯಸ್ಸು ಆಗುತ್ತಾ ಇದ್ರೂ ಸೌಂದರ್ಯ ಜಾಸ್ತಿ ಆಗ್ತಾನೇ ಇರುತ್ತೆ. ಮಾಜಿ ಮಿಸ್ ವರ್ಲ್ಡ್​​​​.. ಕರುನಾಡಿನ ಕರಾವಳಿ ಬೆಡಗಿ ಬಾಲಿವುಡ್ ನಟಿ ಐಶ್ವರ್ಯ ರೈ ಕೂಡ ಇದರಿಂದ ಹೊರತಾಗಿಲ್ಲ. ಬಾಲಿವುಡ್​​ ಬಿಗ್​ ಬಿ ಅಮಿತಾಬ್​ ಬಚ್ಚನ್ ಪುತ್ರ ನಟ ಅಭಿಷೇಕ್ ಬಚ್ಚನ್ ಅವರನ್ನ ಮದ್ವೆ ಆಗಿ ಆರಾಧ್ಯ ಬಚ್ಚನ್​​ ಅನ್ನೋ ಮಗಳನ್ನ ಹೊಂದಿರುವ ಐಶ್ವರ್ಯಾ ರೈ ಬಚ್ಚನ್​ಗೆ ಈಗ 51 ವರ್ಷ. ಆದ್ರೂ ಆ ಮೋಹಕತೆ ಇನ್ನೂ ಮಾಗಿಲ್ಲ.

AISHWARYA RAI (1)

ಕೆಲ ತಿಂಗಳ ಹಿಂದಷ್ಟೇ ಪತಿ ಅಭಿಷೇಕ್​ ಬಚ್ಚನ್​ ಜೊತೆಗಿನ ಐಶ್ವರ್ಯಾ ಸಂಸಾರ ಚೆನ್ನಾಗಿಲ್ಲ.. ಇನ್ನೇನು ಡಿವೋರ್ಸ್​ ಕೊಟ್ಟೇಬಿಡ್ತಾರೆ.. ಐಶ್ವರ್ಯಾ ರೈ ಅಭಿಷೇಕ್ ಬಿಟ್ಟು ದೂರ ವಾಸ ಮಾಡ್ತಿದ್ದಾರೆ.. ಬಚ್ಚನ್ ಫ್ಯಾಮಿಲಿಯಲ್ಲಿ ಅಲ್ಲೋಲ ಕಲ್ಲೋಲ ಅನ್ನೋ ಅಂತೆ ಕಂತೆಗಳ ಸುದ್ದಿ ಬಾಲಿವುಡ್​ ಸಂತೆಯಲ್ಲಿ ಭಾರೀ ಸದ್ದು ಮಾಡಿತ್ತು. ಆದ್ರೀಗ ಆ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದೆ. ಪತಿ ಅಭಿಷೇಕ್ ಬಚ್ಚನ್​, ಪುತ್ರಿ ಆರಾಧ್ಯ ಬಚ್ಚನ್​, ಮಾವ ಅಮಿತಾಬ್​ ಬಚ್ಚನ್ ಜೊತೆ ನಟಿ ಐಶ್ವರ್ಯ ರೈ ಸುಖವಾಗಿದ್ದಾರೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಆ ಎಲ್ಲಾ ಸುಳ್ಳು ಸುದ್ದಿಗೆ ತೆರೆ ಎಳೆದಿದ್ದರು.

AISHWARYA RAI (4)

ಬಹಳ ವರ್ಷಗಳಿಂದ ಬಾಲಿವುಡ್​ ಸಿನಿಮಾಗಳಿಂದ ಗ್ಯಾಪ್ ಕೊಟ್ಟಿದ್ದರು. ಅದಕ್ಕೂ ಮುನ್ನ ನೂರಾರು ಮೂವಿಗಳಲ್ಲಿ ನಟಿಸಿ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದ್ರೂ ಕೂಡ ಐಶ್ವರ್ಯಾ ರೈ ಸೋಷಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿರ್ಲಿಲ್ಲ. ಆದ್ರೂ ಕೂಡ ಆ ನಂತರ ಇನ್​ಸ್ಟಾಗ್ರಾಮ್​ ಖಾತೆಯನ್ನು ಓಪನ್ ಮಾಡಿದ್ದರು.

AISHWARYA RAI (1)

ಇದೀಗ ಐಶ್ವರ್ಯಾ ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 1 ಕೋಟಿ 46 ಲಕ್ಷ ಅಂದ್ರೆ 14.6 ಮಿಲಿಯನ್​​​ ಹಿಂಬಾಲಕರನ್ನ ಹೊಂದಿದ್ದಾರೆ. ಇದು ಎವರ್​ಗ್ರೀನ್ ಬ್ಯೂಟಿ ಕ್ವೀನ್​​.. ಮಾಜಿ ಮಿಸ್ ವರ್ಲ್ಡ್​​ ಅಭಿಮಾನಿಗಳಿಗೆ ಭಾರೀ ಖುಷಿ ಕೊಟ್ಟಿದೆ. ಮತ್ತೊಂದು ವಿಶೇಷ ಅಂದ್ರೆ, ಅಷ್ಟೂ ಜನರನ್ನ ಫಾಲೋವರ್ಸ್​ ಹೊಂದಿದ್ರೂ ಕೂಡ ಕೇವಲ ಒಬ್ಬರೇ ಒಬ್ಬರನ್ನು ಮಾತ್ರ ಐಶ್ವರ್ಯಾ ಫಾಲೋ ಮಾಡ್ತಿದ್ದಾರೆ. ಅವರು ಯಾರು ಅಂದ್ರೆ ಅವರೇ ಪತಿ ಅಭಿಷೇಕ್ ಬಚ್ಚನ್​.

AISHWARYA RAI (8)

ಇನ್​ಸ್ಟಾಗ್ರಾಮ್​​ನಲ್ಲಿ ಒಂದು ಕೋಟಿ 46 ಲಕ್ಷ ಮಂದಿ ಹಿಂಬಾಲಕರನ್ನು ಹೊಂದಿರುವ ನಟಿ ಐಶ್ವರ್ಯಾ ರೈ, ಪತಿಯನ್ನು ಮಾತ್ರ ಫಾಲೋ ಮಾಡುವ ಮೂಲಕ ಅಭಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಬೇರೆ ಯಾರನ್ನೂ ಫಾಲೋ ಮಾಡದೇ ತಾಳಿ ಕಟ್ಟಿದ ಗಂಡನೇ ನನಗೆ ಹೀರೋ.. ಆತನೇ ಸರ್ವಸ್ವ ಅನ್ನೋ ಮೆಸೇಜ್ ಕೊಡುತ್ತಿದ್ದಾರೆ.

AISHWARYA RAI (11)

ಇತ್ತೀಚೆಗಷ್ಟೇ ಅಭಿಷೇಕ್ ಬಚ್ಚನ್ ಅವರ ಬಾಲ್ಯದ ಫೋಟೋನ ಹಂಚಿಕೊಂಡು ಪತಿಗೆ ವಿಶ್​ ಮಾಡಿದ್ದು ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ. ಏನೇ ಆದ್ರೂ ಕರುನಾಡಿನ ಕರಾವಳಿ ಬೆಡಗಿಯ ಈ ಹೆಜ್ಜೆ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದ್ದಷ್ಟೇ ಅಲ್ಲದೇ ಡಿವೋರ್ಸ್​ ಅಂತಾ ಸುಳ್ಳು ಸುದ್ದಿ ಹರಡಿಸೋ ಮಂದಿಯ ಬಾಯಿ ಮುಚ್ಚಿಸಿದಂತಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ