ನಿರಂತರ ಧರ್ಮ ಪ್ರಚಾರದ ಪರಿಣಾಮ ಏನಂತೀರಾ? ದೇಶವಿಡೀ ಆಯಾ ಧರ್ಮದವರು ತಂತಮ್ಮ ಮಂದಿರ, ಮಸೀದಿ, ಇಗರ್ಜಿ ಹುಡುಕುವುದಾಗಿದೆ, ರಿಲೀಜಯರ್ಸ್‌ ಟೂರಿಸಂ ಮಾತ್ರ ಹೆಚ್ಚುತ್ತಿವೆ. ಚಾರ್‌ ಧಾಮ್, ಕಾಶಿ ಕಾರಿಡಾರ್‌, ತಿರುಪತಿ ಮಾತ್ರವಲ್ಲದೆ ಸಣ್ಣಪುಟ್ಟ ದೇವತೆಗಳ ಪೂಜಾಸ್ಥಳಗಳು ಉದ್ಧಾರಗೊಳ್ಳುತ್ತಿವೆ. ಝಾರ್ಖಂಡ್‌ ನ ದೇವಘರದಲ್ಲಿ ಟ್ರಾಲಿಯ ದುರ್ಘಟನೆ, ಜನ ಕುರಿಮಂದೆಯಾಗಿ ಜಮಾಯಿಸಿದ್ದಕ್ಕೆ ಸಾಕ್ಷಿ. ಇಲ್ಲಿ ರೋಪ್‌ ವೇ ಟ್ರಾಲಿಯ ಬಳಕೆ ಧಾರಾಳ ಆಯ್ತು, ಆದರೆ ಅಗಣಿತ ಭಕ್ತರು ಪ್ರವೇಶಕ್ಕಾಗಿ ಸತತ ಬರುತ್ತಿದ್ದುದರಿಂದ, ಸಕಾಲಕ್ಕೆ ಅದರ ರಿಪೇರಿ ಆಗದೆ, ಏಪ್ರಿಲ್ ‌ನಲ್ಲಿ  ರೋಪ್‌ ವೇ ಕುಸಿದಿದ್ದರಿಂದ ಬಹುತೇಕರು ಸತ್ತರು.

ಧರ್ಮ ಪ್ರಚಾರದ ಕಾರಣದಿಂದಲೇ ಪ್ರವಾಸ ಅಂದ್ರೆ ತೀರ್ಥಯಾತ್ರೆ ಅಂತ ಆಗಿಹೋಗಿದೆ. ಹಿಂದೂ ಭಕ್ತರ ಪ್ರವಚನ, ಪಂಡಿತರು, ಟಿವಿಯ ಭಕ್ತಿ ಚಾನೆಲ್ ‌ಗಳಿಗೆ ಸೀಮಿತಗೊಳ್ಳದೆ, ನ್ಯೂಸ್‌ ಚಾನೆಲ್ ‌ಗಳಲ್ಲೂ ಮತ್ತೆ ಮತ್ತೆ ಇಂತಿಂಥ ದೇವಿದೇವತೆಯರ ದರ್ಶನ ಪಡೆದು ಧನ್ಯರಾಗಿ ಎಂದು ಹೇಳಲಾಗುತ್ತದೆ. ಇಂಥ ಕಡೆ ದಾನ ದಕ್ಷಿಣೆ ನೀಡಿ ಸಿದ್ಧಿ ಪಡೆಯಿರಿ, ಉಪವಾಸ ವ್ರತ ಮಾಡಿ ವ್ಯಾಪಾರ ಸುಧಾರಿಸಿ, ಸಾಂಸಾರಿಕ ಸಮಸ್ಯೆ ನಿವಾರಿಸಿಕೊಳ್ಳಿ ಅಂತಿದ್ದಾರೆ.

ಮುಖ್ಯವಾಗಿ ಹೆಂಗಸರನ್ನೇ ಇದಕ್ಕೆ ಟಾರ್ಗೆಟ್‌ ಮಾಡುತ್ತಾರೆ. ಸುಶಿಕ್ಷಿತ ಹೆಣ್ಣನ್ನೂ ಸಹ ಅಡುಗೆಮನೆಗಷ್ಟೇ ಸೀಮಿತಗೊಳಿಸುತ್ತಾ ವರ್ತಮಾನ ಭವಿಷ್ಯ ಬಂಗಾರವಾಗಿಸಲು ಪೂಜಾಗೃಹಕ್ಕೆ ತಳ್ಳುತ್ತಾರೆ. ಹಿಂದೆಲ್ಲ ತೀರ್ಥಸ್ಥಳಗಳಲ್ಲಿ ಮೌನ ತಾಂಡವವಾಡುತ್ತಿತ್ತು, ಅದೀಗ ಸಾವಿರಾರು ಭಕ್ತರು ನುಗ್ಗುವುದರಿಂದ ಗಿಜಿಗುಟ್ಟುತ್ತಿದೆ. ಏಕೆಂದರೆ ಇದಕ್ಕಾಗಿ ಸರ್ಕಾರಿ ಸರ್ಕಾರೇತರ ಪ್ರಚಾರಗಳು ಮುಗಿಲುಮುಟ್ಟಿವೆ. ಬೇರೆಯವರು ಹೋಗುತ್ತಿದ್ದಾರೆ ನಾವು ಏಕೆ ಹೋಗಬಾರದೆಂದೇ ಎಲ್ಲರೂ ಯೋಚಿಸುವಂತಾಗಿದೆ.

ಕ್ರೈಸ್ತ ಪ್ರಚಾರಕರು ವಿಶ್ವವಿಡೀ ಭಾನುವಾರ ಯಾರೂ ಕೆಲಸ ಮಾಡಬೇಡಿ, ಇಗರ್ಜಿಗಳಲ್ಲಿ ಮಂಡಿಯೂರಿ ಅಂತಾರೆ, ಹೋಗುವಾಗ ಅಗತ್ಯ ಹಣದ ಸಂಗ್ರಹಣೆ ಆಗುತ್ತದೆ. ಅಮೆರಿಕಾ ಕ್ರಮೇಣ ಹಿಂದುಳಿಯುತ್ತಿದೆ ಎಂದರೆ ಅದಕ್ಕೆ ಮೂಲಕಾರಣ ಅಲ್ಲಿನ ಕರಿಯ ಬಿಳಿಯ, ಧನಿಕ ಬಡವ ಎಂಬ ಭೇದಭಾವ ಹೆಚ್ಚುತ್ತಿರುವುದರಿಂದ. ಸಮಯ ಸಾಧಿಸಿ ಚೀನಾ, ಕೊರಿಯಾ ಅಲ್ಲಿನ ಅರ್ಥ ವ್ಯವಸ್ಥೆಯನ್ನು ಆಕ್ರಮಿಸುತ್ತಿದ್ದಾರೆ. ಇದಕ್ಕೆ ಪಾದ್ರಿಗಳ ಪ್ರಚಾರತಂತ್ರ ಕಳೆದ ದಶಕಗಳಲ್ಲಿ ಬಹಳ ಚುರುಕಾಗಿದೆ.

ರಷ್ಯಾದಲ್ಲೂ ಕಮ್ಯುನಿಸಂ ನಂತರ ಧರ್ಮ ಬೆಳೆಯಿತು. ಇಂದಿನ ರಷ್ಯಾ ಯೂಕ್ರೇನ್‌ ಯುದ್ಧದ ಹಿಂದೆ ಸಾಂಪ್ರದಾಯಿಕ ಚರ್ಚುಗಳ ಕಾರುಬಾರು ಜೋರಾಗಿದೆ. ಇದಕ್ಕೆ ರಷ್ಯಾ ಯೂಕ್ರೇನಿನ ಲಕ್ಷಾಂತರ ಹೆಂಗಸರು ಹಿಂಸೆಗೆ ಬಲಿಯಾಗುತ್ತಿದ್ದಾರೆ. ಗಂಡಮಗನನ್ನು ಕಳೆದುಕೊಂಡ ಹೆಂಗಸರ ಗೋಳು ಹೇಳತೀರದು.

ಆಫ್ಘಾನಿಸ್ತಾನದಲ್ಲಿ ಇಸ್ಲಾಮಿ ಪ್ರಚಾರತಂತ್ರದ ಪರಿಣಾಮವನ್ನು ಹೆಂಗಸರೇ ಅನುಭವಿಸುತ್ತಿದ್ದಾರೆ. ಶ್ರೀಲಂಕಾದಲ್ಲಿನ ಬೌದ್ಧ ಸಿಂಹಳಿ V/S ಹಿಂದೂ ತಮಿಳರ ಕಹಲಕ್ಕೆ ಆದಿ ಅಂತ್ಯವೇ ಇಲ್ಲ. ಗಲಾಟೆ ಮಿತಿ ಮೀರಿ ಇಂದು ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇವೆಲ್ಲ ಧರ್ಮಪ್ರಚಾರದ ಹಾನಿಯೇ ಸರಿ.

ಉತ್ತರದ ಕಡೆ ನವರಾತ್ರಿ ಸಂದರ್ಭದಲ್ಲಿ ಕೇವಲ ಇಂತಿಂಥ ವಿಶಿಷ್ಟ ಅಡುಗೆ ಮಾತ್ರ ಮಾಡಬೇಕೆಂದು ಕಟ್ಟಳೆ ವಿಧಿಸುವುದು ಹೆಂಗಸರಿಗೆ ಶಿಕ್ಷೆಯೇ ಸರಿ. ಪೂಜಾರಿಗಳಂತೂ ಇಂತಿಂಥ ವ್ರತದ ಅಡುಗೆಗಳೇ ಆಗಬೇಕೆಂದು ಆರ್ಡರ್‌ ನೀಡಿರುವುದರಿಂದ, 9 ದಿನಗಳೂ ಹೆಂಗಸರ ಪಾಡು ಹೇಳತೀರದು. ಧರ್ಮಕ್ಕೆ ಅಡುಗೆ ಮನೆಯಲ್ಲೇನು ಕೆಲಸ? ರಜೆ ಬಂದಾಗ ಯಾತ್ರೆಗೆ ಮೈಲಿಗಟ್ಟಲೆ ನಡೆದು ಹೋಗಿ ಗಂಟೆಗಟ್ಟಲೆ ದರ್ಶನಕ್ಕಾಗಿ ಕಾಯಿರಿ ಎಂಬಂತೆಯೇ!

ಸಮರ್ಥಕರು ಮಾತ್ರ ಇದನ್ನು ಸಾಹಸ, ಯಾಂತ್ರಿಕ ಕೆಲಸದಿಂದ ವಿಭಿನ್ನ, ಹಿಂದೂ ಸಂಸ್ಕೃತಿಯ ಸಂರಕ್ಷಣೆ ಎನ್ನುತ್ತಾರೆ. ಅಲ್ಲಿಗೆ ಹೋಗಿ ಹರಕೆಯ ಗೋಜಿಗೆ ಹೋಗದಿದ್ದಾಗ ಅದು ಪ್ರವಾಸ ಹೇಗಾದೀತು? ಪ್ರತಿ ರಿಲೀಜಿಯರ್ಸ್‌ ಟೂರಿಸಂ ಕೊನೆಗೊಳ್ಳುವುದೇ ಹರಕೆ, ಕೋರಿಕೆ, ದಾನದಕ್ಷಿಣೆಗಳ ಸಂದಾಯದಿಂದ. ಹೆಂಗಸರು ತಮ್ಮ ಕೌಟುಂಬಿಕ ಬಜೆಟ್‌ ನಿಂದಲೇ ಇದನ್ನು ತೆರಬೇಕಾಗುತ್ತದೆ!

ಇಲ್ಲಿ ಮೋಸ ಅನ್ಯಾಯಗಳು ರಾರಾಜಿಸುತ್ತಿವೆ

ಕಳೆದ 2 ದಶಕಗಳಿಂದ ಫೋಟೋಗ್ರಾಫ್‌, ಆಡಿಯೋ, ವಿಡಿಯೋ ಕ್ಲಿಪ್‌ ಗಳಲ್ಲಿ ಫ್ರಾಡ್‌ ಮಾಡಿ ರಾಜಕೀಯವಾಗಿ ಅವನ್ನು ದುರ್ಬಳಕೆ ಮಾಡಿಕೊಳ್ಳುವ ಒಂದು ಹೊಸ ಪರಿಪಾಠ ಶುರುವಾಗಿದೆ. ಅಧಿಕಾರದಲ್ಲಿ ಕುಳಿತ ಮಂದಿ ಇದರ ದೊಡ್ಡ ಲಾಭ ಪಡೆದಿದ್ದಾರೆ. ಹಿಂದೂ ಮುಸ್ಲಿಂ ಭೇದಭಾವ ಎತ್ತಿಹಿಡಿಯಲಾಗಿದೆ ಹಾಗೂ ಮೇಲು ಕೀಳು ಜಾತಿಯ ಬೆಂಕಿಗೆ ತುಪ್ಪ ಸುರಿಯಾಗುತ್ತಿದೆ. ವಿರೋಧ ಪಕ್ಷದ ನಾಯಕರ ಹೆಸರು ಕೆಡಿಸಿ, ಫೋಟೋಗ್ರಾಫ್‌ ವಿಡಿಯೋಗಳನ್ನು ಮನಬಂದಂತೆ ತಿರುಚಿ ಜೋಡಿಸಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಡಲಾಗಿದೆ. ಟೆಕ್ನಾಲಜಿಯನ್ನು ಹೀಗೆಲ್ಲ ದುರುಪಯೋಗಪಡಿಸಿಕೊಳ್ಳುವ ಈ  ಮಂದಿಯ ಚಾಕಚಕ್ಯತೆ ನಿಜಕ್ಕೂ ಅಪಾರ.

ಇದೇ ಹಿಂಸೆಯನ್ನು ಇಂದಿನ ಹೆಣ್ಣು ಹಲ್ಲು ಕಚ್ಚಿ ಎದುರಿಸಬೇಕಿದೆ. ದೆಹಲಿ ಸಮೀಪದ ಗಾಝಿಯಾಬಾದಿನ ಒಂದು ಟೆಕ್ಸ್ ಟೈಲ್ ಕಂಪನಿಯ ಪ್ರಬಂಧಕರು ಇಂಥದೇ ಚಕ್ರವ್ಯೂಹಕ್ಕೆ ಸಿಲುಕಿದರು. ಕೇಡಿಗಳು ಅವರ ಪತ್ನಿಯ ಆಧಾರ್‌, ಪ್ಯಾನ್‌ ಕಾರ್ಡ್‌ ನಿಂದ ಫೋಟೋ ತೆಗೆದು, ಒಂದು ಅಶ್ಲೀಲ ಚಿತ್ರದ ಜೊತೆ ಜೋಡಿಸಿ, ಪತಿಯ ನಂಬರ್‌ ಗೆ ಕಳುಹಿಸಿದರು. ಇಂಥ ಫೋಟೋ ವೈರಲ್ ಮಾಡದಿರಲು 5 ಲಕ್ಷ ರೂ.ಗಳ ಬ್ಲ್ಯಾಕ್‌ ಮೇಲ್ ‌ಗೆ ಇಳಿದರು.

ಆ ಹೆಂಗಸು ತನ್ನ ಫೋನ್‌ ನ್ನು ರಿಪೇರಿ ಮಾಡಿಸಲು ಒಬ್ಬ ಅಂಗಡಿಯವನಿಗೆ ಕೊಟ್ಟಿದ್ದಾಗ, ಅವನು ಅದರಲ್ಲಿನ ಎಲ್ಲಾ ಡೇಟಾ ಕಾಪಿ ಮಾಡಿಕೊಂಡಿರಬಹುದು. ಆದರೆ ಸದ್ಯಕ್ಕೆ ಮೆಕ್ಯಾನಿಕ್‌ ಈ ಆರೋಪನ್ನು ಅಲ್ಲಗಳೆದಿದ್ದಾನೆ.

ವಿಷಯ ಕೇವಲ ಈ ಹೆಂಗಸಿನದ್ದಲ್ಲ, ಇಂದಿನ ಟೆಕ್ನಾಲಜಿಯನ್ನು ಧರ್ಮದ ಹೆಸರಿನಲ್ಲಿ ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಳ್ಳುರ ಕಲೆ ಆಕಾಶಕ್ಕೆ ಏರಿದೆ. ಸರ್ಕಾರದ ಮಂದಿಯ ಸಮರ್ಥಕರು ಖುಲ್ಲಂಖುಲ್ಲ ಫೋಟೊ ವಿಡಿಯೋಗಳನ್ನು ಹೀಗೆ ತಿರುಚಿ ಜೋಡಿಸಿ ಕಾರ್ಯ ಸಾಧಿಸಿದರೆ ಇವರನ್ನು ಪೊಲೀಸ್‌, ಕೋರ್ಟ್‌, ಸರ್ಕಾರ ತಪ್ಪೇ ಮಾಡಿಲ್ಲ ಎಂಬಂತೆ ನಿರ್ಲಕ್ಷಿಸುತ್ತದೆ. ಹಾಗಿರುವಾಗ ನಿರುದ್ಯೋಗಿ ನಿಪುಣರು ಇಂಥ ಟೆಕ್ನಾಲಜಿಯನ್ನು ತಮ್ಮ ಸ್ವಾರ್ಥ ಸಾಧನೆಗಗಾಗಿ ಬಳಸಿಕೊಳ್ಳದೇ ಇರುತ್ತಾರೆಯೇ? ಶತ್ರುಗಳಿಗಾಗಿ ತಯಾರಿಸಲಾದ ಗನ್‌ ತಮ್ಮವರಿಗೂ ಕೇಡು ಮಾಡಬಹುದು ಎಂಬುದು ಗೊತ್ತಿರುವ ವಿಚಾರ. ಇದಕ್ಕೆ ಪ್ರತ್ಯಕ್ಷ ಉದಾ ಅಂದ್ರೆ ಅಮೆರಿಕಾ. ಆತ್ಮರಕ್ಷಣೆಗಾಗಿ ಇರಿಸಿಕೊಳ್ಳಬೇಕಾದ ಆಯುಧ ಇಂದು ಮಾಸ್‌ ಮರ್ಡರ್‌ ಗಾಗಿ ಸತತ ಬಳಕೆಯಾಗುತ್ತಿದೆ. ಶಾಲೆಗಳಿಗೂ ಇಂಥ ತಲೆಕೆಟ್ಟವರು 10-20 ಮಕ್ಕಳನ್ನು ವಿನಾಕಾರಣ ಮಾರಣಹೋಮಕ್ಕೆ ಗುರಿಯಾಗಿಸುತ್ತಾರೆ.

ಅಮೆರಿಕಾ ಸರ್ಕಾರ ಗನ್‌ ಇರಿಸಿಕೊಳ್ಳುವ ಹಕ್ಕನ್ನು ಪ್ರತಿ ನಾಗರಿಕರಿಗೂ ಕೊಟ್ಟು ಸಾಮಾನ್ಯರ ಸಾವಿಗೆ ಕಾರಣವಾಗಿದ್ದರೆ, ಇಲ್ಲಿ ಅಧಿಕಾರದಲ್ಲಿರುವ ಸರ್ಕಾರಿ ಮಂದಿ ಇಂಥ ಟೆಕ್ನಾಲಜಿಯನ್ನು ಮನ ಬಂದಂತೆ ಬಳಸಿಕೊಳ್ಳಲು ಬಿಟ್ಟಿರುವುದು, ಅದನ್ನು ರಾಜಕೀಯದ ದುರುದ್ದೇಶಗಳಿಗೆ ಬಳಸುತ್ತಿರುವುದು, ಹೆಂಗಸರ ಬ್ಲ್ಯಾಕ್‌ ಮೇಲ್ ‌ಗೆ ತೊಡಗಿರುವುದು ವಿಪರ್ಯಾಸವೇ ಸರಿ. ತರುಣಿಯರ ಲಕ್ಷಾಂತರ ಸೆಕ್ಸಿ ಕ್ಲಿಪ್ಸ್ ಇಂದು ವೈರಲ್ ಆಗುತ್ತಿದೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಗೋಳಾಡಿಸಲಾಗುತ್ತಿದೆ. ಇವರುಗಳ ಮುಖವನ್ನು ಯಾವುದೋ ಅಪರಿಚಿತ ದೇಹಕ್ಕೆ ಅಂಟಿಸಿ, ಆ ಫೋಟೋಗಳನ್ನು ವೈರಲ್ ಮಾಡಿ ಲೂಟಿ ಹೊಡೆಯುತ್ತಿದ್ದಾರೆ. ಅಸಹಾಯಕ, ದುರ್ಬಲ ಹೆಣ್ಣು ಇದಕ್ಕೆ ಬಲಿಯಾಗುತ್ತಿದ್ದಾಳೆ.

ದೇಶದ ಸುಧಾರಣೆ ಇಂದಿನ ಅವಶ್ಯಕತೆ

ಯಾವಾಗ ನಮ್ಮ ಭಾರತೀಯ ಮೂಲದ ಪ್ರಜೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಉನ್ನತ ಹುದ್ದೆ ಗಳಿಸುತ್ತಾರೋ, ತಕ್ಷಣ ನಮ್ಮ ಮೀಡಿಯಾ ಆ ಬಗ್ಗೆ ಜೋರಾಗಿ ಕಹಳೆ ಊದುತ್ತದೆ, ಅಂಥವರು ನಮ್ಮ ದೇಶದಲ್ಲಿ ಹುಟ್ಟಿದ್ದೇ ಭಾರತದ ಪವಾಡದಿಂದ ಎಂಬಂತೆ. ಅಸಲಿಗೆ, ವಿದೇಶದಲ್ಲಿರುವ  ಭಾರತೀಯ ಮೂಲದ ಜನರಿಗೆ ಭಾರತದ ಕುರಿತಾಗಿ ದೊಡ್ಡ ಅಭಿಮಾನ ಏನೂ ಇರುವುದಿಲ್ಲ. ಅವರು ಎಂದೋ ಒಮ್ಮೊಮ್ಮೆ ಭಾರತೀಯ ಆಹಾರ ಸೇವಿಸಿ, ಇಲ್ಲಿನ ಉಡುಗೆ ಧರಿಸಿ, ಹಬ್ಬಗಳನ್ನು ಆಚರಿಸಿರಬಹುದು ಅಷ್ಟೇ ಹೊರತಾಗಿ ಇವರ ಅಭಿಮಾನಿಯಲ್ಲ ತಮ್ಮ ಹೊಸ ದೇಶದ ಕಡೆಗೇ ಇರುತ್ತದೆ. ಈ ದಾರಿದ್ರ್ಯ ತುಂಬಿದ, ಬಡತನದ ಗೂಡಾದ ಭಾರತದ ತೀರ್ಥಸ್ಥಳಗಳ ಬಗ್ಗೆ ಮಾತ್ರ ಅವರ ಒಲವು ಇರಬಹುದು.

ಒಂದಂತೂ ನಿಜ, ಭಾರತೀಯ ನೇತಾರರು ಇವರನ್ನು ಓಲೈಸದಿದ್ದರೂ ಧರ್ಮದ ದಲ್ಲಾಳಿಗಳು ಸದಾ ಇವರ ಬೆನ್ನುಹತ್ತಿ, ಪೌರಾಣಿಕ ಹಿನ್ನೆಲೆ ವಿವರಿಸುತ್ತಾ ದಾನದಕ್ಷಿಣೆ ಎಗರಿಸುತ್ತಾರೆ.

ಬ್ರಿಟನ್ನಿನ ಹಣಕಾಸು ಮಂತ್ರಿ ಋಷಿ ಸುನಂತ್‌ ರ ಬಗ್ಗೆ ಚರ್ಚೆ ಆಗುತ್ತಿರುತ್ತದೆ. ಆದರೆ ಅವರ ಅಭಿಮಾನ ಅಡಗಿದ್ದೆಲ್ಲಿ? ತಾವು ಕಲಿತಿದ್ದ ಮಿಂಚಿಸ್ಟರ್‌ ಕಾಲೇಜಿಗೆ 1 ಲಕ್ಷ ಪೌಂಡ್‌ ಹಣ ದಾನ ಮಾಡಿದ ಅವರ ಕ್ರಿಯೆಯಿಂದ ಅದು ಸ್ಪಷ್ಟವಾಗುತ್ತದೆ. ಋಷಿಯ ಹೆತ್ತವರು ಅವರನ್ನು ಅತಿ ಶ್ರೀಮಂತ ಶಾಲೆಗಳಲ್ಲಿ ಓದಿಸಿದ್ದರು, ಈಗ ಅಲ್ಲಿನ ವಾರ್ಷಿಕ ಶುಲ್ಕ ಕೇವಲ 50 ಲಕ್ಷ ರೂ. ಅಷ್ಟೆ.

ಇದರಿಂದೇನು ಗೊತ್ತಾಗುತ್ತೆ? ಈ ಭಾರತೀಯ ಮೂಲದ ಮಂದಿಗೆ ತಮ್ಮ ತಾಯಿನಾಡಿನ ಕುರಿತು ಯಾವ ಅಭಿಮಾನ ಇರೋಲ್ಲ. ಇಂಗ್ಲೆಂಡಿನಲ್ಲಿ ಹುಟ್ಟಿದ ಅವರು ಅಲ್ಲೇ ಬೆಳೆದಿದ್ದರಿಂದ ಅವರ ಪ್ರೀತಿಯೆಲ್ಲಾ ಆ ಕಡೆಯೇ ವಾಲಿರುತ್ತದೆ. ಸ್ಕಿನ್‌ ಕಲರ್‌ ನಿಂದ ಯಾವ ಮಹಾನ್‌ ವ್ಯತ್ಯಾಸ ಆಗದು. ಧರ್ಮದ ಪ್ರಭಾವ ಸಹ ಕೇವಲ ಸಂಪ್ರದಾಯ ಪಾಲಿಸುವುದಕ್ಕಷ್ಟೇ, ಏಕೆಂದರೆ ಬಿಳಿಯರು ಇವರನ್ನು ಖುಷಿ ಖುಷಿಯಾಗಿ ಕ್ರೈಸ್ತರಾಗಲು ಬಿಡರು. ಹಿಂದೂ ಕಂದಾಚಾರಿಗಳಂತೆ ಕ್ರೈಸ್ತ ಕಂದಾಚಾರಿಗಳು ಮತ ಪರಿವರ್ತಿತ ಹಿಂದೂಗಳಿಗೆ ಎಂದೂ ಸೊಪ್ಪು ಹಾಕರು. ಹಿಂದೂ ಮಂದಿರಗಳಂತೆಯೇ ಕ್ರೈಸ್ತ ಇಗರ್ಜಿಗಳಲ್ಲೂ ಕೋಟ್ಯಂತರ ಹಣ ತುಂಬಿದ್ದು, ಧರ್ಮದ ಹೆಸರಲ್ಲಿ ಹಣ ಸಂಗ್ರಹಣೆ ಮಾಮೂಲಿ. ಭಗವಾಧಾರಿಗಳು ಹೇಗೆ ಈ ರೀತಿ ಹಣಸಂಗ್ರಹಿಸಿ ಭವ್ಯ ಬಂಗಲೆಗಳಲ್ಲಿ ಇರುತ್ತಾರೋ, ಬ್ರಿಟನ್‌ ಅಮೆರಿಕಾಗಳಲ್ಲೂ ಬಿಳಿಯುಡುಗೆಯ ಪಾದ್ರಿಗಳು, ಹಿಂಬಾಲಕರು ಮಾಡುವುದು ಅದನ್ನೇ! ಋಷಿಯರ ಮೇಲೆ ಈ ಮೂಢನಂಬಿಕೆಗಳ ಪ್ರಭಾವ ಎಷ್ಟಿದೋ ಗೊತ್ತಿಲ್ಲ, ಆದರೆ ಭಾರತದ ಮೇಲಿನ ಅಭಿಮಾನ ಮಾತ್ರ ಎಳ್ಳಷ್ಟೂ ಇಲ್ಲ ಎಂಬುದು ಸುಸ್ಪಷ್ಟ. ಅದೇ ಮಂತ್ರಿಮಂಡಲದಲ್ಲಿ ಗೃಹಮಂತ್ರಿ ಪ್ರೀತಿ ಪಟೇಲ್ ಸಹ ಇದೇ ಲೆಕ್ಕಕ್ಕೆ ಸೇರುತ್ತಾರೆ. ಅಮೆರಿಕಾದ ಕಮಲಾ ಹ್ಯಾರಿಸ್‌, ನಿಕ್ಕಿ ಹ್ಯಾಲಿ ಸಹ.

ನಾವು ಭಾರತೀಯರೆಂಬ ಅತಿ ಅಭಿಮಾನದ ಡಂಗೂರ ಬಾರಿಸದಿರಿ. ಈಗ ಅವಶ್ಯ ಇರುವುದೆಲ್ಲ ದೇಶದ ಸುಧಾರಣೆ ಮಾತ್ರ. ಆಗ ಮಾತ್ರ ಚೀನಾ, ಜಪಾನ್‌ ತರಹ ಜನ ತಾವಾಗಿ ಆದರಕ್ಕೆ ಪಾತ್ರರಾಗುತ್ತಾರೆ. ಇಲ್ಲಿ ನಾವುಗಳು ದೇವರ ಖೋಟಾಗೆ ಎಲ್ಲಾ ವರ್ಗಾಯಿಸಿ, ನಾವು ಖೋತಾ ಆಗಿದ್ದೇವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ