ಸರಸ್ವತಿ ಜಾಗೀರ್ದಾರ್*

ಸ್ಯಾಂಡಲ್ ವುಡ್ ನಲ್ಲಿ ಮದುವೆ ಸಂಭ್ರಮ  ಜಯಮಾಲಾ ರಾಮಚಂದ್ರ ಅವರ ಮಗಳು ಸೌಂದರ್ಯ ಜಯಮಾಲಾ , ಅಂದೇ ಮಮತಾ ರಾವ್ ಸತೀಶ್ ಮಗ ರಾಣಾ ಮದುವೆ  ಹೀಗಾಗಿ ಚಿತ್ರರಂಗದವರು ಎರಡೂ ಕಡೆ ಅಟೆಂಡೆನ್ಸ್ ಹಾಕಿ ಶುಭ ಹಾರೈಸಿದರು. ರಾಣಾ ತಾನು ಕಾಲೇಜು ದಿನಗಳಿಂದಲೂ ಪರಿಚಯವಿದ್ದ ಹುಡುಗಿಯನ್ನು ಇಷ್ಟ ಪಟ್ಟು ಮದುವೆಯಾಗಿದ್ದಾನೆ.

WEDDING

ವಿಶೇಷವೆಂದರೆ ಆ ಹುಡುಗಿ ಹೆಸರೂ ರಕ್ಷಿತಾ. ಚಾಮರವಜ್ರದಲ್ಲಿ ಗ್ರಾಂಡಾಗಿ ಮದುವೆ , ರಿಸೆಪ್ಷನ್ ನಡೆಯಿತು, ಸಿನಿಮಾ ರಂಗವೇ ಅಲ್ಲಿ ಸೇರಿತ್ತು ವಿಶೇಷ ಸರ್ಪ್ರೈಸ್ ಕೊಟ್ಟಿದ್ದು ದರ್ಶನ್ ವಿಜಯಲಕ್ಷ್ಮಿ ಮೊದಲಬಾರಿಗೆ ದರ್ಶನ್ ಈ ಆರು ತಿಂಗಳಲ್ಲಿ ಪಬ್ಲಿಕ್ ದರ್ಶನ ಕೊಟ್ಟಿದ್ದು..

WEDDING 1

ಪ್ರಾಣ ಸ್ನೇಹಿತೆ ರಕ್ಷಿತಾ ಪ್ರೇಮ್ ಹಾಗೂ ಗುರುಗಳಾದ ಗೌರಿಶಂಕರ್  ಬಗ್ಗೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದಾರೆ. ರಿಸೆಪ್ಷನ್ ಗೆ ಬಂದಾಗ ಅಭಿಮಾನಿಗಳ ಆ ಕ್ರೇಜ್ ಅಲ್ಲಿ ಎದ್ದು ಕಾಣುತ್ತಿತ್ತು.

WEDDING 2

ಮದುವೆಗೆ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಜೊತೆ ಆಗಮಿಸಿ ವಿಶ್ ಮಾಡಿದ್ರು. ಇಡೀ ಚಿತ್ರರಂಗವೇ ಅಲ್ಲಿತ್ತು ಎನ್ನಬಹುದು.  ಹಿರಿಯ ತಾರೆಯರು, ನಿರ್ದೇಶಕರು, ನಿರ್ಮಾಪಕರು, ಪತ್ರಕರ್ತರು ಆಗಮಿಸಿ ಶುಭ ಹಾರೈಸಿದರು.

WEDDING 4

ಮದುವೆ, ರಿಸೆಪ್ಷನ್ ಸಡಗರದ ನಂತರ ಪಾರ್ಟಿ.. ಅಲ್ಲಿ ಮೇಘನಾ ರಾಜ್, ರಕ್ಷಿತಾ, ರಾಣಾ, ಪತ್ನಿ ರಕ್ಷಿತಾ, ಮಮತಾ ರಾವ್,ಶ್ರೀರಕ್ಷಾ,ಪ್ರಮಿಳಾ ,ಸುಂದರ್ ರಾಜ್ ಸಖತ್ ಡಾನ್ಸ್ ಮಾಡಿ ಪಾರ್ಟಿ ರಂಗೇರುವಂತೆ ಮಾಡಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ