ಸುಮಾರು 16 ವರ್ಷಗಳ ಬಳಿಕ ಶ್ವೇತಾ ಸೀಮಾಳ ಫೋಟೋವನ್ನು ಫೇಸ್ ಬುಕ್ ನಲ್ಲಿ ನೋಡಿದಳು. ಜಿಂಕೆಯಂತೆ ಒಮ್ಮೆಲೆ ಕುಣಿದು ಕುಪ್ಪಳಿಸಿದಳು. ಅಂದಹಾಗೆ 2 ದಶಕಗಳ ಮೊದಲು ಶ್ವೇತಾ ಮತ್ತು ಸೀಮಾ ಆತ್ಮೀಯ ಗೆಳತಿಯರಾಗಿದ್ದರು. ಇಬ್ಬರ ಮನೆತನಗಳಲ್ಲಿ ಯಾವುದೇ ಸಮಾನತೆ ಇರಲಿಲ್ಲ. ಸೀಮಾಳದು ಅರಮನೆಯಂತಹ ಮನೆ ಬೆಂಗಳೂರಿನ ಸದಾಶಿವನಗರದಲ್ಲಿ ಇತ್ತು. ಶ್ವೇತಾಳ ಸಾಧಾರಣ ಮನೆ ಮಧ್ಯಮ ವರ್ಗದವರಿರುವ ರಾಜಾಜಿನಗರದಲ್ಲಿತ್ತು. ಶ್ವೇತಾ ಹಾಗೂ ಸೀಮಾರ ಸ್ನೇಹ ಜುಳು ಜುಳು ಹರಿಯುವ ನದಿಯ ಹಾಗೆ ನಿರಂತರವಾಗಿ ಸಾಗುತ್ತಿತ್ತು.
ಸೀಮಾಳದು ಸಾಧಾರಣ ಗೋಧಿಗೆಂಪು ವರ್ಣ, ಸಾಧಾರಣ ಚೆಲುವು. ಆದರೆ ಅವಳು ಅದ್ಭುತ ಆತ್ಮವಿಶ್ವಾಸ ಹೊಂದಿದ್ದಳು. ಶ್ವೇತಾಳದು ಗೌರವರ್ಣ, ಕಂದು ಕಣ್ಣುಗಳು ಎಂಥವರನ್ನಾದರೂ ಸೆಳೆಯುವ ರೂಪ ಅವಳದ್ದಾಗಿತ್ತು. ಇಬ್ಬರೂ ರೂಪದಲ್ಲಷ್ಟೇ ಅಲ್ಲ, ಆಚಾರ ವಿಚಾರದಲ್ಲೂ ತದ್ವಿರುದ್ಧ ಆಗಿದ್ದರು. ಸೀಮಾ ಅತ್ಯಂತ ಬಿಂದಾಸ್‌ಹಾಗೂ ಹೃದಯಪೂರ್ವಕ ಮುಕ್ತ, ಸ್ಪಷ್ಟ ವ್ಯಕ್ತಿತ್ವ ಹೊಂದಿದ್ದರೆ, ಶ್ವೇತಾ ಮಾತ್ರ ಸಂಕುಚಿತ ಸ್ವಭಾವ ಹಾಗೂ ತನ್ನಲ್ಲಿ ತಾನು ಕಳೆದುಹೋಗುವವಳಂತೆ ಆಗಿದ್ದಳು.
ಶ್ವೇತಾ ಮನಸ್ಸಿನಲ್ಲಿಯೇ ತನ್ನ ಜೀವನಮಟ್ಟವನ್ನು ಸೀಮಾಳ ಜೀವನಮಟ್ಟದೊಂದಿಗೆ ಹೋಲಿಸಿ ನೋಡುತ್ತಿದ್ದಳು. ತನ್ನನ್ನು ತಾನು ಅವಳಿಗಿಂತ ಕಡಿಮೆ ಎಂದು ಭಾವಿಸುತ್ತಿದ್ದಳು. ಅವಳಿಗೆ ತನ್ನ ರೂಪ ಲಾವಣ್ಯದ ಮೇಲೆ ಅದೆಷ್ಟು ವಿಶ್ವಾಸ ಇತ್ತೆಂದರೆ, ತಾನು ಯಾವುದಾದರೂ ದೊಡ್ಡ ಶ್ರೀಮಂತ ಕುಟುಂಬದ ಸೊಸೆಯಾಗುತ್ತೇನೆಂಬ ನಂಬಿಕೆ ಅವಳಲ್ಲಿತ್ತು. ಸೀಮಾಳ ಮನೆಗೆ ಅವಳು ಆಗಾಗ ಹೋಗಲು ಕಾರಣವೇನೆಂದರೆ, ದೊಡ್ಡ ಕುಟುಂಬವೆಂದರ ಜೀವನಶೈಲಿ ಹೇಗಿರುತ್ತದೆ ಎಂಬುದನ್ನು ಗಮನಿಸಲು ಹಾಗೂ ಅದನ್ನು ಅನುಕರಣೆ ಮಾಡಲು.
ಅಂದು ಸೀಮಾಳ ಹುಟ್ಟುಹಬ್ಬ. ನಗರದ ಪಂಚತಾರಾ ಹೋಟೆಲೊಂದರಲ್ಲಿ ಏರ್ಪಾಡಾಗಿತ್ತು. ಆಗ ಸೀಮಾ ತನ್ನೆಲ್ಲ ಗೆಳತಿಯರಿಗೆ ವಿಜಯ್ ನನ್ನು ಪರಿಚಯಿಸಿದಳು. ಅವನು ಅವಳ ತಂದೆಯ ಸ್ನೇಹಿತನ ಮಗ. ಅವನು ನಗರದ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ತನ್ನ ಓದು ಮುಂದುವರಿಸಿದ್ದ. 5 ಅಡಿ 10 ಅಂಗುಲದ ವಿಜಯ್‌ಆಕರ್ಷಕ ವ್ಯಕ್ತಿತ್ವದ ಮಾಲೀಕನಾಗಿದ್ದ. ಎಲ್ಲ ಹುಡುಗಿಯರು ವಿಜಯ್ ನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದರೆ, ಶ್ವೇತಾ ಮಾತ್ರ ಒಂದು ಕಡೆ ಸುಮ್ಮನೆ ಕುಳಿತುಬಿಟ್ಟಿದ್ದಳು. ವಿಜಯ್‌ಮುಗುಳ್ನಗುತ್ತಲೇ, “ಮುಟ್ಟಿದರೆ ಮುನಿ ಎಂಬಂತೆ ಕುಳಿತಿರುವ ಈ ಕೋಮಲಾಂಗಿ ನನಗೆ ಕಪ್ಪೆಚಿಪ್ಪಿನಲ್ಲಿರುವ ಮುತ್ತಿನ ಥರ ಅನಿಸುತ್ತಿದ್ದಾಳೆ,” ಎಂದು ಹೇಳಿದ.
ಸೀಮಾ ಅವಳನ್ನು ಕೈಹಿಡಿದು ಎಳೆದುಕೊಂಡು ಬಂದು ವಿಜಯ್ ನ ಮುಂದೆ ನಿಲ್ಲಿಸಿ, “ಕಪ್ಪೆಚಿಪ್ಪಿನ ಈ ಮುತ್ತು ನನ್ನ ಆತ್ಮೀಯ ಗೆಳತಿ ಶ್ವೇತಾ. ಅವಳು ಅತ್ಯಂತ ಹಳೆಯ ಹಾಗೂ ನಿಕಟ ಗೆಳತಿ.”
ಬಳಿಕ ಊಟಕ್ಕೆ ಆರ್ಡರ್‌ಮಾಡುವುದು ಆರಂಭವಾಯಿತು. ಅಲ್ಲಿ ಎಂತಹ ಕೆಲವು ಡಿಶ್ ಗಳಿಗೆ ಆರ್ಡರ್‌ಮಾಡಲಾಗುತ್ತಿತ್ತು ಎಂದರೆ, ಶ್ವೇತಾ ಆ ಹೆಸರುಗಳನ್ನು ಈ ಮೊದಲು ಕೇಳಿರಲೇ ಇಲ್ಲ. ಯಾವುದಕ್ಕೆ ಆರ್ಡರ್‌ಕೊಡುವುದೆಂದು ಅವಳಿಗೆ ಗಲಿಬಿಲಿ ಉಂಟಾಯಿತು. ಆಗ ವಿಜಯ್‌ಅವಳ ಹತ್ತಿರ ಬಂದು, ಮೆನು ಕಾರ್ಡ್ ನ್ನು ಅವಳ ಕೈಯಿಂದ ಎತ್ತಿಕೊಂಡು, ಅವಳ ಕಿವಿಯಲ್ಲಿ ಮೆಲ್ಲನೆ ಉಸುರಿದ, “ನಾನು ಯಾವುದು ಆರ್ಡರ್‌ಮಾಡುತ್ತೇನೊ, ನೀನೂ ಕೂಡ ಅದನ್ನೇ ಆರ್ಡರ್‌ಮಾಡಬೇಕು.”
ವಿಜಯ್ ನ ಮಾತು ಕೇಳಿ ಅವಳಿಗೆ ನಿರಾಳ ಎನಿಸಿತು. ಶ್ವೇತಾಳಂತಹ ಮುಗ್ಧ ಹುಡುಗಿಯನ್ನು ಅವನೆಂದೂ ನೋಡಿರಲೇ ಇಲ್ಲ. ಅವನ ಅಮ್ಮ ಸೋದರಿ ಬೇರೆ ವ್ಯಕ್ತಿತ್ವದವರಾಗಿದ್ದರು. ಆದರೆ ಶ್ವೇತಾ ಅತ್ಯಂತ ಸೂಕ್ಷ್ಮ ಕೋಮಲ ವ್ಯಕ್ತಿತ್ವದ ಹುಡುಗಿ. ಅವನಿಗೆ ಮೊದಲ ಬಾರಿ ಪರಿಚಿತಳಾಗಿದ್ದಳು. ಮಾತು ಮಾತಿಗೂ ಮುಖ ಕೆಂಪಗಾಗುವುದು, ಸೆರಗಿನ ಚುಂಗಿನೊಂದಿಗೆ ಆಟ ಆಡುವುದು ಬೆವರಿನಿಂದ ತೊಯ್ದು ಹೋಗುವಿಕೆ, ಯಾವುದೇ ಸೌಂದರ್ಯ ಪ್ರಸಾಧನಗಳಿಲ್ಲದೆ ಇಷ್ಟೊಂದು ಸುಂದರವಾಗಿ ಕಾಣುವುದು ವಿಜಯನಿಗೆ ಇದೇ ಮೊದಲ ಸವಾಲಾಗಿತ್ತು.
ಊಟ ಮುಗಿಸಿದ ಬಳಿಕ ಶ್ವೇತಾಳಿಗೆ ಮನೆಗೆ ಹೋಗುವ ಆತಂಕವಿತ್ತು. ಅವಳು ಆಟೋಗಾಗಿ ನಿರೀಕ್ಷಿಸುತ್ತಿದ್ದಳು. ಆಗ ವಿಜಯ್ ಅವಳ ಹತ್ತಿರ ಬಂದು, “ಏ ಕೋಮಲಾಂಗಿ, ನೀನು ನನ್ನ ಜೊತೆಗೆ ಬಾ. ನನ್ನ ಕಾಲೇಜು ದಾರಿ ಆ ಕಡೆಯಿಂದಲೇ ಹೋಗುತ್ತದೆ,” ಎಂದು ಹೇಳಿದ.
ಶ್ವೇತಾ ಏನೂ ಮಾತನಾಡದೆ ಸುಮ್ಮನೇ ನಿಂತಿದ್ದಳು. ಆಗ ವಿಜಯ್, “ನಾನು ನಿನ್ನನ್ನು ಮನೆಯ ಹತ್ತಿರ ಬಿಡುತ್ತೇನೆ. ಕಾಫಿ ಕುಡಿಯಲು ಮನೆಯ ಒಳಗೂ ಕೂಡ ಬರುವುದಿಲ್ಲ,” ಎಂದು ನಗುತ್ತಾ ಹೇಳಿದ.
ಶ್ವೇತಾ ಏನೂ ಪ್ರತಿಕ್ರಿಯಿಸಿದೆ ಅವನ ಹಿಂದೆ ಕುಳಿತಳು. ಮೋಟರ್‌ಸೈಕಲ್ ಗಾಳಿಯ ಜೊತೆಗೆ ಸಂವಾದ ನಡೆಸುವಂತೆ ಮುಂದೆ ಸಾಗತೊಡಗಿತು. ವಿಚಿತ್ರ ಖುಷಿ ಹಾಗೂ ದ್ವಂದ್ವದಲ್ಲಿಯೇ ಶ್ವೇತಾ ಮನೆ ತಲುಪಿದಳು. ವಿಜಯ್‌ಎಂತಹ ಒಬ್ಬ ಹುಡುಗನಾಗಿದ್ದನೆಂದರೆ, ಅವನು ಅವಳ ಜೊತೆ ನಿರ್ಭಿಡೆಯಿಂದ ಮಾತನಾಡುತ್ತಿದ್ದ. ಅವಳು ಎಲ್ಲೋ ಕಳೆದುಹೋದವಳ ಹಾಗೆ ಮಂಚದ ಮೇಲೆ ಅಡ್ಡಾಗಿ ಮಲಗಿ, ವಿಜಯ್‌ಅವಳನ್ನು ಕೋಮಲಾಂಗಿ, ಎಂದು ಕರೆದದ್ದು ಅವಳಿಗೆ ಬಹಳ ಇಷ್ಟವಾಗಿತ್ತು. ಅವಳ ಮನದ ವೀಣೆಯನ್ನು ಯಾರೋ ಮೀಟಿದಂತೆ ಭಾಸವಾಗುತ್ತಿತ್ತು. ಅವಳ ಕಣ್ಣುಗಳಲ್ಲಿ ಕಾಮನಬಿಲ್ಲು ಮೂಡಿದ ಅನುಭವವಾಯಿತು. ಅಂತಹ ಕನಸನ್ನು ಅವಳು ಬಾಲ್ಯದಿಂದಲೇ ಕಾಣುತ್ತಾ ಬಂದಿದ್ದಳು.
ಶ್ವೇತಾ ಈಗ ತನ್ನ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ಕೊಡಲಾರಂಭಿಸಿದ್ದಳು. ಅವಳ ಹೆಚ್ಚಿನ ಸಮಯ ಸೀಮಾಳ ಮನೆಯಲ್ಲಿಯೇ ಕಳೆದು ಹೋಗುತ್ತಿತ್ತು.
ಅಂದಹಾಗೆ, ಶ್ವೇತಾ ವಿಜಯನನ್ನು ಕಾಣಲೆಂದೇ ಸೀಮಾಳ ಮನೆಯಲ್ಲಿಯೇ ಡೇರೆ ಹಾಕುತ್ತಿದ್ದಳು. ಆ ಬಗ್ಗೆ ಸೀಮಾಳಿಗೂ ಗೊತ್ತಿತ್ತು. ಹಾಗೆಂದೇ ಅವಳು ಶ್ವೇತಾಳನ್ನು ಒಂದು ದಿನ ಕೇಳಿಬಿಟ್ಟಳು, “ಶ್ವೇತಾ, ವಿಜಯ್‌ಪ್ರತಿಯೊಬ್ಬಳಿಗೂ ಹೀಗೆಯೇ ತಮಾಷೆ ಮಾಡುತ್ತಿರುತ್ತಾನೆ. ಅವನದು ಬಹಳ ತುಂಟಾಟದ ಸ್ವಭಾವ.”
ವಿಜಯ್‌ಸದಾ ತನ್ನ ಹಿಂದೆ ಹಿಂದೆಯೇ ಸುತ್ತುತ್ತಿರುವುದು, ಕೋಮಲಾಂಗಿ ಎಂದು ಕರೆಯುವುದು ಸೀಮಾಳಿಗೆ ಅಸೂಯೆ ತರಿಸಿರಬಹುದು ಎನಿಸಿತು. ವಿಜಯ್‌ಸೀಮಾಳನ್ನು ಬ್ಲ್ಯಾಕ್‌ಪರ್ಲ್ ಎಂದು ಕರೆಯುತ್ತಿರುವುದನ್ನು ಶ್ವೇತಾ ಕೇಳಿಸಿಕೊಂಡಿದ್ದಳು.
ನೋಡು ನೋಡುತ್ತಿರುವಂತೆ 2 ವರ್ಷಗಳು ಕಳೆದ. ಶ್ವೇತಾ, ವಿಜಯ್‌ಹಾಗೂ ಸೀಮಾರ ಸ್ನೇಹ ಹೀಗೆಯೇ ಮುಂದುವರಿದಿತ್ತು. ವಿಜಯ್‌ಈ ಅವಧಿಯಲ್ಲಿ ಒಮ್ಮೆ ಕೂಡ ಶ್ವೇತಾಳ ಮುಂದೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿರಲಿಲ್ಲ. ಪ್ರೀತಿಯನ್ನು ವ್ಯಕ್ತ ಪಡಿಸಲಾಗುವುದಿಲ್ಲ. ಅದನ್ನು ಅನುಭವ ಮಾಡಿಕೊಳ್ಳಲು ಮಾತ್ರ ಸಾಧ್ಯ. ಶ್ವೇತಾಳಂತೂ ಕಳೆದ ಎರಡು ವರ್ಷಗಳಿಂದ ವಿಜಯ್ ನನ್ನು ಮನಸ್ಸಿನಲ್ಲಿಟ್ಟುಕೊಂಡು ಆರಾಧಿಸುತ್ತಿದ್ದಳು. ಅವಳಿಗೆ ತಾನು ಗುರಿ ತಲುಪಿಬಿಟ್ಟೆನೆಂಬ ಖುಷಿಯಿತ್ತು.
ಅತ್ತ ವಿಜಯ್ ಗೆ ಶ್ವೇತಾಳ ಮೌನ ಹಾಗೂ ಗಾಬರಿಯಿಂದ ಕೂಡಿದ ನೋಟ ಇಷ್ಟವಾಗುತ್ತಿತ್ತು. ಮತ್ತೊಂದೆಡೆ ಸೀಮಾಳ ಆತ್ಮವಿಶ್ವಾಸ ಪ್ರತಿಯೊಂದು ಮಾತಿಗೂ ಅವಳು ಮೌನದಿಂದ ಒಪ್ಪಿಗೆ ನೀಡದೇ, ತರ್ಕ ಮಂಡಿಸುವುದು ಅವನನ್ನು ಪ್ರಭಾವಿತಗೊಳಿಸುತ್ತಿತ್ತು.
ವಿಜಯ್‌ಶ್ವೇತಾಳಿಗೆ ಯಾವುದೇ ಭರವಸೆ ಕೊಟ್ಟಿರಲಿಲ್ಲ. ಆದರೆ ಶ್ವೇತಾಳಿಗೆ ಮಾತ್ರ ಅವನು ತನ್ನ ಕೈಹಿಡಿಯಲು ಬಂದೇ ಬರುತ್ತಾನೆಂಬ ಆತ್ಮವಿಶ್ವಾಸವಿತ್ತು. ಕಾಲೇಜು ಮುಗಿಯುತ್ತಿದ್ದಂತೆ ಸೀಮಾ ತನ್ನ ಅಪ್ಪನ ಬಿಸ್ ನೆಸ್‌ನೋಡಿಕೊಳ್ಳತೊಡಗಿದಳು. ಶ್ವೇತಾ ಮಾತ್ರ ವಿಜಯ್‌ತನ್ನ ಮುಂದೆ ಪ್ರೀತಿಯ ಪ್ರಸ್ತಾಪ ತೆಗೆದುಕೊಂಡು ಬರುತ್ತಾನೆಂದು ಕಾಯುತ್ತಿದ್ದಳು.
ವಿಜಯ್‌ಮತ್ತು ಶ್ವೇತಾ ನಿರಂತರವಾಗಿ ಫೋನ್‌ಸಂಪರ್ಕದಲ್ಲಿದ್ದರು. ಈ ಮಧ್ಯೆ ವಿಜಯ್ ಗೂ ನೌಕರಿ ಸಿಕ್ಕಿತು. ಆದರೆ ಅವನು ಖುಷಿಯಿಂದಿರಲಿಲ್ಲ. ಅವನಿಗೆ ಇನ್ನೂ ಮೇಲೇರಬೇಕೆಂಬ ಬಯಕೆ ಇತ್ತು.
ವಿಜಯ್‌ಪ್ರತಿ ಸಲ ಫೋನ್‌ಮಾಡಿದಾಗೆಲ್ಲ ಶ್ವೇತಾ, ತನ್ನನ್ನು ನೋಡಲು ಅನೇಕ ವರ ಮಹಾಶಯರು ಬರುತ್ತಿದ್ದಾರೆ ಎಂದು ಹೇಳುತ್ತಿದ್ದಳು. ಆದರೆ ವಿಜಯ್ ಗೆ ಮಾತ್ರ ಅವಳು ತನಗೆ ಈ ವಿಷಯ ಏಕೆ ಹೇಳುತ್ತಾಳೆಂದು ಅರ್ಥ ಆಗುತ್ತಿರಲಿಲ್ಲ.
ಅದೊಂದು ದಿನ ವಿಜಯ್‌ಸ್ವಲ್ಪ ಸಿಡಿಮಿಡಿತನದಿಂದಲೇ, “ನೀನೆಂತಹ ಗೆಳತಿ ಶ್ವೇತಾ, ನಾನು ನನ್ನ ನೌಕರಿಯ ಕಾರಣದಿಂದ ಬೇಸರದಲ್ಲಿರುವೆ. ನೀನು ನೋಡಿದರೆ ಯಾವಾಗಲೂ ಮದುವೆಯ ಬಗ್ಗೆಯೇ ಹೇಳ್ತಿರ್ತೀಯಾ. ನೀನು ಬಹಳ ಸುಂದರಿ ಎಂದು ನನಗೆ ಗೊತ್ತು. ಆದರೆ ನಿನ್ನನ್ನು ತಡೆಯುತ್ತಿರುವರಾರು, ನೀನು ಮದುವೆ ಆಗಬಹುದಲ್ವಾ?” ಎಂದು ಹೇಳಿ ಫೋನ್‌ಕಟ್‌ಮಾಡಿದ.
ವಿಜಯ್ ಗೆ ಅಸುರಕ್ಷಿತ ಭಾವನೆ ಉಂಟಾಗಿರಬಹುದು. ತನಗೆಲ್ಲಿ ಮದುವೆಯಾಗಬಹುದೊ ಎಂಬ ಆತಂಕ ಅವನಿಗಿರಬಹುದು ಎಂದು ಶ್ವೇತಾಳಿಗೆ ಅನಿಸಿತು. ಶೀಘ್ರದಲ್ಲಿಯೇ ಅವನು ತನ್ನತ್ತ ಓಡಿಬರಬಹುದೆಂದು ಅವಳಿಗೆ ಅನಿಸಿತು.
ಅದೊಂದು ದಿನ ಆಕಸ್ಮಿಕವಾಗಿ ಸೀಮಾಳ ಫೋನ್‌ಬಂತು. ಶ್ವೇತಾಳಿಗೆ ತುರ್ತಾಗಿ ಮನೆಗೆ ಬರಲು ತಿಳಿಸಿದಳು. ಅಲ್ಲಿಗೆ ಹೋಗಿ ನೋಡಿದಾಗ, ಸೀಮಾ ಶತಪಥ ಹಾಕುತ್ತಿದ್ದಳು. ಶ್ವೇತಾಳನ್ನು ನೋಡುತ್ತಿದ್ದಂತೆ, “ನೀನು ಬಂದಿದ್ದು ಒಳ್ಳೆಯದಾಯ್ತು. ನನ್ನ ಹೃದಯದ ಮಾತನ್ನು ಒಬ್ಬರು ಕೇಳಿಸಿಕೊಳ್ತಿದ್ದಾರೆ. ಅವನೇ ವಿಜಯ್,” ಎಂದು ಸೀಮಾ ಹೇಳಿದಳು.
ಶ್ವೇತಾ ಒಮ್ಮೆಲೆ ಧುತ್ತೆಂದು ಕುಳಿತುಬಿಟ್ಟಳು. “ಏನ್‌ತಮಾಷೆ ಮಾಡ್ತಿದೀಯಾ ಸೀಮಾ? ವಿಜಯ್ ನಂತೂ ತನಗೆ ಮದುವೆಯ ಬಗ್ಗೆ ಯೋಚಿಸಲು ಸಮಯವಿಲ್ಲ ಎಂದಿದ್ದ. ಅವನೇ ನನಗೆ ಈ ವಿಷಯ ತಿಳಿಸಿದ್ದ.”
ಸೀಮಾ ನಗುತ್ತಲೇ, “ಶ್ವೇತಾ, ನೀನು ಬಹಳ ಮುಗ್ಧೆ. ವಿಜಯ್‌ಒಂದು ದೊಡ್ಡ ಯೂನಿಟ್‌ಆರಂಭಿಸ್ತಿದ್ದಾನೆ. ಅದರಲ್ಲಿ ನನ್ನ ತಂದೆ 50% ಹಣ ಇನ್ ವೆಸ್ಟ್ ಮಾಡಿದ್ದಾರೆ. ಆ ಯೂನಿಟ್ ನ ಬೇಸಿಕ್‌ಪ್ಲಾನ್‌ನನ್ನದೇ ಆಗಿತ್ತು ಎಂದಾಗ, ನಮ್ಮಿಬ್ಬರ ತಂದೆಯರು, ಜೊತೆ ಜೊತೆಗೆ ಕೆಲಸ ಮಾಡಬೇಕಿದ್ದಾಗ, ನಾವಿಬ್ಬರು ಜೀವನವನ್ನು ಕೂಡ ಅದರೊಂದಿಗೆ ಯಾಕೆ ತೆಗೆದುಕೊಂಡು ಹೋಗಬಾರದು ಎಂದು ಯೋಚಿಸಿದರು,” ಎಂದು ಹೇಳಿದಳು.
ಶ್ವೇತಾ ಹಾಗಲಕಾಯಿ ಕಚ್ಚಿದಾಗ ಕೂಗುವಂತೆ ಕೂಗಿದಳು, “ನೀನು ಅವನನ್ನು ಹಣದಿಂದ ಕೊಂಡುಕೊಂಡೆ ಎಂದು ಯಾಕೆ ಹೇಳಬಾರದು ಸೀಮಾ?”
ಸೀಮಾ ಶ್ವೇತಾಳ ಮಾತನ್ನು ಕೇಳಿ ಕೋಪಿಸಿಕೊಂಡಳು. ಆದರೆ ಅಷ್ಟೇ ಸಂಯಮದ ಸ್ವರದಲ್ಲಿ, “ಶ್ವೇತಾ, ವಿಜಯ್ ಗೂ ತನ್ನದೇ ಆದ ನಿರ್ಣಯ ಸಾಮರ್ಥ್ಯ ಇದೆ. ಅವನು ಸೌಂದರ್ಯಕ್ಕಿಂತ ಹೆಚ್ಚಾಗಿ ತನ್ನ ಪ್ರಗತಿಗೆ ಮಹತ್ವ ಕೊಡುತ್ತಾನೆ. ನೀನು ಬಹಳ ಸುಂದರಾಗಿರುವೆ ಶ್ವೇತಾ, ಆದರೆ ಜೀವನದಲ್ಲಿ ಮುಂದೆ ಮುಂದೆ ಸಾಗಲು ಸಾಮರ್ಥ್ಯ ಹಾಗೂ ಸ್ಮಾರ್ಟ್ ನೆಸ್‌ಕೂಡ ಅತ್ಯಗತ್ಯ. ಬಹುಶಃ ಅದು ಅವನಿಗೆ ನನ್ನಲ್ಲಿ ಕಂಡುಬಂದಿರಬಹುದು.”
“ಅದು ಸಾಧ್ಯವೇ ಇಲ್ಲ. ವಿಜಯ್‌ನನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗಲು ಸಾಧ್ಯವಿಲ್ಲ. ಪ್ರತಿಯೊಂದು ನಿಟ್ಟಿನಲ್ಲಿ ನಾನು ನಿನಗಿಂತ ಅತ್ಯುತ್ತಮ,” ಶ್ವೇತಾ ಹೇಳಿದಳು.
“ಅದು ಆಗಿಬಿಟ್ಟಿದೆ ಶ್ವೇತಾ. ಪ್ರತಿಯೊಬ್ಬರೂ ರೂಪ ಲಾವಣ್ಯಕ್ಕೆ ಮಾರುಹೋಗುತ್ತಾರೆಂದು ಹೇಳಲಾಗದು. ಕೆಲವರು ರೂಪಕ್ಕಿಂತ ಹೆಚ್ಚು ಬುದ್ಧಿಗೆ ಮಹತ್ವ ಕೊಡುತ್ತಾರೆ. ನನ್ನ ಕಾರಣದಿಂದಲೇ ವಿಜಯ್‌ಈ ಹೊಸ ಯೂನಿಟ್‌ಅಳವಡಿಸಲು ಸಾಧ್ಯವಾಯಿತು,” ಎಂದು ಸೀಮಾ ಹೇಳಿದಳು.
ಅದಕ್ಕೆ ಶ್ವೇತಾ, “ಸೀಮಾ ನಿನಗೆ ನಿನ್ನ ತಂದೆಯ ಶ್ರೀಮಂತಿಕೆಯ ವೈಭವದ ಮೇಲೆ ಗರ್ವ ಇರಬಹುದು. ಅದೇ ಹಣ ಬಲದ ಮೇಲೆ ನೀನು ವಿಜಯ್ ನನ್ನು ನಿನ್ನ ಕೈವಶ ಮಾಡಿಕೊಂಡಿರಬಹುದು. ಆದರೆ ನನ್ನ ಒಂದು ಮಾತನ್ನು ಕೇಳಿಸಿಕೊ. ಈಗ ರೂಪ ಲಾವಣ್ಯದ ಜೊತೆಗೆ ಈ ವೈಭವ ಹಾಗೂ ಹಣ ಕೂಡ ನನ್ನ ದಾಸ ಆಗಿರುತ್ತದೆ. ಇದು ನಾನು ನಿನಗೆ ಹಾಕುತ್ತಿರುವ ಸವಾಲು ಅಥವಾ ಷರತ್ತು,” ಎಂದು ತುಸು ಕಟುವಾಗಿ ಹೇಳಿದಳು.
“ನಿನ್ನ ಯೋಚನೆ ತಪ್ಪು ಶ್ವೇತಾ. ಆದರೂ ನೋಡೋಣ, ಮುಂದೆ ನಾವು ಎಲ್ಲಿಯಾದರೂ ಭೇಟಿಯಾದರೆ…..,” ಎಂದು ಸೀಮಾ ಮುಗುಳ್ನಗುತ್ತಾ ಹೇಳಿದಳು.
ಆ ದಿನದ ಬಳಿಕ ಶ್ವೇತಾ, ಸೀಮಾ ಮತ್ತು ವಿಜಯ್‌ಎಂಬ ಅಧ್ಯಾಯಗಳನ್ನು ತನ್ನ ಜೀವನವೆಂಬ ಪುಸ್ತಕದಿಂದ ಕಿತ್ತು ಹಾಕಿದಳು. ಆದರೆ ಅವಳು ಸೀಮಾಳ ಮುಂದೆ ಒಡ್ಡಿದ್ದ ಷರತ್ತನ್ನು ಮಾತ್ರ ಮರೆತಿರಲಿಲ್ಲ. ಅವಳ ಏಕೈಕ ಗುರಿ ಯಾವುದೇ ಸ್ಥಿತಿಯಲ್ಲಿ ಶ್ರೀಮಂತಳಾಗಬೇಕು ಎನ್ನುವುದಾಗಿತ್ತು. ಈ ಕಾರಣದಿಂದ ಅವಳು ಒಂದರ ನಂತರ ಒಂದರಂತೆ ಮಧ್ಯಮ ವರ್ಗದ ವರಗಳನ್ನು ನಿರಾಕರಿಸುತ್ತಾ ಬಂದಳು. ಶ್ವೇತಾ ಒಪ್ಪಿದ ಸಂಬಂಧಗಳಲ್ಲಿ ಅವರು ಕೇಳುತ್ತಿದ್ದ ವರದಕ್ಷಿಣೆಯ ಪಟ್ಟಿ ನೋಡಿ ಅವಳ ಕುಟುಂಬದವರಿಗೆ ಬೆವರು ಬಿಟ್ಟು ಹೋಗುತ್ತಿತ್ತು. ಮನೆಯವರು ಶ್ವೇತಾಳ ಧೋರಣೆಯಿಂದ ಬೇಸತ್ತು ಹೋಗಿದ್ದರು.
ಶ್ವೇತಾಳಿಗೆ 30 ಹೇಗೆ ತುಂಬಿತೋ ಗೊತ್ತೇ ಆಗಲಿಲ್ಲ. ಈ ಮಧ್ಯೆ ಶ್ವೇತಾ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಹೋಗಿದ್ದಳು. ಅಲ್ಲಿಯೇ ರಾಜೇಶ್ವರಿ ಎಂಬ ಮಹಿಳೆ ತನ್ನ ಮಗ ವಿಕಾಸ್ ಗೆ ಶ್ವೇತಾಳೇ ಸೂಕ್ತ ಎಂದು ನಿರ್ಧರಿಸಿಬಿಟ್ಟಳು. ವಿಕಾಸ್ ಶ್ರೀಮಂತ ಕುಟುಂಬದ ವ್ಯಕ್ತಿ. ದೊಡ್ಡ ಹುದ್ದೆಯಲ್ಲಿದ್ದ. ಆದರೆ ನೋಡಲು ಅಷ್ಟೇನೂ ಸುಂದರನಾಗಿರಲಿಲ್ಲ. ವಿಕಾಸನ ಹೆಂಡತಿ 1 ವರ್ಷದ ಹಿಂದಷ್ಟೇ ಸತ್ತು ಹೋಗಿದ್ದಳು. ಅವನಿಗೆ 5 ಹಾಗೂ 7 ವರ್ಷದ ಇಬ್ಬರು ಮಕ್ಕಳಿದ್ದರು.
ಆ ಸಂಬಂಧ ಬಂದಾಗ ಶ್ವೇತಾಳ ತಾಯಿ ತಂದೆ, “ಶ್ವೇತಾ ನಮ್ಮ ಏಕೈಕ ಪುತ್ರಿ. ಹಣ ಇದ್ದರೇನಾಯ್ತು, 38 ವರ್ಷ ವಯಸ್ಸಾಗಿದೆ. 2 ಮಕ್ಕಳು ಬೇರೆ ಇದ್ದಾರೆ. ಬೇಡ…. ಬೇಡ ಈ ಸಂಬಂಧವೇ ಬೇಡ,” ಎಂದರು.
ಆದರೆ ಶ್ವೇತಾಳೇ ಮುಂದೆ ಬಂದು, “ನನಗೆ ಈ ಸಂಬಂಧ ಒಪ್ಪಿಗೆ ಇದೆ,” ಎಂದು ಹೇಳಿದಳು. ಅವಳಿಗೆ ತನ್ನ ಏಕಾಂಗಿ ಜೀವನ ಬೇಸತ್ತು ಹೋಗಿತ್ತು. ಇದೇ ಮೊದಲ ಬಾರಿಗೆ ಅವಳಿಗೆ ಸಂಬಂಧವೊಂದು ಇಷ್ಟವಾಗಿತ್ತು. ಅವಳಿಗೆ ವಿಕಾಸನ ಮಕ್ಕಳು ಅಥವಾ ವಿಕಾಸ್ ನಿಂದ ಏನೂ ಆಗಬೇಕಿರಲಿಲ್ಲ. ಅವಳಿಗೆ ವಿಕಾಸನ ಪ್ರತಿಷ್ಠೆ ಹಾಗೂ ಹಣ ಕಣ್ಣು ಕುಕ್ಕಿಸುತ್ತಿತ್ತು.
ಈಗ ಶ್ವೇತಾಳಿಗೆ ಮದುವೆ ಆಗಿ 10 ವರ್ಷ ಆಗಿದೆ. ಯಾವ ಹಣ ಸಂಪತ್ತಿಗಾಗಿ ಅವಳು ಮದುವೆಯಾಗಿದ್ದಾಳೊ, ಅದು ಅವನಿಗೆ ಸಾಕಷ್ಟಿತ್ತು. ಇಬ್ಬರೂ ಮಕ್ಕಳು ಹಾಸ್ಟೆಲ್ ನಲ್ಲಿದ್ದರು. ವಿಕಾಸ್‌ಅವಳು ಕೂರು ಎಂದರೆ ಕೂರುತ್ತಿದ್ದ. ಏಳು ಎಂದರೆ ಏಳುತ್ತಿದ್ದ. ಆದರೂ ಅಳವ ಮನಸ್ಸಿನಲ್ಲಿ ಒಂದು ನೋವು ಕಾಡುತ್ತಿತ್ತು. ಅದು ಆಗಾಗ ಅವಳನ್ನು ಪೀಡಿಸುತ್ತಿತ್ತು.
ವಿಕಾಸ್‌ಅವಳಿಗೆ ಏನೆಲ್ಲ ಸೌಕರ್ಯಗಳನ್ನು ಒದಗಿಸುತ್ತಿದ್ದ. ಆದರೂ ಅವರಿಬ್ಬರ ಸಂಬಂಧ ಗಂಡ ಹೆಂಡತಿಯಂತಿರಲಿಲ್ಲ. ಶ್ವೇತಾಳಂತಹ ಹೆಂಡತಿಯನ್ನು ಪಡೆದುಕೊಂಡ ವಿಕಾಸ್‌ಧನ್ಯತೆಯ ಅನುಭವ ಪಡೆದುಕೊಂಡಿದ್ದ. ಅವನು ಯಾವಾಗಲೂ ಅವಳ ಸೌಂದರ್ಯದ ಉಪಾಸಕನಾಗಿದ್ದನೇ ಹೊರತು, ಪತಿಯಾಗುವ ಪ್ರಯತ್ನವನ್ನೆಂದೂ ಮಾಡಲಿಲ್ಲ. ಇಬ್ಬರೂ ಮಕ್ಕಳ ಜೊತೆ ಶ್ವೇತಾ ಒಂದು ಅಂತರ ಕಾಯ್ದುಕೊಂಡಿದ್ದಳು. ತನಗೆ ಒಂದು ಮಗು ಆಗದೇ ಇರುವ ಬಗ್ಗೆ ಶ್ವೇತಾಳಿಗೆ ಎಂದೂ ಖೇದವಿರಲಿಲ್ಲ.
ಮಗು ಆಗದೇ ಇದ್ದುದರಿಂದ ಶ್ವೇತಾ 10 ವರ್ಷದ ಹಿಂದೆ ಹೇಗಿದ್ದಳೊ, ಈಗಲೂ ಹಾಗೆಯೇ ಇದ್ದಳು. ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡು ಅವಳಿಗೆ ತನ್ನ ಬಗ್ಗೆ ತನಗೆ ಹೆಮ್ಮೆ ಎನಿಸುತ್ತಿತ್ತು.
ಹೀಗೆಯೇ ಒಂದು ದಿನ ಶ್ವೇತಾ ಆಕಸ್ಮಿಕವಾಗಿ ಫೇಸ್ ಬುಕ್ ನಲ್ಲಿ ಸೀಮಾಳನ್ನು ನೋಡಿ ಅವಳಿಗೆ ಬಹಳ ಆನಂದವಾಯಿತು. ಸೀಮಾ ಯಾವುದೇ ಆಕರ್ಷಣೆ ಇಲ್ಲದವಳಂತೆ ಕಾಣುತ್ತಿದ್ದಳು. ಆದರೆ ವಿಜಯ್‌ಮಾತ್ರ ಆಗ ಹೇಗಿದ್ದನೊ ಈಗಲೂ ಹಾಗೆಯೇ ಇದ್ದ. ಆದರೂ ಶ್ವೇತಾಳ ಮನಸ್ಸಿನಲ್ಲಿ ಒಂದು ನೋವು ಇದ್ದೇ ಇತ್ತು. ಆ ನೋವಿನ ಹೆಸರು ವಿಜಯ್. ಅದು ಅವಳನ್ನು ಸಾಮಾನ್ಯ ಸ್ಥಿತಿಗೆ ಬರಲು ಬಿಡುತ್ತಿರಲಿಲ್ಲ.
ವಿಧಿಯಾಟವೇ ವಿಚಿತ್ರ. ಸೀಮಾ ಹಾಗೂ ವಿಜಯ್ ನನ್ನು ಶ್ವೇತಾಳ ಮುಂದೆ ತಂದು ನಿಲ್ಲಿಸಿತು. ವಿಜಯ್ ಗೆ ತನ್ನ ವ್ಯಾಪಾರ ವಹಿವಾಟಿನ ಒಂದು ಫೈಲ್ ನ್ನು ಪಾಸ್‌ಮಾಡಬೇಕಿತ್ತು. ಅದು ಶ್ವೇತಾಳ ಗಂಡ ವಿಕಾಸ್ ನ ಮುಖಾಂತರವೇ ಆಗಬೇಕಿತ್ತು.
ಆಫೀಸ್ ನಲ್ಲಿ ವಿಕಾಸ್ ಗೆ ಸೀಮಾ ಹಾಗೂ ವಿಜಯ್‌ಶ್ವೇತಾಳ ಊರಿನವರೇ ಎಂದು ತಿಳಿಯಿತಲ್ಲದೆ, ಅವರು ಶ್ವೇತಾಳ ಚಿರಪರಿಚಿತ ಸ್ನೇಹಿತರು ಎಂದು ತಿಳಿದು, ವಿಕಾಸ್‌ಅವರನ್ನು ತನ್ನ ಮನೆಗೆ ಆಹ್ವಾನಿಸಿದ.
ಶ್ವೇತಾ ಮೇಲೆ ಮೇಲೆ ಸಿಡಿಮಿಡಿಗೊಂಡಳಂತೆ ತೋರಿದರೂ, ಒಳಗೊಳಗೆ ಖುಷಿಪಡುತ್ತಿದ್ದಳು. ಇವತ್ತಾದರೂ ಅವಳಿಗೆ ತನ್ನ ರಾಜವೈಭವ ತೋರಿಸಲು ಸಾಧ್ಯವಾಗುತ್ತಲ್ಲ ಎಂದುಕೊಂಡಳು. ವಿಜಯ್ ಗೂ ಕೂಡ ತಾನು ವಜ್ರ ಎಂದುಕೊಂಡಿರುವುದು ಎಂತಹ ಗಾಜಿನ ತುಂಡು ಎಂದು ತನ್ನನ್ನು ನೋಡಿ ಗೊತ್ತಾಗಬಹುದು ಎಂದುಕೊಂಡಳು. ಸೀಮಾಳಿಗೆ ತನ್ನ ಅರ್ಹತೆ ಹಾಗೂ ಸ್ಮಾರ್ಟ್ ನೆಸ್‌ಬಗ್ಗೆ ಬಹಳ ಅಹಂ ಇತ್ತಲ್ಲ, ಅದು ಈಗ ಜೀನವೆಂಬ ತಕ್ಕಡಿಯಲ್ಲಿ ನನ್ನ ವೈಭವ ಹಾಗೂ ಸೌಂದರ್ಯದ ತಟ್ಟೆಯೇ ಭಾರವೆನಿಸುತ್ತದೆ ಎಂದುಕೊಂಡಳು.
ವಿಜಯ್‌ಹಾಗೂ ಸೀಮಾ ನಿಗದಿತ ಸಮಯಕ್ಕಿಂತ ಮೊದಲೇ ಬಂದಿದ್ದರು. ಇಬ್ಬರೂ ತಮ್ಮ ಹಳೆಯ ದಿನಗಳ ಬಗ್ಗೆ ನೆನಪು ಮಾಡಿಕೊಳ್ಳುತ್ತಿದ್ದರು. ಆದರೆ ಶ್ವೇತಾ ಹೇಗೆ ವರ್ತಿಸುತ್ತಿದ್ದಳೆಂದರೆ, ತನಗೆ ಹಳೆಯ ಯಾವುದೇ ನೆನಪು ಇಲ್ಲ ಎಂಬಂತೆ.
ಶ್ವೇತಾ, ಸೀಮಾಳನ್ನು ನೋಡಿ, “ಇದೇನು ಸ್ಥಿತಿ ತಂದುಕೊಂಡಿರುವೆ ಸೀಮಾ ನೀನು. ಮೊದಲಿಗಿಂತ 3 ಪಟ್ಟು ದಪ್ಪಗಾಗಿರುವೆ. ಜಿಮ್ ಗೆ ಹೋಗುತ್ತಿಲ್ಲಾ?” ಎಂದು ಕೇಳುತ್ತಾ ಅತ್ಯಂತ ವೈಯ್ಯಾರದಿಂದ ತನ್ನ ಸೆರಗು ಸರಿಪಡಿಸುತ್ತಾ ಕಣ್ಣಂಚಿನಿಂದ ವಿಜಯ್ ನತ್ತ ನೋಡಿದಳು. ಆದರೆ ವಿಜಯ್‌ಮಾತ್ರ ಸೀಮಾಳತ್ತ ನೋಡುತ್ತಾ ಹೆಮ್ಮೆಯಿಂದ ನಕ್ಕ. ಇದು ಶ್ವೇತಾಳಿಗೆ ಕಸಿವಿಸಿ ಉಂಟು ಮಾಡಿತು.
ಸೀಮಾ ನಗುತ್ತಾ, “ಶ್ವೇತಾ ತಾಯಿಯಾದ ಬಳಿಕ ದೇಹ ತೂಕ ಹೆಚ್ಚಾಗುತ್ತದೆ. ನಿನಗೆ ನಿನ್ನದೇ ಆದ ಮಗುವಾದಾಗ ಅದು ಗೊತ್ತಾಗುತ್ತದೆ,” ಎಂದಳು.
ಸೀಮಾಳ ಮಾತು ಕೇಳಿ ಶ್ವೇತಾಳಿಗೆ ಯಾರೋ ಕೆನ್ನೆಗೆ ಜೋರಾಗಿ ಬಾರಿಸಿದಂತೆ ಭಾಸವಾಯಿತು. ಆ ಬಳಿಕ ಸೀಮಾ ತನ್ನ ಮಕ್ಕಳ ಬಗ್ಗೆ ಹೊಗಳತೊಡಗಿದಳು.
ಆಗ ಅವಳ ಗಮನಕ್ಕೆ ಬಂದ ಸಂಗತಿಯೇನೆಂದರೆ, ತಾನು ವಿಕಾಸ್ ನ ಹೆಂಡತಿಯಾಗಿದ್ದೇನೆ. ಆದರೆ ಅವನ ಮಕ್ಕಳಿಗೆ ಎಂದೂ ತಾಯಿಯಾಗುವ ಪ್ರಯತ್ನ ಮಾಡಿರಲಿಲ್ಲ.
ಶ್ವೇತಾ ಆ ಬಳಿಕ ಎಲ್ಲರಿಗೂ ಊಟಕ್ಕೆಂದು ಡೈನಿಂಗ್‌ರೂಮಿಗೆ ಕರೆದಳು. ಸೀಮಾ ಮತ್ತು ವಿಜಯ್‌ತಾನು ಮಾಡಿದ ಅಡುಗೆಯನ್ನು ಹೊಗಳುತ್ತಾರೆಂದು ಭಾವಿಸಿದ್ದಳು. ಆದರೆ ಇಲ್ಲೂ ಅವಳಿಗೆ ನಿರಾಸೆಯೇ ಕಾದಿತ್ತು. ಸೀಮಾ ಬಹಳಷ್ಟು ಪ್ರಕಾರದ ಅಡುಗೆಗಳನ್ನು ನೋಡಿ, “ಶ್ವೇತಾ, ನಿನ್ನ ಹೆಚ್ಚಿನ ಅಡುಗೆಗಳನ್ನು ನೋಡಿ ವಿಕಾಸ್‌ಅವರ ಆರೋಗ್ಯದ ರಹಸ್ಯ ಅರಿವಾಯಿತು.”
ವಿಕಾಸ್‌ಅವರ ಹೆಚ್ಚುತ್ತಿರುವ ಹೊಟ್ಟೆಯ ಭಾಗದ ಕೊಬ್ಬಿನತ್ತ ಅವರ ಗಮನ ಹೋಗಿತ್ತು. ಶ್ವೇತಾ ಆ ಬಗ್ಗೆ ಏನನ್ನು ಹೇಳಲಿಲ್ಲ.
ತನ್ನ ರೂಪ ಲಾವಣ್ಯ, ಸಂಪತ್ತಿನ ವೈಭವ ಸೀಮಾ ಹಾಗೂ ವಿಜಯ್ ರನ್ನು ಏಕೆ ಪ್ರಭಾವಿತಗೊಳಿಸುತ್ತಿಲ್ಲ ಎಂಬುದು ಶ್ವೇತಾಳಿಗೆ ತಿಳಿಯದಾಗಿತ್ತು. ವಿಜಯ್‌ತನ್ನ ಸೌಂದರ್ಯದ ಬಗ್ಗೆ ಗಮನಕೊಡುತ್ತಿಲ್ಲವೇ? ವಿಜಯ್‌ಹಾಗೂ ಸೀಮಾಳ ಸಂಬಂಧದಲ್ಲಿ ಅದ್ಭುತ ಹೊಂದಾಣಿಕೆ ಇತ್ತು. ಅದು ಶ್ವೇತಾ ಹಾಗೂ ವಿಕಾಸ್‌ಸಂಬಂಧದಲ್ಲಿ ಕಾಣೆಯಾಗಿತ್ತು. ಏಕೆಂದರೆ ಶ್ವೇತಾ ಮದುವೆ ಮಾಡಿಕೊಂಡಿದ್ದು ಸಂಪತ್ತಿನ ಆಸೆಗೆ.
ಊಟದ ಬಳಿಕ ವಿಜಯ್‌ಹಾಗೂ ವಿಕಾಸ್‌ಕೆಲಸಕ್ಕೆ ಸಂಬಂಧಪಟ್ಟಂತೆ ಮಾತನಾಡಲು ಮನೆಯ ಹಿಂದಿನ ಕೈತೋಟದತ್ತ ಹೋದರು. ಸೀಮಾಳನ್ನು ತನ್ನ ವೈಭಯುತ ಡ್ರಾಯಿಂಗ್‌ರೂಮಿನಲ್ಲಿ ಕೂರಿಸಿ ಶ್ವೇತಾ ಕಾಫಿ ತರಲೆಂದು ಹೋದಳು. ಕಾಫಿ ಕುಡಿಯುತ್ತಾ ಸೀಮಾ 2 ನಿಮಿಷ ಹಾಗೆಯೇ ಕುಳಿತಿದ್ದಳು. ಅವಳು ತನ್ನ ಆತಿಥ್ಯದ ಬಗ್ಗೆ ಹೊಗಳಬಹುದು ಎಂದು ಶ್ವೇತಾ ಭಾವಿಸಿದ್ದಳು. ಆದರೆ ಸೀಮಾ ನಗುನಗುತ್ತಲೇ, “ಶ್ವೇತಾ, ನೀನು ಅಂದು ಹಾಕಿದ್ದ ಷರತ್ತು ಸವಾಲು ನೆನಪಿದೆಯಾ? ಆ ಷರತ್ತಿನಲ್ಲಿ ನೀನು ಗೆದ್ದಿದಿಯಾ ಅಂತಾ ನಿನಗನ್ನಿಸುತ್ತಾ?”
ಶ್ವೇತಾ ಯಾವುದೇ ಉತ್ತರ ಕೊಡಲಿಲ್ಲ. ತಾನು ಆ ಷರತ್ತಿನಲ್ಲಿ ಪುನಃ ಸೋತಿದ್ದೇನೆ ಎಂದೆನಿಸತೊಡಗಿತು. ತಾನು ಸುಂದರವಾಗಿರುವುದು ತನ್ನಷ್ಟರ ಮಟ್ಟಿಗೆ ಮಾತ್ರ, ಆದರೆ ಬೇರೆಯವರಿಗೆಲ್ಲ ಎಂದು ಅವಳ ಒಳ ಮನಸ್ಸು ಹೇಳುತ್ತಿತ್ತು.
ತಾನು ವಿಕಾಸ್ ನೊಂದಿಗೆ ಮದುವೆಯಾಗಿರುವುದು ಸೀಮಾಳೊಂದಿಗೆ ಸಮಾನತೆ ಸಾಧಿಸಲು. ಆದರೆ ಈ ನಿಟ್ಟಿನಲ್ಲಿ ಸೀಮಾಳೇ ಮುಂದೆ ಇದ್ದಾಳೆ. ಏಕೆಂದರೆ ಹೆಂಡತಿಯೊಬ್ಬಳ ಸಾಫಲ್ಯತೆ ಅವಳ ರೂಪ ಲಾವಣ್ಯದಲ್ಲಿಲ್ಲ. ಅವಳು ಪತಿ ಹಾಗೂ ಮಕ್ಕಳ ಯೋಗಕ್ಷೇಮ, ಅವರ ಭವಿಷ್ಯ ರೂಪಿಸುವುದರಲ್ಲಿದೆ. ಆದಾವುದೂ ಶ್ವೇತಾಳ ವೈವಾಹಿಕ ಜೀವನದಲ್ಲಿ ಕಂಡುಬಂದಿರಲಿಲ್ಲ.
ಸೀಮಾ ನಗುನಗುತ್ತಾ ಕೈತೋಟದತ್ತ ಹೆಜ್ಜೆ ಹಾಕಿದಳು. ತನ್ನ ಅರ್ಥವಿಲ್ಲದ ಷರತ್ತು ಶ್ವೇತಾಳನ್ನು ಜೀವನದ ಎಂತಹ ತಿರುವಿಗೆ ತಂದು ನಿಲ್ಲಿಸಿತ್ತೆಂದರೆ, ಅದಕ್ಕೆ ಬಹುಶಃ ಯಾವುದೇ ಗೊತ್ತು ಗುರಿ ಇರಲೇ ಇಲ್ಲ.