ಗಂಡ ನರೇಂದ್ರನನ್ನು ಸರಿದಾರಿಗೆ ತರಲು ಕಮಲಾ ಮೂಢನಂಬಿಕೆಯ ಮೊರೆಹೋದಳು. ಆದರೆ ಇದರಿಂದ ಪ್ರಕರಣ ಬಗೆಹರಿಯುವ ಬದಲು ಮತ್ತಷ್ಟು ಹದೆಗಟ್ಟಿತು.

ಕಮಲಾ ತನ್ನ ಕಪ್ಪು ಕೂದಲನ್ನು ಬಾಲ್ಕನಿಯಲ್ಲಿ ನಿಂತುಕೊಂಡು ಬಾಚಿಕೊಳ್ಳುತ್ತಾ ಸಿಕ್ಕು ಬಿಡಿಸಿಕೊಳ್ಳುತ್ತಿದ್ದಳು. ಅವಳ ಹೊಳೆಯುವ ಬಣ್ಣ, ಅವಳ ಕಪ್ಪು ಕೂದಲಿನೊಂದಿಗೆ ಇನ್ನಷ್ಟು ಮಾದಕ ಎನಿಸುತ್ತಿತ್ತು. ಅವಳ ಮದುವೆಯಾಗಿ 10 ವರ್ಷಗಳೇ ಕಳೆದುಹೋಗಿದ್ದ. ಗಂಡ ಮೊದಲ ವರ್ಷ ಅವಳ ಬಗ್ಗೆ ಎಷ್ಟು ಮೋಹ ಇಟ್ಟುಕೊಂಡಿದ್ದನೋ, ಈಗಲೂ ಅದೇ ಮೋಹ ಅವನನ್ನು ಸೆಳೆಯುತ್ತಿತ್ತು. ನರೇಂದ್ರನೊಂದಿಗಿನ ಪ್ರೀತಿ ಅವಳ ಗೆಳತಿಯರಿಗೆ ಅಸೂಯೆಯ ವಿಷಯವಾಗಿತ್ತು. ಆದರೆ ಒಮ್ಮೊಮ್ಮೆ ನರೇಂದ್ರನ ವರ್ತನೆಯ ಬಗ್ಗೆ ಅವಳಿಗೆ ಸಂದೇಹ ಉಂಟಾಗುತ್ತಿತ್ತು. ಅವನದು ನಿಜವಾದ ಪ್ರೀತೀನಾ ಅಥವಾ ತೋರಿಕೇನಾ?

ಒಟ್ಟಾರೆ ಹೇಳಬೇಕೆಂದರೆ, ಅವಳ ಜೀವನದ ಬಂಡಿ ಸರಿದಾರಿಯಲ್ಲಿಯೇ ಸಾಗುತ್ತಿತ್ತು. ಅವಳದು ಪುಟ್ಟ ಕುಟುಂಬ. ಗಂಡ ನರೇಂದ್ರ ಹಾಗೂ ಮಗಳು ವಿನುತಾ. ಕಳೆದ ಕೆಲವು ತಿಂಗಳಿಂದ ಗಂಡ ರಾತ್ರಿ ಬಹಳ ತಡವಾಗಿ ಮನೆಗೆ ಬರುತ್ತಿರುವುದು ಅವಳ ಗಮನಕ್ಕೆ ಬಂದಿತ್ತು. ಅವಳು ಈ ಬಗ್ಗೆ ಕೇಳಿದಾಗೆಲ್ಲ ಅವನು ಹೇಳುತ್ತಿದ್ದ, ``ನನ್ನ ಮನಸ್ಸು ಯಾವಾಗಲೂ ನಿನಗಾಗಿ ಮತ್ತು ವಿನುತಾಳಿಗಾಗಿ ಕಾತರಿಸುತ್ತಾ ಇರುತ್ತೆ. ಅದಕ್ಕಾಗಿಯೇ ನಾನು ಇಷ್ಟೊಂದು ಕಷ್ಟಪಟ್ಟು ದುಡಿಯುತ್ತಾ ಇರುವುದು.''

ಆದರೂ ಕಮಲಾಳ ಮನಸ್ಸಿಗೆ ಎಲ್ಲೋ ಏನೋ ತಪ್ಪು ಇದೆ ಎಂದೆನಿಸುತ್ತಿತ್ತು. ಈಗಲೂ ಹೊರಗಡೆ ನಿಂತು ಕೂದಲನ್ನು ಒಣಗಿಸಿಕೊಳ್ಳುತ್ತಾ ಅವಳ ಮನಸ್ಸಿನೊಳಗೆ ತಾಕಲಾಟ ಮುಂದುವರಿದಿತ್ತು. ಅಷ್ಟರಲ್ಲಿಯೇ ಬಾಗಿಲ ಗಂಟೆ ಬಾರಿಸಿತು. ಬಾಗಿಲು ತೆರೆದು ನೋಡಿದರೆ, ಎದುರಿಗೆ ನರೇಂದ್ರ ನಿಂತಿದ್ದ.

ಅವಳು ಅವನಿಗೆ ಏನಾದರೂ ಕೇಳುವ ಮುಂಚೆಯೇ ಅವನು ಹೇಳಿದ, ``ನಾನಿವತ್ತು ರಾತ್ರಿ ಹೈದರಾಬಾದಿಗೆ ಹೋಗುತ್ತಿರುವೆ. ಐದು ದಿನದ ಬಿಸ್‌ ನೆಸ್‌ ಟೂರ್‌. ಅದಕ್ಕಾಗಿ ಇಡೀ ದಿನ ನಿನ್ನ ಜೊತೆಗೆ ಕಳೆಯಬೇಕೆಂದು ಬಂದೆ,'' ಎಂದು ಹೇಳಿದ. ಅವನು ಅವಳ ಕೈಗೆ 2 ಪ್ಯಾಕೆಟ್‌ ಕೊಟ್ಟ.

ಕಮಲಾ ಅದನ್ನು ತೆರೆದಳು ಒಂದರಲ್ಲಿ ಸುಂದರ ಜಾಕೆಟ್‌ ಇದ್ದರೆ, ಇನ್ನೊಂದರಲ್ಲಿ ಟ್ರ್ಯಾಕ್‌ ಸೂಟ್‌ ಇತ್ತು.

ಕಮಲಾ ಮುಗುಳ್ನಗುತ್ತಾ, ``ನೀವು ನನಗೆ ತಪ್ಪುದಂಡ ತೆರುತ್ತಿದ್ದೀರಿ ಅನಿಸುತ್ತೆ. ಹೊಸ ವರ್ಷಕ್ಕೆ ನೀವು ಇಲ್ಲಿ ಇರಲಿಲ್ಲವಲ್ಲ ಅದಕ್ಕಿರಬಹುದಾ?'' ಎಂದು ಕೇಳಿದಳು.

ನರೇಂದ್ರ ಅವಳ ಮಾತು ಕೇಳಿ ಉದಾಸ ಸ್ವರದಲ್ಲಿ, ``ಕಮಲಾ ಇನ್ನೆರಡು ವರ್ಷ ಅಷ್ಟೇ, ಆಮೇಲೆ ನಾನು ಯಾವಾಗಲೂ ನಿನ್ನ ಹಾಗೂ ವಿನುತಾ ಜೊತೆಗೇ ಇರ್ತೀನಿ,'' ಎಂದು ಹೇಳಿದ.

ಕಮಲಾ ಅಡುಗೆ ಮನೆಯಲ್ಲಿ ಚಹಾ ತಯಾರಿಸುತ್ತಾ ಗಂಡ ಯಾವಾಗಲೂ ಕುಟುಂಬದ ಹಿತಕ್ಕಾಗಿ ಇಷ್ಟೆಲ್ಲ ಕಷ್ಟಪಡುತ್ತಿರುತ್ತಾನೆ, ತಾನು ಅವನ ಬಗ್ಗೆ ಸಂದೇಹ ಪಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅವಳು ಯೋಚಿಸಿದಳು.

ರಾತ್ರಿ ಇಡೀ ಕುಟುಂಬ ವಿನುತಾಳಿಗೆ ಇಷ್ಟವಾಗುವ ಹೋಟೆಲ್ ‌ನಲ್ಲಿ ಊಟ ಮಾಡುತ್ತಿತ್ತು. ಬಳಿಕ ಎಲ್ಲರೂ ಸೇರಿ ಲಾಂಗ್‌ ಡ್ರೈವ್ ಹೋಗಿ ಬಂದರು. ಆ ಬಳಿಕ ನರೇಂದ್ರ ಕಮಲಾಳಿಗೆ ಇಷ್ಟವಾಗುವ ಪಾನ್‌ ಹಾಗೂ ವಿನುತಾಳಿಗೆ ಇಷ್ಟವಾಗುವ ಐಸ್‌ ಕ್ರೀಮ್ ಕೊಡಿಸಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ