ಸ್ಯಾಂಡಲ್ವುಡ್ನ ಎಣ್ಣೆಗೆಂಪಿನ ಬ್ಯೂಟಿ ನಟಿ ಚೈತ್ರಾ ಆಚಾರ್ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಮಾದಕ ಫೋಟೋ ಹಾಕುವ ಮೂಲಕ ಪಡ್ಡೆ ಹುಡುಗರ ಮೈಚಳಿ ಬಿಡಿಸುವ ಚೈತ್ರಾ ಆಚಾರ್ ಮತ್ತೆ ಅಂತಹುದ್ದೇ ಫೋಟೋಸ್ ಹಾಕಿ ಮೈ ಬೆಚ್ಚಗೆ ಮಾಡಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ಆಗಿಯೇ ಮಾತನಾಡುವ ಚೈತ್ರಾ ಆಚಾರ್ ಮತ್ತೆ ಹಲ್ಚಲ್ ಮೂಡಿಸಿದ್ದಾರೆ.
ಟಾಪ್ ಲೆಸ್ ಫೋಟೋಶೂಟ್ ಮಾಡಿಸಿರುವ ನಟಿ ನೈತಿಕತೆಯ ಪಾಠ ಮಾಡಿದ್ದಾರೆ. ‘ನೈತಿಕತೆ ನಡತೆಯಾಗಿದೆ ಆಗಿದೆ, ವೈಯಕ್ತಿಕವಾಗಿ ಇಷ್ಟಪಡದ ವ್ಯಕ್ತಿಗಳ ಜೊತೆ ಅದನ್ನ ನಾವು ಅವಳಡಿಸಿಕೊಳ್ಳುತ್ತೇವೆ’ ಅಂತ ಬರೆದುಕೊಂಡಿದ್ದಾರೆ. ಹೊಸ ಫೋಟೋಗಳ ಮೂಲಕ ತಾವು ಇನ್ನಷ್ಟು ಬೋಲ್ಡ್ ಅನ್ನೋ ಮಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹಾಗೆ ಚೈತ್ರಾ ಆಚಾರ್ ಮೂರೇ ಮೂರು ಫೋಟೋಗಳನ್ನ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಮೂರು ಫೋಟೋಗಳಲ್ಲಿ ಒಂದು ಫೋಟೋದಲ್ಲಿ ಶರ್ಟ್ ಬಟನ್ ಬಿಚ್ಚಿ ಪೋಸ್ ಕೊಟ್ಟಿದ್ದಾರೆ. ಮತ್ತೊಂದು ಫೋಟೋದಲ್ಲಿ ಮಾದಕ ಲುಕ್ ಇರೋ ಪೋಸ್ ಇದೆ. ಆದರೆ, ಇನ್ನೂ ಒಂದು ಫೋಟೋದಲ್ಲಿ ಬೇರ್ ಬ್ಯಾಕ್ ಇದೆ. ಅಂದ್ರೆ, ಇದ್ದ ಆ ಶರ್ಟ್ ತೆಗೆದು ಬೆನ್ನು ತೋರಿದ್ದಾರೆ. ನಟಿಯ ಬೇರ್ ಬ್ಯಾಕ್ ಅವತಾರ ಸೋಶಿಯಲ್ ಮಿಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದು, ಈ ನಟಿ ಯಾಕಿಂಗೆ ಅಂತಾ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಆಗಾಗ ಬೋಲ್ಡ್ ಆಗಿ ಪೋಸು ಕೊಟ್ಟು ಫೋಟೋ ಶೇರ್ ಮಾಡುವ ಚೈತ್ರಾ ಆಚಾರ್ ನಟ ರಾಜ್ ಬಿ ಶೆಟ್ಟಿ ನಟನೆಯ ಟೋಬಿ, ರಕ್ಷಿತ್ ಶೆಟ್ಟಿ ನಟನೆಯ ಸಪ್ತಸಾಗರದಾಚೆ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಬ್ಯ್ಲಾಕ್ ಌಂಡ್ ವೈಟ್ ಆಗಿರುವ ಚೈತ್ರಾ ಆಚಾರ್ ಫೋಟೋಗಳು ಒಂದು ವಿಶೇಷವಾದ ಫೀಲ್ ಕೊಡುವಂತಿವೆ.
ಇಷ್ಟೊಂದು ಬೋಲ್ಡ್ ಫೋಟೋಗಳು ಅಗತ್ಯವಿತ್ತಾ ಈ ನಟಿಗೆ ಅಂತಾ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯ ಇನ್ಸ್ಟಾಗ್ರಾಂನಲ್ಲಿ ಈ ಫೋಟೋಸ್ಗೆ ಕಾಮೆಂಟ್ ಬಾಕ್ಸ್ನ್ನು ಲಿಮಿಟ್ ಮಾಡಿರುವ ನಟಿ ಚೈತ್ರಾ ಆಚಾರ್, ಲೈಕ್ ಬಟನ್ ಓಪನ್ ಆಗಿಟ್ಟು, ಶೇರಿಂಗ್ ಆಪ್ಷನ್ ಕೊಟ್ಟಿದ್ದಾರೆ.