ಸುದ್ದಿ ಕೇಳಿದರೆ ನೀವು ದಂಗಾಗುವಿರಿ. ಆಲಿಯಾ ಭಟ್ 2021ರ ಬ್ರಾಂಡ್ ಮ್ಯೂವಾಂಕನ ರಿಪೋರ್ಟ್ ನಲ್ಲಿ, ಟಾಪ್ 10ನಲ್ಲಿ ಎಲ್ಲರಿಗಿಂತ ಅತಿ ಕಡಿಮೆ ವಯಸ್ಸಿನವಳು. ಇವಳ ಇನ್ ಸ್ಟಾಗ್ರಾಂಗೆ 67 ಮಿಲಿಯನ್ ಗೂ ಹೆಚ್ಟು ಫಾಲೋಯರ್ಸ್ ಇದ್ದಾರೆ. ಆ ಕಾರಣ, ಎಷ್ಟೋ ಬ್ರಾಂಡ್ಸ್ ಅವಳೊಂದಿಗೆ ಜಂಟಿಯಾಗಲು ಬಯಸುತ್ತವೆ. ಸೆಲೆಬ್ರಿಟಿ ವ್ಯಾಯಾಲ್ಯುಯೇಶನ್ ರಿಪೋರ್ಟ್ ಪ್ರಕಾರ, ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಅವಳು ತನ್ನ ಒಂದು ಸೋಶಿಯಲ್ ಮೀಡಿಯಾ ಜಾಹೀರಾತು ಪೋಸ್ಟ್ ನಿಂದಾಗಿ ಸುಮಾರು 85 ಲಕ್ಷದಿಂದ 1 ಕೋಟಿವರೆಗೂ ಗಳಿಸುತ್ತಾಳಂತೆ! ಸದ್ಯಕ್ಕಂತೂ ಆಲಿಯಾಳ ಫ್ಯಾನ್ಸ್ `ಡಾರ್ಲಿಂಗ್’ ಚಿತ್ರಕ್ಕಾಗಿ ಇವಳನ್ನು ಕೊಂಡಾಡುತ್ತಿದ್ದಾರೆ. ಇತ್ತೀಚೆಗೆ ಅವಳು ತನ್ನ ಪ್ರೆಗ್ನೆನ್ಸಿಯನ್ನೂ ಬಹಳ ಎಂಜಾಯ್ ಮಾಡುತ್ತಿದ್ದಾಳೆ. ಏಕೆ ಆಗಬಾರದು? ತಾಯಿ ಆಗುವ ಕನಸು ಪ್ರತಿಯೊಬ್ಬ ಹುಡುಗಿಗೂ ಇದ್ದೇ ಇರುತ್ತದೆ.
2 ಗುಡ್ ನ್ಯೂಸ್
`ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಧಾರಾವಾಹಿಯ ಅಭಿಮಾನಿಗಳಿಗೆ ಈಗೊಂದು ಹೊಸ ಗುಡ್ ನ್ಯೂಸ್! ಅಸಲಿಗೆ ಬಹಳ ದಿನಗಳ ಹಿಂದೆಯೇ ದಿಶಾ ಈ ಧಾರಾವಾಹಿಯಿಂದ ಬ್ರೇಕ್ ಪಡೆದಿದ್ದಳು. ಆದರೆ ಶೋ ಮೇಕರ್ಸ್, ಈ ಧಾರಾವಾಹಿಗೆ ದಯಾ ಬಹನ್ ವಾಪಸ್ ಬರಲಿ ಎಂದು ಕಾಯುತ್ತಿದ್ದರು. ಆದರೆ ಈಗ ಅವಳು ಹೆರಿಗೆ ರಜೆ ಮೇಲೆ ಹೊರಟಿದ್ದಾಳೆ. ಹೀಗಾಗಿ ದಯಾ ಬಹನ್ ಳನ್ನು ರೀಪ್ಲೇಸ್ ಮಾಡುವುದನ್ನು ಬಿಟ್ಟರೆ ಮೇಕರ್ಸ್ ಬಳಿ ಬೇರೆ ಆಯ್ಕೆ ಇಲ್ಲ. ಹೀಗಾಗಿ ಈಗ ದಯಾ ಬಹನ್ ಪಾತ್ರದಲ್ಲಿ ಕಾಜಲ್ ಪಿಸ್‌ಕಾಣಿಸಲಿದ್ದಾಳೆ, ಇದರಿಂದ ಪ್ರೇಕ್ಷಕರು ಹೆಚ್ಚು ಖುಷಿಯಾಗುವುದಂತೂ ನಿಜ. ಈಗಾಗಲೇ ಅವಳು `ನಾಗಿನ್, ಬಡೇ ಅಚೆ ಲಗ್ತೆ ಹೈ’ ಧಾರಾವಾಹಿಗಳಲ್ಲಿ ನಟಿಸಿದ್ದಾಳೆ.
ಪ್ರಿಯಾಂಕಾಳ ಮಗಳು ಇದೀಗ ಎಲ್ಲರ ಸಮ್ಮುಖದಲ್ಲಿ
ಪ್ರಿಯಾಂಕಾ ಚೋಪ್ರಾ ಮತ್ತು ನಿಕಲ್ ಜೋನಸ್ ಸರೋಗೆಸಿ ಮೂಲಕ ಮನೆಗೆ ಮುದ್ದಾದ ಮಗಳು ಬರುವಂತೆ ಮಾಡಿ, ತಾಯಿ ತಂದೆ ಆಗಿದ್ದಾರೆ. ಇದೀಗ ಇನ್ ಸ್ಟಾಗ್ರಾಂನಲ್ಲಿ ಈ ಜೋಡಿ ತಮ್ಮ ಹೊಸ ಮಗಳು ಮಾಲತಿಯ ಮುದ್ದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳಂತೂ ಮಗುವಿನ ಫೋಟೋ ನೋಡಿ ಹುಚ್ಚರಾಗಿದ್ದಾರೆ! ಇದರಲ್ಲಿ ಈ ಮಗು ವೈಟ್ ಡ್ರೆಸ್‌ಧರಿಸಿದ ಏಂಜೆಲ್ ನಂತಿದೆ. ಮಗಳ ಫೋಟೋ ಬಿಡುಗಡೆ ಮಾಡಿದ ಪ್ರಿಯಾಂಕಾ, ಮಗುವಿನ ಫ್ರಾಕ್ ಮೇಲೆ `ದೇಶೀ ಗರ್ಲ್’ ಎಂದು ಫ್ಯಾನ್ಸ್ ತನ್ನನ್ನು ಹೊಗಳುತ್ತಿದ್ದ ಹಾಗೇ ಬರೆಸಿದ್ದಾಳೆ. ಇದರಿಂದ ಅವಳ ಅಭಿಮಾನಿಗಳ ಸಡಗರ ಸಂಭ್ರಮ ಹೆಚ್ಚಿದೆ.
ಅಭಿಮಾನಿಗಳಿಗೆ ಶಾಕ್ ನೀಡಿದ ಕಿಯಾರಾ ಸಿದ್ಧಾರ್ಥ್
ಈಗ ಬಾಲಿವುಡ್ ನ ಅತಿ ಜನಪ್ರಿಯ ಜೋಡಿ ಯಾರು ಎಂದು ಪಟ್ಟಿ ಮಾಡಿದರೆ, ಅರಲ್ಲಿ ಕಿಯಾರಾ ಸಿದ್ದಾರ್ಥ್ ಎಲ್ಲರಿಗಿಂತ ಮುಂದಿರುತ್ತಾರೆ. ಇಬ್ಬರೂ ಒಟ್ಟೊಟ್ಟಿಗೆ ಟೈಂಪಾಸ್ ಮಾಡುತ್ತಾರೆ, ಗುಟ್ಟುಗುಟ್ಟಾಗಿ ಸಂಧಿಸುತ್ತಾರಂತೆ! ಆದರೆ ಈ ಮಾತನ್ನು ಇದುವರೆಗೂ ಈ ಜೋಡಿ ಖುಲ್ಲಂಖುಲ್ಲ ಒಪ್ಪಿಲ್ಲ. ಬಿಡಿ, ಅದು ಅವರವರ ಭಾವಕ್ಕೆ ಬಿಟ್ಟಿದ್ದು. ತಮ್ಮ ಅಭಿಮಾನಿಗಳು ಬಯಸಿದಾಗ, ಈ ಜೋಡಿ ಒಟ್ಟಾಗಿ ಅವರ ಮುಂದೆ ಕಾಣಿಸಿಕೊಂಡು ಖುಷಿಪಡಿಸಿದರು. ಇವರು ತಮ್ಮ `ಶೇರ್ ಶಾಹ್’ ಚಿತ್ರದ ಶೂಟಿಂಗ್ ಬಗ್ಗೆ ಹಂಚಿಕೊಳ್ಳುತ್ತಾ ಸಂಭ್ರಮಿಸಿದರು. ತಮ್ಮ ಆಸೆ ಪೂರೈಸಿದ ಈ ಜೋಡಿಯನ್ನು ಫ್ಯಾನ್ಸ್ ಮನದುಂಬಿ ಹಾರೈಸಿದರು.
ಲೀಕ್ ಆದ ಶಾರೂಖ್ ಲುಕ್ಸ್
ಅಯಾನ್ ಮುಖರ್ಜಿಯವರ `ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಶಾರೂಖ್ ಅತಿಥಿ ನಟನಾಗಿ ಕಾಣಿಸಲಿದ್ದಾನೆ. ಈ ಚಿತ್ರದ ಬಿಡುಗಡೆಗಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ. ಆದರೆ ಎಷ್ಟೇ ಎಚ್ಚರಿಕೆ ವಹಿಸಿ ಈ ಚಿತ್ರತಂಡ ಹುಷಾರಾಗಿದ್ದರೂ, ಹೇಗೋ ಏನೋ, ಈ ಚಿತ್ರದಲ್ಲಿ ಶಾರೂಖ್ ನ ಲುಕ್ಸ್ ಲೀಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದೆ. ಈತನ ಅಭಿಮಾನಿಗಳಿಗೆ ಈತ ಶಾಸ್ತ್ರಜ್ಞನಾಗಿ `ಬ್ರಹ್ಮಾಸ್ತ್ರ’ದಲ್ಲಿದ್ದಾನೆ. ಎಂದು ತಿಳಿದೇ ಹೋಯಿತು. ಲೀಕ್ ಆದ ಈ ಚಿತ್ರದಲ್ಲಿ ಶಾರೂಖ್ ಒಮ್ಮೆ ಬೆಂಕಿಯ ಬಲೆ ಮಧ್ಯೆ ನಿಂತಿದ್ದರೆ, ಮತ್ತೊಮ್ಮೆ ಆಕಾಶದಲ್ಲಿ ಹಾರಾಡುತ್ತಿದ್ದ. ಈ ವಿಡಿಯೋ ಇಷ್ಟು ಜನಪ್ರಿಯವಾಗಿದ್ದರೆ, ಮುಂದೆ ಈ ಚಿತ್ರ ಇನ್ನೆಷ್ಟು ಜನಪ್ರಿಯತೆ ಪಡೆಯಲಿದೆಯೋ?
ರಣವೀರ್ ಸಿಂಗ್ ನ ಫೋಟೋ ಶೂಟ್ ಕಿಚಾಯಿಸಿದ್ದೇಕೆ?
ರಣವೀರ್ ಸಿಂಗ್‌ಸದಾ ತನ್ನ ಡಿಫರೆಂಟ್ ಸೆಲ್ ಗಳಿಂದ ಮಿಂಚುತ್ತಿರುತ್ತಾನೆ. ಈ ಸಲ ಈತನ ಬೆತ್ತಲೆ ಫೋಟೋಶೂಟ್ ನಿಂದಾಗಿ ರಣವೀರ್ ಭಾರಿ ಬೆಲೆ ತೆರಬೇಕಾಯಿತು. ಈ ಶೂಟ್ ನಡೆದು ಬಹಳ ದಿನಗಳೇ ಆದರೂ, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಗರು ಈಗಲೂ ಈತನನ್ನು ವಾಚಾಮಾಗೋಚರವಾಗಿ ಕಿಚಾಯಿಸುತ್ತಿದ್ದಾರೆ, ವಿವಾದ ಮುಂದುವರಿಯುತ್ತಲೇ ಇದೆ. ಇದಕ್ಕಾಗಿ ಮುಂಬೈ ಪೊಲೀಸ್ ಆಗಸ್ಟ್ 22 ರಂದು ಠಾಣೆಗೆ ಬಂದು ಈ ಕುರಿತು ಸ್ಪಷ್ಟೀಕರಣದ ವಿವರಣೆ ನೀಡುವಂತೆ ಕೇಳಿತು. ನಡೆದದ್ದು ಇಷ್ಟೆ, ಒಂದು ಪತ್ರಿಕೆಗಾಗಿ ಈತ ನ್ಯೂಡ್‌ಫೋಟೋಶೂಟ್ ನಡೆಸಿದ್ದ. ಸುಮ್ಮನಿರಲಾಗದೆ ತನ್ನ ಇನ್ ಸ್ಟಾಗ್ರಾಮಿನಲ್ಲೂ ಅವನ್ನು ಹಾಕಿಕೊಂಡ. ಮಡಿವಂತ ಜನ ಸುಮ್ಮನೇ ಬಿಟ್ಟಾರಾ? ಅಂದಿನಿಂದ ಇಂದಿನವರೆಗೂ ಈ ಕುರಿತಾಗಿ ವಿವಾದ ನಡೆಯುತ್ತಲೇ ಇದೆ.
ಆಮೀರ್ ಗೆ ತಗುಲಿದ ದೊಡ್ಡ ಶಾಕ್!
ಬಹಳ ಕಾಲದ ನಂತರ ಆಮೀರ್ ಖಾನ್ ತನ್ನ ಡ್ರೀಂ ಪ್ರಾಜೆಕ್ಟ್ `ಲಾಲ್ ಸಿಂಗ್ ಚಡ್ಡಾ’ ಚಿತ್ರವನ್ನು ರಿಲೀಸ್ ಮಾಡಿಸಿದ. ಆದರೆ ಪೈರೆಸಿಯ ದುರ್ದೆಸೆಯಿಂದಾಗಿ ಈತನ ಚಿತ್ರ ಲೀಕ್ ಆದ್ದರಿಂದ, ಬಾಲಿವುಡ್ ದಿಗ್ಭ್ರಮೆಗೊಳ್ಳುವಂತೆ ದೊಡ್ಡ ಶಾಕ್ ತಗಲಿತು. ಇದು `3 ಈಡಿಯಟ್ಸ್’ನ್ನೂ ಮೀರಿಸುತ್ತದೆ ಎಂದು ಬಾಲಿವುಡ್ ಕಾದಿದ್ದೇ ಬಂತು. ಅಂದುಕೊಂಡಿದ್ದೇನು? ಆಗಿದ್ದೇನು? ರಕ್ಷಾಬಂಧನದ ದಿನ ವೀಕ್ಷಕರು ಥಿಯೇಟರ್ ಗೆ ಬಂದು ಈ ಚಿತ್ರ ನೋಡುವ ಬದಲು, ತಂತಮ್ಮ ಮೊಬೈಲ್ ಗಳಲ್ಲೇ ಡೌನ್ ಲೋಡ್ ಮಾಡಿಕೊಂಡು, ಇದ್ದ ಕಡೆಯೇ ಆನಂದಿಸಿದರು. ದ. ಭಾರತದಲ್ಲಂತೂ ಥಿಯೇಟರ್ ಗಳ ಕರೆಂಟ್ ಗೆ ಖರ್ಚಾದ ಹಣ ದಕ್ಕದೆ, ಮೊದಲ ದಿನವೇ ಇದಕ್ಕೆ ಖೊಕ್ ಕೊಟ್ಟರು! ಆದರೆ ಆಗುವುದನ್ನು ನಿಯಂತ್ರಿಸಲು ಯಾರಿಗೆ ಸಾಧ್ಯ? ಹೇಗೋ ಮುಂದಾದರೂ ಎಚ್ಚೆತ್ತುಕೊಳ್ಳಬೇಕು. ಬುದ್ಧಿಜೀವಿ ಆಮೀರ್ ತಲೆ ಮೇಲೆ ಕೈ ಹೊತ್ತು ಮಖಾಡೆ ಮಲಗಿಬಿಟ್ಟಿದ್ದಾನೆ!
ಖಲಿಯ ಕಂಗಳಲ್ಲಿ ಮಡುಗಟ್ಟಿದ ಕಂಬನಿ
ರೆಸ್ ಲಿಂಗ್ ಲೋಕದ ಅನಭಿಷಿಕ್ತ ದೊರೆ ಖಲಿ ಯಾರಿಗೆ ತಾನೇ ಗೊತ್ತಿಲ್ಲ? ಆತ ಸೋಶಿಯಲ್ ಮೀಡಿಯಾದಲ್ಲೂ ಸದಾ ಆ್ಯಕ್ಟಿವ್. ಆದರೆ ಇತ್ತೀಚೆಗೆ ಈತ FBನಲ್ಲಿ ಎಮೋಶನ್ ಆಗಿ ಕಂಬನಿ ಮಿಡಿದಾಗ, ಆ ವಿಡಿಯೋ ಕಂಡು ಅಭಿಮಾನಿಗಳು ತಾವು ಕರಗಿಹೋದರು. ನಡೆದದ್ದು ಏನು? ಸುದ್ದಿಗಾರರು ಈತನನ್ನು ಮುತ್ತಿ, ನಿಮ್ಮ ಬರ್ತ್ ಡೇ ತಯಾರಿ ಹೇಗೆ ನಡೆದಿದೆ ಎಂದಾಗ ಸೈರಿಸಲಾಗದೆ ಈತ ಕಂಬನಿ ಮಿಡಿದ. ಈತ ಹೀಗೆ ಅತ್ತಿದ್ದೇಕೆ ಎಂದು ಯಾರಿಗೂ ತಿಳಿಯಲಿಲ್ಲ. ಕೆಲವು ಅಭಿಮಾನಿಗಳು ಬಹುಶಃ ತಾಯಿಯ ನೆನಪು ಕಾಡಿರಬಹುದು ಎಂದು ಸಮಜಾಯಿಷಿ ನೀಡಿದರು.
ಕಮೆಡಿಯನ್ ರಾಜೂಗೆ ಬಿಗ್ ಬಿ ನೀಡಿದ ಸ್ಪೆಷಲ್ ಗಿಫ್ಟ್
ಇತ್ತೀಚೆಗೆ ಸಂಪೂರ್ಣ ಆರೋಗ್ಯ ಕೆಡಿಸಿಕೊಂಡ ಬಾಲಿವುಡ್ ನ ಕಮೆಡಿಯನ್ ರಾಜು ಶ್ರೀವಾಸ್ತವ್ ಆಸ್ಪತ್ರೆ ಸೇರಿದ್ದಾನೆ. ಅಭಿಮಾನಿಗಳೆಲ್ಲ ಈತನಿಗೆ ಬೇಗ ಗುಣವಾಗಲಿ ಎಂದು ಹಾರೈಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ರಾಜೂಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ಅಸಲಿಗೆ, ವಿಷಯ ತಿಳಿದಾಗಿನಿಂದ ಆತನಿಗೆ ಸತತ ಮೆಸೇಜ್ ಕಳುಹಿಸ ತೊಡಗಿದ್ದರು, ಫೋನ್ ಬಂದ್ ಆಗಿದ್ದರಿಂದ ರಾಜೂಗೆ ಏನೂ ಗೊತ್ತಾಗಲೇ ಇಲ್ಲ. ಆತನ ಆದರ್ಶ ವ್ಯಕ್ತಿಯ ಧ್ವನಿ ಕೇಳಿಸಿದರೆ ಬಹುಶಃ ಆತನ ಬ್ರೇನ್ ರೆಸ್ಪಾಂಡ್ ಮಾಡಬಹುದೇನೋ ಎಂದು ವೈದ್ಯರು ಅಭಿಪ್ರಾಯಪಟ್ಟರು. ಈ ವಿಷಯವನ್ನು ಆತನ ಮನೆಯವರು ಅಮಿತಾಬ್ ಗೆ ತಿಳಿಸಿದಾಗ, ಅವರು ಕೂಡಲೇ ಆಡಿಯೋ ಮೆಸೇಜ್ ಮೂಲಕ, ರಾಜು ಬೇಗ ಏಳು, ವಿಶ್ರಾಂತಿ ಸಾಕು. ಮುಂದಿನ ಚಿತ್ರದಲ್ಲಿ ಒಟ್ಟಿಗೆ ನಟಿಸೋಣ, ಬೇಕಾದಷ್ಟು ಕೆಲಸ ಬಾಕಿ ಇದೆ, ಎಂದು ಕಳುಹಿಸಿದರು. ಇದು ರಾಜು ಮೇಲೆ 100% ಪರಿಣಾಮ ಬೀರದಿದ್ದರೂ, ಮುಂದಿನ ದಿನಗಳಲ್ಲಿ ಈತ ಖಂಡಿತಾ ಸರಿಹೋಗಬಹುದೆಂದು ಅದೇ ವೈದ್ಯರು ಖಚಿತಪಡಿಸಿದರು.