ಸುದ್ದಿ ಕೇಳಿದರೆ ನೀವು ದಂಗಾಗುವಿರಿ. ಆಲಿಯಾ ಭಟ್‌ 2021ರ  ಬ್ರಾಂಡ್‌ ಮ್ಯೂವಾಂಕನ ರಿಪೋರ್ಟ್‌ ನಲ್ಲಿ, ಟಾಪ್‌ 10ನಲ್ಲಿ ಎಲ್ಲರಿಗಿಂತ ಅತಿ ಕಡಿಮೆ ವಯಸ್ಸಿನವಳು. ಇವಳ ಇನ್‌ ಸ್ಟಾಗ್ರಾಂಗೆ 67 ಮಿಲಿಯನ್‌ ಗೂ ಹೆಚ್ಟು ಫಾಲೋಯರ್ಸ್‌ ಇದ್ದಾರೆ. ಆ ಕಾರಣ, ಎಷ್ಟೋ ಬ್ರಾಂಡ್ಸ್ ಅವಳೊಂದಿಗೆ ಜಂಟಿಯಾಗಲು ಬಯಸುತ್ತವೆ. ಸೆಲೆಬ್ರಿಟಿ ವ್ಯಾಯಾಲ್ಯುಯೇಶನ್‌ ರಿಪೋರ್ಟ್‌ ಪ್ರಕಾರ, ಶಾಕಿಂಗ್‌ ನ್ಯೂಸ್‌ ಹೊರಬಿದ್ದಿದೆ. ಅವಳು ತನ್ನ ಒಂದು ಸೋಶಿಯಲ್ ಮೀಡಿಯಾ ಜಾಹೀರಾತು  ಪೋಸ್ಟ್ ನಿಂದಾಗಿ ಸುಮಾರು 85 ಲಕ್ಷದಿಂದ 1 ಕೋಟಿವರೆಗೂ ಗಳಿಸುತ್ತಾಳಂತೆ! ಸದ್ಯಕ್ಕಂತೂ ಆಲಿಯಾಳ ಫ್ಯಾನ್ಸ್ `ಡಾರ್ಲಿಂಗ್‌' ಚಿತ್ರಕ್ಕಾಗಿ ಇವಳನ್ನು ಕೊಂಡಾಡುತ್ತಿದ್ದಾರೆ. ಇತ್ತೀಚೆಗೆ ಅವಳು ತನ್ನ ಪ್ರೆಗ್ನೆನ್ಸಿಯನ್ನೂ ಬಹಳ ಎಂಜಾಯ್‌ ಮಾಡುತ್ತಿದ್ದಾಳೆ. ಏಕೆ ಆಗಬಾರದು? ತಾಯಿ ಆಗುವ ಕನಸು ಪ್ರತಿಯೊಬ್ಬ ಹುಡುಗಿಗೂ ಇದ್ದೇ ಇರುತ್ತದೆ.

2 ಗುಡ್ನ್ಯೂಸ್

`ತಾರಕ್‌ ಮೆಹ್ತಾ ಕಾ ಉಲ್ಟಾ ಚಶ್ಮಾ' ಧಾರಾವಾಹಿಯ ಅಭಿಮಾನಿಗಳಿಗೆ ಈಗೊಂದು ಹೊಸ ಗುಡ್‌ ನ್ಯೂಸ್‌! ಅಸಲಿಗೆ ಬಹಳ ದಿನಗಳ ಹಿಂದೆಯೇ ದಿಶಾ ಈ ಧಾರಾವಾಹಿಯಿಂದ ಬ್ರೇಕ್‌ ಪಡೆದಿದ್ದಳು. ಆದರೆ ಶೋ ಮೇಕರ್ಸ್‌, ಈ ಧಾರಾವಾಹಿಗೆ ದಯಾ ಬಹನ್‌ ವಾಪಸ್‌ ಬರಲಿ ಎಂದು ಕಾಯುತ್ತಿದ್ದರು. ಆದರೆ ಈಗ ಅವಳು ಹೆರಿಗೆ ರಜೆ ಮೇಲೆ ಹೊರಟಿದ್ದಾಳೆ. ಹೀಗಾಗಿ ದಯಾ ಬಹನ್‌ ಳನ್ನು ರೀಪ್ಲೇಸ್‌ ಮಾಡುವುದನ್ನು ಬಿಟ್ಟರೆ ಮೇಕರ್ಸ್‌ ಬಳಿ ಬೇರೆ ಆಯ್ಕೆ ಇಲ್ಲ. ಹೀಗಾಗಿ ಈಗ ದಯಾ ಬಹನ್‌ ಪಾತ್ರದಲ್ಲಿ ಕಾಜಲ್ ಪಿಸ್‌ಕಾಣಿಸಲಿದ್ದಾಳೆ, ಇದರಿಂದ ಪ್ರೇಕ್ಷಕರು ಹೆಚ್ಚು ಖುಷಿಯಾಗುವುದಂತೂ ನಿಜ. ಈಗಾಗಲೇ ಅವಳು `ನಾಗಿನ್‌, ಬಡೇ ಅಚೆ ಲಗ್ತೆ ಹೈ' ಧಾರಾವಾಹಿಗಳಲ್ಲಿ ನಟಿಸಿದ್ದಾಳೆ.

ಪ್ರಿಯಾಂಕಾಳ ಮಗಳು ಇದೀಗ ಎಲ್ಲರ ಸಮ್ಮುಖದಲ್ಲಿ

ಪ್ರಿಯಾಂಕಾ ಚೋಪ್ರಾ ಮತ್ತು ನಿಕಲ್ ಜೋನಸ್‌ ಸರೋಗೆಸಿ ಮೂಲಕ ಮನೆಗೆ ಮುದ್ದಾದ ಮಗಳು ಬರುವಂತೆ ಮಾಡಿ, ತಾಯಿ ತಂದೆ ಆಗಿದ್ದಾರೆ. ಇದೀಗ ಇನ್‌ ಸ್ಟಾಗ್ರಾಂನಲ್ಲಿ ಈ ಜೋಡಿ ತಮ್ಮ ಹೊಸ ಮಗಳು ಮಾಲತಿಯ ಮುದ್ದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳಂತೂ ಮಗುವಿನ ಫೋಟೋ ನೋಡಿ ಹುಚ್ಚರಾಗಿದ್ದಾರೆ! ಇದರಲ್ಲಿ ಈ ಮಗು ವೈಟ್‌ ಡ್ರೆಸ್‌ಧರಿಸಿದ ಏಂಜೆಲ್ ‌ನಂತಿದೆ. ಮಗಳ ಫೋಟೋ ಬಿಡುಗಡೆ ಮಾಡಿದ ಪ್ರಿಯಾಂಕಾ, ಮಗುವಿನ  ಫ್ರಾಕ್‌ ಮೇಲೆ `ದೇಶೀ ಗರ್ಲ್' ಎಂದು ಫ್ಯಾನ್ಸ್ ತನ್ನನ್ನು ಹೊಗಳುತ್ತಿದ್ದ ಹಾಗೇ ಬರೆಸಿದ್ದಾಳೆ. ಇದರಿಂದ ಅವಳ ಅಭಿಮಾನಿಗಳ ಸಡಗರ ಸಂಭ್ರಮ ಹೆಚ್ಚಿದೆ.

ಅಭಿಮಾನಿಗಳಿಗೆ ಶಾಕ್ನೀಡಿದ ಕಿಯಾರಾ ಸಿದ್ಧಾರ್ಥ್

ಈಗ ಬಾಲಿವುಡ್‌ ನ ಅತಿ ಜನಪ್ರಿಯ ಜೋಡಿ ಯಾರು ಎಂದು ಪಟ್ಟಿ ಮಾಡಿದರೆ, ಅರಲ್ಲಿ ಕಿಯಾರಾ ಸಿದ್ದಾರ್ಥ್‌ ಎಲ್ಲರಿಗಿಂತ ಮುಂದಿರುತ್ತಾರೆ. ಇಬ್ಬರೂ ಒಟ್ಟೊಟ್ಟಿಗೆ ಟೈಂಪಾಸ್‌ ಮಾಡುತ್ತಾರೆ, ಗುಟ್ಟುಗುಟ್ಟಾಗಿ ಸಂಧಿಸುತ್ತಾರಂತೆ! ಆದರೆ ಈ ಮಾತನ್ನು ಇದುವರೆಗೂ ಈ ಜೋಡಿ ಖುಲ್ಲಂಖುಲ್ಲ ಒಪ್ಪಿಲ್ಲ. ಬಿಡಿ, ಅದು ಅವರವರ ಭಾವಕ್ಕೆ ಬಿಟ್ಟಿದ್ದು. ತಮ್ಮ ಅಭಿಮಾನಿಗಳು ಬಯಸಿದಾಗ, ಈ ಜೋಡಿ ಒಟ್ಟಾಗಿ ಅವರ ಮುಂದೆ ಕಾಣಿಸಿಕೊಂಡು ಖುಷಿಪಡಿಸಿದರು. ಇವರು ತಮ್ಮ `ಶೇರ್‌ ಶಾಹ್‌' ಚಿತ್ರದ ಶೂಟಿಂಗ್‌ ಬಗ್ಗೆ ಹಂಚಿಕೊಳ್ಳುತ್ತಾ ಸಂಭ್ರಮಿಸಿದರು. ತಮ್ಮ ಆಸೆ ಪೂರೈಸಿದ ಈ ಜೋಡಿಯನ್ನು ಫ್ಯಾನ್ಸ್ ಮನದುಂಬಿ ಹಾರೈಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ