ಚಿತ್ರ: ಕಪಟಿ
ನಿರ್ಮಾಣ: ದಯಾಳ್ ಪದ್ಮನಾಭನ್
ನಿರ್ದೇಶನ: ರವಿ ಕಿರಣ್ ಹಾಗೂ ಚೇತನ್ ಎಸ್‌ಪಿ
ತಾರಾಂಗಣ: ಸುಕೃತಾ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್  ಮೊದಲಾದವರು
ರೇಟಿಂಗ್:3.5/5

ರಾಘವೇಂದ್ರ ಅಡಿಗ ಎಚ್ಚೆನ್.
ರವಿ ಕಿರಣ್ ಹಾಗೂ ಚೇತನ್ ಎಸ್‌ಪಿ ನಿರ್ದೇಶನದ ಡಿ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ  ದಯಾಳ್ ಪದ್ಮನಾಭನ್ ನಿರ್ಮಾಣದ ಕಪಟಿ ಸಿನಿಮಾ ಈ ವಾರ(ಮಾರ್ಚ್ 7)ತೆರೆಗೆ ಬಂದಿದೆ.  ಸುಕೃತಾ ವಾಗ್ಲೆ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಜೊತೆ ಜೊತೆಯಲಿ ಸೀರಿಯಲ್ ಕ್ಯಾತಿ ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಜೋಹನ್ ಸಂಗೀತ, ಸತೀಶ್ ರಾಜೇಂದ್ರನ್ ಛಾಯಾಗ್ರಹಣ ಹಾಗೂ ಸಂತೋಷ್ ಟಿ ಸಂಕಲನ ಸಿನಿಮಾಗಿದೆ.

ಇದೊಂದು Dark Web ಕುರಿತಾದ ಥ್ರಿಲ್ಲರ್  ಸಿನಿಮಾ ಆಗಿದ್ದು ಸಿನಿಮಾ ಹೇಗಿದೆ ಎಂದು ತಿಳಿಯಲು ಮುಂದೆ ಓದಿ…

ಪ್ರಿಯಾ (ಸುಕ್ರುತಾ ವಾಗ್ಲೆ) ಮನೆಗೆ ಗೋಣಿ ಚೀಲಗಳಲ್ಲಿ ತುಂಬಿಸಲಾದ ಹಣದ ದೊಡ್ಡ ದೊಡ್ಡ ಕಟ್ಟುಗಳು ಆಗಮಿಸುವುದರೊಂದಿಗೆ “ಕಪಟಿ” ಸಿನಿಮಾ ಪ್ರಾರಂಭವಾಗುತ್ತದೆ. ಇದಾಗಿ ಕೆಲವೇ ಹೊತ್ತಿನಲ್ಲಿ , ಪ್ರಿಯಾ ತನ್ನ ತಂದೆ ಮತ್ತು ಕಿರಿಯ ಸಹೋದರನೊಂದಿಗೆ ಐಷಾರಾಮಿ ಬಂಗಲೆಗೆ ತನ್ನ ವಾಸ ಬದಲಿಸುತ್ತಾಳೆ.ಪ್ರಿಯಾ ಓರ್ವ ಯಶಸ್ವಿ ಕಾಸ್ಟ್ಯೂಮ್ ಡಿಸೈನರ್ ಆಗಿರುತ್ತಾಳೆ.

ಅಲ್ಲದೆ ಆಕೆಯ ತಂದೆ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಹಾಗೂ ಸೋದರ ಈಗಷ್ಟೇ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದ ಕ್ರಿಕೆಟರ್! ಆದರೆ ಸೋದರ ಅಮಿತ್ ಗೆ ಅಪಘಾತವಾದ ಪರಿಣಾಮ ಅವನು ತಂಡದಿಂಡ ಹೊರಬರಬೇಕಾಗುತ್ತದೆ. ಅವನು ಹಾಸಿಗೆ ಹಿಡಿಯುತ್ತಾನೆ, ಅವನಿಗೆ  ಪಾರ್ಶ್ವವಾಯು ತಗುಲುತ್ತದೆ. ಒಂದು ಕಾಲದಲ್ಲಿ ಸದಾ ಸಂತೋಷ ನಗುವಿನಿಂದ ಕುಡಿದ್ದ ಪ್ರಿಯಾಳ ಮನೆ ಈಗ ಭಯಾನಕ ಮೌನಕ್ಕೆ ಶರಣಾದಂತಿದೆ.

ಈ ಸಮಯದಲ್ಲಿ ಅವರ ಮನೆಗೆ ಇಬ್ಬರು ನಿಗೂಢ ವ್ಯಕ್ತಿಗಳು ಪ್ರವೇಶಿಸುತ್ತಾರೆ. ಅವರ ಮೂಲಕ “ಕಪಟಿ” ಡಾರ್ಕ್ ವೆಬ್ ನತ್ತ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಮುಂದಿನ ಭಾಗವೆಲ್ಲಾ  ಥ್ರಿಲ್ಲರ್ ಕಥೆಯನ್ನಾಧರಿಸಿದೆ. ಇದರ ರಹಸ್ಯವನ್ನು ಅರಿಯಲು ನೀವು ಇಂದು (ಮಾರ್ಚ್ 7) ಬಿಡುಗಡೆ ಆದ “ಕಪಟಿ” ಸಿನಿಮಾವನ್ನು ಸಿನಿಮಾ ಮಂದಿರದಲ್ಲಿ ನೋಡಬೇಕು.

ಇಂದು ಲ್ಲರೂ ತಂತ್ರಜ್ಞಾನವನ್ನು ಅವಲಂಬಿಸಿದ್ದಾರೆ, ವಿಶೇಷವಾಗಿ ಸ್ಮಾರ್ಟ್ ಫೋನ್, ಗ್ಯಾಜೆಟ್ ಗಳು ನಿತ್ಯದ ಜೀವನದಲ್ಲಿ ಹಣಕಾಸಿನ ವಹಿವಾಟುಗಳಿಂದ ಹಿಡಿದು ಮನರಂಜನೆ, ಕೆಲಸ ಮತ್ತು ಅದಕ್ಕೂ ಮೀರಿ ಎಲ್ಲಾ ರೀತಿಯಲ್ಲಿ ನಮಗೆ ಅಗತ್ಯವಾಗಿದೆ. ತಂತ್ರಜ್ಞಾನವು ನಮ್ಮ ಜೀವನದಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ ಅದಿಲ್ಲದೆ  ಬದುಕುವುದನ್ನು ಊಹಿಸಿಕೊಳ್ಳುವುದು ಕಷ್ಟ. ಆದಾಗ್ಯೂ, ಡಿಜಿಟಲ್ ವಂಚನೆ, ದತ್ತಾಂಶ ಕಳ್ಳತನ ಮತ್ತು ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ, ದುರುದ್ದೇಶಪೂರಿತ ಅಪರಾಧಗಳು ದುರ್ಬಲರನ್ನು ಬಳಸಿಕೊಳ್ಳಲು ಪ್ರಯತ್ನಿಸಿದೆ. ಮತ್ತು ನಮ್ಮ ಆನ್ ಲೈನ್ ದತ್ತಾಂಶದ ಭದ್ರತೆಗೆ ಅಪಾಯವನ್ನುಂಟು ಮಾಡುತ್ತಿದೆ. “ಕಪಟಿ” ಚಿತ್ರದ ಕಥೆ ಇಂತಹಾ ಡಾರ್ಕ್ ವೆಬ್ ಜಾಲವನ್ನು ವಿವರಿಸುವ ಕಥೆಯಾಗಿದೆ. ಚಿತ್ರಕಥೆಯ ಹೆಚ್ಚಿನ ಭಾಗ ಒಂದೇ ಮನೆಯೊಳಗೆ  ನಡೆಯುತ್ತದೆ.  ಉದ್ವಿಗ್ನ ವಾತಾವರಣವನ್ನು ಸೃಷ್ಟಿಸುತ್ತದೆ, ವಿಶೇಷವಾಗಿ ಪ್ರಿಯಾ ತನ್ನ ಸುತ್ತಲೂ ಏನೋ ಅಸಾಮಾನ್ಯ ಘಟನೆ ನಡೆಯುತ್ತಿದೆ ಎಂದು ತಿಳಿದಾಗ ಚಿತ್ರಕಥೆಯು ಸಂಕೀರ್ಣತೆಯನ್ನು ಪಡೆಯುತ್ತದೆ.

ಸುಕೃತಾ ವಾಗ್ಲೆ ಈ ಚಿತ್ರದಲ್ಲಿ ಮತ್ತೊಮ್ಮೆ ತಮ್ಮ ಉತ್ತಮ ಅಭಿನಯ ಪ್ರದರ್ಶಿಸಿದ್ದಾರೆ. ಇದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಇಬ್ಬರು ನಾಯಕ ನಟರಲ್ಲಿ, ಚಕ್ರಿ, ವಿಶೇಷವಾಗಿ ತನ್ನ ವಿಶಿಷ್ಟ ಧ್ವನಿಯೊಂದಿಗೆ ಗಮನ ಸೆಳೆಯುತ್ತಾರೆ.

ಚಿತ್ರದ ಕುತೂಹಲಕರ ಭಾಗದ ಹೊರತಾಗಿ ಚಿತ್ರದ ದ್ವಿತೀಯಾರ್ಧದಲ್ಲಿ ಚಿತ್ರಕಥೆ ತೀವ್ರತೆ ಕಡಿಮೆಯಾಗಿದೆ. ಕ್ಲೈಮ್ಯಾಕ್ಸ್ ನಲ್ಲಿ ಸಾಮಾನ್ಯವಾಗಿ ಊಹಿಸಬಹುದಾದ ಅಂತ್ಯ ಎದುರಾಗುತ್ತದೆ. ತಾಂತ್ರಿಕ ದೃಷ್ಟಿಯಿಂದ “ಕಪಟಿ” ಉತ್ತಮವಾದ ಚಿತ್ರ. ಚಿತ್ರದ ಹಿನ್ನೆಲೆ ಸಂಗೀತವು ವಿಲಕ್ಷಣ, ಸಸ್ಪೆನ್ಸ್ ವಾತಾವರಣಕ್ಕಿಎ ಹೆಚ್ಚು ಸೂಕ್ತವಾಗುತ್ತದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ