ತನ್ನ ಮುದ್ದು ಮುಖ, ಅದ್ಬುತ ನಟನೆಯಿಂದ ಅಭಿಮಾನಿಗಳ ಮನಗೆದ್ದಿರುವ ನಟಿ ರುಕ್ಮಿಣಿ ವಸಂತ್ ಇದೀಗ ಬಹು ಬೇಡಿಕೆಯ ನಟಿ ಎನ್ನಿಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾ ಒಪ್ಪಿಕೊಂಡ ರುಕ್ಷ್ಮಿಣಿ, ಈ ಟಾಲಿವುಡ್ ಸ್ಟಾರ್ ನಟನ ಸಿನಿಮಾದಲ್ಲಿ ನಟಿಸೋದಿಲ್ಲ ಎಂದಿದ್ದಾರೆ. ಆ ಸ್ಟಾರ್ ನಟ ಯಾರು? ಇವರೇಕೆ ಸಿನಿಮಾ ರಿಜೆಕ್ಟ್ ಮಾಡಿದ್ರು? ಇದಕ್ಕೆ ಕಾರಣವಾದ್ರೂ ಏನು?
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸಕ್ಸಸ್ ಬಳಿಕ ನಟಿ ರುಕ್ಮಿಣಿ ವಸಂತ್ ಅವರಿಗೆ ಪರಭಾಷೆಯಲ್ಲೂ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ರುಕ್ಮಿಣಿ ಅವರಿಗೆ ಟಾಲಿವುಡ್ ಯಂಗ್ ಹೀರೋ ವಿಜಯ್ ದೇವಕೊಂಡ ಸಿನಿಮಾ ಆಫರ್ ಬಂದಿತ್ತಂತೆ ಆದರೆ ರುಕ್ಮಿಣಿ ವಸಂತ್ ಈ ಆಫರ್ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬಿಗ್ ಹಿಟ್ ನಿರೀಕ್ಷೆಯಲ್ಲಿರುವ ನಟ ವಿಜಯ್ ದೇವರಕೊಂಡ ಸದ್ಯ ಕಿಂಗ್ಡಮ್ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಗೌತಮ್ ತಿನ್ನನುರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದರ ಜೊತೆಗೆ ನಟ ವಿಜಯ್ ಕೈಯಲ್ಲಿ ರೌಡಿ ಜನಾರ್ಧನ್ ಸಿನಿಮಾ ಕೂಡ ಇದೆ. ದೇವರಕೊಂಡ ಅಭಿನಯದ ಈ ಎರಡೂ ಸಿನಿಮಾಗಳ ಮೇಲೂ ಸಿನಿರಸಿಕರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ರೌಡಿ ಜನಾರ್ಧನ್ ಸಿನಿಮಾವನ್ನು ರವಿ ಕಿರಣ್ ಕೋಲಾ ಅವರು ನಿರ್ದೇಶನ ಮಾಡಲಿದ್ದಾರೆ. ದಿಲ್ ರಾಜು ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುವುದಾಗಿ ಹೇಳಿದ್ದಾರೆ. ರೌಡಿ ಜನಾರ್ಧನ್ ಸಿನಿಮಾಕ್ಕೆ ಚಿತ್ರತಂಡ ನಾಯಕ ನಟಿಯಾಗಿ ರುಕ್ಮಿಣಿ ವಸಂತ್ ಅವರನ್ನು ಆಯ್ಕೆ ಮಾಡಿತ್ತು. ಆದರೆ ರುಕ್ಷ್ಮಿಣಿ ಈ ಆಫರ್ ರಿಜೆಕ್ಟ್ ಮಾಡಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ರುಕ್ಮಿಣಿ ವಸಂತ್ ಅವರಿಗೆ ನಟ ವಿಜಯ್ ದೇವರಕೊಂಡ ಸಿನಿಮಾಗೆ ಡೇಟ್ ಕೊಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.. ಬ್ಯುಸಿ ಶೆಡ್ಯೂಲ್ ಹಿನ್ನೆಲೆ ರುಕ್ಮಿಣಿ ವಸಂತ್ ಅವರು ವಿಜಯ್ ದೇವರಕೊಂಡ ಸಿನಿಮಾಗೆ ನೋ ಹೇಳಿದ್ದಾರಂತೆ.
ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ ಟಿಆರ್ ಕಾಂಬಿನೇಷನ್ ಸಿನಿಮಾದಲ್ಲಿ ರುಕ್ಕು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ಶೂಟಿಂಗ್ ಕೂಡ ಆರಂಭವಾಗಿದೆ.
ಸ್ಯಾಂಡಲ್ವುಡ್ನ ಬ್ಯೂಟಿ ರುಕ್ಮಿಣಿ ವಸಂತ್ ಅದ್ಭುತ ಅಭಿನಯದಿಂದ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಯಶಸ್ಸಿನ ಬಳಿಕ ರುಕ್ಮಿಣಿಗೆ ಸಾಲು ಸಾಲು ಸಿನಿಮಾ ಆಫರ್ಗಳು ಬಂದಿವೆ. ಹಾಗಾಗಿ ರುಕ್ಕು ಇದೀಗ ಫುಲ್ ಬ್ಯುಸಿ ನಟಿ ಆಗಿದ್ದಾರೆ.
ಶಾಸ್ತ್ರೀಯ ನೃತ್ಯದಲ್ಲೂ ಸೈ ಎನ್ನಿಸಿಕೊಂಡಿರುವ ರುಕ್ಮಿಣಿ, ನಟನೆಯಲ್ಲೂ ಹಲವರನ್ನು ಮೀರಿಸಿದ್ದಾರೆ. ತನ್ನ ಅಭಿನಯದಿಂದಲೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 2019ರಲ್ಲಿ ತೆರೆಕಂಡ ಬೀರಬಲ್ ಟ್ರಯಾಲಜಿ ಸಿನಿಮಾ ಮೂಲಕ ರುಕ್ಮಿಣಿ ವಸಂತ್ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು. ಸಪ್ತ ಸಾಗರದಾಚೆ ಸಿನಿಮಾ ಮೂಲಕ ಫೇಮಸ್ ಆದರು. ಟಾಲಿವುಡ್, ಕಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲೂ ಗುರುತಿಸಿಕೊಂಡರು. ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ಕೆಮಿಸ್ಟ್ರಿ ಸಹ ಸಖತ್ತಾಗೇ ಇತ್ತು.
ಸಪ್ತ ಸಾಗರದಾಚೆ ಎಲ್ಲೋ ನಾಯಕಿ ರುಕ್ಮಿಣಿ ವಸಂತ್ ಅವರು ಶಿವಕಾರ್ತಿಕೇಯನ್ ಮುಂದಿನ ಸಿನಿಮಾ ಎಸ್ಕೆ23ಗೆ ನಾಯಕಿಯಾಗಿದ್ದಾರೆ. ಎಆರ್ ಮುರಗದಾಸ್ ನಿರ್ದೇಶನದ ಈ ಚಿತ್ರಕ್ಕೆ ಇತ್ತೀಚಿಗಷ್ಟೇ ಆಕ್ಷನ್ ಕಟ್ ಹೇಳಲಾಗಿದೆ. ರುಕ್ಮಿಣಿ ವಸಂತ್ ಇದೀಗ ತೆಲುಗು ಚಿತ್ರಗಳಿಗೂ ಸಹಿ ಹಾಕಿದ್ದಾರೆ. ತೆಲುಗಿನ ಮಾಸ್ ರಾಜ ರವಿತೇಜಗೆ ರುಕ್ಮಿಣಿ ವಸಂತ್ ಜೋಡಿಯಾಗಿದ್ದಾರೆ. ಖ್ಯಾತ ನಿರ್ದೇಶಕ ಕೆವಿ ಅನುದೀಪ್ ಜೊತೆ ಕೆಲಸ ಮಾಡಲು ರುಕ್ಮಿಣಿ ಮುಂದಾಗಿದ್ದಾರೆ.