ಇದೋ….. ಬಂದೇಬಿಟ್ಟಿತು ದೀಪಾವಳಿ ಹಬ್ಬ! ಮಾರ್ಕೆಟ್ ನಲ್ಲಿ ಬ್ಯೂಟಿ ಪ್ರಾಡಕ್ಟ್ಸ್ ಧೂಳೆಬ್ಬಿಸಿದೆ. ಬೇರೆ ಬೇರೆ ಬ್ರಾಂಡ್ಸ್ ಅತ್ಯಾಕರ್ಷಕ ಆಫರ್ಸ್ ನೀಡುತ್ತಿವೆ. ಏಕೆಂದರೆ ಹೆಂಗಸರು ಈ ಸಂದರ್ಭದಲ್ಲಿ ತಮ್ಮನ್ನು ತಾವು ಅತಿ ಸುಂದರವಾಗಿ ಪ್ರಸ್ತುತಪಡಿಸಲು, ಮಾರ್ಕೆಟ್ ನ ಬಹುತೇಕ ಬ್ರಾಂಡ್ಸ್ ಟ್ರೈ ಮಾಡಿಯೇ ತೀರುತ್ತಾರೆ. ಹೀಗಾಗಿ ನೀವು ಎಂಥ ಬ್ಯೂಟಿ ಪ್ರಾಡಕ್ಟ್ಸ್ ಕೊಳ್ಳಲಿದ್ದೀರಿ, ಯಾವ ವಿಷಯ ಗಮನದಲ್ಲಿಡಬೇಕು, ಯಾವಾಗ, ಎಲ್ಲಿಂದ ಕೊಳ್ಳಬೇಕು, ಇತ್ಯಾದಿ ನಿಗಾ ವಹಿಸಿ ನಿಮ್ಮ ಬಜೆಟ್ ಕಂಟ್ರೋಲ್ ನಲ್ಲಿರುವಂತೆ ನೋಡಿಕೊಳ್ಳಿ. ಇದಕ್ಕಾಗಿ ಇಲ್ಲಿವೆ ಕೆಲವು ಮುಖ್ಯ ಸಲಹೆಗಳು.
ಲಿಪ್ ಕೇರ್
ಹಬ್ಬಕ್ಕಾಗಿ ತುಟಿಗಳ ಶೃಂಗಾರದ ಕಡೆ ಗಮನಹರಿಸಲು ಸಮಯವಿಲ್ಲವೇ? ಹಾಗೆ ಮಾಡದಿರಿ, ಇಡೀ ಮುಖದ ಕೇಂದ್ರಬಿಂದುವಾದ ತುಟಿಗಳ ಲಿಪ್ ಸ್ಟಿಕ್ ಎಲ್ಲಕ್ಕಿಂತ ಮುಖ್ಯ. ನೀವು ಎಂಥ ಉತ್ಕೃಷ್ಟ ಉಡುಗೆ ಧರಿಸಿದ್ದರೂ ಸಹ, ತುಟಿಗಳನ್ನು ನಿರ್ಲಕ್ಷಿಸಿದ್ದರೆ ಗ್ಲಾಮರಸ್ ಟಚ್ ನೀಡಿದಂತೆ ಆಗುವುದೇ ಇಲ್ಲ. ಆಗ ನಿಮ್ಮ ದುಬಾರಿ ಉಡುಗೆ ಕಡೆ ಯಾರ ಗಮನ ಹರಿಯೋಲ್ಲ, ನಿಮ್ಮಲ್ಲಿ ಆಕರ್ಷಣೆ ಸಹ ಉಂಟಾಗಲ್ಲ.
ಹಾಗಾದರೆ ಟಾಪ್ ಲಿಪ್ ಸ್ಟಿಕ್ ಬ್ರಾಂಡ್ಸ್ ಬಗ್ಗೆ ತಿಳಿಯೋಣವೇ? ಇದರಿಂದ ನಿಮಗೆ ಸ್ಮಾರ್ಟ್ ಲುಕ್ಸ್ ಗ್ಯಾರಂಟಿ.
ಟಾಪ್ 5 ಲಿಪ್ ಸ್ಟಿಕ್ ಬ್ರಾಂಡ್ಸ್ ಇನ್ ಟ್ರೆಂಡ್ಸ್ : ಇಲ್ಲಿ ನೀವು ಮ್ಯಾಟ್ ನಿಂದ ಹಿಡಿದು ಹೈ ಶೈನ್ ಫಿನಿಶ್ ಲಿಪ್ ಸ್ಟಿಕ್ ಬಳಸಿಕೊಳ್ಳಬಹುದು, ನಿಮ್ಮ ಇಷ್ಟದ ಆಯ್ಕೆ ಪ್ರಕಾರ! ಇದನ್ನು ಬಳಸಿ ನೀವು ದೀಪಾವಳಿಯ ಸಂಜೆಗಳಲ್ಲಿ ಹೆಚ್ಚು ಗ್ಲಾಮರಸ್ ಆಗಿ ಮಿಂಚಬಹುದು.
ಲ್ಯಾಕ್ಮೆ 95 ಮ್ಯಾಟ್ ಲಿಪ್ ಕಲರ್, ಇದರಲ್ಲಿ ಗರಿಷ್ಠ ಗ್ಲಾಮರಸ್ ಪ್ರಾಡಕ್ಟ್ಸ್ ಆರಿಸಿಕೊಳ್ಳುವ ಆಯ್ಕೆ ಇದೆ. ನೈಕಾದಿಂದ ಮ್ಯಾಟ್ ಲಿಪ್ ಸ್ಟಿಕ್ಸ್, ಇದರ ರೆಡ್‌ಕ್ರಂಚಿ ಕಲರ್ ನಿಮ್ಮ ತುಟಿಗಳಿಗೆ ಕ್ರಂಚ್ ತರುವುದರ ಜೊತೆ ಜೊತೆಯಲ್ಲೇ ತುಂಬಾ ದುಬಾರಿ ಆಗದೆ, ಪಾಕೆಟ್ ಫ್ರೆಂಡ್ಲಿ ಆಗಿದೆ.
ಲ್ಯಾಕ್ಮೆ ಆ್ಯಬ್ ಸಲ್ಯೂಟ್ ಮಸಾಬಾ ರೇಂಜ್ ನಲ್ಲಿ 10ಕ್ಕಿಂತ ಹೆಚ್ಚುವರಿ ಶೇಡ್ಸ್ ಇದ್ದು, ಭಾರತೀಯ ಚರ್ಮಕ್ಕೆ ಪರ್ಫೆಕ್ಟ್ ಎನಿಸಿದೆ. ಅದೇ ತರಹ ಶುಗರ್ ಲಿಕ್ವಿಡ್ ಲಿಪ್ ಸ್ಟಿಕ್ ಪರ್ಫೆಕ್ಟ್ ಮಾತ್ರವಲ್ಲದೆ, ಬಜೆಟ್ ಫ್ರೆಂಡ್ಲಿ ಕೂಡ. ಇದನ್ನು ನೈಕಾ ವೆಬ್ ಸೈಟ್ ನಿಂದ ಸೋಡಿ ಸಹಿತ ಪಡೆಯಬಹುದು.
ನೇಲ್ ಕೇರ್ ಡ್ರೆಸ್
ರೆಡಿ ಆದ ನಂತರ, ಉಗುರಿಗೆ ಟ್ರೆಂಡಿ ನೇಲ್ ಪಾಲಿಶ್ ಯಾ ನೇಲ್ ಆರ್ಟ್ ನಿಂದ ಸೆಲಿಶ್ ಲುಕ್ ಪಡೆಯಿರಿ.
ನೇಲ್ ಪಾಲಿಶ್ ಇನ್ ಟ್ರೆಂಡ್ಸ್ : ನೇಲ್ ಪಾಲಿಶ್ ಖರೀದಿಸುವಾಗ, ಮ್ಯಾಟ್ ಯಾ ಗ್ಲಾಸಿ ನೇಲ್ ಪಾಲಿಶ್ ಯಾವುದನ್ನು ಖರೀದಿಸಬೇಕೋ ಆ ಬಗ್ಗೆ ಎಲ್ಲಕ್ಕೂ ಮೊದಲು ಮೈಂಡ್ ಸೆಟ್ ಮಾಡಿಕೊಳ್ಳಿ. ಏಕೆಂದರೆ ಇವೆರಡೂ ಈಗ ಟ್ರೆಂಡಿ ಎನಿಸಿವೆ. ಇನ್ನು ಅವುಗಳ ಬಣ್ಣದ ವಿಷಯ, ಇಲ್ಲಿನ ಎಲ್ಲ ಕಲರ್ಸ್ ಟಾಪ್ ಟ್ರೆಂಡಿ ಎನಿಸಿವೆ. ಇವು ಎಲ್ಲಾ ಬಗೆಯ ಡ್ರೆಸ್‌ಸ್ಕಿನ್ ಟೋನ್ ಟೈಪ್ ಗೂ ಸೂಟ್ ಆಗುತ್ತವೆ. ಇವನ್ನು ನಿಮ್ಮ ನೆಚ್ಚಿನ ಸೈಟ್ ಗಳಿಂದ ಆನ್ ಲೈನ್ ಖರೀದಿಸಿ.
ನೀವು ಗ್ಲಿಟರ್ ನೇಲ್ ಪೇಂಟ್ ಅಭಿಮಾನಿಗಳಾಗಿದ್ದರೆ, ಸ್ವಿಸ್ ಬ್ಯೂಟಿ ಹೈ ಶೈನ್ ಗ್ಲಿಟರ್ ನೇಲ್ ಪಾಲಿಶ್ ಖರೀದಿಸುವ ಆಪ್ಶನ್ಶ್ ಚೂಸ್ ಮಾಡಿಕೊಳ್ಳಬಹುದು. ಇದರ ಜೂಸಿ ರೆಡ್ ಕಲರ್ ಎಲ್ಲರ ಪೆಟ್ ಕಲರ್ ಆಗಿದೆ. ಇದಕ್ಕಾಗಿ ನೀವು ನೈಕಾ, ರೆವ್ಲಾನ್‌ಕಲರ್ ಬಾರ್ ನಂಥ ಬ್ರಾಂಡ್ಸ್ ಆರಿಸಬಹುದು. ರಾಯಲ್ ಡಾರ್ಕ್ ಟೀಲ್ ಕಲರ್ ನಿಮ್ಮ ಕೈಗಳಿಗೆ ರಾಯಲ್ ಲುಕ್ಸ್ ನೀಡುತ್ತದೆ.
ಇದು ಲ್ಯಾಕ್ಮೆ 95 ಕಲೆಕ್ಷನ್ ನಲ್ಲಿ ಧಂಡಿಯಾಗಿ ದೊರಕುತ್ತದೆ. ಜೊತೆಗೆ ಮಿಲ್ಕ್ ಚಾಕಲೇಟ್ ಕಲರ್ ಅಂತೂ ಕೈಗಳನ್ನು ಮತ್ತಷ್ಟು ಬ್ರೈಟ್ ಆಗಿಸುತ್ತದೆ. ಇದಕ್ಕಾಗಿ ಫೇಸೆಸ್ ಕನಾಡಾ, ಲ್ಯಾಕ್ಮೆಯಂಥ ಬ್ರಾಂಡ್ ಗಳನ್ನು ಆರಿಸಿ. ಅಮೆಝಾನ್, ನೈಕಾಗಳಿಂದ ಇವನ್ನು ಸ್ಮಾರ್ಟಾಗಿ ಖರೀದಿಸಬಹುದು. ಇತ್ತೀಚೆಗೆ ಬರ್ಗಂಡಿ ಕಲರ್ ಸಹ ಬಹಳ ಜನಪ್ರಿಯ. ನೀವು ಆನ್ ಲೈನ್ 3D ನೇಲ್ ಆರ್ಟ್‌ಸ್ಟಿಕ್ ನಿಂದ ಬೇಕಾದಷ್ಟು ಉತ್ತಮ ಲುಕ್ಸ್ ಗಳಿಸಬಹುದು.
ಫೇಸ್ ಕೇರ್
ಕೆಲವೇ ಗಂಟೆಗಳಲ್ಲಿ ಮುಖಕ್ಕೆ ಕಾಂತಿ ತರಲು ಕೆಲಲಪ ಸ್ಕಿನ್ ಪ್ರಾಡಕ್ಟ್ಸ್ ಪರ್ಫೆಕ್ಟ್ ಎನಿಸಿವೆ. ಇದನ್ನು ಬಳಸಿ 1-2 ಗಂಟೆಗಳಲ್ಲಿ ಗಮನಿಸಿದಾಗ, ಪವಾಡ ಸದೃಶ ಪರಿಣಾಮ ಕಂಡುಬರುತ್ತದೆ.
ಬಹಳಷ್ಟು ಈಗ ಟ್ರೆಂಡಿ ಎನಿಸಿವೆ : ಇತ್ತೀಚೆಗೆ ಚಾರ್ ಕೋಲ್ ಫೇಸ್ ಮಾಸ್ಕ್ ಗೆ ಇರುವಷ್ಟು ಬೇಡಿಕೆ ಬೇರಾವುದಕ್ಕೂ ಇಲ್ಲ. ಇದು ಚರ್ಮಕ್ಕೆ ಅಷ್ಟೇ ಪರಿಣಾಮಕಾರಿ ಎನಿಸಿದೆ. ವಿಶೇಷವಾಗಿ ಮಾಮಾ ಅರ್ಥ್ ನಲ್ಲಿ 3 ಫೇಸ್ ಮಾಸ್ಕ್ ಫೇಮಸ್. ಇದರಲ್ಲಿ ಚಾರ್ ಕೋಲ್, ಕಾಫಿ, ಕ್ಲೇ ಅಂಶಗಳಿದ್ದು ಚರ್ಮದ ಕೊಳಕನ್ನು ಕೆಲವೇ ನಿಮಿಷಗಳಲ್ಲಿ ತೊಲಗಿಸಿ, ಕಾಂತಿಯುತ ಚರ್ಮ ನಿಮ್ಮದಾಗಿಸುತ್ತದೆ. ಇದು ಫೇಸ್ ಪ್ಯಾಕ್ (ಲೇಪ) ಆಗಿಯೂ ನಿಮಗೆ ಲಭ್ಯ.
ಇದು ಚರ್ಮವನ್ನು 100% ಕ್ಲೀನ್ ಮಾಡುವ ಜೊತೆ ಜೊತೆಗೆ, ಬ್ರೈಡಲ್ ನಂಥ ಗ್ಲೋ ನಿಮಿಷಗಳಲ್ಲೇ ನೀಡುತ್ತದೆ. ಹೀಗಾಗಿಯೇ ಇದಕ್ಕೆ ಫೇಸ್ ಪ್ಯಾಕ್ ಸ್ಕ್ರಬ್ ಎಂದೂ ಬಂದಿದೆ. ನೀವು ಈ ಫೇಸ್ ಮಾಸ್ಕ್ ಖರೀದಿಸುವುದು ಬೇಡ ಎಂದುಕೊಂಡರೆ, ಆಗ ಸಾರಾದ ಡೀಟೇನ್ ಪ್ಯಾಕ್ ಖರೀದಿಸಿ. ಇದು ನಿಮಗೆ ಅದ್ಭುತ ಫೆಸ್ಟಿವ್ ಲುಕ್ಸ್ ತಂದುಕೊಡಲಿದೆ. ತಕ್ಷಣವೇ ಕ್ಲೀನ್, ಸ್ಮೂಥ್ ಗ್ಲೋಯಿಂಗ್ ಮಾಡುತ್ತದೆ. ಈ ಫೆಸ್ಟಿವ್ ಸೀಸನ್ ನಲ್ಲಿ ಹೆವಿ ಡಿಸ್ಕೌಂಟ್ ನಲ್ಲಿ ಇದು ನಿಮಗೆ ಲಭ್ಯ.
ಮೇಕಪ್ ಕಿಟ್ ನಲ್ಲಿ ಇವು ಇರಲಿ
ನೀವು ಮೇಕಪ್ ಅಭಿಮಾನಿಗಳಾಗಿ ಬಿಡಿ, ದೀಪಾವಳಿಯಂಥ ದೊಡ್ಡ ಹಬ್ಬಗಳಲ್ಲಿ ಒಂದಿಷ್ಟು ಮೇಕಪ್ ಇದ್ದರೆ ಚೆಂದ! ಏಕೆಂದರೆ ಅದಿಲ್ಲದೆ ಮುಖ ಕಳೆಗುಂದಿದಂತೆ ಕಾಣುತ್ತದೆ. ಮುಖ್ಯವಾಗಿ ಈ ಹಬ್ಬಗಳಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಕಂಡುಬರಲು ಇಂಥ ಮೇಕಪ್ ಟ್ರಿಕ್ಸ್ ಅತ್ಯಗತ್ಯ. ಇದರಲ್ಲಿ ಕೆಲವು ಮೇಕಪ್ ಪ್ರಾಡಕ್ಟ್ಸ್ ಮುಖ್ಯ ಪಾತ್ರ ವಹಿಸುತ್ತವೆ. ಇವು ತಕ್ಷಣ ನಿಮ್ಮ ಮುಖದಲ್ಲಿ ಕಾಂತಿ ತರುವುದಲ್ಲದೆ, ನಿಮ್ಮ ಇಡೀ ಫೇಸ್ ಲುಕ್ಸ್ ಬದಲಾಯಿಸಬಲ್ಲದು.
ಫ್ಯಾಷನ್ ನಲ್ಲಿ ಇವು ಇನ್ : ಪ್ರೈಮರ್‌ಫೌಂಡೇಶನ್ ನಿಮ್ಮ ಚರ್ಮಕ್ಕೆ ಸ್ಮೂತ್ ಬೇಸ್ ಒದಗಿಸುತ್ತದೆ. ಜೊತೆಗೆ ಕಾಂಪ್ಲೆಕ್ಷನ್ ನ್ನು ಬ್ರೈಟ್ ಗೊಳಿಸುತ್ತದೆ. ನೀವು ಸ್ಮಾರ್ಟ್ ಬೈ ಮಾಡಬೇಕೆಂದರೆ, ಸ್ಮಾರ್ಟ್ ಆಗಿ. ಇವನ್ನು ಬೇರೆ ಬೇರೆಯಾಗಿ ಖರೀದಿಸಬೇಡಿ. ಬದಲಿಗೆ ಲ್ಯಾಕ್ಮೆ 95 ಪ್ರೈಮರ್+ ಮ್ಯಾಟ್ ಪೌಡರ್ ಫೌಂಡೇಶನ್ ಕಾಂಪ್ಯಾಕ್ಟ್ ಖರೀದಿಸಿ. ಇದು 2 ಇನ್ 1 ಕೆಲಸ ಮಾಡಿ, ನಿಮ್ಮ ಮುಖವನ್ನು ಓರಲ್ ಆಗಿಸದೆ, ಬೆಸ್ಟ್ ಆಗಿಸುತ್ತದೆ. ಕಂಗಳಿಗಾಗಿ ಸ್ವಿಸ್ ಬ್ಯೂಟಿಯ 9 ಕಲರ್ ಐ ಶ್ಯಾಡೋ ಕಿಟ್ ನಿಂದ ಅಲಂಕರಿಸಿ.
ಇವು ಖಂಡಿತಾ ದುಬಾರಿ ಅಲ್ಲ, ಇವನ್ನು ಬ್ಲಶರ್ ಆಗಿಯೂ ಬಳಸಿಕೊಳ್ಳಿ. ಇವನ್ನು ಆನ್ ಲೈನ್ ಬ್ಯೂಟಿ ಸೈಟ್ಸ್ ನಿಂದ ಖರೀದಿಸಬಹುದು, ಏಕೆಂದರೆ ಹಬ್ಬದ ಸಂದರ್ಭದಲ್ಲಿ ಇಲ್ಲೆಲ್ಲ ಧಾರಾಳ ಡಿಸ್ಕೌಂಟ್ ಲಭ್ಯ.
ಹೇರ್ ಕೇರ್
ನಾರ್ಮಲ್ ಹೇರ್ : ನೀವು ಹಬ್ಬಗಳಲ್ಲಿ ಸ್ಟ್ರೇಟ್‌ಸ್ಮೂತ್ ಹೇರ್ ಬಯಸಿದರೆ, ಖಂಡಿತಾ ಮಾಮಾ ಅರ್ಥ್ ನ ರೈಸ್ ವಂಡರ್ ವಾಟರ್ ವಿತ್ ಕೆರಾಟಿನ್ ಖರೀದಿಸಿ. ಇದು ನಿಮ್ಮ ಕೂದಲಿನ ಫ್ರಿಝಿನೆಸ್ ನ್ನು ಕಡಿಮೆ ಮಾಡಿ, ಅದನ್ನು ಹೆಚ್ಚು ಹೊಳೆಯುವಂತೆ ಮಾಡುತ್ತದೆ, ಲೋ ಬಜೆಟ್ ನಲ್ಲಿ!
ಟ್ರೆಂಡಿ ಲುಕ್ಸ್ : ನೀವು ನಿಮ್ಮ ಕೂದಲಿಗೆ ಕಲರ್ ಯಾ ಹೈಲೈಟ್ ಮಾಡಬಯಸಿದರೆ…. ಚಾಕಲೇಟ್‌ಕ್ಯಾರಮೆಲ್ ಬ್ಲೈಗ್, ಲೈಟ್ ಬ್ರೌನ್ ಹೇರ್, ರೆಡ್ಡಿಶ್ ಬ್ರೌನ್ ಹೈಲೈಟ್, ಪಾರ್ಟಿಕ್ ಕ್ಯಾರಮೆಲ್ ಹೈಲೈಟ್, ಡಾರ್ಕ್ ಚಾಕಲೇಟ್ ಲಾಕ್ಸ್, ಬ್ರಾಂಡ್ ಹೇರ್ ಕಲರ್, ಬ್ಲೀಚ್ ಹೇರ್, ಬ್ರೌನ್ ಹೇರ್ ಕಲರ್, ಬ್ಲ್ಯಾಕ್ ಕಲರ್ ವಿತ್ ಡಾರ್ಕ್ ಕಾಪರ್ ಹೈಲೈಟ್, ಶೈನಿ ರೋಸ್ ಡಲ್ ಹೈಲೈಟ್ಸ್, ಗೋಲ್ಡನ್ ಹೈಲೈಟ್ಸ್ ಇತ್ಯಾದಿ ಅಗತ್ಯ ಬಳಸಿಕೊಳ್ಳಿ.
– ಪಾರ್ವತಿ ಭಟ್
ಈ ವಿಷಯ ಗಮನಿಸಿ
ನೀವು ಯಾವುದೇ ಬ್ಯೂಟಿ ಪ್ರಾಡಕ್ಟ್ ಕೊಂಡಾಗಲೂ, ಅದು ನಿಮ್ಮ ಸ್ಕಿನ್ ಟೋನಿಗೆ ತಕ್ಕಂತಿದೆಯೇ ಎಂದು ಅಗತ್ಯ ಪರೀಕ್ಷಿಸಿ.
ಎಕ್ಸ್ ಪೈರಿ ಡೇಟ್ ಚೆಕ್ ಮಾಡಿಕೊಂಡೇ ಬ್ಯೂಟಿ ಪ್ರಾಡಕ್ಟ್ಸ್ ಕೊಳ್ಳಬೇಕು.
ಆನ್ ಲೈನ್ ಅಥವಾ ಆಫ್ ಲೈನ್ ಶಾಪಿಂಗ್ ಇರಲಿ, ಎಲ್ಲಿ ನಿಮಗೆ ಪ್ರಾಡಕ್ಟ್ ಉತ್ತಮ ಗುಣಮಟ್ಟ ಹಾಗೂ ಅಗ್ಗ ಎನಿಸುವುದೋ ಅಲ್ಲಿಂದಲೇ ಕೊಳ್ಳಿರಿ.
ಉತ್ಪನ್ನಗಳ ರಿವ್ಯೂ ಚೆಕ್ ಮಾಡಿದ ನಂತರವೇ ಅವನ್ನು ಕೊಳ್ಳಬೇಕು.
ನೀವು ಹೊಸ ಪ್ರಾಡಕ್ಟ್ ಕೊಂಡು ಬಳಸುತ್ತೀರಾದರೆ, ಮೊದಲು ಅದರ ಸ್ಯಾಂಪಲ್ ಬಳಸಿ ನೋಡಿ, ತೃಪ್ತಿಕರ ಎನಿಸಿದರೆ ದೊಡ್ಡ ಪ್ಯಾಕೆಟ್ ಕೊಳ್ಳಿರಿ.
ಪ್ರಾಡಕ್ಟ್ ರಿಟರ್ನ್ ಪಾಲಿಸಿ ಬಗ್ಗೆ ಅಗತ್ಯ ತಿಳಿದುಕೊಳ್ಳಿ.
ಸದಾ ಮಲ್ಟಿ ಪರ್ಪಸ್ ಪ್ರಾಡಕ್ಟ್ಸ್ ಖರೀದಿಸಲು ಆದ್ಯತೆ ನೀಡಿ.
ಸೀಲ್ ಆಗಿರುವಂಥ ಪ್ಯಾಕ್ ನ್ನು ನೋಡಿ, ಖಚಿತಪಡಿಸಿಕೊಂಡ ನಂತರವೇ ಖರೀದಿಸಬೇಕು.
ವಿಶ್ವಾಸಪಾತ್ರ ಅಂಗಡಿ, ಸ್ಟೋರ್ಸ್ ಅಥವಾ ಸೈಟ್ಸ್ ಬಗ್ಗೆ ಖಚಿತಪಡಿಸಿಕೊಂಡೇ ಪ್ರಾಡಕ್ಟ್ ಖರೀದಿಸಿ.
ಅತಿ ಮುಖ್ಯ ಅಂಶಗಳು
ನೀವು ಲಿಕ್ವಿಡ್ ಲಿಪ್ ಸ್ಟಿಕ್ ಕೊಳ್ಳುತ್ತೀರಾದರೆ, ಅದನ್ನು ಮಲ್ಟಿಪರ್ಪಸ್ ಯೂಸ್ ಆಗುವಂತೆ ಖರೀದಿಸಿ. ಹಾಗಾಗಿ ಅದನ್ನು ಐ ಶ್ಯಾಡೋ ಆಗಿಯೂ ಬಳಸಿಕೊಳ್ಳಿ.
ಜೆಲ್ ಕಾಜಲ್ ನ್ನು ಲೈನರ್, ಬಿಂದಿ ಆಗಿಯೂ ಬಳಸಿಕೊಳ್ಳಬಹುದು.
ಲಿಪ್ ಸ್ಟಿಕ್ ನ್ನು ನೀವು ಬ್ಲಶರ್ ಆಗಿಯೂ ಬಳಸಬಹುದು.
ಲಿಪ್ ಬಾಮ್ ನಿಂದ ಸಹ ನೀವು ಚೀಕ್ಸ್ ಮೇಲೆ ಶೈನ್ ತರಿಸಬಹುದು.
ಇದನ್ನು ಮರೆಯದಿರಿ
ಸ್ಕಿನ್ ಟೈಪ್ ತರಹ ಸ್ಕಿನ್ ಟೋನ್ ಯಾವುದು ಎಂದೂ ತಿಳಿದಿರಬೇಕು. ಇದರಲ್ಲಿ ಮುಖ್ಯ 3 ವಿಧ. ಕೂಲ್, ನಾರ್ಮಲ್, ನ್ಯೂಟ್ರಲ್. ನಿಮ್ಮ ಮಣಿಕಟ್ಟಿನ ನರಗಳು ಬ್ಲೂ ಆಗಿದ್ದರೆ ನಿಮ್ಮ ಸ್ಕಿನ್ ಟೋನ್ ಕೂಲ್, ಗ್ರೀನ್ ಆಗಿದ್ದರೆ ಸ್ಕಿನ್ ಟೋನ್ ವಾರ್ವ್, ಎರಡೂ ಅಲ್ಲ ಎಂದು ಗೊಂದಲಪಡಿಸಿದರೆ ಸ್ಕಿನ್ ಟೋನ್ ನ್ಯೂಟ್ರಲ್. ಇದರ ಆಧಾರದಿಂದ ನೀವು ಸ್ಕಿನ್ ಪ್ರಾಡಕ್ಟ್ಸ್ ಆರಿಸಬೇಕು.