ಟೋನರ್‌, ಪ್ರೈಮರ್‌, ಫೌಂಡೇಶನ್‌, ಕನ್ಸೀಲರ್‌, ಹೈಲೈಟರ್‌, ಲಿಪ್‌ ಸ್ಟಿಕ್‌, ಕಾಜಲ್, ಐ ಲೈನರ್‌ ಮತ್ತು ಬ್ಲಶ್‌ ನಂಥ ಬೇಸಿಕ್ ಮೇಕಪ್‌ ಉತ್ಪನ್ನಗಳಿದ್ದರೆ ಸಾಕು. ನೀವು ಉಳಿದ ಮೇಕಪ್‌ ಐಟಮ್ಸ್ ಅಂದ್ರೆ ಕಲೆಕ್ಟರ್‌, ಬ್ರಾಂಝರ್‌, ಐ ಶ್ಯಾಡೋ, ಫೇಸ್ ಪೌಡರ್‌ ಇತ್ಯಾದಿ ಬೇಕೆಂದರೆ ಇರಿಸಿಕೊಳ್ಳಿ. ಆದರೆ ಇದು ಅನಿವಾರ್ಯವಲ್ಲ. ಇವುಗಳನ್ನು ಬಳಸದೆಯೇ ಯಾವ ಹೆಣ್ಣಾದರೂ ಸರಿ, ಸಹಜವಾಗಿ ಪ್ರಾಕೃತಿಕ, ಪರ್ಫೆಕ್ಟ್ ಲುಕ್ಸ್ ಪಡೆಯಬಹುದು. ಪರ್ಫೆಕ್ಟ್ ಫೆಸ್ಟಿವ್ ‌ಮೇಕಪ್‌ ಹೊಂದುವುದು ಹೇಗೆ ಎಂದು ವಿವರವಾಗಿ ತಿಳಿಯೋಣವೇ?

ಕೇಕಿ/ಪ್ಯಾಚಿ ಮೇಕಪ್

ಮೇಕಪ್‌ ಇನ್‌ ಪ್ಲಯೆನ್ಸರ್ಸ್‌ ಪ್ರಕಾರ ಮೇಕಪ್‌ ನ ಅರ್ಥ ಎಂದರೆ ಕೇಕಿ ಆಗುವುದು, ಇದು ಸದಾ ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ. ಆದರೆ ಇದು ನಿಜವಲ್ಲ. ನೀವು ಎಲ್ಲಕ್ಕಿಂತ ಮೊದಲು ಖಾತ್ರಿಪಡಿಸಿ ಕೊಳ್ಳಬೇಕಾದುದು ಎಂದರೆ, ಮೇಕಪ್ ಮಾಡುವ ಮುನ್ನ, ನಿಮ್ಮ ಚರ್ಮದ ಛಿದ್ರಗಳನ್ನು ಮರೆಮಾಚಬೇಕಿದೆ. ಇಲ್ಲಿನ ಮತ್ತೊಂದು ಮಹತ್ವಪೂರ್ಣ ವಿಷಯ ಎಂದರೆ ನೀವು ನಿಮ್ಮ ಚರ್ಮದ ಸುಕ್ಕು ಕಲೆ, ಕಪ್ಪು ವೃತ್ತ ಇತ್ಯಾದಿಗಳನ್ನು ಸರಿಯಾಗಿ ಗುರುತಿಸಿ, ನಿಮ್ಮ  ಚರ್ಮಕ್ಕೆ ಸಪೋರ್ಟ್ ಮಾಡಬೇಕು.

festive-makeup1

ನೀವು ಇಂಥ ಸುಕ್ಕು ಕಲೆ, ಕಪ್ಪು ವೃತ್ತಗಳನ್ನು ನಿಮ್ಮ ಚರ್ಮದೊಂದಿಗೆ ಬ್ಲೆಂಡ್‌ ಆಗುವಂತೆ ಆ ಮಟ್ಟಕ್ಕೆ ಮರೆಮಾಚುವ ಪ್ರಯತ್ನ ಮಾಡಬೇಕು. ಆದರೆ ಸಾಮಾನ್ಯವಾಗಿ ಹೆಂಗಸರು ಧಾರಾಳ ಫೌಂಡೇಶನ್‌, ಕನ್ಸೀಲರ್‌ ಬಳಸಿ ಇಂಥ ಎಲ್ಲಾ ದೋಷ ನಿವಾರಣೆಗೆ ಧಾವಿಸುತ್ತಾರೆ. ಆಗ ಅದು ಅಸಹಜ, ಕೇಕಿ ಲುಕ್‌ ನೀಡುತ್ತದೆ.

ಮೇಕಪ್‌ ಮಾಡುವ ಮೊದಲು ಎಲ್ಲಕ್ಕೂ ಮುಖ್ಯ ಹೆಜ್ಜೆ ಎಂದರೆ, ನೀವು ಟೋನರ್‌, ಮಾಯಿಶ್ಚರೈಸರ್‌. ಪ್ರೈಮರ್‌ ಹಚ್ಚಿ ಆ ಪ್ರಕ್ರಿಯೆ ಶುರು ಮಾಡಿದ್ದೀರಿ ತಾನೇ ಎಂಬುದು. ಹೀಗೆ ಮಾಡುವುದರಿಂದ, ನಿಮ್ಮ ಚರ್ಮಕ್ಕೆ ಸ್ಮೂತ್‌ ಕ್ಯಾನ್ವಾಸ್‌ ಗೆ ಬದಲಾಯಿಸಲು ನೆರವಾಗುತ್ತದೆ. ಮುಂದೆ ನೀವು ನಿಮ್ಮ ಕ್ರಮಕ್ಕೆ ಅನುಸಾರ ಸುಲಭವಾಗಿ ಮೇಕಪ್‌ ಮಾಡಿಕೊಳ್ಳಿ.

ಇಲ್ಲಿ ಇನ್ನೊಂದು ಪ್ರಮುಖ ವಿಷಯ ಎಂದರೆ, ಯಾವ ದಿನ ನೀವು ಎಕ್ಸ್ ಫಾಲಿಯೇಟ್‌ ಮಾಡುತ್ತೀರೋ ಆ ದಿನ ಯಾವ ಮೇಕಪ್ಪೂ ಮಾಡಬಾರದು. ಇದರಿಂದ ಮೇಕಪ್‌ ಘಟಕ ನಿಮ್ಮ ರೋಮಛಿದ್ರ ಪ್ರವೇಶಿಸಿ, ಅದನ್ನು ಕ್ಲೋಸ್‌ ಮಾಡಿಬಿಟ್ಟೀತು. ಇದು 2 ವಿಧದಲ್ಲಿ ಹಾನಿಕಾರಕ ಇದರಿಂದ ಚರ್ಮಕ್ಕೆ ಹಾನಿ ತಪ್ಪಿದ್ದಲ್ಲ ಮತ್ತು ಇದು ನಿಮ್ಮ ಮೇಕಪ್‌ ನ್ನು ತುಂಡರಿಸಿ, ಅಲ್ಲಲ್ಲಿ ಪ್ಯಾಚಿ ಲುಕ್ಸ್ ಬರುವಂತೆ ಮಾಡಿಬಿಡುತ್ತದೆ.

ನೀವ ಫೌಂಡೇಶನ್‌ ಬಳಸಲು ಆರಂಭಿಸುವ ಮೊದಲು, ಎಲ್ಲೆಲ್ಲಿ ಕಲೆಗುರುತು, ಸುಕ್ಕು ಇವೆಯೋ ಅವನ್ನೆಲ್ಲ ಅದರಿಂದ ಮರೆಮಾಚಲು ಪ್ರಯತ್ನಿಸಿ. ನೀವು ಇದನ್ನು ಸತತ ಹಚ್ಚುವಾಗ ನೆನಪಿಡಬೇಕಾದುದು ಎಂದರೆ, ಅಗತ್ಯ ಬ್ಯೂಟಿ ಬ್ಲೆಂಡರ್ ಉಪಯೋಗಿಸಿ ಇದನ್ನು 2-3 ನಿಮಿಷಗಳಿಗಿಂತ ಹೆಚ್ಚಾಗಿ ಬ್ಲೆಂಡ್‌ ಮಾಡಿ. ಫೌಂಡೇಶನ್‌ ಸದಾ ನಿಮ್ಮ ತ್ವಚೆಯ ಬಣ್ಣಕ್ಕೆ ತಕ್ಕಂತೆ ಮಾತ್ರ ಹಚ್ಚಬೇಕು, ಇದು ಲೈಟ್‌ ಯಾ ಡಾರ್ಕ್‌ ಆಗಬಾರದು. ದೀಪಾವಳಿಯಂಥ ಹಬ್ಬದ ಸಂದರ್ಭದಲ್ಲಿ ಮೇಕಪ್‌ ನಿಮ್ಮ ಚರ್ಮ ಸೌಂದರ್ಯ ಹೆಚ್ಚಿಸಬೇಕೇ ವಿನಾ ಅದನ್ನು ಡಾರ್ಕ್‌ ಯಾ ಲೈಟ್‌ ಮಾಡಬಾರದು.

ಮತ್ತೊಮ್ಮೆ ಗಮನಿಸಿ, ಫೌಂಡೇಶನ್‌ ಹೆಚ್ಚುವರಿಯಾಗಿ ಮೆತ್ತಿಕೊಳ್ಳಬಾರದು. ಇದು 2-3 ಪಂಪಿಂಗ್‌ ಸಾಕು, ಅದಕ್ಕಿಂತ ಹೆಚ್ಚು ಬೇಡ. ನಿಮಗೇನಾದರೂ ಸುಕ್ಕು ನೆರಿಗೆ ಇನ್ನೂ ಕಾಣಿಸುತ್ತಿದೆ ಎನಿಸಿದರೆ, ಅದನ್ನು ಕನ್ಸೀಲರ್‌ ನಿಂದ ಅಡಗಿಸುವ ಪ್ರಯತ್ನ ಮಾಡಿ. ಆದರೆ ನೀವು ಒಂದು ದಪ್ಪ ಪದರ ಫೌಂಡೇಶನ್‌ ಮೆತ್ತಿ ಇವನ್ನೆಲ್ಲ ಮರೆಮಾಚಬಾರದೇಕೆ ಎಂದ ಪ್ರಯತ್ನಿಸಿದರೆ, ಆ ಘಳಿಗೆಗೆ ಅದು ಸರಿ ಕಂಡೀತು, ಆದರೆ 2-3 ಗಂಟೆಗಳ  ನಂತರ, ನಿಮ್ಮ ಒರಿಜಿನಲ್ ಮೇಕಪ್‌ ನ್ನು ಇದು ಬಹಳ ಕೇಕಿ ಮಾಡಿಡುತ್ತದೆ, ಮುಖ್ಯವಾಗಿ ಹಬ್ಬದ ಅಧಿಕ ಓಡಾಟದಲ್ಲಿ ನೀವು ಹೆಚ್ಚು ಬೆರಿದಂತೆ ಈ ಪರಿಣಾಮ ಖಂಡಿತಾ ಕಂಡುಬರುತ್ತದೆ.

ಪ್ಯಾಚಿ ಕನ್ಸೀಲರ್‌ ಸಾಮಾನ್ಯವಾಗಿ ಮೇಕಪ್‌ ಮಾಡಿಕೊಂಡ ಕೆಲವು ಗಂಟೆಗಳ ನಂತರ, ಕಂಗಳ ಕೆಳಭಾಗದಲ್ಲಿ ಪ್ಯಾಚಿ ಆಗಿಬಿಡುತ್ತದೆ. ಕಂಗಳ ಕೆಳಗೆ ಡಾರ್ಕ್‌ ಸರ್ಕಲ್ಸ್ ಕಾಣಿಸಬಹುದು. ಅಲ್ಲಲ್ಲಿ ಬಿಳಿ ಪ್ಯಾಚ್‌ ಕಂಡರೂ ಆಶ್ಚರ್ಯವಿಲ್ಲ. ಇದರಿಂದ ಪಾರಾಗುವ ಒಂದು ಸುಲಭ ವಿಧಾನ ಎಂದರೆ, ಕನ್ಸೀಲರ್‌ ನ್ನು ಕೆಳ ರೆಪ್ಪೆ ಹಾಗೂ ಕಂಗಳ ನಡುವಿನ ಗ್ಯಾಪ್‌ ನಲ್ಲಿ ಹಚ್ಚಬೇಕು. ಒಂದು ಸಲ ನೀವು ಈ ತರಹ ಕನ್ಸೀಲರ್‌ ಹಚ್ಚಿದ ನಂತರ ಬ್ಲೆಂಡ್‌ ಮಾಡಿದರೆ, ಇದು ಪೂರ್ತಿಯಾಗಿ ಬ್ಲೆಂಡ್‌ ಆಗುತ್ತದೆ, ಇದರಿಂದ ಕಂಗಳ ಕೆಳಭಾಗ ಕೇಕಿ ಯಾ ಪ್ಯಾಚಿ ಆಗುವುದರಿಂದ ಬಚವಾಗುತ್ತದೆ.

ಇಷ್ಟು ಮಾತ್ರವಲ್ಲದೆ, ವಾಟರ್‌ ಪ್ರೂಫ್‌ ಕನ್ಸೀಲರ್‌ಫೌಂಡೇಶನ್‌ ಬಳಸಿಕೊಳ್ಳಿ. ಇದು ಮಳೆಹನಿ ಅಥವಾ ಬೆವರಿಗೆ ಪ್ರಭಾವಿತ ಆಗದು. ನಿಮ್ಮ ಕಂಗಳ ಕೆಳಭಾಗ ಈ ರೀತಿ ಪೂರ್ತಿ ಮೇಕಪ್‌ ಆದ ನಂತರ, ಎಲ್ಲೆಲ್ಲಿ ಹೆಚ್ಚು ಬೆವರುತ್ತೀರೋ ಆ ಭಾಗಕ್ಕೆ ಫೇಸ್ ಪೌಡರ್‌ ಸಿಂಪಡಿಸಿಕೊಳ್ಳಿ.

ಶ್ಯಾಡೋ ಔಟ್ಫಿಟ್

ಸಾಮಾನ್ಯವಾಗಿ ಹೆಂಗಸರು ಸೂಕ್ಷ್ಮವಾಗಿ ಡಿಸೈನ್‌ ಗೊಳಿಸಲಾದ ಔಟ್‌ ಫಿಟ್ಸ್ ಜೊತೆ ಸ್ಮೋಕಿ ಐ ಮೇಕಪ್‌ ಬಯಸುತ್ತಾರೆ, ಆದರೆ ಇದು ಓವರ್‌ ಆಲ್ ಲುಕ್ಸ್ ನ ಅಪೀಸಲ್ ‌ನ್ನು ಹಾಳು ಮಾಡುತ್ತದೆ. ಜೊತೆಗೆ ಎಷ್ಟೋ ಸಲ ಐ ಶ್ಯಾಡೋ ಔಟ್‌ ಫಿಟ್ಸ್ ಗೆ ಮ್ಯಾಚ್‌ ಆಗುವುದೇ ಇಲ್ಲ. ಇದರಿಂದ ನಿಮ್ಮ ಪೂರ್ತಿ ಲುಕ್ಸ್ ಬ್ಲಂಡರ್‌ ಆದೀತು. ಇಂಥ ತೊಂದರೆಯಿಂದ ಮುಕ್ತಿ ಹೊಂದಲು, ಮೇಕಪ್‌ ಕಲರ್‌ ಪ್ಯಾಲೆಟ್‌ ಗೈಡ್‌ ಪರೀಕ್ಷಿಸಿ ನೋಡಿ. ಆಗ ನಿಮ್ಮ ಔಟ್‌ ಫಿಟ್‌ ಗೆ ಸೂಕ್ತ ಹೊಂದುವಂಥ ಐ ಮೇಕಪ್‌ ಮಾಡಲು ಸಹಾಯ ಸಿಗುತ್ತದೆ, ಅದು ಕಾಂಪ್ಲಿಮೆಂಟ್‌ ಆಗಿರುತ್ತದೆ.

ದಾಕ್ಷಾಯಣಿ

ಮೇಕಪ್ಗಾಗಿ ಸುಲಭ ಟಿಪ್ಸ್

ಕನ್ಸೀಲರ್‌ಫೌಂಡೇಶನ್‌ ಗಳಿಂದ ನಿಮ್ಮ ಕಂಗಳ ಮೇಲ್ಭಾಗದ ಲೋಪದೋಷ ಅಡಗಿಸಿ. ಇದು ಐ ಶ್ಯಾಡೋದ ಬಣ್ಣವನ್ನು ಬೆಟರ್ ಆಗಿ ತೋರಿಸಲು, ಚರ್ಮದ ಲೈಟ್‌ ಟೋನ್‌ ಪಡೆಯಲು ನೆರವಾಗುತ್ತದೆ. ಕಂಗಳ ಅಕ್ಕಪಕ್ಕದ ಏರಿಯಾ, ನಿಮ್ಮ ಚರ್ಮದ ಬಾಕಿ ಭಾಗಕ್ಕೆ ಹೋಲಿಸಿದರೆ, ತುಸು ಗಾಢ ಆಗಿರುತ್ತದೆ. ಹೀಗಾಗಿ ಅಲ್ಲಿ ಬಣ್ಣ ತೋರಿಸಲು ನೀವು ಬಳಸಬೇಕಾದುದು ತುಸು ಲೈಟ್ ಆಗಿರಬೇಕು, ಆದರೆ ಇದು ಚರ್ಮದ ಟೋನ್‌ ಗೆ ಹೊಂದುವಂತಿರಬೇಕು.

maskara

ನಿಮ್ಮ ಐ ಶ್ಯಾಡೋಗಾಗಿ ಸೂಕ್ತ ಬಣ್ಣ ಆರಿಸಿ. ನೀವು ಒಂದಕ್ಕಿಂತ ಹೆಚ್ಚು ಬಣ್ಣ ಬಳಸಲು ಬಯಸಿದರೆ, ಅವನ್ನು ಸರಿಯಾಗಿ ಹೋಲಿಸಿ ಪರಿಶೀಲಿಸಿದಾಗ ಮಾತ್ರ ಇದು ಸಾಧ್ಯ. ಬಣ್ಣಗಳು ಮ್ಯಾಚ್‌ ಆಗುತ್ತವೆ ಅಂದ್ರೆ, ಅವು ಪರಸ್ಪರ ಸುಲಭ ವಿಲೀನ ಆಗುವಂತಿರಬೇಕು. ಇದರ ಹೊರತಾಗಿ ಕಂಗಳ ಹೊರಭಾಗದತ್ತಲೂ ಗಮನವಿರಲಿ. ಐ ಶ್ಯಾಡೋ ಕೊನೆಯಲ್ಲಿ ಚಿತ್ರವಿಚಿತ್ರ ರೀತಿಯಲ್ಲಿ ಹರಡಿಕೊಳ್ಳಬಾರದು. ನಿಮ್ಮ ಫೇಸ್‌ ಕಟ್‌ ಗೆ ಒಪ್ಪುವಂಥದ್ದನ್ನೇ ಆರಿಸಿ.

ನೀವು ಕೆಳಭಾಗದಲ್ಲಿ ಬಣ್ಣದ ಕಾಜಲ್ ಯಾ ಐ ಶ್ಯಾಡೋ ಹಚ್ಚಬಹುದು. ಆದರೆ ಮತ್ತೆ ಗಮನಿಸಬೇಕಾದುದು ಎಂದರೆ, ಇದರ ಅಗತ್ಯವಿದೆಯೇ ಎಂದು ಪರೀಕ್ಷಿಸಬೇಕು. ಅದು ನಿಮ್ಮ ಲುಕ್ಸ್, ಸ್ಟೈಲ್ ‌ಗೆ ಕಾಂಪ್ಲಿಮೆಂಟ್‌ ಆಗುವಂತಿರಬೇಕು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ