“ಎಚ್ . ಎಸ್  ವೆಂಕಟೇಶ್ ಮೂರ್ತಿ ಅವರ ಭಾವಗೀತೆಯ ಹಾಡಿನ ಸಾಲು “

“ಇಷ್ಟು  ಕಾಲ ಒಟ್ಟಿಗಿದ್ದರೂ ಬೆರೆತರು ಅರಿತವೇ  ನಾವು ನಮ್ಮ ಅಂತರಾಳ”  ಈ ಸಾಲುಗಳು ಹೊಂದುವ ಕಥೆಯನ್ನು ಓದಿ ಬೇಸರ ಆಗುವುದು ನಿಜವೇ?

ಶೈಲಜಾ ಗೆ ಕರೆ ಬಂತು ಅದು ಆತ್ಮೀಯ ಗೆಳತಿಯದ್ದು,  ಶೈಲೂ ವಿಚ್ಛೇದನ ಆಯ್ತು ಕಣೆ. ಕೊನೆಗೆ ನನ್ನ ಗಂಡನಿಂದ ಮುಕ್ತಿ ಸಿಕ್ತು. “ಮ್ಯೂಚುವಲ್ ಕನ್ಸೆಂಟ್” ಇಬ್ಬರು ಪರಸ್ಪರ ಒಪ್ಪಿಗೆ ಪಡೆದು  ವಿಚ್ಛೇದನ ಪಡೆದುಕೊಂಡಿದ್ದು.

ಖುಷಿ ಪಡ್ತಾ ಇದ್ದೀಯಾ….? ನಿಂದು ಹೇಗೋ ಆಗುತ್ತೆ ಹರಿಣಿ, ಮುಂದೆ ಮಗನ ಗತಿ ಏನೇ….?

ಅದೇ ಯಕ್ಷಪ್ರಶ್ನೆಯಾಗಿ ಕಾಡುತ್ತಿರುವುದು ಶಾಲೆಯ ದಿನಗಳಲ್ಲಿ  ನನ್ನತ್ರ ರಜೆ ಬಂದಾಗ ಅವರತ್ರ ಇರ್ಬೇಕು ಅಂತ ಒಪ್ಪಂದ ಮಾಡಿಕೊಂಡಿದ್ದೀವಿ.  ನನಗೆ ನನ್ನ ಗಂಡ ಬೇಡದೆ ಇರಬಹುದು. ಆದ್ರೆ ನನ್ನ ಮಗ ಅಪ್ಪ ಅಂತ ಜೀವನೇ ಕೊಡ್ತಾನೆ. ಮಗನಿಗೋಸ್ಕರ ಇಷ್ಟು ವರ್ಷ ಸಹಿಸಿಕೊಳ್ಳುವ ಪ್ರಯತ್ನಪಟ್ಟೆ , ಆದರೆ ಅವನಿಗೂ ನನಗೂ ಹೊಂದಾಣಿಕೆ ಆಗೋ ಲಕ್ಷಣನೇ ಕಾಣ್ತಾ ಇಲ್ಲ? ಅನುಮಾನ, ಅಪಮಾನ, ಕಾದಾಟ ಮತ್ತು ಪರಸ್ಪರ ನಂಬಿಕೆ ಇಲ್ಲ ಜೊತೆಗೆ ಹೊಂದಾಣಿಕೆಯ ಕೊರತೆ  ಅಭಾವ. ಅವನ ಮುಖ ನೋಡೋಕೆ ಇಷ್ಟ ಆಗಲ್ಲ ತುಂಬಾ ಹಿಂಸೆ ಕೊಡ್ತಾನೆ, ಪ್ರಾಣ ಹೋಗೋ ಹಾಗೂ ಇಲ್ಲ ಬದುಕಿದ ಹಾಗೂ ಇಲ್ಲ  ಒಂದಷ್ಟು ದಿವಸ ನರಳಬೇಕು ಬೆಲೆ ಇಲ್ಲದ ಸ್ಥಾನಮಾನ ಜೊತೆಗೆ ಅಷ್ಟು ಅವಮಾನ ಬೇಸತ್ತು ಹೋಗಿದ್ದೇನೆ.

dam2

ಶೈಲಜಾ : ಬೇಸರ ಆಗ್ತಾ ಇದೆ ಹರಿಣಿ, ಏನ್ ಹೇಳ್ಬೇಕು ಗೊತ್ತಾಗ್ತಿಲ್ಲ. ಸಂಸಾರದ ನೌಕೆಯಲ್ಲಿ  ಇಬ್ಬರದೂ ಸಮ ಪಾಲು ಕಷ್ಟ- ಸುಖ ಎಲ್ಲವ ಮೀರಿ ಬದುಕ ದಡ ಸೇರಬೇಕು. ನೆಮ್ಮದಿ ಇಲ್ಲದ ಜೀವದಲ್ಲಿ ಅನುಮಾನದ ಗೂಡಿನಲ್ಲಿ ಜೀವನ ಒಂದಲ್ಲ ಒಂದು ದಿನ ವಿಸ್ಪೋಟ ವೇ. ನಿನ್ನ ಮುಂದಿನ ಜೀವನ ಸುಖ ವಾಗಿರಲಿ. ಯಾರನ್ನು ಆಶ್ರಯಿಸದೆ  ಸ್ವಾಭಿಮಾನಿಯಾಗಿ ಬದುಕು  ಎಂದು ಹೇಳುವೆ. ನಿನ್ನ ಕಷ್ಟ ದಲ್ಲಿ ನಾನು ಇರ್ತೀನಿ.

ಗಂಡ ಹೆಂಡತಿ ಸಂಬಂಧದಲ್ಲಿ ಪ್ರೀತಿ, ಬಾಂದವ್ಯ, ನಂಬಿಕೆ ಮತ್ತು ಗೌರವವಿರಬೇಕು. ಸಂಸಾರ ಹಾಲು- ಜೇನಿನಂತಿರಬೇಕು. ಎಷ್ಟೇ  ಮನಸ್ತಾಪವಿದ್ದರೂ ಇಬ್ಬರು ಪರಸ್ಪರ ಮಾತನಾಡಿಕೊಂಡು  ಬಗೆಹರಿಸಿಕೊಳ್ಳುವಷ್ಟು  ಹೊಂದಾಣಿಕೆಯ ಕೊಂಡಿ ಬೆಸೆದಿರಬೇಕು. ಸಂಬಂಧದಲ್ಲಿ ಇರುವ ಸಣ್ಣ ಪುಟ್ಟ ಬಿರುಕನ್ನು ಬಿಟ್ಟುಕೊಡದೆ ಜೊತೆಗೆ ನಡೆದರೆ ಆ ಬಂಧನಕ್ಕೆ ಅರ್ಥ ಅದನ್ನು ಬಿಟ್ಟು ನಾಲ್ಕು ಜನರ ಮಧ್ಯ ಸಂಸಾರದ ಗುಟ್ಟುಗಳು ರಟ್ಟಾದರೆ ಸಂಬಂಧದಲ್ಲಿ  ಅಪಸ್ವರ ಹಾಗು ವಿರಸಗಳೆ ತುಂಬಿ ಈ ಸಂಸಾರದ ಬಂಧನವೇ ಸಾಕು ಎನ್ನುವಷ್ಟು ಜಿಗುಪ್ಸೆ. “ಸಂಬಂಧದಲ್ಲಿ ಬಿರುಕು ಹೆಚ್ಚಾದಂತೆ ಅನುಮಾನ ದ್ವೇಷ. ಜೊತೆಗೆ ಇದ್ದರು,ಮಕ್ಕಳಿಗೋಸ್ಕರ,  ಸಂಬಂಧಿಕರನ್ನು ಮತ್ತು ಸಮಾವನ್ನು ಮೆಚ್ಚಿಸಲು ಬಾಳುತಿದ್ದರೆ ಅದಕ್ಕೆ ಅರ್ಥವೇ ಇಲ್ಲ …….. ”

dasm

ಪರಸ್ಪರ ನಂಬಿಕೆ ಪ್ರೀತಿ ಇಬ್ಬರಲ್ಲೂ ಇರಬೇಕು ಇಲ್ಲದೆ ಹೋದರೆ ಮನಸ್ತಾಪ ಹೆಂಡ್ತಿ ಗೆ ಗಂಡನ ಮೇಲೆ ಅನುಮಾನ, ಗಂಡನಿಗೆ ಹೆಂಡ್ತಿ ಮೇಲೆ ಅನುಮಾನದಲ್ಲಿ  ಹೆಚ್ಚಿದ ಜಗಳ- ಕದನಗಳು ಕೊನೆಗೆ ದಾರಿಯೇ ಬದಲಾಗಿ ಪ್ರೀತಿಯ ಹುಡುಕುತ ಹೊರಡುವ ಮನಸಗಳು ಮನಸಿನ ಭಾವನೆಗೆ ಸ್ಪಂದಿಸುವವರ ಜೊತೆಗೆ ಹಾತೊರೆಯುವ ಬಯಕೆ. ಮಾನಸಿಕ ಹಾಗು ದೈಹಿಕವಾಗಿ ಕುಗ್ಗಿ ಒಂಟಿತನದ ಗೋಡೆಯಲ್ಲಿ ಬಂಧಿಯಾಗಿ ಛಿದ್ರವಾದರೆ ಕೊನೆಗೆ ಅದರ ತಿರುವು ಘೋರ ಘನ ಘೋರವಾಗಿ ಸಂಬಂಧಗಳೇ ಹಾಳಾಗಿ ವಿಚ್ಚೆದನ ಕೋರ್ಟಿನ ಮೆಟ್ಟಿಲು ಏರುವುದು ಖಚಿತ.

“ವಿಕೃತ ಮನೋಭಾವನೆಯ ವ್ಯಕ್ತಿ ಜೊತೆಗೆ ಮುನ್ನಡೆಯುವುದರಲ್ಲಿ ಅರ್ಥ ಎಲ್ಲಿದೆ …..? ಪ್ರೀತಿ ಮತ್ತು ನಂಬಿಕೆ ಇಲ್ಲದೆ ಹೋದಾಗ  ಆ ಸಂಬಂಧವನ್ನು ಮುಂದುವರೆಸಿ ಅರ್ಥವಿಲ್ಲ.   ಬೆಲೆ ಇಲ್ಲದ ನೆಲೆಯಲ್ಲಿ ಉಸಿರು ಕಟ್ಟಿಕೊಂಡು ಏಕೆ ಕೊನೆ ಉಸಿರೆಳೆಯಬೇಕು ….?”

“ಜೀವನವೇ ನಾಲ್ಕು ದಿನದ ಸಂತೆ…!”  ಬದುಕಿನ ಹೋರಾಟ ಯಾವಾಗ ಮುಗಿಯುವುದು ಬಲ್ಲವರಾರು? ನಮಗೆ ಅವಮಾನ ಅಪಮಾನವಾದರೂ ನಮ್ಮತನವನ್ನು ಬಿಟ್ಟು ಏಕೆ ಬಲವಂತವಾಗಿ ಬದುಕಬೇಕು ಹೇಗೆ ಬೇಕೋ ಹಾಗೆ ಬದುಕನ್ನು ರೂಪಿಸಿಕೊಂಡು ಮುಂದೆ ಸಾಗಲೇಬೇಕು.

ವಾಣಿ……

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ